Share

‘ನಿನ್ನ ಹುಚ್ಚು ಚಿರಾಯುವಾಗಲಿ ಎಂದ’
ಕಮಲಾ ದಾಸ್ ಸ್ಟೋರಿ | ಅನು: ಡಾ. ಕೆ ಪೂರ್ಣಿಮಾ ಭಟ್

IMG-20160516-WA0001

ಧ್ವನಿ ಮುದ್ರಣ | dhvani mudrana

 

 

 

 

 

ನಾನು ಈತನಲ್ಲಿ ಅರ್ಬುದದಂತೆ ಹಬ್ಬಲು ಬಯಸಿದೆ.
ಗುಣವಾಗದ ಪ್ರೀತಿಯಿಂದ ಈತ ನರಳಬೇಕೆಂದುಕೊಂಡೆ.
ಈ ತೆರನಾದ ಕ್ರೂರತೆ ಪ್ರೀತಿಸುವ ಎಲ್ಲಾ ಹೆಣ್ಣುಗಳಲ್ಲಿರುವುದು.
ನೀನೊಂದು ಹುಚ್ಚು ಹುಡುಗಿ, ನಿನ್ನ ಹುಚ್ಚು ಚಿರಾಯುವಾಗಲಿ ಎಂದ.

ಸ್ನೇಹಿತರೇ, ನೀತಿವಂತರೇ,
ನಾನು ಪಾಪಿಷ್ಠೆಯೇ ಆದರೆ ನನ್ನ ಪಾಪ ಕ್ಷಮಿಸಬೇಡಿ.
ಮುಗ್ದೆಯಾಗಿದ್ದರೆ ನನ್ನ ಮುಗ್ಧತನ ಕ್ಷಮಿಸದಿರಿ.
ರಕ್ತ ವರ್ಣದ ಉರಿಯಿರುವ ಕೊಳ್ಳಿಯಿಂದ ನನ್ನನ್ನು ರಾತ್ರಿ ಸುಟ್ಟುಬಿಡಿ.
ನನ್ನ ಹೆಮ್ಮೆಯ ದ್ರಾವಿಡ ದೇಹಕ್ಕೆ ಮತ್ತು ಮನಸ್ಸಿನ ತುಮುಲಗಳ ಕೇಂದ್ರಕ್ಕೆ ಬೆಂಕಿಯಿಡಿ.
ಮುಂಬಯಿಯ ಕೆಂಪು ಧೂಳಿನಿಂದ ನನ್ನನ್ನು ತುಂಬಿ ನನ್ನ ಉದರದ ಮೇಲೆ ಸಸಿಗಳನ್ನು ನೆಡಿ.
ಏಕೆಂದರೆ,
ನಾನು ಮತ್ತು ಈತ ಭೇಟಿಯಾದದ್ದು ತುಂಬಾ ತಡವಾಗಿ…
ನನ್ನ ಮತ್ತು ಈತನ ಪ್ರೀತಿ ಸಾಗರದ ಮೇಲಿನ ಬರಹದಂತೆ… ಗಾಳಿ ಹೊತ್ತು ತರುವ ಹಾಡಿನಂತೆ…

ಮುಂಬಯಿಗೆ ಮರಳಿದ ನಂತರ ನನ್ನಲ್ಲಿನ ಅಸಮಾಧಾನ ಬೆಳೆಯುತ್ತಲೇ ಹೋಯಿತು.
ಮನೆಯಿಂದ ತಪ್ಪಿಸಿಕೊಂಡು ನಡೆಯುತ್ತಾ, ನಡೆಯುತ್ತಾ ಜಗತ್ತಿನ ಅಂಚನ್ನು ತಲುಪಬೇಕೆಂಬ ಆಸೆ ಹುಟ್ಟಿತು.
ಹಾಗೆ ಹೊರಟ ಪ್ರತೀ ಪಥಿಕನೂ ಮತ್ತೆ ತಾನು ಆರಂಭಿಸಿದ ಜಾಗವನ್ನೇ ತಲುಪುವನೆಂದು ನನಗೆ ಗೊತ್ತಿರಲಿಲ್ಲ.
ಕೊನೆಗೆ ವಾಸ್ತವ ಗುರಿಗಳು ನಮ್ಮ ಆರಂಭಗಳೇ ಎಂದು ಆಗ ಇನ್ನೂ ತಿಳಿದಿರಲಿಲ್ಲ.

ನಿಜಕ್ಕೂ ಈತ ಯಾರು ? ನಾನ್ಯಾರು ? ನನ್ನ ಮಕ್ಕಳೆಂದು ಕರೆಸಿಕೊಳ್ಳುವ ಈ ಮೂವರು ಹುಡುಗರು ಯಾರು ?
ನಾವು ನಶ್ವರ ದೇಹದ ಹೊರೆ ಹೊತ್ತಿದ್ದೇವೆ. ನಶ್ವರ ಸಂಬಂಧಗಳನ್ನು ಬೆಳೆಸುತ್ತಿದ್ದೇವೆ.
ದೇವರೊಡನೆ ಇರುವ ಸಂಬಂಧ ಮಾತ್ರ ಶಾಶ್ವತ. ದೇವರೇ ನನ್ನ ಗಂಡ. ಅನೇಕ ರೂಪದಲ್ಲಿ ಈತ ನನ್ನ ಬಳಿ ಬರುವನು. ಅನೇಕ ರೂಪದಲ್ಲಿ ನಾನು ಈತನಿಗೆ ಅರ್ಪಿಸುವೆ.
ಈತನಿಂದ ಪ್ರೀತಿಸಿಕೊಳ್ಳುವೆ, ವಂಚಿಸಲ್ಪಡುವೆ. ಪ್ರಪಂಚದ ಹಾದಿಗಳನ್ನೆಲ್ಲಾ ಯಾರನ್ನೂ ದೂಷಿಸದೆ ಎಲ್ಲರನ್ನೂ ಅರಿತು ಹಾದು ಕೊನೆಗೆ ಈತನಲ್ಲಿ ಲೀನಳಾಗುವೆ.
ಆಗ ನನಗೆ ಮರುಪಯಣವಿರದು.

ಹಾವು ಪೊರೆ ಕಳಚುವಂತೆ ನಾನು ಲೈಂಗಿಕಾಸಕ್ತಿಯನ್ನು ತೊರೆದೆ. ಆಸಕ್ತಿಯನ್ನು ನಟಿಸಲು ಕೂಡ ಆಗಲಾರದವಳಾಗಿದ್ದೆ.
ನಾನು ಹಾಸಿಗೆಯಲ್ಲಿ ಮಲಗಲು ಯೋಗ್ಯೆಯಾಗಿರಲಿಲ್ಲ. ಕಾಮಾಸಕ್ತರನ್ನು ಮರುಳುಗೊಳಿಸುವವಳಾಗಿರಲಿಲ್ಲ. ಆದರೆ ನನ್ನ ಕವನಗಳು ಬಹಳ ಜನಗಳಿಂದ ಓದಲ್ಪಟ್ಟಿದ್ದವು.
ನನ್ನ ‘ಮುಕ್ತ ಪ್ರೇಮದ ಬರಹಗಳು’ ಜನಗಳನ್ನು ಉತ್ತೇಜಿಸಿ ಫೋನುಗಳು ಬರುತ್ತಿದ್ದವು.
ನನ್ನನ್ನೇ ನಾನು ಬೇರೊಂದು ತೆರನಾಗಿ ಚಿತ್ರಿಸಿಕೊಂಡಿದ್ದೇನೆಂಬುದು ನನಗೆ ವಿದಿತವಾಯಿತು.
ನಾನು ಎಂದೂ ಕಾಮೋನ್ಮತ್ತೆಯಾಗಿರಲಿಲ್ಲ…

ಒಬ್ಬ ಯುವಕ ನಿಮ್ಮನ್ನು ನೋಡಲು ಬಹಳ ಬಾರಿ ಬಂದಿದ್ದ. ಆತನ ಪುಸ್ತಕದಲ್ಲಿ ನಿಮ್ಮ ಸಹಿ ಬೇಕಂತೆ – ಎಂದು ಕೆಲಸದಾಕೆ ಹೇಳಿದಳು.
‘ನಿನ್ನ ಹೆಸರೇನು ?’
‘ನಾನು ಮೋಹನ, ಶಬ್ದಗಳಿಲ್ಲ ನನ್ನಲ್ಲಿ ಮಾತಾಡಲು.. ‘
‘ನಿನ್ನ ಮೌನದಲ್ಲೇ ಸುರಕ್ಷಿತವಾಗಿರು ಮೋಹನ’ – ಎಂದು ಅವನ ಪುಸ್ತಕದಲ್ಲಿ ಬರೆದೆ.
ಆತನ ಮೌನ-ಸಾಮರ್ಥ್ಯಕ್ಕಾಗಿ ಅಸೂಯೆಪಟ್ಟೆ. ಮಾತಿನಿಂದ ನಾನು ಬದುಕನ್ನೇ ಹಾಳುಮಾಡಿಕೊಂಡಿದ್ದೆ.
ನಾನು ಮಾತನ್ನು ಖಡ್ಗದಂತೆ ಶುದ್ಧೀಕರಣಕ್ಕೆಂಬಂತೆ ಬಳಸಿದ್ದೆ. ರಕ್ತವು ಅರಿವಿಲ್ಲದೇನೆ ಹರಿಯಲ್ಪಟ್ಟಿತ್ತು…

ಮೊದಲನೆಯ ಬಾರಿ ನಾನು ಚೈತನ್ಯವ್ಯಯದಲ್ಲಿ ಜಿಪುಣಿಯಾದೆ.
ನನ್ನ ಶಕ್ತಿಯನ್ನು ಬರೀ ಬರವಣಿಗೆಗಾಗಿ ಮಾತ್ರ ಮೀಸಲಿಟ್ಟೆ. ಪ್ರಪಂಚದ ಎಲ್ಲಕ್ಕಿಂತಲೂ ಮಿಗಿಲಾದ ಸಂತೋಷ ಇದರಿಂದ ದೊರೆಯಿತು.
ಹಾಸಿಗೆಯ ಮೇಲೆ ದಿಂಬಿಗೊರಗಿ ಕುಳಿತು ನಾನು ಟೈಪ್ ಮಾಡಿದೆ. ಬದುಕಿನಲ್ಲಿ ಕಲಿತ ಅನೇಕ ಪಾಠಗಳಿಂದ ನನ್ನ ಅಜ್ಞಾನ ಅಳಿಸಲ್ಪಟ್ಟಿತ್ತು.
ನನ್ನ ಓದುಗರೂ ಈ ಬಗ್ಗೆ ತಿಳಿಯಬೇಕೆಂಬಾಸೆ ನನಗಿತ್ತು. ಅಷ್ಟರಲ್ಲಿ ಲೇಖಕರಿಗೆ ಓದುಗರನ್ನು ಬಿಟ್ಟರೆ ಪ್ರೀತಿಸುವವರು ಬೇರಾರೂ ಇಲ್ಲವೆಂದು ಅರಿವಾಗಿತ್ತು.
ಲೇಖಕಿ ತನ್ನ ಕುಟುಂಬದ ಸದಸ್ಯರಿಗೆ ಮುಜುಗರ ಕೊಡುವಳು ಏಕೆಂದರೆ, ಲೇಖಕಿಯು ಬೆಳಕು ತುಂಬಿದ ಗಾಜಿನ ಪಾತ್ರೆಯಲ್ಲಿನ ಮೀನಿನಂತೆ.
ಏನನ್ನೂ ಮುಚ್ಚಿಟ್ಟು ಕೊಳ್ಳಲಾರಳು…

ನಾನು ದೈಹಿಕವಾಗಿ ಚೇತರಿಸಿಕೊಳ್ಳಲಾರದಷ್ಟು ದೂರ ತಲುಪಿದ್ದೆ. ದೇಹ ಜಡವಾಗಿ ಹಾಸಿಗೆಯಲ್ಲಿ ಬಿದ್ದುಕೊಂಡಿದ್ದರೂ, ಮನಸ್ಸು ಎಚ್ಚರಾದ ‘ಗ್ರೇ ಹೌಂಡ್ ‘ನಂತೆ ಹಾರಿ ಜಾಗೃತವಾಗುತ್ತಿತ್ತು. ಮನಸ್ಸು ನಿದ್ದೆಗೆ ವಿದಾಯ ಹೇಳಿತ್ತು. ನನ್ನ ದೇಹವನ್ನು ಕಾಡಿದ್ದ ಹಳೆಯ ಹಸಿವೆಗಳು ತೃಪ್ತವಾಗಿದ್ದವು. ಪ್ರಪಂಚದ ಯಾವ ಸ್ಫುರದ್ರೂಪಿಯೂ ನನ್ನಲ್ಲಿ ಪ್ರೀತಿಯ ತಹತಹ ಕುದುರಿಸುವುದು ಸಾಧ್ಯವಿರಲಿಲ್ಲ.
ಬದುಕಿಗೆ ನಮ್ಮನ್ನು ಒಡ್ಡಿಕೊಳ್ಳುವುದೇ ಜ್ಞಾನ ಎಂಬುದು ನನ್ನ ಪ್ರಾಮಾಣಿಕ ನಂಬುಗೆ. ನನ್ನ ಬದುಕನ್ನು ನಾನು ಎಂದೂ ರೀತಿ ರಿವಾಜುಗಳ ಆಧಾರಕ್ಕೆ ನೇತುಹಾಕಿ ನನ್ನನ್ನು ರಕ್ಷಿಸಿಕೊಳ್ಳಲು ಯತ್ನಿಸಲಿಲ್ಲ.

ತೀರಾ ಕ್ಷುಲ್ಲಕವಾದ ಕವಿ ಕೂಡ ಬೇರೆ ಸಾಧಾರಣ ಜನಗಳಿಗಿಂತ ಭಿನ್ನನಾದವನು. ಕವಿಗಳಿಗೆ ಬರೆಯಬೇಕೆಂಬ ಒತ್ತಡ ಮತ್ತು ನೋವು ಅನಿವಾರ್ಯ.
ಕವಿಯತ್ರಿಗೆ ಕಚ್ಚಾಮಾಲು ಕಲ್ಲು ಅಥವಾ ಜೇಡಿಮಣ್ಣಲ್ಲ – ಅದು ಅವಳ ವ್ಯಕ್ತಿತ್ವ.
ಬರಹಗಾರರಲ್ಲದವರು ಬರಹಗಾರರನ್ನು ನಂಬರು. ಈರ್ವರೂ ಬಾಹ್ಯ ರೂಪದ ಹೋಲಿಕೆ ಬಿಟ್ಟರೆ ಭಿನ್ನರು. ಕಾಣದ ಮನಸ್ಸನ್ನು ಪರಿಗಣಿಸಲಾಗದು.
ಹಕ್ಕಿಗಳಿಗೂ ಕೂಡ ತಮ್ಮ ಹಾರಾಟದ ಎತ್ತರವಿರುತ್ತವೆ.
ಬರಹಗಾರನ ಸತ್ವ ಬರೆಯಲಾರದವನಿಗೆ ಗ್ರಹಿಕೆಯಾಗದು. ಇಂತಹವರೆದುರು ಬರಹಗಾರ್ತಿ ತನ್ನನ್ನು ತಾನು ತೆರೆದುಕೊಳ್ಳುವುದು ಉಡುಪಿನ ವೈಚಿತ್ರ್ಯದಿಂದ
ಹಾಗೂ ಭಾವನೆಯ ಅತಿರೇಕಗಳಿಂದ. ಕೊನೆಗೊಮ್ಮೆ ಬರಹಗಾರ್ತಿ ಬೇರೆಯವರ ಗುಪ್ತ ಅನಿಸಿಕೆಗಳನ್ನು ಅರ್ಥೈಸಿಕೊಳ್ಳುವ ಶಕ್ತಿ ಪಡೆದಾಗ ವಿಮುಖಳಾಗಿ
ತನ್ನಂತೆಯೇ ಹಗಲುಗನಸನ್ನು ಕಾಣುವವರ ಜತೆಯನ್ನು ಬಯಸುತ್ತಾಳೆ.

ಹೆಚ್ಚು ಹೆಚ್ಚು ಬರೆದಂತೆ ನಾನು ಜೀವಿಸಲೇ ಬೇಕಿದ್ದ ಪರಿಸರದಲ್ಲಿ ಒಂಟಿಯಾಗುತ್ತಾ ಹೋದೆ…
ಒಂಟಿತನ ಕಳೆದುಕೊಳ್ಳಲು ನಾನು ಸಮುದ್ರದಲ್ಲಿ ಮುಳುಗಿ ಸಾಯಬೇಕೆಂದು ಅದೆಷ್ಟೋ ಬಾರಿ ಯೋಚಿಸಿದ್ದೇನೆ.
ಒಂಟಿತನ ವಿಶಿಷ್ಟವಾದದ್ದೇನೂ ಅಲ್ಲ, ಎಲ್ಲರಲ್ಲೂ ಸಹಜವಾಗಿ ಇದೆ.

ಕೇವಲ ಡ್ರಾಯಿಂಗ್ ರೂಮಿನ ಫರ್ನಿಚರ್ ಗಳ ಬಗ್ಗೆ, ಮತ್ತು ನಾನು ಪ್ರೀತಿಸಿದವರ ಬಗ್ಗೆ ನಾನು ಯೋಚಿಸಿ ವ್ಯರ್ಥವಾಗಿ ಬದುಕು ಸವೆಸಿದ್ದು ಅರಿವಾಯಿತು.
ನನ್ನ ಪ್ರಪಂಚ ಅದೆಷ್ಟು ವಿಶಾಲ ?
ನನ್ನ ದುಃಖ ಕರಿನಾಯಿಯಂತೆ ಎಲ್ಲೋ ಚಿಕ್ಕ ಮೂಲೆಯಲ್ಲಿ ಅಡಗಿತ್ತು. ನಾನು ನನ್ನನು ‘ಕಮಲಾ’ ಎಂದೂ, ಇತರರಿಗಿಂತ ಭಿನ್ನಳೆಂದು, ಇವರೆಲ್ಲರಿಗಿಂತ ಪೂರ್ಣ ಭಿನ್ನವಾದ ವಿಧಿ ನನಗಿದೆಯೆಂದೂ ನಂಬಿದ ಮೂರ್ಖತೆ ನನ್ನಲ್ಲಿತ್ತು.
ಒಂದು ವೇಳೆ ನಾವು ಭೂತ – ಭವಿಷ್ಯ – ವರ್ತಮಾನದ ಮಾತುಗಳನ್ನು ಮರೆತು, ಜೀವನವನ್ನು ಸಮಗ್ರವಾಗಿ ನೋಡಿದರೆ, ನಾವು ಸತ್ತವರಿಗಾಗಿ ದುಃಖಿಸುವುದನ್ನು,
ಇರುವವರ ಬಗ್ಗೆ ಕೊರಗುವುದನ್ನು ಮತ್ತು ಸಂಪತ್ತು ಶೇಖರಿಸುವುದನ್ನು ನಿಲ್ಲಿಸುತ್ತೇವೆ.

ಮನುಷ್ಯನ ನಿಜವಾದ ಪ್ರಪಂಚ ಅವನ ಹೊರಗಿಲ್ಲ. ಅಂತರಂಗದೊಳಗಿನ ಅಳೆಯಲಾರದ ಪ್ರಪಂಚವೇ ನಿಜವಾದದ್ದು.
ಅಂತರ್ಮುಖಿಗೆ ಮಾತ್ರ ಈ ದಾರಿಗೆ ಕೊನೆಯಿಲ್ಲ ಎನ್ನುವುದು ಅನುಭವಕ್ಕೆ ಬರುತ್ತದೆ.

ಪ್ರತಿಯೊಬ್ಬರಲ್ಲೂ ಮೂಲಭೂತವಾಗಿರುವ ಹಸಿವೆಯುಂಟು.
ಈ ಹಸಿವೆ ಮತ್ತಷ್ಟು ಹಸಿವೆಗಳನ್ನು ಹುಟ್ಟುಹಾಕುತ್ತದೆ.
ಕೊನೆಗೊಮ್ಮೆ ನಾವು ಅಮರರೆಂದು ಕಂಡುಕೊಳ್ಳುತ್ತೇವೆ.
ನಶ್ವರವಾಗಿರುವುದು ಕ್ರಮಗಳು ಮತ್ತು ವಿನ್ಯಾಸಗಳು ಮಾತ್ರ ಎಂದು ತಿಳಿಯುತ್ತೇವೆ.

~

“ಮೈ ಸ್ಟೋರಿ – ನನ್ನ ಆತ್ಮ ಕಥೆ, ಮೊದಲ ಗಂಭೀರ ಹೃದಯಬೇನೆಗೆ ಒಳಗಾದಾಗ ಇದನ್ನು ಬರೆಯತೊಡಗಿದೆ…
ಆಕರ್ಷಕ ವ್ಯಕ್ತಿತ್ವವುಳ್ಳ ಗಂಡುಗಳನ್ನು ನಾನು ಸತತವಾಗಿ ಮೋಹಿಸಿದ್ದನ್ನು ಒಪ್ಪಿಕೊಂಡಿದ್ದೆ.
ಈ ಕೃತಿಗಾಗಿ ನಾನು ತೆತ್ತ ಬೆಲೆ ಅಪಾರ. ಆದರೂ ನಾನು ಬರೆದುದ್ದಕ್ಕೆ ಪಶ್ಚಾತ್ತಾಪವಿಲ್ಲ.
ನಾನು ಅದೆಷ್ಟೋ ಪುಸ್ತಕಗಳನ್ನು ಬರೆದಿದ್ದೇನೆ, ಆದರೆ ಈ ಕೃತಿ ನನಗೆ ಕೊಟ್ಟಷ್ಟು ಆನಂದ ಬೇರಾವುದೂ ಕೊಟ್ಟಿಲ್ಲ –
ಇಷ್ಟು ಮಾತ್ರ ಹೇಳಬಲ್ಲೆ.
ಈ ಬರವಣಿಗೆ ನಾನು ಸಂಪಾದಕರಿಗಿತ್ತ ವಾಗ್ದಾನವನ್ನು ಪೂರೈಸಲಷ್ಟೇ ಬರೆದುದಲ್ಲ ;
ನನ್ನ ಬದುಕಿನ ರಹಸ್ಯಗಳನ್ನು ಬಯಲಾಗಿಸಿ, ನನ್ನನ್ನು ನಾನು ಖಾಲಿ ಮಾಡಿಕೊಂಡು,
ನನ್ನ ಕಾಲ ಬಂದಾಗ ಪರಿಶುದ್ಧ ಅಂತರಂಗ ಹೊತ್ತು ಹೋಗಬೇಕಿತ್ತು.”

 • ಕಮಲಾ ದಾಸ್

———

ಕಮಲಾ ದಾಸ್ ಅವರ “ಮೈ ಸ್ಟೋರಿ”ಯನ್ನು ಕನ್ನಡಕ್ಕೆ ತಂದಿರುವವರು ಡಾ. ಕೆ ಪೂರ್ಣಿಮಾ ಭಟ್ . ಈ ಭಾಗವನ್ನು ಆರಿಸಿ ಕೊಟ್ಟವರು ಶಿವಶಂಕರ್ ಜಿ.

Share

One Comment For "‘ನಿನ್ನ ಹುಚ್ಚು ಚಿರಾಯುವಾಗಲಿ ಎಂದ’
ಕಮಲಾ ದಾಸ್ ಸ್ಟೋರಿ | ಅನು: ಡಾ. ಕೆ ಪೂರ್ಣಿಮಾ ಭಟ್
"

 1. nagraj harapanahalli
  23rd August 2016

  ಬಯಲು ಬಯಲಾಗುವುದು ಎಂದರೆ ಇದೇ…

  Reply

Leave a comment

Your email address will not be published. Required fields are marked *

Recent Posts More

 • 2 weeks ago No comment

  ಕವಿಸಾಲು | ಇಂಡೋನೇಶಿಯಾ

      ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ಜಲ, ಉಸಿರ ಗಾಳಿ ಹುಚ್ಚೆದ್ದು ಕುಣಿದು ಅಪ್ಪಳಿಸಿದ ಆಘಾತಕ್ಕೆ ಕಂಗೆಟ್ಟು ತತ್ತರಿಸಿವೆ ಪ್ರಾಣಿ, ಮನುಜ ಕುಲ ಮಾಡು ಹಾರಿ, ಕಂಬಗಳು ಕುಸಿದು ನೆಲಕಚ್ಚಿವೆ ಮಾನವನ ಬೀಡು ಕತ್ತರಿಸಿ ...

 • 2 weeks ago No comment

  ಕವಿಸಾಲು | ತಡವಿಲ್ಲದಿರಲಿ ಇನ್ನು…

      ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ತಡೆಯ ದಾಟಿ ತಲುಪಬೇಕಿದೆಯಷ್ಟೆ ಬಯಕೆ ಗುರಿಯನ್ನು ದಟ್ಟ ಹಸಿರಿನ ಕಾಡು, ಆಗಸದ ನೀಲಿ ಬಿಳಿಯ ಮೋಡಗಳ, ಬಿಸಿಲ ಬೆಳಕಿನ ನಡುವೆ ಬಯಲ ಸ್ವೇಚ್ಛೆಯ, ತಿಳಿಗಾಳಿ ತವಕದಲಿ ಬಂಧನಗಳ ...

 • 4 weeks ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 month ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 month ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...


Editor's Wall

 • 31 August 2018
  2 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  2 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  2 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  2 months ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  2 months ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...