Share

ಬೆಚ್ಚಗೆ ಒಂದು ನಿರೀಕ್ಷೆ
ಶಮ, ನಂದಿಬೆಟ್ಟ

ವರ ಮೈತ್ರಿ ಶುರುವಾಗಿದ್ದು ಅಕ್ಷರಗಳಿಂದ.

ಬಹಳ ಕಾಲದಿಂದ ಬರವಣಿಗೆಯ ಕನಸು ಕಂಡವಳು ಇತ್ತೀಚೆಗಷ್ಟೇ ಬರೆಯಲು ಶುರುವಿಟ್ಟಿದ್ದಳು.

ಅವನು ಅವಳ ವಯಸ್ಸಿಗಿಂತ ಹೆಚ್ಚು ಸಂಖ್ಯೆಯಲ್ಲಿ ಬರೆದವನು. ಒಂದಷ್ಟು ಪುಸ್ತಕಗಳೂ ಅವನ ಹೆಸರಿನಲ್ಲಿ ಪ್ರಕಟವಾಗಿವೆ.

ಒಂದಿನ ಅಚಾನಕ್ಕಾಗಿ ಅವಳ ಫೇಸ್‌ಬುಕ್ ಬರಹ ಓದಿದವನು ಸುಮ್ಮನಿರಲಾಗದೇ ಅವಳ ಟೈಮ್‌ಲೈನ್ ಪೂರ ಜಾಲಾಡಿದ್ದ.

“ನಿಮ್ಮ ಬರಹ ಡಿಫರೆಂಟ್ ಮತ್ತು ಹಾಂಟಿಂಗ್. ಎಲ್ಲ ಬರಹಗಳನ್ನ ಸೇರಿಸಿ ಒಂದು ಸಂಕಲನ ಹೊರತನ್ನಿ” ಪುಟ್ಟದೊಂದು ಮೆಸೇಜು ಕಳಿಸಿದ್ದ ಇನ್ ಬಾಕ್ಸ್‌ನಲ್ಲಿ.

ಅಂಥ ಬರಹಗಾರನಿಂದ ಈ ಸಂದೇಶ ಹುಡುಗಿಗೂ ಅಚ್ಚರಿ, ಖುಷಿಯೇ.

ಉತ್ತರಿಸಿದ್ದಳು “Am honored to get such a comment from YOU. ಆದರೆ ಸಂಕಲನ ಹೊರತರುವಷ್ಟು ಬಹಳ ಬರೆದವಳಲ್ಲ ನಾನು. ಬರೆಯಬೇಕು ಅಂತ ಬರೆದವಳೂ ಅಲ್ಲ… ಇನ್ನು ಬರೆಯದೇ ಇರಲಾಗದು ಅನ್ನುವಷ್ಟು ತೀವ್ರವಾಗಿ ಭಾವ ಕಾಡಿದಾಗ ಬರೆದೆ ಅಷ್ಟೇ… ಇತ್ತೀಚೆಗಿನ ದಿನಗಳಲ್ಲಿ ಬದುಕಿನ ಹಲವು ಮುಖಗಳು ಬಿಟ್ಟೂ ಬಿಡದಂತೆ ನನ್ನ ಸುತ್ತುತ್ತಿವೆ. ಹಾಗೆ ಬಂದ ಭಾವಗಳಷ್ಟೇ ಅವು” ಬದುಕನ್ನು ತೀವ್ರವಾಗಿ ಪ್ರೀತಿಸುವ ಹುಡುಗಿ ಇಷ್ಟು ಹೇಳಿದ್ದು ಸಾಕಿತ್ತು.

“Off recent only I am seeing u have that kind of intensity. What I liked in your writings is u don’t use even a single word unnecessarily. I love it. ನೀ ಬರೀತಿರು ಪಬ್ಲಿಷರ್ ಜವಾಬ್ದಾರಿ ನನಗಿರಲಿ” ಉತ್ತರಿಸಿದ್ದ.

ಇದನ್ನು ಕಂಡ ಮೇಲವಳಿಗೆ ಅರ್ಥವಾಗಿತ್ತು. ನನ್ನ ಬಗ್ಗೆ ಪೂರ R & D  ಮಾಡಿಯೇ ಇಷ್ಟು ಹೇಳುತ್ತಿದ್ದಾನೆ.

ಒಂದಷ್ಟು ಕವನಗಳ ವಿನಿಮಯದ ನಂತರ ಇಬ್ಬರ ನಡುವೆ ವಾಟ್ಸಾಪ್ ಎಂಬ ಮಾಯಾವಿ ಸೇತುವೆ. ಸುಮಾರಷ್ಟು ತಿಳಕೊಂಡಿದ್ದರು ಪರಸ್ಪರ. ಹರಟದಿದ್ದ ವಿಚಾರವೇ ಇರಲಿಲ್ಲ. ಚಂದಮಾಮ ಕಥೆಯಿಂದ ಹಿಡಿದು ಮುಕ್ತ ಕಾಮದ ವರೆಗೂ. “ರೋಮ್ಯಾಂಟಿಕ್ ಆಗಿ ಬರೆದರೂ ಭಾಳ reserved ಆಗಿರೋ ಹುಡುಗಿ ನನ್ನ ಜತೆ ಹೇಗಿಷ್ಟು ಸರಾಗವಾಗಿ ಹರಟುತ್ತಾಳೆ ?” ಪ್ರಶ್ನೆ ಅವನಿಗೆ. ಇವಳಿಗೂ ಸಣ್ಣಗೆ ಅಂಥದ್ದೇ ಒಂದು ಭಾವ. “ಒಮ್ಮೆಯೂ ನೋಡಿಲ್ಲ, ಮಾತಾಡಿಲ್ಲ ಹೇಗಿಷ್ಟು ಹರಟೆ ಸಾಧ್ಯವಾಯ್ತು?”  ಬರ್ತಾ ಬರ್ತಾ ಗೊತ್ತಾಗಿತ್ತು ಅವನಿಗೂ; ಹುಡುಗಿಯ ಬದುಕಿನ ಹರಹು ದೊಡ್ಡದಿದೆ. ಒಳ್ಳೆಯದು ಕೆಟ್ಟದ್ದು ಎಲ್ಲವನ್ನು ಗಿಫ್ಟ್ ಕೊಟ್ಟಿದೆ ಜೀವನ. ತೀರ ಹತ್ತಿರಾಗಿದ್ದಾಳೆ ಅನಿಸಿದರೂ ನಾಜೂಕಾಗಿ ಅಂತರ ಕಾಪಾಡಿಕೊಳ್ಳುವ ಕಲೆ ಕರಗತ. ಅವಳ ಕಾಲೇಜಿನಲ್ಲೇ ಬಹಳಷ್ಟು ಭಾಷಣಗಳನ್ನ, ಕಾರ್ಯಾಗಾರಗಳನ್ನ ಮಾಡಿದ್ದವನಿಗೆ “ಈ ಹುಡುಗಿ ಕಣ್ಣಗೆ ಬೀಳದ್ದು ಹೇಗೆ?” ಅರ್ಥವಾಗದ ಒಗಟು. ಇನ್ನೊಂದಷ್ಟು ಮೊದಲೇ ಭೇಟಿಯಾಗಿದ್ದರೆ ಅನ್ನಿಸದಿರಲಿಲ್ಲ. ಅವಳೂ ಹೇಳಿದ್ದಳು “Journalism ಜತೆ ನಾನು ಮೋಹಕ್ಕೆ ಬಿದ್ದಂಥ ದಿನಗಳಲ್ಲಿ, Journalism ನಿಂದ ನಾನು ಹಿಂದಕ್ಕೆ ಹೆಜ್ಜೆಯಿಡುವ ಒಂದೇ ದಿನ ಮುಂಚಿತವಾಗಿ ನೀವು ಒಬ್ಬ ಗುರುವಾಗಿ ದಕ್ಕಿದ್ದರೂ ನಾನಿವತ್ತು ‘ಒಳ್ಳೆಯ’ journalist ಆಗಿರ್ತಾ ಇದ್ದೆ !!!!!” ಮನಸ್ಸು ಪಿಸುಗುಟ್ಟಿತ್ತು “ನೀ ಮುಂಚೆಯೇ ಸಿಕ್ಕಿದ್ದರೆ ಬರೀ ಗುರುವಾಗಿರ್ತಿರಲಿಲ್ಲ ಕಣೇ ಹುಡುಗೀ ನಿನ್ನ ಗುರಿಯೂ ಆಗ್ತಾ ಇದ್ದೆ” ಹೇಳಲು ಸಣ್ಣ ಬಿಗುಮಾನ ಅಡ್ಡ.  ಅವಳೋ ಹೇಳದೆಯೇ ಎದೆ ಬಗೆಯಬಲ್ಲ ಸುಳಿಗಾಳಿ. ಭಾವ, ಬೌದ್ಧಿಕತೆ, ರುಚಿಗೆ ಬೇಕಾದಷ್ಟೇ ತುಂಟತನ, ಹಿತವೆನಿಸುವ ಸಾಂಗತ್ಯ ಇಬ್ಬರಿಗೂ ಅನೂಹ್ಯವಾದೊಂದು ಖುಷಿ ಕೊಟ್ಟಿತ್ತು. ಬಹಳಷ್ಟು ಹುಡುಗಿಯರನ್ನು ಕಂಡ ಅವನಿಗೂ ‘ಎಲ್ಲ ಹುಡುಗಿಯರಂತಲ್ಲವೀ ಬೆಡಗಿ’ ಗೊತ್ತಾಗಿತ್ತು.

ಓದನ್ನು ತುಂಬ ಹಚ್ಚಿಕೊಂಡಿರುವ ಇಬ್ಬರೂ ಯಾವುದೆ ಕಾರಣಕ್ಕೆ ಮಾತಿಗೆ ಶುರುವಿಟ್ಟರೂ, ಚರ್ಚೆ ಮಾಡಿದರೂ ಕೊನೆಗೆ ಅಂತ್ಯವಾಗುವುದು ಒಂದು ಹಾಡಿನ, ಪುಸ್ತಕದ ವಿಮರ್ಶೆಯಲ್ಲಿ, ಬರಹಗಾರರ ಬಗ್ಗೆ ಮಾತಿನಲ್ಲಿ; ಚೆಂದದೊಂದು ಹಾಡಿನ ವಿನಿಮಯದಲ್ಲಿ. “ಇಷ್ಟು ಓದಿಕೊಂಡವರ ಬಳಿ ಅದೆಷ್ಟು ಪುಸ್ತಕಗಳಿದ್ದಾವು, ಯಾವತ್ತಾದರೂ ಒಮ್ಮೆ ಒಂದಷ್ಟು ಪುಸ್ತಕಗಳನ್ನ ಎತ್ತಿಕೊಂಡು ಬರಬೇಕು”  ಯೋಚಿಸುತ್ತಾಳವಳು. ಅವನಿಗೆ ಇನ್ನೇನೋ ಯೋಚನೆ ಶಾಯಿಯ ಬದಲು ಪೆನ್ನಿಗೆ ಭಾವನೆಗಳನ್ನೇ ತುಂಬಿದಂತೆ ಬರೆಯಬೇಕೆಂದರೆ ಯಾರನ್ನಾದರೂ ಪ್ರೀತಿಸುತ್ತಿರಬಹುದಾ ? ಕೇಳಬೇಕೆನಿಸುತ್ತದೆ. ಇಲ್ಲದೇ ಹೋದರೆ ಇಂಥ ಭಾವಕೋಶ ಹೆಣೆಯಲು ಸಾಧ್ಯವೇ ಇಲ್ಲ ಅನ್ನುತ್ತೆ ಅವನ ಜೀವನಾನುಭವ. ಬಾಯ್ಬಿಟ್ಟು ಕೇಳಲಾರ. ಹಲವು ಬಾರಿ ಕೊಂಕಣ ಸುತ್ತಿ ಮೈಲಾರಕ್ಕವನು ಹೋದರೆ “ಕೃಷ್ಣ ನನ್ನ ಹುಡುಗ” ಅಂತಾಳೆ. “ನಿನ್ನ ಕೃಷ್ಣನ ಹೆಸರೇನು?” ಪ್ರಶ್ನೆ ನಾಲಗೆಯ ತುದಿವರೆಗೆ ಬಂದರೂ ಹಾಗೇ ಒಳಗಿಳಿದಿದೆ. ಪ್ರತಿ ನಿಮಿಷವನ್ನೂ ಹೊನ್ನಂತೆ ಖರ್ಚು ಮಾಡುವ ತನ್ನಂಥ ಪತ್ರಕರ್ತನ ಬಳಿ ಕೂಡ ಕೂಡ ಹೀಗೆ ಸಮಯ ಕದಿಯುವವಳ ಬಗ್ಗೆ ಅಚ್ಚರಿಯ ಜತೆಗೇ ಮೆಚ್ಚುಗೆ ಕೂಡ.

ಬಹಳಷ್ಟು ಬಾರಿ ಭೇಟಿಯಾಗುವ ಮಾತಾಡಿದ್ದಾರೆ ಇಬ್ಬರೂ. ಒಂದು ‘ಚಾಯ್ ಪೆ ಚರ್ಚಾ’ ಆಗೇ ಹೋಗಲಿ ನಿರ್ಧರಿಸಿದ್ದಾರೆ. ಅವನೋ ನೋಡಬೆಕೆನ್ನಿಸಿದಾಗೆಲ್ಲ ಸಿಗುವವನಲ್ಲ. ಇನ್ನು ನೋಡದಿರಲಾಗದು ಎನ್ನಿಸಿದಾಗಷ್ಟೇ ಬರುವ. ಇವಳು ಹಾಗಲ್ಲ; ಚಹಾಕ್ಕಿಂತ ಹೆಚ್ಚಿನದು ಓದುಬಾಕನ ಸ್ನೇಹದ ಸೇತು ಕಟ್ಟುವ ಸೆಳೆತ.

ಹೀಗೇ ಅರ್ಧ ವರ್ಷ ಸರಿದು ಹೋದಾಗ ಕೊನೆಗೊಮ್ಮೆ ಕೇಳೇ ಬಿಟ್ಟಿದ್ದಳು “ಈಗೇನು ಭೇಟಿ ಆಗ್ತೀವೋ ಇಲ್ವೋ?” ಹುಡುಗಿಗೆ ಸಣ್ಣಗೆ ಕೋಪ ಬಂದಿದೆ ಗೊತ್ತಾಗಿ ಮೆಸೇಜು ಕಳಿಸಿದ “ನೀ ಸಿಕ್ಕಿದರೆ ನಾನು ಸತ್ತೇ ಹೋದೇನು; ನಗುವಿನಿಂದ ಕೊಲ್ಲುವವರನ್ನು ಭೇಟಿಯಾಗೋಕೆ ಭಯ.”

ತಣ್ಣಗೆ ಉತ್ತರ ಬಂದಿತ್ತು “ಮಾಸ್ಕ್ ಹಾಕ್ಕೊಂಡು ಬರ್ತೀನಿ ಬಿಡು.”

“ಮಾಸ್ಕ್ ಹಾಕ್ಕೊಂಬಂದರೆ ಭೇಟಿಯಾದರೂ ಯಾಕೆ ಬೇಕು” ಮನದ ಮಾತು ದಾಟಿಸಲಾರದೇ ಸುಮ್ಮನಿದ್ದ.

ಮೌನದಲ್ಲಿಯೂ ನೂರು ಮಾತಿದೆ ಗೊತ್ತು ಅವಳಿಗೆ; ಮರು ಮಾತಾಡದೇ ಸುಮ್ಮನಿದ್ದಳು ವಾರ ಪೂರ್ತಿ. ಎಂಟನೇ ದಿನ ನಸುಕಿನ ಹೊತ್ತಿಗೇ ಅವಳ ಮೊಬೈಲು ಗುಬ್ಬಿ ಚಿಂವ್ ಚಿಂವ್ ಅಂದಿತ್ತು. ಭೇಟಿಯ ದಿನ, ಸ್ಥಳ, ಸಮಯ; ಎಲ್ಲಿ ಪಿಕ್ ಮಾಡ್ಕೋತಾನೆ ಅನ್ನೋ ವಿವರದ ಜತೆಗೇ.

ಅದೇ ಗುಂಗಲ್ಲಿ ಹೊರ ಬಂದು ನೋಡಿದರೆ ಅಂಗಳದಲ್ಲಿ ಹೊಸದಾಗಿ ಹಾಕಿದ ಕೆಂಡ ಸಂಪಿಗೆ ಹೂ ಬಿಟ್ಟಿತ್ತು.

(ಚಿತ್ರ: ಡಿ ಎಂ ಹೆಗಡೆ)

———-

DSC_0285 (2)ಶಮ ನಂದಿಬೆಟ್ಟ, ದಕ್ಷಿಣ ಕನ್ನಡ ಜಿಲ್ಲೆಯ ನಂದಿಬೆಟ್ಟ ಎಂಬ ಸಣ್ಣ ಹಳ್ಳಿಯವರು. ಇದು ಅವರೇ ಇಟ್ಟುಕೊಂಡ ಹೆಸರು. ಅಪ್ಪ ಅಮ್ಮ ಇಟ್ಟ ಹೆಸರು ವಿಜಯಲಕ್ಷ್ಮಿ ಎಂ. ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಪದವಿಯಲ್ಲಿ ಓದಿದ್ದು ಪತ್ರಿಕೋದ್ಯಮ, ಇಂಗ್ಲಿಷ್ ಸಾಹಿತ್ಯ ಮತ್ತು ಮನಃಶಾಸ್ತ್ರ. ಬೆಂಗಳೂರು ವಿಶ್ವವಿದ್ಯಾಲಯದಿಂದ ಪೂರ್ವ ಬಾಲ್ಯಾವಧಿ ಶಿಕ್ಷಣ ಮತ್ತು ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ. ಬರೆಯುವುದು ಖುಷಿಗೆ. ಅನ್ನವಿಲ್ಲದೇ ಬದುಕಬಲ್ಲೆ; ಅಕ್ಷರವಿಲ್ಲದೇ ಬದುಕಲಾರೆ ಎಂಬಷ್ಟು ಮಟ್ಟಿಗೆ ಅಕ್ಷರ ವ್ಯಾಮೋಹಿ.

Share

10 Comments For "ಬೆಚ್ಚಗೆ ಒಂದು ನಿರೀಕ್ಷೆ
ಶಮ, ನಂದಿಬೆಟ್ಟ
"

 1. Shree Talageri
  22nd March 2016

  bhaavagaLanna sogasaagi heNeyuvike ninage modalinindaloo karagata shamakkaa 🙂 ninna barehagaLu ishTavaaguvudakke mukhya kaaraNa adarallina saraLate 🙂 ninna barehada paatradante, neenoo kooDa anavashyaka padagaLanna baLasadavaLu ; yaakandre ninage gottu, padagaLa hada 🙂 🙂 🙂 chenda chenda bhaava 🙂 🙂 🙂

  Reply
  • Shama, Nandibetta
   23rd March 2016

   Thanks Shree Puttanna.

   ಇಂಥ ನಿರ್ಮಮ ಪ್ರೀತಿಗಳೇ ನನ್ನನ್ನು ಸದಾ ಜೀವಂತವಾಗಿಡುವ ಶಕ್ತಿ.

   Reply
 2. ಪರಸ್ಪರ ಕಾಣದಿದ್ದರೂ ನಡೆಯುವಂತಹ ಇಂದಿನ ಸಂಬಂಧಗಳ ಸಂಭಾಷಣೆಯ ಸೂಕ್ಷ್ಮತೆಗಳಲ್ಲಿ, ಈ ಸಂಬಂಧಗಳ ನಡುವೆ ಹುಟ್ಟುವ ಹತ್ತಾರು ಆಡಿದ ಮಾತುಗಳ ಹಿಂದೆ ಹಿಂದೆಯೇ ‘ಆಡದೆ ಉಳಿಯುವ ನೂರಾರು ಮಾತುಗಳಿಗೆ’ ಸ್ವರೂಪ ಕೊಡುವ ನಿಮ್ಮ ಭಾಷಾ ಶೈಲಿ ಲವಲವಿಕೆಯಿಂದ ಕೂಡಿರುವಂತದ್ದು.

  Reply
  • Shama, Nandibetta
   23rd March 2016

   Thanks

   ನನ್ನ ಪ್ರತಿ ಬರಹಗಳಲ್ಲಿಯೂ ಅದರ ತಿರುಳನ್ನು ಗ್ರಹಿಸಿ ಮುಂದಿಡುವವರಲ್ಲಿ ನೀವು ಮೊದಲಿಗರು. ‘ಆಡದೆ ಉಳಿಯುವ ನೂರಾರು ಮಾತುಗಳಿಗೆ’ ಆಡಿದ ಮಾತುಗಳಿಗಿಂತ ಹೆಚ್ಚಿನ ಅರ್ಥ ಬೆಲೆ ಎರಡೂ ಇರುತ್ತದಲ್ವಾ ಬದುಕಿನಲ್ಲಿ ?

   Reply
 3. Deepa ravishankar
  23rd March 2016

  a sweet short love story, but somehow not able to imagine that it will be a happy ending. Probably that is because individuals own experiences. the length of the story is so perfect that reader feels some more should have been there to read. that is the perfect stage to end i feel. simple and soft flowing language. overall a nice feeling.

  Reply
  • Shama, Nandibetta
   23rd March 2016

   Deeps,

   You always look at things from a different angle and your comments prove it again & again. Thanks for the lovesssss showered. Yes as you said it depends on individual experiences. ಅವರವರ ಭಾವಕ್ಕೆ ಬರಹವನ್ನು ಬಿಟ್ಟು ನಾವು ಸುಮ್ಮನಿರುವುದಷ್ಟೇ ಅಲ್ವಾ ? ಸ್ವತಃ ಬರಹಗಾರ್ತಿಯಾದ ನಿಂಗೆ ಇದು ಗೊತ್ತಿರೋದೇ !!

   Reply
 4. Suguna
  24th March 2016

  ಶಮ,
  ಭಾವನೆಗಳ ಮಹಾಪೂರವೇ ತುಂಬಿದೆ ಈ ಲೇಖನದಲ್ಲಿ. ಎಷ್ಟೋ ಸ್ನೇಹಗಳು ಮುಖಾಮುಖಿ ಭೇಟಿ ಆಗದಿದ್ದರೂ ಆತ್ಮೀಯತೆಯನ್ನು ಸೃಷ್ಟಿಸಿಬಿಡುತ್ತದೆ. ಚೆಂದದ ಲೇಖನ

  Reply
  • Shama, Nandibetta
   26th March 2016

   Suguna, ಹೌದು. ಎಲ್ಲೋ ಹೇಗೋ ಸಿಕ್ಕಿದವರು, ಭೇಟಿಯಾಗದೆಯೂ ಜತೆಗಿದ್ದವರಿಗಿಂತ ಹೆಚ್ಚಿನ ಆಪ್ತತೆ ತಂದು ಕೊಡಬಲ್ಲರು ಬದುಕಿಗೆ.

   Thanks for liking

   Reply
 5. 31st March 2016

  ಅಕ್ಕೋ <3 ಎದೆಯಲ್ಲಿ ಅದೆಂತಹದೋ ರಿಂಗಣ ಓದಿದ ಮೇಲೆ.. ಅದೆಷ್ಟು ರೋಮ್ಯಾಂಟಿಕ್‌ ಆಗಿ ಬರೀತಿರಿ :*

  Reply
  • Shama, Nandibetta
   31st March 2016

   ನಿನ್ನಂಥವರ ಅಂತರಂಗದ ಮೃದಂಗ ಸದ್ದು ಮಾಡುವ ಹಾಗೆ ಬರೆಯಬಲ್ಲೆ ಅನ್ನೋದಕ್ಕಿಂತ ಹೆಚ್ಚಿನ ಖುಷಿ ಇನ್ನೇನು ಹೇಳು.

   ಓದುಗರ ದನಿಯೇ ಬರೆವವರ ಪೆನ್ನಿಗೆ (ಕೀ ಬೋರ್ಡಿಗೆ) ಶಕ್ತಿ. Thanks Sushma.

   Reply

Leave a comment

Your email address will not be published. Required fields are marked *

Recent Posts More

 • 6 days ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 week ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...

 • 2 weeks ago No comment

  ಕಲರವ | ಒಂದು ಸಿನಿಮಾ ನೋಡಿದ ಕಥೆ…

      ಕಲರವ           “ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು” ಎಂದಳು ಭಾರತದ ನನ್ನ ಅಕ್ಕ. “ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ಫೈಟಿಂಗ್ ಗಳ ಚಲನಚಿತ್ರವನ್ನು ನೋಡುವುದೆಂದರೆ, ‘ನೋಡಿದ್ದನ್ನೇ ನೋಡುವ’ ಕಷ್ಟ. ವೈಚಾರಿಕ ಸಿನಿಮಾಗಳು ಜಾಸ್ತಿ ಓಡದ ಕಾಲವಿದು. ಇನ್ನು ಸಾಂಸಾರಿಕ ಚಿತ್ರಗಳು ಬರುವುದು ನಿಂತ ಮೇಲೆ ಸಂಸಾರಗಳು ಒಟ್ಟಿಗೆ ...

 • 2 weeks ago No comment

  ಕವಿಸಾಲು | ಅಲೆಗಳೆದ್ದ ಕೊಳ…

      ಕವಿಸಾಲು         ಅಲೆಗಳೆದ್ದ ಕೊಳವಿದು, ಕಲ್ಲು ತೂರಿದ ಕಾಯಕವಷ್ಟೇ ನಿನ್ನದು ಎದ್ದ ಅಲೆಗಳ ಮೇಲಿಲ್ಲ ನಿನಗೆ ಇನಿತು ಅಧಿಕಾರವು ದೂರಿಲ್ಲ ನನ್ನಲ್ಲಿ, ಬೇಡಿಕೆ ತಾನೇ ಏಕೆ? ತುಂಬಿದ ಮನದಿ ಹೊಕ್ಕ ಹರ್ಷಕೆ ಪುರಾವೆಗಳ ಹಂಗಿಲ್ಲ, ನಕ್ಕ ನಗುವಿನಲಿ ನೋವಿಲ್ಲ, ತುಂಬಿವೆ ನೂರು ಭಾವಾರ್ಥ ಮುಚ್ಚಟೆಯಿಂದ ಬಚ್ಚಿಟ್ಟುಕೊಂಡು ಬೇಕಾದ ಪರಿಭಾಷೆಯಲಿ ದಿರಿಸಿಟ್ಟು ಸಿಂಗರಿಸಿ ನೋಡುತ್ತ ನಿನ್ನ ಅನುಪಸ್ಥಿತಿಯಲ್ಲೂ ಸಿಗುವ ಅನುಪಮ ಭಾವದಿ ದೊರಕಿದ್ದು ...

 • 3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...


Editor's Wall

 • 31 August 2018
  3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  3 weeks ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  3 weeks ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  4 weeks ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  4 weeks ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...