Share

‘ಬ್ರಾಮಣ್ರ ಹೆಣ್ಣು ಪ್ರೀತ್ಸೋಕಲ್ಲ’
ಚೇತನಾ ತೀರ್ಥಹಳ್ಳಿ ಕಾಲಂ

IMG-20160516-WA0001

ಸ್ವಗತ | swagata

 

 

 

chatena 01

ಛೆ! ಆ ಡುಮ್ಮ ನಾಯಿ ಗಂಡಾ, ಹೆಣ್ಣಾ, ಒಮ್ಮೆ ನೋಡಿಬಿಡಬೇಕಿತ್ತು…

ಚೈತ್ರದ ಬಿಸಿಲಿಗೆ ಹಪ್ಪಳದಿಟ್ಟಿನ ಘಮ. ನಾನು ದಿನಾಲೂ ಈ ದಾರಿಯುದ್ದ ನಡೆದುಹೋಗುತ್ತೇನೆ. ಹೀಗೆ ಸೋಮಾರಿ ಕಾಲುಗಳನ್ನ ಉಡಾಫೆಯಲ್ಲಿ ಎಸೆಯುತ್ತ ನಡೆಯುವುದೊಂದು ಆರಾಮ. ನಡಿಗೆಯುದ್ದಕ್ಕೂ ಏಕಾಂತ ಸುಖ. ದಿನಾ ಈ ಹೊತ್ತಿಗೆ ನೀಟಾಗಿ ಸೀರೆಯುಟ್ಟ ಆ ಹೆಂಗಸು ಇಲ್ಲಿ ಬಂದು ಕೂತಿರುತ್ತಾಳೆ, ಈ ಕಟ್ಟೆಯ ಮೇಲೆ. ಅವಳ ಬದಿಯಲ್ಲೊಂದು ಬುಟ್ಟಿ. ಅದರ ತುಂಬ ಏನೋ ತುಂಬಿಕೊಡಿರುತ್ತದೆ. ಅವಳದರಿಂದ ಎಳೆ ಸೌತೆಕಾಯಿಯನ್ನು ತೆಗೆದು ತಿನ್ನುತ್ತಿದ್ದಳು ಒಮ್ಮೆ. ಇವತ್ತು ಆ ಬುಟ್ಟಿಯೊಳಗಿಂದ ಒಂದು ಕಂದು ಕವರಿನ ಆಲ್ಬಮ್ ಹಣಕುತ್ತಿದೆ. ಅದರ ನಾಲ್ಕೂ ತುದಿಗಳಲ್ಲಿ ಬಿಳಿ ಬಳ್ಳಿಯ ಚಿತ್ತಾರ. ಅದನ್ನ ಯಾರೋ ಹೊಸ ನೀಲಿ ಇಂಕಿನಿಂದ ತಿದ್ದಿದ್ದಾರೆ. ಬಹುಶಃ ಅದರಿಂದಾಗೇ ಈ ಹೆಂಗಸು ಇವತ್ತು ಆಲ್ಬಮ್ ಹೊತ್ತುಕೊಂಡು ಬಂದಿರಬೇಕು. ನಾನು ಅವಳನ್ನ ಹಾದು ಹೋಗುವಾಗೆಲ್ಲ ಅವಳು ಕಣ್ಣು ಕೂಡಿಸುತ್ತಾಳೆ. ಅದರಲ್ಲಿ ಇನ್ನೂ ನೂರು ಬಯಕೆಗಳಿವೆಯೆಂದು ನನಗೆ ಗೊತ್ತಾಗುತ್ತದೆ. ದುಂಡು ಕುಂಕುಮ, ಒಂದು ಮಲ್ಲಿಗೆಯಾದರೂ ಸಿಕ್ಕಿಸಿಕೊಂಡ ಜಡೆ. ವಯಸ್ಸು ಅರವತ್ತಿರಬಹುದೇನೋ. ಅಮ್ಮನ ಹಾಗೇ ಕಾಣುತ್ತಾಳೆ. ಕಟ್ಟೆಯಿಂದ ಚೂರು ಮುಂದೆ ಮರದ ನೆರಳಲ್ಲಿ ಎಳನೀರು ಕೊಚ್ಚುವ ಪುಟ್ಟ ಹೆಂಗಸು. ಮಚ್ಚು ಎತ್ತೆತ್ತಿ ಸೀಯಾಳದ ತಲೆ ಕೆತ್ತುವಾಗೆಲ್ಲ ಅವಳು ನಿಸೂರಾಗುತ್ತಿದ್ದಾಳೆ ಅಂತಲೇ ಅನ್ನಿಸಿದೆ.

ಕೈಗಳಿಗೆ ಕೊಡುವ ನಿತ್ಯ ವ್ಯಾಯಾಮದಿಂದಲೋ ಏನೋ ಅವಳ ತೋಳುಗಳು ಕಸುವಿಂದ ಕೂಡಿದ್ದು ಒಳ್ಳೇ ಗಟ್ಟಿಯಾಗಿವೆ. ಅವಳ ದೇಹವೂ ಅಷ್ಟೇ ಮಾಟ. ಬಿಸಿಲಿನ ಬೆಳಕು, ಅಸ್ತವ್ಯಸ್ತ ಕೂದಲು, ಅವಳ ಮೂಗಿನ ತುದಿ ಮತ್ತು ಕೆನ್ನೆಯಂಚಿನ ಬೆವರು, ಅವಳ ಒದ್ದೆ ಕಂಕುಳು – ಎಲ್ಲವೂ ಸೇರಿ ಅವಳಿಗೊಂದು ಮಾದಕತೆ ತಂದುಕೊಟ್ಟಿದೆ. ನನ್ನ ಪರ್ಫ್ಯೂಮ್, ನೀಟಾಗಿ ಕಟ್ಟಿದ ಜುಟ್ಟು ಮತ್ತು ಬೆಳ್ಳನೆ ಮುಖ ಒಂದು ಕ್ಷಣ ನನಗೆ ರುಚಿಹೀನ ಅನ್ನಿಸಿದವು. ‘ಬ್ರಾಮಣರ ಹೆಣ್ಣುಗಳು ಸಂಸಾರ ಮಾಡಲಿಕ್ಕೆ ಪರ್ಫೆಕ್ಟು ಹೊರತು ಪ್ರೀತಿಸೋಕಲ್ಲ!’ ಅವನ ಮಾತು ನೆನಪಾಗಿ ಯಾಕೋ ಮೊದಲ ಸಲ ದುಃಖವಾಗಲಿಲ್ಲ. ದಿನಾ ಈ ದಾರಿಯಲ್ಲಿ ನಡೆಯುವಾಗ ಅದೊಂದು ಬಟ್ಟೆಯಂಗಡಿಯವ ಕಾದು ಕೂತವನಂತೆ ತಲೆಯೆತ್ತುತ್ತಾನೆ. ಅವನನ್ನ ನೋಡುವಾಗೆಲ್ಲ ಅರವತ್ತರ ಹೆಂಗಸಿನ ಮಗ ಇವನೇ ಇರಬೇಕು ಅನ್ನಿಸಿ ಸಿಟ್ಟೇ ಬರುತ್ತದೆ. ಅವನೆಷ್ಟು ನಿರುಪದ್ರವಿಯಾಗಿ ಕೂತಿರುತ್ತಾನೆಂದರೆ, ಇಂಥಾ ನಾಲಾಯಕ್ಕುಗಳೇ ಅಮ್ಮಂದಿರನ್ನ ಹಾಗೆ ದಾರಿ ಅಲೆಸೋದು ಅಂತ ರೇಗಿಬೀಳುವಷ್ಟು…

ಸದಾ ಗಿಜಿಗುಟ್ಟುವ ಅಂಗಡಿಯಲ್ಲಿ ಅವನು ಎಲ್ಲ ಕಡಿದುಕೊಂಡವನ ಹಾಗೆ ಕೂತಿರುವುದನ್ನು ನೋಡುತ್ತೇನೆ. ಕನಿಷ್ಠ ಚೆಂದದ ಹುಡುಗಿಯರನ್ನೂ ನೋಡದ ಅವನ ಬಗ್ಗೆ ಅಸಹನೆ ಹುಟ್ಟುತ್ತದೆ. ನಾನು ಹಾದು ಹೋಗುವಾಗ ತಲೆಯೆತ್ತುವಂತೆಯೇ ಆತ ಪ್ರತಿಯೊಬ್ಬರ ನೆರಳು ಮುಂಗಟ್ಟಿಗೆ ಬಿದ್ದಾಗಲೂ ಎತ್ತುತ್ತಾನೆಂದು ತಿಳಿದಾಗಿಂದ ಅಸಹನೆ ಮತ್ತಷ್ಟು ಹೆಚ್ಚಿದೆ! ಅದೊಂದು ಡುಮ್ಮ ನಾಯಿ ದಿನಾ ಪ್ಲೇಹೋಮಿನೆದುರು ಬಾಲ ಆಡಿಸುತ್ತ ನಿಂತಿರುತ್ತದೆ. ಈ ದಿನ ಯಾರೋ ಅದರ ಬಾಲಕ್ಕೊಂದು ರಿಬ್ಬನ್ ಕಟ್ಟಿ ಚೆಂದ ಮಾಡಿದ್ದಾರೆ. ಅದು ಹೆಣ್ಣು ನಾಯಿ ಇರಬಹುದಾ? ಆ ಕ್ಷಣಕ್ಕೆ ಖಾತ್ರಿ ಮಾಡಿಕೊಂಡುಬಿಡಬೇಕು ಅನ್ನಿಸುತ್ತದೆ. ತಿರುಗಿ ಅದರ ಹೊಟ್ಟೆ ಹಣಕಲು ಮುಜುಗರವಾಯಿತು. ಚಿಕ್ಕವಳಿರುವಾಗ ಸಹಪಾಠಿ ‘ಅದು ಹೆಣ್ಣು ನಾಯಿ’ ಅಂದಿದ್ದ. ಅವನೊಬ್ಬ ಮೇಧಾವಿ, ಅವನಿಗೆಲ್ಲಾ ಗೊತ್ತು ಅನ್ನುವ ಮೆಚ್ಚುಗೆಯಿಂದ ಅವನ ಪಕ್ಕವೇ ಕೂರುತ್ತಿದ್ದೆ. ಅವನೊಂದು ದಿನ ನಾಯಿಗಳ, ಆಕಳಿನ ಗಂಡು – ಹೆಣ್ಣು ಪತ್ತೆ ಮಾಡೋದು ಹೇಗೆ ಅಂತ ಹೇಳಿಕೊಟ್ಟಿದ್ದ. ಮೊದಲ ಸಲ ಹುಡುಗಿ ಚಿತ್ರ ಬರೆಯೋದನ್ನ ಹೇಳಿಕೊಟ್ಟವನೂ ಅವನೇ. ಈಗಲೂ ಚಿತ್ರ ಬರೆದು ಎರಡು ಚುಕ್ಕಿ ಇಡುವಾಗ ಆ ಮೇಧಾವಿಯ ನೆನಪು. ನನ್ನ ಪೆದ್ದುತನ ಕಾಡತೊಡಗುತ್ತದೆ.

ಸೇರಬೇಕಿರುವ ತಾಣ ಹತ್ತಿರವಾಗುತ್ತಿದೆ. ಹತ್ತು ಹೆಜ್ಜೆ ಹಿಂದೆ ಒಂದು ತಿರುವು. ಆ ದಾರಿ ಬಳಸಿದರೆ ಕೊಂಕಣ ಸುತ್ತಿ ಬಂದಂತೆ ಆ ಜಾಗ ತಲುಪಬಹುದು. ಹೀಗೆ ಹೆಜ್ಜೆಯೊತ್ತದೆ ನಡೆಯುತ್ತ ಅಷ್ಟೂ ಹೊತ್ತು ನನ್ನ ಜತೆ ನಾನಿರಬಹುದು… ಕಾಲು ಮೊಂಡು ಕುದುರೆ. ನನ್ನ ಐದಡಿಗೆ ಒಂದಿಂಚು ಕಡಿಮೆ ದೇಹವನ್ನ ಸೀದಾ ಎಳೆದೊಯ್ಯುತ್ತಿದೆ. ಅಲ್ಲಿ, ಮೆಟ್ಟಿಲ ಕೆಳಗೆ ಅವಳು ನಿಂತಿದ್ದಾಳೆ. ಫೋನಲ್ಲಿ ಜಗಳ. ಹೆಚ್ಚೂಕಡಿಮೆ ಪ್ರತಿ ದಿನವೂ ಅವಳನ್ನ ಕಿವಿ ಕಚ್ಚಿಕೊಂಡಾಗಲೇ ನಾನು ನೋಡುತ್ತೇನೆ. ಆದರೆ ಇವತ್ತು ಅಳುತ್ತಿದ್ದಾಳೆ. ‘ನನ್ನಲ್ಲೇನು ಕೊರತೆ ಇತ್ತೋ ಹಾಳಾದವನೇ!’ ಅನ್ನುವವಳ ದನಿ ಗಂಟಲು ಸೀಳಿ ಹೊರಟಂತಿದೆ. ಹೆಜ್ಜೆ ನಿಲ್ಲುತ್ತಿದೆ…. ಭೂಮಿ ನಿಂತಂತೆ ಅನ್ನಿಸಿತು. ನಿಯಮ ಮರೆತು ಮಾತಾಡುತ್ತೇನೆ, ‘ಹುಡುಗೀ, ಕೊರತೆ ಇಲ್ಲದ ಯಾವುದೂ ಗಂಡಸಿಗೆ ಇಷ್ಟವಾಗೋಲ್ಲ… ಇಷ್ಟಕ್ಕೂ…’ ಅಂತೇನೋ ಹೇಳುವಾಗ ಶಾಪ ನೆನಪಾಗುತ್ತದೆ; ನಡುವೆ ಮಾತಿಗೆ ಅನುಮತಿ ಇಲ್ಲ…. ಆಡಿದರೆ ಇನ್ನೆಂದಿಗೂ ನಡೆಯದಂತೆ ಚಲನೆಯನ್ನೆ ಬಂಧಿಸಲಾಗುವುದು. ನೀಟು ಸೀರೆಯ ಹೆಂಗಸು, ಸೀಯಾಳದವಳು, ಬಟ್ಟೆಯಂಗಡಿಯವ…. ಛೆ! ಆ ಡುಮ್ಮ ನಾಯಿ ಗಂಡಾ, ಹೆಣ್ಣಾ, ಒಮ್ಮೆ ನೋಡಿಬಿಡಬೇಕಿತ್ತು.

————-

che1ಚೇತನಾ ತೀರ್ಥಹಳ್ಳಿ. ಅಲಾವಿಕಾ ಮತ್ತೊಂದು ಕಾವ್ಯನಾಮ. ಫ್ರೀಲಾನ್ಸ್ ಪತ್ರಕರ್ತೆ ಮತ್ತು ಬರಹಗಾರ್ತಿ. ಪ್ರಕಟಿತ ಪುಸ್ತಕಗಳು: ‘ಉಫೀಟ್’, ‘ಗುಟ್ಟು ಬಚ್ಚಿಡಲು ಬರುವುದಿಲ್ಲ’, ‘ಶಬರಿಯ ಅವಸರ’ ಕವನ ಸಂಕಲನಗಳು; ‘ಸೂರ್ಯನೆದೆಯ ನೀರ ಬೀಜ’ ಅಚ್ಚಿನಲ್ಲಿದೆ. ‘ಭಾಮಿನಿ ಷಟ್ಪದಿ’ ಮತ್ತು ‘ಬಿಸಿಲ ಚೂರಿನ ಬೆನ್ನು’ ಅಂಕಣ ಬರಹಗಳ ಸಂಗ್ರಹ; ‘ಲಾ ಕಾಲಮ್’ ಅಚ್ಚಿನಲ್ಲಿದೆ. ‘ಬ್ಲಾಗಿಸು ಕನ್ನಡ ಡಿಂಡಿಮವ’ ಸಂಪಾದಿತ ಕೃತಿ. ಕಾಸ್ಮಿಕ್ ಜೋಕ್, ಕ್ಲೌಡ್ ನೈನ್ ಮತ್ತು ಐ ಆಮ್ ಅನದರ್ ಯು ಇಂಗ್ಲಿಷಿನಿಂದ ಅನುವಾದಿಸಿದ ಕೃತಿಗಳು. ‘ನೀಲಿ ಬಾನಿನಲ್ಲಿ ಕೆಂಪು ಸೂರ್ಯ: ಜೆ ಎನ್ ಯು ಭಾಷಣಗಳ ಸಂಗ್ರಹಾನುವಾದ’ ಅವರ ಹೊಸ ಕೃತಿ.

Share

Leave a comment

Your email address will not be published. Required fields are marked *

Recent Posts More

 • 9 hours ago No comment

  ಇಲ್ಲಿ ಶಬ್ದಗಳಿಗೂ ಚಳಿಗಾಲ

            | ಕಮಲಾದಾಸ್ ಕಡಲು       ಕಪ್ಪು ಜನಾಂಗ (For Cleo Pascal) ಕಮಲಾದಾಸ್ ಕವಿತೆಯ ಅನುವಾದ     ಈಗ ಕೆನಡಾದಲ್ಲಿ ಶರದೃತುವಿನ ಕಾಲ ಮೇಪಲ್ ಮರದ ಒಣಗಿದ ರಕ್ತದಂಥ ಕಡುಗೆಂಪು ಎಲೆಗಳು ಈ ವಾರದಂತ್ಯದವರೆಗೆ ಕೂಡ ಉಳಿಯಲಾರವು ನಾನು ಇಲ್ಲಿ ಎಲ್ಲರಿಗೂ ಕಾಣಿಸುತ್ತೇನೆ, ಅಲ್ಲಿಗಿಂತ ಇಲ್ಲಿ ಎದ್ದು ಕಾಣಿಸುತ್ತೇನೆ ಬಿಳಿಯ ದೇವರ ಲೋಕದಲ್ಲಿ ಕಾಲಿಟ್ಟ ಕಪ್ಪು ಜನಾಂಗದವರು ...

 • 1 day ago No comment

  ಇರಬಲ್ಲೆವಾ ಭಾವುಕರಾಗದೆ?

                Millions of people have decided not to be sensitive. They have grown thick skins around themselves just to avoid being hurt by anybody. But it is at great cost. Nobody can hurt them, but nobody can make them happy either. ನಿಜ, ಒಂದೇ ...

 • 3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 4 days ago No comment

  ಎರಡು ಕವಿತೆಗಳು

      ಕವಿಸಾಲು         ಸುನಾಮಿಯ ಊರಲ್ಲಿ ಗುಟ್ಟುಗಳ ರಟ್ಟು ಮಾಡದ ಒಡಲು ಸುನಾಮಿ ತವರಾದ ಕಡಲು ಒಳಗಿನ ಕತ್ತಲೆಯ ಕಳೆಯಲು ಹುಡುಕಿ ಹೊರಟವು ತಾವು ಕಳೆದುಕೊಂಡ ಕನಸುಗಳಷ್ಟೂ ಹಾವುಗಳು ಬಿಸಿಲಿಗೆ ಹೊರಳಿ ಪೊರೆ ಕಳಚಿ ನಚ್ಚಗಾದವು ಅದೇ ಕ್ಷಣದೊಳಗೆ ಅರಳಿಬಿರಿಯಬೇಕಿದ್ದ ಹೂವುಗಳು ಬಿಸಿಲ ಧಗೆಗೆ ಬೆಂದು ಬಾಡಿ ಉದುರಿಬಿದ್ದವು ನೆಲಕೆ ಶಬ್ದಗಳ ಮುಕ್ಕಳಿಸಿ ಉಗಿದ ರಭಸಕೆ ಊರ ತುಂಬಾ ನೆರೆ ಪರಿಹಾರದ ಗಂಜಿಕೇಂದ್ರಗಳಲಿ ...

 • 1 week ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...


Editor's Wall

 • 25 February 2018
  9 hours ago No comment

  ಇಲ್ಲಿ ಶಬ್ದಗಳಿಗೂ ಚಳಿಗಾಲ

            | ಕಮಲಾದಾಸ್ ಕಡಲು       ಕಪ್ಪು ಜನಾಂಗ (For Cleo Pascal) ಕಮಲಾದಾಸ್ ಕವಿತೆಯ ಅನುವಾದ     ಈಗ ಕೆನಡಾದಲ್ಲಿ ಶರದೃತುವಿನ ಕಾಲ ಮೇಪಲ್ ಮರದ ಒಣಗಿದ ರಕ್ತದಂಥ ಕಡುಗೆಂಪು ಎಲೆಗಳು ಈ ವಾರದಂತ್ಯದವರೆಗೆ ಕೂಡ ಉಳಿಯಲಾರವು ನಾನು ಇಲ್ಲಿ ಎಲ್ಲರಿಗೂ ಕಾಣಿಸುತ್ತೇನೆ, ಅಲ್ಲಿಗಿಂತ ಇಲ್ಲಿ ಎದ್ದು ಕಾಣಿಸುತ್ತೇನೆ ಬಿಳಿಯ ದೇವರ ಲೋಕದಲ್ಲಿ ಕಾಲಿಟ್ಟ ಕಪ್ಪು ಜನಾಂಗದವರು ...

 • 22 February 2018
  3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 15 February 2018
  1 week ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  2 weeks ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  2 weeks ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...