Share

ಟೆಸ್ಸಿ, ಪ್ರಿಯ ಟೆಸ್ಸೀ
ಎಂ ಆರ್ ಭಗವತಿ ಕಾಲಂ

IMG-20160516-WA0001

ಚಿಟ್ಟೆ ಬಣ್ಣ | CHITTE BANNA

 

bhagvati(1)‘Tess’ is a love song with a tragic ending- the best kind of love song of all

– Roger Ebert

ನ್ನನ್ನು ಸದಾ ಕಾಡುವ ಲೇಖಕ ಥಾಮಸ್ ಹಾರ್ಡಿ. ಅವನು ಚಿತ್ರಿಸಿದ ’ಟೆಸ್’ ಅಂತೂ ಸದಾ ನೆನಪಾಗುವ, ಹೃದಯ ಆರ್ದ್ರ ಗೊಳಿಸುವ ಆ ನೆನಪಿನ ಒರತೆಯಲ್ಲಿ ಮಿಂದಷ್ಟೂ ನಮ್ಮನ್ನು ಆಳದಲ್ಲಿ ತೇಲಿಸುವ, ಮುಳುಗಿಸುವ ಪಾತ್ರ. ಟೆಸ್ ನಮಗೆ ಇಷ್ಟವಾಗುವುದು ಅವಳ ಮಗು ಮನಸ್ಸಿನ ಆಂತರ್ಯಕ್ಕೆ. ಹಾರ್ಡಿ ಟೆಸ್ಸಳನ್ನು ‘infinitely gentle and  infinitely suffering thing’ ಎನ್ನುತ್ತಾನೆ. ಅವಳನ್ನು ಮದುವೆಯಾಗುವ ಏಂಜಲ್ ಹೇಳುತ್ತಾನೆ: “You are too much of a child, too immature. Too ignorant, I suppose”.  ’ನಿಸರ್ಗದ ಮಗಳು’ ಎಂದು ಬಣ್ಣಿಸುತ್ತಾನೆ.

t6

ಥಾಮಸ್ ಹಾರ್ಡಿ

t2ನೆನಪಾದಾಗೆಲ್ಲ ಕಣ್ಣಲ್ಲಿ ಹನಿ ತರಿಸುತ್ತಾಳೆ ಟೆಸ್. ಅದು ಸಾಲದೆಂಬಂತೆ  ಪೋಲಂಡ್‌ನ ರೋಮನ್ ಪೋಲನ್ಸ್ಕಿಯ ನಿರ್ದೇಶನದ ಚಲನಚಿತ್ರ ಟೆಸ್ ಹೃದಯದ ಹದವಾದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುತ್ತದೆ ! ಇನ್ನಷ್ಟು ತಳಮಳ ಎಬ್ಬಿಸುತ್ತಾಳೆ ಟೆಸ್. ಈ ಚಿತ್ರದ ಟೆಸ್‌ನ ಪಾತ್ರಧಾರಿ ಹಾರ್ಡಿಯ ಟೆಸ್‌ನ ಪ್ರತಿರೂಪ. ಅದೇ ಮಾಧುರ್ಯ, ಕೋಮಲತೆ, ಮುಗ್ದತೆ ಹೊರಸೂಸುವ ಕಣ್ಣುಗಳು, ಮುದ್ದು ಮುಖಕ್ಕೆ ಲಾಲಿ ಹಾಡುವ ಮೃದು ಕೂದಲ ರಾಶಿ. ಓಹ್ ! ಟೆಸ್ ಎಂಥ ಸುಂದರಿ !  ಅವಳ ಮುದ್ದಾದ ಹ್ಯಾಟಿಗೆ ಅಲೆಕ್ ಡರ್ಬಿವಿಲ್ ತಿಳಿ ಗುಲಾಬಿಗಳನ್ನು ಮುಡಿಸಿದಾಗ ಇನ್ನಷ್ಟು ಮುದ್ದಾಗಿ ಕಾಣುವ ಟೆಸ್ ಅರ್ಥಾತ್ ನಟಾಷ ಕಿನ್‌ಸ್ಕಿ ನಮ್ಮ ಹೃದಯದಲ್ಲಿ ತರಂಗಗಳನ್ನೇಳಿಸುತ್ತಾಳೆ. ನಾವಿಲ್ಲಿ ನೋಡುತ್ತಿರುವುದು ಪಾತ್ರಧಾರಿ  ನಟಾಷಳನ್ನಲ್ಲ. ಅವಳು ಏಂಜಲ್‌ನ ಪ್ರಿಯ ಟೆಸ್ಸೀಯೇ. ಅವಳು ಮದುವೆಯಾಗುವ ಏಂಜಲ್ ಕ್ಲೇರ್ ಕೂಡ ಚಿತ್ರದಲ್ಲಿ, ಕಾದಂಬರಿಯಲ್ಲಿ ನಮಗೆ ಪ್ರಿಯವಾಗುವ ಪಾತ್ರ. ಟೆಸ್‌ನ ಗೆಳತಿಯರಾದ, ಅವಳು ಕೆಲಸ ಮಾಡುವ ಡೈರಿ ಪಾರ್ಮ್ ನಲ್ಲಿ ಅವಳಿಗೆ ಜೊತೆಯಾಗುವ ಇಜ್ ಹ್ಯುಯೆಟ್, ಮರಿಯನ್, ಹಾಗು ಮತ್ತು ರೆಟ್ಟಿ   ಮೂವರು ಪಾತ್ರಧಾರಿಗಳು, ಪ್ರತಿಯೊಂದು ಮುಖ್ಯ ಪಾತ್ರಧಾರಿಗಳಲ್ಲಿಯೂ ಹಾರ್ಡಿಯ ಕಾದಂಬರಿಯ ಪಾತ್ರಗಳ ಪ್ರತಿರೂಪವನ್ನೇ ಕಾಣುತ್ತೇವೆ.

t5

ರೋಮನ್ ಪೋಲನ್ಸ್ಕಿ

ನಿರ್ದೇಶಕ ಪೋಲನ್ಸ್ಕಿ ನಮ್ಮನ್ನು ಖಂಡಿತ ನಿರಾಶೆ ಮಾಡುತ್ತಿಲ್ಲ. ಹಾರ್ಡಿಯ ಮೂಲ ಕಾದಂಬರಿಯನ್ನು ತೆರೆಯ ಮೇಲೆ ಅದೇ ಮೂಲ ಲಯದಲ್ಲಿ ಓದುತ್ತಿದ್ದೇವೆ, ದೃಶ್ಯದಲ್ಲಿ ಕಲ್ಪಿಸಿಕೊಳ್ಳುತ್ತಿದ್ದೇವೆ. ನಿಜ, ನಾವು ಕನಸು ಕಾಣುತ್ತಿಲ್ಲ!  ಕಾದಂಬರಿಯನ್ನು ಓದಿದ, ಈ ಚಿತ್ರವನ್ನು t3ನೋಡಿದ ಪ್ರತಿಯೊಬ್ಬರಿಗೂ ಇದು ಅನ್ನಿಸದಿರದು. ಅದು ಚಲನ ಚಿತ್ರದ ಪ್ರಥಮ ದೃಶ್ಯದಲ್ಲೇ ನಮಗೆ ಗೊತ್ತಾಗಿ ಬಿಡುತ್ತದೆ. ಚಿತ್ರ ಪೂರ್ಣ ನಮ್ಮನ್ನು ಆವರಿಸಿಕೊಳ್ಳುವುದು ಒಂದೇ ಲಯದಲ್ಲಿ, ವಿವಿಧ ತರಂಗಾಂತರಗಳಲ್ಲಿ… ಸಮುದ್ರದಲ್ಲಿ ಅಲೆಗಳು ಹುಟ್ಟಿ, ಏರಿ, ಇಳಿದು ಒಮ್ಮೆಲ್ಲೇ ಭಾರಿ ಅಲೆಯೊಂದು ಬಡಿದು ಒಂದು ಕ್ಷಣ ನಮ್ಮನ್ನು ಸ್ತಬ್ದಗೊಳಿಸುವ, ಕಂಪನಗೊಳಿಸುವ ರೀತಿಯದ್ದು. ಆ ಕಂಪನ ಮೆಲುವಾಗಿ ನಮ್ಮನ್ನು ತೀಡಿ, ತಳಮಳ ಹುಟ್ಟಿಸುವುದು ಚಿತ್ರವನ್ನು ನೋಡುವ ಹತ್ತು ಜನರಲ್ಲಿ ಐದು ಜನರಿಗಾದರು ಆಗದಿರದು. ಆ ತಳಮಳ ನಿಟ್ಟಿಸುರಾಗಿ ಬದಲಾಗುತ್ತದೆ ಚಿತ್ರ ಮುಗಿದ ಮೇಲೆ.  ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು ಎನ್ನುತ್ತಾಳೆ ಟೆಸ್ಸ್.

ಹಲವಾರು ಜನರು ಟೆಸ್ ಸಿನೆಮಾ ಮಾಡುವುದು ಶುದ್ಧ ಮೂರ್ಖತನ ಎಂದರಂತೆ.  ಆದರೆ ನನಗೆ ನನ್ನದೇ ಆದ ಅನುಮಾನಗಳಿವೆ ಎನ್ನುತ್ತಾರೆ ಪೊಲನ್‌ಸ್ಕಿ. ಹಾರ್ಡಿಯ ಟೆಸ್ ಅನ್ನು ಕನ್ನಡಕ್ಕೆ ಅನುವಾದಿಸಿರುವ ನಾಗರಾಜರಾವ್ ಅದೇ ಮಾಧುರ್ಯವನ್ನು ಕನ್ನಡಕ್ಕೆ ತಂದಿದ್ದಾರೆ.

ಇದನ್ನು ಬರೆಯುವ ವೇಳೆಗೆ ರೋಮನ್ ಪೋಲನ್ಸ್ಕಿ ಅಪ್ರಾಪ್ತ ಯುವತಿಯ ಮಾನಾಪಹರಣದ ಆರೋಪ ಎದುರಿಸುತ್ತಿದ್ದಾರೆ. ಜೀವಮಾನವೆಲ್ಲ ಗಳಿಸಿದ ಗೆಲುವನ್ನೆಲ್ಲ ಒಂದು ಅವಿವೇಕ ಮರೆಸುವುದನ್ನು ವಿಷಾದದಿಂದ ಹೇಳಬೇಕಾಗಿದೆ.

———-

bhagavathi1ಎಂ ಆರ್ ಭಗವತಿ ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ. ಹವ್ಯಾಸಿ ಬರಹಗಾರ್ತಿ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಎಂಎ ಪದವಿ.. ಮೂಲ ಆಸಕ್ತಿ ಬರವಣಿಗೆಯಾದರೂ, ಮೊದಲಿನಿಂದಲೂ ಛಾಯಾಗ್ರಹಣ ಬಹಳ ಇಷ್ಟವಾದ ಹವ್ಯಾಸ. ‘ಏಕಾಂತದ ಮಳೆ’ (೧೯೯೯) ಮತ್ತು ‘ಚಂಚಲ ನಕ್ಷತ್ರಗಳು’ (೨೦೦೫) ಪ್ರಕಟಿತ ಪುಸ್ತಕಗಳು.

 

Share

8 Comments For "ಟೆಸ್ಸಿ, ಪ್ರಿಯ ಟೆಸ್ಸೀ
ಎಂ ಆರ್ ಭಗವತಿ ಕಾಲಂ
"

 1. ಲಾವಣ್ಯ ಪ್ರಭಾ ಕೆ.ಎನ್.
  11th June 2016

  ಸುಮಾರು ಇಪ್ಪತ್ತು ವರ್ಷಗಳಿಂದ ಗೆಳತಿಯರಾಗಿದ್ದರೂ , ಭಗವತಿ ನಿನ್ನ ಬರಹ ಓದಿ ,ಮೊದಲ ಬಾರಿಗೆ ಸೋತು ಹೋದೆ ಕಣೇ…ಹೆಚ್ಚು ಹೆಚ್ಚು ಬರೀತಿರು.

  Reply
  • ಭಗವತಿ
   12th June 2016

   Thank you 🙂

   Reply
 2. 13th June 2016

  ಮೇಡಂ,ಭಾಷೆ ಭಾವಾಭಿವ್ಯಕ್ತಿಯನ್ನು ಅತ್ಯುತ್ತಮವಾಗಿ ಹಿಡಿದಿಟ್ಟಿದೆ.ಇನ್ನೂ ಬರೀರಿ….

  Reply
  • Bhagavathi
   4th July 2016

   ಥ್ಯಾಂಕ್ಸ್ ಪ್ರಸನ್ನ! ..ನೀವೂ ಕೂಡ ಬರೆಯಿರಿ !!

   Reply
 3. ಗೀತಾ ಡಿ.ಸಿ.
  31st July 2016

  Nice

  Reply
  • Bhagavathi
   3rd August 2016

   ಥ್ಯಾಂಕ್ಸ್ !

   Reply
 4. 18th August 2016

  ಸಡನ್ ಆಗಿ ಟೆಸ್ಸೀ ಅಂತ ಓದಿ ಈ ಕಾಲಂ ಓದಿದೆ. ಇವಳು ನನ್ನ ಆತ್ಮ ಸಖಿ.
  ಮೊದಮೊದಲು ಓದಿದಂದಿನಿಂದ ಹಿಡಿದು ಇಲ್ಲಿಯವರೆಗಿನ ನನ್ನ ೩೮ ವರ್ಷದಲ್ಲಿ ಯಾವುದು ನಿನ್ನ ಫೇವರಿಟ್ ಪುಸ್ತಕ ಒಂದೇ ಒಂದು ಹೇಳಬೇಕು ಅಂದ್ರೆ ಇದೇ ನನ್ನ ಇಷ್ಟದ ಪುಸ್ತಕ.
  ಆಮೇಲೆ ಮರಳಿ ಮಣ್ಣಿಗೆ.
  ನೀವು ಬರೆದ ಈ ಕಾಲಂ ತುಂಬ ಚೆಂದವಾಗಿ ಹಳೇ ವೆಸ್ಸೆಕ್ಸಿನ ಹಸಿರುಗುಡ್ಡದ ಹಾಗೇ ಬಂದಿದೆ.
  ಬೆಳಿಗ್ಗೆ ಮುಂಚೆ ಟೆಸ್ಸಿಯ ಕೈಯಿಂದ ಕರೆಯಲ್ಪಟ್ಟ ತುಂಬಿಸಿದ ನೊರೆಹಾಲಿನ ಹಾಗೆ. ಅಲೆ ಇಣುಕಿ ಏಂಜೆಲೋ ನಕ್ಕ ಹಾಗೆ.

  Reply
 5. ಭಗವತಿ
  20th August 2016

  ಧನ್ಯವಾದಗಳು ಸಿಂಧೂ ರಾವ್..!!

  Reply

Leave a comment

Your email address will not be published. Required fields are marked *

Recent Posts More

 • 13 hours ago No comment

  ಲವ್ ವಿದ್ ಫಸ್ಟ್ ಬುಕ್

    ಆ ದಿನ ಶಾಲಾ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತಡಕಾಡುತ್ತಿದ್ದ ನನಗೆ ವಿಶೇಷ ಪುಸ್ತಕವೊಂದು ಸಿಕ್ಕಿಬಿಟ್ಟಿತ್ತು. ಹೈಸ್ಕೂಲು ದಿನಗಳವು. ಆಗ ಸಾಹಿತ್ಯದ ಓದು ಹಾಗಿರಲಿ, ಸಾಮಾನ್ಯ ಓದೂ ಕೂಡ ಅಷ್ಟೇನೂ ಗಂಭೀರವಾಗಿ ಸಾಗುತ್ತಿರಲಿಲ್ಲ. ಓದಿನ ಹವ್ಯಾಸವು ಒಂದಷ್ಟಿದ್ದರೂ ಹೊಸ ಹೊಸ ವಿಷಯಗಳ ಪುಸ್ತಕಗಳನ್ನು ಹುಡುಕಿಕೊಂಡು ಹೋಗುತ್ತಿದ್ದ, ಈ ಬಗ್ಗೆ ಮಾಹಿತಿಯಿದ್ದ, ಓದಲು ಪರಿತಪಿಸುತ್ತಿದ್ದ ದಿನಗಳೇನೂ ಅದಾಗಿರಲಿಲ್ಲ. ಹೀಗಾಗಿ ಓದಿನ ವಿಚಾರಕ್ಕೆ ಬಂದರೆ ಅವುಗಳನ್ನು ನನ್ನ ಆರಂಭದ ದಿನಗಳೆಂದೇ ಹೇಳಬೇಕು. ರಜಾದಿನಗಳಲ್ಲಿ ...

 • 1 day ago No comment

  ಮೋದಿ ಮಾತಾಡಲಿಲ್ಲ

  ಎಷ್ಟೋ ಜೀವಗಳ ಸಂಕಟಕ್ಕೆ, ರೋದನಕ್ಕೆ ಕುರುಡಾಗುವ ಮನ ಕರಗದ ನಡೆಯು ಇನ್ನೆಂಥ ದಿನಗಳತ್ತ ದೂಡೀತೊ ಈ ದೇಶವನ್ನು ಎಂಬ ಪ್ರಶ್ನೆಯೇ ಬೃಹದಾಕಾರದ್ದು.   ಕತುವಾ ಅತ್ಯಾಚಾರ ಪ್ರಕರಣದಲ್ಲಿ ಎಂಟರ ಬಾಲೆಯ ದಾರುಣ ಸಾವಾಯಿತು. ಅದೊಂದು ತೀರಾ ಸಾಧಾರಣ ಘಟನೆಯಾಗಿರಲಿಲ್ಲ. ಅತ್ಯಂತ ಬರ್ಬರವಾದ ಆ ಘಟನೆ ಧರ್ಮ, ರಾಜಕೀಯ ಮತ್ತು ಅಧಿಕಾರದ ಮತ್ತಿನಲ್ಲಿ ನಡೆದದ್ದಾಗಿತ್ತು ಮತ್ತು ಆ ಮಗುವಿನ ಸಾವಿನ ಬಳಿಕವೂ ಅಮಾನವೀಯತೆಯೇ ಉದ್ದಕ್ಕೂ ಕಂಡುಬಂತು. ದೇಶವೇ ಬೆಚ್ಚಿಬಿದ್ದಿತ್ತು. ಆದರೆ ...

 • 2 days ago No comment

  ಇವರನ್ನು ನೋಡಿ…

  ನಡುವಯಸ್ಸಲ್ಲೇ ನಡುಮುರಿದವರಂತಾಗಿ ಒದ್ದಾಡುವವರ ಕಾಲ ಇದು. ಅತ್ಯಂತ ಕೆಟ್ಟ ಜೀವನಶೈಲಿಯೂ ಸೇರಿದಂತೆ ನೂರೆಂಟು ಅಪಸವ್ಯಗಳ ಪರಿಣಾಮವಾಗಿ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವ ನಮ್ಮ ನಡುವೆಯೇ ಸುಂದರ ಬದುಕು ನಡೆಸಿಕೊಂಡು ಬಂದು ಈಗಲೂ ಅದೇ ಸಡಗರದಲ್ಲಿ ಬದುಕುತ್ತಿರುವವರ ಆದರ್ಶವೂ ಇದೆ. ಇವರನ್ನು ನೋಡಿ ನಾವು ಕಲಿಯುವುದೂ ಬಹಳವಿದೆ. ಮಸ್ತಾನಮ್ಮ ಆಂದ್ರಪ್ರದೇಶದ ಈ ಅಜ್ಜಿ ನಿಮಗೆಲ್ಲ ಗೊತ್ತೇ ಇರುತ್ತಾರೆ. ಅಡುಗೆ ಶೋನಿಂದಾಗಿ ಖ್ಯಾತರಾಗಿರುವ ಇವರಿಗೆ ಈಗ ನೂರು ವರ್ಷ. ಜಗತ್ತಿನ ಅತ್ಯಂತ ಹಿರಿಯ ಯೂಟ್ಯೂಬರ್ ...

 • 2 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 2 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...


Editor's Wall

 • 18 April 2018
  2 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 18 April 2018
  2 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

 • 17 April 2018
  3 days ago No comment

  ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

  ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...

 • 16 April 2018
  4 days ago No comment

  ಹೆಣ್ಣು ಹಸುಳೆ ಈ ಪರಿ ತಬ್ಬಲಿಯಾಗುವುದೆ ಈ ದೇಶದಲ್ಲಿ?

  ಅಸೀಫಾ ಪ್ರಕರಣದಲ್ಲಿ ರಕ್ಕಸರನ್ನು ರಕ್ಷಿಸಲು ಯಾವ ಹೇಸಿಕೆಯೂ ಇಲ್ಲದೆ ರಾಜಕೀಯದವರೆನ್ನಿಸಿಕೊಂಡವರು, ಅಧಿಕಾರದಲ್ಲಿದ್ದವರು ಮತ್ತು ಸ್ವಯಂಘೋಷಿತ ಧರ್ಮರಕ್ಷಕರೆಲ್ಲ ಹೇಗೆಲ್ಲಾ ಪ್ರಯತ್ನಿಸಿದರು ಎಂಬುದನ್ನು ನೋಡಿದರೆ ಸೂರತ್‍ನಲ್ಲಿ ಹೆಣವಾಗಿ ಸಿಕ್ಕ ಬಾಲೆಯ ತಬ್ಬಲಿತನ ಕರುಳನ್ನು ಇನ್ನಷ್ಟು ಹಿಂಡುತ್ತದೆ. ದೇವರು, ಧರ್ಮದ ಹೆಸರು ಹೇಳಿಕೊಂಡು ಈ ದೇಶವನ್ನು ಹರಿದು ತಿನ್ನುತ್ತಿರುವವರು ಅದೇ ದೇವರ ಎದುರಲ್ಲೇ ಪುಟ್ಟ ಕಂದನ ಮೇಲೆ ರಣಹದ್ದುಗಳಂತೆ ಎರಗಿ ಅತ್ಯಾಚಾರವೆಸಗಿ ಕೊಲೆಗೈಯುವುದು, ಆ ರಕ್ಕಸರನ್ನು ಕಾಯಲು ಅಧಿಕಾರಸ್ಥರು ಇನಿತೂ ಪಾಪಪ್ರಜ್ಞೆ ಮತ್ತು ...

 • 14 April 2018
  5 days ago No comment

  ‘ಹೆಣ್ಣನ್ನು ದಲಿತ ಗಂಡಸರು ನೋಡುವುದೂ ಲಿಂಗತರತಮದ ಕಣ್ಣಿಂದಲೇ!’

  ವ್ಯವಸ್ಥೆಯನ್ನು ಆಳುವ ಗಂಡಸರು ಮಹಿಳೆಯರನ್ನು ನೋಡುವ ದೃಷ್ಟಿ, ಅವರೆಲ್ಲ ತಾವು ಹೇಗೆ ಬೇಕಾದರೂ ಬಳಸಿಕೊಳ್ಳುವುದಕ್ಕಿರುವ ಸ್ವಂತ ಆಸ್ತಿ ಎಂಬುದೇ ಆಗಿದೆ.   “ಹೆಣ್ಣೆಂದರೆ ಲಿಂಗತರತಮ ದೃಷ್ಟಿಯಿಂದ ನೋಡುವುದರಲ್ಲಿ ದಲಿತ ಗಂಡಸರೂ ಬೇರೆ ಗಂಡಸರ ಹಾಗೆಯೇ” ಎನ್ನುತ್ತಾರೆ ಮರಾಠಿಯ ಖ್ಯಾತ ದಲಿತ ಕವಯತ್ರಿ ಪ್ರದ್ನ್ಯಾ ಪವಾರ್. ಮರಾಠಿ ಲೇಖಕ, ಆತ್ಮಕಥೆ ಬರೆದ ಮೊದಲ ದಲಿತ ಬರಹಗಾರನೆಂಬ ಹೆಗ್ಗಳಿಕೆಯಿರುವ ದಯಾ ಪವಾರ್ ಅವರ ಪುತ್ರಿ ಪ್ರದ್ನ್ಯಾ ಪವಾರ್, ‘ಲೈವ್ ಮಿಂಟ್‍’ಗೆ ಕೊಟ್ಟಿರುವ ...