Share

ಹೆಣ್ಣುದೇಹ ಗುರುತಿಸುವ ಗುಟ್ಟು
ಚೇತನಾ ತೀರ್ಥಹಳ್ಳಿ ಕಾಲಂ

IMG-20160516-WA0001

ಪ್ರಸ್ತಾಪ | PRASTAPA

 

 

 

chatena 01ಹಳ ಸರ್ತಿ ಗಮನಿಸಿದ್ದೀನಿ. ಚಿತ್ರ ಬಿಡಿಸುವಾಗೆಲ್ಲ ನನ್ನ ಮೈಯೊಳಗೆ ಹೊನ್ನ ಬಿಸಿಲಿನ ಚೂರು ಹೊಕ್ಕಂತೆ ಅನ್ನಿಸುತ್ತದೆ. ಆ ತನ್ಮಯತೆಯೊಳಗೂ ಒಂದು ನೆನಪು ಹಾದು ತುಟಿ ಬಿರಿಯುತ್ತ ಸುಖಿಸುತ್ತದೆ. ಅದರಲ್ಲೂ ಹೆಣ್ಣಿನ ದೇಹ ಬಿಡಿಸಿ ಎದೆ ತುಂಬುವಾಗ, ಒಮ್ಮೆ ಕೂಡ ತಪ್ಪದಂತೆ ಮನಸ್ಸು ಬಾಲ್ಯದಲ್ಲಿ ಕಾಲದ್ದಿ ತೆಗೆಯುತ್ತದೆ.

~

‘ನವೆಂಬರ್ ಹದಿನಾಲ್ಕಕ್ಕೆ ಕುಶಾವತಿ ಪಾರ್ಕಲ್ಲಿ ಚಿತ್ರಬರೆಯುವ ಸ್ಪರ್ಧೆ ಇದೆ. ನಾಳೆ ಒಳಗೆ ಹೆಸರು ಕೊಡಿ’ ಗ್ರೇಸಿ ಟೀಚರ್ ಘೋಷಿಸಿದರು. ಓಹ್! ಕುಶಾವತಿ ಪಾರ್ಕಿಗೆ ಹೋಗಬೇಕನ್ನೋದು ನಮ್ಮ ಯಾವತ್ತಿನ ಪ್ಲಾನು…. ಸರಿಸುಮಾರು ಊರ ಹೊರಗೇ ಇದ್ದ ಪಾರ್ಕಿಗೆ ನಾವು ನಾವೆ ಹೋಗಲು ಬಿಡುತ್ತಲೇ ಇರಲಿಲ್ಲ. ಸಂಜೆ ನಾನು, ವಿದ್ಯಾ ಕೂತು ನಿರ್ಧಾರ ಮಾಡಿಕೊಂಡೆವು. ಮರುದಿನಕ್ಕೆ ನಮ್ಮ ಹೆಸರುಗಳು ದಾಖಲಾಗಿದ್ದೂ ಆಯ್ತು. ನವೆಂಬರ್ ಹದಿನಾಲ್ಕು ಬಂದೇಬಂತು. ಬಾಳೆಹಣ್ಣು, ಬಿಸ್ಕತ್ತು, ಒಂದು ಬಾಟಲ್ ನೀರು ಹಿಡಿದುಕೊಂಡು ಮೂರು ಕಿಲೋಮೀಟರ್ ನಡೆದು ಪಾರ್ಕು ಸೇರಿದೆವು. ಮರದ ನೆರಳು ಹುಡುಕಿಕೊಂಡು ಸಾವಧಾನ ಕುಳಿತೆವು. ವಿದ್ಯಾಳ ಉಪಾಯದಂತೆ ಮೊದಲು ತಿಂಡಿ ತಿಂದು ಮುಗಿಸಿದೆವು. ಒಬ್ಬೊಬ್ಬರಾಗೇ ತಮ್ಮ ಚಿತ್ರಗಳನ್ನು ಒಪ್ಪಿಸಲು ಶುರು ಮಾಡಿದ ಮೇಲೆಯೇ ನಾವು ಪೆನ್ಸಿಲ್ ಹಿಡಿದಿದ್ದು. ನಾನು ಏನೂ ತೋಚದೆ ರಟ್ಟಿನ ಮೇಲಿದ್ದ ಕಾರ್ಟೂನ್ ಆನೆಯನ್ನೆ ನಕಲು ಮಾಡಿದೆ. ವಿದ್ಯಾ ದೇಹಾಕೃತಿ ಬಿಡಿಸಿ, ಎದೆಯ ಮೇಲೆರಡು ಚುಕ್ಕಿ ಇಟ್ಟು ಅವಕ್ಕೆ ಸೊನ್ನೆ ಸುತ್ತಿದಳು. ‘ಅದ್ಯಾಕೆ?’ ನನ್ನ ಕುತೂಹಲ. ‘ರವೀಶ ಹೇಳಿಕೊಟ್ಟಿದ್ದು. ಹಿಂಗೆ ಬರೆದ್ರೆ ಹುಡುಗಿ ಅಂತೆ’ ಅವಳ ಉತ್ತರ. ಪುಣ್ಯಕ್ಕೆ ಅವಳ ಚಿತ್ರ ಹಾಳಾಗಿ, ಕೊನೆಗೆ ನವಿಲು ಬಿಡಿಸಿ ಮುಗಿಸಿದಳು. ಆ ಹೊತ್ತಿಗೆ ಮುಕ್ಕಾಲು ಪಾರ್ಕು ಖಾಲಿ ಆಗಿತ್ತು. ನಾವು ಇನ್ಸ್ಟ್ರಕ್ಟರ್‌ಗಳ ಕಣ್ತಪ್ಪಿಸುತ್ತ, ಪೂರ್ತಿ ಖಾಲಿಯಾಗುವವರೆಗೆ ಕಾದೆವು.

ಗಂಟೆ ಎರಡು ಮುಟ್ಟುತ್ತಿತ್ತು. ಕೊಳಕ್ಕಿಳಿದು ಸ್ವಲ್ಪಹೊತ್ತು ಆಡಿದೆವು. ನೆಲದ ಮೇಲೆ ಬಿದ್ದಿದ್ದ ರಾಮಡಿಕೆಗಳನ್ನೆಲ್ಲ ಚೀಲಕ್ಕೆ ತುಂಬಿದೆವು. ಬನ್ನಿ ಮರವನ್ನ ತಬ್ಬಿ ಖುಪಟ್ಟೆವು. ಮಂಟಪದೊಳಗೆ ಕೂತು ರಾಮಡಿಕೆಗಳನ್ನ ಜಜ್ಜಿ ತಿಂದೆವು. ಯಾರೋ ಗೇಟಿನ ಹೊರಗಿಂದಲೇ ಗದರಿದರು. ನಾವು ನಗುತ್ತಲೇ ಅವರಿಗೆ ಟಾಟಾ ಮಾಡಿ ಹೊರಟೆವು. ಕುಶಾವತಿ ಪಾರ್ಕಿನ ನಮ್ಮ ಪಿಕ್ನಿಕ್ ತೃಪ್ತಿ ಕೊಟ್ಟಿತ್ತು. ಒಂದು ಐಸ್ಕ್ಯಾಂಡಿ ಕೊಂಡು ಸರತಿಯಂತೆ ಚೀಪುತ್ತ ಗದ್ದೆ ಬಯಲು ದಾಟಿದೆವು. ಮನೆ ಹತ್ತಿರ ಬಂತೆಂದು ಬೇಜಾರುಪಟ್ಟೆವು.

ಅಲ್ಲೇ ಬದಿಯ ಕಲ್ಲು ಬೆಂಚಿನ ಮೇಲೆ ಕುಂತು ಚೀಲದಲ್ಲಿ ಉಳಿದಿದ್ದ ರಾಮಡಿಕೆಗಳ ಧ್ವಂಸ ಕಾರ್ಯ ಶುರುವಿಟ್ಟೆವು. ವಿದ್ಯಾ ಅವುಗಳನ್ನ ಜಜ್ಜುತ್ತಿದ್ದರೆ, ನನಗೆ ನಾವಿಬ್ಬರೂ ಹಿಂದೊಮ್ಮೆ ಅಲ್ಲೇ ಹಾಗೇ ಕೂತು ತಿಂದಿದ್ದ ನೆನಪಿನಂಥ ಭಾವ ಹಾದು ಹೋಯ್ತು. ರೋಮಗಳಿನ್ನೂ ನಿಂತಿರುವಾಗಲೇ ಅದನ್ನ ವಿದ್ಯಾಳಿಗೆ ಹೇಳಿದೆ. ಅವಳು ಗಾಬರಿಯಾಗುವ ಹೊತ್ತಿಗೆ ನಾನೇ ಸಾವರಿಸಿಕೊಂಡು ‘ಕಲ್ಪ’ಗಳ ಕಥೆ ಹೇಳಿದೆ, ನನ್ನ ಆ ವಯಸ್ಸಿನ ಪಾಂಡಿತ್ಯಕ್ಕೆ ನಿಲುಕಿದ್ದಂತೆ!

~

ಈಗಲೂ ಆಗಾಗ, ಚಿತ್ರ ಬಿಡಿಸುವಾಗ ಆ ಎಳೆ ಮಧ್ಯಾಹ್ನದ ಬಿಸುಪು ಸೋಕಿದಂತಾಗುತ್ತದೆ. ರಾಮಡಿಕೆಯ ಚೊಗರು ನಾಲಿಗೆ ಮೇಲೆ. ಹೆಣ್ಣುದೇಹ ಗುರುತಿಸುವ ಗುಟ್ಟು ಕಲಿತ ಹೆಮ್ಮೆಯ ಪುನರಾವರ್ತನೆಯೂ ಜತೆಗೆ. ಹಾಗೇ ಇವತ್ತಿನುದ್ದಕ್ಕೂ ಇರುವ ರೋಮಾಂಚಕ ಅನುಭಾವದ ಮೊದಲ ಅನುಭವದ ನೆನಪು….
ನನ್ನ ಪಾಲಿನ ವಿನಾಕಾರಣ ಖುಷಿಯ, ಅತ್ಯಂತ ನಿರುಮ್ಮಳದ, ಸುಖದ ದಿನಗಳಲ್ಲಿ ಅದೂ ಒಂದು. ಆ ದಿನದ ನೆನಪು ಮೈಹೊಕ್ಕು ಚಿತ್ರ ಬಿಡಿಸುವ ಹುರುಪು ಹೆಚ್ಚಿದಂತಾಗುತ್ತದೆ, ಎಷ್ಟೇ ಕೆಟ್ಟದಾಗಿ ಬಿಡಿಸುತ್ತಿದ್ದರೂನು!

————-

che1ಚೇತನಾ ತೀರ್ಥಹಳ್ಳಿ. ಅಲಾವಿಕಾ ಮತ್ತೊಂದು ಕಾವ್ಯನಾಮ. ಫ್ರೀಲಾನ್ಸ್ ಪತ್ರಕರ್ತೆ ಮತ್ತು ಬರಹಗಾರ್ತಿ. ಪ್ರಕಟಿತ ಪುಸ್ತಕಗಳು: ‘ಉಫೀಟ್’, ‘ಗುಟ್ಟು ಬಚ್ಚಿಡಲು ಬರುವುದಿಲ್ಲ’, ‘ಶಬರಿಯ ಅವಸರ’ ಕವನ ಸಂಕಲನಗಳು; ‘ಸೂರ್ಯನೆದೆಯ ನೀರ ಬೀಜ’ ಅಚ್ಚಿನಲ್ಲಿದೆ. ‘ಭಾಮಿನಿ ಷಟ್ಪದಿ’ ಮತ್ತು ‘ಬಿಸಿಲ ಚೂರಿನ ಬೆನ್ನು’ ಅಂಕಣ ಬರಹಗಳ ಸಂಗ್ರಹ; ‘ಲಾ ಕಾಲಮ್’ ಅಚ್ಚಿನಲ್ಲಿದೆ. ‘ಬ್ಲಾಗಿಸು ಕನ್ನಡ ಡಿಂಡಿಮವ’ ಸಂಪಾದಿತ ಕೃತಿ. ಕಾಸ್ಮಿಕ್ ಜೋಕ್, ಕ್ಲೌಡ್ ನೈನ್ ಮತ್ತು ಐ ಆಮ್ ಅನದರ್ ಯು ಇಂಗ್ಲಿಷಿನಿಂದ ಅನುವಾದಿಸಿದ ಕೃತಿಗಳು. ‘ನೀಲಿ ಬಾನಿನಲ್ಲಿ ಕೆಂಪು ಸೂರ್ಯ: ಜೆ ಎನ್ ಯು ಭಾಷಣಗಳ ಸಂಗ್ರಹಾನುವಾದ’ ಸದ್ಯದಲ್ಲೇ ಬಿಡುಗಡೆಯಾಗಲಿರುವ ಪುಸ್ತಕ.

Share

Leave a comment

Your email address will not be published. Required fields are marked *

Recent Posts More

  • 3 days ago No comment

    ಈ ಸಂಜೆ ಪ್ರಿತಿಯೊಡನೆ…

        ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...

  • 4 days ago No comment

    ಯಾವುದು ಈ ಧಾವಂತದ ದಿಕ್ಕು?

      ನ್ಯಾಯದ ಬಾಗಿಲಲ್ಲಿ ನ್ಯಾಯವಾಗಿ ಹೋಗುವವರಿಗೆ ಮಾತ್ರ ಪ್ರವೇಶ ಇಲ್ಲ, ಆದರೆ ನ್ಯಾಯವಲ್ಲದ, ಅದರ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದವರಿಗೆ ಮಾತ್ರ ಹಾರ ತುರಾಯಿಗಳೊಂದಿಗೆ ಭರ್ಜರಿ ಆಹ್ವಾನ.       रिमझिम गिरे सावन, सुलग सुलग जाये मन भीगे आज इस मौसम में लगी कैसी ये अगन ಏನೋ ಒಂದು ಜ್ವಾಲೆ, ಏನೋ ಒಂದು ಉರಿ, ಏನೋ ಒಂದು ಚಡಪಡಿಕೆ, ಒಂಥರಾ ಬೂದಿ ...

  • 6 days ago No comment

    ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                        ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

  • 1 week ago No comment

    ಕೈಯ ಕನ್ನಡಿ ಹಿಡಿದು…

          ಕವಿಸಾಲು       ಕಾಲವೊಂದಿತ್ತು… ಕೈಯ ಕನ್ನಡಿ ಹಿಡಿದು ಕುರುಳ ತಿದ್ದುವ ನೀರೆ ನಾನಾಗ.. ದಶಕಗಳ ಕಾಲ ಸಂದಿದೆ… ಈಗ, ಆ ಕನ್ನಡಿಯೂ ಇಲ್ಲ… ಆ ಚೆಲುವಿನ ಮೋಡಿಯೂ ಇಲ್ಲ.. ನೆರಿಗೆ ತುಂಬಿದ ಕೈ.. ನರೆಗೂದಲು ತುಂಬಿದ ಬೆಳ್ಳಿಬುಟ್ಟಿ ತಲೆ.. ಆಸರೆ ಬಯಸುವ ದೇಹ… ಪ್ರೀತಿಗಾಗಿ ಕಾತರಿಸುವ ಕಂಗಳು… ನಗುವ ಹುಡುಕಿ ಬಿರಿಯಲೆಳಸುವ ಬೊಚ್ಚು ಬಾಯಿ‌.. ‌ಹೃದಯದಾಳದಿಂದ ಬಂದರೂ ನಾಲಿಗೆಯಡಿಯಲ್ಲಿ ಹೇಳಬಯಸುವ ನುಡಿಗಳು ...

  • 1 week ago No comment

    ಇಳಿಸಂಜೆಯ ಪ್ರೀತಿ

    ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...


Editor's Wall

  • 15 February 2018
    6 days ago No comment

    ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                        ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

  • 12 February 2018
    1 week ago No comment

    ಇಳಿಸಂಜೆಯ ಪ್ರೀತಿ

    ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

  • 11 February 2018
    1 week ago One Comment

    ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

      ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...

  • 11 February 2018
    1 week ago No comment

    ನಿಮಗಿಂತ ಹೆಚ್ಚು ನಿರ್ಜೀವ

            | ಕಮಲಾದಾಸ್ ಕಡಲು       ಇಂದಿರಾಗಾಂಧಿ ಬಿಟ್ಟರೆ… (Next to Indira Gandhi) ಕಮಲಾದಾಸ್ ಕವಿತೆಯ ಅನುವಾದ       ಇಂದಿರಾಗಾಂಧಿಯನ್ನು ಬಿಟ್ಟರೆ, ನಾನು ಅತಿ ಹೆಚ್ಚು ಹೆದರಿದ್ದು ನನ್ನ ಅಪ್ಪನಿಗೆ ಮಾತ್ರ ನಾನು ಐದು ವರ್ಷದವಳಿರುವಾಗ ಅವರೇ ನನಗೆ ಹೇಳಿದ್ದು ಕಪ್ಪು ಮಕ್ಕಳು ಬಿಳಿಬಣ್ಣದ ಬಟ್ಟೆಗಳನ್ನು ಮಾತ್ರ ತೊಡಬೇಕೆಂದು. ಬೆಳೆಯುವ ದಿನಗಳಲ್ಲಿ ಕಳೆದುಹೋದಂತಿರುತ್ತಿದ್ದ, ಬಡಕಲಾಗಿದ್ದ, ಹಲ್ಲಿಗೆ ಕ್ಲಿಪ್ ...

  • 08 February 2018
    2 weeks ago No comment

    ಇದು ಕ್ರಾಂತಿ ಪರ್ವ

                      ಪ್ಯಾಸಿಸ್ಟ್ ನೀತಿಯೆಡೆಗೆ ಆಡಳಿತ ವೈಖರಿ ಹೊರಳುತ್ತಿದೆ ಎನ್ನುವಾಗ ಕ್ರಾಂತಿಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಎನ್ನುವುದನ್ನು ಮನದಟ್ಟು, ಮಾರ್ಗದರ್ಶನ ಮಾಡಿಸಬೇಕಾದವರೇ ಹೋರಾಟಕ್ಕೆ ತಣ್ಣೀರು ಹೊಯ್ಯೊತ್ತಿರಬಹುದೇ ಎನ್ನುವ ಗುಮಾನಿ ಕಾಡದಿರುವುದಿಲ್ಲ.   ಮೊನ್ನೆ ಮನ್ಸೋರೆ (ಮಂಜುನಾಥ ಸೋಮಕೇಶವ ರೆಡ್ಡಿ) ನಿರ್ದೇಶನದ ‘ಹರಿವು’ ಚಿತ್ರ ನೋಡುವಾಗ ಅದೆಷ್ಟು ಸಲ ಕನ್ನಡಕ ತೆಗೆದು ಕಣ್ಣೊರೆಸಿಕೊಂಡೆನೋ! ಆಶಾ ಬೆನಕಪ್ಪ ಅವರು ಪ್ರಜಾವಾಣಿಯಲ್ಲಿ ಬರೆದ ...