Share

ನೀಲಾಂಜನೆ ಕರಗಿದ್ದಾಳೆ !
ಉಷಾ ಕಟ್ಟೆಮನೆ ಕಾಲಂ

IMG-20160516-WA0001

ಸ್ವಗತ| svagata

 

 

 

usha

ಪಂಪನ ಆದಿಪುರಾಣದಲ್ಲೊಂದು ಪ್ರಸಂಗ ಬರುತ್ತದೆ:

ಮೊದಲನೆಯ ತೀರ್ಥಂಕರನಾದ ಆದಿನಾಥ (ಪುರುದೇವ) ಇಂದ್ರ ತನಗಾಗಿ ಏರ್ಪಡಿಸಿದ ಸುರಸಂಗೀತದಲ್ಲಿ ಮೈ ಮರೆತಿದ್ದಾನೆ. ನೀಲಾಂಜನೆಯೆಂಬ ದೇವನರ್ತಕಿ ನಾಟ್ಯರಂಗಕ್ಕೆ ಪ್ರವೇಶ ಮಾಡುತ್ತಾಳೆ. ಆಕೆ ಹೇಗೆ ಬರುತ್ತಾಳೆಂದರೆ;

ಕಬ್ಬಿನ ಬಿಲ್ಲಿಗೆ ಕಾಮದೇವನ ಬಾಣವು ಸೇರಿ ಜೀವಂತ ಮೂರ್ತಿಯಾಯಿತೋ ಎನ್ನುವಂತಿದ್ದ ಆಕೆ ರಂಗವನ್ನು ಮತ್ತು ಪ್ರೆಕ್ಷಕರ ಅಂತರಂಗವನ್ನು ಏಕಕಾಲದಲ್ಲಿ  ’ಭೋಂಕನೆ’ ಪ್ರವೇಶಿಸಿದಳಂತೆ.

ಅದನ್ನು ಪಂಪನ ಮಾತುಗಳಲ್ಲೇ ಕೇಳುವುದಾದರೆ…

“ಕರ್ಬಿನ ಬಿಲ್ಲಂ ಮಸೆದ ಮದನನಲರ್ಗಣೆ ಬರ್ದುಕಿ

ತ್ತೆನಿಸುತ್ತೊಳಪೊಕ್ಕಳ್ ಭೊಂ

ಕೆನೆ ನಿಖಿಳಜನಾಂತರಂಗಂ ರಂಗಮುಮಂ”

ಇಂತ ಅಪ್ರತಿಮ ಸುಂದರಿಯ ಆಯುಸ್ಸು ನಾಟ್ಯವಾಡುತ್ತಿರುವಾಗಲೇ ಮುಗಿದು ಹೋಗಿ ಆಕೆ  ಕರ್ಪೂರದ ಹಾಗೆ ಕ್ಷಣಮಾತ್ರದಲ್ಲಿ ಕಣ್ಮರೆಯಾಗುತ್ತಾಳೆ. ಆದರೆ ರಸಿಕರಿಗೆ ರಸಭಂಗವಾಗಬಾರದೆಂದು ಇಂದ್ರ ಅವಳಂಥದೇ ಪ್ರತಿರೂಪವೊಂದನ್ನು ಸ್ರುಷ್ಟಿಸಿ ನಾಟ್ಯ ಮುಂದುವರಿಯುವಂತೆ ನೋಡಿಕೊಳ್ಳುತ್ತಾನೆ. ಇದು ಯಾರಿಗೂ ಗೊತ್ತಾಗದಿದ್ದರೂ ಪುರುದೇವನಿಗೆ ಗೊತ್ತಾಗುತ್ತದೆ. ಈ ದೇಹ ಎಷ್ಟೊಂದು ಕ್ಷಣಿಕವಾದುದು, ನಶ್ವರವಾದುದು ಎಂಬುದು ಮನದಟ್ಟಾಗಿ ಆತ ವೈರಾಗ್ಯದೆಡೆಗೆ ಮುಖ ಮಾಡುತ್ತಾನೆ.

ಈ ನೀಲಾಂಜನೆಯ ಹಾಗೆ ನನ್ನನ್ನು ಆಕರ್ಷಿಸಿದ್ದು ಈ ಫೇಸ್ಬುಕ್ ಎಂಬ ಭ್ರಮಾ ಜಗತ್ತು (ವರ್ಚುವಲ್ ಜಗತ್ತು) ಮೊದ ಮೊದಲು ಇಲ್ಲಿಗೆ ಬಂದಾಗ ಅಗಾಧ ಸ್ನೇಹ ಸಾಗರದಲ್ಲಿ ಈಜಾಡಿದಂತಹ ಹುಮ್ಮಸ್ಸು, ಪುಳಕ, ಬರಬರುತ್ತಾ ಈ ನಾಲ್ಕೈದು ವರ್ಷಗಳಲ್ಲಿ ನೀರಿನಾಳದಲ್ಲಿದ್ದ ವಿವಿಧ ಜಲಚರಗಳ ಪರಿಚಯವಾಯ್ತು. ಹಲವು ಸ್ನೇಹ ಜೀವಿಗಳು. ಕೆಲವು ಹಿಂಸ್ರಾ ಪಶುಗಳು.

ಸ್ನೇಹ ಜೀವಿಗಳು ತಮ್ಮಷ್ಟಕ್ಕೆ ತಾವಿರುವ ನಿರುಪದ್ರವಿಗಳಾದ ಕಾರಣ ಅವುಗಳ ಇರುವಿಕೆ ಮತ್ತು ಇಲ್ಲದಿರುವಿಕೆ ಮಿಕ್ಕುಳಿದ ಜೀವಜಂತುಗಳ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಆದರೆ ಹಿಂಸ್ರಾ ಪಶುಗಳ ದಾಂಧಲೆಗೆ ನಜ್ಜುಗುಜ್ಜು. ಆದರೂ ನೀಲಾಂಜನೆಯ ಮೇಲಿನ ಮೋಹ ತಗ್ಗಿರಲಿಲ್ಲ.

ಸೆಲ್ಫ್ ಮಾರ್ಕೇಟಿಂಗ್ ಗುಣ ಹೊಂದಿದವರಾಗಿದ್ದು ಅದರ ತಂತ್ರಗಳು ಗೊತ್ತಿದ್ದವರಿಗೆ ಈ ನೀಲಾಂಜನೆಯ ಜಗತ್ತಿಗೆ ಮುಕ್ತ ಪ್ರವೇಶವಿದೆ. ಮುಖ್ಯವಾಗಿ ಇನ್ನೊಬ್ಬರನ್ನು ಬಿಡೆಯಿಲ್ಲದೆ ಹೊಗಳುವ. ಹೊಗಳಿಸಿಕೊಳ್ಳುವ ಆ ಮೂಲಕ ಭ್ರಮಾತ್ಮಕವಾದ ಜಗತ್ತಿಗೆ ಸೇತುವೆ ಕಟ್ಟುವವರಿಗೆ ಇದು ಹೇಳಿ ಮಾಡಿಸಿದ ವೇದಿಕೆ.

ಕಳೆದ ಭಾನುವಾರ ನನ್ನದೊಂದು ಪುಸ್ತಕ ಬಿಡುಗಡೆಯಾಯ್ತು. ಪೇಸ್ಬುಕ್ಕಿನಲ್ಲಿ ನನ್ನ ಸ್ನೇಹಸಾಗರದಲ್ಲಿರುವ ಕೆಲವು ಸಹ ಜೀವಿಗಳಾದರೂ ಅಲ್ಲಿಗೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದೆ. ಕಡಲ ಹೊಯ್ದಾಟಕ್ಕೆ ಕಿಂಚಿತ್ತೂ ನಲುಗದೆ ನಡುಗಡ್ಡೆಯ ಹಾಗೆ ನಿಶ್ಚಲವಾಗಿದ್ದ  ಕೆಲವೇ ಕೆಲವು ಮಂದಿ ನನ್ನ ಸಂಭ್ರಮದಲ್ಲಿ ಭಾಗಿಯಾಗಿದ್ದರು.

ಇಲ್ಲಿಯ ಹೊಗಳಿಕೆಗಳು ಹೊಗಳಿಕೆಗಳಲ್ಲ ಎಂದು ನನಗೆ ಬಹುಬೇಗನೇ ಅರಿವಿಗೆ ಬಂದ ಕಾರಣ ನಾನು ಕಿರೀಟವೇರಿಸಿಕೊಳ್ಳಲಿಲ್ಲ. ಏರಿಸಿಕೊಂಡಿದ್ದರೆ ಇವರು ಕುಕ್ಕಿದ ರಬಸಕ್ಕೆ  ಮೇಲೇಳಲಾಗುತ್ತಿರಲಿಲ್ಲ. ಇಲ್ಲಿ ಹೆಚ್ಚಿನವರು ನ್ಯಾಯಾಧೀಶರ ಗತ್ತಿನಲ್ಲೇ ಬರೆಯುತ್ತಿರುವ ಕಾರಣದಿಂದಾಗಿ ಎದೆಯ ತಳಮಳವನ್ನು ಅಕ್ಷರವಾಗಿಸಲು ಭಯವಾಗುತ್ತಿದೆ. ನನ್ನ ಸಂದೇಹಗಳು, ಆತಂಕಗಳು  ಒಳಗೊಳಗೆ ನಡುಗುತ್ತಿವೆ, ಚಾರಿತ್ರ್ಯವಧೆಯ ಭಯದಲ್ಲಿ ನರಳುತ್ತಿವೆ.

ಈಗ ನನ್ನ ಮುಂದಿದ್ದ ನೀಲಾಂಜನೆ ಕರಗಿ ಹೋಗಿದ್ದಾಳೆ.  ಎದುರಲ್ಲಿ ಶೂನ್ಯವಿದೆ. ಶೂನ್ಯದಲ್ಲಿ ಏನೂ ಹುಟ್ಟುವುದಿಲ್ಲವಂತೆ. ಹಾಗಾಗಿ ಒಳಗಿನ ನೀಲಾಂಜನೆ ಪ್ರಶ್ನಿಸುತ್ತಿದ್ದಾಳೆ.

ನೀಲಾಂಜನೆಯ ಜಾಗಕ್ಕೆ ಬಂದು ನಿಲ್ಲುವವರು ಯಾರು?

———-

usha2ಉಷಾ ಕಟ್ಟೆಮನೆ, ಪತ್ರಕರ್ತೆಯಾಗಿ, ಅದಕ್ಕೂ ಮೊದಲು ಕನ್ನಡ ಉಪನ್ಯಾಸಕಿಯಾಗಿ ಕೆಲಸ ಮಾಡಿದವರು. ದೃಶ್ಯ ಮಾಧ್ಯಮಕ್ಕಾಗಿಯೂ ಕೆಲಸ ಮಾಡಿದ ಅನುಭವ. ಆದರೆ ಅವರು ಪರಿಚಿತರಾಗಿರುವುದು ತಮ್ಮ ವಿಶಿಷ್ಟ ಸಂವೇದನೆಯ ಬರವಣಿಗೆಯಿಂದಾಗಿ. ಕೆಲ ವರ್ಷಗಳಿಂದ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ದೇಶ ಸುತ್ತುವುದೆಂದರೆ ಇವರಿಗೆ ಅತ್ಯಂತ ಇಷ್ಟ.

Share

One Comment For "ನೀಲಾಂಜನೆ ಕರಗಿದ್ದಾಳೆ !
ಉಷಾ ಕಟ್ಟೆಮನೆ ಕಾಲಂ
"

  1. 18th July 2016

    ಇಲ್ಲಿಯ ಹೊಗಳಿಕೆಗಳು ಹೊಗಳಿಕೆಗಳಲ್ಲ ಎಂದು ನನಗೆ ಬಹುಬೇಗನೇ ಅರಿವಿಗೆ ಬಂದ ಕಾರಣ ನಾನು ಕಿರೀಟವೇರಿಸಿಕೊಳ್ಳಲಿಲ್ಲ. so true!

    Reply

Leave a comment

Your email address will not be published. Required fields are marked *

Recent Posts More

  • 4 hours ago No comment

    ಪ್ರತಿಯೊಬ್ಬರೊಳಗೂ ಒಂದೊಂದು ಕಥೆ!

    ಆಕೆ ಮೀರಾ. ತಾನು ಬರೆದ ಕಥೆಯೊಂದರ  ಮೂಲಕ ಇದ್ದಕ್ಕಿದ್ದಂತೆ ಲಕ್ಷಾಂತರ ಮನಸ್ಸನ್ನು ಮುಟ್ಟಿಬಿಡುತ್ತಾಳೆ. ವಿವಾನ್ ಎಂಬ ಬ್ಯಾಂಕ್ ಅಧಿಕಾರಿಯೊಬ್ಬನಿಗೆ ಜಗತ್ತನ್ನೇ ಸುತ್ತುವ ಕನಸು. ಕೆಫೆಯೊಂದರ ಮ್ಯಾನೇಜರ್ ಕಬೀರ್ ತನ್ನದೇ ಆದ ಏನನ್ನಾದರೂ ಸಾಧಿಸುವ ಹಂಬಲವಿಟ್ಟುಕೊಂಡವನು. ಅದೇ ಕೆಫೆಯ ಗ್ರಾಹಕಿ ನಿಶಾ ಎಂಥದೋ ಹತಾಶೆಗೆ ಸಿಕ್ಕಿಹಾಕಿಕೊಂಡು, ತನ್ನದೇ ಆದ ಗುಟ್ಟುಗಳನ್ನು ಬಚ್ಚಿಟ್ಟುಕೊಂಡಿರುವವಳು. ಪ್ರತಿಯೊಬ್ಬರದೂ ಒಂದೊಂದು ಕಥೆ. ಅಂಥ ನಾಲ್ವರೂ ಒಂದೆಡೆ ಸೇರಿದಾಗ ಏನಾಗುತ್ತದೆ? ಈ ಕುತೂಹಲವನ್ನು ತೆರೆದಿಡುತ್ತ ಹೋಗುವ ಕಾದಂಬರಿಯೇ ...

  • 1 day ago No comment

    ನನ್ನೊಳಗಿನ ಮಗುವಿಗೊಂದು ಪತ್ರ

          ನಿನ್ನೆ ನನ್ನ ಹಳೆಯ ಕಡತಗಳನ್ನೆಲ್ಲಾ ತೆರೆದು ಏನನ್ನೋ ಹುಡುಕುತ್ತಿದ್ದಾಗ ನೀನು ಬಿಡಿಸಿದ ಕೆಲವು ಚಿತ್ರಗಳು ಸಿಕ್ಕವು. ನಿಜಕ್ಕೂ ಅದ್ಭುತವಾಗಿದ್ದವು ಅವುಗಳು.       ಮಕ್ಕಳ ದಿನಾಚರಣೆಯ ಋತುವಿನಲ್ಲಿ ನಮ್ಮದೇ ಹನ್ನೆರಡರ ವ್ಯಕ್ತಿತ್ವಕ್ಕೊಂದು ಪತ್ರ ಬರೆದರೆ ಹೇಗಿರುತ್ತದೆ ಎಂಬ ಯೋಚನೆಯೊಂದು ತಲೆಯೆತ್ತಿತು. ಸದ್ಯ ಪತ್ರಗಳಂತೂ ಮಾಯವಾಗಿವೆ. ನಿತ್ಯಜೀವನದ ಜಂಜಾಟದಲ್ಲಿ ನಮ್ಮೊಳಗಿನ ಮಗುವೂ ನಿಧಾನಕ್ಕೆ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲೇ ಇವೆರಡನ್ನೂ ಒಂದೇ ವೇದಿಕೆಗೆ ತಂದಿಡುವ ...

  • 2 days ago No comment

    ದುರಿತ ಕಾಲದ ಕವಿತೆಗಳು

        ಕವಿಸಾಲು       1 ಒಂಟಿಯಾಗಿ ಹೆಗಲಲಿ ನೇಗಿಲ ಎಳೆದು ಅಜ್ಜಿ ಬಿತ್ತಿದ ರಾಗಿಗೆ ಸಗ್ಗಣಿ ಗೊಬ್ಬರ ಹಾಕಿ ಖಂಡುಗಗಟ್ಟಲೇ ರಾಗಿ ಬೆಳೆದ ಅಜ್ಜನ ಹೊಲದ ಮೇಲಿವತ್ತು ಚತುಷ್ಕೋನ ರಸ್ತೆ ರಾರಾಜಿಸುತ್ತಿದೆ ಆರಾಮಾಗಿ ಅಲ್ಲಿ ಮಲಗಿರುವ ಅವನ ಎದೆಯ ಮೆಲೆ ಅನಿಲ ಟ್ಯಾಂಕರುಗಳು ಅಡ್ಡಾಡುತಿವೆ ನೋವಾಗುತ್ತಿರುವುದು ಮಾತ್ರ ನನಗೆ! ~ 2 ಅಭಿವೃದ್ದಿಯ ಜಾಹಿರಾತಿನಲ್ಲಿ: ಹಡಗಿನಂತಹ ಕಾರುಗಳು ಹಾಳೆಗಳಂತಹ ಮೊಬೈಲುಗಳು ಕಣ್ಣು ಕುಕ್ಕುವ ಕಂಪ್ಯೂಟರುಗಳು ...

  • 2 days ago No comment

    ನಾಲ್ಕು ಹನಿಗಳು

        ಕವಿಸಾಲು         ಧ್ಯೇಯದಿಂದ ನೆಲ ಅಗೆದೆ ಗಿಡ ನೆಡಲು. ಮತ್ತೆ ಕಾಣಿಸಿತು ಧ್ಯಾನಸ್ಥ ಎರೆಹುಳು. ~ ನದಿ ತಟದ ಬೆಂಚಿನ ಮೇಲೆ ನಾನು ಎರಡೂ ತಟಗಳಿಗೆ ಅಂಟಿದ್ದ ದಪ್ಪನೆ ಕಾಂಕ್ರೀಟ್ ಗೋಡೆ. ಹರಿವ ನೀರು, ನಾನು ಬಂಧಿಗಳೇ. ~ Mindfulness ಎಂದೆಲ್ಲಾ ಹೇಳುವ ಅವರ ಹೆಮ್ಮೆಗೆ ಕಾಣಿಸಲಿಲ್ಲವೇಕೆ ಅಖಂಡವಾಗಿ ನಿಂತು ಜಗಿಯುವ ಆ ಎಮ್ಮೆ? ~ ಆ ಒಂದು ಮಳೆ ಹನಿ ...

  • 2 days ago No comment

    ಕಂಗಾಲಾಗಿದ್ದಾಗ ನಾವೆಲ್ಲ, ಮೆಲ್ಲಮೆಲ್ಲನೆ ಬಂದಳಲ್ಲ!

      ಅಡಗಿಕೊಳ್ಳಲು ಬಾಳೆ ಬುಡ ಆರಿಸಿಕೊಂಡ ಪುಟಾಣಿಗೆ ಬೇಸಿಗೆಯ ಆ ಮಧ್ಯಾಹ್ನ ಊಟ ಮಾಡಿ ನಿದ್ದೆ ಮಾಡುವ ಸಮಯವಾಗಿತ್ತು.         ಬಾಲ್ಯ ಬಂಗಾರ   ಬಾಲ್ಯದ ಮಜವನ್ನು ಅನುಭವಿಸದ ಮಕ್ಕಳು ಬದುಕನ್ನು ಪೂರ್ಣವಾಗಿ ಸವಿಯುವುದು ಕಷ್ಟವೇ? ಆ ಮಜವೇ ಭಿನ್ನ, ಅದರಲ್ಲೂ ಹಳ್ಳಿಯ ಬದುಕಿನ ಬಾಲರ ಜೀವನದಲ್ಲಿ ಬಾಲ್ಯ ಅನನ್ಯವಾದ ಜೀವನಾನುಭವ ನೀಡುವ ಕಾಲ. ಪೇಟೆಯಲ್ಲಿ ರೇಷ್ಮೆ ಹುಳುವಿನಂತೆ ಪೊರೆಯ ಒಳಗೆ ಬದುಕುವ ಮಕ್ಕಳ ...


Editor's Wall

  • 21 November 2017
    1 day ago No comment

    ನನ್ನೊಳಗಿನ ಮಗುವಿಗೊಂದು ಪತ್ರ

          ನಿನ್ನೆ ನನ್ನ ಹಳೆಯ ಕಡತಗಳನ್ನೆಲ್ಲಾ ತೆರೆದು ಏನನ್ನೋ ಹುಡುಕುತ್ತಿದ್ದಾಗ ನೀನು ಬಿಡಿಸಿದ ಕೆಲವು ಚಿತ್ರಗಳು ಸಿಕ್ಕವು. ನಿಜಕ್ಕೂ ಅದ್ಭುತವಾಗಿದ್ದವು ಅವುಗಳು.       ಮಕ್ಕಳ ದಿನಾಚರಣೆಯ ಋತುವಿನಲ್ಲಿ ನಮ್ಮದೇ ಹನ್ನೆರಡರ ವ್ಯಕ್ತಿತ್ವಕ್ಕೊಂದು ಪತ್ರ ಬರೆದರೆ ಹೇಗಿರುತ್ತದೆ ಎಂಬ ಯೋಚನೆಯೊಂದು ತಲೆಯೆತ್ತಿತು. ಸದ್ಯ ಪತ್ರಗಳಂತೂ ಮಾಯವಾಗಿವೆ. ನಿತ್ಯಜೀವನದ ಜಂಜಾಟದಲ್ಲಿ ನಮ್ಮೊಳಗಿನ ಮಗುವೂ ನಿಧಾನಕ್ಕೆ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲೇ ಇವೆರಡನ್ನೂ ಒಂದೇ ವೇದಿಕೆಗೆ ತಂದಿಡುವ ...

  • 19 November 2017
    3 days ago No comment

    ಸಂಸಾರದ ಬಂಧಗಳ ಬಗ್ಗೆ ಬರಿದೆ ಮಾತಿಂದ…

            | ಕಮಲಾದಾಸ್ ಕಡಲು     ನನ್ನ ಅಪ್ಪನ ಸಾವು (My Father’s Death) ಕಮಲಾದಾಸ್ ಕವಿತೆಯ ಅನುವಾದ     ಅಪ್ಪ ಸತ್ತಾಗ ಅಪ್ರಾಮಾಣಿಕರು ಮಾತ್ರ ಕಣ್ಣೀರು ಸುರಿಸಿದರು, ಅವನ ಹೆಣದೊಡನೆ ಫೋಟೋ ತೆಗೆಸಿಕೊಳ್ಳಲು ಬಂದ ಅವರಿಗೆ ಅಪ್ಪನೆಂದರೆ ವಾಸ್ಕೋಡಗಾಮ ಕಪ್ಪಾದ್ ಬೀಚಿನ ಮರಳಿನ ಮೇಲೆ ಮೊದಲು ಕಾಲಿರಿಸಿದ ನಂತರ ಕ್ಯಾಲಿಕಟ್’ನಲ್ಲಿ ಸತ್ತವರಲ್ಲಿ ಅತಿ ಮುಖ್ಯವಾದ ವ್ಯಕ್ತಿಯಾಗಿದ್ದರು ಅಷ್ಟೇ. ರಸ್ತೆಯ ಇಕ್ಕೆಲದಲ್ಲೂ ...

  • 17 November 2017
    5 days ago 2 Comment

    ನನ್ನನ್ನು ಕವಿಯೆಂದರು..!

        ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

  • 14 November 2017
    1 week ago No comment

    ಅವ್ರ್ ಬಿಟ್ ಇವ್ರ್ ಬಿಟ್ ಅವ್ರ್ ಬಿಟ್ ಇವ್ರ್ ಯಾರು?

        ಈಗ ಮಕ್ಕಳನ್ನೆಲ್ಲ ಪರ ಊರುಗಳ ಬೋರ್ಡಿಂಗ್ ಶಾಲೆಗಳಲ್ಲಿ ನೂಕಿ ಯಾವ ಮನೆಗಳಲ್ಲೂ ಮಕ್ಕಳಿಲ್ಲದೆ ಬಣಗುಟ್ಟುತ್ತಿವೆ. ಹೋಮ್ ವರ್ಕ್, ರ್ಯಾಂಕ್ ಓಟ, ಅಂಕದ ಬೇಟೆಯಲ್ಲಿ ಸಿಲುಕಿ ಯಾವ ರಸ್ತೆಯಲ್ಲೂ ಮಕ್ಕಳು ಆಡುವುದಿಲ್ಲ. ಮಕ್ಕಳ ದಿನಕ್ಕೆ ಒಂದು ವಿಶೇಷ ಬರಹ, ಕಾದಂಬಿನಿ ಅವರಿಂದ       ಮಕ್ಕಳೆಲ್ಲ ಸೇರಿ ಯಾರಾದರೂ ಚೂರು ದೊಡ್ಡವರನ್ನು ಅಜ್ಜಿಯಾಗಲು ಕೇಳಿಕೊಂಡಾದ ಮೇಲೆ ಎಲ್ಲರೂ ವೃತ್ತಾಕಾರವಾಗಿ ನಿಂತು ಕ್ಲಾಪ್ಸ್ ಹಾಕುವ ಮೂಲಕ ಕಳ್ಳರನ್ನು ...

  • 09 November 2017
    2 weeks ago No comment

    ಕೆಂಡದಂಥ ಕಾವ್ಯ

    ಪಾಶ್ ಎಂದೇ ಗೊತ್ತಾಗಿರುವ ಪಂಜಾಬಿ ಮತ್ತು ಹಿಂದಿ ಕವಿ ಅವತಾರ್ ಸಿಂಗ್ ಸಂಧು, ಕ್ರಾಂತಿಕಾರಿ ಕವಿ. ತನ್ನ 20ನೇ ವಯಸ್ಸಿನಲ್ಲಿ ಆತ ಮೊದಲ ಸಂಕಲನ ‘ಲೋಹ್ ಕಥಾ’ ಪ್ರಕಟಿಸುತ್ತಿದ್ದ ಹಾಗೆಯೇ (1970) ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಟ್ಟಿದ್ದ. ಅದೇ ದಶಕದಲ್ಲೇ ಪ್ರಕಟಗೊಂಡ ಮತ್ತೂ ಎರಡು ಸಂಕಲನಗಳು ಪಂಜಾಬಿ ಕಾವ್ಯಲೋಕದಲ್ಲಿ ಆತನ ಹೆಸರನ್ನು ಶಾಶ್ವತಗೊಳಿಸಿಬಿಟ್ಟವು. ಅವನ ಕಾವ್ಯದ ಕತ್ತಿ ಖಲಿಸ್ತಾನಿಗಳ ವಿರುದ್ಧ ಝಳಪಿಸುತ್ತಿತ್ತು. ಕಡೆಗೆ ಅದೇ ಅವನ ಹತ್ಯೆಗೂ ಕಾರಣವಾಯ್ತು. ...