Share

ಬಂಗಾರದ ರೆಕ್ಕೆ
ಚಿತ್ರಗುಚ್ಛ: ನವ್ಯಾ ಕಡಮೆ

ಡಲನ್ನು ಇನ್ನೂ ಇನ್ನೂ ತುಂಬಿಕೊಳ್ಳುತ್ತಲೇ ಇರುವ ಬೆರಗುಗಣ್ಣು. ಆ ಬೆರಗಿನ ನಡುವೆಯೂ ಉಪ್ಪಿನಾಗರದ ಬವಣೆ, ನಾವಿಕನ ವ್ಯವಧಾನವನ್ನು ಗ್ರಹಿಸುವ ಗುಣ. ಸಮುದ್ರದ ಸೆಳೆತಗಳಲ್ಲೇ ಬದುಕು ನಿಶ್ಚಯಗೊಳ್ಳುವುದನ್ನು ದಾಖಲಿಸುವ ಪರಿ.

ಉತ್ತರಕನ್ನಡದ ಕಡಮೆಯ ನವ್ಯಾ ಕಡಮೆ ಅವರ ಫೋಟೊಗ್ರಫಿಯನ್ನು ಸುಮ್ಮನೆ ಒಮ್ಮೆ ಅವಲೋಕಿಸಿದರೆ ಮತ್ತೆ ಮತ್ತೆ ಕಾಣುವುದು ಸಮುದ್ರವೇ. ಅದು ಬದುಕಿನ ಸಮುದ್ರ, ಭಾವನೆಗಳ ಸಾಗರ, ಆರ್ದ್ರತೆಯ ವಾರಿಧಿ.

ಗಣಿತಶಾಸ್ತ್ರ, ಭೌತಶಾಸ್ತ್ರ, ಎಲೆಕ್ಟ್ರಾನಿಕ್ಸ್ ನಲ್ಲಿ ಬಿಎಸ್ಸಿ ಬಳಿಕ ಬೆಂಗಳೂರಿನ ಸೆಂಚುರಿ ಫಿಲ್ಮ್ ಇನ್ಸ್ಟಿಟ್ಯೂಟಿನಿಂದ ಛಾಯಾಗ್ರಹಣದಲ್ಲಿ ಕೋರ್ಸ್. ಧಾರವಾಡದ ಕರ್ನಾಟಕ ವಿವಿಯಿಂದ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಎಂಎಸ್ಸಿ. ಹೀಗೆ ಅಕೆಡೆಮಿಕ್ ಆಗಿ ಬೇರೆಯದೇ ದಾರಿಯಲ್ಲಿರುವ ನವ್ಯಾ, ತಮ್ಮ ಮನಸ್ಸಿಗೆ ಹಿತವಾಗಿರುವುದನ್ನು, ಆಪ್ತವಾಗಿರುವುದನ್ನು ಬಿಟ್ಟುಕೊಡುತ್ತಿಲ್ಲ. ಅದು ಫೋಟೊಗ್ರಫಿ. ಕಳೆದ ನಾಲ್ಕೈದು ವರ್ಷಗಳಿಂದ ಫೋಟೊಗ್ರಫಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ನವ್ಯಾ.

nav4

ಧಾರವಾಡ ಸರ್ಕಾರಿ ಕಲಾ ಗ್ಯಾಲರಿಯಲ್ಲಿ ವಿಶ್ವ ಫೋಟೋಗ್ರಫಿ ದಿನದ ಹಿನ್ನೆಲೆಯಲ್ಲಿ ನಡೆಯುವ ಪ್ರದರ್ಶನದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ನವ್ಯಾ ಛಾಯಾಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಆ ಪ್ರದರ್ಶನದಲ್ಲಿ ಆಯ್ದ ಇಪ್ಪತ್ತೇ ಫೋಟೋಗ್ರಾಫರ್ಗಳಿಗೆ ಅವಕಾಶ. ಅಂಥವರಲ್ಲಿ ನವ್ಯಾ ಕೂಡ ಒಬ್ಬರು.

ಬರೆಯುವವರೇ ಇರುವ ಕುಟುಂಬದಲ್ಲಿ ನವ್ಯಾ ಆರಿಸಿಕೊಂಡಿರುವ ಮಾಧ್ಯಮ ಮಾತ್ರ ಭಿನ್ನ. ಅವರು ಕೆಮೆರಾ ಮೂಲಕವೇ ತಮ್ಮ ಮನಸ್ಸಿನ ಮಾತು ನುಡಿಸುವ ಪ್ರತಿಭಾವಂತೆ. ಅಭಿವ್ಯಕ್ತಿಗೆ ಮಾಧ್ಯಮ ಯಾವುದೇ ಆದರೂ ಮೂಲಭೂತವಾಗಿ ಬೇಕಿರುವುದು ಕಾಣುವ ಗುಣ. ಆ ಗುಣದ ಮೂಲಕ ಕೆಮೆರಾವನ್ನು ದುಡಿಸುತ್ತಾರೆ ನವ್ಯಾ.

ಉತ್ತರಕನ್ನಡದ ಕೃಷಿಕರ ಶ್ರಮ, ಸಮುದ್ರ ಕಿನಾರೆಯ ಉಪ್ಪುಗಾಳಿಯ ಧಗೆ, ನೋವು, ಕನಸು ಎಲ್ಲದಕ್ಕೂ ನವ್ಯಾ ಫೋಟೊಗ್ರಫಿಯಲ್ಲಿ ಒಂದು ವ್ಯಾಖ್ಯೆ ಇದ್ದೇ ಇದೆ. ತಮ್ಮ ಫೋಟೊಗ್ರಫಿಯಲ್ಲಿ ಅವರು ಸಂಜೆಯ ಕಡಲಿನ ಮೌನಕ್ಕೆ ಕಿವಿಗೊಡುತ್ತಾರೆ. ಬಿಸಿಲಿಗೆ ರೆಕ್ಕೆ ತೆರೆದುಕೊಂಡು ಕೂತ ಹೆಲಿಕಾಪ್ಟರ್ ಚಿಟ್ಟೆಯ ತನ್ಮಯತೆಯನ್ನು ಗಮನಿಸುತ್ತಾರೆ. ನಿರೀಕ್ಷೆಗಳಲ್ಲಿನ ವೇದನೆಯನ್ನು ದಾಖಲಿಸುತ್ತಾರೆ.

ನವ್ಯಾ ಕಡಮೆ ಈ ಕ್ಷೇತ್ರದ ದೊಡ್ಡ ಭರವಸೆ.

ಅವರ ಕೆಲವು ಚಿತ್ರಗಳು ಇಲ್ಲಿ.

ಉಪ್ಪಿನಾಗರದ ಬವಣೆ (ಉತ್ತರ ಕನ್ನಡ)

1

ತೆರೆಗಳನೇರಿ ಸಾಗುತ… (ಗೋಕರ್ಣ ಸಮುದ್ರ)

7

ಬಂಗಾರದ ರೆಕ್ಕೆ (ಕಡಮೆ ಮನೆಯ ಅಂಗಳದಲ್ಲಿ)

14

ಪ್ರತಿಬಿಂಬ (ಧಾರವಾಡ ಹೊರವಲಯ)

17

ಸೂರ್ಯಾಸ್ತ (ಅಘನಾಶಿನಿ ನದಿ, ಉತ್ತರಕನ್ನಡ)

15

ನಿರೀಕ್ಷೆ (ಕಡಮೆ ಮನೆಯ ಎದುರು)

12

ಮತ್ಸ್ಯ ಬಾಲಕ (ಗಂಗಾವಳಿ ನದಿ, ಉತ್ತರಕನ್ನಡ)

6

Share

4 Comments For "ಬಂಗಾರದ ರೆಕ್ಕೆ
ಚಿತ್ರಗುಚ್ಛ: ನವ್ಯಾ ಕಡಮೆ
"

  1. ಕೃಷ್ಣ ಗುಮ್ಮಾನಿ
    19th January 2016

    ಅದ್ಭುತ… ಅತೀ ಅದ್ಭುತ…

    Reply
  2. Supriya upadhya
    19th January 2016

    Superb dear

    Reply
  3. ಪದ್ಮನಾಭ ಭಟ್, ಶೇವ್ಕಾರ
    19th January 2016

    ಚಿತ್ರಗಳು ತುಂಬಾ ಚೆನ್ನಾಗಿವೆ. ಒಂದೊಂದು ಚಿತ್ರವೂ ಹಲವು ಕಥನಗಳನ್ನು ಒಡಲಲ್ಲಿರಿಸಿಕೊಂಡಂತಿವೆ… ಶುಭಾಶಯಗಳು ನವ್ಯಾ

    Reply
  4. 19th January 2016

    Waaaw

    Reply

Leave a comment

Your email address will not be published. Required fields are marked *

Recent Posts More

  • 7 hours ago No comment

    ತೇಪೆಗಳೆಂದರೆ…

          ಕವಿಸಾಲು     ಆಗೆಲ್ಲಾ ಹೇಳಿ ಕಳಿಸದೆಯೇ ಬಂದುಬಿಡುತ್ತಿದ್ದ ಆಗೊಮ್ಮೆ ಈಗೊಮ್ಮೆ ಆರು ತಿಂಗಳಿಗೊಮ್ಮೆ ಸೋರುವ ಬಿಂದಿಗೆಯಿಂದ ತೊಟ್ಟಿಕ್ಕಿದ ಹನಿಯೋ ಭಾರ ತಾಳದೆ ಮುರಿದ ಬಕೇಟಿನ ಸದ್ದೋ ಕೇಳುತ್ತಿದ್ದಿರಬಹುದೇ? ವಿಶೇಷ ಹತಾರ ಪಿತಾರಗಳೇನಿಲ್ಲ ಹಳೆಯ ಪ್ಲಾಸ್ಟಿಕ್ ತುಂಡು, ಸುಡುಬೆಂಕಿ ಕಾಸಿ ಬರೆ ಇಟ್ಟರೆ ಸುಟ್ಟ ವಾಸನೆ ಜೊತೆಗೆ ಸಣ್ಣಗೆ ಹೊಗೆ ಆದರೆ, ಬಿರುಕು ಮುಚ್ಚುತ್ತಿತ್ತು ತುಂಡುಗಳು ಕೂಡುತ್ತಿದ್ದವು ಗಾಯದ ಗುರುತು ಉಳಿಯುತ್ತಿತ್ತು ನಿಜ ಆದರೆ ...

  • 23 hours ago No comment

    ನನ್ನೊಳಗಿನ ಮೈನಾ ಪಿಸುಗುಟ್ಟಿದಾಗ…

            ಕಾಣಲು ಸಣ್ಣವೆಂಬ ಸಂಗತಿಗಳ ಸೂಕ್ಷ್ಮದಲ್ಲಿ ಸಂಬಂಧಗಳ ಬಿಂಬ ಗಮನಿಸುತ್ತ…     ಅದೊಂದು ಫಲವತ್ತಾದ ಭೂಮಿ, ಎಷ್ಟು ಫಲವತ್ತಾಗಿದೆ ಅಂದರೆ ಕಾಳಿಗೊಂದು ತೆನೆ, ತೆನೆಗೆಂಟು ದಂಟು ಕೊಡೋಷ್ಟು… ಕೇಳುವುದಕ್ಕೇನೇ ಖುಷಿ, ಸಂಭ್ರಮ ಅಲ್ವಾ! ಯಾರಿಗೂ ಅನ್ನದ ಕೊರತೆ ಆಗದಷ್ಟು… ಹಂಚಿತಿನ್ನುವ ಭಾವವೇ ಸಾಕು ಅನ್ನುವ ತೃಪ್ತಿಯ ಪರಾಕಾಷ್ಠೆ. ಅಂದರೆ ಒಂದು ಕೈಯಿಂದ ಕೊಟ್ಟರೆ ಹತ್ತು ಕಡೆಯಿಂದ ಬಂದು ಸೇರತ್ತೆ ಅಂತ ನಮ್ಮ ಹಿರಿಯರು ...

  • 1 day ago 2 Comment

    ನನ್ನನ್ನು ಕವಿಯೆಂದರು..!

        ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

  • 2 days ago No comment

    ಇದ್ಯಾವ ಪರಿ?

          ಕವಿಸಾಲು       ಥೇಟು ನವಿಲುಗರಿಯ ಹಾಗೆ ಮನಸಿನ ಪುಟಗಳ ನಡುವೆ ಬೆಚ್ಚಗೆ ಅಡಗಿ ಮರಿಯಿಟ್ಟು ನೆನೆದು ನೇವರಿಸಿದಾಗೆಲ್ಲ ಮುದ ಕೊಡುವ ನವಿರು, ನವಿರು! ಎದುರಿಲ್ಲದೆ, ಇಡಿಯಾಗಿ ಸಿಗದೆ ಕಲ್ಪನೆಗಳ ಚಿಗುರು ಕುಡಿಗಳಲಿ ನಳನಳಿಸಿ ಬಳುಕಿ ಬಾಗಿ ಕೆನ್ನೆಯಲಿ ಕಚಗುಳಿಯಾಗಿ ಬೆಚ್ಚಗೆ ಹರಿವ ಉಸಿರು! ಹೂಬನದ ಸೊಬಗಲ್ಲಿ ಮಲ್ಲಿಗೆಯ ಅರಳಲ್ಲಿ ದಳಗಳ ಸುತ್ತುಗಳಲಿ ಹಾಸಿ ಮಲಗಿದ ಕಂಪಾಗಿ ಮೈಮನಗಳ ಆಹ್ವಾನಿಸಿ ಕರೆವ ಕಂಪಿಗೆ ...

  • 3 days ago No comment

    ಎರಡು ಕವಿತೆಗಳು

        ಕವಿಸಾಲು       ನಿನ್ನ ತೋಳ ಜೋಲಿಯಲಡಗಿರಬೇಕು ನೋಡು ತುಂಡು ಚಂದ್ರನ ಜೋಕಾಲಿ ಆಗಾಗ ಫಳ್ಳನೆ ಇಣುಕುವ ನಕ್ಷತ್ರ ಹಾಡಿನಂಥ ನಿಮ್ಮಿಬ್ಬರ ಕತೆ ನಿನ್ನ ಅನುಪಮ ನಂಬಿಕೆಯ ರಾಗ ಜಗದೇಕವೆಂಬಂತೆ ನನ್ನೆದೆ ಹಾಕುವ ತಾಳ ಮಬ್ಬಾದರೂ ಮುದ್ದುಕ್ಕಿಸುವ ಅವಳ ಮುಖ ಅಲ್ಲಿ ನಿನ್ನ ಭೋರ್ಗರೆವ ಅಳು ನಿನ್ನ ದನಿಯಲ್ಲಿನ ಅವಳ ನೋವು ಒಮ್ಮೆ ತುಣುಕು ತುಣುಕುಣುತಾ ಮದವೇರಿದ ವಿಷಕನ್ಯೆಯಂತನಿಸುವ, ಒಮ್ಮೊಮ್ಮೆ ಗುಟುಕೊಂದೊಂದೂ ಪೇರಿಸಿಟ್ಟುಕೊಂಡು ವಿಷವೇರಿ ...


Editor's Wall

  • 17 November 2017
    1 day ago 2 Comment

    ನನ್ನನ್ನು ಕವಿಯೆಂದರು..!

        ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

  • 14 November 2017
    4 days ago No comment

    ಅವ್ರ್ ಬಿಟ್ ಇವ್ರ್ ಬಿಟ್ ಅವ್ರ್ ಬಿಟ್ ಇವ್ರ್ ಯಾರು?

        ಈಗ ಮಕ್ಕಳನ್ನೆಲ್ಲ ಪರ ಊರುಗಳ ಬೋರ್ಡಿಂಗ್ ಶಾಲೆಗಳಲ್ಲಿ ನೂಕಿ ಯಾವ ಮನೆಗಳಲ್ಲೂ ಮಕ್ಕಳಿಲ್ಲದೆ ಬಣಗುಟ್ಟುತ್ತಿವೆ. ಹೋಮ್ ವರ್ಕ್, ರ್ಯಾಂಕ್ ಓಟ, ಅಂಕದ ಬೇಟೆಯಲ್ಲಿ ಸಿಲುಕಿ ಯಾವ ರಸ್ತೆಯಲ್ಲೂ ಮಕ್ಕಳು ಆಡುವುದಿಲ್ಲ. ಮಕ್ಕಳ ದಿನಕ್ಕೆ ಒಂದು ವಿಶೇಷ ಬರಹ, ಕಾದಂಬಿನಿ ಅವರಿಂದ       ಮಕ್ಕಳೆಲ್ಲ ಸೇರಿ ಯಾರಾದರೂ ಚೂರು ದೊಡ್ಡವರನ್ನು ಅಜ್ಜಿಯಾಗಲು ಕೇಳಿಕೊಂಡಾದ ಮೇಲೆ ಎಲ್ಲರೂ ವೃತ್ತಾಕಾರವಾಗಿ ನಿಂತು ಕ್ಲಾಪ್ಸ್ ಹಾಕುವ ಮೂಲಕ ಕಳ್ಳರನ್ನು ...

  • 09 November 2017
    1 week ago No comment

    ಕೆಂಡದಂಥ ಕಾವ್ಯ

    ಪಾಶ್ ಎಂದೇ ಗೊತ್ತಾಗಿರುವ ಪಂಜಾಬಿ ಮತ್ತು ಹಿಂದಿ ಕವಿ ಅವತಾರ್ ಸಿಂಗ್ ಸಂಧು, ಕ್ರಾಂತಿಕಾರಿ ಕವಿ. ತನ್ನ 20ನೇ ವಯಸ್ಸಿನಲ್ಲಿ ಆತ ಮೊದಲ ಸಂಕಲನ ‘ಲೋಹ್ ಕಥಾ’ ಪ್ರಕಟಿಸುತ್ತಿದ್ದ ಹಾಗೆಯೇ (1970) ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಟ್ಟಿದ್ದ. ಅದೇ ದಶಕದಲ್ಲೇ ಪ್ರಕಟಗೊಂಡ ಮತ್ತೂ ಎರಡು ಸಂಕಲನಗಳು ಪಂಜಾಬಿ ಕಾವ್ಯಲೋಕದಲ್ಲಿ ಆತನ ಹೆಸರನ್ನು ಶಾಶ್ವತಗೊಳಿಸಿಬಿಟ್ಟವು. ಅವನ ಕಾವ್ಯದ ಕತ್ತಿ ಖಲಿಸ್ತಾನಿಗಳ ವಿರುದ್ಧ ಝಳಪಿಸುತ್ತಿತ್ತು. ಕಡೆಗೆ ಅದೇ ಅವನ ಹತ್ಯೆಗೂ ಕಾರಣವಾಯ್ತು. ...

  • 07 November 2017
    2 weeks ago One Comment

    ಕಾಲದೊಂದೊಂದೇ ಹನಿಯು ಹರಿದುಹೋಗುವ ಸದ್ದು

    ಹಳೆಯ ಕಾವ್ಯದ ಮೆಲುಕನ್ನು ಇವತ್ತಿನ ಪ್ರಯಾಣಕ್ಕೆ ಜೋಡಿಸಿಕೊಳ್ಳುವುದೇ ಒಂದು ಸೊಗಸು. ಒಂದು ಕವಿತೆಯ ನೆವದಲ್ಲಿ ಸಿಗುವ ನೆನಪಿನ ಗುರುತುಗಳೂ ಹಲವು. ಇದು ವಿಮರ್ಶೆಯಾಚೆಗಿನ, ಅಕೆಡೆಮಿಕ್ ಮಿತಿಯನ್ನು ದಾಟುವ ಗುರುತೂ ಆಗುತ್ತದೆ; ಹಾಗೆಂದು ಹೇಳಿಕೊಳ್ಳದೆಯೂ.  ಕನೆಕ್ಟ್ ಕನ್ನಡ ಅಂಥದೊಂದು ಹುಡುಕಾಟದ ಖುಷಿ ಹಂಚಲು ತೊಡಗಿದೆ.  * * *         ನಾವು ಓಡುತ್ತಿರುವ ರಭಸಕ್ಕೆ ನಮ್ಮ ಅರಿವಿಗೇ ಬರುವುದಿಲ್ಲ, ಅದ್ಯಾವ ಹೊತ್ತಲ್ಲಿ ಜೀವಶಕ್ತಿ ತನ್ನ ಒಂದು ...

  • 06 November 2017
    2 weeks ago No comment

    ಕಾಣದ ಕಡಲಿನ ಮುಂದೆ…

    ಹಳೆಯ ಕಾವ್ಯದ ಮೆಲುಕನ್ನು ಇವತ್ತಿನ ಪ್ರಯಾಣಕ್ಕೆ ಜೋಡಿಸಿಕೊಳ್ಳುವುದೇ ಒಂದು ಸೊಗಸು. ಒಂದು ಕವಿತೆಯ ನೆವದಲ್ಲಿ ಸಿಗುವ ನೆನಪಿನ ಗುರುತುಗಳೂ ಹಲವು. ಇದು ವಿಮರ್ಶೆಯಾಚೆಗಿನ, ಅಕೆಡೆಮಿಕ್ ಮಿತಿಯನ್ನು ದಾಟುವ ಗುರುತೂ ಆಗುತ್ತದೆ; ಹಾಗೆಂದು ಹೇಳಿಕೊಳ್ಳದೆಯೂ.  ಕನೆಕ್ಟ್ ಕನ್ನಡ ಅಂಥದೊಂದು ಹುಡುಕಾಟದ ಖುಷಿ ಹಂಚಲು ತೊಡಗಿದೆ.  * * *         ಕಾವ್ಯದ ಸೌಂದರ್ಯ ಇರುವುದೇ ಅದರ ಅಮೂರ್ತತೆಯಲ್ಲಿ. ಕವಿತೆಯನ್ನು ಬರೆದ ಕವಿಗಿಂತ ಅದನ್ನು ಓದಿದವರಿಗೇ ಒಮ್ಮೊಮ್ಮೆ ...