Share

ಒಂದು ಊರಿನ ಸಾವು
ಮಂಜುಳಾ ಮಾಸ್ತಿಕಟ್ಟೆ

ವಿಜಯನಗರ ಸಾಮ್ರಾಜ್ಯ ಒಂದು ಕಾಲದಲ್ಲಿ ರಾರಾಜಿಸುತ್ತಿತ್ತು; ಈಗ ಹಾಳು ಬಿದ್ದಿದೆ. ಈ ಮಾತನ್ನು ಸಮಯ ಸಂದರ್ಭಕ್ಕೆ ಅನುಗುಣವಾಗಿ ಜನ ಬಳಸುತ್ತಾರೆ. ನಿಜಕ್ಕೂ ವಿಜಯನಗರ ಸಾಮ್ರಾಜ್ಯ ಹೇಗಿತ್ತು? ಹೇಗಾಯಿತು? ಎಂಬ ಬಗ್ಗೆ ನನಗೆ ಅರಿವಿಲ್ಲ. ಆದರೆ, ಊರೊಂದು ತನ್ನ ವೈಭವದ ದಿನಗಳಲ್ಲಿ ಹೇಗಿರುತ್ತದೆ? ಮತ್ತು, ಹೇಗೆಲ್ಲಾ ತನ್ನ ಸ್ವರೂಪವನ್ನು ಕಳಚಿಕೊಳ್ಳುತ್ತದೆ ಎಂಬದಕ್ಕೆ ನನ್ನ ಬಾಲ್ಯ ಮತ್ತು ಪ್ರೌಢಾವಸ್ಥೆಯ ದಿನಗಳಲ್ಲಿ ಸಾಕ್ಷಿಯಾಗಿದ್ದೇನೆ. ಅದನ್ನು ಹೇಳುವುದಕ್ಕಾಗಿಯೇ ಈ ಪೀಠಿಕೆ.

ನನ್ನೂರು ಶಿವಮೊಗ್ಗ ಜಿಲ್ಲೆಯ, ತೀರ್ಥಹಳ್ಳಿ ಸಮೀಪದ ಮಾಸ್ತಿಕಟ್ಟೆ. ದೇಶದಲ್ಲೇ ಮೊದಲು ಸ್ಥಾಪಿತಗೊಂಡ ಜಲವಿದ್ಯುತ್ ಯೋಜನೆ, ‘ವರಾಹಿ ವಿದ್ಯುತ್ ಯೋಜನೆ’ಯ ನಿಯಂತ್ರಿಸುವ ಪ್ರಮುಖ ಊರಾಗಿತ್ತು. ವಿದ್ಯುತ್ ಉತ್ಪಾದನೆ ಶುರುವಾಗುತ್ತಿದ್ದ ಹಾಗೆ, ಮಾಸ್ತಿಕಟ್ಟೆಯಲ್ಲೊಂದು ‘ಕೆಪಿಸಿ’ ಕಾಲೋನಿ ತನ್ನ ಬೇರುಗಳನ್ನು ಬಿಡಲಾರಂಭಿಸಿತು.

ಸುಮಾರು ನಾಲ್ಕೈದು ಕಿಲೋಮೀಟರ್ ಸುತ್ತಳತೆಯಲ್ಲಿ ಈ ಕಾಲೋನಿ ಹರಡಿಕೊಂಡಿತ್ತು. ಅದರ ಇಳಿಜಾರಿನ ಕೊನೆಯಲ್ಲಿ ನಮ್ಮ ಮನೆ. ನಮ್ಮ ಮನೆಯಂತೆಯೇ ಕೆಪಿಸಿ ಕಾಲೋನಿಯ ಕಾಂಪೌಂಡ್ ವ್ಯಾಪ್ತಿ ಹೊರಗೆ ಸಾಕಷ್ಟು ಮನೆಗಳಿದ್ದವು. ಅವುಗಳನ್ನು ‘ಹಳ್ಳಿ ಮನೆ’ಗಳು ಅಂತ ಕೆಪಿಸಿಯವರು ನಾಮಕರಣ ಮಾಡಿ ಕಡೆಯುತ್ತಿದ್ದರು. ಹಾಗಂತ ಕೆಪಿಸಿ ಕಾಲೋನಿಯೇನು ಸಿಟಿಯಾಗಿರಲಿಲ್ಲ.

ಆದರೂ ಅವರದ್ದು ಹಳ್ಳಿಗಾಡಿನ ಪರಿಸರದಲ್ಲಿ ನಗರದ ಜೀವನಶೈಲಿಯನ್ನು ರೂಢಿಸಿಕೊಂಡ ಬದುಕು. ಕೆಪಿಸಿ ಮಕ್ಕಳಿಗಾಗಿ ನನ್ನೂರಿನಲ್ಲಿ ಆಂಗ್ಲ ಮಾಧ್ಯಮ ಶಾಲೆಯೊಂದು ಮೊದಲ ಬಾರಿ ತೆರೆಯಿತು. ಈ ಶಾಲೆಯಲ್ಲಿ ಕಲಿಯುತ್ತಿದ್ದ ಬಹುತೇಕರು ಕೆಪಿಸಿ ಮಕ್ಕಳೆ. ‘ಹಳ್ಳಿ ಮನೆ’ಯ ಕೆಲವು ಮಕ್ಕಳಿಗೆ ಅಲ್ಲಿ ಅವಕಾಶ ಇತ್ತಾದರೂ, ಪರಕೀಯ ಭಾವವೊಂದು ಅವರನ್ನು ಆವರಿಸುತ್ತಿತ್ತು. ಹೀಗಾಗಿ, ನಾವೆಲ್ಲ ಅದರ ಪಕ್ಕದಲ್ಲಿಯೇ ಇದ್ದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದೆವು. ನಮ್ಮ ಶಾಲೆಯಲ್ಲಿ ಹಳ್ಳಿ ಮಕ್ಕಳು ಓದಿ ಮುಂದೆ ಬರಬೇಕು ಎಂಬ ಕನಸು ಹೊತ್ತ ಅನೇಕ ಶಿಕ್ಷಕರಿದ್ದರು. ಅವರು ಪುಸ್ತಕ, ನೋಟ್ ಬುಕ್ ಕೊಡುವ ಮೂಲಕ ಬಡ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ನಿಲ್ಲುವಂತೆ ಮಾಡಲು ಶ್ರಮಿಸುತ್ತಿದ್ದರು.

ನನಗೆ ತಿಳುವಳಿಕೆ ಬರುವ ಹೊತ್ತಿಗೆ ನನ್ನೂರಿಗೆ ಕೆಪಿಸಿ ಬಂದು ಹಲವು ವರ್ಷಗಳೇ ಕಳೆದಿತ್ತು. ನನ್ನೂರಿನ ಅಕ್ಕ-ಪಕ್ಕದ ಹಲವರು ಈ ಯೋಜನೆಗಾಗಿ ಭೂಮಿ ಕಳೆದುಕೊಂಡಿದ್ದರು. ಅಷ್ಟೆ ಅಲ್ಲ, ಕೆಲವು ಸ್ಥಳೀಯರು ಕಾನೂನಿನ ಹೋರಾಟ ಮಾಡಿ, ಮನೆಗೊಂದು ನೌಕರಿಯನ್ನು ಗಿಟ್ಟಿಸಿದ್ದರು. ಅಂಥವರ ಓದು-ಬರಹ ಯಾವುದು ಆ ಕಾಲಕ್ಕೆ ಮುಖ್ಯವಾಗಿರಲಿಲ್ಲ. ನಿನ್ನೆವರೆಗೂ ದನ ಕಾಯುತ್ತಿದ್ದವರು ನಾಳೆ ಕೆಪಿಸಿ ಉದ್ಯೋಗಿಯಾಗಿಬಿಟ್ಟಿರುತ್ತಿದ್ದರು. ತಕ್ಷಣ ಅವರಿಗೆ ತಮ್ಮ `ಹಳ್ಳಿ ಮನೆ’ಯ ಗುಣಲಕ್ಷಣಗಳು ಮರೆತು ಹೋಗಿ, ಕೆಪಿಸಿಯ ಜೀವನಶೈಲಿಯನ್ನು ಅನಿವಾರ್ಯವಾಗಿ ರೂಢಿಸಿಕೊಳ್ಳುವ ಕಸರತ್ತು ಪಡೆಯುತ್ತಿದ್ದರು. ಇದನ್ನು ನೋಡುತ್ತಿದ್ದ ಹಿರಿಯರು, ‘ಹುಲಿ ಬಣ್ಣಕ್ಕೆ ನರಿ ಮೈ ಸುಟ್ಟುಕೊಂಡಿದೆ, ನೋಡಿ’ ಎಂದು ತಮಾಷೆ ಮಾಡುತ್ತಿದ್ದರು.

ಮಾಸ್ತಿಕಟ್ಟೆ ಸಮೀಪದ ಚಕ್ರಾ ನಗರ ಸೇರಿದಂತೆ, ಗೇರುಸೊಪ್ಪ, ದಾಂಡೇಲಿ, ಕಾರ್ಗಲ್ ಮತ್ತು ಶಕ್ತಿನಗರದಿಂದ ಹಲವರು ಇಲ್ಲಿಗೆ ವರ್ಗಾವಣೆಯಾಗಿ ಬಂದಿದ್ದರು. ಅಲ್ಲೆಲ್ಲ ಕೆಪಿಸಿಯ ಕಾಲೋನಿಗಳಿದ್ದವು. ಅಲ್ಲಿಂದ ಜನ ಮಾಸ್ತಿಕಟ್ಟೆಗೆ ವರ್ಗಾವಣೆಯಾಗುತ್ತಿದ್ದಂತೆ ನಿಧಾನವಾಗಿ ಹಾಳು ಸುರಿಯಲು ಶುರು ಮಾಡಿದ್ದವು. ನೋಡುನೋಡುತ್ತಿದ್ದಂತೆ ಚಕ್ರಾ ನಗರ ತನ್ನ ಗತ ವೈಭವವನ್ನು ಕಳೆದುಕೊಂಡು, ಅದನ್ನು ಮಾಸ್ತಿಕಟ್ಟೆಯ ಕಾಲೋನಿಯಲ್ಲಿ ಪುನರ್ ಪ್ರತಿಷ್ಠಾಪನೆ ಮಾಡಿತ್ತು. ಇಲ್ಲಿ ಅಂಗಡಿಗಳು, ಹೋಟೆಲ್‍ಗಳು, ಬಾರು ಮತ್ತು ನೇಟಿವಿಟಿಯ ಟಚ್ ಪಡೆದುಕೊಂಡ ನಾನ್ ವೆಜ್ ರೆಸ್ಟೋರೆಂಟ್‍ಗಳು ತಲೆ ಎತ್ತಿದವು. ಸಂಜೆಯಾಗುತ್ತಲೇ ಮಾಸ್ತಿಕಟ್ಟೆ ‘ದೇವಲೋಕದ ಬಾರ್’ ಆಗಿ ಪರಿವರ್ತನೆಯಾಗುತ್ತಿತ್ತು.

‘ಹಳ್ಳಿ ಮನೆ’ಗಳು ಕೃಷಿಯೇತರ ದುಡಿಮೆಯ ಹಾದಿ ಕಂಡುಕೊಳ್ಳುವುದಕ್ಕೆ ಈ ಕೆಪಿಸಿ ಕಾರಣವಾಗಿದ್ದು ಸುಳ್ಳಲ್ಲ. ಹಾಲು ಮಾರಾಟ, ತರಕಾರಿ ಮಾರಾಟ, ಹಣ್ಣು ಹಂಪಲುಗಳ ಮಾರಾಟದ ಮೂಲಕ ಹಣ ಗಳಿಕೆಯ ಹಾದಿ ಕಂಡುಕೊಂಡಿದ್ದರು. ದೀಪಾವಳಿ ಬಂತು ಆಂದರೆ ಇಡೀ ಊರೇ ಜಗಮಗಿಸುತ್ತಿತ್ತು. 90-2000 ಇಸವಿಯಲ್ಲೇ ಆ ಹಳ್ಳಿಯೊಂದರಲ್ಲಿ ಸಾವಿರಾರು ರೂಪಾಯಿಗಳ ಟರ್ನೋವರ್ ನಡೆಯುತ್ತಿತ್ತು. ಕೆಪಿಸಿ ಕಾಲೋನಿಗಳಲ್ಲಿ ಮಕ್ಕಳು ಬಣ್ಣ ಬಣ್ಣದ ಪಿಸ್ತೂಲು ಹಿಡಿದು ಕಂಡ ಕಂಡವರಿಗೆ ಶೂಟ್ ಮಾಡುತ್ತಿದ್ದರು. ಅದನ್ನು ನೋಡುತ್ತಿದ್ದ ‘ಹಳ್ಳಿ ಮನೆ’ಯ ಮಕ್ಕಳು ರೀಲ್ ಪಟಾಕಿ ತಂದು, ಕಲ್ಲಿನ ಮೇಲಿಟ್ಟು ಜಜ್ಜುತ್ತಿದ್ದರು. ಒಟ್ಟಿನಲ್ಲಿ ಇಬ್ಬರೂ ದೀಪಾವಳಿ ಆಚರಿಸುತ್ತಿದ್ದರಾದರೂ, ಬೆಳಕಿನ ಬಣ್ಣಗಳು ಬೇರೆ ಬೇರೆ ಇರುತ್ತಿದ್ದವು.

ಗಣೇಶನ ಹಬ್ಬ ಹಲವು ದಿನಗಳ ಕಾಲ ಆಚರಿಸಲ್ಪಡುತ್ತಿತ್ತು. ಕೆಪಿಸಿ ಕ್ಲಬ್‍ನಲ್ಲಿ ಕೆಪಿಸಿ ವತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ದಿನಕ್ಕೊಂದು ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗುತ್ತಿತ್ತು. ಎಲ್ಲಿಂದಲೋ ಆರ್ಕೆಸ್ಟ್ರಾದವರನ್ನು ಕರೆಸಲಾಗುತ್ತಿತ್ತು. ಹಾಡು, ಕುಣಿತ ನೃತ್ಯ, ಜಾದೂ ಎಲ್ಲವೂ ಆ ನಮ್ಮ ಎಳೆಯ ಕಣ್ಣುಗಳಲ್ಲಿ ಸೆರೆಯಾಗುತ್ತಿದ್ದವು. ಗಣೇಶನ ವಿಸರ್ಜನೆ ಸಮಯದಲ್ಲಿ ಕೆಪಿಸಿ ಮನೆಗಳ ಪ್ರತಿ ಲೈನ್‍ಗೂ ಮೆರವಣಿಗೆ ಹೋಗುತ್ತಿತ್ತು. ಆಗ ಒಡೆಯುತ್ತಿದ್ದ ತೆಂಗಿನ ಕಾಯಿಗಳೇ ಸಾವಿರಾರು. ಇದನ್ನು ಪಡೆಯಲು ಮಕ್ಕಳ ನೂಕು ನುಗ್ಗಲು. ಒಂದು ವರ್ಗಕ್ಕೆ ಅದು ಪ್ರಸಾದವಾದರೆ, ಮತ್ತೊಂದು ವರ್ಗಕ್ಕೆ ಅದುವೇ ಆಹಾರ.

ಇನ್ನು, ಕೆಪಿಸಿ ವತಿಯಿಂದ ಅತೀ ವಿಜೃಂಭಣೆಯಿಂದ ಆಚರಿಸಲ್ಪಡುತ್ತಿದ್ದದ್ದು ದಸರಾ ಹಬ್ಬ. ಇಲ್ಲಿಯವರೆಗೆ ಕೆಪಿಸಿ ಹೊರತಾಗಿ ಅಷ್ಟು ವಿಜೃಂಭಣೆಯನ್ನು ಬೇರೆಲ್ಲೂ ನೋಡಿಲ್ಲ. ಕೆಪಿಸಿ ಒಳಗೆ ಗ್ಯಾರೇಜ್ ಇತ್ತು. ಡ್ಯಾಂಗೆ ಹೋಗಲು ಬರಲು, ಸಿಬ್ಬಂದಿಯ ಓಡಾಟಕ್ಕೆ, ಕೆಪಿಸಿ ಮಕ್ಕಳ ಶಾಲಾ ಬಸ್ ಸೇರಿತಂತೆ ನೂರಾರು ವಾಹನಗಳಿದ್ದವು.  ಅದೊಂದು ರೀತಿಯ ಜೀಪ್ ಕೆಪಿಸಿ ಸ್ಪೆಷಲ್. ದಸರಾ ಹಬ್ಬದ ಸಮಯದಲ್ಲಿ ಇವೆಲ್ಲದಕ್ಕೂ ಸ್ನಾನ ಆಗುತ್ತಿತ್ತು. ಭಾರಿ ಪೂಜೆ ನಡೆಯುತ್ತಿತ್ತು. ಅಲ್ಲಿ ಹಂಚಲ್ಪಡುತ್ತಿದ್ದ ಕಳ್ಳೆಪುರಿ ಲೆಕ್ಕ ಇಡೋದಕ್ಕೂ ಕಷ್ಟ. ಕ್ವಿಂಟಾಲ್‍ಗಟ್ಟಲೆ ಕುರಿ ಮಾಂಸ ವ್ಯಾಪಾರವಾಗುತ್ತಿತ್ತು. ಅಂತಹ ವೈಭವಯುತ ಕಾಲಘಟ್ಟ ಅದು.

ಹೀಗಿರುವಾಗಲೇ, ವರಾಹಿ ವಿದ್ಯುತ್ ಆಗರದಲ್ಲಿ ವಿದ್ಯುತ್ ಉತ್ಪಾದನೆ ಕುಸಿತ ಕಾಣಲಾರಂಭಿಸಿತು. ಆಗ ತಾನೆ ಹತ್ತಿರದ ಹೊಸಂಗಡಿಯಲ್ಲಿ ಯೋಜನೆ ಆರಂಭವಾಗಿತ್ತು. ನಿಧಾನವಾಗಿ ಮಾಸ್ತಿಕಟ್ಟೆಯ ಕೆಪಿಸಿ ಕಾಲೋನಿಯಿಂದ ವರ್ಗಾವಣೆ ಶುರುವಾಯಿತು. ಒಂದು ಕಾಲದ ಚಕ್ರಾ ನಗರದ ಸ್ಥಿತಿ ಮಾಸ್ತಿಕಟ್ಟೆಯಲ್ಲೂ ಮರುಕಳಿಸುವ ಲಕ್ಷಣ ಕಾಣಲಾರಂಭಿಸಿತು. ಕಾಲೋನಿ ವೈಭವ ಕಡಿಮೆಯಾಗತೊಡಗಿತ್ತು.

ಬರ ಬರುತ್ತಾ ಬಹುತೇಕ ಸಿಬ್ಬಂದಿ ವರ್ಗಾವಣೆ ಶಿಕ್ಷೆಗೆ ಒಳಗಾದರು. ಎಕರೆಗಟ್ಟಲೆ ಜಾಗದಲ್ಲಿದ್ದ ಗ್ಯಾರೇಜ್ ಧೂಳು ತಿನ್ನಲಾರಂಭಿಸಿತು. ಸಾವಿರಾರು ಮನೆಗಳನ್ನು ನೆಲಸಮಗೊಳಿಸಲಾಯಿತು. ಕೆಲವೇ ಮಂದಿ ಮಾಸ್ತಿಕಟ್ಟೆಯಲ್ಲಿ ಉಳಿದರು. ಉಳಿದವರನ್ನು ಸ್ಥಳಾಂತರಿಸಲಾಯಿತು. ಅವರು ಹೊರಟು ಹೋಗುತ್ತಿದ್ದಂತೆ ಕಾಲೋನಿ ಹಾಳು ಸುರಿಯುತ್ತಿರುವ ಹಂಪಿಯನ್ನು ಅನುಕರಿಸಲು ಶುರುಮಾಡಿತು.

ಬೆಳಕಿನಿಂದ ನಳನಳಿಸುತ್ತಿದ್ದ ಮನೆಗಳಿದ್ದ ಜಾಗದಲ್ಲೀಗ ಕಾಡು ಬೆಳೆದಿದೆ. ಊರೊಳಗೆ ಹೋದರೆ ಸ್ಮಶಾನ ಮೌನ. ಅವತ್ತಿಗೂ, ಇವತ್ತಿಗೂ ಅಲ್ಲಿ ಬದಲಾಗದೆ ಹಾಗೇ ಉಳಿದಿರುವುದು ಮಾತ್ರ ಅದೇ ‘ಹಳ್ಳಿ ಮನೆ’ಗಳು. ಬಹುಶಃ ಕೈಗಾರಿಕೆಯನ್ನು ನೆಚ್ಚಿಕೊಂಡು ಬೆಳೆಯುವ ಜಗತ್ತಿನ ಪ್ರತಿ ನಗರದ ನೀಲನಕ್ಷೆ ಮತ್ತು ಭವಿಷ್ಯ ಇದೇ ಇರಬಹುದು.

————

manjuಮಂಜುಳಾ ಮಾಸ್ತಿಕಟ್ಟೆ, ಶಿವಮೊಗ್ಗೆಯ ತೀರ್ಥಹಳ್ಳಿಯವರು. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಬಿಎ ಓದು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಮಾಸ್‌ ಕಮ್ಯೂನಿಕೇಷನ್‌ನಲ್ಲಿ ಸ್ನಾತಕೋತ್ತರ ಪದವಿ. ಕಳೆದ ಏಳು ವರ್ಷಗಳಿಂದ ಮಾಧ್ಯಮದಲ್ಲಿದ್ದಾರೆ. ಟಿವಿ ನಿರೂಪಕಿಯಾಗಿ, ವಾರ್ತಾ ವಾಚಕಿಯಾಗಿ ಚಿರಪರಿಚಿತ ಮುಖ.

Share

13 Comments For "ಒಂದು ಊರಿನ ಸಾವು
ಮಂಜುಳಾ ಮಾಸ್ತಿಕಟ್ಟೆ
"

 1. Shivashankar
  19th March 2016

  Good story

  Reply
 2. santosh ms
  19th March 2016

  ತುಂಬಾ ಧನ್ಯವಾದಗಳು

  ನಿಮ್ಮ ಜೂನಿಯರ್ ಅಂತ ಹೇಳ್ಕೊಳಕ್ಕೆ ಖುಷಿಯಾಗುತ್ತೆ
  ನಮ್ಮ ಊರಿನ ಸಾವಿನಿಂದ ಈಗ ಇನ್ನು ನಾವು ಚೇತರಿಕೆ ಕಾಣುತ್ತಾಇದ್ದಿವಿ
  ನೀವು ಹೋಲಿಕೆಮಾಡಿದ ರೀತಿ ಚನ್ನಾಗಿಇದೆ ವಿಜಯನಗರ ಸಾಮ್ರಾಜ್ಯ

  ನಮ್ಮ ಊರನ್ನು ನೋಡಿ MASTHIKATTE GUNDAS BLOG ನಲ್ಲಿ

  ಬರವಣಿಗೆಯಲ್ಲಿ ತಪ್ಪುಗಳಿದ್ದರೆ ದಯವಿಟ್ಟು ಕ್ಷಮಿಸಿ

  Reply
 3. sumithra.lc
  19th March 2016

  ೧೯೭೪ ರಲ್ಲಿ ತೀರ್ಥಹಳ್ಳಿಯಲ್ಲಿ ಓದುತ್ತಿದ್ದಾಗ ವರಾಹಿ ಯೋಜನೆ ಪ್ರಾರಂಭವಾಗಿತ್ತಷ್ಟೇ..ಆಗ ವರಾಹಿ ಫಾಲ್ಸ್ ನೋಡಲು ಹೋಗಿದ್ದೆವು ..ಕೆ ಪಿ ಸಿ ಕಾಲನಿ ನಿರ್ಮಾಣ ಆಗಿರಲಿಲ್ಲ ..ಭಾರಿ ಗಾತ್ರದ ಮರಗಳನ್ನು ಕಡಿದುರುಳಿಸಿ ಆನೆಗಳ ಸಹಾಯದಿಂದ ಸಾಗಿಸುತ್ತಿದ್ದರು. ದಶಕದ ನಂತರ ನಾನು ಕಾಲೇಜ್ನಲ್ಲಿ ಅಧ್ಯಾಪಕಿಯಾದ ನಂತರ ಕೆ ಪಿ ಸಿ ಬಸ್ ವಿದ್ಯಾರ್ಥಿಗಳನ್ನು ತುಂಬಿಕೊಂಡು ಪ್ರತಿದಿನ ಕಾಲೇಜ್ ಗೆ ಬರುತ್ತಿತ್ತು ..ಆದರೆ .ಕೆ ಪಿ ಸಿ ಕಾಲೊನಿ ಮಾಯವಾಗುವುದರೊಂದಿಗೆ ಬಸ್ ಮತ್ತು ವಿದ್ಯಾರ್ಥಿಗಳೂ ಮಾಯವಾದರು. ಕುದುರೆಮುಖದಲ್ಲೂ ಇದೇ ಕಥೆ…. ಸುಮಿತ್ರಾ . ಎಲ್ ಸಿ .

  Reply
 4. Prashanth Masthikatte
  19th March 2016

  Tumba kushi aitu nimge Nam urina bagge iro abimaana nodi….all the very best….keep on doing something SPL like this….innu yettharakke beliri…Nam ura hudgi nivu….

  Reply
 5. Lohith
  20th March 2016

  Nija vastava bagye hinnota tumba chanagi moodibandide. Masthikatte ooru anodukinta nanage swanta oore agittu eglu nanage ade swanta ooru. Houdu KPC colony horotu padase bere mane galige Hallimane yemba namaskara vittu nija adre namma olege yava bedabhava erlilla anodu aste Satya. KPC school nale KPC employees Makkalu horotu padase bere Makkalu iddaru. Hage govt school nalli yesto KPC employees Makkalu iddaru. Ninna Anna nav yella geleyaru nimma gadde yalle yesto sala aata vadidu gnapaka edde aga nivu ennu chikkajajur hudage. Nev barade lekana chanagi ide adre KPC Makalu Halli Makkalu ano beda Bhava yavatigu iralilla. Parakiya vemba bhavane yavattu yaregu iralilla. A pada balake swalpa novvu ontu madidantu nija

  Reply
 6. Prasanna mastikatte
  20th March 2016

  Amaging article ur feelings are converted into letters and impressing lot for me
  Mastikatte yannu preethiso nannantha nooraru janarige e article mana muttuthade

  Reply
 7. Sanman
  20th March 2016

  Ondu mathu sathya Adu egalu Nanna oru. Nimma e ankana odi alli idda nenapu masuva munnave maikodavidanthe aythu. Adakke nimagondu Salam. Ega nanu Masthikatte bittu shimoga seri, allinda Bengaluru seri sumaru 13 varusha aythu adaru kelaomme yaradaru kannadadalli nim oru yavdu andaga thakshanave Masthikatte antha baruthe….

  Reply
 8. ಆಕಾಶದೀಪ
  21st March 2016

  ಮಾಸ್ತಿಕಟ್ಟೆ ಅನ್ನುವುದು ಎಂದಿಗೂ ಪರಕೀಯ ಭಾವನೆ ಮೂಡಿಸಿಲ್ಲ. ಉದಾಹರಣೆಗೆ, ನವೀನ್ ಎಂಬ ವಾಟೆಬಚ್ಚಲಿನ ಹುಡುಗ ಒಬ್ಬ ಇದ್ದಾನೆ. ಆತನ ಅಕ್ಕನ ಹೆಸರು ‘ಮಂಜುಳ ವಾಟೇಬಚ್ಚಲು’ ಅಲ್ಲ. ಆಕೆಯ ಹೆಸರು ‘ಮಂಜುಳ ಮಾಸ್ತಿಕಟ್ಟೆ’. ಮಾಸ್ತಿಕಟ್ಟೆ ಅಥವಾ ಕೆ ಪಿ ಸಿ ಕಾಲೊನಿಯವರು ‘ಪರಕೀಯ’ ಭಾವನೆ ಮೂಡಿಸಿದ್ದಲ್ಲಿ ಆ ಹೆಸರು ಇಟ್ಟುಕೊಳ್ಳುತ್ತಿರಲಿಲ್ಲ. ಅಲ್ಲವೇ? ಲೇಖನದಲ್ಲಿ ಹೇಳಿರುವಂತೆ ಕೆ ಪಿ ಸಿ ಶಾಲೆಗಳಲ್ಲಿ ‘ಹಳ್ಳಿಮನೆ’ ಮಕ್ಕಳಿಗೂ ಸಮಾನ ಅವಕಾಶ ಇದ್ದವು. ಆದರೆ ನಾವು ಅವರನ್ನು ‘ಹಳ್ಳಿಮನೆ’ ಹುಡುಗರು ಎಂದು ಕರೆದ ನೆನಪಿಲ್ಲ. ಅಷ್ಟೇ ಏಕೆ, ಲೇಖನದಲ್ಲಿ ಹೇಳಿರುವ ‘ನಮ್ಮ ಶಾಲೆಯಲ್ಲಿ ಹಳ್ಳಿ ಮಕ್ಕಳು ಓದಿ ಮುಂದೆ ಬರಬೇಕು ಎಂಬ ಕನಸು ಹೊತ್ತ ಅನೇಕ ಸರಕಾರಿ ಶಾಲೆ ಶಿಕ್ಷಕರಿಗೆ’ ಇರಲು ಉಚಿತ ಮನೆ / ಉಚಿತ ವಿದ್ಯುತ್ ಒದಗಿಸಿ ಕೊಟ್ಟಂತಹ ಸಂಸ್ಥೆ ಎಂದರೆ ಕೆ ಪಿ ಸಿ. ನೆನಪಿರಲಿ, ಅವರು ಕೆ ಪಿ ಸಿ ಉದ್ಯೋಗಿಗಳಲ್ಲ. ‘ಬಾಡಿಗೆ ಮನೆ ಮಾಡಿಕೊಂಡಿರಿ’ ಎಂದು ಹೇಳಬಹುದಿತ್ತು. ಆದರೆ ಕೆ ಪಿ ಸಿ ಯವರು ಹಾಗೆ ಮಾಡಲಿಲ್ಲ. ಸರಕಾರಿ ಶಾಲೆಯ ಮಕ್ಕಳ ಪ್ರವಾಸಕ್ಕೆ ಪ್ರತೀ ವರ್ಷ ಉಚಿತ ಬಸ್ ಒದಗಿಸಿಕೊಡುತ್ತಿದ್ದ ಸಂಸ್ಥೆ ಕೆ ಪಿ ಸಿ. ಸಂಸ್ಥೆಯ ಶಟಲ್ ಕೋರ್ಟ್ನಲ್ಲಿ ಸೋ ಕಾಲ್ಡ್ ‘ಹಳ್ಳಿಮನೆ’ ಮಕ್ಕಳು ಆಡುತ್ತಿದ್ದರು. ಕೆ ಪಿ ಸಿ ಬಸ್ಸುಗಳಲ್ಲಿ ‘ಹಳ್ಳಿಮನೆ’ ಮಕ್ಕಳು ಕಾಲೇಜ್-ಗೆ ಹೋಗುತ್ತಿದ್ದರು. ಅಲ್ಲವೇ? ಹೀಗೆ ಅನೇಕ ಸವಲತ್ತುಗಳನ್ನು ಎಲ್ಲರಿಗೂ ಸಮಾನವಾಗಿ ಸಂಸ್ಥೆ ಒದಗಿಸಿದೆ. ‘ಪರಕೀಯ’ ಎಂಬ ಭಾವನೆ ಮೂಡಿಸಿದ್ದಿದ್ದರೆ ಇವೆಲ್ಲಾ ಆಗುತ್ತಿತ್ತೇ? ಪರಕೀಯ ಭಾವನೆ ಇದ್ದಿದ್ದರೆ ಮಾಸ್ತಿಕಟ್ಟೆಯ ಸ್ನೇಹಿತ ಸಿಕ್ಕಾಗ ನಮ್ಮ ಕಣ್ಣಲ್ಲಿ ಆ ಹೊಳಪು ಮೂಡುತ್ತಿರಲಿಲ್ಲ. ‘ಹಳ್ಳಿಮನೆ’ ರಮೇಶ ಆತ್ಮಹತ್ಯೆ ಮಾಡಿಕೊಂಡಾಗ ನಾವು ಅತ್ತಿದ್ದೇವೆ. ಅವನಿಗೆ ವಾಟೆಬಚ್ಚಲಿಗಿಂತ ಕಾಲೋನಿಯಲ್ಲಿ ಹೆಚ್ಚು ಸ್ನೇಹಿತರಿದ್ದರು. ಲೇಖನವನ್ನು ರೋಚಕಗೊಳಿಸಲು ಕೆ ಪಿ ಸಿ ಯವರಿಗೆ ಪರಕೀಯ ಭಾವನೆ ಮೂಡಿಸಿದವರೆಂಬ ಹಣೆಪಟ್ಟಿ ಬೇಡ. ನಾನು ಕಾಲೋನಿಯವನು; ನನ್ನನ್ನೂ ಸೇರಿ, ನನ್ನ ಅನೇಕ ಕೆ ಪಿ ಸಿ ಸ್ನೇಹಿತರು ಓದಿದ್ದು ಅದೇ ಸರಕಾರಿ ಶಾಲೆಯಲ್ಲಿ. ಹಾಗಾಗಿ ಕೆ ಪಿ ಸಿ ಯವರ ಜೀವನಶೈಲಿ ತುಂಬಾ ಭಿನ್ನವಾಗಿ ಏನೂ ಇರಲಿಲ್ಲ. ಕೆ ಪಿ ಸಿ ಯವರಲ್ಲಿ ಕಂಡಷ್ಟು ಸಮಾನತೆ ಬೇರೆಲ್ಲೂ ನಾನು ಕಂಡಿಲ್ಲ. ದೇವರಿಗೆ ಒಡೆದ ಕಾಯಿ ಇರಬಹುದು ಅಥವಾ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಸಾದ ಇರಬಹುದು, ನಾವೂ (ಅಂದರೆ ನಿಮ್ಮ ಲೇಖನದಲ್ಲಿರುವ ಕೆ ಪಿ ಸಿ ಯವರು) ನೂಕು ನುಗ್ಗಲು ನಡೆಸಿರುವವರೇ. ಚೀಫ್ ಇಂಜಿನಿಯರ್ ನ ಮಗ ಒಬ್ಬ ಗುಮಾಸ್ತನ ಮಗನ ಜೊತೆ ಮತ್ತು ‘ಹಳ್ಳಿಮನೆ’ (ನಾವು ಯಾವತ್ತೂ ಹಾಗೆ ಕರೆದಿಲ್ಲ) ಹುಡುಗನ ಜೊತೆ ದಿನವೂ ಆಟವಾಡುವ ದೃಶ್ಯ ಬೇರೆ ಯಾವ ಸಂಸ್ಥೆಯಲ್ಲಿಯೂ ಕಾಣಲು ಸಾಧ್ಯವಿಲ್ಲ.

  ಮಾಸ್ತಿಕಟ್ಟೆ ಕಾಲೊನಿ (ಬಹುತೇಕ) ಮುಚ್ಚಿ ಹೋಗಲು ಲೇಖನದಲ್ಲಿ ನೀಡಿರುವ ಕಾರಣ ಕೂಡ ಅಸಮಂಜಸ. ಹೊಸಂಗಡಿಯಲ್ಲಿ ಅನೇಕ ವರ್ಷಗಳಿಂದ ವಿದ್ಯುತ್ ಉತ್ಪಾದನೆ ನಡೆಯುತ್ತಲೇ ಇತ್ತು. ಅದು ಹೊಸದಾಗಿ ಶುರು ಆದದ್ದಲ್ಲ. ಮಾಸ್ತಿಕಟ್ಟೆಯ ಅವನತಿಗೆ ಇರುವ ಕಾರಣಗಳು ಬೇರೆ. ಅದು ಸ್ವಲ್ಪ ವಿವಾದಕ್ಕೆ ಎಡೆಮಾಡಿಕೊಡಬಹುದಾದ ವಿಷಯವಾದ್ದರಿಂದ ಇಲ್ಲಿ ಬರೆಯಲು ಸಾಧ್ಯವಿಲ್ಲ.

  ಅಂದಹಾಗೆ ಏಶಿಯಾ-ದ ಮೊದಲ ಜಾಲ ವಿದ್ಯುತ್ ಯೋಜನೆ ಶಿವನಸಮುದ್ರದಲ್ಲಿ ಸ್ಥಾಪನೆಯಾಗಿದ್ದು (1902) ಅಂತ ಓದಿದ ನೆನಪು. (http://www.thehindu.com/todays-paper/tp-national/tp-karnataka/article1875684.ece) ಭಾರತ ಇರುವುದು ಏಶಿಯಾ-ದಲ್ಲಿ. ಅಂದಮೇಲೆ ವಾರಾಹಿ ಯೋಜನೆ ಮೊದಲ ಜಲವಿದ್ಯುತ್ ಯೋಜನೆ ಆಗಲು ಹೇಗೆ ಸಾಧ್ಯ? ಲೇಖನ ರೋಚಕಗೊಳಿಸಲು ಸುಳ್ಳಿನ ಆಸರೆ ಬೇಡ.

  Reply
 9. ಮಂಜುಳಾ ಮಾಸ್ತಿಕಟ್ಟೆ
  21st March 2016

  ಲೋಹಿತ್.. ನಾನು ನನ್ನ ಅಭಿಪ್ರಾಯವನ್ನಷ್ಟೇ ಬರೆದಿದ್ದೇನೆ.. ನನ್ನ ಬರವಣಿಗೆಯ ಉದ್ದೇಶ ಝಗಮಗಿಸುತ್ತಿದ್ದ ಊರು ಹಾಳು ಬಿದ್ದ ಬಗೆಯನ್ನು ನನ್ನ ಅನುಭವದ ಮೂಲಕ ತಿಳಿಸುವುದಾಗಿತ್ತು.. ನೋವಿಗೆ ಕ್ಷಮೆ ಇರಲಿ.

  Reply
  • Manjunatha.E
   20th February 2018

   Ooru indigu nammellara manadalli jhaghamagisuthige, endigu heege iruthade.

   Reply
 10. ಕುಮಾರ ರೈತ
  9th April 2016

  ಸುಸ್ಥಿರತೆ ಕಾಣದ ಯಾವೊಂದು ಕ್ಷೇತ್ರವೂ ದೂರಗಾಮಿ ನೆಲೆಯಲ್ಲಿ ಉಳಿಯುವುದು ಕಷ್ಟ ಎಂಬುದನ್ನು ನಿಮ್ಮ ಬರವಣಿಗೆ ಚಿತ್ರಿಸಿದೆ…

  Reply
 11. ಅನಿ
  31st August 2017

  ನಿಜ ಬೆಂಗಳೂರಿನ ಪ್ರತಿಷ್ಠಿತ ಹೆಚ್. ಎಂ.ಟಿ ಯ ಕಾಲೋನಿಯು ಇದೇ ಹಾದಿಯಲ್ಲಿದೆ.

  Reply
 12. Sudheendra H
  20th February 2018

  ತುಂಬ ಸಮಯದ ನಂತರ ಈ ಆರ್ಟಿಕಲ್ ನೋಡಿದೆ. ಈಲ್ಲಿ ಕಾಮೆಂಟ್ ನಲ್ಲಿ ‘ಹಳ್ಳಿ ಮನೆ’ ಮತು ಕೆ ಪಿ ಸಿ ಕಾಲೋನಿ ಅಂತ ಯಾವ ಬೇದ ಇರಲಿಲ್ಲ ಅಂದಿದಾರೆ. ಆದರೆ ಎರಡೂ ಭಗೆಯ ಅನುಭವ ನನಗೆ ಆಗಿದೆ.

  ಕೆ ಪಿ ಸಿ ಶಾಲೆ ಯಾ ಮೊದಲ batch student ಆಗಿ, ‘ಹಳ್ಳಿ ಮನೆ’ student ಆಗಿ, ಶಾಲೆ ಯಲ್ಲಿ ಎಲ್ಲ ಸ್ನೇಹಿತರು ನಾವು ಒಂದೇ ಅನ್ನುವಂತೆ ಇದದು ನಿಜ. ಸುಶಿಕ್ಷಿತರಾದ ಅಲ್ಲಿನ ಕೆಲ ಕೆಲಸಗಾರರು ನಮಗೇ ಟೀಚ್ ಮಾಡುವಾಗ ಈ ಬೇದ ನಿಜ ವಾಗಿ ಇರಲಿಲ್ಲ. ಆದರೆ ನಮ್ಮ ಮುಖ್ಯ ಶಿಕ್ಷಕರು ಒಬರು ‘ಈ ಹಳ್ಳಿ ಮನೆ’ ಮಕ್ಕಳನ್ನ ಶಾಲೆ ಎಂದ ಹೊರಹಾಕಬೇಕು ಅಂದಿದ್ದು ನಿಜ. ಆದರೆ ಯಾರೋ ಒಬ್ಬ ಶಿಕ್ಷಕರು ಹೇಳಿದ ಮಾತಿಗೆ ಎಲ್ಲರನ್ನು ಹಾಗೆ ಎನ್ನುವುದು ತಪ್ಪು.

  ಹಾಗೆಯೆ ಕೆ ಪಿ ಸಿ ಬಸ್ ನಲ್ಲಿ ಹೋಗುತಿದ್ದ ಮಕ್ಕಳನ್ ಬಸ್ ನಿಂದ ಕೇಳಾಗೆ ಮಾರ್ಗ ದಲ್ಲಿ ಇಳಿಸಿದು ನಿಜ. ಇದು ಪ್ರತಿ ವರ್ಷ repeate ಆಗುತಿದ್ದದು ನಿಜ.

  ಇಂಥ ದ್ವಾಉರ್ಜನ್ಯ ಕ್ಕೆ ಒಳಗಾದವರಿಗೆ ಚೆನ್ನಾಗಿ ನೆನಪಿರುತದೆ ಮತು ನೋವಾಗುತದೆ.

  ಹೀಗೆ ಚಿಕ್ಕದಾಗಿ ಯೋಚಿಸುವವರು ಸ್ವಲ್ಪ ಪ್ರಮಾಣದ ಲ್ಲಿ ಇದ್ದರು ಅದೇ ನಮ್ಮಂಥ ವರ ಪುಣ್ಯ, ಹೀಗೆ ಮೇಲು ಕೀಳು ಮಾಡು ವವರಿಗೆ ಬುದ್ದಿ ಹೇಳಿ ನಮಗೇ ಅವಕಾಶ ಮಾಡಿ ಕೊಡು ತಿದ್ದವರ ಸಂಖ್ಯೆ ಅಧಿಕ ವೇ ಇತ್ತು.

  ಇಲ್ಲಿ ‘ಊರಿನ ಸಾವು’ ಅನ್ನಲು ಅನ್ನುವ ಬದಲು ಒಂದು ದುಃಸ್ವಪ್ನ ಮುಗೀತು ಎನ್ನಬಹುದು. ಇದರಲ್ಲಿ ಊರಿಗೆ ಲಾಭ ಲೂಕ್ಸಾನ್ ಎರಡೂ ಆಗಿದೆ.

  ಹಾಗೆನೇ ಕೆ ಪಿ ಸಿ ‘ಕೃಪಾ ಕಟಾಕ್ಷ’ ಇಲ್ಲದೆನು ಊರ್ ಆರಾಮಾಗಿ ಇದೆ ಚಿಂತೆ ಬೇಡ. ಮೊದಲು ಇತು ಮುಂದೇನು ಇರುಥೆ.

  ಕೆ ಪಿ ಸಿ ಇಂದ ಕಳೆದುಕೊಂಡಿದ್ದೇನು ಊರಿನ ಜನ ಎಂದು ಹೇಳಲು ಹೊರಟರೆ ಆರ್ಟಿಕಲ್ ಅಲ್ಲ ಬುಕ್ ಬರೀಬೇಕಾಗುತ್ತೆ. ಸಾಮಜಿಕ ವ್ಯವಸ್ಥೆ ಬುಡಮೇಲಾಗಿದ್ದು ಹೇಗೆ, ತಲೆಮಾರುಗಳು ಸಾಗುವಳಿ ಮಾಡಿದ ಭೂಮಿಯನ್ನ ಬಿಡಿ ಗಾಸಿಗೆ ಕಿತು ಕೊಂಡ ಸರಕಾರಿ ಬಿಳಿ ಆನೆ ಕೆ ಪಿ ಸಿ ಗೆ ಇದೆಲ್ಲ ಅರ್ಥ ಆಗಲ್ಲ ಬಿಡಿ. ಹಣದ ಆಮಿಷ ತೋರಿಸಿ ಕುಟುಂಬಗಳನ್ನ ಬಲಿ ಪಡೆದ ಸಂಸ್ಥೆ ಕೆ ಪಿ ಸಿ. ದೂರದ ಯಾವುದೊ ನಗರಕ್ಕೆ ಕರೆಂಟ್ ಕೊಡಲು ರೈತರನ್ನ ಬೀದಿಪಾಲು ಮಾಡಿದ್ದೂ ಇದೆ ಕೆ ಪಿ ಸಿ. ಹಣನ ನಿರ್ವಹಿಸಲು ಗೊತಿಲ್ಲದ ರೈತರಿಗೆ ಹಣಕ್ಕೆ ಭೂಮಿ ಪಡೆದದ್ದು ದೊಡ್ಡ ತಪ್ಪು, ಈಗ ದೊಡ್ಡ ಕೃಪೆ ತೋರಿಸುವರಂತೆ ಆಡುತಿರೋದು ನೋಡಿದರೆ ಬೇಸರವಾಗುತದೆ.

  ಕೆ ಪಿ ಸಿ ಭಕ್ತರು ಯಾರಾದ್ರೂ ಇದ್ದರೆ ಕೇಳಿ, ಹಿಂದೆ ಬ್ರಿಟಿಷ್ ಕಾಲೋನಿ ಇಂಡಿಯಾ ದಲ್ಲಿ ಮಾಡಿದ್ದನೆ ಕೆ ಪಿ ಸಿ ಕಾಲೋನಿ ಮಾಸ್ತಿಕಟ್ಟೆ ಯಲ್ಲಿ ಇದ್ದು ಮಾಡಿದ್ದು. ಎರಡರಲ್ಲೂ ಯಾವ ವ್ಯತ್ಯಾಸ ಇಲ್ಲ.

  Reply

Leave a comment

Your email address will not be published. Required fields are marked *

Recent Posts More

 • 6 days ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 week ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...

 • 2 weeks ago No comment

  ಕಲರವ | ಒಂದು ಸಿನಿಮಾ ನೋಡಿದ ಕಥೆ…

      ಕಲರವ           “ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು” ಎಂದಳು ಭಾರತದ ನನ್ನ ಅಕ್ಕ. “ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ಫೈಟಿಂಗ್ ಗಳ ಚಲನಚಿತ್ರವನ್ನು ನೋಡುವುದೆಂದರೆ, ‘ನೋಡಿದ್ದನ್ನೇ ನೋಡುವ’ ಕಷ್ಟ. ವೈಚಾರಿಕ ಸಿನಿಮಾಗಳು ಜಾಸ್ತಿ ಓಡದ ಕಾಲವಿದು. ಇನ್ನು ಸಾಂಸಾರಿಕ ಚಿತ್ರಗಳು ಬರುವುದು ನಿಂತ ಮೇಲೆ ಸಂಸಾರಗಳು ಒಟ್ಟಿಗೆ ...

 • 2 weeks ago No comment

  ಕವಿಸಾಲು | ಅಲೆಗಳೆದ್ದ ಕೊಳ…

      ಕವಿಸಾಲು         ಅಲೆಗಳೆದ್ದ ಕೊಳವಿದು, ಕಲ್ಲು ತೂರಿದ ಕಾಯಕವಷ್ಟೇ ನಿನ್ನದು ಎದ್ದ ಅಲೆಗಳ ಮೇಲಿಲ್ಲ ನಿನಗೆ ಇನಿತು ಅಧಿಕಾರವು ದೂರಿಲ್ಲ ನನ್ನಲ್ಲಿ, ಬೇಡಿಕೆ ತಾನೇ ಏಕೆ? ತುಂಬಿದ ಮನದಿ ಹೊಕ್ಕ ಹರ್ಷಕೆ ಪುರಾವೆಗಳ ಹಂಗಿಲ್ಲ, ನಕ್ಕ ನಗುವಿನಲಿ ನೋವಿಲ್ಲ, ತುಂಬಿವೆ ನೂರು ಭಾವಾರ್ಥ ಮುಚ್ಚಟೆಯಿಂದ ಬಚ್ಚಿಟ್ಟುಕೊಂಡು ಬೇಕಾದ ಪರಿಭಾಷೆಯಲಿ ದಿರಿಸಿಟ್ಟು ಸಿಂಗರಿಸಿ ನೋಡುತ್ತ ನಿನ್ನ ಅನುಪಸ್ಥಿತಿಯಲ್ಲೂ ಸಿಗುವ ಅನುಪಮ ಭಾವದಿ ದೊರಕಿದ್ದು ...

 • 3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...


Editor's Wall

 • 31 August 2018
  3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  3 weeks ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  3 weeks ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  4 weeks ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  4 weeks ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...