Share

ಪಕ್ಷಿ ಗೊಂಚಲು

ಕ್ಷಿಲೋಕದ ಬಗ್ಗೆ ಮಾತಾಡಬೇಕೆಂದರೆ, ಡಾ. ಸಲೀಂ ಅಲಿ ಅವರನ್ನು ಸ್ಮರಿಸಿಕೊಳ್ಳಲೇಬೇಕು. ವಿಶ್ವಪ್ರಸಿದ್ಧ ಪಕ್ಷಿತಜ್ಞ, ವಿಜ್ಞಾನಿ ಅವರು. ‘ಬರ್ಡ್ ಮ್ಯಾನ್ ಆಫ್ ಇಂಡಿಯಾ’ ಎಂದೇ ಗೊತ್ತಾದವರು. ಯಾವ ಯೂನಿವರ್ಸಿಟಿಯ ಪದವಿಯನ್ನೂ ಪಡೆಯದ ಸಲೀಂ ಅಲಿ ಎಲ್ಲವನ್ನೂ ಕಲಿತದ್ದು ಪ್ರಕೃತಿಯ ಸೊಗಸು, ಶಕ್ತಿ ಮತ್ತು ವಿಸ್ಮಯಗಳಲ್ಲಿ.

ಪಕ್ಷಿಗಳ ಕಡೆಗಿನ ಕೂತೂಹಲದ ಪರಂಪರೆ ಮೊದಲಾದದ್ದು ಸಲೀಂ ಅಲಿ ಅವರಿಂದ. ಆ ಪರಂಪರೆಯನ್ನು ಅನೇಕ ಹಿರಿಯರು ಮುಂದುವರಿಸಿಕೊಂಡು ಬಂದರು. ಪೂರ್ಣಚಂದ್ರ ತೇಜಸ್ವಿಯಂಥವರ ಕಣ್ಣಲ್ಲಿ ತೆರೆದುಕೊಂಡ ಪಕ್ಷಿಲೋಕ, ಕೃಪಾಕರ ಸೇನಾನಿಯಂಥವರ ತೆರೆದಿಟ್ಟ ಪಕ್ಷಿಲೋಕ… ಹೀಗೆ ಹಲವು ಉದಾಹರಣೆಗಳು. ಎಲ್ಲವನ್ನೂ ನೋಡುತ್ತ ಹೋದರೆ ಅರಿವಾಗೋದು, ಅದು ಮುಗಿಯದ ಬೆರಗು ಅನ್ನೋದು.

ಪಕ್ಷಿಗಳ ಬಗ್ಗೆ ಕುತೂಹಲಿಯಾಗಿರುವ, ಅವುಗಳ ಜೀವನಶೈಲಿಯನ್ನು ಕಾಣಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ಮತ್ತು ಮೂರನೇ ಕಣ್ಣಿನ (Third eye) ಮಿಂಚಿನಲ್ಲಿ ಅವುಗಳ ನವಿರಾದ ಕಥೆಯನ್ನು ಕಟ್ಟಿಕೊಡುತ್ತ ಗಮನ ಸೆಳೆಯುತ್ತಿರುವವರ ಪೈಕಿ ಪತ್ರಕರ್ತ ಶಿವಸುಬ್ರಹ್ಮಣ್ಯ ಕೆ ಅವರೂ ಒಬ್ಬರು. ಸುಳ್ಯ ತಾಲೂಕಿನ ಕಲ್ಮಡ್ಕದವರು ಶಿವಸುಬ್ರಹ್ಮಣ್ಯ.

IMG-20160114-WA0023

ಕಲ್ಮಡ್ಕ ಪ್ರಾಥಮಿಕ ಶಾಲೆ, ಬಾಳಿಲದ ವಿದ್ಯಾಬೋಧಿನಿ ಪ್ರೌಢಶಾಲೆ, ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಓದು. ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಡಿಪ್ಲೋಮ. ಪತ್ರಿಕೋದ್ಯಮದ ಹಾದಿಯಲ್ಲಿ ಮುಂಗಾರು, ಹೊಸದಿಗಂತ, ಸಂಯುಕ್ತ ಕರ್ನಾಟಕ, ಉದಯವಾಣಿ ಕನ್ನಡಪ್ರಭದಲ್ಲಿ ಕೆಲಸ ಮಾಡಿ, ಕನ್ನಡಪ್ರಭದ ಸಂಪಾದಕರೂ ಆಗಿ, ಮತ್ತೆ ಹೊಸದಿಗಂತಕ್ಕೇ ಮರಳಿದ್ದಾರೆ. ಪ್ರಸ್ತುತ ಹೊಸ ದಿಗಂತದ ಗ್ರೂಪ್ ಎಡಿಟರ್.

ಪತ್ರಕರ್ತನಾಗಿ ಹಲವಾರು ಪ್ರಖರ ವರದಿಗಳ ಮೂಲಕ ನಾಡಿನ ಗಮನ ಸೆಳೆದ ಶಿವಸುಬ್ರಹ್ಮಣ್ಯ, ಕೈಯಲ್ಲಿ ಕ್ಯಾಮರಾ ಹಿಡಿದದ್ದು ಮಾತ್ರ ಪತ್ರಕರ್ತನಾಗಿ ಅಲ್ಲ; ಬದಲಿಗೆ, ಪಕ್ಷಿಗಳ ವಿಷಯದಲ್ಲಿ ಕುತೂಹಲಿಯಾಗಿ. ಪಕ್ಷಿಲೋಕದ ಎಷ್ಟೆಲ್ಲ ಕ್ಷಣಗಳನ್ನು ತಮ್ಮ ಫೋಟೋಗ್ರಫಿ ಮೂಲಕ ಹಿಡಿದಿಟ್ಟಿದ್ದಾರೆ.

ಪಕ್ಷಿಗಳ ಸಂಸಾರದ ಗುಟ್ಟು, ಅವುಗಳ ಕಣ್ಣಲ್ಲಿನ ಕೌಟುಂಬಿಕ ಪ್ರೀತಿ, ಮಕ್ಕಳ ಬಗೆಗಿನ ತಾಯಿ ಹಕ್ಕಿಯ ವಾತ್ಸಲ್ಯ… ಹೀಗೆ ಪಕ್ಷಿ ಬದುಕಿನ ಹಲವು ಸೂಕ್ಷ್ಮಗಳನ್ನು ಅವುಗಳದ್ದೇ ಕಣ್ಣ ಚುರುಕಿನಿಂದ, ಅವುಗಳ ಗರಿಯ ಬೆಚ್ಚನೆಯಿಂದ ಹಾಹಾಗೇ ಹಿತವಾಗಿ ಎತ್ತಿ ಬೊಗಸೆಗೆ ತೆಗೆದುಕೊಂಡವುಗಳಂತಿರುತ್ತವೆ ಅವರ ಫೋಟೋಗ್ರಾಫ್‌ಗಳು. ಎಷ್ಟೆಲ್ಲ ಪಕ್ಷಿಗಳು ಅವರ ಕ್ಲಿಕ್‌ನಲ್ಲಿ ದಾಖಲಾಗಿವೆ. ಹಾಗೆ ದಾಖಲಾದವುಗಳ ಚೆಲುವನ್ನು ಉಪಯುಕ್ತ ಮತ್ತು ಅಪರೂಪದ ಮಾಹಿತಿಯೊಂದಿಗೆ ಹೆಚ್ಚುಕಡಿಮೆ ನಿತ್ಯವೂ ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳುತ್ತಾರೆ ಶಿವ. ಒಂದು ಕ್ಲಿಕ್ಕಿಗಾಗಿ ಕಾಡಲ್ಲಿ ದಿನಗಟ್ಟಲೆ ಕೂತು ಕಾಯಬಲ್ಲ ಶ್ರದ್ಧೆಯಲ್ಲೇ ಅವರ ಅದೆಷ್ಟೋ ಮಾತುಗಳಿವೆ.

ಇಲ್ಲಿವೆ ಅವರು ತೆರೆದ ಬೆರಗು.

ಮರಿಗೆ ಬೆಳ್ಗಣ್ಣ ಹಕ್ಕಿಯ ತುತ್ತು (ಬೆಂಗಳೂರು ಹೊರವಲಯದಲ್ಲಿ)

white venk

ಮೂರು ಬೆರಳಿನ ಮಿಂಚುಳ್ಳಿ (ಚಿಪ್ಲುನ್, ಮಹಾರಾಷ್ಟ್ರ)

dwarf venk

ನೀಲಿ ಬಾಲದ ಜೇನು ಕುಟುರ ಮಿಲನದ ಕ್ಷಣ (ಮಂಡ್ಯ ಸಮೀಪ ಕಾವೇರಿ ತೀರದಲ್ಲಿ)

bee venk

ಬಿಳಿ ಹೊಟ್ಟೆಯ ನೊಣ ಹಿಡುಕ ಹಕ್ಕಿಯ ಆಕರ್ಷಕ ಹಾರಾಟ (ಬೆಂಗಳೂರು ಹೊರವಲಯ)

paradise venk

ಬಿಳಿ ಹೊಟ್ಟೆಯ ನೊಣ ಹಿಡುಕ ಹಕ್ಕಿ (ಬೆಂಗಳೂರು ಹೊರವಲಯ)

paradise venk2

ನವರಂಗ (ಬೆಂಗಳೂರು ಹೊರವಲಯ)

pitta venk

ಕೆಸರು ಗೊರವ ಹಕ್ಕಿಗಳು ಕೆಸರಿನ ಕೆರೆಯಲ್ಲೂ ಹುಳ ಹುಡುಕಲು ನೀರಿಗೆ ಇಳಿಯುವ ಪರಿ (ಮೈಸೂರು ಹೊರವಲಯ)

bird1

 

Share

5 Comments For "ಪಕ್ಷಿ ಗೊಂಚಲು"

 1. vasanthi k
  20th January 2016

  Ondodu hakkia ondodu soundryada anavarana ,manasigondu kanniddareyavudoo kaleyaguthade ennalu ee chithragale sakshi

  Reply
  • RAJENDRA.P
   20th January 2016

   All the photos herein are wonderful. it gives great pleasure to see all these pictures . The time and angle of each pic is amazing .

   Reply
 2. hemanth sampaje
  22nd January 2016

  super photos sir…congrats

  Reply
 3. Prakash Ilanthila
  24th January 2016

  wonderful…!congrats…

  Reply
 4. Raghu Muliya
  25th January 2016

  ಅದ್ಭುತ ಛಾಯಾಚಿತ್ರಗಳು.ಬಿಡುವಿಲ್ಲದ ದುಡಿಮೆಯ ಮಧ್ಯೆ ಹಕ್ಕಿಗಳ ಒಡನಾಡಿಯಾಗುವ ನಿಮ್ಮ ಈ ಅಸಕ್ತಿಗೆ ನಮೋ..

  Reply

Leave a comment

Your email address will not be published. Required fields are marked *

Recent Posts More

 • 17 hours ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 2 days ago No comment

  ಎರಡು ಕವಿತೆಗಳು

      ಕವಿಸಾಲು         ಸುನಾಮಿಯ ಊರಲ್ಲಿ ಗುಟ್ಟುಗಳ ರಟ್ಟು ಮಾಡದ ಒಡಲು ಸುನಾಮಿ ತವರಾದ ಕಡಲು ಒಳಗಿನ ಕತ್ತಲೆಯ ಕಳೆಯಲು ಹುಡುಕಿ ಹೊರಟವು ತಾವು ಕಳೆದುಕೊಂಡ ಕನಸುಗಳಷ್ಟೂ ಹಾವುಗಳು ಬಿಸಿಲಿಗೆ ಹೊರಳಿ ಪೊರೆ ಕಳಚಿ ನಚ್ಚಗಾದವು ಅದೇ ಕ್ಷಣದೊಳಗೆ ಅರಳಿಬಿರಿಯಬೇಕಿದ್ದ ಹೂವುಗಳು ಬಿಸಿಲ ಧಗೆಗೆ ಬೆಂದು ಬಾಡಿ ಉದುರಿಬಿದ್ದವು ನೆಲಕೆ ಶಬ್ದಗಳ ಮುಕ್ಕಳಿಸಿ ಉಗಿದ ರಭಸಕೆ ಊರ ತುಂಬಾ ನೆರೆ ಪರಿಹಾರದ ಗಂಜಿಕೇಂದ್ರಗಳಲಿ ...

 • 5 days ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...

 • 6 days ago No comment

  ಯಾವುದು ಈ ಧಾವಂತದ ದಿಕ್ಕು?

    ನ್ಯಾಯದ ಬಾಗಿಲಲ್ಲಿ ನ್ಯಾಯವಾಗಿ ಹೋಗುವವರಿಗೆ ಮಾತ್ರ ಪ್ರವೇಶ ಇಲ್ಲ, ಆದರೆ ನ್ಯಾಯವಲ್ಲದ, ಅದರ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದವರಿಗೆ ಮಾತ್ರ ಹಾರ ತುರಾಯಿಗಳೊಂದಿಗೆ ಭರ್ಜರಿ ಆಹ್ವಾನ.       रिमझिम गिरे सावन, सुलग सुलग जाये मन भीगे आज इस मौसम में लगी कैसी ये अगन ಏನೋ ಒಂದು ಜ್ವಾಲೆ, ಏನೋ ಒಂದು ಉರಿ, ಏನೋ ಒಂದು ಚಡಪಡಿಕೆ, ಒಂಥರಾ ಬೂದಿ ...

 • 1 week ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...


Editor's Wall

 • 22 February 2018
  17 hours ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 15 February 2018
  1 week ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  2 weeks ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  2 weeks ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...

 • 11 February 2018
  2 weeks ago No comment

  ನಿಮಗಿಂತ ಹೆಚ್ಚು ನಿರ್ಜೀವ

          | ಕಮಲಾದಾಸ್ ಕಡಲು       ಇಂದಿರಾಗಾಂಧಿ ಬಿಟ್ಟರೆ… (Next to Indira Gandhi) ಕಮಲಾದಾಸ್ ಕವಿತೆಯ ಅನುವಾದ       ಇಂದಿರಾಗಾಂಧಿಯನ್ನು ಬಿಟ್ಟರೆ, ನಾನು ಅತಿ ಹೆಚ್ಚು ಹೆದರಿದ್ದು ನನ್ನ ಅಪ್ಪನಿಗೆ ಮಾತ್ರ ನಾನು ಐದು ವರ್ಷದವಳಿರುವಾಗ ಅವರೇ ನನಗೆ ಹೇಳಿದ್ದು ಕಪ್ಪು ಮಕ್ಕಳು ಬಿಳಿಬಣ್ಣದ ಬಟ್ಟೆಗಳನ್ನು ಮಾತ್ರ ತೊಡಬೇಕೆಂದು. ಬೆಳೆಯುವ ದಿನಗಳಲ್ಲಿ ಕಳೆದುಹೋದಂತಿರುತ್ತಿದ್ದ, ಬಡಕಲಾಗಿದ್ದ, ಹಲ್ಲಿಗೆ ಕ್ಲಿಪ್ ...