Share

ಮೊದಲ ಪುಸ್ತಕದ ತೊಳಲಾಟ
ಈಶ್ವರ ದೈತೋಟ ಕಾಲಂ

 • Page Views 1257
 • IMG-20160412-WA0006

  ಹೋದ ಶತಮಾನದ 70ರ ದಶಕದ ನಡುವಿನ ಕಾಲವದು. ಮೈಸೂರಿನಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಮಾಡುತ್ತಿದ್ದ ದಿನಗಳು. ಒಂದು ದಿನ ಪ್ರೊ. ಖಾದ್ರಿಯವರಿಂದ ಪ್ರೊ. ನಾಡಿಗರು ಅಕಾಡೆಮಿಕ್ ಪ್ರೊಫೆಶನಲ್ ಸಿಲ್ವರ್ ಜುಬಿಲಿಯಲ್ಲಿದ್ದಾರೆಂದು ಅರಿಯಿತು. ವೈ ನಾಟ್ ಎ ಫಂಕ್ಷನ್ ಟು ಆನರ್ ಹಿಮ್ ಎಂದು ನಾವು ಯೋಚಿಸಿ, ಅನುಮತಿ ಪಡೆದೆವು.

  ಸನ್ಮಾನ ಸಂಚಿಕೆಗೆ ಸೀನಿಯರ್ ಮಿತ್ರ ಬಿ.ಎ. ಶ್ರೀಧರ್ -ನಾನು ಸಂಪಾದಕತ್ವ ಹೊತ್ತು, ಜಾಹೀರಾತು ಮತ್ತು ಲೇಖನ ಸಂಗ್ರಹಕ್ಕಿಳಿದೆವು. ದೇಶದ ಘಟಾನುಘಟಿಗಳಿಂದೆಲ್ಲ ಲೇಖನಗಳನ್ನು ಆಹ್ವಾನಿಸಿ ಪ್ರಕಟಿಸಲೇ ಬೇಕೆಂಬ ಉಮೇದು ನಮಗಿತ್ತು. ಇಂಟರ್‍ನ್ಯಾಶನಲ್ ಜರ್ನಲಿಸ್ಟ್ ಖುಶವಂತ್ ಸಿಂಗ್‍ರನ್ನು ಕೂಡಾ, ನಾವು ಪ್ರೊಫೆಶನಲ್ ಟೂರ್‍ನಲ್ಲಿ ಮುಂಬಯಿನ ಅವರ ಕಛೇರಿಯಲ್ಲಿ ಭೇಟಿ-ಸಂದರ್ಶನ ಮಾಡಿದ ವಿಚಾರ ನೆನಪಿಸಿಕೊಂಡು, ಲೇಖನ ಯಾಚಿಸಿ ಪತ್ರ ಬರೆದೆವು. 15 ದಿನಗಳಲ್ಲೇ ಇಂಡಿಯನ್ ಜರ್ನಲಿಸಂಗೆ ಸಂಬಂಧಿಸಿದಂತೆ ಅವರ ಲೇಖನ ಬಂದಿತ್ತು.

  ಉತ್ಸಾಹಿತರಾಗಿ ಆಗಿನ ಪ್ರೆಸ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಅಧ್ಯಕ್ಷ ಚಂಚಲ್ ಸರ್ಕಾರ್, ಮದ್ರಾಸ್ ಮೈಲ್ ಸಂಪಾದಕ ವಿ.ಪಿ.ವಿ. ರಾಜನ್ ಮುಂತಾದ ಘಟಾನುಘಟಿಗಳು, ಪ್ರೊಫೆಸರ್ ನಿಕಟವರ್ತಿಗಳು, ಹಳೆಯ ಪತ್ರಿಕೋದ್ಯಮ ಶಿಕ್ಷಣಾರ್ಥಿಗಳೆಂದು ಹೆಸರು-ವಿಳಾಸ ಹುಡುಕಿ ಲೇಖನ ಕೇಳಿದೆವು. 15 ರಷ್ಟು ಉತ್ತಮ ಲೇಖನಗಳು ಬಂದೇ ಬಿಟ್ಟವು.

  b2ನಾಡಿಗರ ಮನೆಗೂ ಗುಟ್ಟಾಗಿ ಹೋಗಿ ಅವರ ಶ್ರೀಮತಿಯವರನ್ನು ಭೇಟಿಯಾಗಿ ಪ್ರೊಫೆಸರ್ ಬಗ್ಗೊಂದು ಲೇಖನ ಬರೆದುಕೊಡಬೇಕೆಂದೂ ಮನವಿ ಮಾಡಿದೆವು. ಹೆಚ್ಚು ಮಾತಿಲ್ಲದ, ಗಂಭೀರ ಮುಖ, ಸ್ವಭಾವಗಳ ಅವರು ಖುಶಿಪಟ್ಟು ಮೂರೇ ದಿನಗಳಲ್ಲಿ “ನನ್ನ ನೆಚ್ಚಿನ ನಾಡಿಗರು” ಎಂಬ ಹಿತವಾದ ಲೇಖನವನ್ನು ಬರೆದು ಕೊಟ್ಟಾಗ ನಮಗೆ ಒಂದು ಹ್ಯೂಮನ್ ಇಂಟ್ರೆಸ್ಟ್ ಆರ್ಟಿಕಲ್ ಸಿಕ್ಕಿದಂತಹ ಖುಶಿ. ಎಲ್ಲವನ್ನು ಟೈಪ್ ಮಾಡಿಸಿ, ಕರಡು ತಿದ್ದಿ ಸಿದ್ಧಪಡಿಸಿಟ್ಟೆವು.

  ಶ್ರೀಧರ್ ಅದಾಗಲೇ ಪ್ರಜಾವಾಣಿಗೆ ಪತ್ರ- ಲೇಖನಗಳನ್ನು ಬರೆಯತೊಡಗಿದ್ದರು. ತಾನು ಎಚ್ಚೆಸ್ಕೆ (ಸುಧಾದಲ್ಲಿ ಪ್ರಕಟವಾಗುತ್ತಿದ್ದ ವಾರದ ವ್ಯಕ್ತಿ ಅಂಕಣ ಬಹಳ ಜನಪ್ರಿಯ) ಶೈಲಿಯಲ್ಲಿ ಪ್ರೊಫೆಸರ್ ವ್ಯಕ್ತಿಚಿತ್ರ ಬಿಡಿಸುತ್ತೇನೆಂದವನೇ, “ನೀನ್ಯಾಕೋ ಆರ್‍ಕೆ ಲಕ್ಷ್ಮಣ್ ಹಾಗೆ ಅವರ ಕ್ಯಾರಿಕೇಚರ್ ಬಿಡಿಸಬಾರದು” ಎಂದು ನನಗೆ ಗಾಳಿ ಹಾಕಿದ. ಪ್ರಾಕ್ಟೀಸ್ ಜರ್ನಲಿಗೆ ಒಮ್ಮೊಮ್ಮೆ ವ್ಯಂಗ್ಯಚಿತ್ರ ಬರೆಯುತ್ತಲಿದ್ದೇನೆಂಬ ಹುಸಿ ಧೈರ್ಯದಿಂದ ನಾನು ಯೋಚಿಸದೆ ಒಪ್ಪಿಕೊಂಡೇ ಬಿಟ್ಟೆ.

  ಪೆನ್ನಿಗೆ ಇಂಡಿಯನ್ ಇಂಕ್ ತುಂಬಿಕೊಂಡು ನಾಡಿಗರ ಕೆಲವಾರು ಫೋಟೋಗಳನ್ನು ಎದುರಿಟ್ಟುಕೊಂಡು ಗೆರೆ ಎಳೆಯಲು ಹೋದರೆ ಕಷ್ಟ ಗೊತ್ತಾಯಿತು. ವ್ಯಂಗ್ಯಚಿತ್ರವೆಂದು ಎದುರುಬದುರು ನಿಂತ ಎರಡು ಕಾರೆಕ್ಟರ್‌ಗಳನ್ನು ಗೀಚಿ, ಕೆಳಗೆರಡು ಸಾಲು ತಮಾಶೆ ಮಾತುಗಳನ್ನು ಬರೆದಂತಲ್ಲ ಈ ಕೆಲಸವೆಂದು ಅರಿವಾಗಿ ತಲೆಚಚ್ಚಿಕೊಂಡೆ.

  ಶ್ರೀಧರ್ ಲೇಖನ ಸುಂದರವಾಗಿ ಮೂಡಿ ಬಂದಿದ್ದರಿಂದ, ನನಗೂ ಹಠ ಮೂಡಿತು. ಬೆಳಗಿನಿಂದ ರಾತ್ರೆವರೆಗೂ ಗೀಚಿದ್ದೇ ಬಂತು. ಸುಸ್ತಾಗಿ ಕೈಚೆಲ್ಲಿ ನಾನು ರಾತ್ರೆ ಮಲಗಿ ಬೆಳಿಗ್ಗೆದ್ದವನೇ ಮುಖವನ್ನೂ ತೊಳೆಯದೆ ಒಂದು ಟ್ರೈ ಮಾಡೋಣವೆಂದು ನಾಡಿಗರ ಸೈಡ್ ಪೋಸ್ ಬರೆದು ನೋಡಿದಾಗ ಅವರಂತೆಯೇ ಕಾಣಿಸಿತು. ಕ್ಯಾಂಪಸ್‍ಗೆ ಹೋದವನು ಶ್ರೀಧರ್‍ಗೆ, ಖಾದ್ರಿಯವರಿಗೆ ತೋರಿಸಿದೆ. ಚೆನ್ನಾಗಿದೆಯಪ್ಪಾ, ನೀನೇ ಬರ್ದಿದ್ದಾ ಎಂದು, ಇಬ್ಬರೂ ನನ್ನನ್ನು ರೇಗಿಸಿ ಕಾಫಿಗೆ ಕರೆದೊಯ್ದರು.

  ಸುಮಾರು 2000 ರೂ. ಮೌಲ್ಯದ ಜಾಹೀರಾತು ಸಂಗ್ರಹವಾದವು. ಕಾಸು ಮಾತ್ರ ವೋಚರ್ ಕಾಪಿಯೊಂದಿಗೆ ಬಿಲ್ ಕಳಿಸಿದ ಮೇಲೆ ಸಿಗುವ ಕಂಡೀಶನ್. ನಾವಿಬ್ಬರೂ ಮೈಸೂರು ಅರಮನೆ ಎದುರಿನ ರಸ್ತೆ ಬದಿಯಲ್ಲಿದ್ದ ಬೆಂಗಳೂರು ಪ್ರೆಸ್ಸಿಗೆ ತೆರಳಿ ಮ್ಯಾನೇಜರ್ ನಾರಾಯಣಸ್ವಾಮಿಯೊಂದಿಗೆ ಚೌಕಾಶಿ ಮಾಡಿ ಅದುವೇ ಅಂದಾಜಿನ ಮೊತ್ತಕ್ಕೆ ಮುದ್ರಣ ಕಾರ್ಯ ನಿಗದಿ ಪಡಿಸಿಕೊಂಡೆವು. ವರ್ಣ ಮುಖಪುಟದ ಏ- 4 ಗಾತ್ರದ ನೂರು ಪುಟಗಳ ಪುಸ್ತಕ ಸಿದ್ಧಗೊಂಡಿತು. ಹೆಸರು ಅಭಿನಂದಿನಿ.

  b3ಆದರೆ, ನಮ್ಮ ಗ್ರಹಗತಿ ಚೆನ್ನಾಗಿರಲಿಲ್ಲವೇನೋ. ಪ್ರೊಫೆಸರ್ ಸಾಹೇಬರು ಅದೇಕೋ ಅಭಿನಂದನಾ ಕಾರ್ಯಕ್ರಮಕ್ಕೆ ಹಾಗೂ ಪುಸ್ತಕ ಬಿಡುಗಡೆಗೆ ದಿನಾಂಕ ಮುಂದೂಡುತ್ತಾ ಹೋದರು. ನಮಗೆ ಪ್ರೆಸ್ ಬಿಲ್ಲು ಕಟ್ಟ ಬೇಕಿತ್ತು. ಸಂಚಿಕೆ ಬಿಡುಗಡೆ ಆಗದೆ ಜಾಹೀರಾತುದಾರರಿಗೆ ಬಿಲ್ಲು ಕಳಿಸಿ, ಮೊತ್ತ ಕೇಳುವಂತಿರಲಿಲ್ಲ. ಪ್ರೆಸ್ ಕಡೆ ಕಾಲಿಡುವುದನ್ನು ಬಿಟ್ಟೆವು. ಕೊನೆಗೊಮ್ಮೆ ಡಿಪಾರ್ಟ್‍ಮಂಟಿಗೇ ಫೋನ್ ಮಾಡಿದ ಮೇನೇಜರ್ ಬಿಲ್ಲು ಚುಕ್ತಾ ಮಾಡಲು ಒತ್ತಾಯಿಸಿದರು.

  ಬೇರೆ ದಾರಿ ಕಾಣದೆ ಕೆಲವು ಮುಖ್ಯ ಜಾಹೀರಾತುದಾರರಿಗೆ ಅಭಿನಂದಿನಿ ಪ್ರತಿ-ಬಿಲ್ಲು ಕಳಿಸಿಕೊಟ್ಟಾಗ ಏಳೆಂಟು ನೂರು ರೂ. ಕೈಗೆ ಬಂತು. ಅಷ್ಟನ್ನೂ ಪ್ರೆಸ್‍ಗೆ ಸಲ್ಲಿಸಿ ಬಾಕಿಯನ್ನು ಹೇಗೋ ಚುಕ್ತಾ ಮಾಡುತ್ತೇವೆಂದು ಭರವಸೆ ಕೊಟ್ಟು ಪಾರಾದೆವು. (ಬಾಕಿಯನ್ನು ವೃತ್ತಿಗೆ ಸೇರಿದ ಬಳಿಕ ಸಂಬಳದಲ್ಲಿ ಕಂತುಕಂತು ಕಟ್ಟಿ ಮುಖ ಉಳಿಸಿಕೊಂಡೆವು.)

  ಒಂದೇ ವಾರದಲ್ಲಿ, ಅವರ ಮನೆಗೆ ತೆರಳಿ ನಾಡಿಗರನ್ನು ಕಾಣಬೇಕೆಂದು ನನಗೆ ಆದೇಶ ಬಂತು. ಚಕಿತನಾದೆ. ಭಯವೂ ಆಯಿತು. ಅವಸರದಿಂದ ಅಲ್ಲಿ ತಲುಪಿದಾಕ್ಷಣ ಫಯರಿಂಗ್ ಶುರುವಾಯಿತು. ಏನಯ್ಯಾ ಸಂಚಿಕೆಯನ್ನು ಕಾರ್ಯಕ್ರಮಕ್ಕೆ ಮುನ್ನವೇ ರಿಲೀಸ್ ಮಾಡಿ ಬಿಟ್ಟಿದ್ದೀರಿ ಎಂದು ಕೂರಂಬು ಎರಗಿತು. ರಿಲೀಸ್ ಮಾಡಿಲ್ಲಾ ಸ್ಸಾರ್ ಎಂದು ಹಲ್ಲುಗಿಂಜಿದೆ. ಮತ್ತೆ, ಬೆಂಗ್ಲೂರಿಗೆ ಕಳ್ಸಿದೀರಿ ಅಂದ್ರು. ಪ್ರಿಂಟಿಂಗ್ ಬಿಲ್ ಕಟ್ಟೋಕೆ ದುಡ್ಡಿರ್ಲಿಲ್ಲಾ ಸಾರ್, ಅದ್ಕೇ ನಾಲ್ಕೈದು ಓಚರ್ ಕಾಪಿ ಕಳಿಸಿಕೊಡದೆ ನಿರ್ವಾಹ ಇರಲಿಲ್ಲಾ ಸಾರ್ ಎಂದು ಗೋಗೆರೆದೆ. ಪ್ರೊಫೆಸರ್ ಕೋಪ ಇಳಿಯಲಿಲ್ಲ. ನಾನಂತೂ ಬೇರೆ ದಾರಿ ತೋಚದೆ ಮತ್ತೊಮ್ಮೆ ಸಾರಿ ಹೇಳಿ ಅಲ್ಲಿಂದ ಕಾಲುಕಿತ್ತೆ.

  ಮತ್ತೆ ಗೊತ್ತಾಯಿತು. ನಮ್ಮ ಬ್ಯಾಕ್ ಕವರ್ ಪೇಜ್ ಜಾಹೀರಾತುದಾರರು ಪ್ರೊಫೆಸರ್ ಅವರ ಮಾವನ ಕಂಪೆನಿಯೆಂದು. ನನ್ನನ್ನು ಇವತ್ತೂ ಕಾಡುವ ಸಂಕಟವೆಂದರೆ ನಾವು ಸ್ವತಂತ್ರವಾಗಿ ಸಂಪಾದಿಸಿದ ಮೊದಲ ಪುಸ್ತಕ ಅಭಿನಂದಿನಿಗೆ ಕೊನೆಗೂ ಬಿಡುಗಡೆ ಯೋಗವೇ ಬರಲಿಲ್ಲ.

  ಮೊದಲ ಪುಸ್ತಕವಾಗಿ ಪ್ರಕಟಗೊಂಡದ್ದು ಒಂದು ಇಂಗ್ಲೀಷ್ ಪುಸ್ತಕ. ಅದೂ, ನಾನು ವೃತ್ತಿನಿರತನಾಗಿ ಬೆಂಗಳೂರಿಗೆ ಬಂದ ಹಲವು ವರ್ಷಗಳಾದ ಮೇಲೆ. ಎಂಎ ನಲ್ಲಿದ್ದಾಗ ಡೆವಲಪ್‍ಮೆಂಟ್ ಆಫ್ ಜರ್ನಲಿಸಂ ಇನ್ ಸೌತ್ ಕೆನರಾ ಎಂಬ ಡಿಸರ್ಟೇಶನ್ ಕಷ್ಟ ಪಟ್ಟು ಮಾಡಿದ್ದೆನು. ಕರಾವಳಿ ಜಿಲ್ಲೆಯಿಡೀ ಮೋಟಾರ್‍ಬೈಕಿನಲ್ಲಿ ಸುತ್ತಾಡಿ ಅನೇಕ ಹಿರಿಯ ಪತ್ರಕರ್ತರನ್ನು ಸಂದರ್ಶನ ಮಾಡಿ, ಪರದಾಡಿಕೊಂಡು ಮಾಹಿತಿ ಸಂಗ್ರಹಿಸಿ ಸಿದ್ಧಪಡಿಸಿದ್ದೆ. ಪರೀಕ್ಷೆಗೆ ಸಲ್ಲಿಕೆಯಾಗಿತ್ತು.

  ಪ್ರೊ ಖಾದ್ರಿಯವರಿಂದ ಸುದ್ದಿ ಸಂದೇಶ ಬಂತು. “ನಿನ್ನ ಡಿಸರ್ಟೇಶನ್ ಮೈಸೂರು ವಿವಿ ನೆರವಿನಿಂದ ನಮ್ಮ ವಿಭಾಗದ ಮೊದಲ ಪ್ರಕಟಣೆಯಾಗಿ ಹೊರಬಂದಿದೆ. ಮಾನಸಗಂಗೋತ್ರಿಗೆ ಬಂದು ಒಂದಷ್ಟು ಉಚಿತ ಪ್ರತಿಗಳನ್ನು ಪಡೆದುಕೋ” ಎಂದು-ನಾನು ಕುಣಿದಾಡಿ ಬಿಟ್ಟೆ. ಕಾಸು ಖರ್ಚಿಲ್ಲದೆ ನನ್ನ ಫಸ್ಟ್ ಬುಕ್ ನಾನು ಕನಸು, ಮನಸಿನಲ್ಲಿಯೂ ಊಹಿಸದೆ ಪ್ರಕಟವಾಗಿತ್ತು.

  ಅದಾದ ಕೆಲ ಸಮಯದಲ್ಲೇ, ನಾನು ಬೆಂಗಳೂರಿನ ಐ.ಬಿ.ಎಚ್ ಪ್ರಕಾಶನಕ್ಕೆ ಬರೆದುಕೊಟ್ಟಿದ್ದ ದಿವಾನ್ ನ್ಯಾಪತಿ ಮಾಧವರಾವ್ (ಅವರ ಪುತ್ರರು ಎನ್. ಲಕ್ಷ್ಮಣರಾವ್ ಹಾಗು ನರಸಿಂಹರಾವ್ ಕರ್ನಾಟಕ ಸರಕಾರದಲ್ಲಿ ಹಿರಿಯ ಅಧಿಕಾರಿಗಳಾಗಿ ಮಿಂಚಿದವರು. ಅವರಿಬ್ಬರೂ ಈ ಪುಸ್ತಕಕ್ಕೆ ನನಗೆ ಪ್ರೀತಿಯಿಂದ ಮಾಹಿತಿ, ಚಿತ್ರಗಳನ್ನು ಒದಗಿಸಿಕೊಟ್ಟಿದ್ದರು) ಎಂಬ ಕಿರುಪುಸ್ತಕವೂ ಪ್ರಕಾಶನ ಕಂಡಿತು. ಮೊದಲ ಪ್ರಯತ್ನ ಬೆಳಕಿಗೆ ಬರಲಿಲ್ಲವೆಂಬ ನೋವು ಮರೆಯಾಯಿತು. ನೆನಪೂ ಇನ್ನೂ ಕಾಡುತ್ತಿದೆ.

  ———————-

  ಈಶ್ವರ ದೈತೋಟ

  IMG-20160410-WA0002ಕರ್ನಾಟಕದ ಅತಿಹೆಚ್ಚು ದಿನಪತ್ರಿಕೆಗಳನ್ನು ಮುನ್ನಡೆಸಿದ ಹಿರಿಮೆ. 1991ರಿಂದ 2011ರವರೆಗಿನ ಎರಡು ದಶಕಗಳಲ್ಲಿ ಅತ್ಯಂತ ಹೆಚ್ಚು ಆವೃತ್ತಿಗಳು ಮತ್ತು ಪ್ರಸಾರದ ವಿಜಯ ಕರ್ನಾಟಕದ ಫೌಂಡರ್ ಚೀಫ್ ಎಡಿಟರ್. ಮಣಿಪಾಲದ ಉದಯವಾಣಿ ರೆಸಿಡೆಂಟ್ ಎಡಿಟರ್, ಟೈಮ್ಸ್ ಆಫ್ ಇಂಡಿಯಾ (ಕ) ಎಡಿಟರ್, ಕನ್ನಡದ ಸೀನಿಯರ್ ಮೋಸ್ಟ್ ದೈನಿಕ ಸಂಯುಕ್ತ ಕರ್ನಾಟಕದ ಚೀಫ್ ಎಡಿಟರ್ ಹಾಗೂ ನೂತನ ವಾರಪತ್ರಿಕೆ ಚೀಫ್ ಎಡಿಟರ್ ಆಗಿ ಹೊಣೆಹೊತ್ತವರು.

  ಮುದ್ರಣ ಮಾಧ್ಯಮ, ರೇಡಿಯೋ, ಟೆಲಿವಿಷನ್ನಿನಲ್ಲಿ ಮೂರೂವರೆ ದಶಕಗಳಿಗೂ ಹೆಚ್ಚು ಅನುಭವ. ಪತ್ರಿಕೋದ್ಯಮ ಶಿಕ್ಷಣ, ಅಭ್ಯುದಯ ಪತ್ರಿಕೋದ್ಯಮ ಮತ್ತು ಮೀಡಿಯಾ ಮ್ಯಾನೇಜ್‌ಮೆಂಟ್‌ನಲ್ಲಿಯೂ ಅಪಾರ ಸಾಧನೆ. ಯುಜಿಸಿ ಮತ್ತು ಯೂನಿಸೆಫ್ ತರಬೇತಿ ಯೋಜನೆಗೆ ಡೆವಲಪ್‌ಮೆಂಟ್‌ ಕನ್ಸಲ್ಟೆಂಟ್ ಎಂದು ಮನ್ನಣೆ.

  2015ರಲ್ಲಿ ಪ್ರತಿಷ್ಠಿತ ಟಿಎಸ್ಆರ್ ಪತ್ರಿಕೋದ್ಯಮ ಪ್ರಶಸ್ತಿ, ಮೂಡಬಿದ್ರೆಯ ನುಡಿಸಿರಿ ಪ್ರಶಸ್ತಿ, 2008ರಲ್ಲಿ ಅಭ್ಯುದಯ ಪತ್ರಿಕೋದ್ಯಮ ರಾಜ್ಯ ಪ್ರಶಸ್ತಿ, ಮೈಸೂರಿನ ಕುವೆಂಪು ಶಿಕ್ಷಣ ಸಂಸ್ಥೆಯಿಂದ ರಾಜ್ಯದ ಅತ್ಯುತ್ತಮ ಸಂಪಾದಕ ಪ್ರಶಸ್ತಿ (2006). 2008ರಲ್ಲಿ ರಾಷ್ಟ್ರೀಯ ಝಿ ಟಿವಿ ಚಾನೆಲ್‌ನಿಂದ ಕರ್ನಾಟಕದಲ್ಲಿ ಇಲೆಕ್ಟ್ರಾನಿಕ್ ಮೀಡಿಯಂ ಮತ್ತು ಪತ್ರಿಕೋದ್ಯಮಕ್ಕೆ ಅತಿ ದೊಡ್ಡ ಸೇವೆ ಸಲ್ಲಿಸಿದ ಸಂಪಾದಕ ಮತ್ತು ಅತ್ಯಂತ ಜನಪ್ರಿಯ ಮೀಡಿಯಾ ಪರ್ಸನ್ (ವೀಕ್ಷಕರ ಆಯ್ಕೆ) ಎಂಬೆರಡು ಪ್ರಶಸ್ತಿಗಳು. ವಾಯ್ಸ್ ಆಫ್ ಅಮೇರಿಕಾ ಮತ್ತು ಕೆನೆಡಿಯನ್ ರೇಡಿಯೋಗಳಲ್ಲಿ ಅವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ಹಲವು ಇಂಟರ್‌ನ್ಯಾಷನಲ್ ಜರ್ನಲ್‌ಗಳಿಗೂ ಲೇಖನ ಬರೆದಿದ್ದಾರೆ.

  ಅಭ್ಯುದಯ ಪತ್ರಿಕೋದ್ಯಮ ಅವರ ನಿತ್ಯ ಜಪ. ಅಭ್ಯುದಯ ಸಂಬಂಧಿತ ಅನೇಕ ಡಾಕ್ಯುಮೆಂಟರಿಗಳನ್ನು, ರೇಡಿಯೋ ರೂಪಕಗಳನ್ನು ತಯಾರಿಸಿರುವ ಅನುಭವ. ಪತ್ರಿಕೋದ್ಯಮ ಮತ್ತಿತರ ವಿಷಯಗಳ ಬಗ್ಗೆ ಅವರು ಬರೆದಿರುವ, ಅನುವಾದಿಸಿರುವ ಪುಸ್ತಕಗಳ ಸಂಖ್ಯೆ 75ಕ್ಕೂ ಹೆಚ್ಚು.

  Share

  Related Post

  Related Blogpost

  2 Comments For "ಮೊದಲ ಪುಸ್ತಕದ ತೊಳಲಾಟ
  ಈಶ್ವರ ದೈತೋಟ ಕಾಲಂ
  "

  1. ವಿಮಲಾ ನಾವಡ
   15th August 2016

   ಚೆನ್ನಾಗಿದೆ

   Reply
  2. Ishwar Daitota
   5th October 2016

   Vandanegalu

   Reply

  Leave a comment

  Your email address will not be published. Required fields are marked *

  Recent Posts More

  • 4 hours ago No comment

   ಕೊಂಕಣಿ ಓದುಗರ ಮುಂದೆ ‘ಮಾಜಾರ್ ಅನಿ ಹೆರ್ ಕಥಾ’

   ಮೆಲ್ವಿನ್, ಪೆರ್ನಾಲ್ ಕಾವ್ಯನಾಮದಿಂದ ಕೊಂಕಣಿ ಸಾರಸ್ವತ ಲೋಕದಲ್ಲಿ ಪರಿಚಿತರಾಗಿರುವ ಪ್ರಾಧ್ಯಾಪಕ ಮೆಲ್ವಿನ್ ರಾಜೇಶ್ ಕ್ಯಾಸ್ಟೇಲಿನೊ ಅವರ ಹತ್ತು ಸಣ್ಣಕತೆಗಳ ಸಂಗ್ರಹ ‘ಮಾಜಾರ್ ಆನಿ ಹೆರ್ ಕಥಾ’ ಬಿಡುಗಡೆಗೊಂಡಿದೆ. ಗುಜರಾತ್, ಗಾಂಧಿಧಾಮ್ ಧರ್ಮಪ್ರಾಂತ್ಯದ ವಂ| ನೆಲ್ಸನ್ ಡಿ’ಸೊಜಾ ಮತ್ತು ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆ ಅಧ್ಯಕ್ಷ ಶ್ರೀ ರೊನಾಲ್ಡ್ ಜೆ. ಸಿಕ್ವೇರಾ ಅವರು 14 ಅಕ್ತೋಬರ್ 2017ರಂದು ಕೃತಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಲೇಖಕ ಮೆಲ್ವಿನ್ ಪೆರ್ನಾಲ್, ಅದ್ದೂರಿ ...

  • 17 hours ago No comment

   ಗೌರಿ ಲಂಕೇಶ್ : ಒಂದು ನಿಷ್ಕಲ್ಮಷ ಕಥನ

   ಗೌರಿ ಲಂಕೇಶ್ ಹತ್ಯೆ ಒಂದೆಡೆ ಎಂಥ ವಿಷಮ ಸ್ಥಿತಿಯಲ್ಲಿ ಈ ಸಮಾಜ ಸಿಲುಕಿದೆ ಎಂಬುದನ್ನು ತೋರಿಸುತ್ತಿದ್ದರೆ, ಇನ್ನೊಂದೆಡೆ ಅವರ ಆದರ್ಶವಾದ ಗೊತ್ತಿದ್ದವರಿಗೆ, ಅವರ ಒಡನಾಡಿಗಳಿಗೆ ಒಂದಿಡೀ ಸಾಂಸ್ಕೃತಿಕ ಕಥಾನಕವೇ ನೆನಪಾಗಿ ಕಾಡುತ್ತಿದೆ. ಲಂಕೇಶ್ ಒಡನಾಡಿಯಾಗಿದ್ದು, ಗೌರಿ ಅವರೊಂದಿಗೂ ಅದೇ ಆಪ್ತತೆ ಹೊಂದಿದ್ದ ಎಂಎಲ್‍ಸಿ ಮೋಹನ್‍ಕುಮಾರ್ ಕೊಂಡಜ್ಜಿ ಅಂಥ ಒಂದು ಸಾಂಸ್ಕೃತಿಕ ಕಥಾನಕವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಬಣ್ಣವಿಲ್ಲದ, ಕಲ್ಮಷವಿಲ್ಲದ ಈ ನೆನಪುಗಳಲ್ಲಿ ಮೂಡಿರುವ ಗೌರಿ ಚಿತ್ರ ವಿಭಿನ್ನವಾಗಿದೆ. ಓದಲೇಬೇಕಾದ ಬರಹ. ...

  • 1 day ago No comment

   ಒಂದು ಗಜಲ್; ಒಂದು ಗೆಜ್ಜೆ

   ಒಂದು ಗಜಲ್ ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ ಮಧುರ ನೆನಪುಗಳೂ ಎದೆ ಕೊರೆದಾವೆಂಬ ಅರಿವಿರಲಿಲ್ಲ ನನಗೆ ಸುಖದ ಗಳಿಗೆಗಳೂ ಕೊರಳೊತ್ತಿ ಸಾಯಿಸುವವೆಂದು ತಿಳಿದಿರಲಿಲ್ಲ ನನಗೆ ಹೊಳೆದಂಡೆಯ ಪಿಸುಮಾತೂ ಲೋಕದ ತುಂಬ ಹಬ್ಬೀತೆಂದು ಅರ್ಥವಾಗಲಿಲ್ಲ ನನಗೆ ಗಾಳಿಯಲಿ ಹೊಯ್ದಾಡುವ ನಂದಾದೀಪವೂ ಜ್ವಾಲೆಯಾಗಿ ಸುಡುವುದು ತಿಳಿದಿರಲಿಲ್ಲ ನನಗೆ ಜೋಡಿ ಮಂಚದ ಮೆತ್ತನೆಯ ಹಾಸಿಗೆಯೂ ಚುಚ್ಚುವುದೆಂದು ಗೊತ್ತಿರಲಿಲ್ಲ ನನಗೆ ಸುಖದ ಉನ್ಮಾದವಷ್ಟೇ ...

  • 1 day ago No comment

   ಬದುಕು ಬರಿ ಗಿಲೀಟು

   (ಗಜಲ್) ದಾರಿ ಹೋದ ಹಾಗೆ ಸಾಗಿ ಬದುಕು ಬರಿ ಗಿಲೀಟು ಹೊತ್ತು ಬಂದತ್ತ ಬಾಗಿ ಬದುಕು ಬರಿ ಗಿಲೀಟು ಹದ್ದುನೆರಳು ನೆನಪು ಕುಕ್ಕೆ ಕಣ್ಣು ಹುಗಿದು ಕೂತು ತನಗೆ ತಾನೆ ಮೋಸವಾಗಿ ಬದುಕು ಬರಿ  ಗಿಲೀಟು ಥಳುಕಿನ ಸಂತೆಗಳಲ್ಲಿ ನಮ್ಮತನವ ಮಾರಿ ಲಾಲಿ ಹುಸಿಗೆ ತಲೆಯ ತೂಗಿ ಬದುಕು ಬರಿ ಗಿಲೀಟು ತುಟಿಸಿಗದ ಕನಸಹಾಡು ಉರಿದು ಉಗಿದು ಬೂದಿ ಮಾಗಿಹಿಮದಿ ಕೆಂಡ ಕರಗಿ ಬದುಕು ಬರಿ ಗಿಲೀಟು ಜೊತೆಜೊತೆಯಲೆ ...

  • 2 days ago One Comment

   ನಾನು ಮತ್ತು ನೀನು

   ಜಾರಿಸಿ,ಚಿಮ್ಮಿಸಿ ಸುರಿಸಿ,ಹನಿಸಿ ಧುಮ್ಮಿಕ್ಕಿ ಬೋರ್ಗರೆದು ಜುಳುಜುಳುನೆ ನಕ್ಕು ನಲಿದ ನಿನ್ನೊಲವಿನ ಮಿಡಿತಕ್ಕೆ ರೂಪು ನಾನು *** ತೇಲಿದ್ದು, ಮುಳುಗಿದ್ದು ಅಲೆಗಳಲ್ಲಿ ಅನುರುಣಿಸಿದ್ದು ಆಳದಲಿ ಮುಳುಗಿ ಮಲಗಿದ್ದು ನಿನ್ನೆಲ್ಲ ಗುಟ್ಟುಗಳ ಗೌಪ್ಯದಿ ಕರಗಿಸಿ, ಅರಗಿಸಿಕೊಂಡು ಶಾಂತದಿ ಹರಿವ ನದಿಯು *** ನಿನ್ನೆ ಜಾರಿದ್ದು, ಇಂದು ಹರಿದದ್ದು, ನಾಳೆ ಧಾವಿಸಿ ಬಿಗಿದಪ್ಪುವುದು ವ್ಯತ್ಯಾಸವಿಲ್ಲದೆ ಕಾಲಗಮ್ಯವ ಕಡೆಗಣಿಸಿದ ಅನವರತ ಕನಸು *** ಆಳ ತಿಳಿಯದ ಅರ್ಥಕ್ಕೆ ಸಿಗದ ನೋಟದ ಅಳತೆಗೆ ದಕ್ಕದ ನಡೆದ ...


  POPULAR IN CONNECTKANNADA

  Type in
  Details available only for Indian languages
  Settings
  Help
  Indian language typing help
  View Detailed Help