Share

ನನ್ನೊಳಗಿನ ನಿನ್ನ ಪದ್ಯಗಳು
ರೇಣುಕಾ ರಮಾನಂದ

 • Page Views 3123
 • IMG-20160516-WA0001

  ಕವಿಸಾಲು | KAVISALU

   

  ಪದ್ಯ ಬರೆಯುವುದನ್ನು ಬಿಟ್ಟುಬಿಟ್ಟೆ

  ತ್ಯ ಸುಳ್ಳು
  ಎರಡನ್ನೂ ಬೆರೆಸಿ
  ಒಂದಿಷ್ಟು ಪದ್ಯ ಬರೆದೆ
  ನಿನ್ನ ಬಗ್ಗೆ…..
  ನೀನಾಗ ಊರುಬಿಟ್ಟು
  ಓಡಿಹೋಗಿದ್ದೆ

  ಚಿನ್ನಿದಾಂಡು ಮರಕೋತಿ
  ಕಣ್ಣುಮುಚ್ಚಾಲೆ ಆಡುವಾಗ
  ಇಲ್ಲದ ಪ್ರೀತಿ
  ನೀನೆಲ್ಲೋ ದೇಶಾಂತರಕ್ಕೆ
  ಹೋದಮೇಲೆ ಅಂಕುರಿಸಿ
  ಚಂದ್ರ ತಾರೆ ಎಂದೆಲ್ಲ
  ಕನವರಿಸುವಂತೆ ಮಾಡಿ
  ನನ್ನ ತಲೆಕೆಡಿಸಿತೆಂದು
  ಊರವರೆಲ್ಲ ನಗಾಡಿಕೊಂಡರು

  reತಂಗಾಳಿ ಬೆಳದಿಂಗಳು
  ಎಂದೆಲ್ಲ ಸುಳ್ಳುಸುಳ್ಳೇ
  ಇನ್ನೊಂದಿಷ್ಟು ಬರೆದು
  ರಾಶಿಹಾಕಿಕೊಂಡೆ
  ‘ವೆರೈಟಿ ಅಡುಗೆಗಳೆಲ್ಲ ಈಗೀಗ ನಾಪತ್ತೆಯಾಗಿ ಬರೀ ಅನ್ನ ಸಾರು?
  ಓಡಿಹೋದವನ ಬಗ್ಗೆ ಪದ್ಯ
  ಬರೆಯುವುದನ್ನು ಬಿಡು’
  ಮನೆಮಂದಿಯೆಲ್ಲ ಮುಖಗಂಟಿಕ್ಕಿ ಮಾತುಬಿಟ್ಟರು
  reಒಂದೇಹೊತ್ತು ಒಂದಿಷ್ಟು ಊಟಹಾಕಿದರು

  ತರಹೇವಾರಿ ಕುದುರೆಜುಟ್ಟಿನ ಹೆಣ್ಣುಗಳ ಹಿಂದೆ ನೀ ಖಾನೇಸುಮಾರಿ ತಿರುಗುತ್ತಿದ್ದೀ
  ಎಂಬ ಸುದ್ಧಿ ಬಂತು
  ನಾ ನಂಬಲಿಲ್ಲ
  ಉಪ್ಪುಮೂಟೆ ಆಡುವಾಗ
  ತಪ್ಪಿಯೂ ನೀ ನನಗೆ
  ಒಂದಾದರೂ ಮುತ್ತುಕೊಟ್ಟು ಓಡಿಹೋದ
  reನೆನಪಿಲ್ಲ

  ಪದ್ಯವನ್ನೇ ತಿಂದು ಕುಡಿದು ಉಸಿರಾಡಿ
  ಒಂದಷ್ಟುದಿನ ಚನ್ನಾಗಿರೋಣವೆಂದುಕೊಂಡಿದ್ದೆ
  ಎಲ್ಲೂ ಫಲಕಾರಿಯಾಗದೇ ನಿನ್ನ ಊರಿಗೇ
  ಹೊತ್ತುಕೊಂಡು ಬರುತ್ತಿದ್ದಾರೆಂಬ
  ವಾತೆ೯ ಬಂತು
  ದಿನ ಎಣಿಸುತ್ತಿದ್ದಾನಂತೆ
  ಇಂದೋ ನಾಳೆಯೋ ಅಂತೆ
  ಜನ ನನ್ನೆದುರಿಗೇ ಮಾತಾಡಿಕೊಂಡರು
  ಕಾಲೆಳೆಯುತ್ತ ..ನಡುಗುತ್ತ ..ನಡುರಾತ್ರಿ
  ಹೋಗಿ ಗಲ್ಲ ಹೊಕ್ಕಿದ ನಿನ್ನ ನೋಡಿಬಂದೆ

  ಒಟ್ಟೂ ನಕ್ಷತ್ರಗಳಂತಹ ಉಲ್ಕೆಗಳಂತಹ
  ಪದ್ಯಗಳನ್ನೊಯ್ದು ನಿನ್ನ ದಿಂಬಿನಡಿಗಿಟ್ಟು
  ಬಂದದ್ದು ಯಾರಿಗೂ ಗೊತ್ತಿರಲಿಕ್ಕಿಲ್ಲ
  ವೆಂದುಕೊಂಡಿದ್ದೆ

  ನಿಮ್ಮವು ಒಳ್ಳೆಯ ಪದ್ಯಗಳು
  ಹೊತ್ತಿಗೊದಗಿದವು
  ಕೀವು ಒರೆಸಲು, ವಾಂತಿ ಬಳಿಯಲು
  ತುಂಬಾ ಲಾಗೂ ಬಿದ್ದವು ಎನ್ನುತ್ತ
  ಆಸ್ಪತ್ರೆಯವರು ಮನೆಗೇ ಬಂದು
  ಫಲತಾಂಬೂಲ ನೀಡಿ ಸನ್ಮಾನಿಸಿದರು
  ದಿನಪತ್ರಿಕೆಗಳಿಗೆಲ್ಲ ಸುದ್ಧಿಮಾಡಿದರು

  reತಿಂದು, ಕುಡಿದು ಉಸಿರಾಡಿಕೊಳ್ಳೋಣವೆಂದರೆ
  ಪದ್ಯಗಳೂ ಇಲ್ಲ ಈಗ
  ಎರಡ್ಹೊತ್ತಿನ ಊಟದ ಷರತ್ತು ಹಾಕಿ ರಾಜಿಯಾದೆ
  ನಿನ್ನ ಶವಯಾತ್ರೆ
  ಮನೆಯಮುಂದೆ ಹೊರಟದಿನ
  ಮತ್ತೆ ತರತರದ ನಳಪಾಕಗಳೆಲ್ಲ
  ಆರಂಭವಾದವು

  *

  ನೀನು

  ಲೈ ಹುಚ್ಚಿ ಒಮ್ಮೆ ನಕ್ಕುಬಿಡು ನಿದ್ದೆ ಬರುತ್ತದೆ ಎನ್ನುತ್ತಿ ನೀನು
  ನಕ್ಕು ನಿದ್ರೆ ಮಾಡಬೇಕು ಎಂದರೆ ಜೊತೆಯಲ್ಲಿರಬೇಕಲ್ಲವೇ ನೀನು

  ನಿನ್ನ ಭುಜಕ್ಕೆ ತಲೆಯಾನಿಸಿ ನಡೆಯಬೇಕು ದಂಡೆಗುಂಟ
  ಹೆಗಲು ಕೊಡು ಹತ್ತಾರು ಮೈಲಿ ಎಂದರೆ ಮುಗುಳ್ನಗುತ್ತಿ ನೀನು

  ಬೇಲಿ ಮೇಲಿನ ಹೂ ಕೊಟ್ಟಿಗೆಯೊಳಗಿನ ಕರು ಎಲ್ಲವೂ ನೆನಪಿಸುತ್ತದೆ ನಿನ್ನ,
  ಮುಟ್ಟಿ ಮುದ್ದಿಸಿದೆ ಅವೆಲ್ಲವನ್ನೂ ಎಂದರೆ ನಾಚಿಕೊಳ್ಳುತ್ತಿ ನೀನು

  ನನ್ನ ಪ್ರೀತಿಗೆ ಸಲಾಮು ಸಲ್ಲಿಸುತ್ತೀ, ಚಿರಋಣಿ ಎನ್ನುತ್ತಿ,ಗೌರವ ಕೊಟ್ಟು ಕರಗಿ ನೀರಾಗುತ್ತಿ                    
  ಹಿಂದೆ ಅಡಗಿಸಿಟ್ಟುಕೊಂಡ ಗುಲಾಬಿ ಮುಡಿಸಲು ಬೆವರಿ ಒದ್ದೆಯಾಗುತ್ತಿ ನೀನು

  ಏನು ಮಾಡಲಿ ಮುಟ್ಟಿದರೆ ಮುನಿಯ ಹೂ ತುಂಬ ಸುಂದರ, ನವಿರು ಚಿತ್ತಾರ

  ಕೊಯ್ದು ಕೊಡು ಎಂದರೆ ಮುದುಡೀತು  ಬೇಡ ಗೆಳತಿ ಎಂದು ಸಮಾಧಾನಿಸುತ್ತಿ ನೀನು

  ———–

  2016-05-23_17.32.24ರೇಣುಕಾ ರಮಾನಂದ, ಅಂಕೋಲೆಯ ಶೆಟಗೇರಿಯವರು. ವೃತ್ತಿಯಲ್ಲಿ ಶಿಕ್ಷಕಿ. ಉತ್ತರ ಕನ್ನಡದ ಹೊಸ ಕವಿಗಳ ಸಾಲಿನಲ್ಲಿ ಭರವಸೆಯ ಧ್ವನಿ ಅವರದು.

  Share

  Related Post

  Related Blogpost

  17 Comments For "ನನ್ನೊಳಗಿನ ನಿನ್ನ ಪದ್ಯಗಳು
  ರೇಣುಕಾ ರಮಾನಂದ
  "

  1. ಎರಡೂ ಪದ್ಯಗಳು ಹೃದ್ಯವಾಗಿವೆ ಅಕ್ಕಾ, ಯಾವುದೇ ಆಡಂಬರವಿಲ್ಲದೇ ಎದೆಯ ದನಿ ಸೀದಾ ಇನ್ನೊಂದು ಮನಸ್ಸಿಗೆ ಸಹಜವಾಗಿ ದಾಟಿಸುವಂತಿದೆ:)

   Reply
   • umesh mundalli
    29th May 2016

    Nice

    Reply
   • Renuka Ramanand
    31st May 2016

    Thank u putti

    Reply
  2. ಆನಂದ್ ಋಗ್ವೇದಿ
   30th May 2016

   ಮೊದಲ ಪದ್ಯದ ತಣ್ಣಗಿನ ವಿಷಾದ ಮನ ಆವರಿಸುತ್ತದೆ, ಮೋಡ ಮುಸುಕಿದ ಮುಗಿಲಿನಂತೆ!!

   Reply
   • Renuka Ramanand
    31st May 2016

    Thank u umesh

    Reply
   • Renuka Ramanand
    31st May 2016

    Thank u anand sir

    Reply
  3. Deepa hiregutti
   7th June 2016

   Liked first poem a lot . Keep going! !

   Reply
   • Renuka Ramanand
    26th June 2016

    Thank u deepa

    Reply
  4. 9th June 2016

   ಒಳ್ಳೆಯ ಕವಿತೆಗಳು. ಅಭಿನ೦ದನೆ

   Reply
   • Renuka Ramanand
    26th June 2016

    Thank u pakkann

    Reply
  5. ಬಾನಿ
   3rd July 2016

   Aha!! Chanda

   Reply
   • Renuka Ramanand
    4th July 2016

    Thank u

    Reply
  6. ನಾಗರಾಜ ಹರಪನಹಳ್ಳಿ
   17th July 2016

   ಒಂದು ಕವಿತೆ ಬೆಳೆಯುವುದು ಹೇಗೆ? ಅದು ಮಣ್ಣಿಂದ ಬೀಜ ಮೊಳಕೆಯೊಡೆದು ಸಹಜ ಸಸಿಯಂತೆ. ಅದಕ್ಕೆ ಉದಾಹರಣೆ ರೇಣುಕಾ ಅವರ ಕವಿತೆ “ಪದ್ಯ ಬರೆಯುವುದನ್ನು ಬಿಟ್ಟು ಬಿಟ್ಟೆ”

   Reply
   • Renuka Ramanand
    17th August 2016

    Thank u nagraj

    Reply
  7. ಪ್ರವೀಣ್ ಕುಮಾರ್ .ಆರ್
   29th November 2016

   ಕವಿತೆ ಚೆನ್ನಾಗಿವೆ …. ಉತ್ತಮ ಬರಹ…..

   Reply
  8. 20th February 2017

   ತುಂಭಾ ಚೆನ್ನಾಗಿವೆ ಕವಿತೆಗಳು.ನೈಜತೆಗೆ ಬಹಳಷ್ಟು ಹತ್ತಿರ ಇವೆ.

   Reply
  9. Nagraj Harapanahalli
   31st May 2017

   ಒಂದು ಕಾದಂಬರಿಯಷ್ಟು ಹರವು ಹೊಂದಿದ, ವಸ್ತುವುಳ್ಳದ್ದನ್ನು ಒಂದು ಕವಿತೆ ಹೇಳುತ್ತದೆ ಅಂದರೆ ಅದು ಕಾವ್ಯದ ಕಸುವು. ಪದ್ಯ ಬರೆಯುವುದು ಬಿಟ್ಟು ಬಿಟ್ಟೆ ಎಂಬ ರೇಣುಕಾ ಅವರ ಕವಿತೆ(ನನ್ನೊಳಗಿನ ನಿನ್ನ ಪದ್ಯಗಳು) ಶಕ್ತಿ ಇರುವುದೇ ಅಲ್ಲಿ. ನೀನು ಎಂಬ ಅವರ ಕವಿತೆ ಸಹ “ಪದ್ಯ ಬರೆಯುವುದು ಬಿಟ್ಟುಬಿಟ್ಟೆ “ಎಂಬ ಕವಿತೆಯ ಯೊಳಗಿನ ನಡುವಿನ ಅಧ್ಯಾಯದಂತಿದೆ. ಪ್ರೇಮವನ್ನು ಅಭಿವ್ಯಕ್ತಿಸುವ ಕಾವ್ಯ ಎಲ್ಲ ಕಾಲದೇಶಗಳಿಗೆ ಸಲ್ಲುವಂತಹದ್ದು. ರೇಣುಕಾ ಅವರ ಚೆಂದ ಪದ್ಯಗಳ ಸಾಲಿನಲ್ಲಿ ಇವು ನಿಲ್ಲುತ್ತವೆ.

   Reply

  Leave a comment

  Your email address will not be published. Required fields are marked *

  Recent Posts More

  • 4 hours ago No comment

   ಕೊಂಕಣಿ ಓದುಗರ ಮುಂದೆ ‘ಮಾಜಾರ್ ಅನಿ ಹೆರ್ ಕಥಾ’

   ಮೆಲ್ವಿನ್, ಪೆರ್ನಾಲ್ ಕಾವ್ಯನಾಮದಿಂದ ಕೊಂಕಣಿ ಸಾರಸ್ವತ ಲೋಕದಲ್ಲಿ ಪರಿಚಿತರಾಗಿರುವ ಪ್ರಾಧ್ಯಾಪಕ ಮೆಲ್ವಿನ್ ರಾಜೇಶ್ ಕ್ಯಾಸ್ಟೇಲಿನೊ ಅವರ ಹತ್ತು ಸಣ್ಣಕತೆಗಳ ಸಂಗ್ರಹ ‘ಮಾಜಾರ್ ಆನಿ ಹೆರ್ ಕಥಾ’ ಬಿಡುಗಡೆಗೊಂಡಿದೆ. ಗುಜರಾತ್, ಗಾಂಧಿಧಾಮ್ ಧರ್ಮಪ್ರಾಂತ್ಯದ ವಂ| ನೆಲ್ಸನ್ ಡಿ’ಸೊಜಾ ಮತ್ತು ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆ ಅಧ್ಯಕ್ಷ ಶ್ರೀ ರೊನಾಲ್ಡ್ ಜೆ. ಸಿಕ್ವೇರಾ ಅವರು 14 ಅಕ್ತೋಬರ್ 2017ರಂದು ಕೃತಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಲೇಖಕ ಮೆಲ್ವಿನ್ ಪೆರ್ನಾಲ್, ಅದ್ದೂರಿ ...

  • 18 hours ago No comment

   ಗೌರಿ ಲಂಕೇಶ್ : ಒಂದು ನಿಷ್ಕಲ್ಮಷ ಕಥನ

   ಗೌರಿ ಲಂಕೇಶ್ ಹತ್ಯೆ ಒಂದೆಡೆ ಎಂಥ ವಿಷಮ ಸ್ಥಿತಿಯಲ್ಲಿ ಈ ಸಮಾಜ ಸಿಲುಕಿದೆ ಎಂಬುದನ್ನು ತೋರಿಸುತ್ತಿದ್ದರೆ, ಇನ್ನೊಂದೆಡೆ ಅವರ ಆದರ್ಶವಾದ ಗೊತ್ತಿದ್ದವರಿಗೆ, ಅವರ ಒಡನಾಡಿಗಳಿಗೆ ಒಂದಿಡೀ ಸಾಂಸ್ಕೃತಿಕ ಕಥಾನಕವೇ ನೆನಪಾಗಿ ಕಾಡುತ್ತಿದೆ. ಲಂಕೇಶ್ ಒಡನಾಡಿಯಾಗಿದ್ದು, ಗೌರಿ ಅವರೊಂದಿಗೂ ಅದೇ ಆಪ್ತತೆ ಹೊಂದಿದ್ದ ಎಂಎಲ್‍ಸಿ ಮೋಹನ್‍ಕುಮಾರ್ ಕೊಂಡಜ್ಜಿ ಅಂಥ ಒಂದು ಸಾಂಸ್ಕೃತಿಕ ಕಥಾನಕವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಬಣ್ಣವಿಲ್ಲದ, ಕಲ್ಮಷವಿಲ್ಲದ ಈ ನೆನಪುಗಳಲ್ಲಿ ಮೂಡಿರುವ ಗೌರಿ ಚಿತ್ರ ವಿಭಿನ್ನವಾಗಿದೆ. ಓದಲೇಬೇಕಾದ ಬರಹ. ...

  • 1 day ago No comment

   ಒಂದು ಗಜಲ್; ಒಂದು ಗೆಜ್ಜೆ

   ಒಂದು ಗಜಲ್ ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ ಮಧುರ ನೆನಪುಗಳೂ ಎದೆ ಕೊರೆದಾವೆಂಬ ಅರಿವಿರಲಿಲ್ಲ ನನಗೆ ಸುಖದ ಗಳಿಗೆಗಳೂ ಕೊರಳೊತ್ತಿ ಸಾಯಿಸುವವೆಂದು ತಿಳಿದಿರಲಿಲ್ಲ ನನಗೆ ಹೊಳೆದಂಡೆಯ ಪಿಸುಮಾತೂ ಲೋಕದ ತುಂಬ ಹಬ್ಬೀತೆಂದು ಅರ್ಥವಾಗಲಿಲ್ಲ ನನಗೆ ಗಾಳಿಯಲಿ ಹೊಯ್ದಾಡುವ ನಂದಾದೀಪವೂ ಜ್ವಾಲೆಯಾಗಿ ಸುಡುವುದು ತಿಳಿದಿರಲಿಲ್ಲ ನನಗೆ ಜೋಡಿ ಮಂಚದ ಮೆತ್ತನೆಯ ಹಾಸಿಗೆಯೂ ಚುಚ್ಚುವುದೆಂದು ಗೊತ್ತಿರಲಿಲ್ಲ ನನಗೆ ಸುಖದ ಉನ್ಮಾದವಷ್ಟೇ ...

  • 1 day ago No comment

   ಬದುಕು ಬರಿ ಗಿಲೀಟು

   (ಗಜಲ್) ದಾರಿ ಹೋದ ಹಾಗೆ ಸಾಗಿ ಬದುಕು ಬರಿ ಗಿಲೀಟು ಹೊತ್ತು ಬಂದತ್ತ ಬಾಗಿ ಬದುಕು ಬರಿ ಗಿಲೀಟು ಹದ್ದುನೆರಳು ನೆನಪು ಕುಕ್ಕೆ ಕಣ್ಣು ಹುಗಿದು ಕೂತು ತನಗೆ ತಾನೆ ಮೋಸವಾಗಿ ಬದುಕು ಬರಿ  ಗಿಲೀಟು ಥಳುಕಿನ ಸಂತೆಗಳಲ್ಲಿ ನಮ್ಮತನವ ಮಾರಿ ಲಾಲಿ ಹುಸಿಗೆ ತಲೆಯ ತೂಗಿ ಬದುಕು ಬರಿ ಗಿಲೀಟು ತುಟಿಸಿಗದ ಕನಸಹಾಡು ಉರಿದು ಉಗಿದು ಬೂದಿ ಮಾಗಿಹಿಮದಿ ಕೆಂಡ ಕರಗಿ ಬದುಕು ಬರಿ ಗಿಲೀಟು ಜೊತೆಜೊತೆಯಲೆ ...

  • 2 days ago One Comment

   ನಾನು ಮತ್ತು ನೀನು

   ಜಾರಿಸಿ,ಚಿಮ್ಮಿಸಿ ಸುರಿಸಿ,ಹನಿಸಿ ಧುಮ್ಮಿಕ್ಕಿ ಬೋರ್ಗರೆದು ಜುಳುಜುಳುನೆ ನಕ್ಕು ನಲಿದ ನಿನ್ನೊಲವಿನ ಮಿಡಿತಕ್ಕೆ ರೂಪು ನಾನು *** ತೇಲಿದ್ದು, ಮುಳುಗಿದ್ದು ಅಲೆಗಳಲ್ಲಿ ಅನುರುಣಿಸಿದ್ದು ಆಳದಲಿ ಮುಳುಗಿ ಮಲಗಿದ್ದು ನಿನ್ನೆಲ್ಲ ಗುಟ್ಟುಗಳ ಗೌಪ್ಯದಿ ಕರಗಿಸಿ, ಅರಗಿಸಿಕೊಂಡು ಶಾಂತದಿ ಹರಿವ ನದಿಯು *** ನಿನ್ನೆ ಜಾರಿದ್ದು, ಇಂದು ಹರಿದದ್ದು, ನಾಳೆ ಧಾವಿಸಿ ಬಿಗಿದಪ್ಪುವುದು ವ್ಯತ್ಯಾಸವಿಲ್ಲದೆ ಕಾಲಗಮ್ಯವ ಕಡೆಗಣಿಸಿದ ಅನವರತ ಕನಸು *** ಆಳ ತಿಳಿಯದ ಅರ್ಥಕ್ಕೆ ಸಿಗದ ನೋಟದ ಅಳತೆಗೆ ದಕ್ಕದ ನಡೆದ ...


  POPULAR IN CONNECTKANNADA

  Type in
  Details available only for Indian languages
  Settings
  Help
  Indian language typing help
  View Detailed Help