Share

ಆಟೋದಲ್ಲಿ ಪಯಣ…
ಎಂ ಆರ್ ಭಗವತಿ ಕಾಲಂ

IMG-20160516-WA0001

ಕಲರವ| kalarava

 

 

 

bhagvati(1)

ನಾನು ಆಟೋದಲ್ಲಿ ಕುಳಿತಾಗೆಲ್ಲ ಅವರಿಗೇನನ್ನಿಸುವುದೋ ಕಾಣೆ ಹೆಚ್ಚಿನಂಶ ಮಾತಿಗೆಳೆಯುವವರು ಸಿಗುತ್ತಾರೆ. ನನಗೆ ಮಾತನಾಡುವ ಮೂಡ್ ಇಲ್ಲದಿದ್ದರೆ ಕಾಟಾಚಾರಕ್ಕೆ ಹಾ ಹೂಂ ಎಂದು ಸುಮ್ಮನಾಗಿಬಿಡುತ್ತೇನೆ.  ಒಮ್ಮೆ ಅವಸರದಲ್ಲಿ ಆಟೋ ಹತ್ತಿದಾಗ ಡ್ರೈವರ್ ನ ಮುಖವನ್ನು ಸರಿಯಾಗಿ ನೋಡದೆ  ಅವಸರದಲ್ಲಿ ಹಾಗೆ ಹತ್ತಿದೆ. ಆತ ಯಾಕೋ ಕಣ್ಣು ಒರೆಸಿಕೊಂಡ ಹಾಗೆ ಆಯಿತು. ನಾನು ಅಷ್ಟಾಗಿ ಗಮನಿಸಲಿಲ್ಲ. ಯಾಕೊ ಬೇಜಾರಾಗಿ ಅಳು ಬಂದಿತು ಮೇಡಮ್ ಅಂದ. ನನಗೆ ಆಶ್ಚರ್ಯ ಇದನ್ನು ಯಾಕೆ ಹೇಳುತ್ತಿದ್ದಾನೆ ಎಂದು ಮನಸ್ಸಿನಲ್ಲಿಯೇ ಅಂದುಕೊಂಡು ’ನಾನು ಯಾಕೆ ಏನಾಯಿತು” ಅಂದೆ. “ಏನು ಇಲ್ಲ ಮೇಡಮ್; ಹೀಗೆ ಇರುತ್ತಲ್ಲ..” ಅನ್ನುತ್ತಾ ಆಟೋ ಓಡಿಸಿದ. ಸಿಗ್ನಲ್ ದಾಟಿ ಮುಂದೆ ಹೋದ ಮೇಲೆ ಅವನ  ಕಷ್ಟಗಳನ್ನ ಹೇಳುತ್ತಾ ಹೋದ. ನಾನು ಇಳಿದು ದುಡ್ಡು ಕೊಡುವಾಗ ಕಣ್ಣಲ್ಲಿ ಧಾರಾಕಾರ ನೀರು ಸುರಿಯುತ್ತಿತ್ತು. ಬಿಕ್ಕಳಿಕೆ ಮೇನ್ ರೋಡಿನ ಮಧ್ಯೆ. ಬಸ್ ಸ್ಟಾಪಿನ ಮುಂದೆ.. ನಾನು ಸಂಕೋಚದಿಂದ ಮುದುಡಿದೆ. ತನ್ನ ಅಣ್ಣ ತಮ್ಮಂದಿರು ತನಗಿರುವ ಒಂದಷ್ಟು ಆಸ್ತಿಯನ್ನು ಕಬಳಿಸಲು ರೌಡಿಗಳನ್ನು ಮನೆಗೆ ಕಳಿಸಿ  ತುಂಬಾ ತೊಂದರೆ ಕೊಡುತ್ತಿದ್ದಾರೆ. ದಿನನಿತ್ಯ ಇದೇ ರಗಳೆ. ನನಗೆ ಶುಗರ್ ಬೇರೆ ಇದೆ. ಆರೋಗ್ಯ ಸರಿ ಇಲ್ಲ. ಇವತ್ತು ಇಷ್ಟೊತ್ತಿಗೆ ಮನೆಗೆ ಊಟಕ್ಕೆ ಹೋಗಿ ಬಿಡಬೇಕಿತ್ತು ಹೆಂಡತಿ ಗಾಬರಿಯಾಗುತ್ತಾಳೆ. ದಯವಿಟ್ಟು ನೀವೆ ಅವರಿಗೆ ಪೋನ್ ಮಾಡಿಬಿಡಿ ಮೇಡಂ, ಬರುತ್ತಿದ್ದಾರೆ, ದಾರಿಯಲ್ಲಿದ್ದಾರೆ ಅಂತ ಹೇಳಿ ಎಂದು  ನಂಬರ್ ಬರೆದುಕೊಟ್ಟ. ನಾನು ಮರು ಮಾತನಾಡದೆ ನಂಬರ್ ತೆಗೆದುಕೊಂಡೆ! ಇದೊಂದೇ ಅಲ್ಲ ಮೊದಲಿನಿಂದಲೂ ಆತನಿಗೆ, ಆತನ ಮನೆಯವರಿಗೆ ಒಂದಲ್ಲ ಒಂದು ಕಷ್ಟಗಳ ಸರಮಾಲೆ. ಆತನ ಹೆಂಡತಿ ಹೇಳಿದ್ದು ಇದು. “ಅವರು ಹಾಗೆ ತುಂಬಾ ಮನಸ್ಸಿಗೆ ಹಚ್ಚಿಕೊಳ್ತಾರೆ. ಷುಗರ್ ಬೇರೆ ಇದೆ. ದಿನಾ ಇದೇ ಚಿಂತೆ ನಮಗೆ. ಸಾಲದಕ್ಕೆ ಆಸ್ತಿಯ ವಿಷಯಕ್ಕಾಗಿ ತೊಂದರೆ ಇತ್ಯಾದಿ ಕಷ್ಟಗಳನ್ನು ಹೇಳಿಕೊಂಡಳು. ನಾನು ಒಂದಷ್ಟು ಸಮಾಧಾನ ಹೇಳಿ ಫೋನಿಟ್ಟೆ. ನನಗೆ ಆಕೆಯ ಉತ್ತರದ ಬಗ್ಗೆ ಕುತೂಹಲವಿತ್ತು. ಯಾರೋ ಅಪರಿಚಿತರು ಗಂಡನ ಮೊಬೈಲಿನಲ್ಲಿ ಮಾತನಾಡಿದರೆ ಅವರಿಗೆ ಹೇಗನ್ನಿಸಬಹುದು ಎನ್ನುವುದರ ಬಗ್ಗೆ. ಆದರೆ ಆಕೆ ಸಾವಧಾನವಾಗಿಯೇ ಮಾತು ಮುಗಿಸಿದ್ದಳು.

ಇನ್ನೊಬ್ಬ ಕಮರ್ಷಿಯಲ್ ರಸ್ತೆಯಿಂದ ಬಸವೇಶ್ವರ ನಗರಕ್ಕೆ ಬರಲು ಹತ್ತು ರೂ ಎಕ್ಸ್ಟ್ರಾ ಕೇಳಿದ. ಕೇಳಿದ ಕಡೆಗೆ ಬರುವುದೇ ಇಲ್ಲ ಅನ್ನುವವರು ಕಮರ್ಷಿಯಲ್ ರಸ್ತೆಯ ಆಟೋದವರು. ಹಾಗಾಗಿ ನಾನು ಓಕೆ ಅಂದೆ. ಅವನು ನೋಡಿ ಮೇಡಂ ವಾಪಾಸ್ಸು ಬರುವಾಗ ಯಾರೂ ಪ್ರಯಾಣಿಕರು ಸಿಗೋದಿಲ್ಲ ಅಂತ ನಾವು ಹತ್ತೋ ಇಪ್ಪತ್ತೋ ಎಕ್ಸ್ಟ್ರಾ ಕೇಳ್ತಿವಿ. ಅದಕ್ಕೂ ಲೆಕ್ಕ ಹಾಕ್ತಾರೆ. ಮೊನ್ನೆ ರಾಜ ರಾಜೇಶ್ವರಿ ನಗರದಲ್ಲಿ ಗಂಡ ಹೆಂಡತಿ ಕಮರ್ಷಿಯಲ್ ರಸ್ತೆಗೆ ಆಟೋ ಕೇಳಿದರಂತೆ ಎಲ್ಲರು ಮುನ್ನೂರು,  ಇನ್ನೂರ ಐವತ್ತು ಕೇಳುವವರೆ.  ಸುಮಾರು ೨೦, ೩೦ ಆಟೊ ಹುಡುಕಿರಬಹುದು. ಕೊನೆಗೆ ನನ್ನ ಕೇಳಿದರು ಇಪ್ಪತ್ತು ರೂ ಜಾಸ್ತಿ ಕೇಳಿದೆ, ಮರು ಮಾತಾಡದೆ ಆಟೋ ಹತ್ತಿದರು ಅಂದ. ನಾನು ಹತ್ತುವುದಕ್ಕಿಂತ ಮುಂಚೆ ಇಳಿದ ಪ್ರಯಾಣಿಕರೊಬ್ಬರಿಗೆ ಇಸಿದು ಕೊಟ್ಟಿದ್ದ  ಐವತ್ತು ರೂ ಅನ್ನು ವಾಪಾಸ್ ಕೊಡಲು ಬಂದ, ನಾನು ಯಾಕೆ ನಿಮ್ಮಗೇ ಕೊಡಬೇಕಲ್ಲ ಎಂದಾಗ, ಇಟ್ಕೊಳ್ಳಿ ಮೇಡಮ್ ಅಕಸ್ಮಾತ್  ನಾನು ಮರೆತರೆ ಏನು ಮಾಡುತ್ತೀರ? ಮೋಸ ಮಾಡಿ ಬಿಟ್ಟ ಅವನು ಅಂತ ನನ್ನ ಬೈಕೋತೀರ ಅನ್ನುತ್ತಾ ರೊಯ್ ಅಂತ  ಹೊರಟ! ನಾನು ಸುಮ್ಮನೆ ಕೂತೆ.

ಇನ್ನೊಬ್ಬ ಅವನ ತಂಗಿಗೆ ಮದುವೆ ಮಾಡಲು ಹೊರಟಿದ್ದ. ವರನ ಕಡೆಯವರು ಒಂದು ಲಕ್ಷ ಮೌಲ್ಯದ ಆಭರಣವನ್ನು ವಧುವಿಗೆ ಹಾಕಲು ಕೇಳಿದ್ದರಂತೆ. ನಾನು ಅಷ್ಟೊಂದು ಹಣವನ್ನು ಎಲ್ಲಿ ಹೊಂದಿಸಲಿ ಮೇಡಂ. ಸಾಲದಕ್ಕೆ ಚಿನ್ನದ ಬೆಲೆ ಬೇರೆ ಎಷ್ಟೊಂದು ಹೆಚ್ಚಾಗಿದೆ. ತಂಗಿಯ ಮದುವೆ ಯಾವುದೇ ತೊಂದರೆಯಿಲ್ಲದೆ ಆಗಬೇಕು, ಹಣವನ್ನು ಹೊಂದಿಸುವ ಚಿಂತೆ ಇವೆರಡರ ಮಧ್ಯೆ ಆಟೋದವನ ದೈನ್ಯತೆಗೆ ಹೂಂ ಗುಟ್ಟಿ ಸುಮ್ಮನೆ ಕುಳಿತೆ.

ನಾನು ಪ್ರಯಾಣದಲ್ಲಿ ಏನಾದರು ನೆನಪಾದರೆ ಆಗಾಗ ಗೀಚಿಕೊಳ್ಳುತ್ತಿರುತ್ತೇನೆ. ಹೀಗೆ ಒಮ್ಮೆ ನನ್ನ ಪಾಡಿಗೆ ಬರೆದುಕೊಳ್ಳುತ್ತಿರಬೇಕಾದರೆ ಆತ ತಿರುಗಿ ತಿರುಗಿ ನೋಡಲು ಷುರು ಮಾಡಿದ. ಸ್ವಲ್ಪ ಅಲರ್ಟ್ ಆದ ಅನ್ನಿ ! ಅಷ್ಟರವರೆಗೂ ಯರ್ರಾಬಿರ್ರಿ ಓಡಿಸುತ್ತಿದ್ದವನು ಸ್ವಲ್ಪ ಹುಷಾರಾದ. ಬಹುಶಃ ಆಟೋ ನಂಬರ್ ಬರೆದುಕೊಂಡು ಕಂಫ್ಲೇಂಟ್ ಕೊಟ್ಟುಗಿಟ್ಟರೆ ಅಂತ ಅನುಮಾನಪಟ್ಟಿರಬೇಕು. ಹಲವರು ಹಲವಾರು ಬಾರಿ  ಇದೇ ರೀತಿ ಕುತೂಹಲ ವ್ಯಕ್ತಪಡಿಸುವುದು ಇದ್ದೇ ಇರುತ್ತದೆ.

ಕಮರ್ಷಿಯಲ್ ರಸ್ತೆಯ ಆಟೋದವರದು ಹೊಸ ವರಸೆಯೊಂದು ಶುರುವಾಗಿದೆ. ಅಲ್ಲೇ ಹತ್ತಿರದ ಸ್ಥಳ ಕ್ಕೆ ಕರೆದರೆ ಬರುವುದಂತೂ ಸಾಧ್ಯವೆ ಇಲ್ಲ. ಇದು ಮಾಮೂಲಿ. ಬರಲು ಒಪ್ಪುವವರು. ಬನ್ನಿ, ಆದರೆ ಮೊದಲು ಹತ್ತಿರದ ಸೀರೆ ಅಂಗಡಿಗೆ ಹೋಗಿ, ಒಂದು ಹತ್ತೇ ನಿಮಿಷ ಮೇಡಂ ನೋಡಿಕೊಂಡು ಬಂದು ಬಿಡಿ ಸಾಕು. ಮಾಮೂಲಿ ಛಾರ್ಜ್ ತೆಗೆದುಕೊಳ್ಳುತ್ತೇನೆ ಎನ್ನುವವರು ಜಾಸ್ತಿ. ನಾವು ಹೋಗ್ರಿ ಹೋಗ್ರೀ ಅಂದು ಸುಮ್ಮನಾಗುತ್ತೇವೆ. ಆರು ಗಂಟೆ ಆಗುತ್ತಿದ್ದರೆ ಮುಗಿದೇ ಹೋಯಿತು ನಾವು ಕರೆದಲ್ಲಿಗೆ ಬರುವುದು ತುಂಬಾ ಅಪರೂಪ. ನೋಡುವಷ್ಟು ನೋಡಿ ‘ಎಲ್ಲಿಗೆ ಬರುತ್ತೀರ’, ‘ಯಾವ ಕಡೆ ಹೋಗುತ್ತಿದ್ದೀರ’,’ದುಡ್ದು ಕೊಡ್ತೀವಿ  ಬನ್ರೀ’ ಅನ್ನುವುದು ಮಾಮೂಲಿಯಾಯಿತು!! ಕೆಲವರು ಸುಯ್ ಎನ್ನುತ್ತ ಮಾತನಾಡದೆ ಹೊರಟರೆ, ಒಬ್ಬ ವಿಚಿತ್ರವಾಗಿ ತಲೆ ಅಲ್ಲಾಡಿಸಿ ಮುಂದುವರಿದ, ಇನ್ನೊಬ್ಬ ಮೆಲುನಗೆಯನ್ನು ತೋರಿಸಿಕೊಳ್ಳದೆ ಸುಮ್ಮನೆ ಹೊರಟ, ಇನ್ನೊಬ್ಬನ ಮುಖದಲ್ಲಿ ನಗು ಹರಡಿಯೇ ಬಿಟ್ಟಿತು.  ಒಟ್ಟು ಆರು ಆಟೋಗಳನ್ನು ತಡೆದದ್ದಾಯ್ತು.

ಶಿವನಗರದ ಬಳಿ ನಾನು ಕೂತ ಆಟೋವನ್ನು ಮೋಟಾರು ಸೈಕಲಿನಲ್ಲಿ ಕೂತ ಇಬ್ಬರು ಹಿಂದೆಯೇ ಬಂದು ಆಟೋ ನಿಲ್ಲಿಸಿದರು. ನನಗೆ ಏನೆಂದು ಹೊಳೆಯಲಿಲ್ಲ. ನೀವು ಬೇರೆ ಆಟೋದಲ್ಲಿ ಹೋಗಿ ಮೇಡಂ ಎಂದ. ನಾನು ಇಳಿದು ಚಿಲ್ಲರೆ ಕೊಡಲು ಹೋದೆ. ಇರಿ ಅಂದವ ಮೋಟಾರು ಸೈಕಲ್ಲಿನವರ ಜೊತೆ ಏನನ್ನೋ ಬೇಡಿಕೊಂಡ. ಅವರವರೆ ಏನೋ ಚರ್ಚೆ ಮಾಡಿಕೊಂಡು ವಾಪಸ್ಸು ಹೋದರು. ಅವನು ಆಟೋ ಚಾಲೂ ಮಾಡಿ ಹೊರಟ. ಆಟೋದ ಮೇಲೆ ಸಾಲ ಇನ್ನೂ ತೀರಿರಲಿಲ್ಲ. ಗಡುವು ಮುಗಿದಿತ್ತು. ಸಾಲ ಕೊಟ್ಟ ಬ್ಯಾಂಕಿನವರು ಹಿಂದೆ ಬಿದ್ದಿದ್ದರು. ಅಲ್ಲಾ ಮೇಡಂ ನೀವು ಏನಾದರು ಹೇಳುತ್ತೀರ ಅಂದುಕೊಂಡಿದ್ದೆ ಅಂದ. ’ಏನಂತ”  ಅಂದೆ. ಇವರು ನಮ್ಗೆ ಪರಿಚಯ, ನಮ್ಮ ಮನೆಯ ಹತ್ತಿರವೇ ಇದ್ದಾರೆ ಅಂತ ಹೇಳಬಹುದಿತ್ತಲ್ಲ. ನೀವು ಹಾಗೆ ಹೇಳಿದ್ದರೆ ನನ್ನನ್ನು ಬಿಟ್ಟು ಬಿಡುತ್ತಿದ್ದರು. ಇನ್ನೊಂದು ವಾರದಲ್ಲಿ ಹಣ ಹೊಂದಿಸಿ ಕೊಟ್ಟುಬಿಡುತ್ತಿದ್ದೆ ಅಂತ ಅಲವತ್ತುಕೊಂಡ. ನಾನು ಸರಿ-ತಪ್ಪು ತಿಳಿಯದೆ ’ಹೌದಾ’ ಎನ್ನುತ್ತ ಸುಮ್ಮನಾದೆ.

ಕೆಲವರು ಲೋಕಾಭಿರಾಮ ಮಾತಿಗಿಳಿದರೆ, ಇನ್ನು ಕೆಲವರು ರಾಜ್ಯ, ದೇಶದ ವಿಷಯಗಳನ್ನು ತೆಗೆಯುತ್ತಾರೆ. ನಾನು ಯಾರನ್ನು ಕಡೆಗಣಿಸದೆ ಮಾತಿಗೆ ಹೂಗುಡುತ್ತೇನೆ. ಜನರ ಅಭಿವ್ಯಕ್ತಿಯ ಸೈಕಾಲಜಿಯನ್ನು ಅಭ್ಯಸಿಸುವುದು ನನಗೆ ಪ್ರಿಯವಾದ ಹವ್ಯಾಸ ! ಆಟೋದ ಪಯಣ ನನಗೆ ಇಂಥ ಅನೇಕ ಅನುಭವಗಳನ್ನು ತಂದುಕೊಟ್ಟಿದೆ. ಅಲ್ಲದೆ ವಿವಿಧ ಭಾವನೆಗಳ ಅಭಿವ್ಯಕ್ತಿ, ಅವರಿಗಿರುವ ಜೀವನದ ಅನುಭವದ ಸಾರ..ಕೆಲವು ಸಂದರ್ಭಗಳಲ್ಲಿ ಅವರ ಪ್ರತಿಕ್ರಿಯೆ ಇವೆಲ್ಲವೂ.

ಆಟೋದ ಅನುಭವಗಳನ್ನು ಮೆಲುಕಿದಾಗಲೆಲ್ಲಾ ಅಪರಿಚಿರಾದವರ ಬಳಿ ಜನರಿಗೆ ಯಾಕೆ ಭಾವನೆಗಳನ್ನು ಹಂಚಿಕೊಳ್ಳಬೇಕೆನಿಸುತ್ತದೆ ಅಂದುಕೊಳ್ಳುತ್ತೇನೆ. ಮೇಲೆ ಹೇಳಿದ ಆಟೋದವನ ಹೆಂಡತಿಯಲ್ಲಿ ಮಾತನಾಡಿದಾಗ ನನಗೆ ವಿಚಿತ್ರವಾದ ಭಾವನೆ. ಯಾರೋ ಅಪರಿಚಿತರಾದವರ ಜೊತೆ ಅದೂ ಫೋನಿನಲ್ಲಿ ಕಷ್ಟ ಸುಖ ಮಾತನಾಡುವುದೆಂದರೆ…ಆಕೆಯ ಜೊತೆ ಮಾತನಾಡಿದಾಗ ಆಕೆಯ ವಿಜಯನಗರದಲ್ಲಿರುವ ಮನೆಯ ಬಗ್ಗೆ ಕಲ್ಪಿಸಿಕೊಂಡೆ ..ಆಕೆಯ ಮಾತಿನಲ್ಲಿರುವ ವಿವರಗಳು ಸುಳಿದು ಹೋದವು.

ಆಟೋದವರು ಮಾತಿಗಿಳಿದಾಗ ನನಗೆ ಏನು ಹೇಳಲು ತೋಚದಿದ್ದರೆ. ರಸ್ತೆಯಲ್ಲಿ ವಾಹನದ ಸದ್ದಿನೊಂದಿಗೆ ನನ್ನ ಹೂಂ, ಹುಃಊ..ಅಡಗಿಬಿಡುತ್ತದೆ..! ಹೆಚ್ಚಿನ ಆಟೋದವರ ಬಗ್ಗೆ ನನಗೆ ಒಳ್ಳೆಯ ಭಾವನೆಯೇ ಇದೆ. ಹೆಚ್ಚಿನಂಶ ಒಳ್ಳೆಯ ಅನುಭವವೇ ಆಗಿದೆ. ಕೆಲವರ ಹೃದಯವಂತಿಕೆ ಮನಸ್ಸನ್ನು ಆವರಿಸಿದೆ. ಇನ್ನು ಕೆಲವರ ಸಭ್ಯತೆ, ವಿಶ್ವಾಸ, ಮುಂಗೋಪ, ತಮಾಷೆ, ತೋರಿಕೆ, ಇತ್ಯಾದಿ.

ಎಷ್ಟೋ ನೆನಪುಗಳು ಹಾರಿ ಹೋಗಿವೆ. ಆಟೋದಲ್ಲಿ ಪಯಣಿಸುವಾಗ ಒಂದೊಂದೇ ಸಂದರ್ಭಗಳು ಸುಳಿಯುತ್ತಲೇ ಇರುತ್ತವೆ…

———-

bhagavathi1ಎಂ ಆರ್ ಭಗವತಿ ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ. ಹವ್ಯಾಸಿ ಬರಹಗಾರ್ತಿ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಎಂಎ ಪದವಿ.. ಮೂಲ ಆಸಕ್ತಿ ಬರವಣಿಗೆಯಾದರೂ, ಮೊದಲಿನಿಂದಲೂ ಛಾಯಾಗ್ರಹಣ ಬಹಳ ಇಷ್ಟವಾದ ಹವ್ಯಾಸ. ‘ಏಕಾಂತದ ಮಳೆ’ (೧೯೯೯) ಮತ್ತು ‘ಚಂಚಲ ನಕ್ಷತ್ರಗಳು’ (೨೦೦೫) ಪ್ರಕಟಿತ ಪುಸ್ತಕಗಳು.

Share

4 Comments For "ಆಟೋದಲ್ಲಿ ಪಯಣ…
ಎಂ ಆರ್ ಭಗವತಿ ಕಾಲಂ
"

 1. lavanya Prabha
  24th July 2016

  Nice article, ನೀನು ಬರೆಯೋಕೆ ಶುರು ಮಾಡಿರುವುದೇ ನನಗೆ ಖುಷಿಯ ವಿಷಯ.

  Reply
  • Bhgavathi
   27th December 2016

   Thanks Lavanya

   Reply
 2. Renuka Ramanand
  14th August 2016

  ಒಳ್ಳೆಯ ಬರಹ

  Reply
  • bhagavathi
   16th August 2016

   Thank You Renuka Ramanda

   Reply

Leave a comment

Your email address will not be published. Required fields are marked *

Recent Posts More

 • 1 week ago No comment

  ಕವಿಸಾಲು | ಇಂಡೋನೇಶಿಯಾ

      ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ಜಲ, ಉಸಿರ ಗಾಳಿ ಹುಚ್ಚೆದ್ದು ಕುಣಿದು ಅಪ್ಪಳಿಸಿದ ಆಘಾತಕ್ಕೆ ಕಂಗೆಟ್ಟು ತತ್ತರಿಸಿವೆ ಪ್ರಾಣಿ, ಮನುಜ ಕುಲ ಮಾಡು ಹಾರಿ, ಕಂಬಗಳು ಕುಸಿದು ನೆಲಕಚ್ಚಿವೆ ಮಾನವನ ಬೀಡು ಕತ್ತರಿಸಿ ...

 • 1 week ago No comment

  ಕವಿಸಾಲು | ತಡವಿಲ್ಲದಿರಲಿ ಇನ್ನು…

      ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ತಡೆಯ ದಾಟಿ ತಲುಪಬೇಕಿದೆಯಷ್ಟೆ ಬಯಕೆ ಗುರಿಯನ್ನು ದಟ್ಟ ಹಸಿರಿನ ಕಾಡು, ಆಗಸದ ನೀಲಿ ಬಿಳಿಯ ಮೋಡಗಳ, ಬಿಸಿಲ ಬೆಳಕಿನ ನಡುವೆ ಬಯಲ ಸ್ವೇಚ್ಛೆಯ, ತಿಳಿಗಾಳಿ ತವಕದಲಿ ಬಂಧನಗಳ ...

 • 3 weeks ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 month ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 month ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...


Editor's Wall

 • 31 August 2018
  2 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  2 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  2 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  2 months ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  2 months ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...