Share

ದೇವಿ ಮಹಾತ್ಮೆಯೂ ಚೊಟ್ಟೆ ರಮ್ಮೂ
ಎಸ್ ಗಂಗಾಧರಯ್ಯ ಕಾಲಂ

IMG-20160516-WA0001ಕಲರವ | kalarava

 

 

ಎ ವಿಲೇಜ್ ಡೈರಿ

s gangadaraಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಕುಡಿದದ್ದು ರಮ್ಮು. ಅದೂ ಚೊಟ್ಟೆಯಲ್ಲಿ! ಕುಡಿತ ಅಂದರೆ ಏನೂ ಗೊತ್ತಿಲದ ಹೊತ್ತಲ್ಲಿ ಗೆಳೆಯನೊಬ್ಬನ ಉಮೇದಿಗೆ ಹೂಂಗುಟ್ಟಿ, ಕುಡಿದದ್ದು ಅರ್ಧ ಚೊಟ್ಟೆಯಷ್ಟು. ಆಗ ನಮ್ಮೂರಿನಲ್ಲಿ ಕದ್ದು ಮುಚ್ಚಿ ಕುಡಿಯುವವರು ಕೆಲವರಿದ್ದರೂ, ರಾಜಾರಷ್ಟಾಗಿ ಕುಡಿಯುತ್ತಿದ್ದ ಕುಡುಕನೊಬ್ಬ ಹುಡುಗರಿಂದ ಹಿಡಿದು ಮುದುಕರವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಭಯದ, ಸೋಜಿಗದ ಸಂಗತಿಯಾಗಿದ್ದ. ಪಕ್ಕದ ಶೆಟ್ಟೀಕೆರೆಯಲ್ಲಿ ಸಂಜೆಗೇ ಕಂಠಪೂರ್ತಿ ಕುಡಿದು ಬಂದು, ನಿಶೆ ಇಳಿಯುವವರೆಗೂ ಅವತ್ತಿನ ಮೂಡು ಹೇಗಿರುತ್ತೋ ಹಾಗೆ ಗಲಾಟೆಯನ್ನೋ, ಇಲ್ಲಾ ತಮಾಷೆಯನ್ನೋ ಮಾಡುತ್ತಾ, ಒಮ್ಮೊಮ್ಮೆ ದೇವಸ್ಥಾನದ ಜಗಲಿಯಲ್ಲೇ ಮಲಗಿ ಬಿಡುತ್ತಿದ್ದ. ನಮ್ಮಂಥ ಹುಡುಗರಿಗೆ ಕುಡಿದಾಗ ಅದು ಏನೆಲ್ಲಾ ಮಾತನಾಡಿಸಿ ಬಿಡುವುದು, ಸರಿಯಾಗಿ ನಡೆಯಲಾರದೆ ತಟ್ಟಾಡಿಕೊಂಡು ಹೋಗುವುದು, ವಿಶೇಷವಾಗಿ ಕಾಣುತ್ತಿತ್ತು. ಅದೇ ರೀತಿ, ಎಂದಾದರೊಮ್ಮೆ ಹಾಗೆ ಕುಡಿಯಬೇಕೆಂಬ ಸಣ್ಣ ಆಸೆಯನ್ನು ಹುಟ್ಟಾಕುತ್ತಿತ್ತು. ಇಂಥ ಆಸೆಯೇ ಅವತ್ತು ಗೆಳೆಯ ಕೇಳಿದ ಕೂಡಲೆ ಒಪ್ಪಿಕೊಳ್ಳುವಂತೆ ಮಾಡಿತ್ತು.

ಯುಗಾದಿ ಹಬ್ಬ ಬಂತೆಂದರೆ ನನ್ನೂರಿನ ಸುತ್ತ ಮುತ್ತಲ ಹಳ್ಳಿಗಳಲ್ಲಿ ಜಾತ್ರೆಗಳ ಸುಗ್ಗಿ ಶುರುವಾಗುತ್ತಿತ್ತು. ಜೊತೆಗೆ ಪ್ರತೀ ಜಾತ್ರೆಗೂ ನನ್ನೂರಿನಲ್ಲಿ ಒಂದು ನಾಟಕ ಅಥವಾ ಮೇಳ ಇದ್ದೇ ಇರುತ್ತಿತ್ತು. ಅದು ಹೆಚ್ಚಾಗಿ ಪೌರಾಣಿಕ ನಾಟಕವನ್ನೇ ಕಲಿಯುತ್ತಿದ್ದ ಕಾಲ. ಆಗೊಮ್ಮೆ ಈಗೊಮ್ಮೆ ಸಾಮಾಜಿಕ ನಾಟಕವೂ ಇರುತ್ತಿತ್ತು. ಪೌರಾಣಿಕ ನಾಟಕವೆಂದರೆ ಬಹುತೇಕ ಅದು ದೇವಿ ಮಹಾತ್ಮೆ ಮೇಳವೇ ಆಗಿರುತ್ತಿತ್ತು. ಅದಕ್ಕೆ ದುಷ್ಠರನ್ನು ಶಿಕ್ಷಿಸುವ, ಶಿಷ್ಠರನ್ನು ರಕ್ಷಿಸುವ ಕಥೆ ಒಂದು ಕಾರಣವಾಗಿದ್ದರೆ, ಅದರಲ್ಲಿ ಬರುವ ಪ್ರಮುಖ ಪಾತ್ರಗಳಾದ ದೇವಿ ಮತ್ತು ರಕ್ತಬೀಜಾಸುರನ ಪಾತ್ರಗಳನ್ನು ಮೈದುಂಬಿಕೊಂಡು ಅದ್ಭುತವಾಗಿ ನಿರ್ವಹಿಸುತ್ತಿದ್ದ ರತ್ನಯ್ಯ ಮತ್ತು ರುದ್ರಪ್ಪ ಎಂಬ ಖಾಯಂ ಪಾತ್ರಧಾರಿಗಳು.

ದೇವಿ ಮತ್ತು ರಕ್ತಬೀಜಾಸುರರ ನಡುವಿನ ಯುಧ್ದದ ಈ ದೃಶ್ಯ ಬರುತ್ತಿದ್ದುದು ಮೇಳದ ಕೊನೆಯಲ್ಲಿ. ರಕ್ತಬೀಜಾಸುರನ ವಧೆಯಾಗುವ ಹೊತ್ತಿಗೆ ಸರಿಯಾಗಿ ಬೆಳಕಾಗುತ್ತಿತ್ತು. ರಾತ್ರಿಯಿಡೀ ಬಯಲಲ್ಲಿ ಕೂತು ಮೇಳವನ್ನು ನೋಡುತ್ತಿದ್ದ ಜನ ಆ ಕ್ಷಣಕ್ಕಾಗಿ ಕಾತರಿಸುತ್ತಿದ್ದರು. ಹೀಗೆ ಯುದ್ಧ ಮಾಡುವಾಗ ಆರ್ಭಟಿಸಿ ಬೊಬ್ಬಿರಿಯುತ್ತಿದ್ದ ದೇವಿ, ಈ ನಡುವೆ ಹಲವು ಸರ್ತಿ ಮೂರ್ಛೆ ಹೋಗಿ ಬಿಡುತ್ತಿದ್ದಳು. ಆಗ ಅವಳನ್ನು ಆತು ಹಿಡಿದು ಮಂಗಳಾರತಿ ಎತ್ತಿ ಭಕ್ತಿಯಿಂದ ಪೂಜಿಸಿಸುತ್ತಿರುವಾಗಲೇ ಇದ್ದಕ್ಕಿದ್ದಂತೆ ಎದ್ದು ಮತ್ತೆ ಆರ್ಭಟಿಸುತ್ತಿದ್ದಳು. ಆ ಆರ್ಭಟಕ್ಕೆ ಒಂಚೂರು ನೋಡುತ್ತಾ, ಮತ್ತೊಂಚೂರು ನಿದ್ದೆ ಮಾಡುತ್ತಿದ್ದವರೂ ಎಚ್ಚರಗೊಂಡು ಬಿಡುತ್ತಿದ್ದರು. ಎಂಥದೋ ಸಂಚಾರವಾದವರಂತೆ ಇಡೀ ಸಭಿಕ ಸಮೂಹವೇ ಮೌನಕ್ಕೆ ಶರಣಾಗಿ ಬಿಡುತ್ತಿತ್ತು. ಇವರಿಬ್ಬರ ಕುಣಿತಕ್ಕೆ ಮರದ ಹಲಗೆಗಳಿಂದ ಹಾಕಿರುತ್ತಿದ್ದ ಸ್ಟೆಜಿನಲ್ಲಿ ಮುರಿದು ಬೀಳುವಂಥ ಸದ್ದಾಗುತ್ತಿತ್ತು.

ಆ ಸಲ ಎಂದಿನಂತೆ ದೇವಿ ಮಹಾತ್ಮೆ ಮೇಳ. ಹಿಂದಿನ ದಿನವೇ ಬಂದಿದ್ದ ಸೀನರಿಯವರು ರೆಡಿ ಮಾಡಿದ್ದ ಜಗ ಜಗಿಸುವ ಸ್ಟೇಜು, ಸಣ್ಣ ಮಕ್ಕಳ ಕಣ್ಣು ಕುಕ್ಕುತ್ತಿತ್ತು. ಬೆಳಗಿನಿಂದಲೇ ಅಲ್ಲಿ ಜಮಾಯಿಸಿದ್ದ ಮಕ್ಕಳು ಊಟ, ತಿಂಡಿಗೆಂದು ಮಾತ್ರ ಮನೆಗೆ ಹೋಗಿ, ಮುಗಿದ ತಕ್ಷಣವೇ ವಾಪಸ್ಸಾಗುತ್ತಿದ್ದರು. ಸಂಜೆಯಿಂದಲೇ ನನ್ನ ಪುಟ್ಟ ಹಳ್ಳಿಯಲ್ಲಲ್ಲದೆ, ಸುತ್ತ ಮುತ್ತಲಿನ ಹಳ್ಳಿಯವರು ಹೊದೆಯಲೊಂದು ಕಂಬಳಿ ಅಥವಾ ರಗ್ಗು, ಹಾಸಲೊಂದು ಚಾಪೆಯ ಜೊತೆಗೆ ಮೇಳ ನಡೆಯುವ ಸ್ಥಳಕ್ಕೆ ಸೇರ ತೊಡಗಿದ್ದರು. ಮುಂಚೆ ಬಂದವರು ತಮ್ಮವರುಗಳಿಗಾಗಿ ಸೀಟುಗಳನ್ನು ರಿಸರ್ವ್ ಮಾಡುತ್ತಿದ್ದರು. ಜನರೆಲ್ಲಾ ಹೀಗೆ ಒಬ್ಬೊಬ್ಬರಾಗಿ ಮೇಳ ನಡೆಯುವ ಜಾಗದಲ್ಲಿ ಕೂಡಿಕೊಳ್ಳುತ್ತಿದ್ದರೆ, ಗೆಳೆಯ ಶಂಕರ ಮಾತ್ರ ನನ್ನನ್ನು, ಆಡಿಟ್ಟ ಮತ್ತು ತಪಲನನ್ನು ಸ್ಟೇಜಿನ ಹಿಂಭಾಗಕ್ಕೆ ಕರೆದುಕೊಂಡು ಹೋಗಿ, ತಾನು ತಂದಿದ್ದ ರಮ್ಮಿನ ಪುಟ್ಟ ಬಾಟಲನ್ನು ಜೇಬಿನಿಂದ ತೆಗೆದು ತೋರಿಸಿ, ಆಸೆ ಮತ್ತು ಆತಂಕಗಳನ್ನು ಒಟ್ಟಿಗೇ ಹುಟ್ಟು ಹಾಕಿದ್ದ. ಅದಕ್ಕಾಗಿ ಅವನು ಜಾಗ ಹಾಗೂ ಸಮಯವನ್ನು ನಿಗದಿ ಮಾಡಿದ್ದ. ಅದು ಹೇಗೆ ತಂದ, ಅದಕ್ಕೆಷ್ಟು ದುಡ್ಡು ಅಂತ ನಾವು ಕೇಳಲೂ ಇಲ್ಲ, ಅವನು ಹೇಳಲೂ ಇಲ್ಲ.

ಅದರಂತೆ ನಾವು ಮೂವರು ಶಂಕರನೊಂದಿಗೆ ಊರಾಚೆಯಲ್ಲಿದ್ದ ದೇವಸ್ಥಾನದ ಪೌಳಿಗೆ ಹೋಗುವ ಹೊತ್ತಿಗೆ ಬೆಳಗಿನ ಜಾವಕ್ಕೆ ಬಂದಿತ್ತು. ಜನರೆಲ್ಲಾ ಮೇಳದಲ್ಲಿ ಮುಳುಗಿ ಹೋಗಿದ್ದರು. ಶಂಕರ ಇದಕ್ಕೆ ಮುಂಚೆ ಒಂದೆರಡು ಸಾರ್ತಿ ಕುಡಿದಿದ್ದರೂ, ಹೇಗೆ ಕುಡಿಯ ಬೇಕು ಮತ್ತು ಯಾವುದರಲ್ಲಿ ಕುಡಿಯಬೇಕು ಅನ್ನುವುದು ಸರಿಯಾಗಿ ಗೊತ್ತಿರಲಿಲ್ಲ. ಹಾಗಾಗಿ, ಮನೆಯಿಂದ ಲೋಟಗಳನ್ನು ತಂದರೆ ಅನುಮಾನ ಬರಬಹುದೆಂಬ ಕಾರಣಕ್ಕೆ, ತೆಂಗಿನ ಚೊಟ್ಟೆಗಳೇ ನಮಗವತ್ತು ಲೋಟಗಳಾಗಿದ್ದವು. ದೇವಸ್ಥಾನದ ಹಿಂದಿದ್ದ ಪುಟ್ಟ ಕೆರೆಯ ನೀರೇ ನಮಗೆ ಸೋಡಾ, ಸೆವೆನ್‍ಅಪ್‍ಗಳು. ಪೌಳಿ ಸೇರಿದ ಮೇಲೆ ನಮಗಾಗಿ ಅಡಗಿಸಿಟ್ಟಿದ್ದ ಚೊಟ್ಟೆಗಳನ್ನು ಶಂಕರ ಒಂದೊಂದಾಗಿ ತೆಗೆದು ಕೊಟ್ಟ. ನಂತರ ಎಲ್ಲರೂ ತಂತಮ್ಮ ಚೊಟ್ಟೆಗಳಿಗೆ ಕೆರೆಯಲ್ಲಿ ನೀರು ತುಂಬಿಕೊಂಡು ಬರುವುದೆಂದು ತೀರ್ಮಾನವಾಗಿ ಎಲ್ಲರೂ ಕತ್ತಲೆಯಲ್ಲೇ ಕೆರೆಯತ್ತ ಹೊರೆಟವು. ಕೆರೆಯಲ್ಲಿ ತುಂಬಿಕೊಂಡ ನೀರು ನಾವು ಪೌಳಿಯನ್ನು ತಲುಪುವ ಹೊತ್ತಿಗೆ ಹೆಚ್ಚೂ ಕಡಿಮೆ ಅರ್ಧ ಮಾತ್ರ ಉಳಿದಿತ್ತು. ಆ ಉಳಿದ ನೀರಿಗೆ ಶಂಕರ ಬಾಟಲಿನಿಂದ ಎಲ್ಲರಿಗೂ ಸಮನಾಗಿ ರಮ್ಮನ್ನು ಸುರಿದ. ಅದರ ಘಾಟಿಗೇ ನನಗೆ ತಲೆ ತಿರುಗಿ ಬಂದ ಹಾಗಾಯ್ತು. ನನ್ನಂತೆ ಉಳಿದವರಿಗೂ ಆದರೂ, ಇದೆಲ್ಲಾ ಮಾಮೂಲಿ, ಕುಡಿದರೆ ಸರಿಯಾಗುತ್ತೆ, ಕುಡಿಯಿರಿ ಅಂತ ಶಂಕರ ಚೊಟ್ಟೆಯನ್ನೆತ್ತಿ ಒಂದು ಗುಕ್ಕು ಕುಡಿದ. ನಾನು ಕುಡಿದ ಗುಕ್ಕಿನ ರಮ್ಮು ನನ್ನ ಗಂಟಲಿನಲ್ಲಿ ಬೆಂಕಿಯನ್ನು ಹತ್ತಿಸಿಕೊಂಡು ಕೆಳಕ್ಕಿಳಿಯುತ್ತಾ ಹೋಗಿ, ಜೊತೆಗೆ ಒಮ್ಮೆಗೇ ವಾಕರಿಕೆ ಬಂದಂತಾಗಿ ಬಾಯಲ್ಲಿದ್ದದ್ದನ್ನೆಲ್ಲಾ ಆಚೆ ಉಗಿದು ಬಿಟ್ಟೆ. ಅಷ್ಟು ಹೊತ್ತಿಗಾಗಲೇ ಕಣ್ಣುಗಳ ತುಂಬಾ ನೀರು ತುಂಬಿಕೊಂಡು ಬಿಟ್ಟಿದ್ದವು. ನಂಗಂತೂ ಬೇಡವೇ ಬೇಡ, ಅಂತ ಚೊಟ್ಟೆಯನ್ನು ಕೆಳಗಿಟ್ಟಿದ್ದ ಕಂಡ ಶಂಕರ,’ಒಂದೇ ಉಸ್ರಿಗೆ ಹಂಗೆ ಕುಡುದ್ರೆ ಇನ್ನೇನಾಗುತ್ತೆ, ನೋಡು ಹಿಂಗೆ ಇಷ್ಟಷ್ಟೇ ಕುಡಿಯ ಬೇಕು’ ಅಂತ ಮತ್ತೊಂದು ಗುಟುಕನ್ನು ಚಪ್ಪರಿಸಿದ. ನಾನು ಚೊಟ್ಟೆಯಲ್ಲಿದ್ದುದ ಖಾಲಿ ಮಾಡುವ ಹೊತ್ತಿಗೆ, ಹೊಟ್ಟೆಯೊಳಗೆ ಸೇರಿದ್ದ ರಮ್ಮು ಸಣ್ಣಗೆ ಬೆಚ್ಚಗಾಗುತ್ತಾ, ಒಂಥರಾ ಸಂಕಟವನ್ನೂ, ಹೊಟ್ಟೆ ಪೂರಾ ತೊಳಿಸಿದಂಥ ಅನುಭವವನ್ನೂ ದೂಡುತ್ತಿತ್ತು.

ತಿರುಗಿ ಮೇಳದ ಜಾಗಕ್ಕೆ ಬರುವ ಹೊತ್ತಿಗೆ, ದೇವಿಗೂ ರಕ್ತ ಬೀಜಾಸುರನಿಗೂ ಯುದ್ಧ ಶುರುವಾಗಿತ್ತು. ದೇವಿ ಕೈಯ್ಯಲ್ಲಿರುವ ಕತ್ತಿಗಳನ್ನು ಜಳಪಿಸುತ್ತಾ ಹಲ್ಲು ಕಡಿಯುತ್ತಾ ನೆಗೆನೆಗೆದು ಕುಣಿಯುತ್ತಿದ್ದಾಳೆ. ರಕ್ತಬಿಜಾಸುರನೂ ಅಷ್ಟೇ ಗತ್ತಿನಲ್ಲಿ ಹೆಗಲ ಮೇಲಿದ್ದ ದಪ್ಪನೆಯ ಗದೆಯನ್ನು ಆಗಾಗ ಮೇಲೆತ್ತಿ ತಿರುವುತ್ತಾ ಲಯಬದ್ಧವಾಗಿ ಹೆಜ್ಜೆಗಳನ್ನು ಹಾಕುತ್ತಾ ದೇವಿಯನ್ನು ಯುದ್ಧಕ್ಕೆ ಆಹ್ವಾನಿಸುತ್ತಿದ್ದಾನೆ. ಸ್ಟೇಜಿನಿಂದ ದೂರದಲ್ಲಿ ಯಾರೋ ಹಾಸಿದ್ದ ಚಾಪೆಯಲ್ಲಿ ಕೂರುವ ಹೊತ್ತಿಗೆ ಹೊಟ್ಟೆಯ ಜೊತೆಗೆ ತಲೆಯೂ ಸುತ್ತಿ ಬಂದಂತಾಗತೊಡಗಿತು. ದೇವಿ ರಕ್ತಬೀಜಾಸುರರ ಅಬ್ಬರದ ದನಿ ಕೇಳಿದಂತೆಲ್ಲಾ ತಲೆ ಸುತ್ತು ಜಾಸ್ತಿಯಾಗಿ, ಮೊದಲೇ ತೊಳಿಸುತ್ತಿದ್ದ ಹೊಟ್ಟೆ ಮತ್ತೂ ಹೆಚ್ಚು ತೊಳಿಸತೊಡಗಿತು. ಕೂರಲು ಅಸಾಧ್ಯವಾಗಿ ಚಾಪೆಯಲ್ಲಿ ಮಲಗಿ ಕಣ್ಮುಚ್ಚಿದರೆ, ತಲೆಯಾದಿಯಾಗಿ ಎಲ್ಲವೂ ಸುತ್ತಿದಂತೆ…

ಚಾಪೆಯ ಯಜಮಾನರು ಏಳಿಸಿದಾಗ, ಮೇಳದಲ್ಲಿ ರಕ್ತ ಬೀಜಾಸುರನ ಸಂಹಾರವಾಗಿ, ಬೆಳಕು ಹರಿದಿತ್ತು. ಆ ಬೆಳಗಿನ ಬೆಳಕಿಗೆ ಕಣ್ಣು ಬಿಡಲಾರದೆ, ಎದ್ದು ನಿಂತರೆ ಸರಿಯಾಗಿ ನಡೆಯಲಾರದೆ, ಅಂತೂ ಇಂತೂ ಮನೆ ತಲುಪಿ ಮಲಗಿದವನಿಗೆ ಅಸಾಧ್ಯ ತಲೆ ನೋವು, ಮೈಪೂರಾ ಭಾರ. ರಾತ್ರಿಯೆಲ್ಲಾ ನಿದ್ದೆಗೆಟ್ಟು ಹಿಂಗಾಗೈತೆ, ನಿದ್ದೆ ಮಾಡಿದ್ರೆ ಎಲ್ಲಾ ಸರಿಯಾಗುತ್ತೆ ಅನ್ನುವ ಅಜ್ಜನ ಮಾತುಗಳು.

ಅದು ನಾನು ಎಸ್.ಎಸ್.ಎಲ್.ಸಿ. ಎಕ್ಸಾಂ ಬರೆದ ವರ್ಷ.

( ಚೊಟ್ಟೆ- ತೆಂಗಿನ ಕಾಯಿಯ ಚಿಪ್ಪು ಅಥವಾ ಕರಟ. )

———–

sgangadharaiahಎಸ್ ಗಂಗಾಧರಯ್ಯ, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಮಾಕಳ್ಳಿಯವರು. ಕಥೆಗಾರರಾಗಿ ವಿಶಿಷ್ಟ ಸಂವೇದನೆಯನ್ನು ದಾಖಲಿಸಿದವರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ, ಮಾನಸಗಂಗೋತ್ರಿಯಲ್ಲಿ ಇಂಗ್ಲಿಷ್ ಎಂಎ. ಪ್ರಸ್ತುತ ಮತಿಘಟ್ಟದ ಪದವಿಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರು. ತಿಪಟೂರಿನಲ್ಲಿ ವಾಸ. ನವಿಲ ನೆಲ, ವೈಕಂ ಕಥೆಗಳು, ಲೋರ್ಕಾ ನಾಟಕ-ಎರ್ಮಾ, ಚರಮ ಗೀತೆ-ಲೋರ್ಕಾ ಕಾವ್ಯ, ಹಲವು ರೆಕ್ಕೆಯ ಹಕ್ಕಿ, ಬೇಟೆಗಾರನ ಚಿತ್ರಗಳು, ದಾರಿಯೊ ಫೋ ನಾಟಕ-ಗುಲಾಬಿ ಗರ್ಭ ಅವರ ಪ್ರಮುಖ ಕೃತಿಗಳು. ವೈಕಂ ಕಥೆಗಳು ಕೃತಿಗೆ 1996ರ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಕುವೆಂಪು ಭಾಷಾ ಭಾರತಿ ಪ್ರಕಟಿಸುತ್ತಿರುವ ‘ಆಫ್ರಿಕನ್‌ ಸಾಹಿತ್ಯ ವಾಚಿಕೆ’ ಸಂಪಾದಕ ಮಂಡಳಿಯ ಸದಸ್ಯರು.ಇವರ ‘ವೈಕಂ ಕಥೆಗಳು’ ಮತ್ತು ‘ಎರ್ಮಾ’ ಬೆಂಗಳೂರು ವಿವಿ ಕನ್ನಡ ಎಂಎ ವಿದ್ಯಾರ್ಥಿಗಳಿಗೆ ಪಠ್ಯಗಳಾಗಿದ್ದವು. ಸದ್ಯ ‘ಸೀಬೆ ಸೊಗಡು’ ಕೃತಿ ಕರ್ನಾಟಕ ಕೇಂದ್ರೀಯ ವಿವಿ ಕನ್ನಡ ವಿಭಾಗ ಗುಲ್ಬರ್ಗಾ ಇಲ್ಲಿ ಪಠ್ಯವಾಗಿದೆ. ಕೃಷಿ ಮತ್ತು ತಿರುಗಾಟ ಬಲು ಪ್ರಿಯ.

Share

Leave a comment

Your email address will not be published. Required fields are marked *

Recent Posts More

  • 1 week ago No comment

    ಕವಿಸಾಲು | ಇಂಡೋನೇಶಿಯಾ

        ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ಜಲ, ಉಸಿರ ಗಾಳಿ ಹುಚ್ಚೆದ್ದು ಕುಣಿದು ಅಪ್ಪಳಿಸಿದ ಆಘಾತಕ್ಕೆ ಕಂಗೆಟ್ಟು ತತ್ತರಿಸಿವೆ ಪ್ರಾಣಿ, ಮನುಜ ಕುಲ ಮಾಡು ಹಾರಿ, ಕಂಬಗಳು ಕುಸಿದು ನೆಲಕಚ್ಚಿವೆ ಮಾನವನ ಬೀಡು ಕತ್ತರಿಸಿ ...

  • 1 week ago No comment

    ಕವಿಸಾಲು | ತಡವಿಲ್ಲದಿರಲಿ ಇನ್ನು…

        ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ತಡೆಯ ದಾಟಿ ತಲುಪಬೇಕಿದೆಯಷ್ಟೆ ಬಯಕೆ ಗುರಿಯನ್ನು ದಟ್ಟ ಹಸಿರಿನ ಕಾಡು, ಆಗಸದ ನೀಲಿ ಬಿಳಿಯ ಮೋಡಗಳ, ಬಿಸಿಲ ಬೆಳಕಿನ ನಡುವೆ ಬಯಲ ಸ್ವೇಚ್ಛೆಯ, ತಿಳಿಗಾಳಿ ತವಕದಲಿ ಬಂಧನಗಳ ...

  • 3 weeks ago No comment

    ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

        ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

  • 1 month ago No comment

    ಕವಿಸಾಲು | ಒಲವಿನಾಟ

        ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

  • 1 month ago No comment

    ಕವಿಸಾಲು | ನಕ್ಷತ್ರ ನಾವೆ

      ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...


Editor's Wall

  • 31 August 2018
    2 months ago No comment

    ಪ್ರಸಾದ್ ಪಟ್ಟಾಂಗ | ಓದು ಮಗು ಓದು…

        “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

  • 30 August 2018
    2 months ago No comment

    ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                        ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

  • 26 August 2018
    2 months ago No comment

    ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

        ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

  • 26 August 2018
    2 months ago No comment

    ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

      ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

  • 23 August 2018
    2 months ago No comment

    ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                        ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...