Share

ಕೊಳಲೊಂದು ಕೊಕ್ಕಾಗಿ…
ಉಷಾ ಕಟ್ಟೆಮನೆ ಕಾಲಂ

 

ಕಲರವ | kalarava

 

 

usha

ದೊಡ್ಡದಾದ ಹಳದಿ ಕೊಕ್ಕಿರುವ ಹಾರ್ನ್ ಬಿಲ್ ಹಕ್ಕಿಯನ್ನು ನಿಮ್ಮಲ್ಲಿ ಕೆಲವು ಜನರಾದರೂ ನೋಡಿರುತ್ತೀರಿ. ತುಳುವಿನಲ್ಲಿ ಅದಕ್ಕೆ ಹೊಟ್ಟ ಎನ್ನುತ್ತಾರೆ. ಹೆಣ್ಣು ಹಕ್ಕಿ ಮರದ ಪೊಟರೆಯಲ್ಲಿ ಮೊಟ್ಟೆಯಿಟ್ಟು ಕಾವು ಕೊಡಲು ಕುಳಿತುಬಿಡುತ್ತದೆ.ಗಂಡು ಹಕ್ಕಿ ಆಹಾರ ಹೊಂಚಲು ಹೊರಡುತ್ತದೆ. ಹಾರಿ ಹೋಗುವ ಮೊದಲು ಆ ಗೂಡನ್ನು ಮೇಣದಿಂದ ಗಟ್ಟಿಯಾಗಿ ಮುಚ್ಚಿ ತನ್ನ ಕೊಕ್ಕಿನಿಂದ ಹೆಣ್ಣು ಹಕ್ಕಿಗೆ ಆಹಾರ ಕೊಡಲಷ್ಟೇ ಪುಟ್ಟದಾದ ರಂಧ್ರವನ್ನು ಉಳಿಸುತ್ತದೆ. ಆ ಮೇಣ ಎಷ್ಟು ಗಟ್ಟಿಯಾಗಿರುತ್ತದೆಯೆಂದರೆ ಕತ್ತಿಯಿಂದ ಚುಚ್ಚಿದರೂ ಅದು ಭಗ್ನಗೊಳ್ಳುವುದಿಲ್ಲವಂತೆ.ಕಾವು ಕೂತ ಹೆಣ್ಣು ಹಕ್ಕಿ ಮೊಟ್ಟೆಯಿಂದ ಮರಿಗಳು ಹೊರಬರುವ ಕಾಲಕ್ಕೆ ಯಾವ ಪರಿಯಲ್ಲಿ ಬದಲಾಗಿರುತ್ತದೆಯೆಂದರೆ ಅದರ ದೊಡ್ಡ ದೇಹ ಗಾತ್ರದಲ್ಲಿ ಕುಗ್ಗಿ, ರೆಕ್ಕೆ-ಪುಕ್ಕಗಳೆಲ್ಲಾ ಉದುರಿ ಮರಿಗಳು ಮತ್ತು ಅದರ ನಡುವಿನ ವ್ಯತ್ಯಾಸವೇ ಅಳಿದು ಹೋಗಿರುತ್ತದೆಯಂತೆ. ಒಂದುವೇಳೆ ಆಹಾರ ಹೊಂಚಲು ಹೋದ ಗಂಡು ಹಕ್ಕಿ ಬೇಟೆಗಾರರ ಗುಂಡಿಗೆ ಬಲಿಯಾಗಿ ಅಥವಾ ಇನ್ಯಾವುದೋ ಕಾರಣ್ಗಳಿಂದಾಗಿ ಸತ್ತರೆ ಇಲ್ಲಿ ಗೂಡಿನಲ್ಲಿರುವ ಹೆಣ್ಣು ಹಕ್ಕಿ ಮತ್ತು ಮರಿಗಳು ಆಹಾರವಿಲ್ಲದೆ ಸತ್ತು ಹೋಗುತ್ತವೆ.

ನಮ್ಮ ತೋಟಕ್ಕೆ ಮದ್ದು ಬಿಡುವ ವಾಸು ಈ ಹಕ್ಕಿಗಳ ದಾಂಪತ್ಯ ಬದುಕಿನ ಬಗ್ಗೆ ನನ್ನಲ್ಲಿ ಹೇಳಿದ್ದ. ಆಗಿನಿಂದಲೂ ಈ ಹಕ್ಕಿಗಳ ಬಗ್ಗೆ ನನಗೆ ವಿಶೇಷ ಕುತೂಹಲ. ಇದೀಗ ಅಳಿನಂಚಿನಲ್ಲಿರುವ ಪಕ್ಷಿ ಪ್ರಭೇದಕ್ಕೆ ಸೇರಿರಿರುವ ಈ ಹಕ್ಕಿಗಳು ಮಳೆಗಾಲದ ದಿನಗಳಲ್ಲಿ ನನ್ನ ಜಮೀನಿಗೆ ಹಿಂಡು ಹಿಂಡಾಗಿ ಬರುತ್ತವೆ. ಪ್ರತಿ ಬಾರಿ ತೋಟಕ್ಕೆ ಹೋದಾಗಲೂ ಹಾರ್ನ್ ಬಿಲ್‌ಗಳಿಗಾಗಿ ನನ್ನ ಕಣ್ಣುಗಳು ಅರಸುತ್ತವೆ. ಗಂಟೆಗಟ್ಲೆ ಆ ಹಕ್ಕಿಗಳ ಜಾಡು ಹಿಡಿದುಕೊಂಡು ನದಿ ದಡದಿಂದ ಕಾಡಿನಂಚಿನ ತನಕ ಕ್ಯಾಮರಾ ಹಿಡಿದುಕೊಂಡು ಮೆಲ್ಲನೆ ಓಡಾಡುತ್ತಿದ್ದೆ. ಅವುಗಳು ಎಳೆ ಹುಣಸೆ ಕಾಯಿಯನ್ನು ಕಚ್ಚಿ ತಿನ್ನುತ್ತಲೋ ಅಥ್ವಾ ಹಳದಿ ಅತ್ತಿ ಹಣ್ಣನ್ನು ಕುಕ್ಕಿ ತಿನ್ನುತ್ತಲೋ ಕ್ಕೆ ಕ್ಕೆ ಕ್ಕೆ ಎಂದು ಜೋರಾಗಿ ಗದ್ದಲವೆಬ್ಬಿಸುತ್ತಾ ನನ್ನೊಡನೆ ಕಣ್ಣುಮುಚ್ಚಾಲೆಯಾಡುತ್ತವೆ.

ದಾನೇಶ್ ಹಕ್ಕಿ ಅಥವಾ ಮಂಗಟ್ಟೆ ಹಕ್ಕಿ ಎಂದು ಕರೆಯುವ ಈ ಹಕ್ಕಿಗಳ ಬಗ್ಗೆ ನನಗೆ ಇದಕ್ಕಿಂತ ಜಾಸ್ತಿಯೇನೂ ಗೊತ್ತಿರಲಿಲ್ಲ. ಆದರೆ ಪೂರ್ಣಚಂದ್ರ ತೇಜಸ್ವಿಯವರು ‘ಹಕ್ಕಿ ಪುಕ್ಕ’ ಪುಸ್ತಕದಲ್ಲಿ ಮಲಬಾರ್ ಪೈಡ್ ಹಾರ್ನ್‌ ಬಿಲ್ ಮತ್ತು ಕಾಮನ್ ಗ್ರೇ ಹಾರ್ನ್ ಬಿಲ್ ಎಂಬ ಎರಡು ಪ್ರಭೇದಗಳ ಗುಣ ಲಕ್ಷಣಗಳ ಬಗ್ಗೆ ವಿವರಿಸಿದ್ದಾರೆ.

ಈ ಹಕ್ಕಿಗಳಿಗೆ ಆಕರ್ಷಕವಾದ ಉದ್ದನೆಯ ಅವುಗಳ ದೇಹಕ್ಕೆ ಹೋಲಿಸಿದರೆ ದೊಡ್ಡದೆನ್ನಬಹುದಾದ ದೊಡ್ಡ ಕೊಕ್ಕಿದೆ. ಅದರ ಬಣ್ಣ ಹಳದಿ. ನನಗೊಬ್ಬ ಗೆಳೆಯನಿದ್ದಾನೆ. ಅವನ ನೆನಪಾಗುವಾಗ ಈ ಹಳದಿ ಶರ್ಟಿನಲ್ಲಿಯೇ ನನ್ನ ಮನಃಪಟಲದ ಮುಂದೆ ಪ್ರತ್ಯಕ್ಷನಾಗುತ್ತಾನೆ. ಆದರೆ ಇವನು ಪ್ರೀತಿಯನ್ನು ಪೊರೆಯುವ ಆ ಗಂಡು ಹಕ್ಕಿಯಲ್ಲ!

ಈ ಹಕ್ಕಿಯ ಮೇಲಿನ ಕುತೂಹಲ, ಪ್ರೀತಿಗೆ ಮತ್ತೊಂದು ಕಥೆ ಸೇರಿಕೊಂಡದ್ದು ತ್ರಿಪುರಾದಲ್ಲಿ.

ಸಪ್ತಸೋದರಿಯರೆಂದು ಕರೆಯುವ ಈಶಾನ್ಯದ ಏಳು ರಾಜ್ಯಗಳಲ್ಲಿ ತ್ರಿಪುರಾವೂ ಒಂದು. ಭೌಗೋಳಿಕವಾಗಿ ನಮ್ಮ ರಾಜ್ಯದ ಒಂದು ದೊಡ್ಡ ಜಿಲ್ಲೆಯಷ್ಟಿರುವ ಈ ಪುಟ್ಟ ರಾಜ್ಯ ಸಮೃದ್ಧವಾದ ಜಾನಪದ ಸಂಪತ್ತನ್ನು ಹೊಂದಿವೆ. ಅಲ್ಲಿ ನನಗೆ ಸಿಕ್ಕಿದ ಕಥೆ ಹೀಗಿತ್ತು.

ಅದು ಗಂಡ, ಹೆಂಡತಿ ಮತ್ತು ಪುಟ್ಟ ಮಗುವಿನ ಒಂದು ಚಿಕ್ಕ ಸಂಸಾರ. ಮನೆಯಲ್ಲಿ ಬಡತನವಿತ್ತು. ಗಂಡ ಕುಡುಕ. ಆದರೆ ಅವನಿಗೆ ಕೊಳಲಿನ ಮೇಲೆ ವಿಪರೀತ ಮೋಹ. ಮೈಮರೆತು ಕೊಳಲು ನುಡಿಸುತ್ತಿದ್ದ. ಒಂದು ದಿನ ಹೆಂಡತಿ ಮನೆಗೆಲಸ ಮುಗಿಸಿ, ಮಗುವನ್ನು ನೋಡಿಕೋ ಎಂದು ಗಂಡನ ಸುಪರ್ದಿಕೊಪ್ಪಿಸಿ ಕೂಲಿ ಕೆಲಸಕ್ಕೆ ಹೊರಟು ಹೋಗುತ್ತಾಳೆ.

ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಮಗು ಕಾಣಿಸದೆ ಮಗು ಎಲ್ಲಿ ಎಂದು ಗಂಡನ ಜೊತೆ ಕೇಳುತ್ತಾಳೆ. ಕೊಳಲು ನುಡಿಸುವುದರಲ್ಲಿ ಮೈಮರೆತಿದ್ದ ಗಂಡ ತನಗೆ ಗೊತ್ತಿಲ್ಲವೆಂದು ಹೇಳುತ್ತಾನೆ. ಮಗುವನ್ನು ಹುಡುಕುತ್ತಾ ಬಂದ ಹೆಂಡತಿ ಕಾಡಿನೊಳಗೆ ಕಾಡುಪ್ರಾಣಿಯ ದಾಳಿಗೆ ಸಿಕ್ಕಿ ಸತ್ತು ಬಿದ್ದಿರುವ ಮಗುವನ್ನು ಕಾಣುತ್ತಾಳೆ. ಆಕೆ ಆಗ ಕಡು ಸಂತಾಪದಿಂದ ಗಂಡನಿಗೆ ಪಕ್ಷಿಯಾಗಿ ಹುಟ್ಟುವಂತೆ ಶಾಪಕೊಡುತ್ತಾಳೆ. ಮಾತ್ರವಲ್ಲ ನಿನ್ನನ್ನು ಮೋಹಪರವಶವನ್ನಾಗಿ ಮಾಡಿದ ಆ ಕೊಳಲಿನಂಥ ಕೊಕ್ಕು ನಿನಗಿರಲಿ. ಹಾಗೂ ಮುಂದಿನ ಜನ್ಮದಲ್ಲಿ ನಾನು ಹೊರಗೆಲ್ಲೂ ಹೋಗದೆ ಸಂತಾನವನ್ನು ರಕ್ಷಿಸುತ್ತೇನೆ. ನೀನು ದುಡಿದು ತಂದು ತನ್ನನ್ನು ಸಾಕಬೇಕೆನ್ನುತ್ತಾಳೆ.

ಎಲ್ಲಿಂದೆಲ್ಲಿಗೆಯ ಬೆಸುಗೆ!

ನಿರ್ಜೀವವಾದ ಕೊಳಲೊಂದು ತನ್ನ ದಿವ್ಯ ನಾದದಿಂದ ಲೌಕಿಕವನ್ನು ಅಲೌಕಿಕದೊಡನೆ ಬೆಸೆಯುತ್ತದೆ.

ಬಲವಾದ ಕೊಕ್ಕೊಂದು ಸಂಸಾರವನ್ನು ಲೌಕಿಕದೊಡನೆ ಬಂಧಿಸುತ್ತದೆ.

ನಾನು ಕೊಳಲಾಗಲೇ? ಕೊಕ್ಕಗಾಲೇ?

———-

usha2ಉಷಾ ಕಟ್ಟೆಮನೆ, ಪತ್ರಕರ್ತೆಯಾಗಿ, ಅದಕ್ಕೂ ಮೊದಲು ಕನ್ನಡ ಉಪನ್ಯಾಸಕಿಯಾಗಿ ಕೆಲಸ ಮಾಡಿದವರು. ದೃಶ್ಯ ಮಾಧ್ಯಮಕ್ಕಾಗಿಯೂ ಕೆಲಸ ಮಾಡಿದ ಅನುಭವ. ಆದರೆ ಅವರು ಪರಿಚಿತರಾಗಿರುವುದು ತಮ್ಮ ವಿಶಿಷ್ಟ ಸಂವೇದನೆಯ ಬರವಣಿಗೆಯಿಂದಾಗಿ. ಕೆಲ ವರ್ಷಗಳಿಂದ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ದೇಶ ಸುತ್ತುವುದೆಂದರೆ ಇವರಿಗೆ ಅತ್ಯಂತ ಇಷ್ಟ.

Share

One Comment For "ಕೊಳಲೊಂದು ಕೊಕ್ಕಾಗಿ…
ಉಷಾ ಕಟ್ಟೆಮನೆ ಕಾಲಂ
"

  1. ವಿಮಲಾ ನಾವಡ
    15th August 2016

    ನನ್ನ ದೂ ಅದೇ ತೊಳಲಾಟ,ಕೊಳಲಾಗಲೇ,ಕೊಕಾಗಲೇ ಎಂದು.ಉಷಾ ಅವರಿಗೆ ನಮಸ್ಕಾರ.

    Reply

Leave a comment

Your email address will not be published. Required fields are marked *

Recent Posts More

  • 1 week ago No comment

    ಕವಿಸಾಲು | ಇಂಡೋನೇಶಿಯಾ

        ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ಜಲ, ಉಸಿರ ಗಾಳಿ ಹುಚ್ಚೆದ್ದು ಕುಣಿದು ಅಪ್ಪಳಿಸಿದ ಆಘಾತಕ್ಕೆ ಕಂಗೆಟ್ಟು ತತ್ತರಿಸಿವೆ ಪ್ರಾಣಿ, ಮನುಜ ಕುಲ ಮಾಡು ಹಾರಿ, ಕಂಬಗಳು ಕುಸಿದು ನೆಲಕಚ್ಚಿವೆ ಮಾನವನ ಬೀಡು ಕತ್ತರಿಸಿ ...

  • 1 week ago No comment

    ಕವಿಸಾಲು | ತಡವಿಲ್ಲದಿರಲಿ ಇನ್ನು…

        ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ತಡೆಯ ದಾಟಿ ತಲುಪಬೇಕಿದೆಯಷ್ಟೆ ಬಯಕೆ ಗುರಿಯನ್ನು ದಟ್ಟ ಹಸಿರಿನ ಕಾಡು, ಆಗಸದ ನೀಲಿ ಬಿಳಿಯ ಮೋಡಗಳ, ಬಿಸಿಲ ಬೆಳಕಿನ ನಡುವೆ ಬಯಲ ಸ್ವೇಚ್ಛೆಯ, ತಿಳಿಗಾಳಿ ತವಕದಲಿ ಬಂಧನಗಳ ...

  • 3 weeks ago No comment

    ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

        ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

  • 1 month ago No comment

    ಕವಿಸಾಲು | ಒಲವಿನಾಟ

        ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

  • 1 month ago No comment

    ಕವಿಸಾಲು | ನಕ್ಷತ್ರ ನಾವೆ

      ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...


Editor's Wall

  • 31 August 2018
    2 months ago No comment

    ಪ್ರಸಾದ್ ಪಟ್ಟಾಂಗ | ಓದು ಮಗು ಓದು…

        “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

  • 30 August 2018
    2 months ago No comment

    ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                        ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

  • 26 August 2018
    2 months ago No comment

    ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

        ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

  • 26 August 2018
    2 months ago No comment

    ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

      ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

  • 23 August 2018
    2 months ago No comment

    ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                        ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...