Share

ಜಾಕ್ ನಿಕಲ್ಸನ್ ಎಂಬ ಬೆರಗು
ಎ ಎನ್ ಪ್ರಸನ್ನ

ಎಂಭತ್ತಕ್ಕೆ ಕಾಲಿಟ್ಟಿರುವ ಅಮೆರಿಕದ ಜಾಕ್ ನಿಕಲ್ಸನ್ ಚಲನಚಿತ್ರ ಜಗತ್ತು ಕಂಡ ಅತ್ಯಂತ ಪ್ರತಿಭಾನ್ವಿತ ನಟರಲ್ಲೊಬ್ಬ. ತನ್ನ ಜೀವಮಾನದಲ್ಲಿ ಅರವತ್ತು ವರ್ಷಕ್ಕೂ ಮೀರಿ ಅನೇಕ ಅದ್ಭುತ ಚಿತ್ರಗಳು ಸೇರಿದಂತೆ ಎಪ್ಪತೈದು ಚಿತ್ರಗಳಲ್ಲಿ ನಟಿಸಿ 2010ರಲ್ಲಿ ಚಿತ್ರಜಗತ್ತಿಗೆ ‘ಬೈ’ ಹೇಳಿದ. ವಿಷಾದದ ಸಂಗತಿಯೆಂದರೆ ಅವನು ಹಾಗೆ ಮಾಡಿದ್ದು ಖುಷಿಯಿಂದಲ್ಲ; ಒಂದು ರೀತಿ ಬಲವಂತದಿಂದ. ಕಲಾವಿದನೊಬ್ಬ ಇಷ್ಟಪಡದ ಅನಿವಾರ್ಯ ಒತ್ತಡದಿಂದ.

ಚಿತ್ರೀಕರಣ ಸಂದರ್ಭದಲ್ಲಿ ಅವನಿಗೆ ಮುತ್ತುತ್ತಿದ್ದ ಮರೆವಿನ ಮುಸುಕಿನಿಂದ ಹೇಳಬೇಕಾದ ಮಾತುಗಳು ಮರೆತು ಹೋಗುತ್ತಿದ್ದವು. ಇದು ಅವನಿಗೆ ಅತಿ ದೊಡ್ಡ ಹಿನ್ನಡೆಯಾಯಿತು. ಹೀಗೆಂದಾಗ ತಟ್ಟನೆ ನಮ್ಮವರೇ ಆದ ಬಾಲಕೃಷ್ಣ ನೆನಪಾಗುವುದು ತೀರ ಸಹಜ. ಸರಿಯಾಗಿ ಕಿವಿ ಕೇಳದೆ ಜೊತೆಗಿರುವ ಪಾತ್ರಧಾರಿಯ ತುಟಿಯ ಚಲನೆಯನ್ನು ತೀಕ್ಷ್ಣವಾಗಿ ಗಮನಿಸುವುದರಿಂದಲೇ ಅದಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸಬೇಕಾದ ಒತ್ತಡದಲ್ಲಿಯೇ ಅವರು ಕಾರ್ಯ ನಿರ್ವಹಿಸಬೇಕಾಗಿತ್ತು. ಅದರಲ್ಲಿ ಯಶಸ್ವಿಯಾದದ್ದು ಕನ್ನಡ ಚಿತ್ರರಂಗದ ವಿಸ್ಮಯಗಳಲ್ಲೊಂದು. ಚಲನಚಿತ್ರ ಇತಿಹಾಸದಲ್ಲಿ ಮೂರು ಬಾರಿ ಆಸ್ಕರ್ ಪ್ರಶಸ್ತಿ ಗಳಿಸಿದ ಮೂವರು ಪುರುಷರಲ್ಲಿ ಜಾಕ್ ನಿಕಲ್ಸನ್ ಒಬ್ಬನಾದರೆ, ನಾಲ್ಕು ಸಲ ಪ್ರಶಸ್ತಿ ಗಳಿಸಿದವರು ಕ್ಯಾಥರೀನ್ ಹೆಬರ್ನ್. ಆಸ್ಕರ್ ಇತಿಹಾಸದಲ್ಲಿ ಹನ್ನೆರಡು ಸಲ ಪ್ರಶಸ್ತಿಗೆ ನಾಮನಿರ್ದೇಶನಗೊಂಡು ದಾಖಲೆ ಸ್ಥಾಪಿಸಿರುವ ಅವನ ನಂತರ ಹನ್ನೊಂದು ಬಾರಿ ಲಾರೆನ್ಸ್ ಆಲಿವರ್ ಹಾಗೆ ಮಾಡಿದ್ದಾನೆ. ಇದಲ್ಲದೆ ನಿಕಲ್ಸನ್‍ಗೆ ಅತ್ಯುತ್ತಮ ಸಾಧನೆಗಾಗಿ ರಷ್ಯಾದ ಸ್ಟಾನ್ಸೆವಸ್ಕಿ ಪ್ರಶಸ್ತಿ ದೊರಕಿರುವುದು ಚಿತ್ರನಟರಲ್ಲಿ ಅವನಿಗೆ ಮಾತ್ರ.

11960ರಿಂದ 2000ದವರೆಗೆ ಪ್ರತಿ ದಶಕದಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಇಬ್ಬರೇ ನಟರಲ್ಲಿ ನಿಕಲ್ಸನ್‍ ಒಬ್ಬನಾದರೆ. ಇನ್ನೊಬ್ಬ ಮೈಖೇಲ್ ಕೇನ್. ತೀರ ಸಾಮಾನ್ಯ ಕುಟುಂಬದವನಾಗಿ ಬಾಲ್ಯದಲ್ಲಿ ಓದಿನಲ್ಲಿ ಆಸಕ್ತಿ ಇರದ ಅವನು 17ನೇ ವಯಸ್ಸಿನಲ್ಲಿ ಲಾಸ್ ಆಂಜಲಿಸ್‍ಗೆ ಬಂದು ಎಂಜಿಎಂ ಸ್ಟುಡಿಯೋ ಸೇರಿ ಪುಡಿಗೆಲಸಗಳನ್ನು ಮಾಡಿಕೊಂಡಿದ್ದ. 21 ಆದಾಗ ನಟಿಸಿದ ಮೊದಲ ಚಿತ್ರ ‘ದ ಸಿಟಿ ಬೇಬಿ ಕಿಲ್ಲರ್’ನಲ್ಲಿ ತಾನೊಬ್ಬನನ್ನು ಕೊಂದೆನೆಂದು ತಪ್ಪು ತಿಳಿದಿದ್ದ ಸೂಕ್ಷ್ಮ ಮನಸ್ಸಿನ ಪಾತ್ರ. ಅನಂತರ ನಾಲ್ಕೈದು ಚಿತ್ರಗಲ್ಲಿ ಕಿರು ಪಾತ್ರಗಳಲ್ಲಿ ಕಾಣಿಸಿಕೊಂಡರೂ 1969ರ ರೋಡ್ ಮೂವಿ ‘ಈಸಿ ರೈಡರ್’ ಅಭಿನಯಕ್ಕಾಗಿ ಆಸ್ಕರ್ ಪ್ರಶಸ್ತಿಗೆ ಪೋಷಕ ಪಾತ್ರ ವಿಭಾಗದಲ್ಲಿ ನಾಮನಿರ್ದೇಶನಗೊಂಡದ್ದು ಅವನ ಚಿತ್ರರಂಗ ಜೀವನಕ್ಕೆ ತಿರುವು ಕೊಟ್ಟಿತು. ಅನಂತರ ಅವನು ಸವಾಲಿನಂತೆ ಸ್ವೀಕರಿಸಿ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ 1973ರ ಹಾಲ್ ಆಶ್ಬಿ ನಿರ್ದೇಶನದ ‘ಲಾಸ್ಟ್ ಡೀಟೇಲ್’ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ. ಆ ಸಮಯದಲ್ಲಿಯೇ ಕೆಲವು ಕಮರ್ಷಿಯಲ್ ಚಿತ್ರಗಳನ್ನು ನಿರಾಕರಿಸಿ ತನ್ನ ಮನೋಧರ್ಮವನ್ನು ಪ್ರಕಟಿಸಿದ.

ಹಲವು ಭಾವಪದರುಗಳಿರುವ ಪಾತ್ರಗಳಲ್ಲಿ ತನ್ನೊಳಗಿನ ಶಕ್ತಿಯನ್ನು ಪ್ರಕಟಿಸಿದ್ದಾನೆ. ಸಾಕಷ್ಟಿವೆ. ಅವುಗಳಲ್ಲಿ ಅವನಿಗೆ ಮೊಟ್ಟಮೊದಲಿಗೆ ಹೆಚ್ಚಿನ ಮಾನ್ಯತೆ ಕೊಟ್ಟದ್ದು ಮಾನಸಿಕ ಅಸ್ವಸ್ಥರ ನಿಲಯದಲ್ಲಿ ಜರುಗುತ್ತಿದ್ದ ಕ್ರೂರ ದಬ್ಬಾಳಿಕೆಯ ವಿರುದ್ಧ ಸಿಡಿದೇಳುವ ಮಾನವೀಯತೆಯುಳ್ಳ ಪಾತ್ರದ1975ರ ಕೆನ್ ಕೆಸ್ಸಿ ಕಾದಂಬರಿ ಆಧಾರಿತ ಮಿಲೋಸ್ ಫೋರ್ಮನ್ ನಿರ್ದೇಶನದ ‘ಒನ್ ಫ್ಲೂ ಓವರ್ ಕಕೂಸ್ ನೆಸ್ಟ್’ ಮತ್ತು ಆಸ್ಪತ್ರೆ ಸೇರುವ ನೆರೆಯಾತನ ಒಳಿತಿಗೆ ಶ್ರಮಿಸುವ ಸೂಕ್ಷ್ಮ ಸ್ವಭಾವದ ಲೇಖಕನ ಪಾತ್ರದ 1997ರ ಜೇಮ್ಸ್ ಎಲ್ ಬ್ರೂಕ್ಸ್‍ನ ‘ಆಸ್ ಗುಡ್ ಆಸ್ ಇಟ್ ಗೆಟ್ಸ್’ ಚಿತ್ರಗಳ ಅಭಿನಯಕ್ಕಾಗಿ ಅತ್ಯುತ್ತಮ ನಟ ಹಾಗೂ ನಿವೃತ್ತನ ಪಾತ್ರದ 1983ರ ‘ಟಮ್ರ್ಸ್ ಆಫ್ ಎಂಡಿಯರ್‍ಮೆಂಟ್’ ಚಿತ್ರಕ್ಕೆ ಅತ್ಯುತ್ತಮ ಪೋಷಕ ನಟಆಸ್ಕರ್ ಪ್ರಶಸ್ತಿಗಳು ಲಭಿಸಿವೆ.

3ವಿಶೇಷವೆಂದರೆ ಅವನಿಗೆ ಪ್ರಶಸ್ತಿ ಬಂದ ಚಿತ್ರಗಳ ನಾಯಕಿಯರಿಗೆಲ್ಲ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ. ಅವನು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಹೊರಗಿನಿಂದ ಬಂದ ಸೂಕ್ಷ್ಮ ಮನಸ್ಸಿನ. ಮಾನವತಾವಾದಿಯಾಗಿ ವೈಯಕ್ತಿಕ ಪರಿಣಾಮ ಲೆಕ್ಕಿಸದೆ ಅಲ್ಲಿನ ವ್ಯವಸ್ಥೆಯ ವಿರುದ್ಧ ಸೆಣೆಸುತ್ತಾನೆ. ಅವನ ಇತರ ಹೆಸರಾಂತ ಚಿತ್ರಗಳೆಂದರೆ ಪ್ರೇಕ್ಷಕರನ್ನು ನಡುಗಿಸುವಚಿತ್ರವೆನಿಸಿದ ಸ್ಟೀಫನ್ ಕಿಂಗ್ ಬರೆದ ಕಾದಂಬರಿ ಆಧಾರಿತ ಸಿಡ್ನಿ ಲುಮೆಟ್ ನಿರ್ದೇಶನದ ‘ದ ಶೈನಿಂಗ್’, ಭಾವನಾತ್ಮಕವೆನಿಸಿದ ಸಂಗೀತದಲ್ಲಿ ಬಾಲಪ್ರತಿಭೆ ಎನ್ನಿಸಿ ಅನಂತರ ನಿರಾಶೆಗೊಳಿಸುವ ಪಾತ್ರದ ‘ಫೈವ್ ಈಸಿ ಪೀಸಸ್’, ಅಪರಾಧಿತನನ್ನು ಹುಡುಕುವ ಪ್ರಯತ್ನದಲ್ಲಿ ಕನೆಗೆ ತಾನೇ ಅಪರಾದದ ಸುಳಿಯಲ್ಲಿ ಸಿಲುಕುವ ರೊಮಾನ್ ಪೊಲಾನ್ಕ್ಸಿ ನಿರ್ದೇಶಿತ 1974ರ ‘ಚೈನಾಟೌನ್’, ಅಮೆರಿಕದ ಹೆಸರಾಂತ ನಾಟಕಕಾರ ಒನೀಲ್‍ನ ಜೀವನ ಕುರಿತ ‘ರೆಡ್ಸ್’ ಮುಂತಾದವು.

ನಟನಾಗಿ 2003ರಲ್ಲಿಯೂ ‘ಆಂಗರ್ ಮ್ಯಾನೇಜ್‍ಮೆಂಟ್’, ‘ದ ಡಿಪಾರ್ಟೆಡ್’ ಮತ್ತು ನಿರ್ದೇಶಕ ಆಂಟೋನಿಯೋನಿಯ ಅಪರಾಧಿಯನ್ನು ಪತ್ತೆ ಹಚ್ಚಲು ಹೋಗಿ ಅಪರಾಧದಲ್ಲಿ ಸಿಲುಕುವ ಪಾತ್ರದ ‘ಪ್ಯಾಸೆಂಜರ್’ ಚಿತ್ರಗಳು ಅಗಾಧ ಖ್ಯಾತಿ ತಂದು ಕೊಟ್ಟವು. ಅತ್ಯಂತ ಗಂಭೀರ ಮತ್ತು ಪ್ರೇಕ್ಷಕರನ್ನು ವಿವಿಧ ಭಾವದೆತ್ತರಕ್ಕೆ ಸಲೀಸಾಗಿ ತೆಗೆದುಕೊಂಡುಹೋಗಲು ಸಮರ್ಥನಾದ ಅವನು ‘ಆಸ್ ಗುಡ್ ಆಸ್ ಇಟ್ ಗೆಟ್ಸ್’, ‘ಬ್ರಾಡ್‍ಕ್ಯಾಸ್ಟ್ ನ್ವೂಸ್’ ಇತ್ಯಾದಿ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳನ್ನೂ ಅಷ್ಟೇ ತನ್ಮಯತೆಯಿಂದ ನಿಭಾಯಿಸಿದ. ತಾನು ಅಭಿನಯಿಸಿದ ಪ್ರತಿಯೊಂದು ಪಾತ್ರದಲ್ಲಿಯೂ ಸ್ವಾನುಭವದ ಅಂಶವಿದೆ ಎನ್ನುವ ಅವನ ಮಾತು ಅವನ ಅನುಭವ ವಿಸ್ತಾರವನ್ನು ಸೂಚಿಸುತ್ತದೆ.2010ರ ಹಾಸ್ಯ ಪ್ರಧಾನದ ‘ಹೌ ಡು ಯು ನೊ’ ಅವನ ಕೊನೆಯ ಚಿತ್ರ.

ಇವುಗಳ ನಡುವೆ ಅವನ ವೈಯಕ್ತಿಕ ಬದುಕು ವಿಲಕ್ಷಣವೆನಿಸಿವಂತಿದೆ. ಶೇಕ್ಸ್ಪಿಯರ್ ನಾಟಕಗಳಲ್ಲಿನ ಪಾತ್ರಗಳಿಗಾಗಿ ಹೆಸರು ಗಳಿಸಿ ನಂತರ ಖ್ಯಾತ ನಟನಾದ ಮರ್ಲನ್ ಬ್ರಾಂಡೋ ಅವನ ಜೀವದ ಗೆಳೆಯ. ಎಷ್ಟೆಂದರೆ ಅವನು ಸತ್ತ ಮೇಲೆ ಅವನಿದ್ದ ಮನೆಯನ್ನು ಖರೀದಿಸಿ ಅದೇ ನೆಲದ ಮೇಲೆ ಮನೆ ಕಟ್ಟಿಸಲು ಕ್ರಮ ತೆಗೆದುಕೊಂಡ. ಒಮ್ಮೆ ಅವನ ಜೊತೆ ಪೀಟರ್ ಶಾಫರ್‍ನ ಈ ಕ್ಯೂಸ್ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಒದಗಿ ಬಂದಿದ್ದರೂ ಕೊನೆಯಲ್ಲಿ ಅದು ರಿಚರ್ಡ್ ಬರ್ಟನ್‍ನ ಪಾಲಾದ್ದರಿಂದ ತಪ್ಪಿ ಹೋಯಿತು. ಇದಕ್ಕಿಂತ ಹುಟ್ಟಿನಿಂದಲೂ ಅಜ್ಜಿಯನ್ನು ತಾಯಿಯೆಂದು ತಿಳಿದುಕೊಂಡಿದ್ದ ಅವನಿಗೆ ಸಾಂದರ್ಭಿಕ ಕಾರಣಕ್ಕಾಗಿ ಜೀವನವಿಡೀಸೋದರಿಯಂತೆ ವರ್ತಿಸುತ್ತಿದ್ದ ಹಿರಿಯ ಸೋದರಿಯೇ ನಿಜವಾದ ತಾಯಿ ಎಂದು ಅವನಿಗೆ ಗೊತ್ತಾದ ಸಂಗತಿ ಅಸಾಮಾನ್ಯವಾದದ್ದು. ರಾಜಕೀಯವಾಗಿ ಡೆಮೊಕ್ರೆಟಿಕ್ ಪಾರ್ಟಿ ಕಡೆಗಿರುವ ಅವನಿಗೆ ಚಿತ್ರಕಲಾ ಕೃತಿಗಳ ಸಂಗ್ರಹಣೆ ಪ್ರಿಯವಾದ ಹವ್ಯಾಸ ಮತ್ತು ಕುಸ್ತಿಪಟುಗಳ ಬಗ್ಗೆ ಒಲವು.

Share

One Comment For "ಜಾಕ್ ನಿಕಲ್ಸನ್ ಎಂಬ ಬೆರಗು
ಎ ಎನ್ ಪ್ರಸನ್ನ
"

 1. Prasad
  13th August 2016

  Believing mother as elder sister reminds me the childhood of serial killer Theodore Robert Bundy a.k.a Ted Bundy, as his mother gave birth to him in a foster house of unwed mothers… Nice Article Prasanna ji… Kudos! 🙂
  – Prasad, Republic of Angola

  Reply

Leave a comment

Your email address will not be published. Required fields are marked *

Recent Posts More

 • 9 hours ago No comment

  ಇಲ್ಲಿ ಶಬ್ದಗಳಿಗೂ ಚಳಿಗಾಲ

            | ಕಮಲಾದಾಸ್ ಕಡಲು       ಕಪ್ಪು ಜನಾಂಗ (For Cleo Pascal) ಕಮಲಾದಾಸ್ ಕವಿತೆಯ ಅನುವಾದ     ಈಗ ಕೆನಡಾದಲ್ಲಿ ಶರದೃತುವಿನ ಕಾಲ ಮೇಪಲ್ ಮರದ ಒಣಗಿದ ರಕ್ತದಂಥ ಕಡುಗೆಂಪು ಎಲೆಗಳು ಈ ವಾರದಂತ್ಯದವರೆಗೆ ಕೂಡ ಉಳಿಯಲಾರವು ನಾನು ಇಲ್ಲಿ ಎಲ್ಲರಿಗೂ ಕಾಣಿಸುತ್ತೇನೆ, ಅಲ್ಲಿಗಿಂತ ಇಲ್ಲಿ ಎದ್ದು ಕಾಣಿಸುತ್ತೇನೆ ಬಿಳಿಯ ದೇವರ ಲೋಕದಲ್ಲಿ ಕಾಲಿಟ್ಟ ಕಪ್ಪು ಜನಾಂಗದವರು ...

 • 1 day ago No comment

  ಇರಬಲ್ಲೆವಾ ಭಾವುಕರಾಗದೆ?

                Millions of people have decided not to be sensitive. They have grown thick skins around themselves just to avoid being hurt by anybody. But it is at great cost. Nobody can hurt them, but nobody can make them happy either. ನಿಜ, ಒಂದೇ ...

 • 3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 4 days ago No comment

  ಎರಡು ಕವಿತೆಗಳು

      ಕವಿಸಾಲು         ಸುನಾಮಿಯ ಊರಲ್ಲಿ ಗುಟ್ಟುಗಳ ರಟ್ಟು ಮಾಡದ ಒಡಲು ಸುನಾಮಿ ತವರಾದ ಕಡಲು ಒಳಗಿನ ಕತ್ತಲೆಯ ಕಳೆಯಲು ಹುಡುಕಿ ಹೊರಟವು ತಾವು ಕಳೆದುಕೊಂಡ ಕನಸುಗಳಷ್ಟೂ ಹಾವುಗಳು ಬಿಸಿಲಿಗೆ ಹೊರಳಿ ಪೊರೆ ಕಳಚಿ ನಚ್ಚಗಾದವು ಅದೇ ಕ್ಷಣದೊಳಗೆ ಅರಳಿಬಿರಿಯಬೇಕಿದ್ದ ಹೂವುಗಳು ಬಿಸಿಲ ಧಗೆಗೆ ಬೆಂದು ಬಾಡಿ ಉದುರಿಬಿದ್ದವು ನೆಲಕೆ ಶಬ್ದಗಳ ಮುಕ್ಕಳಿಸಿ ಉಗಿದ ರಭಸಕೆ ಊರ ತುಂಬಾ ನೆರೆ ಪರಿಹಾರದ ಗಂಜಿಕೇಂದ್ರಗಳಲಿ ...

 • 1 week ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...


Editor's Wall

 • 25 February 2018
  9 hours ago No comment

  ಇಲ್ಲಿ ಶಬ್ದಗಳಿಗೂ ಚಳಿಗಾಲ

            | ಕಮಲಾದಾಸ್ ಕಡಲು       ಕಪ್ಪು ಜನಾಂಗ (For Cleo Pascal) ಕಮಲಾದಾಸ್ ಕವಿತೆಯ ಅನುವಾದ     ಈಗ ಕೆನಡಾದಲ್ಲಿ ಶರದೃತುವಿನ ಕಾಲ ಮೇಪಲ್ ಮರದ ಒಣಗಿದ ರಕ್ತದಂಥ ಕಡುಗೆಂಪು ಎಲೆಗಳು ಈ ವಾರದಂತ್ಯದವರೆಗೆ ಕೂಡ ಉಳಿಯಲಾರವು ನಾನು ಇಲ್ಲಿ ಎಲ್ಲರಿಗೂ ಕಾಣಿಸುತ್ತೇನೆ, ಅಲ್ಲಿಗಿಂತ ಇಲ್ಲಿ ಎದ್ದು ಕಾಣಿಸುತ್ತೇನೆ ಬಿಳಿಯ ದೇವರ ಲೋಕದಲ್ಲಿ ಕಾಲಿಟ್ಟ ಕಪ್ಪು ಜನಾಂಗದವರು ...

 • 22 February 2018
  3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 15 February 2018
  1 week ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  2 weeks ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  2 weeks ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...