Share

ನಾನು ಸೋತುಹೋದೆ!
ಉಷಾ ಕಟ್ಟೆಮನೆ ಕಾಲಂ

IMG-20160516-WA0001

ಸ್ವಗತ |SVAGATHA

 

 

 

ushaವಳಿಗೆ ಚಿತ್ತ ಚಾಂಚಲ್ಯವಿರಬೇಕು ಎಂದು ನಿಮಗನ್ನಿಸಬಹುದು, ಆದರೆ ಇದು ಸತ್ಯ.

ಬಾಲ್ಯದಿಂದಲೂ ನನಗೊಂದು ಕನಸಿತ್ತು; ಎಂದಾದರೊಂದು ದಿನ ನದಿ ದಂಡೆಯ ಮೇಲೊಂದು ಪರ್ಣಕುಟೀರದಂಥ ಮನೆಯನ್ನು ಕಟ್ಟಿಕೊಳ್ಳಬೇಕು. ಜುಳು ಜುಳು ಹರಿಯುವ ನದಿಯಲ್ಲಿ ಕಾಲುಗಳನ್ನು ಇಳಿಬಿಟ್ಟು ತನಿಮೀನುಗಳಿಂದ ಕಚಗುಳಿಯಿಡಿಸಿಕೊಳ್ಳಬೇಕು; ಆಕಾಶಕ್ಕೇ ತೂತು ಬಿದ್ದಂತೆ ಸುರಿಯುವ ಮಳೆಯನ್ನು ನೋಡುತ್ತಾ ನದಿಯ ಭೋರ್ಗರೆತದ ಹಿನ್ನೆಲೆಯಲ್ಲಿ ಗಟ್ಟಿಯಾಗಿ ಕುಮಾರವ್ಯಾಸನ ಹಾಡುಗಳನ್ನು ಹಾಡಿಕೊಳ್ಳಬೇಕು, ನಿಸರ್ಗದ ಲಯಕ್ಕೆ ಕಿವಿಯಾಗಬೇಕು, ಕಣ್ಣಾಗಬೇಕು ಎಂದೆಲ್ಲಾ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದೆ.

ಪತ್ರಕರ್ತನಾದ ನನ್ನ ಗಂಡ ಆಗಾಗ ತನ್ನ ಕೆಲಸ ಬದಲಾಯಿಸುತ್ತಿದ್ದ. ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಸೇರಿಕೊಳ್ಳುವರೆಗಿನ ಅವಧಿಯಲ್ಲಿ ನನ್ನ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ತುಂಬಾ ಚಿಂತಿತಳಾಗುತ್ತಿದ್ದೆ. ನಾನು ನೌಕರಿ ಮಾಡುತ್ತಿರಲಿಲ್ಲ. ಪ್ರಯತ್ನಿಸಿದೆ. ಫಲ ಕಾಣಲಿಲ್ಲ. ಒಂದು ತುಂಡು ಭೂಮಿ ಕೈಯಲ್ಲಿದ್ದರೆ ಹೇಗಾದರೂ ಬದುಕಬಹುದೆಂಬುದು ಅಲ್ಲಿ ಇಲ್ಲಿ ಹಣ ಹೊಂದಿಸಿ ಧರ್ಮಸ್ಥಳ ಸಮೀಪ ಕಪಿಲಾ ನದಿಯ ದಂಡೆಯ ಮೇಲೆ ನನ್ನ ಕನಸಿನ ಭೂಮಿಯನ್ನು ಖರೀದಿಸಿದೆ. ಇದರ ಹಿಂದೆಯೂ ಒಂದು ಲೆಕ್ಕಾಚಾರವಿತ್ತು; ಕನಸಿತ್ತು. ಲೆಕ್ಕಾಚಾರದ ಕನಸು ಅಂದುಕೊಳ್ಳಬೇಡಿ ಮತ್ತೆ. ಅವೆರಡೂ ಬೇರೆ ಬೇರೆನೇ. ಆದರೆ ಅವೆರಡನ್ನು ಬ್ಲೆಂಡ್ ಮಾಡಲು ಪ್ರಯತ್ನಿಸುತ್ತಿದ್ದೆ. ಅಂದರೆ ನಾನು ಕೃಷಿಯಲ್ಲಿ ಸೋತರೆ ಹೋಂ ಸ್ಟೇ ಮಾಡುವುದೆಂದು ಯೋಚಿಸುತ್ತಲಿದ್ದೆ. ಹೀಗೆ ಕನಸು ಕಾಣಲು ಕಾರಣವಾಗಿದ್ದು ಅಮೇದಿಕಲ್ಲು.

2ಕರ್ನಾಟಕದ ಕಠಿಣ ಚಾರಣದ ಜಾಗದಲ್ಲಿ ಅಮೇದಿಕಲ್ಲು ಮೊದಲ ಸ್ಥಾನದಲ್ಲಿ ಬರುತ್ತದೆ. ಅಲ್ಲಿಗೆ ಚಾರಣ ಹೋಗುವವರು ನಮ್ಮ ಮನೆಯೆದುರಿನ ರಸ್ತೆಯಲ್ಲೇ ಸಾಗಬೇಕು. ಅವರಿಗೆ ನಮ್ಮೂರಿನಲ್ಲಿ ಉಳಿದುಕೊಳ್ಳಲು ಯಾವ ವ್ಯವಸ್ಥೆಯೂ ಇಲ್ಲ. ಅವರೆಲ್ಲಾ ಇಪ್ಪತ್ತೈದು ಕಿ.ಮೀ ದೂರದ ಉಜಿರೆಯಲ್ಲಿ ತಂಗಿ ಬೆಳಿಗ್ಗೆ ಬೇಗನೆ ಎದ್ದು ಇಲ್ಲಿಗೆ ಬರುತ್ತಿದ್ದರು. ಅವರು ಮತ್ತು ಅಂಥ ನಿಸರ್ಗಪ್ರೇಮಿಗಳಿಗೆಂದೇ ಇಲ್ಲಿ ಒಂದು ತಂಗುದಾಣ ಯಾಕೆ ನಿರ್ಮಿಸಬಾರದು ಎಂದು ನನಗೆ ಅನ್ನಿಸುತ್ತಿತ್ತು. ಆದರೆ ಅದಕ್ಕೆ ಅರ್ಥಿಕತೆಯ ಮುಖ ಇರಬಹುದಾದ ಸಾಧ್ಯತೆಯಿದ್ದುದರಿಂದ ಮತ್ತು ಅದೇ ನನ್ನ ಮುಖ್ಯ ಉದ್ದೇಶ ಅಲ್ಲದ ಕಾರಣದಿಂದ ಅದನ್ನು ಜಾರಿಗೆ ತರುವುದರ ಬಗ್ಗೆ ನಾನು ವಿಶೇಷ ಆಸ್ಥೆ ವಹಿಸಲಿಲ್ಲ. ಆದರೆ ನನ್ನ ಹೃದಯಕ್ಕೆ, ಮನಸ್ಸಿಗೆ ಹತ್ತಿರವಾದ ಪರ್ಣಕುಟೀರದ ಕನಸು ಸದಾ ಜೀವಂತವಾಗಿತ್ತು.

ನನ್ನ ತೋಟದೊಳಗೆ ನದಿ ದಂಡೆಯಲ್ಲಿ ಮೂರು ದೊಡ್ಡ ದೊಡ್ಡ ಕಾಡು ಮಾವಿನ ಮರಗಳಿವೆ. ಅವುಗಳಿಗೆ ನೂಲು ಹಿಡಿದರೆ ಕರೆಕ್ಟಾಗಿ ತ್ರಿಕೋನಾಕೃತಿಯಾಗುತ್ತದೆ. ಅಲ್ಲಿ ಒಂದು ಟ್ರೀ ಹಟ್ ಕಟ್ಟಬೇಕೆಂದು ಆ ಜಾಗ ತೆಗೆದುಕೊಂಡಾಗಿನಿಂದಲೂ ನಾ ಯೋಚಿಸುತ್ತಲಿದ್ದೆ. ಏಕಾಂತವನ್ನು ಬಯಸುವ ನಿಸರ್ಗಪ್ರಿಯರಿಗೆ ಪರ್ಣಕುಟೀರದ ಮೌನದೇಗುಲವಾಗಿ ಅದನ್ನು ಸಜ್ಜುಗೊಳಿಸಬೇಕೆಂದು ಅಂದುಕೊಳ್ಳುತ್ತಲಿದ್ದೆ.
ಇದಲ್ಲದೆ ಕೇವಲ ಮಹಿಳೆಯರಿಗಾಗಿಯೇ ಈ ಜಾಗವನ್ನು ಮೀಸಲಾಗಿಡಬೇಕೆಂದೂ ಯೋಚಿಸಿದ್ದಿದೆ. ಅಂದರೆ ಕೆಲವು ಹುಡುಗಿಯರಿಗೆ ತವರಿರುವುದಿಲ್ಲ. ಹತ್ತಿರದ ಬಂಧುಗಳಿರುವುದಿಲ್ಲ. ಗೆಳೆಯ-ಗೆಳತಿಯರಿರುವುದಿಲ್ಲ. ಇಂಥವರಿಗೆ ಎಲ್ಲಿಯಾದರೂ ಒಂದೆರಡು ದಿನ ಯಾರ ಕಣ್ಣಿಗೂ ಬೀಳದಂತಿರಬೇಕು, ಓಡಿ ಹೋಗಬೇಕು ಎಂದೆಲ್ಲಾ ಯೋಚನೆ ಬಂದರೆ ಅಂಥವರಿಗೆ ಅಡಗಿಕೊಳ್ಳಲೊಂದು ತಂಗುದಾಣವಾಗಿಸಬೇಕೆಂಬ ಯೋಚನೆ ನನಗೆ ಬಂದಿತ್ತು. ಯಾಕೆಂದರೆ ಅಂತಹ ಯೋಚನೆ ನನಗೆ ಆಗಾಗ ಬರುತ್ತಲಿರುತ್ತದೆ.

ಅಂದುಕೊಳ್ಳುವುದಕ್ಕೇನು? ನೂರಾರು ಕನಸುಗಳು ನಮ್ಮಲ್ಲಿ ಕುಡಿಯೊಡೆಯಬಹುದು. ಅದನ್ನು ಜಾರಿಗೊಳಿಸುವುದು ಹೇಗೆ? ಅದಕ್ಕೆ ನೆರವಿನ ಹಸ್ತವನ್ನು ನೀಡುವವರು ಯಾರು? ಎಂಬ ಗೊಂದಲದಲ್ಲೇ ಆರು ವರ್ಷ ಉರುಳಿಹೋಯ್ತು.

ಜಮೀನಿನಲ್ಲಿ ಅಲ್ಪ ಸ್ವಲ್ಪ ಕೃಷಿ ಮಾಡಿಸಿದೆ. ಅಡಿಕೆಯನ್ನೇ ನೆಚ್ಚಿಕೊಂಡರೆ ಮದ್ದು ಬಿಡುವವರನ್ನು ಅವಲಂಬಿಸಲೇಬೇಕಾಗುತ್ತದೆ. ನಮ್ಮ ಕೊಳೆರೋಗ ಸ್ಪೆಷಲಿಸ್ಟ್ ವಾಸು ತೋಟದ ಕೊಳೆರೋಗವನ್ನು ನಿಯಂತ್ರಣಕ್ಕೆ ತಂದು ನನಗೆ ಲಾಭವನ್ನು ತಂದು ಕೊಟ್ಟಿದ್ದ. ಆದರೆ ಆತ ಈ ತಿಂಗಳ ಆದಿಯಲ್ಲಿ ಕ್ಯಾನ್ಸರಿನಿಂದ ಅಕಾಲದಲ್ಲೇ ಕಾಲನ ತೆಕ್ಕೆಯಲ್ಲಿ ಕರಗಿ ಹೋದ. ಈಗ ಊರಲ್ಲಿ ಜಡಿ ಮಳೆ ಆರಂಭವಾಗಿದೆ. ನನ್ನ ತೋಟಕ್ಕೆ ಮದ್ದು ಬಿಡುವವರು ಯಾರು ಎಂದು ಚಿಂತಿತಳಾಗಿದ್ದೇನೆ. ಹಳ್ಳಿಗಳಲ್ಲಿ ಕೃಷಿ ಕಾರ್ಮಿಕರ ತೀವ್ರ ಕೊರತೆಯಿದೆ ಎಂಬುದು ನಿಮಗೂ ಗೊತ್ತು.

ನಾನೀಗ ಕೃಷಿಯಲ್ಲಿ ಸೋತಿದ್ದೇನೆ. ಮುಂದೇನು? ಗೊತ್ತಿಲ್ಲ.

———-

usha2ಉಷಾ ಕಟ್ಟೆಮನೆ, ಪತ್ರಕರ್ತೆಯಾಗಿ, ಅದಕ್ಕೂ ಮೊದಲು ಕನ್ನಡ ಉಪನ್ಯಾಸಕಿಯಾಗಿ ಕೆಲಸ ಮಾಡಿದವರು. ದೃಶ್ಯ ಮಾಧ್ಯಮಕ್ಕಾಗಿಯೂ ಕೆಲಸ ಮಾಡಿದ ಅನುಭವ. ಆದರೆ ಅವರು ಪರಿಚಿತರಾಗಿರುವುದು ತಮ್ಮ ವಿಶಿಷ್ಟ ಸಂವೇದನೆಯ ಬರವಣಿಗೆಯಿಂದಾಗಿ. ಕೆಲ ವರ್ಷಗಳಿಂದ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ದೇಶ ಸುತ್ತುವುದೆಂದರೆ ಇವರಿಗೆ ಅತ್ಯಂತ ಇಷ್ಟ.

Share

4 Comments For "ನಾನು ಸೋತುಹೋದೆ!
ಉಷಾ ಕಟ್ಟೆಮನೆ ಕಾಲಂ
"

 1. ವಿಶಿಷ್ಟ ಕನಸುಗಳಿದ್ದರೂ ಸಾಂಪ್ರದಾಯಿಕ ಅಡಿಕೆ ಕೃಷಿಗೇ ಯಾಕೆ ಹೋದಿರೋ ನನಗೆ ಗೊತ್ತಿಲ್ಲ. ಪರ್ಯಾಯ ಕೃಷಿಯಲ್ಲಿ ಸಾವಯವ, ಸಹಜಕ್ಕೆ ನೀವು ಬದಲಾಗಬಹುದಾಗಿದ್ದರೆ (ಆರ್ಥಿಕ ಹೊರೆ ತೀರಾ ಕಡಿಮೆಯಾಗುತ್ತದೆ, ಆದಾಯವೂ ಹಾಗೇ ಒಮ್ಮೆಗಂತೂ ಕಡಿಮೆಯಾಗುವುದು ನಿಶ್ಚಿತ)?? ಅಮೆದಿಕ್ಕೆಲ್ ಹತ್ತಿದ್ದೀರಾ? ಅದಕ್ಕೆ ನೀವು ಹೇಳುವ ಜಾಡು ಬಹುಶಃ ಶಿಶಿಲದ ಬದಿಯಿಂದಿರಬೇಕು. ನೆರಿಯದೊಳಗಿನಿಂದ ಸುಲಭ ದಾರಿಯಿದೆ ಬಲ್ಲಿರಾ?

  Reply
  • ಉಷಾಕಟ್ಟೆಮನೆ
   26th June 2016

   ನಾನು ಜಮೀನ್ ತಗೊಂಡಾಗಲೇ ಅದು ಅಡಿಕೆ ತೋಟವಾಗಿತ್ತು ಸರ್. ಆದರೆ ನಾನು ತೋಟವಿಡೀ ಕೊಕ್ಕೊ ಗಿಡ ನೆಡಿಸಿದೆ. ಈಗ ಕೊಕ್ಕೊ ಫಸಲು ಕೊಡುತ್ತಿದೆ.ಕೆಲವು ಹಣ್ಣಿನ ಗಿಡಗಳನ್ನು ದೇವನ ಹಳ್ಳಿಯ ಪಾರ್ಮ್ ನಿಂದ ತಗೊಂಡು ಹೋಗಿ ನೆಟ್ಟಿದ್ದೇನೆ. ಅವೂ ಫಸಲು ಕೊಡುತ್ತಿವೆ. ಒಂದೈವತ್ತು ರ‍ಾಂಬುಟನ್ ಗಿಡಗಳನ್ನು ನೆಡಬೇಕೆಂದಿದ್ದೇನೆ. ಈಗ ಎರಡು ಗಿಡಗಳಿವೆ.
   ಅಡಿಕೆ ಮರಗಳನ್ನು ನೆಲಸಮ ಮಾಡಲು ಮನಸ್ಸು ಹೇಗೆ ಬರುತ್ತೆ ಸರ್?

   Reply
 2. 28th June 2016

  ಉಷಾ..

  ಈ ಮಾತು ‘ಸೋತು ಹೋದೆ’ ಎಂಬುದು ಮುಂದಿನ ದಾರಿಯ ಮೆಟ್ಟಿಲಾಗಲಿ ಅಂತ ಆಶಿಸುತ್ತಿದ್ದೇನೆ. ನಿಜ್ವಾಗ್ಲೂ.

  Reply
  • ಉಷಾಕಟ್ಟೆಮನೆ
   2nd July 2016

   ಕನಸು ಜಾರಿಯಲ್ಲಿದೆ ಸಿಂಧು.
   ಬೆನ್ನು ತಟ್ಟುವವರಿದ್ದರೆ ಹುಮ್ಮಸ್ಸು ಬರುತ್ತಿತ್ತು.

   Reply

Leave a comment

Your email address will not be published. Required fields are marked *

Recent Posts More

 • 4 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 5 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  2 weeks ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...