Share

ಕಳ್ಳ ಬಿಟ್ಹೋದ ಚಂದಿರ
ಚೇತನಾ ತೀರ್ಥಹಳ್ಳಿ ಕಾಲಂ

IMG-20160516-WA0001 

ಚಿಟ್ಟೆ ಬಣ್ಣ | CHITTE BANNA

 

 

chatena 01ಝೆನ್ ಬಿಕ್ಖು ರ್ಯೊಕೋನ್ (Rykon)ನ ಪುಟ್ಟ ಎಲೆಮನೆಗೆ ಕಳ್ಳನೊಬ್ಬ ಹೊಕ್ಕುತ್ತಾನೆ. ಅಲ್ಲಿ ಕದಿಯಲೇನಿದೆ? ಭಿಕ್ಷೆಯ ಬೋಗುಣಿ, ಚಿಂದಿ ಹೊದಿಕೆ ಮತ್ತು ಸ್ವತಃ ರ್ಯೊಕೋನ್ ಹೊರತಾಗಿ? ಬರಿಗೈಲಿ ವಾಪಸು ಹೊರಟ ಕಳ್ಳನ್ನ ಕರೆಯುತ್ತಾ ಅಂವ ಹೇಳ್ತಾನೆ, ಹಾಗೇ ಹೋಗೋದೇನು ಚೆಂದ? ಈ ಹೊದಿಕೆಯನ್ನಾದರೂ ತೆಗೆದ್ಕೊಂಡು ಹೋಗು!

ಕಳ್ಳ ಮಾತು ಮರೆತಂತಾಗಿ ಮತ್ತೊಂದು ಯೋಚಿಸದೆ ಅದನ್ನು ಬೊಗಸೆಯೊಡ್ಡಿ ಪಡೆದು ಹೊರಟುಹೋಗ್ತಾನೆ.
ಕಳ್ಳ ಹೋದಮೇಲೆ ಕಿಟಕಿ ದಿಟ್ಟಿಸುತ್ತ ಮಲಗಿದ ರ್ಯೊಕೋನನಿಗೆ ತುಂಬು ಚಂದಿರ ಕಂಡಾಗ ಅನ್ನಿಸುತ್ತೆ;
ಕಳ್ಳ ಬಿಟ್ಟುಹೋದನಲ್ಲ
ಕಿಟಕಿಯಲ್ಲಿ ಚಂದಿರ!

*

ರ್ಯೊಕೋನ್ ಮತ್ತೂ ಯೋಚಿಸ್ತಾನೆ. ಕಳ್ಳನಿಗೆ ಕೊಡೋಕೆ ತನ್ನಲ್ಲಿ ಏನೂ ಇರಲಿಲ್ಲವಲ್ಲ ಅಂತ. ತನ್ನ ಬಡತನವೆಂಥದ್ದು ಅಂತ ಯೋಚಿಸುತ್ತ ಸುತ್ತ ಮುತ್ತ ಕಣ್ಣಾಡಿಸುವಾಗ ಮತ್ತೆ ಚಂದಿರ ಕಾಣಿಸುತ್ತೆ ಕಿಟಕಿಯಲ್ಲಿ. ಆಗ ಅಂವ ಅಂದುಕೊಳ್ತಾನೆ;

ನಾನೆಂಥ ಬಡವ!
ಕಳ್ಳನಿಗೆ ಚಂದಿರವನ್ನಾದರೂ
ಕೊಟ್ಟುಬಿಡೋಣವೆಂದರೆ
ಅದು ಕೂಡ ನನ್ನದಲ್ಲ…

*

ಝೆನ್ ಅನುಭಾವದ ಘಮ ಇರೋದೇ ಇಲ್ಲಿ. ಇದು ವಚನಗಳಂತಲ್ಲ. ದಾಸರ ಪದಗಳಂತಲ್ಲ. ದೋಹೆಗಳಂತೆ, ಪಾಶುರಗಳಂತೆಯೂ ಅಲ್ಲ. ಈ ಎಲ್ಲ ಅನುಭಾವ ಸಾಹಿತ್ಯ ಬಹಳ ಸಾಂದ್ರ. ಇವುಗಳ ಹನಿಹನಿಯಲ್ಲೂ ಸಮುದ್ರ.

ಝೆನ್ ಚಿಕ್ಕ ಕಥೆಗಳಾಗಲೀ ಹಾಯ್ಕುಗಳಾಗಲೀ ಕೊಯಾನ್‌ಗಳಾಗಲೀ ಹಾಗಲ್ಲ. ಅತ್ಯಂತ ಸರಳ. ಅಲ್ಲೆಲ್ಲೂ ನೇರ ನಿರೂಪಣೆ ಕಾಣೆವು. ಬೋಧನೆ ಕಾಣೆವು. ಕಾಣ್ಕೆಯನ್ನೂ ಕೂಡಾ.

“ಕಳ್ಳ ಬಿಟ್ಟುಹೋದನಲ್ಲ ಕಿಟಕಿಯಲ್ಲಿ ಚಂದಿರ!” ಅಷ್ಟೇ. ಬಹಳ ಸರಳ ವಿಷಯ. ಎಷ್ಟು ಚೆಂದ ಸಾಹಿತ್ಯ!
“ಕಳ್ಳನಿಗೆ ಚಂದಿರವನ್ನಾದರೂ ಕೊಟ್ಟುಬಿಡೋಣವೆಂದರೆ, ಅದು ಕೂಡ ನನ್ನದಲ್ಲ” – ಇಲ್ಲಿದೆ ಅಸಲಿ ವಿಷಯ.

ಹಾಗಾದರೆ ಕಿಟಕಿಯಲ್ಲಿ ಬಿಟ್ಟುಹೋದ ಅನ್ನಲಿಕ್ಕೆ ಆ ಚಂದಿರ ಕಳ್ಳನ ಸೊತ್ತಾ? ಉಹು… ರ್ಯೋಕೋನ್ ಯೋಚಿಸ್ತಾನೆ, ಕಳ್ಳನಿಂದ ಚಂದಿರನ್ನ ಕೊಂಡುಹೋಗಲಾಗೋದಿಲ್ಲ. ಎಲ್ಲರಿಗೂ ಸಲ್ಲುವ ಚಂದಿರ ನನ್ನ ಪಾಲಿಗೂ ಇದ್ದಾನೆ ಅಂತ. ರ್ಯೊಕೋನ್ ಯೋಚಿಸ್ತಾನೆ, ಯಾರು ಯಾವ ವಸ್ತು ಕದ್ದುಕೊಂಡು ಹೋದರೇನು, ಕಿಟಕಿಯಿಂದ ಕಾಣ್ತಿರುವ ಚಂದಿರನ್ನ ಕದಿಯಲಾದೀತೇ ನನ್ನಿಂದ ಅಂತ.

ಹೀಗೆ ತನ್ನ ಕಿಟಕಿಯಾಚೆಯ, ತನಗೆ ತಂಪನ್ನೂ ಖುಷಿಯನ್ನೂ ಕೊಡ್ತಿರುವ ಚಂದಿರವನ್ನ ಕಳ್ಳನಿಗೆ ತಾನೇ ಕೊಟ್ಟುಬಿಡೋಣ ಅಂದರೆ ಅದು ತನ್ನ ಸೊತ್ತೂ ಅಲ್ಲ!

*

ಅವರು ಆ ವಸ್ತುವನ್ನು ಕಿತ್ತುಕೊಂಡರು. ಇವರು ಈ ಅವಕಾಶ ಕಸಿದುಕೊಂಡರು. ಅಗೋ ಯಾರೋ ನನ್ನವರನ್ನು ಕದಿಯುವರು. ಅಥವಾ ಮತ್ತೇನೋ…
ಹತ್ತಾರು ಸಂಕಟವುಕ್ಕಿ ಕಣ್ಣು ತುಳುಕಬೇಕು ಅನ್ನುವಾಗೆಲ್ಲ, ತಲೆ ಬಾಗಿದ್ದರೆ ಹನಿಯುರುಳುತ್ತದೆ ಅನ್ನುವ ಎಚ್ಚರಿಕೆಯಿಂದ ತಲೆ ಎತ್ತುತ್ತೇನೆ. ಕಿಟಕಿ ಪರದೆ ತೂರಿ ಬಂದ ಗಾಳಿಗೆ ಉಬ್ಬುತ್ತ ಚೂರು ಸರಿಯುತ್ತದೆ. ಕಿಟಕಿಯಾಚೆ ಸೂರ್ಯವೋ ಚಂದ್ರವೋ ಹಕ್ಕಿ ದನಿಯೋ..

ಈ ಹೊತ್ತು ನನಗೆ / ನನಗೂ ಸಲ್ಲುತ್ತಿರುವ ಇವನ್ನ ಯಾರು ತಾನೆ ಕಸಿಯಬಲ್ಲರು? ಕದಿಯಬಲ್ಲರು?
ತುಟಿಯ ಕೊಂಕು ಕಣ್ಣೀರಿಂಗಿಸುತ್ತೆ.

*

ಝೆನ್ ಬಿಕ್ಖು ರ್ಯೊಕೋನನ
ಕಳ್ಳ ಬಿಟ್ಟೋದ ಚಂದಿರ
ನನ್ನ ಕಿಟಕಿ ಹಣಕುತ್ತಿದೆ ಕಣೇ ‘ಲಾ’,
ಮತ್ತು
ಕೋಟ್ಯಂತರ ಕಿಟಕಿಗಳಲ್ಲೂ.

ಯಾರೋ ಬಿಟ್ಟುಕೊಟ್ಟಿದ್ದು,
ಮತ್ಯಾರಿಗೂ ಕೊಡಲಾಗದ್ದು,
ತನ್ನಿಂತಾನೆ ಸಲ್ಲುತ್ತ ಹೋಗುವುದು;
ಚಂದ್ರ, ಸೂರ್ಯ, ಹಕ್ಕಿ ಕೊರಳು
ಮತ್ತು
ಅವನೂ.

————-

che1ಚೇತನಾ ತೀರ್ಥಹಳ್ಳಿ. ಅಲಾವಿಕಾ ಮತ್ತೊಂದು ಕಾವ್ಯನಾಮ. ಫ್ರೀಲಾನ್ಸ್ ಪತ್ರಕರ್ತೆ ಮತ್ತು ಬರಹಗಾರ್ತಿ. ಪ್ರಕಟಿತ ಪುಸ್ತಕಗಳು: ‘ಉಫೀಟ್’, ‘ಗುಟ್ಟು ಬಚ್ಚಿಡಲು ಬರುವುದಿಲ್ಲ’, ‘ಶಬರಿಯ ಅವಸರ’ ಕವನ ಸಂಕಲನಗಳು; ‘ಸೂರ್ಯನೆದೆಯ ನೀರ ಬೀಜ’ ಅಚ್ಚಿನಲ್ಲಿದೆ. ‘ಭಾಮಿನಿ ಷಟ್ಪದಿ’ ಮತ್ತು ‘ಬಿಸಿಲ ಚೂರಿನ ಬೆನ್ನು’ ಅಂಕಣ ಬರಹಗಳ ಸಂಗ್ರಹ; ‘ಲಾ ಕಾಲಮ್’ ಅಚ್ಚಿನಲ್ಲಿದೆ. ‘ಬ್ಲಾಗಿಸು ಕನ್ನಡ ಡಿಂಡಿಮವ’ ಸಂಪಾದಿತ ಕೃತಿ. ಕಾಸ್ಮಿಕ್ ಜೋಕ್, ಕ್ಲೌಡ್ ನೈನ್ ಮತ್ತು ಐ ಆಮ್ ಅನದರ್ ಯು ಇಂಗ್ಲಿಷಿನಿಂದ ಅನುವಾದಿಸಿದ ಕೃತಿಗಳು. ‘ನೀಲಿ ಬಾನಿನಲ್ಲಿ ಕೆಂಪು ಸೂರ್ಯ: ಜೆ ಎನ್ ಯು ಭಾಷಣಗಳ ಸಂಗ್ರಹಾನುವಾದ’ ಸದ್ಯದಲ್ಲೇ ಬಿಡುಗಡೆಯಾಗಲಿರುವ ಪುಸ್ತಕ.

Share

Leave a comment

Your email address will not be published. Required fields are marked *

Recent Posts More

  • 4 hours ago No comment

    ಪ್ರತಿಯೊಬ್ಬರೊಳಗೂ ಒಂದೊಂದು ಕಥೆ!

    ಆಕೆ ಮೀರಾ. ತಾನು ಬರೆದ ಕಥೆಯೊಂದರ  ಮೂಲಕ ಇದ್ದಕ್ಕಿದ್ದಂತೆ ಲಕ್ಷಾಂತರ ಮನಸ್ಸನ್ನು ಮುಟ್ಟಿಬಿಡುತ್ತಾಳೆ. ವಿವಾನ್ ಎಂಬ ಬ್ಯಾಂಕ್ ಅಧಿಕಾರಿಯೊಬ್ಬನಿಗೆ ಜಗತ್ತನ್ನೇ ಸುತ್ತುವ ಕನಸು. ಕೆಫೆಯೊಂದರ ಮ್ಯಾನೇಜರ್ ಕಬೀರ್ ತನ್ನದೇ ಆದ ಏನನ್ನಾದರೂ ಸಾಧಿಸುವ ಹಂಬಲವಿಟ್ಟುಕೊಂಡವನು. ಅದೇ ಕೆಫೆಯ ಗ್ರಾಹಕಿ ನಿಶಾ ಎಂಥದೋ ಹತಾಶೆಗೆ ಸಿಕ್ಕಿಹಾಕಿಕೊಂಡು, ತನ್ನದೇ ಆದ ಗುಟ್ಟುಗಳನ್ನು ಬಚ್ಚಿಟ್ಟುಕೊಂಡಿರುವವಳು. ಪ್ರತಿಯೊಬ್ಬರದೂ ಒಂದೊಂದು ಕಥೆ. ಅಂಥ ನಾಲ್ವರೂ ಒಂದೆಡೆ ಸೇರಿದಾಗ ಏನಾಗುತ್ತದೆ? ಈ ಕುತೂಹಲವನ್ನು ತೆರೆದಿಡುತ್ತ ಹೋಗುವ ಕಾದಂಬರಿಯೇ ...

  • 1 day ago No comment

    ನನ್ನೊಳಗಿನ ಮಗುವಿಗೊಂದು ಪತ್ರ

          ನಿನ್ನೆ ನನ್ನ ಹಳೆಯ ಕಡತಗಳನ್ನೆಲ್ಲಾ ತೆರೆದು ಏನನ್ನೋ ಹುಡುಕುತ್ತಿದ್ದಾಗ ನೀನು ಬಿಡಿಸಿದ ಕೆಲವು ಚಿತ್ರಗಳು ಸಿಕ್ಕವು. ನಿಜಕ್ಕೂ ಅದ್ಭುತವಾಗಿದ್ದವು ಅವುಗಳು.       ಮಕ್ಕಳ ದಿನಾಚರಣೆಯ ಋತುವಿನಲ್ಲಿ ನಮ್ಮದೇ ಹನ್ನೆರಡರ ವ್ಯಕ್ತಿತ್ವಕ್ಕೊಂದು ಪತ್ರ ಬರೆದರೆ ಹೇಗಿರುತ್ತದೆ ಎಂಬ ಯೋಚನೆಯೊಂದು ತಲೆಯೆತ್ತಿತು. ಸದ್ಯ ಪತ್ರಗಳಂತೂ ಮಾಯವಾಗಿವೆ. ನಿತ್ಯಜೀವನದ ಜಂಜಾಟದಲ್ಲಿ ನಮ್ಮೊಳಗಿನ ಮಗುವೂ ನಿಧಾನಕ್ಕೆ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲೇ ಇವೆರಡನ್ನೂ ಒಂದೇ ವೇದಿಕೆಗೆ ತಂದಿಡುವ ...

  • 2 days ago No comment

    ದುರಿತ ಕಾಲದ ಕವಿತೆಗಳು

        ಕವಿಸಾಲು       1 ಒಂಟಿಯಾಗಿ ಹೆಗಲಲಿ ನೇಗಿಲ ಎಳೆದು ಅಜ್ಜಿ ಬಿತ್ತಿದ ರಾಗಿಗೆ ಸಗ್ಗಣಿ ಗೊಬ್ಬರ ಹಾಕಿ ಖಂಡುಗಗಟ್ಟಲೇ ರಾಗಿ ಬೆಳೆದ ಅಜ್ಜನ ಹೊಲದ ಮೇಲಿವತ್ತು ಚತುಷ್ಕೋನ ರಸ್ತೆ ರಾರಾಜಿಸುತ್ತಿದೆ ಆರಾಮಾಗಿ ಅಲ್ಲಿ ಮಲಗಿರುವ ಅವನ ಎದೆಯ ಮೆಲೆ ಅನಿಲ ಟ್ಯಾಂಕರುಗಳು ಅಡ್ಡಾಡುತಿವೆ ನೋವಾಗುತ್ತಿರುವುದು ಮಾತ್ರ ನನಗೆ! ~ 2 ಅಭಿವೃದ್ದಿಯ ಜಾಹಿರಾತಿನಲ್ಲಿ: ಹಡಗಿನಂತಹ ಕಾರುಗಳು ಹಾಳೆಗಳಂತಹ ಮೊಬೈಲುಗಳು ಕಣ್ಣು ಕುಕ್ಕುವ ಕಂಪ್ಯೂಟರುಗಳು ...

  • 2 days ago No comment

    ನಾಲ್ಕು ಹನಿಗಳು

        ಕವಿಸಾಲು         ಧ್ಯೇಯದಿಂದ ನೆಲ ಅಗೆದೆ ಗಿಡ ನೆಡಲು. ಮತ್ತೆ ಕಾಣಿಸಿತು ಧ್ಯಾನಸ್ಥ ಎರೆಹುಳು. ~ ನದಿ ತಟದ ಬೆಂಚಿನ ಮೇಲೆ ನಾನು ಎರಡೂ ತಟಗಳಿಗೆ ಅಂಟಿದ್ದ ದಪ್ಪನೆ ಕಾಂಕ್ರೀಟ್ ಗೋಡೆ. ಹರಿವ ನೀರು, ನಾನು ಬಂಧಿಗಳೇ. ~ Mindfulness ಎಂದೆಲ್ಲಾ ಹೇಳುವ ಅವರ ಹೆಮ್ಮೆಗೆ ಕಾಣಿಸಲಿಲ್ಲವೇಕೆ ಅಖಂಡವಾಗಿ ನಿಂತು ಜಗಿಯುವ ಆ ಎಮ್ಮೆ? ~ ಆ ಒಂದು ಮಳೆ ಹನಿ ...

  • 2 days ago No comment

    ಕಂಗಾಲಾಗಿದ್ದಾಗ ನಾವೆಲ್ಲ, ಮೆಲ್ಲಮೆಲ್ಲನೆ ಬಂದಳಲ್ಲ!

      ಅಡಗಿಕೊಳ್ಳಲು ಬಾಳೆ ಬುಡ ಆರಿಸಿಕೊಂಡ ಪುಟಾಣಿಗೆ ಬೇಸಿಗೆಯ ಆ ಮಧ್ಯಾಹ್ನ ಊಟ ಮಾಡಿ ನಿದ್ದೆ ಮಾಡುವ ಸಮಯವಾಗಿತ್ತು.         ಬಾಲ್ಯ ಬಂಗಾರ   ಬಾಲ್ಯದ ಮಜವನ್ನು ಅನುಭವಿಸದ ಮಕ್ಕಳು ಬದುಕನ್ನು ಪೂರ್ಣವಾಗಿ ಸವಿಯುವುದು ಕಷ್ಟವೇ? ಆ ಮಜವೇ ಭಿನ್ನ, ಅದರಲ್ಲೂ ಹಳ್ಳಿಯ ಬದುಕಿನ ಬಾಲರ ಜೀವನದಲ್ಲಿ ಬಾಲ್ಯ ಅನನ್ಯವಾದ ಜೀವನಾನುಭವ ನೀಡುವ ಕಾಲ. ಪೇಟೆಯಲ್ಲಿ ರೇಷ್ಮೆ ಹುಳುವಿನಂತೆ ಪೊರೆಯ ಒಳಗೆ ಬದುಕುವ ಮಕ್ಕಳ ...


Editor's Wall

  • 21 November 2017
    1 day ago No comment

    ನನ್ನೊಳಗಿನ ಮಗುವಿಗೊಂದು ಪತ್ರ

          ನಿನ್ನೆ ನನ್ನ ಹಳೆಯ ಕಡತಗಳನ್ನೆಲ್ಲಾ ತೆರೆದು ಏನನ್ನೋ ಹುಡುಕುತ್ತಿದ್ದಾಗ ನೀನು ಬಿಡಿಸಿದ ಕೆಲವು ಚಿತ್ರಗಳು ಸಿಕ್ಕವು. ನಿಜಕ್ಕೂ ಅದ್ಭುತವಾಗಿದ್ದವು ಅವುಗಳು.       ಮಕ್ಕಳ ದಿನಾಚರಣೆಯ ಋತುವಿನಲ್ಲಿ ನಮ್ಮದೇ ಹನ್ನೆರಡರ ವ್ಯಕ್ತಿತ್ವಕ್ಕೊಂದು ಪತ್ರ ಬರೆದರೆ ಹೇಗಿರುತ್ತದೆ ಎಂಬ ಯೋಚನೆಯೊಂದು ತಲೆಯೆತ್ತಿತು. ಸದ್ಯ ಪತ್ರಗಳಂತೂ ಮಾಯವಾಗಿವೆ. ನಿತ್ಯಜೀವನದ ಜಂಜಾಟದಲ್ಲಿ ನಮ್ಮೊಳಗಿನ ಮಗುವೂ ನಿಧಾನಕ್ಕೆ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲೇ ಇವೆರಡನ್ನೂ ಒಂದೇ ವೇದಿಕೆಗೆ ತಂದಿಡುವ ...

  • 19 November 2017
    3 days ago No comment

    ಸಂಸಾರದ ಬಂಧಗಳ ಬಗ್ಗೆ ಬರಿದೆ ಮಾತಿಂದ…

            | ಕಮಲಾದಾಸ್ ಕಡಲು     ನನ್ನ ಅಪ್ಪನ ಸಾವು (My Father’s Death) ಕಮಲಾದಾಸ್ ಕವಿತೆಯ ಅನುವಾದ     ಅಪ್ಪ ಸತ್ತಾಗ ಅಪ್ರಾಮಾಣಿಕರು ಮಾತ್ರ ಕಣ್ಣೀರು ಸುರಿಸಿದರು, ಅವನ ಹೆಣದೊಡನೆ ಫೋಟೋ ತೆಗೆಸಿಕೊಳ್ಳಲು ಬಂದ ಅವರಿಗೆ ಅಪ್ಪನೆಂದರೆ ವಾಸ್ಕೋಡಗಾಮ ಕಪ್ಪಾದ್ ಬೀಚಿನ ಮರಳಿನ ಮೇಲೆ ಮೊದಲು ಕಾಲಿರಿಸಿದ ನಂತರ ಕ್ಯಾಲಿಕಟ್’ನಲ್ಲಿ ಸತ್ತವರಲ್ಲಿ ಅತಿ ಮುಖ್ಯವಾದ ವ್ಯಕ್ತಿಯಾಗಿದ್ದರು ಅಷ್ಟೇ. ರಸ್ತೆಯ ಇಕ್ಕೆಲದಲ್ಲೂ ...

  • 17 November 2017
    5 days ago 2 Comment

    ನನ್ನನ್ನು ಕವಿಯೆಂದರು..!

        ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

  • 14 November 2017
    1 week ago No comment

    ಅವ್ರ್ ಬಿಟ್ ಇವ್ರ್ ಬಿಟ್ ಅವ್ರ್ ಬಿಟ್ ಇವ್ರ್ ಯಾರು?

        ಈಗ ಮಕ್ಕಳನ್ನೆಲ್ಲ ಪರ ಊರುಗಳ ಬೋರ್ಡಿಂಗ್ ಶಾಲೆಗಳಲ್ಲಿ ನೂಕಿ ಯಾವ ಮನೆಗಳಲ್ಲೂ ಮಕ್ಕಳಿಲ್ಲದೆ ಬಣಗುಟ್ಟುತ್ತಿವೆ. ಹೋಮ್ ವರ್ಕ್, ರ್ಯಾಂಕ್ ಓಟ, ಅಂಕದ ಬೇಟೆಯಲ್ಲಿ ಸಿಲುಕಿ ಯಾವ ರಸ್ತೆಯಲ್ಲೂ ಮಕ್ಕಳು ಆಡುವುದಿಲ್ಲ. ಮಕ್ಕಳ ದಿನಕ್ಕೆ ಒಂದು ವಿಶೇಷ ಬರಹ, ಕಾದಂಬಿನಿ ಅವರಿಂದ       ಮಕ್ಕಳೆಲ್ಲ ಸೇರಿ ಯಾರಾದರೂ ಚೂರು ದೊಡ್ಡವರನ್ನು ಅಜ್ಜಿಯಾಗಲು ಕೇಳಿಕೊಂಡಾದ ಮೇಲೆ ಎಲ್ಲರೂ ವೃತ್ತಾಕಾರವಾಗಿ ನಿಂತು ಕ್ಲಾಪ್ಸ್ ಹಾಕುವ ಮೂಲಕ ಕಳ್ಳರನ್ನು ...

  • 09 November 2017
    2 weeks ago No comment

    ಕೆಂಡದಂಥ ಕಾವ್ಯ

    ಪಾಶ್ ಎಂದೇ ಗೊತ್ತಾಗಿರುವ ಪಂಜಾಬಿ ಮತ್ತು ಹಿಂದಿ ಕವಿ ಅವತಾರ್ ಸಿಂಗ್ ಸಂಧು, ಕ್ರಾಂತಿಕಾರಿ ಕವಿ. ತನ್ನ 20ನೇ ವಯಸ್ಸಿನಲ್ಲಿ ಆತ ಮೊದಲ ಸಂಕಲನ ‘ಲೋಹ್ ಕಥಾ’ ಪ್ರಕಟಿಸುತ್ತಿದ್ದ ಹಾಗೆಯೇ (1970) ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಟ್ಟಿದ್ದ. ಅದೇ ದಶಕದಲ್ಲೇ ಪ್ರಕಟಗೊಂಡ ಮತ್ತೂ ಎರಡು ಸಂಕಲನಗಳು ಪಂಜಾಬಿ ಕಾವ್ಯಲೋಕದಲ್ಲಿ ಆತನ ಹೆಸರನ್ನು ಶಾಶ್ವತಗೊಳಿಸಿಬಿಟ್ಟವು. ಅವನ ಕಾವ್ಯದ ಕತ್ತಿ ಖಲಿಸ್ತಾನಿಗಳ ವಿರುದ್ಧ ಝಳಪಿಸುತ್ತಿತ್ತು. ಕಡೆಗೆ ಅದೇ ಅವನ ಹತ್ಯೆಗೂ ಕಾರಣವಾಯ್ತು. ...