Share

ಆತ್ಮಸಾಕ್ಷಿಯ ‘ಸ್ಪಾಟ್‌ಲೈಟ್’
ಕಾವ್ಯಾ ಕಡಮೆ ನಾಗರಕಟ್ಟೆ

ಬಾರಿ ಆಸ್ಕರ್‍ಗೆ ನಾಮಾಂಕಿತವಾದ ಎಂಟು ಚಿತ್ರಗಳಲ್ಲಿ ಅಲೆಜಾಂಡ್ರೋ ಇನ್ಯೂರಿತು ನಿರ್ದೇಶನದ, ಲಿಯೊನಾರ್ಡೊ ಡಿಕಾಪ್ರಿಯೋ ಅದ್ಭುತ ನಟನೆಯ ‘ದಿ ರೆವೆನೆಂಟ್’ ಚಿತ್ರವೇ ವರ್ಷದ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗುತ್ತದೆ ಅಂತ ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಬಗೆದಿದ್ದರು. ತಪ್ಪಿದರೆ ‘ಅತ್ಯುತ್ತಮ ಚಿತ್ರ’ ಕಿರೀಟ, ಅಸಾಮಾನ್ಯ ಕಥಾಹಂದರವುಳ್ಳ ನವಿರು ಚಿತ್ರ ‘ರೂಮ್’ಗೆ ಹೋಗಬಹುದಿತ್ತು. ಚಿತ್ರ ವಿಚಿತ್ರ ವೇಷಭೂಷಣಗಳ ನವೀನ ನಿರೂಪಣೆಯ ‘ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್’, ಮಂಗಳ ಗ್ರಹಕ್ಕೆ ತೆರಳಿದ ವಿಜ್ಞಾನಿಗಳ ತಂಡ ತಮ್ಮಲ್ಲೊಬ್ಬ ಗಗನಯಾತ್ರಿಯನ್ನು ಮಂಗಳ ಗ್ರಹದಲ್ಲೇ ಬಿಟ್ಟು ಬರುವ ಕಥೆಯ ‘ಮಾರ್ಶಿಯನ್’, ಐರಿಷ್ ಯುವತಿ ಅಮೇರಿಕೆಗೆ ವಲಸೆ ಬರುವ ‘ಬ್ರೂಕಲಿನ್’, 2008ರಲ್ಲಿ ಅಮೇರಿಕಾದ ಹೌಸಿಂಗ್ ಮಾರುಕಟ್ಟೆ ದಿಢೀರನೆ ಕುಸಿದ ಕಥೆಯ ‘ಬಿಗ್ ಶಾರ್ಟ್‌’, ಟಾಮ್ ಹ್ಯಾಂಕ್ಸ್ ಅಭಿನಯದ ‘ಬ್ರಿಡ್ಜ್ ಆಫ್ ಸ್ಪೈಸ್’… ಇವುಗಳಲ್ಲಿ ಯಾವ ಸಿನಿಮಾವಾದರೂ ಈ ವರ್ಷದ ಅತ್ಯುತ್ತಮ ಚಿತ್ರ ಕಿರೀಟಕ್ಕೆ ಯೋಗ್ಯವಾಗಬಹುದಿತ್ತು. ಆದರೆ ಆ ಗೌರವವನ್ನು ಆಸ್ಕರ್ ಅಕಾಡಮಿಯು ತಣ್ಣಗೆ ಹರಿವ ನದಿಯಂಥ ಚಿತ್ರ ‘ಸ್ಪಾಟ್‍ಲೈಟ್’ಗೆ ಕೊಟ್ಟು ತನ್ನ ಪ್ರಬುದ್ಧತೆ ಮೆರೆದಿದೆ.

‘ಸ್ಪಾಟ್‍ಲೈಟ್’ ನೈಜ ಕಥಾಹಂದರವುಳ್ಳ ಸಿನಿಮಾ. 2001ರಲ್ಲಿ ಬಾಸ್ಟನ್ ಗ್ಲೋಬ್ ಪತ್ರಿಕೆಯಲ್ಲಿ ಕೆಲಸ ಮಾಡುವ ‘ಸ್ಪಾಟ್‍ಲೈಟ್’ ಎಂಬ ನಾಲ್ಕು ಜನ ಉತ್ಸಾಹಿ ತನಿಖಾ ಪತ್ರಕರ್ತರ ತಂಡ, ಚರ್ಚುಗಳಲ್ಲಿ ಪಾದ್ರಿಗಳಿಂದ ಅನಾಥ ಮಕ್ಕಳ ಮೇಲೆ ನಡೆವ ಲೈಂಗಿಕ ದೌರ್ಜನ್ಯದ ಎಳೆ ಹಿಡಿದು ತನಿಖೆಯನ್ನು ಪ್ರಾರಂಭಿಸುತ್ತದೆ. ಒಂದು ಸಣ್ಣ ಗುಮಾನಿಯಿಂದ ಶುರುವಾದ ತನಿಖೆ ಹಂತಹಂತವಾಗಿ ಬೃಹದಾಕಾರವಾಗಿ ಬೆಳೆಯುತ್ತದೆ. ಪತ್ರಕರ್ತರಿಗೆ ಸಾಮಾನ್ಯವಾಗಿ ಅನುಭವಕ್ಕೆ ಬರುವ ಡೆಡ್‍ಲೈನ್ ಸಂಕಟ, ತಾವು ಕಟ್ಟಿದ ವರದಿಯ ಮಹತ್ವ ಅರಿಯದೇ ಅರ್ಧಬೆಂದ ಕಥೆಗಳನ್ನು ಪ್ರಕಟಿಸುವ ಪ್ರತಿಸ್ಪರ್ಧಿ ಪತ್ರಿಕೆಗಳ ಭಯ, ತಮ್ಮ ಮಾನ ಹರಾಜಾಗುವುದನ್ನು ತಡೆಯಲು ಶತಪ್ರಯತ್ನ ಮಾಡುವ ಚರ್ಚು, ಅರ್ಧಕ್ಕಿಂತ ಹೆಚ್ಚು ಕ್ಯಾಥೋಲಿಕ್ ಓದುಗರಿರುವ ಪತ್ರಿಕೆಯಲ್ಲಿ ಚರ್ಚಿನ ಕುರಿತಾಗಿಯೇ ಇಂಥ ವರದಿ ಪ್ರಕಟಿಸುವುದು ಸರಿಯೋ ತಪ್ಪೋ ಎಂಬ ಧ್ವಂಧ್ವದಲ್ಲಿ ಬೀಳುವ ಪತ್ರಿಕೆಯ ಮಾಲಿಕರು.. ಇಂಥ ಎಲ್ಲ ಗಡಿಬಿಡಿಗಳ ನಡುವೆಯೇ ಚಿತ್ರ ತಣ್ಣಗೆ ಸಾಗುತ್ತದೆ.

“ಯಾವುದೇ ಕಾರಣಕ್ಕಾಗಿಯೂ ಅರೆಬೆಂದ ಸುದ್ದಿಯನ್ನು ಪ್ರಕಟಿಸುವುದಿಲ್ಲ, ಎಷ್ಟು ತಡವಾದರೂ ಸರಿ” ಎಂದು ಪತ್ರಿಕಾ ನಿಷ್ಠೆ ಮೆರೆಯುವ ‘ಸ್ಪಾಟ್‍ಲೈಟ್’ ತಂಡದ ನಾಯಕ ರಾಬಿ (ಕಳೆದ ವರ್ಷದ ಆಸ್ಕರ ಗೆದ್ದ ಮೈಕಲ್ ಕೀಟನ್) ಅವಸರದ ಪತ್ರಿಕೋದ್ಯಮದ ಈ ಕಾಲದಲ್ಲಿ ನಮಗೆ ಬೇರೆ ಗ್ರಹದಿಂದ ಬಂದವನ ಹಾಗೆ ಕಂಡರೆ ಆಶ್ಚರ್ಯವಿಲ್ಲ. ಪತ್ರಿಕೋದ್ಯಮದ ನಿಜವಾದ ಮೌಲ್ಯಗಳನ್ನು ಎತ್ತಿಹಿಡಿಯುವ ಈ ಚಿತ್ರ ತನ್ನ ಏರುಗತಿಯ ನಿರೂಪಣೆ ಮತ್ತು ಚುರುಕು ಸಂಭಾಷಣೆಯಿಂದಲೇ ನೋಡಿಸಿಕೊಳ್ಳುತ್ತದೆ. ಮೊದಲ ವರದಿ ಪತ್ರಿಕೆಯಲ್ಲಿ ಪ್ರಕಟವಾದ ದಿನ ಪತ್ರಿಕೆಯ ಕಛೇರಿಗೆ ಬರುವ ನೂರಾರು ಫೋನ್ ಕರೆಗಳು ವರದಿಗಾರರ ಮೊಗದ ಮೇಲೆ ತೃಪ್ತಿಯ ನಗೆ ಬೀರಿಸುತ್ತವೆ.

‘ಬಾಸ್ಟನ್ ಗ್ಲೋಬ್’ ಪತ್ರಿಕೆಯ ‘ಸ್ಪಾಟ್‍ಲೈಟ್’ ತಂಡದ ವರದಿಗಾರಿಕೆಗೆ 2003 ರಲ್ಲಿ ‘ಪುಲಿಟ್ಜರ್ ಪ್ರೈಸ್’ ಸಿಕ್ಕಿತ್ತು. ಈ ಬಾರಿಯ ಆಸ್ಕರ್, ಪತ್ರಿಕೋದ್ಯಮದ ಮೌಲ್ಯವನ್ನು ಎತ್ತಿ ಹಿಡಿದ ‘ಸ್ಪಾಟ್‍ಲೈಟ್’ ತಂಡಕ್ಕೆ ಮುಡಿಪಾದ ಎರಡನೆಯ ಗೌರವವಾಗಿದೆ.

ಇನ್ನುಳಿದಂತೆ ಈ ಬಾರಿಯ ಆಸ್ಕರ್ ಸಮಾರಂಭ ಮಜಬೂತಾಗಿತ್ತು. ಲಿಯೊನಾರ್ಡೋ ಡಿಕಾಪ್ರಿಯೋ ಕೊನೆಗೂ ‘ಅತ್ಯುತ್ತಮ ನಟ’ ಪ್ರಶಸ್ತಿ ಗೆದ್ದ ಸಂಭ್ರಮವನ್ನು ಜಗತ್ತಿನಾದ್ಯಂತ ಸಿನಿಪ್ರೇಮಿಗಳು ಆಚರಿಸಿದ್ದಾರೆ. ಈ ಬಾರಿ ಲಿಯೊನಾರ್ಡೋ ಹೆಸರು ಆರನೆಯ ಬಾರಿ ಆಸ್ಕರ್‍ಗೆ ನಾಮಾಂಕಿತವಾಗಿತ್ತು. ಎದುರಾಳಿಯ ಬಗೆಗಿನ ಸೇಡು ತೀರಿಸಿಕೊಳ್ಳುವ ಒಂದೇ ಕಾರಣಕ್ಕೆ ಬದುಕಿಬರುವ ಕಥೆಯುಳ್ಳ ‘ದಿ ರೆವನಂಟ್’ ಲಿಯೋ ಅಭಿನಯಿಸಿದ ಅತ್ಯಂತ ಉನ್ನತ ಮಟ್ಟದ ಚಿತ್ರ ಎನ್ನುವುದಂತೂ ನಿಜ.

ಇನ್ನು ಕಳೆದ ಬಾರಿಯಂತೆಯೇ ಈ ಸಲವೂ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಗೆದ್ದ ಅಲೆಜಾಂಡ್ರೋ ಇನ್ಯೂರಿತು ಕುರಿತು ಹೇಗೆ ಮಾತನಾಡದೇ ಇರುವುದು? ಅಲೆಜಾಂಡ್ರೋ ಬಹು ಮೇಧಾವಿ ನಿರ್ದೇಶಕ. ಕಳೆದ ವರ್ಷದ ಆಸ್ಕರ್ ಗೆದ್ದ ಅವರ ‘ಬರ್ಡಮ್ಯಾನ್’ ಚಿತ್ರ ವಿಶ್ವ ಸಿನಿಮಾದ ಮೈಲುಗಲ್ಲುಗಳಲ್ಲಿ ಒಂದು ಎಂದು ಧೈರ್ಯವಾಗಿ ಹೇಳಬಹುದು. ಈ ಬಾರಿ ಅಲೆಜಾಂಡ್ರೋ ಹಿಂತಿರುಗಿದ್ದು ‘ದಿ ರೆವೆನೆಂಟ್’ ಚಿತ್ರದ ಮೂಲಕ.

ಈ ಬಾರಿ ಚಿತ್ರ ರಸಿಕರ ಮನ ಗೆದ್ದ ಚಿತ್ರಗಳಲ್ಲಿ ಬ್ರೀ ಲಾರ್ಸನ್- ಜೇಕಬ್ ಟ್ರೆಂಬ್ಲಿ ಅಭಿನಯದ ‘ರೂಮ್’ ಚಿತ್ರವೂ ಒಂದು. ಏಳು ವರ್ಷಗಳ ಕಾಲ ಹೊರ ಜಗತ್ತಿನ ಸಂಪರ್ಕವೇ ಇಲ್ಲದ ಕೋಣೆಯಲ್ಲಿ ಮಗುವನ್ನು ಬೆಳೆಸುವ ಹೆಣ್ಣಿನ ಕಥೆಯನ್ನು ಬ್ರೀ ತನ್ನ ನೋವು ತುಂಬಿದ ಕಣ್ಗಳಿಂದಲೇ ಸಶಕ್ತವಾಗಿ ಪ್ರೇಕ್ಷಕರಿಗೆ ದಾಟಿಸುತ್ತಾಳೆ. ಈ ಚಿತ್ರದ ಅಭಿನಯಕ್ಕೆ ಬ್ರೀ ಈ ಬಾರಿಯ ಆಸ್ಕರ್ ಗೆದ್ದುಕೊಂಡಿದ್ದಾಳೆ.

ಸಮಾಜದ ಆತ್ಮವನ್ನೇ ಬಗೆದು ತೋರುವ ‘ಸ್ಪಾಟ್‍ಲೈಟ್’ ತಂಡದ ವರದಿಗಾರರು, ಕರಡಿಯಿಂದ ದೇಹ ಬಗೆಸಿಕೊಳ್ಳುವ ‘ದಿ ರೆವೆನೆಂಟ್’ನ ಹ್ಯೂ, ಏಳು ವರ್ಷಗಳ ಕಾಲ ಅನಾಮಿಕನೊಬ್ಬನ ಹಿಡಿತದಲ್ಲಿ ನಲುಗಿ ಮುರುಟಿಹೋದ ‘ರೂಮ್’ ಚಿತ್ರದ ಬ್ರೀ.. ಇವರೆಲ್ಲ ನಮ್ಮೊಡನಿಲ್ಲದೆಯೂ ನಮ್ಮವೇ ಆಗುವ ಪಾತ್ರಗಳು. ಇವು ಸಿನಿಮಾವೊಂದು ಕೇವಲ ದೃಶ್ಯ ಮಾಧ್ಯಮವಷ್ಟೇ ಆಗುಳಿಯದೇ ಅದರಾಚೆಗೂ ಹರಡಿ ಆವರಿಸಿಕೊಳ್ಳುವ ರಕ್ತ-ಮಾಂಸ ತುಂಬಿದ ಚಿತ್ರಗಳು ಎಂಬುದರಲ್ಲಿ ಅನುಮಾನವಿಲ್ಲ.

Cast member Leonardo DiCaprio poses at the premiere of "The Revenant" in Hollywood, California December 16, 2015. REUTERS/Mario Anzuoni

ಲಿಯೊನಾರ್ಡೋ ಡಿಕಾಪ್ರಿಯೋ, ಅತ್ಯುತ್ತಮ ನಟ, ಚಿತ್ರ: ‘ದಿ ರೆವನಂಟ್’

 

o3

ಬ್ರೀ ಲಾರ್ಸನ್, ಅತ್ಯುತ್ತಮ ನಟಿ, ಚಿತ್ರ: ‘ರೂಮ್’

 

o4

ಅಲೆಜಾಂಡ್ರೋ ಇನ್ಯೂರಿತು, ಅತ್ಯುತ್ತಮ ನಿರ್ದೇಶಕ, ಚಿತ್ರ: ‘ದಿ ರೆವೆನೆಂಟ್’

 

———–

kavyaಕಾವ್ಯಾ ಕಡಮೆ ನಾಗರಕಟ್ಟೆ, ಉತ್ತರಕನ್ನಡದ ಕಡಮೆ ಎಂಬ ಪುಟ್ಟ ಊರಿನವರು. ಬಿಎಸ್ಸಿ ನಂತರ ಕರ್ನಾಟಕ ವಿವಿಯಿಂದ ಆರು ಚಿನ್ನದ ಪದಕಗಳೊಂದಿಗೆ ಪತ್ರಿಕೋದ್ಯಮ ಎಂ.ಎ ಪದವಿ. ಸದ್ಯ ಪತಿಯೊಡನೆ ಅಮೇರಿಕೆಯ ನ್ಯೂಜೆರ್ಸಿಯಲ್ಲಿ ವಾಸ. ಮೊದಲ ಕವನ ಸಂಕಲನ ‘ಧ್ಯಾನಕ್ಕೆ ತಾರೀಖಿನ ಹಂಗಿಲ್ಲ’. ಅದಕ್ಕೆ 2014ರ ಕೇಂದ್ರ ಸಾಹಿತ್ಯ ಅಕಾಡಮಿಯ ‘ಯುವ ಪುರಸ್ಕಾರ’, ಯುವ ಬರಹಗಾರರಿಗೆ ನೀಡುವ 2012ರ ಟೋಟೋ ಪುರಸ್ಕಾರ ದೊರೆತಿದೆ. ‘ಪುನರಪಿ’ ಮೊದಲ ಕಾದಂಬರಿ. ಕಾವ್ಯಾ ಹೊಸ ಕವಿತೆಗಳ ಸಂಕಲನ ‘ಜೀನ್ಸು ತೊಟ್ಟ ದೇವರು’ ಈ ವರ್ಷ ಪ್ರಕಟಗೊಳ್ಳಲಿದೆ.

Share

Leave a comment

Your email address will not be published. Required fields are marked *

Recent Posts More

 • 2 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 3 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 5 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  5 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  1 week ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...