Share

ಇಷ್ಟು ಸಾಕೆಂದಿದ್ದೆಯಲ್ಲೋ…
ಸುಧಾ ಶರ್ಮಾ ಚವತ್ತಿ

ಪ್ರಸ್ತಾಪ | prastapa

sudhaವಿತೆ ಅಂತಾ ಅಲ್ಲ ಯಾವುದೇ ಕಲಾಕೃತಿ, ಸನ್ನಿವೇಶ, ವ್ಯಕ್ತಿಗಳು ಮತ್ತು ಘಟನೆಗಳೆಲ್ಲವೂ ನಾವು ಬದಲಾದಂತೆ ಬದಲಾಗುತ್ತ ಸಾಗುತ್ತದೆ. ನಾವು ನೋಡುವ ದೃಷ್ಟಿ ಬದಲಾದಂತೆ, ನಮ್ಮ ಗ್ರಹಿಸುವ ರೀತಿಯಲ್ಲಿಯೇ ಬದಲಾವಣೆ ಆದಂತೆ ನಮ್ಮೆದುರಿನ ಸಮಸ್ತವೂ ನಮಗೆ ಬೇರೆಯಾಗಿಯೇ ಕಾಣುತ್ತದೆ. ಹಾಗಾಗಿಯೇ ಶ್ರೇಷ್ಠವಾದದ್ದೆಲ್ಲವೂ ಎಲ್ಲ ಕಾಲಕ್ಕೂ ನಿಲ್ಲುತ್ತದೆ. ಅದು ಮೌಲ್ಯವಾಗಿರಬಹುದು, ಮಾತಾಗಿರಬಹುದು, ಆಚರಣೆ ಇರಬಹುದು,ಸಾಹಿತ್ಯ, ಸಂಗೀತ, ಕಲೆಗಳೆಲ್ಲವೂ ಎಲ್ಲ ಕಾಲಕ್ಕೂ ಪ್ರಸ್ತುತವೇ.

ಕನ್ನಡದ ಮಹತ್ವದ ಕವಿ ಗೋಪಾಲಕೃಷ್ಣ ಅಡಿಗರ ಪ್ರಸಿದ್ಧ ಕವಿತೆ “ಯಾವ ಮೋಹನ ಮುರಳಿ ಕರೆಯಿತು ..” ಇದನ್ನು ಎಷ್ಟು ಸಾರಿ ಓದಿದೆನೋ, ರತ್ನಮಾಲಾ ಪ್ರಕಾಶರ ಧ್ವನಿಯಲ್ಲಿ ಎಷ್ಟು ಸಾರಿ ಕೇಳಿದೆನೋ ಗೊತ್ತಿಲ್ಲ. ಅಪ್ಪಟ ಪ್ರೇಮ ಕಾವ್ಯದ ಹಾಗೆ, ಇನ್ನೊಮ್ಮೆ ಪ್ರಖರ ಆಧ್ಯಾತ್ಮದ ಹಾಗೆ. ಕೆಲವೊಮ್ಮೆ ಮನುಷ್ಯರೊಳಗಿನ ನಿರಂತರ ಸಂಘರ್ಷದ ಅನಾವರಣದ ಹಾಗೆ ಈ ಕವಿತೆ ನಮ್ಮನ್ನು ಕಾಡುತ್ತದೆ. ಯಾವುದೇ ಸಂಗತಿ ಇರಬಹುದು ಹೀಗೆ ಗ್ರಹಿಸಬೇಕೆಂದು ಯಾರು ಯಾರಿಗೂ ಹೇಳಲಾರರು. ಊಟ ನೋಟ ಮಾತು ಕಥೆ ಯಾರಿಗೆ ಯಾವುದು ಸೊಗಸೋ ಅವರವರೇ ಕಂಡುಕೊಳ್ಳುತ್ತಾರೆ. ಕಂಡುಕೊಳ್ಳಬೇಕು. ಆದರೆ ಸೊಗಸನ್ನು, ಸೊಬಗನ್ನು ತೆರೆದು ತೋರಬೇಕಿದೆ. ಕಿಟಕಿಯಾಚೆಗಿನ ಲೋಕವನ್ನು ಬಾಗಿಲು ತೆರೆದು ಹೊರಬಂದೂ ನೋಡಬಹುದೆನ್ನುವುದನ್ನು ಹೇಳಬೇಕಾಗಿದೆ. ವಿಮರ್ಶೆಯ ಪರಿಭಾಷೆಯೂ ಬದಲಾಗಿದೆ. ಕೋಡಿಂಗ್ ಡೀ ಕೋಡಿಂಗ್ ಇದ್ದಹಾಗೆ. ಯಾವುದೂ ಇದಮಿತ್ತವಲ್ಲ.

adಹಾಡುವುದಕ್ಕೆ ಸುಲಭವಾಗಲು “ಯಾವ ಮೋಹನ ಮುರಳಿ.. ” ಕೆಲವು ಸಾಲುಗಳು ಬಿಟ್ಟುಹೋಗಿವೆ. ಬಹಳಷ್ಟು ಸಂದರ್ಭದಲ್ಲಿ ಪ್ರಸ್ತಾಪವೇ ಆಗಿರದ ಸಾಲುಗಳಿವು “ಒಲಿದ ಮಿದುವೆದೆ ರಕ್ತ ಮಾಂಸದ; ಬಿಸುಪು ಸೊಂಕಿನ ಪಂಜರ. ಇಷ್ಟು ಸಾಕೆಂದಿದ್ದೆಯಲ್ಲೋ ಇಂದು ಏನಿದು ಬೇಸರ.” ವಿವರಣೆಯೇ ಬೇಕಾಗದಷ್ಟು ನಿಚ್ಚಳವಾಗಿ ವಿವರಿಸಿರುವ ಈ ಸಾಲಿನಲ್ಲಿ ಮತ್ತೆ ಮತ್ತೆ ಅಂತರಂಗದ ತೀವ್ರ ಹುಡುಕಾಟದ, ಅತೃಪ್ತಿಯ ಜೊತೆಗೆ ಅಸಹಾಯಕ ಭಾವವೂ ಇದೆ. ಮನುಷ್ಯರೊಳಗಿನ ಅಂತರ್ಗತ ತುಡಿತವನ್ನು ಎಳೆ ಎಳೆಯಾಗಿ ತೆರೆದಿಡುವ ಕವಿತೆಯಲ್ಲಿ ಪ್ರಸ್ತಾಪವಾಗುವ ಯಾವ ಬೃಂದಾವನವು ಸೆಳೆಯಿತು ಎಂಬುದು ಪುನರಾವೃತ್ತಿಯಾಗುತ್ತದೆ. ಹೀಗೆ ಮತ್ತೆ ಮತ್ತೆ ಸೆಳೆಯುವ ಕೈ ಚಾಚಿ ಕರೆಯುವ ಬೃಂದಾವನವಾದರೂ ಯಾವುದು.

ಹೀಗೆ ಬರೆಯುವ ಹೊತ್ತಲ್ಲಿ ಸುಕನ್ಯಾ ಮಾರುತಿಯವರು ಬರೆದ “ಬಂದಿದ್ದಾನೆ ಕೃಷ್ಣ ಬೃಂದಾವನಕೆ” ಎನ್ನುವ ಕವಿತೆಯ ಸಾಲು ನೆನಪಾಗುತ್ತಿದೆ. ಕೃಷ್ಣ ಬೃಂದಾವನಕೆ ಬಂದಾಗ ಅಲ್ಲಿ ಒಂದು ನವ ಚೈತನ್ಯವೇ ನೆಲೆಗೊಳ್ಳುತ್ತದೆ. ಕೇವಲ ಗೋಪಿಕೆಯರ ಸಂಭ್ರಮವಲ್ಲ ಅದು ಇಡೀ ಬೃಂದಾವನವೇ ಕಾಯುತ್ತಿರುವ ಕೃಷ್ಣ ಮತ್ತೆ ಬಂದಿದ್ದಾನೆ. ಕೃಷ್ಣ ಬಂದು ಬೃಂದಾವನಕ್ಕೆ ಸಂತಸದ ಬೆಳದಿಂಗಳಾಗುತ್ತಾನೆ. ಬೃಂದಾವನವೇ ಬದಲಾಗುತ್ತದೆ. ಬೃಂದಾವನವು ಕೃಷ್ಣನಿಗಾಗಿ ಕಾಯುತ್ತಿತ್ತು. ಗೋವಳರ ಬದುಕನ್ನು ನಂದಗೋಕುಲವಾಗಿಸಲು ಕೃಷ್ಣ ಬಂದಿದ್ದಾನೆಯೇ ಈ ಕವಿತೆಯ ಇನ್ನೊಂದು ಆಯಾಮವನ್ನು ಖ್ಯಾತ ಕವಿ ಎಚ್ ಎಸ್ ವೆಂಕಟೇಶಮೂರ್ತಿಯವರು ವ್ಯಾಖ್ಯಾನಿಸುತ್ತ ಕೃಷ್ಣ ಬೃಂದಾವನಕ್ಕೆ ಬರುವುದು ಹಳ್ಳಿಯಿಂದ ಹೊರಟ ಯುವ ಸಮೂಹ ಮತ್ತೆ ಹಳ್ಳಿಯತ್ತ ಮುಖ ಮಾಡಿದ ಹೊಸ ಭರವಸೆ ಎನ್ನುತ್ತಾರೆ. ನಗರದ ಸತತ ಓಟಗಳಿಂದ ದಣಿದು, ಹಣ, ಅಧಿಕಾರ ಸ್ಫರ್ಧೆಯಿಂದ ಬಳಲಿದವರಿಗೆ ಬದುಕನ್ನು ಮತ್ತೆ ಕಟ್ಟಿಕೊಳ್ಳುವುದಕ್ಕೆ ಬೃಂದಾವನವು ಕೈ ಚಾಚಿ ಕರೆಯುತ್ತಿದೆ. ಕೈ ಅಳತೆಯಲ್ಲಿಯೇ ಇದು ಇದೆ.

ನಂದಗೋಪಾಲರಿಗಾಗಿ, ನವನೀತಚೋರರಿಗಾಗಿ, ಬರಿದಾದ ಹಳ್ಳಿ ಹಳ್ಳಿಗಳೂ ಬೃಂದಾವನದ ಅಂಗಳವಾಗಿ ಕಾಯುತ್ತಿದೆಯೇ? ಬರುತ್ತಾನಾ ಕೃಷ್ಣ? ಎಲ್ಲ ಬಿಟ್ಟು ಇದ್ದಕ್ಕಿದ್ದಂತೆ ಬೃಂದಾವನದ ಅಂಗಳಕ್ಕೆ… ಮಣ್ಣಿನ ಕಣ್ಣುಗಳು, ಯಶೋದೆಯರ ಮಮತೆಗಳು ಅಮೃತ ಸಿಂಚನವಾಗಬಹುದೆ? ಕೈ ಚಾಚಿ ಕರೆಯುತ್ತಿರುವ ಬೃಂದಾವನವ ಅರಸಿ ಬರುತ್ತಿದ್ದಾರಾ? ಕೇಳಿಸೀತೆ ಮುರಳಿಯ ಹೊಸ ಹುರುಪಿನ ಭರವಸೆಯ ನಾದವೊಂದು, ಸೆಳೆಯೀತೆ ಮಿಂಚಿನ ಕಣ್ಣುಗಳನ್ನು, ಅನುಭವದ ಹೆಜ್ಜೆಗಳನ್ನು. ಇರುವುದೆಲ್ಲವ ಬಿಟ್ಟು ಮತ್ತೆ ಹೊಸ ಇರುವ ಹುಡುಕಿ ಹೊರಡುತ್ತಾರಾ? ಬರಿದಾದ ಬೃಂದಾವನದ ಅಂಗಳಗಳಲ್ಲಿ ಗೋಪಿಕೆಯರ ಗೆಜ್ಜೆಗಳು ಮೊಳಗಬಹುದಾ?

—————-

ಸುಧಾ ಶರ್ಮಾ ಚವತ್ತಿ

286637_218799308166417_3412973_o[1]“ಒದ್ದೆ ಕಣ್ಣುಗಳ ಪ್ರೀತಿ” ಕವನ ಸಂಕಲನದ ಮೂಲಕ ಭರವಸೆ ಹುಟ್ಟಿಸಿದ ಸುಧಾ ಶರ್ಮಾ ಚವತ್ತಿ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ ಪರಿಣಿತರು. ಪತ್ರಿಕೆಗಳಲ್ಲಿ ಲೇಖನ, ಅಂಕಣಗಳ ಮೂಲಕ ಪರಿಚಿತರು. “ಆವಿಯಾಗಿದೆ ಮಾತು” (ಮಲ್ಲಿಗೆ), “ಷೇರೆಂಬ ಮಾಯಾಂಗನೆ” ( ವಿಜಯ ಕರ್ನಾಟಕ ), “ಪ್ರಾಫಿಟ್ ಪ್ಲಸ್” (ವಿಜಯವಾಣಿ) ಪ್ರಕಟಿತ ಅಂಕಣಗಳು. ಕಿರುತೆರೆ ಕಾರ್ಯರ್ಕಮಗಳ ನಿರ್ದೇಶನ, ನಿರ್ಮಾಣ, ನಿರೂಪಣೆಯ ಅನುಭವ. ಈಗ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಇವರು ಉತ್ತಮ ವಾಗ್ಮಿ. ಸಮೂಹ ಮಾತುಗಾರಿಕೆಯೂ ಇವರ ಉತ್ಕಟ ಪ್ರೀತಿಗಳಲ್ಲಿ ಒಂದು.

Share

2 Comments For "ಇಷ್ಟು ಸಾಕೆಂದಿದ್ದೆಯಲ್ಲೋ…
ಸುಧಾ ಶರ್ಮಾ ಚವತ್ತಿ
"

 1. Madhusudan
  15th August 2016

  Exalent

  Reply
  • sudha sharma chavathi
   24th September 2016

   thank u madhusudan

   Reply

Leave a comment

Your email address will not be published. Required fields are marked *

Recent Posts More

 • 17 hours ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 2 days ago No comment

  ಎರಡು ಕವಿತೆಗಳು

      ಕವಿಸಾಲು         ಸುನಾಮಿಯ ಊರಲ್ಲಿ ಗುಟ್ಟುಗಳ ರಟ್ಟು ಮಾಡದ ಒಡಲು ಸುನಾಮಿ ತವರಾದ ಕಡಲು ಒಳಗಿನ ಕತ್ತಲೆಯ ಕಳೆಯಲು ಹುಡುಕಿ ಹೊರಟವು ತಾವು ಕಳೆದುಕೊಂಡ ಕನಸುಗಳಷ್ಟೂ ಹಾವುಗಳು ಬಿಸಿಲಿಗೆ ಹೊರಳಿ ಪೊರೆ ಕಳಚಿ ನಚ್ಚಗಾದವು ಅದೇ ಕ್ಷಣದೊಳಗೆ ಅರಳಿಬಿರಿಯಬೇಕಿದ್ದ ಹೂವುಗಳು ಬಿಸಿಲ ಧಗೆಗೆ ಬೆಂದು ಬಾಡಿ ಉದುರಿಬಿದ್ದವು ನೆಲಕೆ ಶಬ್ದಗಳ ಮುಕ್ಕಳಿಸಿ ಉಗಿದ ರಭಸಕೆ ಊರ ತುಂಬಾ ನೆರೆ ಪರಿಹಾರದ ಗಂಜಿಕೇಂದ್ರಗಳಲಿ ...

 • 5 days ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...

 • 6 days ago No comment

  ಯಾವುದು ಈ ಧಾವಂತದ ದಿಕ್ಕು?

    ನ್ಯಾಯದ ಬಾಗಿಲಲ್ಲಿ ನ್ಯಾಯವಾಗಿ ಹೋಗುವವರಿಗೆ ಮಾತ್ರ ಪ್ರವೇಶ ಇಲ್ಲ, ಆದರೆ ನ್ಯಾಯವಲ್ಲದ, ಅದರ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದವರಿಗೆ ಮಾತ್ರ ಹಾರ ತುರಾಯಿಗಳೊಂದಿಗೆ ಭರ್ಜರಿ ಆಹ್ವಾನ.       रिमझिम गिरे सावन, सुलग सुलग जाये मन भीगे आज इस मौसम में लगी कैसी ये अगन ಏನೋ ಒಂದು ಜ್ವಾಲೆ, ಏನೋ ಒಂದು ಉರಿ, ಏನೋ ಒಂದು ಚಡಪಡಿಕೆ, ಒಂಥರಾ ಬೂದಿ ...

 • 1 week ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...


Editor's Wall

 • 22 February 2018
  17 hours ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 15 February 2018
  1 week ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  2 weeks ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  2 weeks ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...

 • 11 February 2018
  2 weeks ago No comment

  ನಿಮಗಿಂತ ಹೆಚ್ಚು ನಿರ್ಜೀವ

          | ಕಮಲಾದಾಸ್ ಕಡಲು       ಇಂದಿರಾಗಾಂಧಿ ಬಿಟ್ಟರೆ… (Next to Indira Gandhi) ಕಮಲಾದಾಸ್ ಕವಿತೆಯ ಅನುವಾದ       ಇಂದಿರಾಗಾಂಧಿಯನ್ನು ಬಿಟ್ಟರೆ, ನಾನು ಅತಿ ಹೆಚ್ಚು ಹೆದರಿದ್ದು ನನ್ನ ಅಪ್ಪನಿಗೆ ಮಾತ್ರ ನಾನು ಐದು ವರ್ಷದವಳಿರುವಾಗ ಅವರೇ ನನಗೆ ಹೇಳಿದ್ದು ಕಪ್ಪು ಮಕ್ಕಳು ಬಿಳಿಬಣ್ಣದ ಬಟ್ಟೆಗಳನ್ನು ಮಾತ್ರ ತೊಡಬೇಕೆಂದು. ಬೆಳೆಯುವ ದಿನಗಳಲ್ಲಿ ಕಳೆದುಹೋದಂತಿರುತ್ತಿದ್ದ, ಬಡಕಲಾಗಿದ್ದ, ಹಲ್ಲಿಗೆ ಕ್ಲಿಪ್ ...