Share

ಕ್ಲಾಸಿನಲ್ಲಿ ಕೆಮ್ಮಣ್ ಜೀರಿಂಬೆ
ಎಸ್ ಗಂಗಾಧರಯ್ಯ ಕಾಲಂ

IMG-20160516-WA0001

 

ಕಲರವ | KALARAVA

 

 

s gangadaraರಿನಿಂದ ಫರ್ಲಾಂಗಿನಷ್ಟು ದೂರದಲ್ಲಿ ಕಲ್ಲು ಹೊಲ ಅಂತ ಕರೆಯುವ ನಮ್ಮದೊಂದು ಹೊಲವಿತ್ತು. ನಾನು ನೋಡುವ ಕಾಲಕ್ಕೆ ಆ ಹೊಲದಲ್ಲಿ ಹಾಗೆ ಕರೆಯಬಹುದಾದಂತಹ ಕಲ್ಲುಗಳಿರಲಿಲ್ಲ. ಹಿಂದೆ ನಮ್ಮ ತಾತನೋ, ಇಲ್ಲಾ ಮುತ್ತಾತನೋ ಅದನ್ನು ಸಾಗು ಮಾಡುವಾಗ ಅದರಲ್ಲಿ ಅಲ್ಲಲ್ಲಿ ಕಲ್ಲು ದುಂಡಿಗಳಿದ್ದವಂತೆ. ಹಾಗಾಗಿ ಈ ಹೊಲಕ್ಕೆ ಆ ಹೆಸರು ಬಂದಿತ್ತು. ಇದರ ಒಂದು ಭಾಗದಲ್ಲಿ ತಗ್ಗಿನ ಭಾಗವೊಂದಿದ್ದು,ಮಳೆಗಾಲದಲ್ಲಿ ಈ ತಗ್ಗಿನಲ್ಲಿ ಮಂಡಿಯುದ್ದದ ನೀರು ನಿಂತಿರುತ್ತಿತ್ತು. ಈ ಗುಂಡಿಯ ತಡುವಿಗೆ ಅಗಲವಾದ ಬದುವೊಂದಿತ್ತು. ಎಷ್ಟು ದೊಡ್ಡ ಬದುವೆಂದರೆ,ನಾವು ಹುಡುಗರು ದನಗಳನ್ನೋ, ಎಮ್ಮೆಗಳನ್ನೋ ಮೇಯಿಸಲೆಂದು ಹೋದಾಗ ಎರಡೆರಡು ಹಗ್ಗಗಳನ್ನು ಒಟ್ಟಿಗೆ ಕೂಡಿಸಿ ಗಂಟು ಹಾಕಿ ಯಾವುದಾದರೊಂದು ಗಿಡದ ಬುಡಕ್ಕೆ ಕಟ್ಟಿದರೂ, ಹೊಲದ ಫಸಲನ್ನು ಅವುಗಳು ನಿಟುಕಿಸಿಕೊಳ್ಳಲಾಗುತ್ತಿರಲಿಲ್ಲ.

ಇಂಥ ಈ ಬದುವಿನಲ್ಲಿ ದನಕರುಗಳಿಗೆ ಬೇಕಾಗುವ ಮೇವಿನೊಂದಿಗೆ ಹೊಂಗೆ, ಬೇವು, ಬ್ಯಾಟೆ, ಕಾರೆ, ಎಕ್ಕ, ತಂಗಡೆ ಮುಂತಾದ ಹತ್ತು ಹಲವು ಗಿಡ ಮರಗಳಿದ್ದವು.ಇವುಗಳ ನಡುವೆ ಯಾವುದೋ ಕಾಲದಲ್ಲಿ ಅರ್ಧಂಬರ್ಧ ಕೆತ್ತಿ ಬಿಟ್ಟಿದ್ದ, ಅಂಗಾತ ಬಿದ್ದಿದ್ದ ಹನುಮಂತನ ವಿಗ್ರಹವೊಂದಿತ್ತು. ರಜೆ ದಿನಗಳಲ್ಲಿ ಹುಡುಗರೆಲ್ಲಾ ಸೇರಿ ಈ ಹನುಮಂತನಿಗೆ ರೋಜಾಲ,ತಂಗಡೆ ಮುಂತಾದ ಹೂಗಳಿಂದ ಪೂಜೆಯ ಆಟವಾಡುತ್ತಿದ್ದೆವು. ಈ ಹನುಮಂತನನ್ನು ಬಿಸಿಲಿನಿಂದ ರಕ್ಷಿಸಲಿಕ್ಕೇ ಎಂಬಂತೆ, ವಿಗ್ರಹದ ತಲೆಯ ಭಾಗದಲ್ಲಿ ಎರಡಾಳೆತ್ತರಕ್ಕೆ,ಮೇಲೆ ಛತ್ರಿಯಂತೆ ಹರಡಿಕೊಂಡಿದ್ದ, ಬ್ಯಾಟೆಯ ಗಿಡವೊಂದಿತ್ತು. ಇದರ ಹಸಿರು ಎಲೆಗಳು, ಬೇಸಿಗೆಯ ಕಾಲದಲ್ಲಿ ಮೈತುಂಬಾ ಅರಳುತ್ತಿದ್ದ ಹಳದಿಯ ಹೂಗಳು, ಜೊತೆಗೆ ಇದರಲ್ಲಿ ನಮಗೆ ಆಗಾಗ ಸಿಕ್ಕುತ್ತಿದ್ದ ಕೆಮ್ಮಣ್ಣು ಜೀರಿಂಬೆಗಳು, ನನ್ನಂಥ ಹುಡುಗರಿಗೆ ಈ ಗಿಡದ ಬಗ್ಗೆ ಅಪಾರ ಆಸ್ಥೆ ಮತ್ತು ಪ್ರೀತಿ ಹುಟ್ಟುವಂತೆ ಮಾಡಿದ್ದವು. ಹಾಗಾಗಿ ದನದ ಕೊಟ್ಟಿಗೆಗೆ ಮಗ್ಗಲು ಸೊಪ್ಪು ತರಲು ಹೋದಾಗ ಬ್ಯಾಟೆ ಗಿಡಕ್ಕೆ ಕೈ ಹಾಕುತ್ತಿರಲಿಲ್ಲ.

DSCN4385ಜೀರಿಂಬೆಗಳ ಕಾಲ ಬಂತೆಂದರೆ ಹಳ್ಳಿಯ ಹುಡುಗರ ಜೇಬುಗಳಲ್ಲಿ ಈ ಜೀರಿಂಬೆಗಳು ಬಂಧಿಯಾಗಿರುತ್ತಿದ್ದವು. ಖಾಲಿ ಬೆಂಕಿ ಪೊಟ್ಟಣಗಳಲ್ಲಿ ಬಂಧಿಸಿಡುತ್ತಿದ್ದ ಜೀರಿಂಬೆಗಳ ಕೊರಳಿಗೆ ಮಾರುದ್ದದ ದಾರವೊಂದನ್ನು ಕಟ್ಟಿ, ನಮಗೆ ಇಷ್ಟ ಬಂದಾಗಲೆಲ್ಲಾ ಜೀರಿಂಬೆಗಳನ್ನು ಬೆಂಕಿ ಪೆಟ್ಟಿಗೆಯಿಂದ ಆಚೆ ತೆಗೆದು ಹಾರಾಡಿಸುತ್ತಿದ್ದೆವು. ಹಾರದಿದ್ದರೆ ಅವುಗಳ ಕಡ್ಡಿಯಂಥ ಕಾಲುಗಳನ್ನು ಚಿವುಟಿ ಹಾರಿಸುತ್ತಿದ್ದೆವು. ನಾವು ಎಷ್ಟು ಚಿವುಟಿದರೂ ಹಾರದ ಕೆಲ ಜೀರಿಂಬೆಗಳಿಗೆ ಬಿಡುಗಡೆಯ ಭಾಗ್ಯ ಸಿಗುತ್ತಿತ್ತು. ಆದರೆ ಹೀಗೆ ಬಂಧಿಯಾದ ಸುಮಾರು ಜೀರಿಂಬೆಗಳು ನಮ್ಮ ಬೆಂಕಿ ಪೆಟ್ಟಿಗೆಗಳೊಳಗೇ ಅಸು ನೀಗುತ್ತಿದ್ದವು. ಹಸಿರು ರೆಕ್ಕೆಗಳ ಪುಟ್ಟ ಪುಟ್ಟ ಜೀರಿಂಬೆಗಳು ಸಾಮಾನ್ಯವಾಗಿ ಜಾಲಿ ಮರಗಳಲ್ಲಿ ಸಿಗುತ್ತಿದ್ದವು. ಆದರೆ ಕೆಮ್ಮಣ್ಣು ಬಣ್ಣದ ದಪ್ಪ ಜೀರಿಂಬೆಗಳು ಮಾತ್ರ ಸಿಗುತ್ತಿದ್ದುದು ಅಪರೂಪವೇ. ಸಿಕ್ಕರಂತೂ ನಮ್ಮ ಆನಂದಕ್ಕೆ ಪಾರವೇ ಇರುತ್ತಿರಲಿಲ್ಲ. ಆಗ ಅವುಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದೆವು.

ಒಮ್ಮೆ ನನಗೆ ಸಿಕ್ಕ ಈ ಕೆಮ್ಮಣ್ಣು ಜೀರಿಂಬೆ ಸುಮಾರು ಒಂದು ವಾರದ ಮಟ್ಟಿಗೆ ನನ್ನ ಬಳಿ ಇತ್ತು. ಸೂರ್ಯ ಮಾರ್ಕಿನ ಬೆಂಕಿ ಪೆಟ್ಟಿಗೆಯಲ್ಲಿ ಕೂಡಾಕಿ,ಅದರೊಳಗೆ ಜಾಲಿ ಮರದ ಚಿಗುರು ಎಲೆಗಳನ್ನು ಅದಕ್ಕೆ ಆಹಾರವಾಗಿ ತುಂಬುತ್ತಿದ್ದೆ. ಇದರ ಕೊರಳಿಗೆ ಗಟ್ಟಿಯಾದ ದಾರವನ್ನು ಕಟ್ಟಿ, ಸ್ಕೂಲಿಗೆ ಹೋಗುವುದಕ್ಕೆ ಮುಂಚೆ, ಸ್ಕೂಲಿನಿಂದ ಬಂದ ನಂತರ, ಸಾಕಷ್ಟು ಹಾರಾಡಿಸುತ್ತಿದ್ದೆ.ನಂತರ ಬೆಂಕಿ ಪೆಟ್ಟಿಗೆಯನ್ನು ದನದ ಕೊಟ್ಟಿಗೆಯ ದೀಪದ ಗೂಡಿನಲ್ಲಿಡುತ್ತಿದ್ದೆ.

ಅವತ್ತು ಒಂದಿನ, ಈ ಕೆಮ್ಮಣ್ಣು ಜೀರಿಂಬೆಯನ್ನು ಅಲ್ಲಿಡಲು ಮನಸ್ಸಾಗದೆ, ಚಡ್ಡಿ ಜೇಬಿನಲ್ಲಿಟ್ಟುಕೊಂಡು ಸ್ಕೂಲಿಗೆ ಹೋದೆ. ಪ್ರೇಯರ್ ಮುಗಿದ ಮೇಲೆ ಅದನ್ನು ಚಡ್ಡಿ ಜೇಬಿನಿಂದ ಅಂಗಿ ಜೇಬಿಗೆ ವರ್ಗಾಯಿಸಿಕೊಂಡು ಕ್ಲಾಸಿನಲ್ಲಿ ಕೂತೆ. ಅದು ಹಿಂದಿ ಮೇಷ್ಟ್ರ ಕ್ಲಾಸು. ಇನ್ನೇನು ಮೊದಲ ಪೀರಿಯಡ್ ಮುಗಿಯಬೇಕು ಅನ್ನುವಷ್ಟರಲ್ಲಿ, ನನ್ನ ಅಂಗಿನ ಜೇಬಿನಲ್ಲಿ ಬೆಂಕಿ ಪೆಟ್ಟಿಗೆಯೊಳಗಿದ್ದ ಕೆಮಣ್ಣು ಜೀರಿಂಬೆ, ಅದು ಹೆಂಗೋ ಹೊರ ಬಂದು ಇದ್ದಕ್ಕಿದ್ದಂತೆ ಹಾರುತ್ತಾ ಆ ಹಿಂದಿ ಮೇಷ್ಟ್ರ ಭುಜದ ಮೇಲೆ ಕೂತು ಬಿಟ್ಟಿತು. ಇಡೀ ಕ್ಲಾಸು ಗೊಳ್ಳೆಂದು ನಕ್ಕು ಬಿಟ್ಟಿತು. ಇದರಿಂದ ಕೊಂಚ ಗಲಿಬಿಲಿಗೊಂಡ ಆ ಮೇಷ್ಟ್ರು, ಅದರ ದಾರವನ್ನು ಹಿಡಿದು ‘ಯಾವನೋ ಇದನ್ನ ಕ್ಲಾಸಿಗೆ ತಂದಿದ್ದೋನು’ ಅನ್ನುತ್ತಾ ಟೇಬಲ್ಲಿನ ಮೇಲಿದ್ದ ಬಿದಿರು ಕೋಲನ್ನು ಹಿಡಿದು, ಇಡೀ ಕ್ಲಾಸನ್ನು ಒಂದು ಸುತ್ತು ಹಾಕಿದರು. ‘ಮರ್ಯಾದೆಯಿಂದ ಒಪ್ಪಿಕೊಳ್ಳಿ, ಇಲ್ಲಾಂದ್ರೆ…’ ಅನ್ನುತ್ತಾ ಅದನ್ನೊಂದು ಪ್ರತಿಷ್ಠೆಯ ಸಂಗತಿಯನ್ನಾಗಿಸಿಕೊಂಡರು.

ನಾನೂ ಸೇರಿದಂತೆ ಯಾರೊಬ್ಬರೂ ಎದ್ದು ನಿಲ್ಲಲಿಲ್ಲ. ಇದರಿಂದ ರೇಗಿ ಹೋದ ಮೇಷ್ಟ್ರು, ಹುಡುಗರನ್ನೆಲ್ಲಾ ನಿಲ್ಲಿಸಿ, ಬ್ಯಾಗು ಮತ್ತು ಜೇಬುಗಳನ್ನು ಚೆಕ್ ಮಾಡತೊಡಗಿದರು. ಮೂರನೆಯ ಬೇಂಚಿನಲ್ಲಿ ಕೂತಿದ್ದ ನನಗೆ ಎದೆ ಹೊಡೆದುಕೊಳ್ಳತೊಡಗಿತು. ಇದು ಇನ್ನೂ ಹೆಚ್ಚುವಂತೆ ಮೊದಲ ಬೆಂಚಿನಲ್ಲಿ ಕೂತಿದ್ದ ಬಸವ ಮತ್ತು ಎರಡನೆಯ ಬೆಂಚಿನಲ್ಲಿ ಕೂತಿದ್ದ ಆಡಿಟ್ಟರ ಜೇಬಿನಲ್ಲಿ ಸಿಕ್ಕ ಬೆಂಕಿ ಪೆಟ್ಟಿಗೆಯೊಳಗೆ ಜೀರಿಂಬೆಗಳು ಸಿಕ್ಕಿಬಿಟ್ಟವು. ಮೇಷ್ಟ್ರು ಇದ್ದ ಬದ್ದ ಶಕ್ತಿಯನ್ನೆಲ್ಲಾ ಉಪಯೋಗಿಸಿ ಅವರಿಬ್ಬರ ಕೈಗಳಿಗೂ ಆರಾರು ಏಟುಗಳನ್ನು ಬಿಡತೊಡಗಿದರು. ಹಾಗೆ ಬಿಡುತ್ತಲೇ, ‘ಇನ್ನೂ ಯಾವ್ಯಾವನು ತಂದಿದೀರೋ ನಿಂತ್ಕಳಿ’ ಅಂತ ಗುಡುಗಿದರು.

ಮೂರನೆಯ ಬೆಂಚಿನಿಂದ ನಾನು, ನನ್ನ ಪಕ್ಕದ ರುದ್ರ ಚಕ್ಕನೆ ಎದ್ದು ನಿಂತೆವು. ಮತ್ತೂ ಸಿಟ್ಟಿನಿಂದ ಮೇಷ್ಟ್ರು ಕೊಟ್ಟ ಏಟುಗಳು ಸುಮಾರು ಒಂದು ವಾರಗಳ ಕಾಲ ಪೆನ್ನು ಹಿಡಿಯದಂತೆ ಮಾಡಿದ್ದವು. ಅಂತೆಯೇ ನಮ್ಮ ಜೀರಿಂಬೆಗಳ ಬೇಟೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದವು.

ಈಗ ಆ ಹೊಲ ನಮ್ಮದಲ್ಲ. ಅದರ ಬದುವಿನಲ್ಲಿ ಬ್ಯಾಟೆ ಗಿಡವಿಲ್ಲ. ಅನಾಥವಾಗಿ ಬಿದ್ದಿರುವ ಆ ಹಮನುಂತನ ವಿಗ್ರಹದ ಹತ್ತಿರ ಆಟ ಆಡುವ ಮಕ್ಕಳೂ ಕಾಣುತ್ತಿಲ್ಲ.

———–

sgangadharaiahಎಸ್ ಗಂಗಾಧರಯ್ಯ, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಮಾಕಳ್ಳಿಯವರು. ಕಥೆಗಾರರಾಗಿ ವಿಶಿಷ್ಟ ಸಂವೇದನೆಯನ್ನು ದಾಖಲಿಸಿದವರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ, ಮಾನಸಗಂಗೋತ್ರಿಯಲ್ಲಿ ಇಂಗ್ಲಿಷ್ ಎಂಎ. ಪ್ರಸ್ತುತ ಮತಿಘಟ್ಟದ ಪದವಿಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರು. ತಿಪಟೂರಿನಲ್ಲಿ ವಾಸ. ನವಿಲ ನೆಲ, ವೈಕಂ ಕಥೆಗಳು, ಲೋರ್ಕಾ ನಾಟಕ-ಎರ್ಮಾ, ಚರಮ ಗೀತೆ-ಲೋರ್ಕಾ ಕಾವ್ಯ, ಹಲವು ರೆಕ್ಕೆಯ ಹಕ್ಕಿ, ಬೇಟೆಗಾರನ ಚಿತ್ರಗಳು, ದಾರಿಯೊ ಫೋ ನಾಟಕ-ಗುಲಾಬಿ ಗರ್ಭ ಅವರ ಪ್ರಮುಖ ಕೃತಿಗಳು. ವೈಕಂ ಕಥೆಗಳು ಕೃತಿಗೆ 1996ರ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಕುವೆಂಪು ಭಾಷಾ ಭಾರತಿ ಪ್ರಕಟಿಸುತ್ತಿರುವ ‘ಆಫ್ರಿಕನ್‌ ಸಾಹಿತ್ಯ ವಾಚಿಕೆ’ ಸಂಪಾದಕ ಮಂಡಳಿಯ ಸದಸ್ಯರು.ಇವರ ‘ವೈಕಂ ಕಥೆಗಳು’ ಮತ್ತು ‘ಎರ್ಮಾ’ ಬೆಂಗಳೂರು ವಿವಿ ಕನ್ನಡ ಎಂಎ ವಿದ್ಯಾರ್ಥಿಗಳಿಗೆ ಪಠ್ಯಗಳಾಗಿದ್ದವು. ಸದ್ಯ ‘ಸೀಬೆ ಸೊಗಡು’ ಕೃತಿ ಕರ್ನಾಟಕ ಕೇಂದ್ರೀಯ ವಿವಿ ಕನ್ನಡ ವಿಭಾಗ ಗುಲ್ಬರ್ಗಾ ಇಲ್ಲಿ ಪಠ್ಯವಾಗಿದೆ. ಕೃಷಿ ಮತ್ತು ತಿರುಗಾಟ ಬಲು ಪ್ರಿಯ.

Share

One Comment For "ಕ್ಲಾಸಿನಲ್ಲಿ ಕೆಮ್ಮಣ್ ಜೀರಿಂಬೆ
ಎಸ್ ಗಂಗಾಧರಯ್ಯ ಕಾಲಂ
"

  1. Piggyparamesh
    29th May 2016

    Nostalgic gangi spelling correction need is astonishing

    Reply

Leave a comment

Your email address will not be published. Required fields are marked *

Recent Posts More

  • 9 hours ago No comment

    ಇಲ್ಲಿ ಶಬ್ದಗಳಿಗೂ ಚಳಿಗಾಲ

              | ಕಮಲಾದಾಸ್ ಕಡಲು       ಕಪ್ಪು ಜನಾಂಗ (For Cleo Pascal) ಕಮಲಾದಾಸ್ ಕವಿತೆಯ ಅನುವಾದ     ಈಗ ಕೆನಡಾದಲ್ಲಿ ಶರದೃತುವಿನ ಕಾಲ ಮೇಪಲ್ ಮರದ ಒಣಗಿದ ರಕ್ತದಂಥ ಕಡುಗೆಂಪು ಎಲೆಗಳು ಈ ವಾರದಂತ್ಯದವರೆಗೆ ಕೂಡ ಉಳಿಯಲಾರವು ನಾನು ಇಲ್ಲಿ ಎಲ್ಲರಿಗೂ ಕಾಣಿಸುತ್ತೇನೆ, ಅಲ್ಲಿಗಿಂತ ಇಲ್ಲಿ ಎದ್ದು ಕಾಣಿಸುತ್ತೇನೆ ಬಿಳಿಯ ದೇವರ ಲೋಕದಲ್ಲಿ ಕಾಲಿಟ್ಟ ಕಪ್ಪು ಜನಾಂಗದವರು ...

  • 1 day ago No comment

    ಇರಬಲ್ಲೆವಾ ಭಾವುಕರಾಗದೆ?

                  Millions of people have decided not to be sensitive. They have grown thick skins around themselves just to avoid being hurt by anybody. But it is at great cost. Nobody can hurt them, but nobody can make them happy either. ನಿಜ, ಒಂದೇ ...

  • 3 days ago No comment

    ಮೂಳೆಯ ಹಂದರವೊಂದುಳಿದು…

                      ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

  • 4 days ago No comment

    ಎರಡು ಕವಿತೆಗಳು

        ಕವಿಸಾಲು         ಸುನಾಮಿಯ ಊರಲ್ಲಿ ಗುಟ್ಟುಗಳ ರಟ್ಟು ಮಾಡದ ಒಡಲು ಸುನಾಮಿ ತವರಾದ ಕಡಲು ಒಳಗಿನ ಕತ್ತಲೆಯ ಕಳೆಯಲು ಹುಡುಕಿ ಹೊರಟವು ತಾವು ಕಳೆದುಕೊಂಡ ಕನಸುಗಳಷ್ಟೂ ಹಾವುಗಳು ಬಿಸಿಲಿಗೆ ಹೊರಳಿ ಪೊರೆ ಕಳಚಿ ನಚ್ಚಗಾದವು ಅದೇ ಕ್ಷಣದೊಳಗೆ ಅರಳಿಬಿರಿಯಬೇಕಿದ್ದ ಹೂವುಗಳು ಬಿಸಿಲ ಧಗೆಗೆ ಬೆಂದು ಬಾಡಿ ಉದುರಿಬಿದ್ದವು ನೆಲಕೆ ಶಬ್ದಗಳ ಮುಕ್ಕಳಿಸಿ ಉಗಿದ ರಭಸಕೆ ಊರ ತುಂಬಾ ನೆರೆ ಪರಿಹಾರದ ಗಂಜಿಕೇಂದ್ರಗಳಲಿ ...

  • 1 week ago No comment

    ಈ ಸಂಜೆ ಪ್ರಿತಿಯೊಡನೆ…

        ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...


Editor's Wall

  • 25 February 2018
    9 hours ago No comment

    ಇಲ್ಲಿ ಶಬ್ದಗಳಿಗೂ ಚಳಿಗಾಲ

              | ಕಮಲಾದಾಸ್ ಕಡಲು       ಕಪ್ಪು ಜನಾಂಗ (For Cleo Pascal) ಕಮಲಾದಾಸ್ ಕವಿತೆಯ ಅನುವಾದ     ಈಗ ಕೆನಡಾದಲ್ಲಿ ಶರದೃತುವಿನ ಕಾಲ ಮೇಪಲ್ ಮರದ ಒಣಗಿದ ರಕ್ತದಂಥ ಕಡುಗೆಂಪು ಎಲೆಗಳು ಈ ವಾರದಂತ್ಯದವರೆಗೆ ಕೂಡ ಉಳಿಯಲಾರವು ನಾನು ಇಲ್ಲಿ ಎಲ್ಲರಿಗೂ ಕಾಣಿಸುತ್ತೇನೆ, ಅಲ್ಲಿಗಿಂತ ಇಲ್ಲಿ ಎದ್ದು ಕಾಣಿಸುತ್ತೇನೆ ಬಿಳಿಯ ದೇವರ ಲೋಕದಲ್ಲಿ ಕಾಲಿಟ್ಟ ಕಪ್ಪು ಜನಾಂಗದವರು ...

  • 22 February 2018
    3 days ago No comment

    ಮೂಳೆಯ ಹಂದರವೊಂದುಳಿದು…

                      ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

  • 15 February 2018
    1 week ago No comment

    ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                        ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

  • 12 February 2018
    2 weeks ago No comment

    ಇಳಿಸಂಜೆಯ ಪ್ರೀತಿ

    ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

  • 11 February 2018
    2 weeks ago One Comment

    ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

      ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...