Share

ಪ್ರೂಫ್ ರೀಡಿಂಗ್! ಹೂ ಕೇರ್ಸ್?
ಈಶ್ವರ ದೈತೋಟ ಕಾಲಂ

 • Page Views 5185
 • IMG-20160412-WA0006

  ತ್ರಿಕಾ ಕಛೇರಿಗಳ ಬಹುಮುಖ್ಯ ಚಟುವಟಿಕೆಗಳಲ್ಲಿ ಒಂದಾಗಿದ್ದ ಪ್ರೂಫ್ ರೀಡಿಂಗ್ ಎಂಬ ವೃತ್ತಿ-ಪ್ರವೃತ್ತಿ ಇವತ್ತಿನ ಉದ್ಯಮದಿಂದ ಮಾಯವಾಗಿದೆ. ತಪ್ಪು -ಸರಿಗಳನ್ನು ಈಗ ಓದುಗರೇ ಅರಿತು ತಿದ್ದಿಕೊಳ್ಳುವಷ್ಟು ಜಾಣರಾಗಿರಬೇಕು. ಕಾರಣ ಕಂಪ್ಯೂಟರೈಸೇಶನ್. ಕರಡು (ಇಂತಹ ಪದಗಳನ್ನು ಕಾಪಿ ಎಡಿಟ್ ಮಾಡುವಾಗ ಎಚ್ಚರ ಇರಬೇಕು) ತಿದ್ದಲು ಯಾರೂ ಬರುವುದಿಲ್ಲ. ಬರೆದವರೇ ತಿದ್ದಿ, ತೀಡಿ ಚಂದಗಾಣಿಸಲು ಅವಕಾಶವಿದೆ. ಕಟ್ ಅಂಡ್ ಪೇಸ್ಟ್ ಜರ್ನಲಿಸಂ ಕೂಡಾ ಬಂದು ಬಿಟ್ಟಿದೆ.

  ಹಸ್ತಪ್ರತಿಯನ್ನು ಕಂಪೋಸಿಂಗಿಗೆ ಕೊಟ್ಟು ಕರಡನ್ನು (ಡ್ರಾಫ್ಟ್‌) ತಿದ್ದಿ ಕೊಡುವುದು ಓಬೀರಾಯನ ಕಾಲದ ವಿದ್ಯೆ! ಪತ್ರಿಕೋದ್ಯಮದ ಎಡಿಟಿಂಗ್ ಪಠ್ಯಪುಸ್ತಕದಲ್ಲಿ ಕೊನೆಯ ಚಾಪ್ಟರ್ ಪ್ರೂಫ್ ರೀಡಿಂಗ್ ಸಿಂಬಲ್ಸ್‌ಗೆ ಮೀಸಲಿರುತ್ತಿತ್ತು. ಪ್ರತಿ ಶುದ್ಧಪಡಿಸುವವರಿಗೆ ಕಾಪಿ ಎಡಿಟಿಂಗ್ ಸಿಂಬಲ್‍ಗಳೇನೋ ಇವೆ. ಆದರೆ, ಪೇಪರ್‌ಲೆಸ್ ನ್ಯೂಸ್‍ಪೇಪರ್ ಆಫೀಸಿನಲ್ಲಿ ಕತ್ತೆ ಚಾಕರಿ ಮಾಡುವ ಕಾಲ ಇದಲ್ಲವಲ್ಲ!

  ಸರಕಾರಿ ಕೆಲಸಕ್ಕೆ ಸೇರಬೇಕಾದರೆ ಟೈಪಿಂಗ್ ಗೊತ್ತಿರಲೇ ಬೇಕೆಂಬ ಕಾಲದಲ್ಲಿ, ಜರ್ನಲಿಸ್ಟ್ ಆಗಲು ಕರಡು ತಿದ್ದಲು ಗೊತ್ತಿರಬೇಕು, ಕರಡು ತಿದ್ದುವ ಚಿಹ್ನೆಗಳು ಗೊತ್ತಿರಬೇಕು ಎಂಬುದು ನಿರೀಕ್ಷೆಯಾಗಿತ್ತು. ಹಾಗೆಯೇ, ಕಾಪಿ ಎಡಿಟಿಂಗ್ ಸಿಂಬಲ್‍ಗಳೂ ಸ್ವಲ್ಪ ಬದಲಾವಣೆ ಇರುವಂಥವುಗಳನ್ನು ಮನವರಿಕೆ ಮಾಡಿಕೊಳ್ಳುವುದು ಅಗತ್ಯವಿತ್ತು. ಅದು ಹಳೆಕಾಲ. ಹಳೆಪಠ್ಯಗಳೀಗಲೂ ‘ಈಫ್ ಯು ವಾಂಟ್ ಟು ಬಿ ಎ ಗುಡ್ ಜರ್ನಲಿಸ್ಟ್ ಫಸ್ಟ್ ವನ್ ಶುಡ್ ಲರ್ನ್ ಟೈಪಿಂಗ್ ಅಂಡ್ ಪ್ರೂಫ್ ರೀಡಿಂಗ್’ ಎಂದು ಈಗಲೂ ಸಾರಿ ಹೇಳುತ್ತವೆ.

  ನಾನಂತೂ ಪತ್ರಿಕೋದ್ಯಮ ವಿದ್ಯಾರ್ಥಿಯೆನಿಸಿದ ಮೊದಲ ವರ್ಷದಲ್ಲಿಯೇ, ಪ್ರೂಫ್ ರೀಡಿಂಗ್ ಕಲಿಯ ಹೊರಟವನು. ಪ್ರೊ. ಖಾದ್ರಿಯವರಿಗಂತೂ ಅತಿಉತ್ಸಾಹಿಗಳೆಂದರೆ ಇಷ್ಟವೆಂಬುದು ನನಗೆ ಖಂಡಿತವಾಗಿತ್ತು. ಖಾದ್ರಿಯವರ ಬೆನ್ನು ಬಿದ್ದೆ. ಅವರು ಕಾಗದದಲ್ಲಿ ಪ್ರೂಫ್ ರೀಡಿಂಗ್ ಸಿಂಬಲುಗಳನ್ನೆಲ್ಲ ನಕಲು ಮಾಡಿದ ಪ್ರತಿಯನ್ನು ನನಗೆ ಕೊಟ್ಟೇ ಬಿಟ್ಟರು. ಡಿಗ್ರಿ ವೇಳೆಗೆ ‘ಪತ್ರಿಕೋದ್ಯಮಿ’ ಪ್ರಾಕ್ಟೀಸ್ ಜರ್ನಲ್ ಮತ್ತು ವಾರ್ಷಿಕ ಸಂಚಿಕೆಯನ್ನು ಸ್ವತಂತ್ರವಾಗಿ ನಿಭಾಯಿಸುವ ವಿಶ್ವಾಸ ಗಳಿಸಿದ್ದೆನು..

  ಪಿ.ಜಿ. ಕ್ಯಾಂಪಸ್ಸಿನಲ್ಲಿ ಡಾಕ್ಟರೇಟ್ ಮಾಡುತ್ತಿದ್ದವರೊಬ್ಬರು ನಾನು ಪತ್ರಕರ್ತ ಎಂಬ ಅಂದಾಜಿನಲ್ಲಿ ಆ ವೇಳೆಗಾಗಲೇ ನನಗೆ ಪರಿಚಿತರಾಗಿದ್ದರು. ಅವರ ಮಾವ ಶಾಸನ ಸಭೆಗೆ ಚುನಾಯಿತರಾದ ಸಂಭ್ರಮದಲ್ಲಿ ಅಳಿಯನಾಗಿ ಒಂದು ಸನ್ಮಾನ ಸಮಾರಂಭ ಒಮ್ಮೆ ಇಟ್ಟುಕೊಂಡಿದ್ದರು. ತನ್ನ ಊರಿನ ಹುಡುಗನೊಬ್ಬನ ಜೊತೆ ಕ್ಯಾಂಪಸ್ಸಿನಲ್ಲಿ ನಡೆದು ಬರುತ್ತಿದ್ದ ಅವರು ನನ್ನನ್ನು ತಡೆಹಿಡಿದು, ಸಹಾಯಕನಿಂದ ಒಂದು ಆಹ್ವಾನ ಪತ್ರಿಕೆ ತೆಗೆಸಿ, ನನ್ನ ಹೆಸರಿನೊಂದಿಗೆ ‘ಜನರಲಿಸ್ಟ್’ ಎಂದು ಬರೆದು ಕೊಟ್ಟರು.

  proofಜೊತೆಗೆ, ನೋಡ್ರೀ ಯಜಮಾನ್ರೇ, ಬಂದು ನಮ್ಮಾವನ ಸನ್ಮಾನದ ಬಗ್ಗೆ ಜೋರಾಗಿ ಎಲ್ಲಾ ಪೇಪರ್‌ನಲ್ಲಿಯೂ, ಫೋಟೋ ಹಾಕಿ ಬರೆಯಬೇಕೆಂದು ಆದೇಶವಿತ್ತರು. ನಾನು ಜರ್ನಲಿಸಂ ಸ್ಟೂಡೆಂಟ್ ಮಾತ್ರ, ‘ಜನರಲಿಸ್ಟ್‌’ ಅಲ್ಲವೆಂದರೂ, “ಅದೆಲ್ಲಾ ವಿವರಾ ಬೇಡ, ಚೆನ್ನಾಗಿ ವರದಿ ಬರೀರಿ ಅಷ್ಟೇ” ಎಂದು ಬುದ್ಧಿ ಹೇಳಿದರು.

  ನಾನು ಇನ್ವಿಟೇಶನ್ ಓದಿದೆ. ಹತ್ತಾರು ಮಿಸ್ಟೇಕ್‍ಗಳಿದ್ದವು. ನಾನದನ್ನು ಪ್ರೂಫ್ ಕರೆಕ್ಷನ್ ಮಾಡಿದೆ. “ನೋಡಿ ನಿಮ್ಮ ಆಹ್ವಾನಪತ್ರಿಕೆಯಲ್ಲಿ ಎಷ್ಟು ತಪ್ಪಿದೆ” ಎಂದು ಅಧಿಕ ಪ್ರಸಂಗ ಮಾಡಿದೆ. ಅವರು ತಕ್ಷಣವೇ, ಸಾರಿ, ಸಾರಿ ಎಂದುಸುರಿ ಇನ್ವಿಟೇಶನ್ ಎಳೆದು, ಹುಡುಗನ ತಲೆಗೊಂದು ಮೊಟಕಿ “ಬುದ್ಧಿ ಬೇಡಾ ನಿಂಗೆ, ಪ್ರೆಸ್‍ನವರಿಗೆ ‘ಮಿಸ್ಟಿಂಗ್’ ಇರೋದು ಕೊಡ್ತೀಯಾ” ಎಂದು ಬೈದರು. ಮತ್ತೊಂದು ಇನ್ವಿಟೇಶನ್ ಅವನಿಂದ ಕಿತ್ತು ತೆಗೆದು “ಬೇಜಾರು ಮಾಡ್ಕೋಬೇಡಿ ಸ್ಸಾರ್” ಎಂದು ನನ್ನ ಕೈಗಿತ್ತರು. ನಾನು ಬಾಯಿಗೆ ಬೀಗ ಹಾಕಿಕೊಂಡಿದ್ದೆ.

  ಅಷ್ಟೇ ಅಲ್ಲಾ! “ಚೆನ್ನಾಗಿ ಎಲ್ಲಾ ಪೇಪರಿನಲ್ಲೂ ನೀವು ರಿಪೋರ್ಟ್ ಬರೀಬೇಕು, ನಮ್ಮಾವಾವ್ರಿಗೆ ಹೇಳಿ ನಿಮಗೊಂದು ಕೆಲ್ಸಾ ಕೊಡಿಸ್ತೀನಿ” ಎಂದು ಆಶೀರ್ವದಿಸಿದರು. ನನ್ನ ಪ್ರೂಫ್ ರೀಡಿಂಗ್ ನಾಲೆಜ್ ಪ್ರದರ್ಶನಕ್ಕೆ ಅದುವೇ ಲಾಸ್ಟ್ ಶೋ.

  ಈಗಲಂತೂ ಹಳ್ಳಿ ಕಡೆ ಹೋದರೆ ‘ಕೆಲಾವು’ ಓದುಗರು “ಎಂಥ ಮಣ್ಣಾಂಗಟ್ಟಿ ಮಾರಾಯ್ರೆ. ನೀವು ‘ಜರ್ನಾಲಿಸ್ಟ್’ ಆದದ್ದೇ ದಂಡ. ನಿಮ್ಮ ಪತ್ರಿಕೆಗಳಲ್ಲಿ ‘ಹೆಡ್ಡ ಲೈನು’ಗಳನ್ನು ಬರೆದವರು ಅದನ್ನು ಮತ್ತೆ ಓದುವುದಿಲ್ಲವೋ? ಬರವಣಿಗೆ ಇಂಗ್ಲೀಷಿನದೋ, ಕನ್ನಡದ್ದೋ ಗೊತ್ತಾಗುವುದಿಲ್ಲವಲ್ಲ” ಎಂದು ದುರುಗುಟ್ಟಿ ಕೇಳುವುದುಂಟು! ‘ಅ ಇಲ್ಲದ ತಿಥಿ ಬಂದರೆ, ಸೇತುಬಂಧ ಹೋಗಿ ಸೋತುಬಂದ ಶಿಕ್ಷಣ ಆದರೆ- ಅಕ್ಷರ ತಪ್ಪಿಲ್ಲ ನಿಜ. ಆದಕ್ಕೆ ಎಂಥದ್ದು ಮಾಡುವುದು ಮಾರಾಯ್ರೇ’ ಎಂದು ಬೊಬ್ಬೆ ಮಾಡುವವರೂ ಉಂಟು.

  ಭಗವಂತ ದೊಡ್ಡವನು. ಇನ್ನು ಕರಡು ತಿದ್ದುವಿಕೆ ಕಲಿಯಲೇ ಬೇಕಿಲ್ಲ! ಏಕೆಂದರೆ ನಮ್ಮದು ಅಕ್ಷರ ಜಗತ್ತಲ್ಲ, ಡಿಜಿಟಲ್ ವರ್ಲ್ಡ್‌!

  ———————-

  ಈಶ್ವರ ದೈತೋಟ

  IMG-20160410-WA0002ಕರ್ನಾಟಕದ ಅತಿಹೆಚ್ಚು ದಿನಪತ್ರಿಕೆಗಳನ್ನು ಮುನ್ನಡೆಸಿದ ಹಿರಿಮೆ. 1991ರಿಂದ 2011ರವರೆಗಿನ ಎರಡು ದಶಕಗಳಲ್ಲಿ ಅತ್ಯಂತ ಹೆಚ್ಚು ಆವೃತ್ತಿಗಳು ಮತ್ತು ಪ್ರಸಾರದ ವಿಜಯ ಕರ್ನಾಟಕದ ಫೌಂಡರ್ ಚೀಫ್ ಎಡಿಟರ್. ಮಣಿಪಾಲದ ಉದಯವಾಣಿ ರೆಸಿಡೆಂಟ್ ಎಡಿಟರ್, ಟೈಮ್ಸ್ ಆಫ್ ಇಂಡಿಯಾ (ಕ) ಎಡಿಟರ್, ಕನ್ನಡದ ಸೀನಿಯರ್ ಮೋಸ್ಟ್ ದೈನಿಕ ಸಂಯುಕ್ತ ಕರ್ನಾಟಕದ ಚೀಫ್ ಎಡಿಟರ್ ಹಾಗೂ ನೂತನ ವಾರಪತ್ರಿಕೆ ಚೀಫ್ ಎಡಿಟರ್ ಆಗಿ ಹೊಣೆಹೊತ್ತವರು.

  ಮುದ್ರಣ ಮಾಧ್ಯಮ, ರೇಡಿಯೋ, ಟೆಲಿವಿಷನ್ನಿನಲ್ಲಿ ಮೂರೂವರೆ ದಶಕಗಳಿಗೂ ಹೆಚ್ಚು ಅನುಭವ. ಪತ್ರಿಕೋದ್ಯಮ ಶಿಕ್ಷಣ, ಅಭ್ಯುದಯ ಪತ್ರಿಕೋದ್ಯಮ ಮತ್ತು ಮೀಡಿಯಾ ಮ್ಯಾನೇಜ್‌ಮೆಂಟ್‌ನಲ್ಲಿಯೂ ಅಪಾರ ಸಾಧನೆ. ಯುಜಿಸಿ ಮತ್ತು ಯೂನಿಸೆಫ್ ತರಬೇತಿ ಯೋಜನೆಗೆ ಡೆವಲಪ್‌ಮೆಂಟ್‌ ಕನ್ಸಲ್ಟೆಂಟ್ ಎಂದು ಮನ್ನಣೆ.

  2015ರಲ್ಲಿ ಪ್ರತಿಷ್ಠಿತ ಟಿಎಸ್ಆರ್ ಪತ್ರಿಕೋದ್ಯಮ ಪ್ರಶಸ್ತಿ, ಮೂಡಬಿದ್ರೆಯ ನುಡಿಸಿರಿ ಪ್ರಶಸ್ತಿ, 2008ರಲ್ಲಿ ಅಭ್ಯುದಯ ಪತ್ರಿಕೋದ್ಯಮ ರಾಜ್ಯ ಪ್ರಶಸ್ತಿ, ಮೈಸೂರಿನ ಕುವೆಂಪು ಶಿಕ್ಷಣ ಸಂಸ್ಥೆಯಿಂದ ರಾಜ್ಯದ ಅತ್ಯುತ್ತಮ ಸಂಪಾದಕ ಪ್ರಶಸ್ತಿ (2006). 2008ರಲ್ಲಿ ರಾಷ್ಟ್ರೀಯ ಝಿ ಟಿವಿ ಚಾನೆಲ್‌ನಿಂದ ಕರ್ನಾಟಕದಲ್ಲಿ ಇಲೆಕ್ಟ್ರಾನಿಕ್ ಮೀಡಿಯಂ ಮತ್ತು ಪತ್ರಿಕೋದ್ಯಮಕ್ಕೆ ಅತಿ ದೊಡ್ಡ ಸೇವೆ ಸಲ್ಲಿಸಿದ ಸಂಪಾದಕ ಮತ್ತು ಅತ್ಯಂತ ಜನಪ್ರಿಯ ಮೀಡಿಯಾ ಪರ್ಸನ್ (ವೀಕ್ಷಕರ ಆಯ್ಕೆ) ಎಂಬೆರಡು ಪ್ರಶಸ್ತಿಗಳು. ವಾಯ್ಸ್ ಆಫ್ ಅಮೇರಿಕಾ ಮತ್ತು ಕೆನೆಡಿಯನ್ ರೇಡಿಯೋಗಳಲ್ಲಿ ಅವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ಹಲವು ಇಂಟರ್‌ನ್ಯಾಷನಲ್ ಜರ್ನಲ್‌ಗಳಿಗೂ ಲೇಖನ ಬರೆದಿದ್ದಾರೆ.

  ಅಭ್ಯುದಯ ಪತ್ರಿಕೋದ್ಯಮ ಅವರ ನಿತ್ಯ ಜಪ. ಅಭ್ಯುದಯ ಸಂಬಂಧಿತ ಅನೇಕ ಡಾಕ್ಯುಮೆಂಟರಿಗಳನ್ನು, ರೇಡಿಯೋ ರೂಪಕಗಳನ್ನು ತಯಾರಿಸಿರುವ ಅನುಭವ. ಪತ್ರಿಕೋದ್ಯಮ ಮತ್ತಿತರ ವಿಷಯಗಳ ಬಗ್ಗೆ ಅವರು ಬರೆದಿರುವ, ಅನುವಾದಿಸಿರುವ ಪುಸ್ತಕಗಳ ಸಂಖ್ಯೆ 75ಕ್ಕೂ ಹೆಚ್ಚು.

  Share

  Related Post

  Related Blogpost

  8 Comments For "ಪ್ರೂಫ್ ರೀಡಿಂಗ್! ಹೂ ಕೇರ್ಸ್?
  ಈಶ್ವರ ದೈತೋಟ ಕಾಲಂ
  "

  1. Jayashree Deshpande
   1st June 2016

   ‘ಭಗವಂತ ದೊಡ್ಡವನು. ಇನ್ನು ಕರಡು ತಿದ್ದುವಿಕೆ ಕಲಿಯಲೇ ಬೇಕಿಲ್ಲ! ಏಕೆಂದರೆ ನಮ್ಮದು ಅಕ್ಷರ ಜಗತ್ತಲ್ಲ, ಡಿಜಿಟಲ್ ವರ್ಲ್ಡ್‌!’
   ಎಷ್ಟು ಅನುಭವೀ ಮಾತುಗಳಿವು ದೈತೋಟ ಅವರೇ.. ಆದರೂ ಈಗೀಗ ಒ೦ದು ವಿಪರ್ಯಾಸ ಕಾಣಿಸಿಕೊಳ್ಳುತ್ತಿದೆಯಲ್ಲ? ಯಾರಾದರೂ ಪ್ರಕಟಣೆಗೆ ಕಳಿಸಿದ ಲೇಖನಗಳನ್ನು, ಅದರಲ್ಲಿನ ಶಬ್ದಗಳನ್ನು ‘ತಮ್ಮಿಷ್ಟದ೦ತೆ’ ತಿದ್ದುವ ಸ೦ಪ್ರದಾಯ ಬಹಳವೇ ಹೆಚ್ಚಾಗುತ್ತಿದೆ. ಬರಹಗಳನ್ನು ಕಳಿಸಿದವರು ಅಪ್ಪಟ ಭಾಷಾ ಪ0ಡಿತರಲ್ಲದಿದ್ದರೂ ಸರಳವಾದ ವ್ಯಾಕರಣಶುದ್ಧಿಯೊ೦ದಿಗೆ ಬರೆದವುಗಳಲ್ಲಿ ಈ ‘ತಿದ್ದುಗಾರರ ಕೈ ಚಳಕದಿ೦ದ’ ವ್ಯಾಕರಣ ದೋಷಗಳು ತಾನೇ ತಾನಾಗಿ ಲೇಖನಗಳಲ್ಲಿ ಬ೦ದಿಳಿದುಬಿಡುತ್ತವೆ…ನನ್ನ ಹಾಗೆಯೇ ಅನೇಕ ಬರಹಗಾರರೂ ಈ ಬಗ್ಗೆ ನೋವು ಅನುಭವಿಸಿದ್ದನ್ನು ಹೇಳಿಕೊ೦ಡಿದ್ದಾರೆ. ನನ್ನ ಬರವಣಿಗೆಯನ್ನು ನಿಸ್ಪ್ರಹರಾಗಿ ತಿದ್ದಿದವರು ನೀವು, ಆದರೆ ಈಗ ಯಾರು ಯಾರನ್ನು ತಿದ್ದುತ್ತಾರೋ ದೇವರೇ ಬಲ್ಲ.!

   Reply
   • Ishwar Daitota
    2nd June 2016

    thank You Jayashree avare

    Reply
  2. Yogish KK
   1st June 2016

   Very well written Sir . Worth reading article.

   Reply
   • Ishwar Daitota
    2nd June 2016

    thank Mr. Yogish

    Reply
  3. Sandeepani DNV
   4th June 2016

   Firstly my sincere apologies for writing this in English. Hats off to Ishwar Sir for highlighting this dying art of proofreading. This is a very essential skill set and we have given it away. I notice that most of the students spell ‘Principal’ as ‘Principle’. Now you can understand where we are heading to.
   Similar is the case with many other skilled jobs which have almost vanished in this era of ‘use and throw’.
   May Sri Ishwar highlight more such things in his future columns and enlighten us.

   Reply
   • Ishwar Daitota
    4th June 2016

    Thank You Sandeepani. We should have a strong cup of coffee very soon

    Reply
  4. 7th June 2016

   lekhana tumba tumba chennagide..

   Reply
   • Ishwar Daitota
    9th June 2016

    thank you Naveen avare

    Reply

  Leave a comment

  Your email address will not be published. Required fields are marked *

  Recent Posts More

  • 4 hours ago No comment

   ಕೊಂಕಣಿ ಓದುಗರ ಮುಂದೆ ‘ಮಾಜಾರ್ ಅನಿ ಹೆರ್ ಕಥಾ’

   ಮೆಲ್ವಿನ್, ಪೆರ್ನಾಲ್ ಕಾವ್ಯನಾಮದಿಂದ ಕೊಂಕಣಿ ಸಾರಸ್ವತ ಲೋಕದಲ್ಲಿ ಪರಿಚಿತರಾಗಿರುವ ಪ್ರಾಧ್ಯಾಪಕ ಮೆಲ್ವಿನ್ ರಾಜೇಶ್ ಕ್ಯಾಸ್ಟೇಲಿನೊ ಅವರ ಹತ್ತು ಸಣ್ಣಕತೆಗಳ ಸಂಗ್ರಹ ‘ಮಾಜಾರ್ ಆನಿ ಹೆರ್ ಕಥಾ’ ಬಿಡುಗಡೆಗೊಂಡಿದೆ. ಗುಜರಾತ್, ಗಾಂಧಿಧಾಮ್ ಧರ್ಮಪ್ರಾಂತ್ಯದ ವಂ| ನೆಲ್ಸನ್ ಡಿ’ಸೊಜಾ ಮತ್ತು ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆ ಅಧ್ಯಕ್ಷ ಶ್ರೀ ರೊನಾಲ್ಡ್ ಜೆ. ಸಿಕ್ವೇರಾ ಅವರು 14 ಅಕ್ತೋಬರ್ 2017ರಂದು ಕೃತಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಲೇಖಕ ಮೆಲ್ವಿನ್ ಪೆರ್ನಾಲ್, ಅದ್ದೂರಿ ...

  • 18 hours ago No comment

   ಗೌರಿ ಲಂಕೇಶ್ : ಒಂದು ನಿಷ್ಕಲ್ಮಷ ಕಥನ

   ಗೌರಿ ಲಂಕೇಶ್ ಹತ್ಯೆ ಒಂದೆಡೆ ಎಂಥ ವಿಷಮ ಸ್ಥಿತಿಯಲ್ಲಿ ಈ ಸಮಾಜ ಸಿಲುಕಿದೆ ಎಂಬುದನ್ನು ತೋರಿಸುತ್ತಿದ್ದರೆ, ಇನ್ನೊಂದೆಡೆ ಅವರ ಆದರ್ಶವಾದ ಗೊತ್ತಿದ್ದವರಿಗೆ, ಅವರ ಒಡನಾಡಿಗಳಿಗೆ ಒಂದಿಡೀ ಸಾಂಸ್ಕೃತಿಕ ಕಥಾನಕವೇ ನೆನಪಾಗಿ ಕಾಡುತ್ತಿದೆ. ಲಂಕೇಶ್ ಒಡನಾಡಿಯಾಗಿದ್ದು, ಗೌರಿ ಅವರೊಂದಿಗೂ ಅದೇ ಆಪ್ತತೆ ಹೊಂದಿದ್ದ ಎಂಎಲ್‍ಸಿ ಮೋಹನ್‍ಕುಮಾರ್ ಕೊಂಡಜ್ಜಿ ಅಂಥ ಒಂದು ಸಾಂಸ್ಕೃತಿಕ ಕಥಾನಕವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಬಣ್ಣವಿಲ್ಲದ, ಕಲ್ಮಷವಿಲ್ಲದ ಈ ನೆನಪುಗಳಲ್ಲಿ ಮೂಡಿರುವ ಗೌರಿ ಚಿತ್ರ ವಿಭಿನ್ನವಾಗಿದೆ. ಓದಲೇಬೇಕಾದ ಬರಹ. ...

  • 1 day ago No comment

   ಒಂದು ಗಜಲ್; ಒಂದು ಗೆಜ್ಜೆ

   ಒಂದು ಗಜಲ್ ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ ಮಧುರ ನೆನಪುಗಳೂ ಎದೆ ಕೊರೆದಾವೆಂಬ ಅರಿವಿರಲಿಲ್ಲ ನನಗೆ ಸುಖದ ಗಳಿಗೆಗಳೂ ಕೊರಳೊತ್ತಿ ಸಾಯಿಸುವವೆಂದು ತಿಳಿದಿರಲಿಲ್ಲ ನನಗೆ ಹೊಳೆದಂಡೆಯ ಪಿಸುಮಾತೂ ಲೋಕದ ತುಂಬ ಹಬ್ಬೀತೆಂದು ಅರ್ಥವಾಗಲಿಲ್ಲ ನನಗೆ ಗಾಳಿಯಲಿ ಹೊಯ್ದಾಡುವ ನಂದಾದೀಪವೂ ಜ್ವಾಲೆಯಾಗಿ ಸುಡುವುದು ತಿಳಿದಿರಲಿಲ್ಲ ನನಗೆ ಜೋಡಿ ಮಂಚದ ಮೆತ್ತನೆಯ ಹಾಸಿಗೆಯೂ ಚುಚ್ಚುವುದೆಂದು ಗೊತ್ತಿರಲಿಲ್ಲ ನನಗೆ ಸುಖದ ಉನ್ಮಾದವಷ್ಟೇ ...

  • 1 day ago No comment

   ಬದುಕು ಬರಿ ಗಿಲೀಟು

   (ಗಜಲ್) ದಾರಿ ಹೋದ ಹಾಗೆ ಸಾಗಿ ಬದುಕು ಬರಿ ಗಿಲೀಟು ಹೊತ್ತು ಬಂದತ್ತ ಬಾಗಿ ಬದುಕು ಬರಿ ಗಿಲೀಟು ಹದ್ದುನೆರಳು ನೆನಪು ಕುಕ್ಕೆ ಕಣ್ಣು ಹುಗಿದು ಕೂತು ತನಗೆ ತಾನೆ ಮೋಸವಾಗಿ ಬದುಕು ಬರಿ  ಗಿಲೀಟು ಥಳುಕಿನ ಸಂತೆಗಳಲ್ಲಿ ನಮ್ಮತನವ ಮಾರಿ ಲಾಲಿ ಹುಸಿಗೆ ತಲೆಯ ತೂಗಿ ಬದುಕು ಬರಿ ಗಿಲೀಟು ತುಟಿಸಿಗದ ಕನಸಹಾಡು ಉರಿದು ಉಗಿದು ಬೂದಿ ಮಾಗಿಹಿಮದಿ ಕೆಂಡ ಕರಗಿ ಬದುಕು ಬರಿ ಗಿಲೀಟು ಜೊತೆಜೊತೆಯಲೆ ...

  • 2 days ago One Comment

   ನಾನು ಮತ್ತು ನೀನು

   ಜಾರಿಸಿ,ಚಿಮ್ಮಿಸಿ ಸುರಿಸಿ,ಹನಿಸಿ ಧುಮ್ಮಿಕ್ಕಿ ಬೋರ್ಗರೆದು ಜುಳುಜುಳುನೆ ನಕ್ಕು ನಲಿದ ನಿನ್ನೊಲವಿನ ಮಿಡಿತಕ್ಕೆ ರೂಪು ನಾನು *** ತೇಲಿದ್ದು, ಮುಳುಗಿದ್ದು ಅಲೆಗಳಲ್ಲಿ ಅನುರುಣಿಸಿದ್ದು ಆಳದಲಿ ಮುಳುಗಿ ಮಲಗಿದ್ದು ನಿನ್ನೆಲ್ಲ ಗುಟ್ಟುಗಳ ಗೌಪ್ಯದಿ ಕರಗಿಸಿ, ಅರಗಿಸಿಕೊಂಡು ಶಾಂತದಿ ಹರಿವ ನದಿಯು *** ನಿನ್ನೆ ಜಾರಿದ್ದು, ಇಂದು ಹರಿದದ್ದು, ನಾಳೆ ಧಾವಿಸಿ ಬಿಗಿದಪ್ಪುವುದು ವ್ಯತ್ಯಾಸವಿಲ್ಲದೆ ಕಾಲಗಮ್ಯವ ಕಡೆಗಣಿಸಿದ ಅನವರತ ಕನಸು *** ಆಳ ತಿಳಿಯದ ಅರ್ಥಕ್ಕೆ ಸಿಗದ ನೋಟದ ಅಳತೆಗೆ ದಕ್ಕದ ನಡೆದ ...


  POPULAR IN CONNECTKANNADA

  Type in
  Details available only for Indian languages
  Settings
  Help
  Indian language typing help
  View Detailed Help