Share

ಉತ್ತರಿಸಿ ಬಿಡು
ಶ್ರೀದೇವಿ ಕೆರೆಮನೆ

IMG-20160516-WA0001

ಕವಿಸಾಲು | kavisalu

 

 

 

 

ನೀನು ದೂರವಾಗಿದ್ದಕ್ಕೆ ನನ್ನಲ್ಲಿ
ಯಾವ ಆಕ್ಷೇಪವೂ ಇಲ್ಲ
ಆದರೂ ನಿರ್ಗಮನದ ಮುಂಚಿನ
ನಿರ್ಲಕ್ಷ ಎದೆಯ ಮೂಲೆಯಲ್ಲೊಂದು
ಅಳಿಸಲಾಗದ ಗಾಯವನ್ನಿಟ್ಟಿದೆ

ಹೌದು, ನೀನು ದೂರವಾಗಲೇ ಬೇಕಿತ್ತು
ನಿನ್ನ ಕನಸುಗಳಲ್ಲಿ ನಾನಿರಲಿಲ್ಲ
ನಿನ್ನ ಮಾತುಗಳಲ್ಲಿ ಮೃದುತನವಿರಲಿಲ್ಲ
ನಾನು ದೂರವಾದರೆ ಸಾಕೆಂದು ಹಾರೈಸುತ್ತಿದ್ದ
ನಿನ್ನೊಳಗೆ ಮುಳ್ಳಿನ ಮೊನಚಿತ್ತು
ನಿನ್ನ ಮನಸು ಅಲ್ಲೆ ಹತ್ತಿರದ ಗುಲಾಬಿಯಲ್ಲಿತ್ತು

ಆದರೂ ಉತ್ತರ ಸಿಗದ ಪ್ರಶ್ನೆಯೊಂದು
ನನ್ನೆದೆಯೊಳಗೆ ತಿವಿಯುತ್ತಿದೆ.
ಹತ್ತಿರವಾಗುವ ಮೊದಲೇ
ದೂರವಾಗಲು ನಿರ್ಧರಿಸಿ ಬಿಟ್ಟಿದ್ದ
ನಿನ್ನ ಪ್ರೀತಿಯ ನಾಟಕಕ್ಕೆ ಬಲಿಪಶು
ನಾನೇ ಆಗಬೇಕಾಗಿದ್ದಾದರೂ ಎಕೆ?
ನನ್ನೆದೆಯ ಪ್ರೀತಿಯ ಕುಂಡ
ಒಡೆದು ಚೂರಾಗಿದೆ
ಆದರೂ ಚಿಪ್ಪೊಂದು
ನಿನ್ನ ಉತ್ತರಕ್ಕಾಗಿ ಕಾದು ಕುಳಿತಿದೆ

ಮಣ್ಣಲ್ಲಿ ಮಣ್ಣಾಗುವ ಮುನ್ನ
ಉತ್ತರಿಸಿ ಬಿಡು
ಕಣ್ಣೀರೂ ಇಳಿಯದಂತೆ
ಕರಗಿ ಹೋಗುತ್ತೇನೆ

———–

shrಶ್ರೀದೇವಿ ಕೆರೆಮನೆ ಉತ್ತರ ಕನ್ನಡದ ಅಂಕೋಲದವರು. ವೃತ್ತಿಯಲ್ಲಿ ಶಿಕ್ಷಕಿ. ಕವಿತೆ, ಅಂಕಣ ಬರಹಗಳಿಂದ ಪರಿಚಿತರು.

Share

5 Comments For "ಉತ್ತರಿಸಿ ಬಿಡು
ಶ್ರೀದೇವಿ ಕೆರೆಮನೆ
"

 1. ಶ್ರೀಲತಾಮನೋಹರ್ ಮೈಸೂರು
  10th July 2016

  ಆಸೆ ಎಂದೋ ಮೂಡಿಹುದು
  ************************
  ಆಸೆ ಎಂದೋ ಮೂಡಿಹುದು
  ಇನಿಯನೆದೆಗೆ ಬಾಗಲು
  ಹೇಳಲೆಂದು ಮನವ ತಟ್ಟಿ
  ಬಿಕ್ಕಿ ಬಿಕ್ಕಿ ಅಳುತಿಹುದು

  ಕಾರಣವೆಂತು ಕೇಳಿತೆನಗೆ
  ಹಿಂದು ಮುಂದೆ ನೋಡಿತು
  ಹೇಳಲಾಗದೆ ಮನದಲ್ಲೇ ಮರುಗಿತು
  ಬಾಯಿಗೆ ಬೀಗ ಸೀಲು ಮಾಡಿತ್ತು

  ಮನದಲಿರಿಸ ಆಸೆಯೆಲ್ಲ
  ಪುಟಿದು ಹೊರಬರಲಾಗದೆ
  ಅದುಮಿಟ್ಟು ಚಿಂತೆಗೊಯ್ಯಿತು
  ಹೃದಯ ಒಳಗೊಳಗೇ ಕೊರಗಿತು

  ಇನಿಯನುಡಿದ ಮಾತಿಗೆ
  ತನ್ನಲ್ಲಿ ಉತ್ತರವಿಲ್ಲದ ಮೇಲೆ
  ಪ್ರೀತಿಯೇಕೆ ತನ್ನ ಮನಸಿಗೆ
  ಎಂದು ತನ್ನ ತಾನು ಕೊಂದಿತು
  ************************
  ಶ್ರೀಲತಾಮನೋಹರ್ ಮೈಸೂರು
  ************************

  Reply
 2. mamatha arsikere
  10th July 2016

  ಆರ್ದ್ರ ಪದ್ಯ . ಇಷ್ಟವಾಯ್ತು .

  Reply
 3. ದೊನಾ
  10th July 2016

  ಮಾರ್ಮಿಕವಾಗಿ ಕಾಡುವ ಕವಿತೆ

  Reply
  • ಶ್ರೀಲತಾಮನೋಹರ್ ಮೈಸೂರು
   15th July 2016

   ಆಸೆ ಎಂದೋ ಮೂಡಿಹುದು
   ************************
   ಆಸೆ ಎಂದೋ ಮೂಡಿಹುದು
   ಇನಿಯನೆದೆಗೆ ಬಾಗಲು
   ಹೇಳಲೆಂದು ಮನವ ತಟ್ಟಿ
   ಬಿಕ್ಕಿ ಬಿಕ್ಕಿ ಅಳುತಿಹುದು

   ಕಾರಣವೆಂತು ಕೇಳಿತೆನಗೆ
   ಹಿಂದು ಮುಂದೆ ನೋಡಿತು
   ಹೇಳಲಾಗದೆ ಮನದಲ್ಲೇ ಮರುಗಿತು
   ಬಾಯಿಗೆ ಬೀಗ ಸೀಲು ಮಾಡಿತ್ತು

   ಮನದಲಿರಿಸ ಆಸೆಯೆಲ್ಲ
   ಪುಟಿದು ಹೊರಬರಲಾಗದೆ
   ಅದುಮಿಟ್ಟು ಚಿಂತೆಗೊಯ್ಯಿತು
   ಹೃದಯ ಒಳಗೊಳಗೇ ಕೊರಗಿತು

   ಇನಿಯನುಡಿದ ಮಾತಿಗೆ
   ತನ್ನಲ್ಲಿ ಉತ್ತರವಿಲ್ಲದ ಮೇಲೆ
   ಪ್ರೀತಿಯೇಕೆ ತನ್ನ ಮನಸಿಗೆ
   ಎಂದು ತನ್ನ ತಾನು ಕೊಂದಿತು
   ************************
   ಶ್ರೀಲತಾಮನೋಹರ್ ಮೈಸೂರು
   ************************

   Reply
   • ಶ್ರೀಲತಾಮನೋಹರ್ ಮೈಸೂರು
    15th July 2016

    ಧನ್ಯವಾದಗಳು ಕವನ ಮೆಚ್ಚಿದ್ದಕ್ಕೆ

    Reply

Leave a comment

Your email address will not be published. Required fields are marked *

Recent Posts More

 • 17 hours ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 2 days ago No comment

  ಎರಡು ಕವಿತೆಗಳು

      ಕವಿಸಾಲು         ಸುನಾಮಿಯ ಊರಲ್ಲಿ ಗುಟ್ಟುಗಳ ರಟ್ಟು ಮಾಡದ ಒಡಲು ಸುನಾಮಿ ತವರಾದ ಕಡಲು ಒಳಗಿನ ಕತ್ತಲೆಯ ಕಳೆಯಲು ಹುಡುಕಿ ಹೊರಟವು ತಾವು ಕಳೆದುಕೊಂಡ ಕನಸುಗಳಷ್ಟೂ ಹಾವುಗಳು ಬಿಸಿಲಿಗೆ ಹೊರಳಿ ಪೊರೆ ಕಳಚಿ ನಚ್ಚಗಾದವು ಅದೇ ಕ್ಷಣದೊಳಗೆ ಅರಳಿಬಿರಿಯಬೇಕಿದ್ದ ಹೂವುಗಳು ಬಿಸಿಲ ಧಗೆಗೆ ಬೆಂದು ಬಾಡಿ ಉದುರಿಬಿದ್ದವು ನೆಲಕೆ ಶಬ್ದಗಳ ಮುಕ್ಕಳಿಸಿ ಉಗಿದ ರಭಸಕೆ ಊರ ತುಂಬಾ ನೆರೆ ಪರಿಹಾರದ ಗಂಜಿಕೇಂದ್ರಗಳಲಿ ...

 • 5 days ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...

 • 6 days ago No comment

  ಯಾವುದು ಈ ಧಾವಂತದ ದಿಕ್ಕು?

    ನ್ಯಾಯದ ಬಾಗಿಲಲ್ಲಿ ನ್ಯಾಯವಾಗಿ ಹೋಗುವವರಿಗೆ ಮಾತ್ರ ಪ್ರವೇಶ ಇಲ್ಲ, ಆದರೆ ನ್ಯಾಯವಲ್ಲದ, ಅದರ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದವರಿಗೆ ಮಾತ್ರ ಹಾರ ತುರಾಯಿಗಳೊಂದಿಗೆ ಭರ್ಜರಿ ಆಹ್ವಾನ.       रिमझिम गिरे सावन, सुलग सुलग जाये मन भीगे आज इस मौसम में लगी कैसी ये अगन ಏನೋ ಒಂದು ಜ್ವಾಲೆ, ಏನೋ ಒಂದು ಉರಿ, ಏನೋ ಒಂದು ಚಡಪಡಿಕೆ, ಒಂಥರಾ ಬೂದಿ ...

 • 1 week ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...


Editor's Wall

 • 22 February 2018
  17 hours ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 15 February 2018
  1 week ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  2 weeks ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  2 weeks ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...

 • 11 February 2018
  2 weeks ago No comment

  ನಿಮಗಿಂತ ಹೆಚ್ಚು ನಿರ್ಜೀವ

          | ಕಮಲಾದಾಸ್ ಕಡಲು       ಇಂದಿರಾಗಾಂಧಿ ಬಿಟ್ಟರೆ… (Next to Indira Gandhi) ಕಮಲಾದಾಸ್ ಕವಿತೆಯ ಅನುವಾದ       ಇಂದಿರಾಗಾಂಧಿಯನ್ನು ಬಿಟ್ಟರೆ, ನಾನು ಅತಿ ಹೆಚ್ಚು ಹೆದರಿದ್ದು ನನ್ನ ಅಪ್ಪನಿಗೆ ಮಾತ್ರ ನಾನು ಐದು ವರ್ಷದವಳಿರುವಾಗ ಅವರೇ ನನಗೆ ಹೇಳಿದ್ದು ಕಪ್ಪು ಮಕ್ಕಳು ಬಿಳಿಬಣ್ಣದ ಬಟ್ಟೆಗಳನ್ನು ಮಾತ್ರ ತೊಡಬೇಕೆಂದು. ಬೆಳೆಯುವ ದಿನಗಳಲ್ಲಿ ಕಳೆದುಹೋದಂತಿರುತ್ತಿದ್ದ, ಬಡಕಲಾಗಿದ್ದ, ಹಲ್ಲಿಗೆ ಕ್ಲಿಪ್ ...