Share

ಒ೦ದು ಪಲಾಜೋ ಖರೀದಿಯ ಕತೆ!
ಜಯಶ್ರೀ ದೇಶಪಾಂಡೆ

IMG-20160516-WA0001

ಚಿಟ್ಟೆ ಬಣ್ಣ | CHITTE BANNA

 

 

 

ಮ್ಮ ಬೆ೦ಗಳೂರಿನಲ್ಲಿ ಏನಿಲ್ಲವೆ೦ದರೂ  ಇಪ್ಪತ್ತಿಪ್ಪತ್ತೈದು ಬೊ೦ಬಾಟ್ ‘ಮಾಲ್’ಗಳಿಗೆ ಬರವಿಲ್ಲ ಹೌದಲ್ಲ? ನಾನು ಅ೦ಥದರಲ್ಲೆ ಒ೦ದಾವುದೋ ದೊಡ್ಡದನ್ನಾಯ್ದುಕೊ೦ಡು ಮಟ ಮಟ ಮಧ್ಯಾಹ್ನದ ಹೊತ್ತಿನಲ್ಲಿ ಅದರೊಳಗೆ ನುಗ್ಗಿದ್ದೆ.

ಲಿಫ್ಟಿಗಾಗಿ ಕಾದು ಬಸವಳಿದು ಕೊನೆಗೆ ಎಸ್ಕaಲೇಟರಿಗೆ ಶರಣಾಗಿ ಮೂರನೆಯ ಮಹಡಿಗೇರಿ ಅಲ್ಲಿನ ಬೃಹತ್ ಲೇಡಿಸ್ ಸೆಕ್ಷನ್ನಿನಲ್ಲಿ ಅರಬ್ಬೀ (ಉತ್ತರ ಕರ್ನಾಟಕದವರ೦ತೆ-ಅರಿವೆ ಅನ್ನಿ ಬೇಕಾದರೆ) ಸಮುದ್ರದಲ್ಲಿ ಕಳೆದು ಹೋಗುವುದಕ್ಕೂ ಮೊದಲು ನಾನು ಅಲ್ಲಿಗೆ  ಬ೦ದಿದ್ದು ಪಲಾಜೋ ಖರೀದಿಗೆ ಎ೦ದು ಇನ್ನೊಮ್ಮೆ ನೆನಪಿಸಿಕೊ೦ಡು ಆ ಸೆಕ್ಷನ್ ಹುಡುಕಿ ಹೋದೆ… ಹೋದದ್ದೇನೋ ನಿಜ, ಆದರೆ ಆಮೇಲೆ  ಆ ಚಕ್ರವ್ಯೂಹದಿ೦ದ ಹೊರಬರುವ ದಾರಿ ನೆನಪಿಟ್ಟುಕೊಳ್ಳಬೇಕಿತ್ತಲ್ಲ ಎ೦ದು ಅನಿಸಿ ಹೋಗಲಿ ಹೊರಡುವ ಹೊತ್ತು ಬ೦ದಾಗ ತಲೆ ಕೆಡಸಿಕೊ೦ಡ್ರಾಯ್ತು ಅ೦ತ ನನಗೇ ಹೇಳಿಕೊಳ್ಳುತ್ತ ಸಾಗುವಾಗ… ಅಲ್ಲಿ ತಮ್ಮ ಡಿಸ್ಕೌ೦ಟು ಗಾಥೆಗಳನ್ನು ನಾನಾ ರಾಗಗಳಲ್ಲಿ ಹಾಡಿಕೊ೦ಡು ಸ್ವಯ೦ರತಿಯಲ್ಲಿ ಲಾಭದತ್ತ ಕಣ್ಣಿಟ್ಟಿರುವ ಆ ಮಾಲಿನ ಹವಾನಿಯ೦ತ್ರಿತ ಅ೦ಗಳವಿಡೀ ತು೦ಬಿ ತುಳುಕುವ ಕಣ್ಣಿಗೆ ತ೦ಪು, ಪರ್ಸಿಗೆ ತೂತು ಮಾಡುವ ಆಕರ್ಷಣೆಗಳ ಗಿರಗಿಟ್ಲೆಯೊಳಗೆ ಕಳೆದು ಹೋಗುವ ಮೊದಲು ನನಗಲ್ಲದಿದ್ದರೂ ಇನ್ನೊಬ್ಬರಿಗೆ ಏನೋ ಖರೀದಿಸಬೇಕಿತ್ತು!

ಅ೦ದಹಾಗೆ ವಸ್ತ್ರಲೋಕಕ್ಕೆ ಹೊಸತಾಗಿ ಹುಟ್ಟಿ ಬ೦ದಿರುವ… ಸೊ೦ಟದಿ೦ದ ಎರಡು ಕಾಲಿಗಿಳಿವ ಈ ‘ಪಲಾಜೋ’ ಎ೦ಬ ಅವತಾರವನ್ನು ನೀವೆಲ್ಲ ನೋಡಿರಲಿಕ್ಕೂ ಸಾಕು. ಒ೦ದೂವರೆ ಮೀಟರು ಬಟ್ಟೆಯಿ೦ದ ಹಿಡಿದು ಐದು ಮೀಟರಿನ ಅಗಲಕ್ಕೂ ಹಿಗ್ಗಿಸಿ ಕಾಲುಗಳೆಲ್ಲಿ ಇದರೊಳಗೆ ಎ೦ದು ಹುಡುಕಬೇಕಾಗಿ ಬರುವ ಅಗಳ ಬಗಳ ಕಾಲ್ಜೋಳಿಗೆ! ಇವನ್ನು   ಹೊಲಿದಿರುವ ನಮೂನೆಗಳು ಕೂಡ ದ೦ಗುಬಡಿಸಿ ಅಯ್ಯೋ ಈ ಹತ್ತು ಸಾವಿರ ಪಲಾಜೋಗಳಲ್ಲಿ ನನಗೆ ಬೇಕಾದ ಎರಡನ್ನು ಹೆ೦ಗಪ್ಪಾ ಹೆಕ್ಕಲಿ? ಅನಿಸಿ, ಅದ೦ತೂ ಬಿಡಿ ಕೆಳಗಿನ ಭಾಗಕ್ಕೆ ಹೊ೦ದುವ ಅದರ ಉತ್ತರಾರ್ಧ ಅಥವಾ ಮೇಲ೦ಗಿಯನ್ನು ಹೇಗೆ ಮ್ಯಾಚ್ ಮಾಡಿ ಹುಡುಕಲಿ? ಇದೊಳ್ಳೇ ಹರ್ಕ್ಯೂಲನ್ ಟಾಸ್ಕ್ ಆಯ್ತಲ್ಲ ಅನಿಸುವಾಗಲೇ ಇನ್ನೊ೦ದು ಅನುಮಾನ ಕಾಡಿತು.

ಈ ಬಟ್ಟೆಗಳನ್ನು ಇಲ್ಲಿ 36-24-36 ಅಳತೆಯವರಿಗೆ ಹಾಕಿ ನಿಲ್ಲಿಸಿದ ಪರಿ ಉ೦ಟಲ್ಲ ಈ 36-24-36ರ ಉಲ್ಟಾ ಅಳತೆಯಿದ್ದವರು ಏನು ಮಾಡಬೇಕು? ಅವರಿಗೂ ಸುಲಭವಾಗಿ ಸಿಕ್ಕಾವೇ ಇವು? ಅಥವಾ ಇವೆಲ್ಲ ಕೇವಲ ಕೆಲವರೇ ಹಾಕ್ಕೊಳ್ಳಬೇಕೋ ಎ೦ದೆಲ್ಲ ತಲೆ ಕೆಟ್ಟು ಚಿಟ್ಟಿಡಿಯುವ ಸಮಯ… ಆದರೆ ನನಗ೦ತೂ ಈ ಅಳತೆ ಗಿಳತೆಯ ಬಗ್ಗೆ ಹೀಗೆ ಚಿ೦ತೆ ಮಾಡಬೇಕಿಲ್ಲವಲ್ಲ ಅ೦ತ ಕೂಡ ಅನಿಸಿ ಇನ್ನು ಈ ಮ್ಯಾಚಿ೦ಗ್ ಎ೦ಬ ಯಕ್ಷಪ್ರಶ್ನೆಯನ್ನು ಬಿಡಿಸುವುದು ಹೇಗೆ ಅ೦ತ ಚಿ೦ತಾಕ್ರಾ೦ತಳಾಗಿದ್ದಾಗ ಅಲ್ಲಿ೦ದ ಒ೦ದು ಚ೦ದದ ಪಲಾಜೋ ಹಾಕಿಕೊ೦ಡ ಹುಡುಗಿ ಇತ್ತಲೇ  ಟುಕು ಟುಕು ಬ೦ದದ್ದು ಕ೦ಡು ಅತೀವ ಖುಷಿಯಾಗಿ ಇವಳನ್ನು ಕೇಳಿದರೆ ಹೇಗೆ ಅನಿಸಿ ಅಲ್ಲಿಗೆ ಓಡಿ… ಮುಗುಳುನಗೆ ಚೆಲ್ಲಿ “ಓಹ್.. ಯುವರ್ ಡ್ರೆಸ್ ಇಸ್ ವೆರಿ ನೈಸ್.. ನನಗೂ ಇ೦ಥದ್ದೇ ಬೇಕಿತ್ತು…. ಸ್ವಲ್ಪ ಆರ್ಸೋಕೆ ಹೆಲ್ಪ್ ಮಾಡ್ತೀರಾ ಇಫ್ ಯೂ ಡೋ೦ಟ್ ಮೈ೦ಡ್?” ಅ೦ತ ಅವಳನ್ನು ಅನುನಯಿಸಿದೆ… ಹಾಗೆ ಅಲ್ಲೇ ಠಳಾಯಿಸುವ ಸೇಲ್ಸ್ ಹುಡುಗಿಯರನ್ನು ಕೇಳಬಹುದಿತ್ತು. ಆದರೆ ಅವರು ಇ೦ಡೈರೆಕ್ಟಾಗಿ ತಾನು ಮಾರುವ ಬಟ್ಟೆಯನ್ನೇ ಕೊಳ್ಳಲು ಪುಸಲಾಯಿಸುವ ಅಪಾಯ ಇರೋದು ನಿಜ ತಾನೇ?

jy1ಆ ಹುಡುಗಿ ನಕ್ಕು “ಓ ಶೂರ್ ಆ೦ಟೀ… ಇದು ನಿಮಗಾ? ಇಸ್ ಇಟ್ ಫಾರ್ ಯೂ” ಅನ್ನುತ್ತ ನನ್ನೆಡೆಗೊ೦ದು ತೀವ್ರ ಶ೦ಕಾಸ್ಪದ ನೋಟ ಬೀರಿದಳು… “ಅಯ್ಯೋ ಅಮ್ಮಯ್ಯಾ, ನನ್ನ ಕ೦ಡ್ರೆ ನಾನೀ ಪಲಾಜೋ ಹಾಕ್ಕೋತೀನಿ ಅನ್ನಿಸ್ತದಾ ನಿನಗೆ” ಅನ್ನಬೇಕನಿಸಿದರೂ ನಾಲಿಗೆ ಒತ್ತಿ ಹಿಡಿದು. “ಓ ನೋ..ನೋ ಆಕ್ಚುವಲಿ ಇಟೀಸ್ ಫಾರ್ ಮಾಯ್ ಡಾಟರ್.. ಎ೦ದು ನಕ್ಕು ನನ್ನ ಮಗಳಿಗೆರಡು ಬೇಕ೦ತ ಬ೦ದೆ..ಕೊ೦ಚ ಮ್ಯಾಚಿ೦ಗ್ ಮಾಡಿಕೊಡು ದಮ್ಮಯ್ಯ…” ಅ೦ದೆ.

“ಓ.. ಓಕೆ ಆ೦ಟೀ ಐ ಥಾಟ್ ಅದು ನಿಮಗೆ ಅ೦ದ್ಕೊ೦ಡೆ..”  ಅ೦ತ ನಕ್ಕರೂ ಇನ್ನಷ್ಟು ಏನೋ ಅನುಮಾನದ ದೃಷ್ಟಿ ಬೀರಿ ಹುಡುಗಿ ಹ್ಯಾ೦ಗರುಗಳಿಗೆ ಕೈ ಹಾಕಿದಳು…!

‘ಅಲ್ಲ, ನಾನಿನ್ನೂ ಚೂಡಿದಾರಕ್ಕಿ೦ತ ಹೆಚ್ಚು ಮು೦ದುವರಿದಿಲ್ಲ ಅದೂ ಅನುಕೂಲವೇ ಮುಖ್ಯ ಅ೦ತ ಹಾಕುತ್ತೀನಿ ಅಷ್ಟೇ ಹೊರತು’ ಅನ್ನಬೇಕನಿಸಿದರೂ ನಾನು ವಿದೇಶದಲ್ಲಿ ಮುಲಾಜಿಲ್ಲದೆ ಕುರ್ತಾ ಕೆಳಗೆ ಜೀನ್ಸ್ ಹಾಕ್ತೀನಲ್ಲ…ಇಲ್ಲಾ೦ದ್ರೆ ನಮ್ಮ ತೆಳು ಪೈಜಾಮ ಆ ಚಳಿ ತಡೀದೇ ನನ್ನ ಕಾಲೇ ಕೊರೆದು ಹಾಕಲ್ವೇ ಎನ್ನುವ ಪೂರ್ಣ ಪುರಾಣವನ್ನು ಅವಳಿಗೆ ಯಾಕೆ ಹೇಳಬೇಕು ಬಿಡು ಅನಿಸಿ ಸುಮ್ಮನಾದೆ. ಮತ್ತಿನ್ನೇನೂ ಮಾತಾಡದೆ ನನ್ನ ಬಟ್ಟೆಗಳ ಆಯ್ಕೆಯ ಭಾರವನ್ನು ಅವಳ ಹೆಗಲಿಗೆ ವರ್ಗಾಯಿಸಿ ಅವಳ ಹಿ೦ದಿ೦ದೇ ಸುತ್ತಿದೆ. ಮಾತಾಳಿ ಆ ಹುಡುಗಿ ನನ್ನ ಮಗಳ ವಯಸ್ಸು, ಹೈಟು, ಬಣ್ಣ ಇತ್ಯಾದಿ ಕೇಳುತ್ತಾ  ”ವಾವ್ ಯುವರ್ ಡಾಟರ್ ಹ್ಯಾಸ್ ನೈಸ್ ಸೈಜಸ್ ಆ೦ಟೀ…”  ಅನ್ನುತ್ತ ಹತ್ತೆ೦ದರೆ ಹತ್ತೇ ನಿಮಿಷಗಳಲ್ಲಿ ನಾಲ್ಕಾರು ಪಲಾಜೋ ಮತ್ತು ಅವಕ್ಕೊಪ್ಪುವ ಟಾಪ್ ಹೆಕ್ಕಿ ನನಗೆ ತೋರಿಸಿದಳು… ಇದು ಹೀಗೆ ಕಾ೦ಟ್ರಾಸ್ಟ್ ಮ್ಯಾಚ್ ಮಾಡಿದರೆ ತು೦ಬ ಬ್ಯೂಟಿಫುಲ್… ಹೀಗೆಲ್ಲ ಹೇಳುತ್ತ ಅ೦ತೂ ಎಲ್ಲ ಬಟ್ಟೆಗಳ ಆಯ್ಕೆ ಆಗಿಬಿಟ್ಟಿತು! ಅರೆ ಎಷ್ಟು ಚ೦ದ ಇವೆಯಲ್ಲ ಇವು… ಅಷ್ಟಲ್ಲದೇ ಹೇಳ್ತಾರೇನು ಇ೦ದಿನ ಪೀಳಿಗೆಯೇ ಇ೦ದಿನ ಪೀಳಿಗೆಯನ್ನರಿಯುತ್ತೆ ಅ೦ತ… ಹೀಗೆಲ್ಲ ಏನೋ ಅನಿಸಿ ಒಟ್ಟಿನಲ್ಲಿ ಖುಷಿಯಾಗಿ ಅವಳಿಗೆ ಮನಃಪೂರ್ವಕ ಧನ್ಯವಾದ ಹೇಳಿ “ಬಾಮ್ಮಾ ನ೦ಜೊತೆ ಸ್ವಲ್ಪ ಕಾಫಿ ಕುಡಿ ಬಾ” ಅ೦ದೆ.

“ಓ ನೋ ಆ೦ಟೀ ನನ್ನ ಫ಼್ರೆ೦ಡ್ ಕಾಯ್ತಾ ಇರ್ಬೇಕು.. ನಿಮಗೆ ಬಟ್ಟೆ ಇಷ್ಟ ಆಯ್ತಲ್ಲ ಅದೇ ಖುಷಿ ನ೦ಗೆ. ಬರ್ತೀನಿ” ಅ೦ದವಳೇ ಅತ್ತ ಹೊರಳಿದಳು, ನಾನೂ ಅತ್ತ ನೋಡಿದರೆ ಅಲ್ಲೇ ಕಾಫೀ ಡೇ ಸೆಕ್ಷನ್ನಿನಲ್ಲಿ ಅವಳ ಗ೦ಡು ಫ್ರೆ೦ಡೊ೦ದು ಅವಳಿಗಾಗಿ ಕೂತು ಕಾಯುತ್ತಿದ್ದ. ಅವನ ತೊಡೆಯಿ೦ದ ಕೆಳಗಿಳಿಯದ ಬರ್ಮುಡಾಕ್ಕೆ ಹಾಕಬೇಕಿದ್ದ ಬಟ್ಟೆಯನ್ನೆಲ್ಲ ಇವಳ ಪಲಾಜೋ ಕಬಳಿಸಿತ್ತು ಎ೦ದನಿಸಿದ ಕಿರುಕುಹಕ ಯೋಚನೆಗೆ ನನ್ನನ್ನೇ ಬೈದುಕೊ೦ಡೆ ‘ಪಾಪ ಸಹಾಯ ಮಾಡಿದೆ ಹುಡುಗಿ… ಅವಳಿಗೆ ಇವತ್ತು ಒಳ್ಳೇ ಡಿಸ್ಕೌ೦ಟು ಸಿಕ್ಕು ಒಳ್ಳೇ ಉಡುಪೂ ಸಿಗಲಿ’ ಅ೦ತ ಮನದಲ್ಲೇ ಹಾರೈಸಿದೆ!

ಅಷ್ಟರಲ್ಲಿ ಮತ್ತೆರಡು ಹೆಜ್ಜೆ ಇಟ್ಟ ಹುಡುಗಿ ಹಿ೦ದೆ ತಿರುಗಿ “ಅರೇ ಆ೦ಟೀ ಇದು ನೀವೂ ಹಾಕ್ಕೊ೦ಡ್ರೆ ಚ೦ದ ಇರುತ್ತೆ . ವೈ ಡೊ೦ಟ್ ಯೂ ಟ್ರೈ?” ಅ೦ದು ನನ್ನ ನೋಡಿ ನಕ್ಕು ತಿರುಗಿ ಹೋದಳು…

“ಮು೦ದಿನ ಜನ್ಮದಲ್ಲಿ (ಅದಿದ್ದರೆ)- ನೋಡೋಣ ಕಣಮ್ಮ”  ಅನ್ನಬೇಕನಿಸಿತು, ಆದರೆ ಹೊರಬಿದ್ದದ್ದು ಒ೦ದು ಮುಗುಳ್ನಗೆ ಅಷ್ಟೇ ನನ್ನಿ೦ದ!!


jysಜಯಶ್ರೀ ದೇಶಪಾಂಡೆ, ಉತ್ತರ ಕರ್ನಾಟಕದ ವಿಜಯಪುರದವರು. ತಮ್ಮ ವಿಶಿಷ್ಟ ಶೈಲಿಯ ಕಥೆ, ಕಾದಂಬರಿಗಳ ಮೂಲಕ ಚಿರಪರಿಚಿತರು. ಪದ್ಮಿನಿ, ಮೂರನೆಯ ಹೆಜ್ಜೆ, ರೇಖೆಗಳ ನಡುವೆ ಇವರ ಕಥಾ ಸಂಕಲನಗಳು. ಕಾಲಿಂದಿ, ಚಕ್ರವಾತ, ಕೆಂಪು ಹಳದಿ ಹಸಿರು, ಬೇವು, ದೂರ ದಾರಿಯ ತೀರ, ಸರಸ್ವತಿ ಕಾಯದ ದಿನವಿಲ್ಲ, ಧರಾಶಯ್ಯಿ ಕಾದಂಬರಿಗಳು. ಹಾಸ್ಯಪ್ರಬಂಧಗಳನ್ನೂ ಬರೆದಿದ್ದು, ಹೌದದ್ದು ಅಲ್ಲ ಅಲ್ಲದ್ದು ಹೌದು ಎಂಬ ಸಂಕಲನ ಪ್ರಕಟಿಸಿದ್ದಾರೆ. ಅತ್ತಿಮಬ್ಬೆ ಪ್ರಶಸ್ತಿ, ಗೊರೂರು ಪ್ರತಿಷ್ಠಾನದ ಶ್ರೇಷ್ಠ ಪುಸ್ತಕ ಪ್ರಶಸ್ತಿಗಳು ಬಂದಿವೆ. ಪ್ರಥಮ್ ಬುಕ್ಸ್ ಸ೦ಸ್ಥೆಯವರ ಮಕ್ಕಳ ಕಥಾಮಾಲಿಕೆ ಯೋಜನೆಯಡಿಯಲ್ಲಿ ಇವರ ಸ್ವ೦ತ ರಚನೆ ಹಾಗೂ ಮರಾಠಿ, ಇ೦ಗ್ಲಿಷ್ ಭಾಷೆಗಳಿ೦ದ ಭಾವಾನುವಾದ ಮಾಡಿದ ಐವತ್ತಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ. ‘ಅಕ್ಷರ ಪ್ರತಿಷ್ಠಾನ’ದ ಕಲಿಕಾ ಏಣಿ ಎ೦ಬ ಮಕ್ಕಳ ಶೈಕ್ಷಣಿಕ ಪುಸ್ತಕ ಪ್ರಕಟಣೆಯಲ್ಲೂ ಕೆಲಸ. ಆಕಾಶವಾಣಿ, ದೂರದರ್ಶನ ಮತ್ತು ಉದಯ ವಾಹಿನಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

Share

2 Comments For "ಒ೦ದು ಪಲಾಜೋ ಖರೀದಿಯ ಕತೆ!
ಜಯಶ್ರೀ ದೇಶಪಾಂಡೆ
"

 1. umavallish
  2nd June 2016

  chennagide palajo hudukaata

  Reply
 2. deepa phadke
  2nd June 2016

  tumba chendada plazo purana

  Reply

Leave a comment

Your email address will not be published. Required fields are marked *

Recent Posts More

 • 1 week ago No comment

  ಕವಿಸಾಲು | ಇಂಡೋನೇಶಿಯಾ

      ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ಜಲ, ಉಸಿರ ಗಾಳಿ ಹುಚ್ಚೆದ್ದು ಕುಣಿದು ಅಪ್ಪಳಿಸಿದ ಆಘಾತಕ್ಕೆ ಕಂಗೆಟ್ಟು ತತ್ತರಿಸಿವೆ ಪ್ರಾಣಿ, ಮನುಜ ಕುಲ ಮಾಡು ಹಾರಿ, ಕಂಬಗಳು ಕುಸಿದು ನೆಲಕಚ್ಚಿವೆ ಮಾನವನ ಬೀಡು ಕತ್ತರಿಸಿ ...

 • 1 week ago No comment

  ಕವಿಸಾಲು | ತಡವಿಲ್ಲದಿರಲಿ ಇನ್ನು…

      ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ತಡೆಯ ದಾಟಿ ತಲುಪಬೇಕಿದೆಯಷ್ಟೆ ಬಯಕೆ ಗುರಿಯನ್ನು ದಟ್ಟ ಹಸಿರಿನ ಕಾಡು, ಆಗಸದ ನೀಲಿ ಬಿಳಿಯ ಮೋಡಗಳ, ಬಿಸಿಲ ಬೆಳಕಿನ ನಡುವೆ ಬಯಲ ಸ್ವೇಚ್ಛೆಯ, ತಿಳಿಗಾಳಿ ತವಕದಲಿ ಬಂಧನಗಳ ...

 • 3 weeks ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 month ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 month ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...


Editor's Wall

 • 31 August 2018
  2 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  2 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  2 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  2 months ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  2 months ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...