Share

ಮೀನುಗಳು
ಚೇತನಾ ತೀರ್ಥಹಳ್ಳಿ ಕಾಲಂ

IMG-20160516-WA0001

ಚಿಟ್ಟೆ ಬಣ್ಣ | CHITTE BANNA

 

 

 

chatena 01 ಕೆರೆ ದಂಡೆಯ ಮೇಲೆ ಅಡಿಕೆ ಟೊಪ್ಪಿಯ ಮುದುಕ ಗಾಳ ಇಳಿಬಿಟ್ಟುಕೊಂಡು ಕೂತಿರುತ್ತಾನೆ. ಅವನು ಹಾಗೆ ಅಲ್ಲಿ ಸಂಜೆಗಳಲ್ಲಿ ಗಾಳ ಇಳಿಬಿಟ್ಟು ಕೂರೋದು ಅಲ್ಲಿ ಬಟ್ಟೆ ಒಗೆಯಲು ಬರುವ ಹೆಂಗಸರನ್ನ ನೋಡಲು. ಆ ಹೆಂಗಸರೋ ಬೇಕಂತಲೇ ಅಥವಾ ಹೆಚ್ಚಿನ ಧೈರ್ಯದಿಂದಲೇ ಮುದುಕನ ಎದುರು ಪೋಲಿ ಹರಟುತ್ತ, ತಮ್ಮ ತಮ್ಮ ‘ಒಡೇರು’ಗಳ ಪಂಚಾಂಗ ಬಿಚ್ಚುವರು. ಅವರದೆಲ್ಲ ಕೆಲಸ ಮುಗಿದು ಹೊರಡುವಷ್ಟರಲ್ಲಿ ಮುದುಕನ ಬುಟ್ಟಿಗೆ ಒಂದಾದರೂ ಮೀನು ಬಿದ್ದಿರುತ್ತದೆ. ಅಥವಾ ಗೊದಮೊಟ್ಟೆ. ಅಡಿಕೆ, ಹೊಗೆಸೊಪ್ಪು ಜಗಿದು ಕಪ್ಪುಗಟ್ಟಿದ ಹಲ್ಲು ಬಿಟ್ಟುಕೊಂಡು ಅವ ‘ಬೇಕ್ರಾ?’ ಅನ್ನುವನು. ಹೆಂಗಸರೆಲ್ಲ ಬೇಕಂತಲೇ ಸೆರಗು ಸರಿ ಮಾಡಿಕೊಳ್ಳುತ್ತ ಚೋರು ಬಾಯಲ್ಲಿ ನಕ್ಕು ‘ಅಯ್! ತಗೀ…’ ಅಂದುಕೊಂಡು ಹೊರಡುತ್ತಾರೆ.

ಯಾವತ್ತಿನಂತೆ ಕೊಟ್ಟೆ ಸುರುವಿಕೊಂಡು ತೂರಾಡುತ್ತ ಕೆರೆ ಬದಿಯಲ್ಲಿ ಅವನ ಹೆಂಡತಿ ಬರುವುದು ಕಾಣುತ್ತಲೇ ಮುದುಕ ಓಟಕೀಳುತ್ತಾನೆ. ಅವನ ಬುಟ್ಟಿಯಿಂದ ಮೀನೊಂದು ತಳಮಳಿಸಿ ಬಿದ್ದು ಮಣ್ಣಲ್ಲಿ ಹೊರಳುತ್ತದೆ. ಅದು ಸಾಯದಿರಲೆಂದು ಎತ್ತಿ ಕೆರೆಗೆ ಬಿಡಬೇಕು ಅಂದುಕೊಳ್ಳುತ್ತೇನೆ. ಅಥವಾ, ಸತ್ತರಷ್ಟೆ ಸುಖ ಅನ್ನುವ ನನ್ನ ನೆಚ್ಚಿಕೆಗೆ ಜೋತುಕೊಂಡು ಅದನ್ನ ಸಾಯಲು ಬಿಟ್ಟುಬಿಡುತ್ತೇನೆ.

ಅಲ್ಲಾ…. ಸಾವಿರಾರು ವರ್ಷಗಳಿಂದ ಮನುಷ್ಯ ಮೀನು ಹಿಡೀತಲೇ ಬಂದಿದ್ದಾನೆ. ಗಾಳಕ್ಕೆ, ಬಲೆಗೆ ಸಿಕ್ಕಿಕೊಳ್ಳಬಾರದ ಪಾಠವನ್ನ ಮೀನು ತಲೆಮಾರುಗಳು ಕಂಡುಕೊಂಡೇ ಇಲ್ಲವಾ? ತಪ್ಪು…. ಎಲ್ಲ ಮೀನುಗಳೂ ಬಲೆಗೆ ಬೀಳ್ತವೆಯೇ? ಗಾಳಕ್ಕೆ? ಹಾಗೆ ಸಿಕ್ಕುವ ಮೀನುಗಳಿಗೆ ಸತ್ತಾದರೂ ಸರಿ, ಮಸಾಲೆಯಲ್ಲಿ ಬೆಂದು ರುಚಿಯಾಗುವ ತವಕ ಇರಬಹುದು! ಕೊಟ್ಟೆಯ ಮತ್ತಿನಲ್ಲಿ ಮುದುಕನ ಹೆಂಡತಿ ಬರುತ್ತಾಳೆ, ಅವಳಿನ್ನೂ ಇಳಿ ಹೆಂಗಸು. ಕೆಲವು ಸಂಜೆಗಳಲ್ಲಿ ಅವಳ ಮುಖ ಮಿಂಚುತ್ತ ಇರುವುದು. ಆಗೆಲ್ಲ ಅವಳ ಕಣ್ಣು ಕಳ್ಳಬೆಕ್ಕು…. ನೋಡಲು ಸಂಕೋಚವಾಗಿ ತಲೆ ತಗ್ಗಿಸುತ್ತೇನೆ.

ಅವಳ ಹುಳಿ ವಾಸನೆ, ತುಟಿಯ ವಾರೆಗಳು ನನ್ನೊಳಗೊಂದು ತಂತಿಯೆಳೆದು ನಡುಗಿಸುತ್ತವೆ. ಮುದುಕನ ಹೆಂಡತಿ, ಬಟ್ಟೆ ಒಗಿಯಲು ಬರುವ ಹೆಂಗಸರೆಲ್ಲರ ಜಗತ್ತು ನನಗೆ ಇನ್ನೂ ಇನ್ನೂ ನಿಗೂಢವಾಗುತ್ತ ಹೋಗುವವು. ಸಂಜೆ ಎಲ್ಲ ನಗುತ್ತಲೇ ಇರುವ ಅವರು ರಾತ್ರಿಗಳಲ್ಲಿ ವಾಚಾಮಗೋಚರ ಜಗಳಾಡುವುದನ್ನೂ ಊಳಿಡುತ್ತ ಅಳುವುದನ್ನೂ, ಹೊಡೆತ ತಿಂದು ಕಿವಿಯನ್ನೊ ಮೂಗನ್ನೊ ಹರಿಸಿಕೊಳ್ಳುವುದನ್ನೂ ನಾನು ನೋಡಿದ್ದೇನೆ. ಮತ್ತೆ ಮರು ಬೆಳಗಿಗೆ ಅವರು ಹೊಸ ಹೂವಂತೆ ಅರಳಿಕೊಳ್ಳೋದನ್ನೂ, ಸಂಜೆಗೆ ಮತ್ತದೇ ರಂಗುಗಳಲ್ಲಿ ಕಾಮನ ಬಿಲ್ಲು ಕಟ್ಟುವುದನ್ನೂ…..

ಒಂದು ಸಂಜೆ ಅಡಿಕೆ ಟೊಪ್ಪಿಯ ಮುದುಕ ಗಾಳ ಇಳಿ ಬಿಟ್ಟುಕೊಂಡು ಕೂತಿದ್ದ. ಅವನ ಕುಡುಕ ಹೆಂಡತಿ ತೂರಾಡುತ್ತ ಬರುವಾಗಲೂ ಅವನು ಕೂತೇ ಇದ್ದ. ಆಗ ತಾನೆ ಅಲ್ಲಿಂದ ಚದುರಿಹೋದ ಹೆಂಗಸರ ಮಾತುಗಳಿನ್ನೂ ಗಾಳಿಯಲ್ಲಿ ತೇಲುತ್ತಿದ್ದವು. ಮುದುಕನ ಬುಟ್ಟಿಗೆ ಅವತ್ತು ಪೂರಾ ಐದು ಮೀನುಗಳು ಬಿದ್ದು ಮುಲುಗುಡುತ್ತಿದ್ದವು. ಅವನ ಹೆಂಡತಿ ಹತ್ತಿರ ಬಂದವಳೇ ಭುಜ ಅಲುಗಾಡಿಸುತ್ತ ವಿಚಾರಣೆ ಶುರುವಿಟ್ಟಳು. ‘ನಂಗೆಲ್ಲ ಗೊತ್ತಾತ್’ ಅಂದವನು ಆಕಾಶ ನೋಡಿದ. ಅವಳ ಕಣ್ಣಿನ ಕಳ್ಳಬೆಕ್ಕಿಗೆ ಆ ಹೆಂಗಸರು ಗಂಟೆ ಕಟ್ಟಿದ್ದರು. ಸದ್ದು ಇವನ ಕಿವಿಗೆ ಬಿದ್ದಿತ್ತು. ಮುದುಕನ ಹೆಂಡತಿ ಮಾತಿಲ್ಲದೆ ಮನೆದಾರಿ ಹಿಡಿದಳು. ಅವನು ಬುಟ್ಟಿಯನ್ನ ಕೆರೆಗೆ ಚೆಲ್ಲಿದ. ಸಿಕ್ಕಿಬಿದ್ದ ಮೀನುಗಳಿಗೆ ಅದೇ ಸರಿಯಾದ ಶಿಕ್ಷೆ ಅನ್ನುವ ಠೀವಿ ಅವನ ಮುದಿ ಮೀಸೆಯಲ್ಲಿತ್ತು.

*

ಈ ಸಂಜೆ… ಮುದುಕ ಗಾಳ ಇಳಿಬಿಟ್ಟುಕೊಂಡು ಕೂತಿದ್ದಾನೆ. ಹೆಂಗಸರು ಅವನನ್ನ ಛೇಡಿಸುತ್ತ ಬಟ್ಟೆ ಹಿಂಡಿ ಬುಟ್ಟಿ ತುಂಬುತ್ತಿದ್ದಾರೆ. ಮುದುಕನ ಹೆಂಡತಿ ತೂರಾಡುತ್ತ ಬರುವುದು ಕಾಣುತ್ತಲೇ ಅವನು ಓಡಲು ರೆಡಿ! ಆದರೆ ಈ ಸಲ ಬುಟ್ಟಿಯನ್ನೂ ಅದರೊಳಗಿನ ಮೀನನ್ನೂ ಕಂಕುಳಲ್ಲಿ ಇಟ್ಟುಕೊಳ್ಳುವನು. ಅವನ ಹೆಂಡತಿಯ ಚೀಲದಲ್ಲಿ ಮಸಾಲೆಯ ಸಾಮಾನಿದೆ.

————-

che1ಚೇತನಾ ತೀರ್ಥಹಳ್ಳಿ. ಅಲಾವಿಕಾ ಮತ್ತೊಂದು ಕಾವ್ಯನಾಮ. ಫ್ರೀಲಾನ್ಸ್ ಪತ್ರಕರ್ತೆ ಮತ್ತು ಬರಹಗಾರ್ತಿ. ಪ್ರಕಟಿತ ಪುಸ್ತಕಗಳು: ‘ಉಫೀಟ್’, ‘ಗುಟ್ಟು ಬಚ್ಚಿಡಲು ಬರುವುದಿಲ್ಲ’, ‘ಶಬರಿಯ ಅವಸರ’ ಕವನ ಸಂಕಲನಗಳು; ‘ಸೂರ್ಯನೆದೆಯ ನೀರ ಬೀಜ’ ಅಚ್ಚಿನಲ್ಲಿದೆ. ‘ಭಾಮಿನಿ ಷಟ್ಪದಿ’ ಮತ್ತು ‘ಬಿಸಿಲ ಚೂರಿನ ಬೆನ್ನು’ ಅಂಕಣ ಬರಹಗಳ ಸಂಗ್ರಹ; ‘ಲಾ ಕಾಲಮ್’ ಅಚ್ಚಿನಲ್ಲಿದೆ. ‘ಬ್ಲಾಗಿಸು ಕನ್ನಡ ಡಿಂಡಿಮವ’ ಸಂಪಾದಿತ ಕೃತಿ. ಕಾಸ್ಮಿಕ್ ಜೋಕ್, ಕ್ಲೌಡ್ ನೈನ್ ಮತ್ತು ಐ ಆಮ್ ಅನದರ್ ಯು ಇಂಗ್ಲಿಷಿನಿಂದ ಅನುವಾದಿಸಿದ ಕೃತಿಗಳು. ‘ನೀಲಿ ಬಾನಿನಲ್ಲಿ ಕೆಂಪು ಸೂರ್ಯ: ಜೆ ಎನ್ ಯು ಭಾಷಣಗಳ ಸಂಗ್ರಹಾನುವಾದ’ ಅವರ ಹೊಸ ಕೃತಿ.

Share

Leave a comment

Your email address will not be published. Required fields are marked *

Recent Posts More

  • 7 hours ago No comment

    ತೇಪೆಗಳೆಂದರೆ…

          ಕವಿಸಾಲು     ಆಗೆಲ್ಲಾ ಹೇಳಿ ಕಳಿಸದೆಯೇ ಬಂದುಬಿಡುತ್ತಿದ್ದ ಆಗೊಮ್ಮೆ ಈಗೊಮ್ಮೆ ಆರು ತಿಂಗಳಿಗೊಮ್ಮೆ ಸೋರುವ ಬಿಂದಿಗೆಯಿಂದ ತೊಟ್ಟಿಕ್ಕಿದ ಹನಿಯೋ ಭಾರ ತಾಳದೆ ಮುರಿದ ಬಕೇಟಿನ ಸದ್ದೋ ಕೇಳುತ್ತಿದ್ದಿರಬಹುದೇ? ವಿಶೇಷ ಹತಾರ ಪಿತಾರಗಳೇನಿಲ್ಲ ಹಳೆಯ ಪ್ಲಾಸ್ಟಿಕ್ ತುಂಡು, ಸುಡುಬೆಂಕಿ ಕಾಸಿ ಬರೆ ಇಟ್ಟರೆ ಸುಟ್ಟ ವಾಸನೆ ಜೊತೆಗೆ ಸಣ್ಣಗೆ ಹೊಗೆ ಆದರೆ, ಬಿರುಕು ಮುಚ್ಚುತ್ತಿತ್ತು ತುಂಡುಗಳು ಕೂಡುತ್ತಿದ್ದವು ಗಾಯದ ಗುರುತು ಉಳಿಯುತ್ತಿತ್ತು ನಿಜ ಆದರೆ ...

  • 23 hours ago No comment

    ನನ್ನೊಳಗಿನ ಮೈನಾ ಪಿಸುಗುಟ್ಟಿದಾಗ…

            ಕಾಣಲು ಸಣ್ಣವೆಂಬ ಸಂಗತಿಗಳ ಸೂಕ್ಷ್ಮದಲ್ಲಿ ಸಂಬಂಧಗಳ ಬಿಂಬ ಗಮನಿಸುತ್ತ…     ಅದೊಂದು ಫಲವತ್ತಾದ ಭೂಮಿ, ಎಷ್ಟು ಫಲವತ್ತಾಗಿದೆ ಅಂದರೆ ಕಾಳಿಗೊಂದು ತೆನೆ, ತೆನೆಗೆಂಟು ದಂಟು ಕೊಡೋಷ್ಟು… ಕೇಳುವುದಕ್ಕೇನೇ ಖುಷಿ, ಸಂಭ್ರಮ ಅಲ್ವಾ! ಯಾರಿಗೂ ಅನ್ನದ ಕೊರತೆ ಆಗದಷ್ಟು… ಹಂಚಿತಿನ್ನುವ ಭಾವವೇ ಸಾಕು ಅನ್ನುವ ತೃಪ್ತಿಯ ಪರಾಕಾಷ್ಠೆ. ಅಂದರೆ ಒಂದು ಕೈಯಿಂದ ಕೊಟ್ಟರೆ ಹತ್ತು ಕಡೆಯಿಂದ ಬಂದು ಸೇರತ್ತೆ ಅಂತ ನಮ್ಮ ಹಿರಿಯರು ...

  • 1 day ago 2 Comment

    ನನ್ನನ್ನು ಕವಿಯೆಂದರು..!

        ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

  • 2 days ago No comment

    ಇದ್ಯಾವ ಪರಿ?

          ಕವಿಸಾಲು       ಥೇಟು ನವಿಲುಗರಿಯ ಹಾಗೆ ಮನಸಿನ ಪುಟಗಳ ನಡುವೆ ಬೆಚ್ಚಗೆ ಅಡಗಿ ಮರಿಯಿಟ್ಟು ನೆನೆದು ನೇವರಿಸಿದಾಗೆಲ್ಲ ಮುದ ಕೊಡುವ ನವಿರು, ನವಿರು! ಎದುರಿಲ್ಲದೆ, ಇಡಿಯಾಗಿ ಸಿಗದೆ ಕಲ್ಪನೆಗಳ ಚಿಗುರು ಕುಡಿಗಳಲಿ ನಳನಳಿಸಿ ಬಳುಕಿ ಬಾಗಿ ಕೆನ್ನೆಯಲಿ ಕಚಗುಳಿಯಾಗಿ ಬೆಚ್ಚಗೆ ಹರಿವ ಉಸಿರು! ಹೂಬನದ ಸೊಬಗಲ್ಲಿ ಮಲ್ಲಿಗೆಯ ಅರಳಲ್ಲಿ ದಳಗಳ ಸುತ್ತುಗಳಲಿ ಹಾಸಿ ಮಲಗಿದ ಕಂಪಾಗಿ ಮೈಮನಗಳ ಆಹ್ವಾನಿಸಿ ಕರೆವ ಕಂಪಿಗೆ ...

  • 3 days ago No comment

    ಎರಡು ಕವಿತೆಗಳು

        ಕವಿಸಾಲು       ನಿನ್ನ ತೋಳ ಜೋಲಿಯಲಡಗಿರಬೇಕು ನೋಡು ತುಂಡು ಚಂದ್ರನ ಜೋಕಾಲಿ ಆಗಾಗ ಫಳ್ಳನೆ ಇಣುಕುವ ನಕ್ಷತ್ರ ಹಾಡಿನಂಥ ನಿಮ್ಮಿಬ್ಬರ ಕತೆ ನಿನ್ನ ಅನುಪಮ ನಂಬಿಕೆಯ ರಾಗ ಜಗದೇಕವೆಂಬಂತೆ ನನ್ನೆದೆ ಹಾಕುವ ತಾಳ ಮಬ್ಬಾದರೂ ಮುದ್ದುಕ್ಕಿಸುವ ಅವಳ ಮುಖ ಅಲ್ಲಿ ನಿನ್ನ ಭೋರ್ಗರೆವ ಅಳು ನಿನ್ನ ದನಿಯಲ್ಲಿನ ಅವಳ ನೋವು ಒಮ್ಮೆ ತುಣುಕು ತುಣುಕುಣುತಾ ಮದವೇರಿದ ವಿಷಕನ್ಯೆಯಂತನಿಸುವ, ಒಮ್ಮೊಮ್ಮೆ ಗುಟುಕೊಂದೊಂದೂ ಪೇರಿಸಿಟ್ಟುಕೊಂಡು ವಿಷವೇರಿ ...


Editor's Wall

  • 17 November 2017
    1 day ago 2 Comment

    ನನ್ನನ್ನು ಕವಿಯೆಂದರು..!

        ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

  • 14 November 2017
    4 days ago No comment

    ಅವ್ರ್ ಬಿಟ್ ಇವ್ರ್ ಬಿಟ್ ಅವ್ರ್ ಬಿಟ್ ಇವ್ರ್ ಯಾರು?

        ಈಗ ಮಕ್ಕಳನ್ನೆಲ್ಲ ಪರ ಊರುಗಳ ಬೋರ್ಡಿಂಗ್ ಶಾಲೆಗಳಲ್ಲಿ ನೂಕಿ ಯಾವ ಮನೆಗಳಲ್ಲೂ ಮಕ್ಕಳಿಲ್ಲದೆ ಬಣಗುಟ್ಟುತ್ತಿವೆ. ಹೋಮ್ ವರ್ಕ್, ರ್ಯಾಂಕ್ ಓಟ, ಅಂಕದ ಬೇಟೆಯಲ್ಲಿ ಸಿಲುಕಿ ಯಾವ ರಸ್ತೆಯಲ್ಲೂ ಮಕ್ಕಳು ಆಡುವುದಿಲ್ಲ. ಮಕ್ಕಳ ದಿನಕ್ಕೆ ಒಂದು ವಿಶೇಷ ಬರಹ, ಕಾದಂಬಿನಿ ಅವರಿಂದ       ಮಕ್ಕಳೆಲ್ಲ ಸೇರಿ ಯಾರಾದರೂ ಚೂರು ದೊಡ್ಡವರನ್ನು ಅಜ್ಜಿಯಾಗಲು ಕೇಳಿಕೊಂಡಾದ ಮೇಲೆ ಎಲ್ಲರೂ ವೃತ್ತಾಕಾರವಾಗಿ ನಿಂತು ಕ್ಲಾಪ್ಸ್ ಹಾಕುವ ಮೂಲಕ ಕಳ್ಳರನ್ನು ...

  • 09 November 2017
    1 week ago No comment

    ಕೆಂಡದಂಥ ಕಾವ್ಯ

    ಪಾಶ್ ಎಂದೇ ಗೊತ್ತಾಗಿರುವ ಪಂಜಾಬಿ ಮತ್ತು ಹಿಂದಿ ಕವಿ ಅವತಾರ್ ಸಿಂಗ್ ಸಂಧು, ಕ್ರಾಂತಿಕಾರಿ ಕವಿ. ತನ್ನ 20ನೇ ವಯಸ್ಸಿನಲ್ಲಿ ಆತ ಮೊದಲ ಸಂಕಲನ ‘ಲೋಹ್ ಕಥಾ’ ಪ್ರಕಟಿಸುತ್ತಿದ್ದ ಹಾಗೆಯೇ (1970) ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಟ್ಟಿದ್ದ. ಅದೇ ದಶಕದಲ್ಲೇ ಪ್ರಕಟಗೊಂಡ ಮತ್ತೂ ಎರಡು ಸಂಕಲನಗಳು ಪಂಜಾಬಿ ಕಾವ್ಯಲೋಕದಲ್ಲಿ ಆತನ ಹೆಸರನ್ನು ಶಾಶ್ವತಗೊಳಿಸಿಬಿಟ್ಟವು. ಅವನ ಕಾವ್ಯದ ಕತ್ತಿ ಖಲಿಸ್ತಾನಿಗಳ ವಿರುದ್ಧ ಝಳಪಿಸುತ್ತಿತ್ತು. ಕಡೆಗೆ ಅದೇ ಅವನ ಹತ್ಯೆಗೂ ಕಾರಣವಾಯ್ತು. ...

  • 07 November 2017
    2 weeks ago One Comment

    ಕಾಲದೊಂದೊಂದೇ ಹನಿಯು ಹರಿದುಹೋಗುವ ಸದ್ದು

    ಹಳೆಯ ಕಾವ್ಯದ ಮೆಲುಕನ್ನು ಇವತ್ತಿನ ಪ್ರಯಾಣಕ್ಕೆ ಜೋಡಿಸಿಕೊಳ್ಳುವುದೇ ಒಂದು ಸೊಗಸು. ಒಂದು ಕವಿತೆಯ ನೆವದಲ್ಲಿ ಸಿಗುವ ನೆನಪಿನ ಗುರುತುಗಳೂ ಹಲವು. ಇದು ವಿಮರ್ಶೆಯಾಚೆಗಿನ, ಅಕೆಡೆಮಿಕ್ ಮಿತಿಯನ್ನು ದಾಟುವ ಗುರುತೂ ಆಗುತ್ತದೆ; ಹಾಗೆಂದು ಹೇಳಿಕೊಳ್ಳದೆಯೂ.  ಕನೆಕ್ಟ್ ಕನ್ನಡ ಅಂಥದೊಂದು ಹುಡುಕಾಟದ ಖುಷಿ ಹಂಚಲು ತೊಡಗಿದೆ.  * * *         ನಾವು ಓಡುತ್ತಿರುವ ರಭಸಕ್ಕೆ ನಮ್ಮ ಅರಿವಿಗೇ ಬರುವುದಿಲ್ಲ, ಅದ್ಯಾವ ಹೊತ್ತಲ್ಲಿ ಜೀವಶಕ್ತಿ ತನ್ನ ಒಂದು ...

  • 06 November 2017
    2 weeks ago No comment

    ಕಾಣದ ಕಡಲಿನ ಮುಂದೆ…

    ಹಳೆಯ ಕಾವ್ಯದ ಮೆಲುಕನ್ನು ಇವತ್ತಿನ ಪ್ರಯಾಣಕ್ಕೆ ಜೋಡಿಸಿಕೊಳ್ಳುವುದೇ ಒಂದು ಸೊಗಸು. ಒಂದು ಕವಿತೆಯ ನೆವದಲ್ಲಿ ಸಿಗುವ ನೆನಪಿನ ಗುರುತುಗಳೂ ಹಲವು. ಇದು ವಿಮರ್ಶೆಯಾಚೆಗಿನ, ಅಕೆಡೆಮಿಕ್ ಮಿತಿಯನ್ನು ದಾಟುವ ಗುರುತೂ ಆಗುತ್ತದೆ; ಹಾಗೆಂದು ಹೇಳಿಕೊಳ್ಳದೆಯೂ.  ಕನೆಕ್ಟ್ ಕನ್ನಡ ಅಂಥದೊಂದು ಹುಡುಕಾಟದ ಖುಷಿ ಹಂಚಲು ತೊಡಗಿದೆ.  * * *         ಕಾವ್ಯದ ಸೌಂದರ್ಯ ಇರುವುದೇ ಅದರ ಅಮೂರ್ತತೆಯಲ್ಲಿ. ಕವಿತೆಯನ್ನು ಬರೆದ ಕವಿಗಿಂತ ಅದನ್ನು ಓದಿದವರಿಗೇ ಒಮ್ಮೊಮ್ಮೆ ...