Share

ನಮ್ಮ ಕೋಳಿಗೆ ಮೂರೇ ಕಾಲು…
ಎಂ ಆರ್ ಭಗವತಿ ಕಾಲಂ

IMG-20160516-WA0001

ಕಲರವ | KALARAVA

 

 

 

bhagvati(1)ಯಾವುದೇ ಚರ್ಚೆಯಲ್ಲಿ ನಿಮ್ಮ ಮಾತು ಒಪ್ಪಿಗೆಯಾಗಬೇಕಾದರೆ ನೀವು ಮಾತು ಮಾತಿಗೂ ನೀವು ಹೇಳಿದ್ದು ಸರಿ ಎನ್ನಬೇಕಂತೆ ! (ಲಿನ್ ಯು ಟಾಂಗ್)

ತಾನು ಕಾಳಜಿಯಿಂದ ಹೇಳಿದ ಮಾತಿಗೆ ಬೇರೆಯವರು ತಪ್ಪು ತಿಳಿಯುವ ಬಗ್ಗೆ ಗೆಳತಿಯೊಬ್ಬಳು ವಿಷಾದ ವ್ಯಕ್ತಪಡಿಸುತ್ತಿದ್ದಳು. ಇದು ಬಹುತೇಕ ವಿಚಾರಗಳಲ್ಲಿ ಆಗುತ್ತಿರುತ್ತದೆ. ಕೆಲವು ‘ಆ ಕ್ಷಣದ ಸತ್ಯ’ಗಳಾಗಿರುತ್ತವೆ. ತಾವು ವ್ಯಕ್ತಪಡಿಸುವ ವಿಚಾರಗಳೇ ಶ್ರೇಷ್ಠ, ನಾವು ನಂಬಿದ ವಿಚಾರಗಳೇ ಉತ್ತಮ ಎನ್ನುವ ಬಹುತೇಕರ ವರ್ತನೆಯಲ್ಲಿ ಇಂಥವು ಆಗುತ್ತಿರುತ್ತವೆ. ಗೆಳತಿಯ ವಿಚಾರಕ್ಕೆ ಬಂದರೆ, ಒಂದೋ ಅವಳು ಹೇಳಿದ ವಿಚಾರ ಅವಳು ಹೇಳುವ ರೀತಿಯಿಂದ ಆ ಭಾವನೆ ಉಂಟಾಗಿರಬಹುದು; ಅದು ಬೇರೆಯ ವಿಚಾರ. ಇಂಥವು ಆಗಾಗ ಪುನರಾವರ್ತನೆಯ ವಿಚಾರ ಬಂದಾಗ ನಾನು ನಮ್ಮ ಕೋಳಿಯ ವಿಚಾರ ಅವಳಿಗೆ ಹೇಳಿದೆ!

ಯಾವುದೇ ವಿಚಾರಗಳ ಚರ್ಚೆಯಲ್ಲೂ ಈ ಕೋಳಿಯ ಕಾಲಿನ ಮಹತ್ವ ಉಪಯೋಗಕ್ಕೆ ಬರುತ್ತದೆ ! ಗಂಭೀರ ವಿಚಾರಗಳಲ್ಲಿ ಇದು ಹೆಚ್ಚು ಅನ್ವಯಿಸುವುದಿಲ್ಲವಾದರೂ, ಇದರಿಂದ ಅನಾವಶ್ಯಕವಾದ ಕಿರಿಕಿರಿಗಳನ್ನು ತಪ್ಪಿಸಬಹುದು. ನನ್ನ ಕೋಳಿಗೆ ಮೂರು ಕಾಲು ಎಂದು ಸದಾ ವಾದಿಸುವವರಿಗೆ ಇದು ಹೆಚ್ಚು ಅನ್ವಯ.. ವಿತಂಡ ವಾದಗಳಿಗೆ ಸಮಯ ವಿನಿಯೋಗಿಸುವುದು ವ್ಯರ್ಥವೇ ಸರಿ.

ಆರೋಗ್ಯಕರ ಚರ್ಚೆ ಬೇರೆಯ ಮಾತು. ಬೇರೆಯವರು ಒಂದು ಒಣ ಚರ್ಚೆ, ಒಣ ವಾಗ್ವಾದ ಮಾಡುತ್ತಿದ್ದರೆ ’ಕೋಳಿಗೆ ಮೂರೇ ಕಾಲು’ ಅಂದು ಬಿಟ್ಟರಾಯಿತು. ‘ನೀವೇ ಸರಿಯಪ್ಪ’ ಎಂದು ಒಪ್ಪಿಕೊಳ್ಳುವುದರಲ್ಲಿ ನಷ್ಟವೇನೂ ಇಲ್ಲ, ನಮ್ಮ ಅಹಂ ಅಡ್ಡಬರದಿದ್ದರೆ!

ಕೆಲವರಿರುತ್ತಾರೆ ಪ್ರತಿಯೊಂದು ವಿಷಯಗಳಲ್ಲೂ ತಪ್ಪು ಹುಡುಕುವವರು. ಇನ್ನು ಕೆಲವರು ತಮ್ಮದು ಸರಿಯಲ್ಲ ಎಂದು ಒಪ್ಪಿಕೊಳ್ಳಲು ಅಂಜುವವರು. ತಮ್ಮ ಮೂಗಿನ ನೇರಕ್ಕೆ ಯೋಚಿಸುವವರನ್ನು ಸದಾ ಸಹಿಸಿಕೊಳ್ಳುವುದು ಹೇಗೆ? ಎದುರಿನ ವ್ಯಕ್ತಿಯ ಬಗ್ಗೆ ಸಹನೆಯೇ ಇಲ್ಲದವರು. ಹಾಗಲ್ಲ ಹೀಗೆ ಎಂದರೆ ಎಂದು ಎದುರಿನವರು ಹೇಳಿದರೆ ಅವರಿಗೆ ತಳಮಳವೇ ಶುರುವಾಗುತ್ತದೆ. ಅಂಥ ಸಂದರ್ಭಗಳಲ್ಲಿ ಬಹುಬೇಗ ಇವರು ಹೀಗೆಯೇ ಎಂದು ಎದುರಿನ ವ್ಯಕ್ತಿಗಳ ಬಗ್ಗೆ ತೀರ್ಮಾನಕ್ಕೆ ಬರುತ್ತಾರೆ. ಮತ್ತು ಯಾವುದೇ ವಿಷಯಗಳಿಗೂ ಲಗುಬಗೆಯ ತೀರ್ಮಾನಕ್ಕೆ ಬರುವವರು.. ಇಂಥ ಕಡೆಗಳಲ್ಲಿ ನಮ್ಮ ಮೂರು ಕಾಲಿನ ಕೋಳಿಯ ಮಹಾತ್ಮೆ ನಡೆಯುತ್ತದೆ.

ಸಂಸಾರ ಸರಿಗಮ ಸರಿಯಾದ ಲಯದಲ್ಲಿ ನಡೆಯಬೇಕೆಂದರೆ, ಮೂರು ಕಾಳಿನ ಕೋಳಿ ಬೇಕೇ ಬೇಕು ! ಇಲ್ಲದಿದ್ದರೆ ಅಂತಹ ಸಂಸಾರಗಳಲ್ಲಿ ಹಾಲಾಹಲ! ಗಂಡ ಅಥವ ಹೆಂಡತಿ ಯಾರಾದರೂ ಒಬ್ಬರು ಈ ಕೋಳಿಯ ಪರವಾಗಿರಲೇ ಬೇಕಾಗುತ್ತದೆ.

ಯಾರು ತಾನೆ ಎಲ್ಲಿಯವರೆಗೆ ಸಹಿಸಿಯಾರು?

ಅಲ್ಲೆಲ್ಲಾ ನಮ್ಮ ಕೋಳಿಗೆ…..

———-

bhagavathi1ಎಂ ಆರ್ ಭಗವತಿ ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ. ಹವ್ಯಾಸಿ ಬರಹಗಾರ್ತಿ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಎಂಎ ಪದವಿ.. ಮೂಲ ಆಸಕ್ತಿ ಬರವಣಿಗೆಯಾದರೂ, ಮೊದಲಿನಿಂದಲೂ ಛಾಯಾಗ್ರಹಣ ಬಹಳ ಇಷ್ಟವಾದ ಹವ್ಯಾಸ. ‘ಏಕಾಂತದ ಮಳೆ’ (೧೯೯೯) ಮತ್ತು ‘ಚಂಚಲ ನಕ್ಷತ್ರಗಳು’ (೨೦೦೫) ಪ್ರಕಟಿತ ಪುಸ್ತಕಗಳು.

Share

2 Comments For "ನಮ್ಮ ಕೋಳಿಗೆ ಮೂರೇ ಕಾಲು…
ಎಂ ಆರ್ ಭಗವತಿ ಕಾಲಂ
"

  1. ಎಂ.ಜಿ.ಚಂದ್ರಶೇಖರಯ್ಯ
    25th June 2016

    ನಿಮ್ಮ ಕೋಳಿಗೆ ಮೂರು ಕಾಲು, ಅಬ್ಬಾ ! ನೀವೇ ಅದೃಷ್ಟವಂತರು, ನಾವು ತಿನ್ನೋ ಕೋಳಿಗೆ ಎರಡೇ ಕಾಲು!!!
    ಕೆಲವರು ಹಾಗೇ ಕಣ್ರೀ,ಏನೂ ಮಾಡಲಾಗದು, ಹಾಗೆಲ್ಲ ನಿಮ್ಮ ಕೋಳಿ ಕಥೆ ನೆನಪಿಗೆ ಬರಬೇಕು.

    Reply
    • Bhagavathi
      4th July 2016

      thank you !

      Reply

Leave a comment

Your email address will not be published. Required fields are marked *

Recent Posts More

  • 4 hours ago No comment

    ಪ್ರತಿಯೊಬ್ಬರೊಳಗೂ ಒಂದೊಂದು ಕಥೆ!

    ಆಕೆ ಮೀರಾ. ತಾನು ಬರೆದ ಕಥೆಯೊಂದರ  ಮೂಲಕ ಇದ್ದಕ್ಕಿದ್ದಂತೆ ಲಕ್ಷಾಂತರ ಮನಸ್ಸನ್ನು ಮುಟ್ಟಿಬಿಡುತ್ತಾಳೆ. ವಿವಾನ್ ಎಂಬ ಬ್ಯಾಂಕ್ ಅಧಿಕಾರಿಯೊಬ್ಬನಿಗೆ ಜಗತ್ತನ್ನೇ ಸುತ್ತುವ ಕನಸು. ಕೆಫೆಯೊಂದರ ಮ್ಯಾನೇಜರ್ ಕಬೀರ್ ತನ್ನದೇ ಆದ ಏನನ್ನಾದರೂ ಸಾಧಿಸುವ ಹಂಬಲವಿಟ್ಟುಕೊಂಡವನು. ಅದೇ ಕೆಫೆಯ ಗ್ರಾಹಕಿ ನಿಶಾ ಎಂಥದೋ ಹತಾಶೆಗೆ ಸಿಕ್ಕಿಹಾಕಿಕೊಂಡು, ತನ್ನದೇ ಆದ ಗುಟ್ಟುಗಳನ್ನು ಬಚ್ಚಿಟ್ಟುಕೊಂಡಿರುವವಳು. ಪ್ರತಿಯೊಬ್ಬರದೂ ಒಂದೊಂದು ಕಥೆ. ಅಂಥ ನಾಲ್ವರೂ ಒಂದೆಡೆ ಸೇರಿದಾಗ ಏನಾಗುತ್ತದೆ? ಈ ಕುತೂಹಲವನ್ನು ತೆರೆದಿಡುತ್ತ ಹೋಗುವ ಕಾದಂಬರಿಯೇ ...

  • 1 day ago No comment

    ನನ್ನೊಳಗಿನ ಮಗುವಿಗೊಂದು ಪತ್ರ

          ನಿನ್ನೆ ನನ್ನ ಹಳೆಯ ಕಡತಗಳನ್ನೆಲ್ಲಾ ತೆರೆದು ಏನನ್ನೋ ಹುಡುಕುತ್ತಿದ್ದಾಗ ನೀನು ಬಿಡಿಸಿದ ಕೆಲವು ಚಿತ್ರಗಳು ಸಿಕ್ಕವು. ನಿಜಕ್ಕೂ ಅದ್ಭುತವಾಗಿದ್ದವು ಅವುಗಳು.       ಮಕ್ಕಳ ದಿನಾಚರಣೆಯ ಋತುವಿನಲ್ಲಿ ನಮ್ಮದೇ ಹನ್ನೆರಡರ ವ್ಯಕ್ತಿತ್ವಕ್ಕೊಂದು ಪತ್ರ ಬರೆದರೆ ಹೇಗಿರುತ್ತದೆ ಎಂಬ ಯೋಚನೆಯೊಂದು ತಲೆಯೆತ್ತಿತು. ಸದ್ಯ ಪತ್ರಗಳಂತೂ ಮಾಯವಾಗಿವೆ. ನಿತ್ಯಜೀವನದ ಜಂಜಾಟದಲ್ಲಿ ನಮ್ಮೊಳಗಿನ ಮಗುವೂ ನಿಧಾನಕ್ಕೆ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲೇ ಇವೆರಡನ್ನೂ ಒಂದೇ ವೇದಿಕೆಗೆ ತಂದಿಡುವ ...

  • 2 days ago No comment

    ದುರಿತ ಕಾಲದ ಕವಿತೆಗಳು

        ಕವಿಸಾಲು       1 ಒಂಟಿಯಾಗಿ ಹೆಗಲಲಿ ನೇಗಿಲ ಎಳೆದು ಅಜ್ಜಿ ಬಿತ್ತಿದ ರಾಗಿಗೆ ಸಗ್ಗಣಿ ಗೊಬ್ಬರ ಹಾಕಿ ಖಂಡುಗಗಟ್ಟಲೇ ರಾಗಿ ಬೆಳೆದ ಅಜ್ಜನ ಹೊಲದ ಮೇಲಿವತ್ತು ಚತುಷ್ಕೋನ ರಸ್ತೆ ರಾರಾಜಿಸುತ್ತಿದೆ ಆರಾಮಾಗಿ ಅಲ್ಲಿ ಮಲಗಿರುವ ಅವನ ಎದೆಯ ಮೆಲೆ ಅನಿಲ ಟ್ಯಾಂಕರುಗಳು ಅಡ್ಡಾಡುತಿವೆ ನೋವಾಗುತ್ತಿರುವುದು ಮಾತ್ರ ನನಗೆ! ~ 2 ಅಭಿವೃದ್ದಿಯ ಜಾಹಿರಾತಿನಲ್ಲಿ: ಹಡಗಿನಂತಹ ಕಾರುಗಳು ಹಾಳೆಗಳಂತಹ ಮೊಬೈಲುಗಳು ಕಣ್ಣು ಕುಕ್ಕುವ ಕಂಪ್ಯೂಟರುಗಳು ...

  • 2 days ago No comment

    ನಾಲ್ಕು ಹನಿಗಳು

        ಕವಿಸಾಲು         ಧ್ಯೇಯದಿಂದ ನೆಲ ಅಗೆದೆ ಗಿಡ ನೆಡಲು. ಮತ್ತೆ ಕಾಣಿಸಿತು ಧ್ಯಾನಸ್ಥ ಎರೆಹುಳು. ~ ನದಿ ತಟದ ಬೆಂಚಿನ ಮೇಲೆ ನಾನು ಎರಡೂ ತಟಗಳಿಗೆ ಅಂಟಿದ್ದ ದಪ್ಪನೆ ಕಾಂಕ್ರೀಟ್ ಗೋಡೆ. ಹರಿವ ನೀರು, ನಾನು ಬಂಧಿಗಳೇ. ~ Mindfulness ಎಂದೆಲ್ಲಾ ಹೇಳುವ ಅವರ ಹೆಮ್ಮೆಗೆ ಕಾಣಿಸಲಿಲ್ಲವೇಕೆ ಅಖಂಡವಾಗಿ ನಿಂತು ಜಗಿಯುವ ಆ ಎಮ್ಮೆ? ~ ಆ ಒಂದು ಮಳೆ ಹನಿ ...

  • 2 days ago No comment

    ಕಂಗಾಲಾಗಿದ್ದಾಗ ನಾವೆಲ್ಲ, ಮೆಲ್ಲಮೆಲ್ಲನೆ ಬಂದಳಲ್ಲ!

      ಅಡಗಿಕೊಳ್ಳಲು ಬಾಳೆ ಬುಡ ಆರಿಸಿಕೊಂಡ ಪುಟಾಣಿಗೆ ಬೇಸಿಗೆಯ ಆ ಮಧ್ಯಾಹ್ನ ಊಟ ಮಾಡಿ ನಿದ್ದೆ ಮಾಡುವ ಸಮಯವಾಗಿತ್ತು.         ಬಾಲ್ಯ ಬಂಗಾರ   ಬಾಲ್ಯದ ಮಜವನ್ನು ಅನುಭವಿಸದ ಮಕ್ಕಳು ಬದುಕನ್ನು ಪೂರ್ಣವಾಗಿ ಸವಿಯುವುದು ಕಷ್ಟವೇ? ಆ ಮಜವೇ ಭಿನ್ನ, ಅದರಲ್ಲೂ ಹಳ್ಳಿಯ ಬದುಕಿನ ಬಾಲರ ಜೀವನದಲ್ಲಿ ಬಾಲ್ಯ ಅನನ್ಯವಾದ ಜೀವನಾನುಭವ ನೀಡುವ ಕಾಲ. ಪೇಟೆಯಲ್ಲಿ ರೇಷ್ಮೆ ಹುಳುವಿನಂತೆ ಪೊರೆಯ ಒಳಗೆ ಬದುಕುವ ಮಕ್ಕಳ ...


Editor's Wall

  • 21 November 2017
    1 day ago No comment

    ನನ್ನೊಳಗಿನ ಮಗುವಿಗೊಂದು ಪತ್ರ

          ನಿನ್ನೆ ನನ್ನ ಹಳೆಯ ಕಡತಗಳನ್ನೆಲ್ಲಾ ತೆರೆದು ಏನನ್ನೋ ಹುಡುಕುತ್ತಿದ್ದಾಗ ನೀನು ಬಿಡಿಸಿದ ಕೆಲವು ಚಿತ್ರಗಳು ಸಿಕ್ಕವು. ನಿಜಕ್ಕೂ ಅದ್ಭುತವಾಗಿದ್ದವು ಅವುಗಳು.       ಮಕ್ಕಳ ದಿನಾಚರಣೆಯ ಋತುವಿನಲ್ಲಿ ನಮ್ಮದೇ ಹನ್ನೆರಡರ ವ್ಯಕ್ತಿತ್ವಕ್ಕೊಂದು ಪತ್ರ ಬರೆದರೆ ಹೇಗಿರುತ್ತದೆ ಎಂಬ ಯೋಚನೆಯೊಂದು ತಲೆಯೆತ್ತಿತು. ಸದ್ಯ ಪತ್ರಗಳಂತೂ ಮಾಯವಾಗಿವೆ. ನಿತ್ಯಜೀವನದ ಜಂಜಾಟದಲ್ಲಿ ನಮ್ಮೊಳಗಿನ ಮಗುವೂ ನಿಧಾನಕ್ಕೆ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲೇ ಇವೆರಡನ್ನೂ ಒಂದೇ ವೇದಿಕೆಗೆ ತಂದಿಡುವ ...

  • 19 November 2017
    3 days ago No comment

    ಸಂಸಾರದ ಬಂಧಗಳ ಬಗ್ಗೆ ಬರಿದೆ ಮಾತಿಂದ…

            | ಕಮಲಾದಾಸ್ ಕಡಲು     ನನ್ನ ಅಪ್ಪನ ಸಾವು (My Father’s Death) ಕಮಲಾದಾಸ್ ಕವಿತೆಯ ಅನುವಾದ     ಅಪ್ಪ ಸತ್ತಾಗ ಅಪ್ರಾಮಾಣಿಕರು ಮಾತ್ರ ಕಣ್ಣೀರು ಸುರಿಸಿದರು, ಅವನ ಹೆಣದೊಡನೆ ಫೋಟೋ ತೆಗೆಸಿಕೊಳ್ಳಲು ಬಂದ ಅವರಿಗೆ ಅಪ್ಪನೆಂದರೆ ವಾಸ್ಕೋಡಗಾಮ ಕಪ್ಪಾದ್ ಬೀಚಿನ ಮರಳಿನ ಮೇಲೆ ಮೊದಲು ಕಾಲಿರಿಸಿದ ನಂತರ ಕ್ಯಾಲಿಕಟ್’ನಲ್ಲಿ ಸತ್ತವರಲ್ಲಿ ಅತಿ ಮುಖ್ಯವಾದ ವ್ಯಕ್ತಿಯಾಗಿದ್ದರು ಅಷ್ಟೇ. ರಸ್ತೆಯ ಇಕ್ಕೆಲದಲ್ಲೂ ...

  • 17 November 2017
    5 days ago 2 Comment

    ನನ್ನನ್ನು ಕವಿಯೆಂದರು..!

        ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

  • 14 November 2017
    1 week ago No comment

    ಅವ್ರ್ ಬಿಟ್ ಇವ್ರ್ ಬಿಟ್ ಅವ್ರ್ ಬಿಟ್ ಇವ್ರ್ ಯಾರು?

        ಈಗ ಮಕ್ಕಳನ್ನೆಲ್ಲ ಪರ ಊರುಗಳ ಬೋರ್ಡಿಂಗ್ ಶಾಲೆಗಳಲ್ಲಿ ನೂಕಿ ಯಾವ ಮನೆಗಳಲ್ಲೂ ಮಕ್ಕಳಿಲ್ಲದೆ ಬಣಗುಟ್ಟುತ್ತಿವೆ. ಹೋಮ್ ವರ್ಕ್, ರ್ಯಾಂಕ್ ಓಟ, ಅಂಕದ ಬೇಟೆಯಲ್ಲಿ ಸಿಲುಕಿ ಯಾವ ರಸ್ತೆಯಲ್ಲೂ ಮಕ್ಕಳು ಆಡುವುದಿಲ್ಲ. ಮಕ್ಕಳ ದಿನಕ್ಕೆ ಒಂದು ವಿಶೇಷ ಬರಹ, ಕಾದಂಬಿನಿ ಅವರಿಂದ       ಮಕ್ಕಳೆಲ್ಲ ಸೇರಿ ಯಾರಾದರೂ ಚೂರು ದೊಡ್ಡವರನ್ನು ಅಜ್ಜಿಯಾಗಲು ಕೇಳಿಕೊಂಡಾದ ಮೇಲೆ ಎಲ್ಲರೂ ವೃತ್ತಾಕಾರವಾಗಿ ನಿಂತು ಕ್ಲಾಪ್ಸ್ ಹಾಕುವ ಮೂಲಕ ಕಳ್ಳರನ್ನು ...

  • 09 November 2017
    2 weeks ago No comment

    ಕೆಂಡದಂಥ ಕಾವ್ಯ

    ಪಾಶ್ ಎಂದೇ ಗೊತ್ತಾಗಿರುವ ಪಂಜಾಬಿ ಮತ್ತು ಹಿಂದಿ ಕವಿ ಅವತಾರ್ ಸಿಂಗ್ ಸಂಧು, ಕ್ರಾಂತಿಕಾರಿ ಕವಿ. ತನ್ನ 20ನೇ ವಯಸ್ಸಿನಲ್ಲಿ ಆತ ಮೊದಲ ಸಂಕಲನ ‘ಲೋಹ್ ಕಥಾ’ ಪ್ರಕಟಿಸುತ್ತಿದ್ದ ಹಾಗೆಯೇ (1970) ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಟ್ಟಿದ್ದ. ಅದೇ ದಶಕದಲ್ಲೇ ಪ್ರಕಟಗೊಂಡ ಮತ್ತೂ ಎರಡು ಸಂಕಲನಗಳು ಪಂಜಾಬಿ ಕಾವ್ಯಲೋಕದಲ್ಲಿ ಆತನ ಹೆಸರನ್ನು ಶಾಶ್ವತಗೊಳಿಸಿಬಿಟ್ಟವು. ಅವನ ಕಾವ್ಯದ ಕತ್ತಿ ಖಲಿಸ್ತಾನಿಗಳ ವಿರುದ್ಧ ಝಳಪಿಸುತ್ತಿತ್ತು. ಕಡೆಗೆ ಅದೇ ಅವನ ಹತ್ಯೆಗೂ ಕಾರಣವಾಯ್ತು. ...