Share

ಪ್ರೀತಿ ಹುಟ್ಟೋದೇ ಯುದ್ಧ ಭೂಮಿಯಲ್ಲಿ ಮತ್ತು ಬಡವರ ಗುಡಿಸಲುಗಳಲ್ಲಿ…
ಚೇತನಾ ತೀರ್ಥಹಳ್ಳಿ ಕಾಲಂ

IMG-20160516-WA0001

ಸ್ವಗತ | swagata

 

 

 

chatena 01

ಹಳ ದಿನಗಳಾದವು ಆ ಎಲ್ಲ ಭಾವನೆಗಳನ್ನ ತಳಕ್ಕೊತ್ತಿ. ಅದರ ಮೇಲೆಷ್ಟು ನಿರಾಕರಣೆಯ ಹೊದಿಕೆಗಳು! ಈ ನಡು ಮಧ್ಯಾಹ್ನದಲ್ಲಿ ಬೆವರುವಂತಿಲ್ಲ ಯಾವ ಕಾಣಕ್ಕೂ. ಬಿಡು. ಇದು ಹಾಗೆಲ್ಲ ಮೈಗಂಧಕ್ಕೆ ಮರುಳಾಗುವ ವಯಸ್ಸೂ ಅಲ್ಲ…. ನಡು ಮಧ್ಯಾಹ್ನ ಅಂದೆನಲ್ಲ? ಪುಟಗಳನ್ನ ತಿರುವುತ್ತೇನೆ. ಈ ನನ್ನ ತಹತಹ ಅಸಂಬದ್ಧವೇನಲ್ಲ ಅಂತ ಖಾತ್ರಿ ಮಾಡಿಕೊಳ್ಳೋದಕ್ಕೆ. ಹೋಲಿಕೆಯ ಹೊರೆ ಹೊತ್ತರಷ್ಟೆ ಜನರನ್ನ ಕೊಂಚ ಸಂಭಾಳಿಸಬಹುದು. ನಾವೇ ಹೊಸ ದಾರಿ ಕೊರೆದರೆ ಕಡುಕಷ್ಟ ನಡಿಗೆ. ನಾನೇನೋ ಲಜ್ಜೆಗೇಡಿ, ರೆಕ್ಕೆ ಹರವಿ ಹಾರಿಬಿಡುವೆ, ನಿನ್ನ ಹೆಜ್ಜೆಯ ಲಯ ಹಾಗಿಲ್ಲವಲ್ಲ?

ಇರಲಿ. ಇವೆಲ್ಲ ಶುರುವಾದ ಘಳಿಗೆಯ ಬಗ್ಗೆ ಯೋಚಿಸ್ತೇನೆ. ಇನ್ನೇನು ನೀರಿಗೆ ಹಾರಬೇಕು ಅನ್ನುವಾಗ ಹೊತ್ತಿಕೊಂಡ ಬೆಂಕಿ ನೀನು. ಹೊತ್ತಿಯೂ ನನ್ನೆದೆಯನುರಿಸದೆ ಬೆಳಕಾಗಿಸಿದ ಬೆರಗು ನೀನು. ಆಗಲೇ ನಾನು ಗಾಳಿಯಾಗಿದ್ದು. ನಿನ್ನ ಕೆನ್ನೆ ನೇವರಿಸಿ ಕಚಗುಳಿಯಿಟ್ಟಿದ್ದು. ನಿನ್ನ ಸುತ್ತ ಸುಳಿದು ಸುಟ್ಟ ಪತಂಗಗಳ ರೆಕ್ಕೆ ನನ್ನ ಸುಳಿಯಲ್ಲಿ ಹಾರಿದವು. ನನ್ನೊಳಗೆ ಪ್ರೇಮ ಒಡಲುಗಟ್ಟಿದ್ದು ಹೀಗೆ.

ಈ ಅದ್ಭುತ ಹೊರಳನ್ನು ಕೂಗಿ ಹೇಳಿಕೊಳ್ಳುವ ತವಕ. ನಾನು ಪ್ರೇಮದಲ್ಲಿದ್ದೇನೆಂದು ಜಗತ್ತಿಗೆ ಸಂಶಯ. ಹಾದು ಹೋಗುವ ತುಟಿಗಳ ಮುಗುಳು ಅಳೆಯುತ್ತ ಕುಂತಿದೆ ಪ್ರೇಮಿಯ ಪತ್ತೆಗೆ. ನಾನಾದರೂ ಪದ್ಯ ಧಾಟಿಯ ಮರೆಯಲ್ಲಿ ಗುಟ್ಟು ಬಿಚ್ಚಿಡುತ್ತಿದ್ದೇನೆ. ಯಾರೂ ನಿನ್ನ ಹೆಸರು ಹುಡುಕಲಾರರು ಅನ್ನೋ ನೆಚ್ಚಿಗೆಯಿಂದ, ಹುಡುಕಲೆಂಬ ಒಳಬಯಕೆಯಿಂದ!

ಪ್ರೇಮ ಯಾವತ್ತೂ ಪದ್ಯದಂತೆ. ನಮ್ಮ ಖುಷಿಗೇ ಬರೆದುಕೊಂಡರೂ ಸಹೃದರ ಕಿವಿಗೆ ಬಿದ್ದಾಗಲೇ ಅದಕ್ಕೆ ಸಾರ್ಥಕತೆ. ಜೊತೆ ನಡೆದ ಹಾದಿಯುದ್ದ ಒಬ್ಬಳೇ ಸಾಗುವಾಗ ತಿರುವುಗಳಲ್ಲಿ ನೀನು ಕೈಬೀಸುತ್ತೀಯ. ಭ್ರಮೆಯೇನಲ್ಲ. ಹಾಗೆ ನಾನೇ ಊಹಿಸಿಕೊಳ್ತೇನೆ. ಭ್ರಮಿಸುವ ಸಂಭ್ರಮವಿಲ್ಲದೆ ಇದು ಪ್ರೇಮವಾದೀತು ಹೇಗೆ!? ನಿನ್ನ ತುಟಿ ಸೋಕಿದ ಮಧುಬಟ್ಟಲನ್ನ ಕದ್ದು ತರಬೇಕನ್ನುವ ಚಡಪಡಿಕೆ. ಕೊನೆಪಕ್ಷ, ಉರಿಸಿಟ್ಟ ತುಂಡು ಸಿಗರೇಟುಗಳನ್ನ. ಈ ಉನ್ಮಾದ, ನಿನ್ನ ತುಟಿ ನನ್ನ ಕೆನ್ನೆಯೊತ್ತುವುದಕ್ಕಿಂತ ನೂರು ಸಾವಿರ ಪಾಲು ಹೆಚ್ಚು ನಶೆ! ನನ್ನ ಕರ್ಚೀಫನ್ನೊಮ್ಮೆ ಕದ್ದು ನೋಡು. ನಿನಗರ್ಥವಾಗಬಹುದು….

ಗೊತ್ತಿದೆ ನನಗೆ, ನೀನು ಸಿಡುಕುತ್ತೀಯ: “ಅಲ್ಲಿ ಜಗತ್ತು ಬಡಿದಾಟ ಬಡತನಗಳಲ್ಲಿ ಬೇಯುತ್ತಿದೆ, ನಿನಗೆ ಪ್ರೀತಿಪ್ರೇಮದ ಕುಣಿತ” ಅನ್ನುತ್ತೀಯ. ಗೊತ್ತಿಲ್ಲವಾ ನಿನಗೆ? ಪ್ರೀತಿ ಹುಟ್ಟೋದೇ ಯುದ್ಧ ಭೂಮಿಯಲ್ಲಿ ಮತ್ತು ಬಡವರ ಗುಡಿಸಲುಗಳಲ್ಲಿ. ನೀನು ಯುದ್ಧಭೂಮಿಯಲ್ಲಿದ್ದೀಯ; ನಾನು ಬಡವಿ, ಗುಡಿಸಲಿನಲ್ಲಿ. ಪ್ರೇಮ ಧೀರತನ ತುಂಬುತ್ತದೆ. ಪ್ರೇಮ ಲೋಭ ಕೊಲ್ಲುತ್ತದೆ. ಹಾಗೆಂದೇ….

ತುಟಿ ಚೂರು ಚೂರೇ ಓರೆಯಾಗುತ್ತಿದೆ. ನಾಚುತ್ತಿದ್ದೀನಾ? ನಡು ಮಧ್ಯಾಹ್ನದ ಹಂಗು ಮೀರಿ? ಇರು, ಮುಗಿಸುವ ಮೊದಲೊಂದು ಮಾತು.

ನಡು ಮಧ್ಯಾಹ್ನವನ್ನ ಮರೆತುಬಿಡು. ಮೈಗಂಧ ಯಾವಾಗ ಬೇಕಾದರೂ ಮರುಳು ಮಾಡಬಹುದು. ಪವಿತ್ರಪ್ರೇಮದ ವ್ಯಸನಕ್ಕೆ ಬೀಳಬೇಡ, ಅದೊಂದು ವಂಚನೆಯಷ್ಟೆ. ಪ್ರೇಮವೇ ಪವಿತ್ರ. ಮತ್ತೆಂಥದು ಅದು ಪವಿತ್ರ ಪ್ರೇಮ? ಅವೆಲ್ಲ ನೀತಿ ವ್ಯಸನಿಗರ ನಾಟಕ. ನೋಟದಲ್ಲೆ ಮುಟ್ಟಿದ್ದು ಸಾಕು. ಮತ್ತೆ ಮಾತಿನ ಅಗತ್ಯವಿದೆಯಾ?

————-

che1ಚೇತನಾ ತೀರ್ಥಹಳ್ಳಿ. ಅಲಾವಿಕಾ ಮತ್ತೊಂದು ಕಾವ್ಯನಾಮ. ಫ್ರೀಲಾನ್ಸ್ ಪತ್ರಕರ್ತೆ ಮತ್ತು ಬರಹಗಾರ್ತಿ. ಪ್ರಕಟಿತ ಪುಸ್ತಕಗಳು: ‘ಉಫೀಟ್’, ‘ಗುಟ್ಟು ಬಚ್ಚಿಡಲು ಬರುವುದಿಲ್ಲ’, ‘ಶಬರಿಯ ಅವಸರ’ ಕವನ ಸಂಕಲನಗಳು; ‘ಸೂರ್ಯನೆದೆಯ ನೀರ ಬೀಜ’ ಅಚ್ಚಿನಲ್ಲಿದೆ. ‘ಭಾಮಿನಿ ಷಟ್ಪದಿ’ ಮತ್ತು ‘ಬಿಸಿಲ ಚೂರಿನ ಬೆನ್ನು’ ಅಂಕಣ ಬರಹಗಳ ಸಂಗ್ರಹ; ‘ಲಾ ಕಾಲಮ್’ ಅಚ್ಚಿನಲ್ಲಿದೆ. ‘ಬ್ಲಾಗಿಸು ಕನ್ನಡ ಡಿಂಡಿಮವ’ ಸಂಪಾದಿತ ಕೃತಿ. ಕಾಸ್ಮಿಕ್ ಜೋಕ್, ಕ್ಲೌಡ್ ನೈನ್ ಮತ್ತು ಐ ಆಮ್ ಅನದರ್ ಯು ಇಂಗ್ಲಿಷಿನಿಂದ ಅನುವಾದಿಸಿದ ಕೃತಿಗಳು. ‘ನೀಲಿ ಬಾನಿನಲ್ಲಿ ಕೆಂಪು ಸೂರ್ಯ: ಜೆ ಎನ್ ಯು ಭಾಷಣಗಳ ಸಂಗ್ರಹಾನುವಾದ’ ಅವರ ಹೊಸ ಕೃತಿ.

Share

Leave a comment

Your email address will not be published. Required fields are marked *

Recent Posts More

  • 9 hours ago No comment

    ಇಲ್ಲಿ ಶಬ್ದಗಳಿಗೂ ಚಳಿಗಾಲ

              | ಕಮಲಾದಾಸ್ ಕಡಲು       ಕಪ್ಪು ಜನಾಂಗ (For Cleo Pascal) ಕಮಲಾದಾಸ್ ಕವಿತೆಯ ಅನುವಾದ     ಈಗ ಕೆನಡಾದಲ್ಲಿ ಶರದೃತುವಿನ ಕಾಲ ಮೇಪಲ್ ಮರದ ಒಣಗಿದ ರಕ್ತದಂಥ ಕಡುಗೆಂಪು ಎಲೆಗಳು ಈ ವಾರದಂತ್ಯದವರೆಗೆ ಕೂಡ ಉಳಿಯಲಾರವು ನಾನು ಇಲ್ಲಿ ಎಲ್ಲರಿಗೂ ಕಾಣಿಸುತ್ತೇನೆ, ಅಲ್ಲಿಗಿಂತ ಇಲ್ಲಿ ಎದ್ದು ಕಾಣಿಸುತ್ತೇನೆ ಬಿಳಿಯ ದೇವರ ಲೋಕದಲ್ಲಿ ಕಾಲಿಟ್ಟ ಕಪ್ಪು ಜನಾಂಗದವರು ...

  • 1 day ago No comment

    ಇರಬಲ್ಲೆವಾ ಭಾವುಕರಾಗದೆ?

                  Millions of people have decided not to be sensitive. They have grown thick skins around themselves just to avoid being hurt by anybody. But it is at great cost. Nobody can hurt them, but nobody can make them happy either. ನಿಜ, ಒಂದೇ ...

  • 3 days ago No comment

    ಮೂಳೆಯ ಹಂದರವೊಂದುಳಿದು…

                      ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

  • 4 days ago No comment

    ಎರಡು ಕವಿತೆಗಳು

        ಕವಿಸಾಲು         ಸುನಾಮಿಯ ಊರಲ್ಲಿ ಗುಟ್ಟುಗಳ ರಟ್ಟು ಮಾಡದ ಒಡಲು ಸುನಾಮಿ ತವರಾದ ಕಡಲು ಒಳಗಿನ ಕತ್ತಲೆಯ ಕಳೆಯಲು ಹುಡುಕಿ ಹೊರಟವು ತಾವು ಕಳೆದುಕೊಂಡ ಕನಸುಗಳಷ್ಟೂ ಹಾವುಗಳು ಬಿಸಿಲಿಗೆ ಹೊರಳಿ ಪೊರೆ ಕಳಚಿ ನಚ್ಚಗಾದವು ಅದೇ ಕ್ಷಣದೊಳಗೆ ಅರಳಿಬಿರಿಯಬೇಕಿದ್ದ ಹೂವುಗಳು ಬಿಸಿಲ ಧಗೆಗೆ ಬೆಂದು ಬಾಡಿ ಉದುರಿಬಿದ್ದವು ನೆಲಕೆ ಶಬ್ದಗಳ ಮುಕ್ಕಳಿಸಿ ಉಗಿದ ರಭಸಕೆ ಊರ ತುಂಬಾ ನೆರೆ ಪರಿಹಾರದ ಗಂಜಿಕೇಂದ್ರಗಳಲಿ ...

  • 1 week ago No comment

    ಈ ಸಂಜೆ ಪ್ರಿತಿಯೊಡನೆ…

        ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...


Editor's Wall

  • 25 February 2018
    9 hours ago No comment

    ಇಲ್ಲಿ ಶಬ್ದಗಳಿಗೂ ಚಳಿಗಾಲ

              | ಕಮಲಾದಾಸ್ ಕಡಲು       ಕಪ್ಪು ಜನಾಂಗ (For Cleo Pascal) ಕಮಲಾದಾಸ್ ಕವಿತೆಯ ಅನುವಾದ     ಈಗ ಕೆನಡಾದಲ್ಲಿ ಶರದೃತುವಿನ ಕಾಲ ಮೇಪಲ್ ಮರದ ಒಣಗಿದ ರಕ್ತದಂಥ ಕಡುಗೆಂಪು ಎಲೆಗಳು ಈ ವಾರದಂತ್ಯದವರೆಗೆ ಕೂಡ ಉಳಿಯಲಾರವು ನಾನು ಇಲ್ಲಿ ಎಲ್ಲರಿಗೂ ಕಾಣಿಸುತ್ತೇನೆ, ಅಲ್ಲಿಗಿಂತ ಇಲ್ಲಿ ಎದ್ದು ಕಾಣಿಸುತ್ತೇನೆ ಬಿಳಿಯ ದೇವರ ಲೋಕದಲ್ಲಿ ಕಾಲಿಟ್ಟ ಕಪ್ಪು ಜನಾಂಗದವರು ...

  • 22 February 2018
    3 days ago No comment

    ಮೂಳೆಯ ಹಂದರವೊಂದುಳಿದು…

                      ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

  • 15 February 2018
    1 week ago No comment

    ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                        ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

  • 12 February 2018
    2 weeks ago No comment

    ಇಳಿಸಂಜೆಯ ಪ್ರೀತಿ

    ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

  • 11 February 2018
    2 weeks ago One Comment

    ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

      ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...