Share

ನಿಸರ್ಗದ ಪಿಸುಮಾತು
ಎಂ ಆರ್ ಭಗವತಿ ಕಾಲಂ

ಕಲರವ| kalarava

 

 

 

bhagvati(1)

ಮೊನ್ನೆ ಗೆಳತಿಯೊಂದಿಗೆ ಕೆಮೆರಾ ಹಿಡಿದು ಲಾಲ್ಬಾಗಿನಲ್ಲಿ ಅಡ್ಡಾಡುವಾಗ ಹುಡುಗನೊಬ್ಬ ನಮ್ಮತ್ತ ನೋಡಿ ‘ಅಕ್ಕ’ ಎಂದು ಕರೆದ. ನಾವು ಯಾರನ್ನೋ ಕರೆಯುತ್ತಿದ್ದಾನೆಂದು ಸುಮ್ಮನಾದೆವು. ಅವನು ನಮ್ಮನ್ನೇ ಕರೆದದ್ದು ಎಂದು ಆಮೇಲೆ ತಿಳಿದದ್ದು. ‘ಹಾವು, ಹಾವು’ ನೋಡಿ ಬನ್ನಿ ಎಂದು ಕಿರುಚಿದ. ಅವನು ತೋರಿಸಿದ ಕಡೆ ಹೋಗಿ ಬಗ್ಗಿ ನೋಡಿದರೆ ಲಾಲ್ಬಾಗಿನ ಕೆರೆಯ ಮೂಲೆಯಲ್ಲಿ ತೇಲುವ ಕಸಕಡ್ಡಿ ರಾಶಿಗಳ ನಡುವೆ ನೀರು ಹಾವೊಂದು ಅದರ ಬಾಯಿಗಿಂತಲೂ ದೊಡ್ಡದಾದ ಮೀನೊಂದನ್ನು ಹಿಡಿದಿದೆ. ಅಬ್ಬಾ ಇದರ ದುರಾಸೆಯೇ ಅಂತ ಅಂದುಕೊಂಡೆ. ಆ ಮೀನಿಗಾಗಿ ಮರುಗಿದೆ! ಸುಮಾರು ಹತ್ತು ನಿಮಿಷ ಹಾಗೇ ಹಿಡಿದು ನುಂಗಲು ಹರಸಾಹಸ ಪಡುತ್ತಿತ್ತು. ಹಾಗೇ ಹಿಡಿದ ನಿಶ್ಚಲ ಹೊತ್ತಿನಲ್ಲಿ ಮೀನಿನ ಕತೆ ಮುಗಿಯಿತಲ್ಲಾ ಎಂದು ಕೊಂಡು ನೋಡುತ್ತಾ ನಿಂತೆವು. ಹಿಡಿದ ಮೀನು ಅಲ್ಲಾಡುತ್ತಿಲ್ಲ ಹಾಗೆ ಇದೆ. ಸುಮಾರು ಹೊತ್ತು ಸಾಹಸ ಪಟ್ಟು ಹಿಡಿದ ಮೀನು ಮಿಂಚಿನಂತೆ ನಾಜೂಕಾಗಿ ನೀರಿನಲ್ಲಿ ಮರೆಯಾಯಿತು. ಹಾವು ಬಾಯಿ ಬಿಟ್ಟುಕೊಂಡು ಸುಮಾರು ಹೊತ್ತು ಅಲ್ಲೇ ಕುಳಿತಿತ್ತು. ನೀರು ಹಾವು ವಿಷಕಾರಿಯಲ್ಲ. ಮೀನು ಬದುಕಿತು ಎಂಬ ಸಮಾಧಾನದ ನಗೆ ನಕ್ಕೆವು. ಆದರೆ ಅದು ಹಲ್ಲಿನಲ್ಲಿ ಕಚ್ಚಿ ಹಿಡಿದಿದ್ದರಿಂದ ಮೀನು ಉಳಿಯುವುದೋ ಇಲ್ಲವೋ ಎಂಬ ಜಿಜ್ಞಾಸೆಯಲ್ಲಿ ಮುಳುಗಿದೆವು.

1ಇದೇ ಸಮಯದಲ್ಲಿ ಅಲ್ಲೆ ಸ್ವಲ್ಪ ಅಂತರದಲ್ಲಿ ಮೂರು ನೀರುಕಾಗೆಗಳು ಮೀನಿಗಾಗಿ ಹುಡುಕಾಟ ನಡೆಸಿದ್ದವು. ಅದು ಅವುಗಳ ಮಾಮೂಲಿ ಅಡ್ಡೆ ಅನ್ನಿಸುತ್ತದೆ. ಮುಳುಗಿ ಎದ್ದು ಮೀನಿನ ಬೇಟೆ ಮುಂದುವರಿಸಿದ್ದವು. ಇದರ ಮಧ್ಯೆ ಹುಡುಗನೊಬ್ಬ ಕೊಕ್ಕೆ ಹಾಕಿ ಮೀನೊಂದನ್ನು ಹಿಡಿದು ನಮಗೆ ತೋರಿಸಿದ. ಇವರೆಲ್ಲಾ ಆ ಬಡಪಾಯಿ ಮೀನಿಗಾಗಿ ಹೊಂಚು ಹಾಕುತ್ತಿದ್ದರು!

ಕಳೆದ ಬಾರಿ ಬಂದಾಗ ಇದೇ ಹಾವು ಬೇರೊಂದು ಮೀನನ್ನು ನುಂಗಿ ನೀರು ಕುಡಿದದ್ದು ನೆನಪಿತ್ತು. ಲಾಲ್ಬಾಗಿಗೆ ಮೊದಲ ಬಾರಿ ಕೆಮೆರಾ ಹಿಡಿದು ಬಂದಾಗ ಪ್ರಕೃತಿಯ ವಿಸ್ಮಯವೊಂದನ್ನು ಕಂಡು ದಂಗಾಗಿ ಹೋದೆ. ಹಾವೊಂದು ಕಪ್ಪೆಯನ್ನೋ, ಮೀನನ್ನೋ ಹಿಡಿಯಲು ಹೊಂಚು ಹಾಕಿತು. ಹಾಗೆ ಆಹಾರವನ್ನು ಹಿಡಿದ ಹಾವನ್ನು ಗರುಡವೊಂದು ಬಂದು ಎತ್ತಿಕೊಂಡು ಹೋಯಿತು. ಹಾವು ಆಹಾರಕ್ಕಾಗಿ ಬಾಯಿ ಹಾಕುವುದಕ್ಕೂ, ಗರುಡ ಬಂದು ಹಾವನ್ನು ಹಿಡಿಯುವುದಕ್ಕೂ ಸರಿ ಹೋಯಿತು. ಇವೆಲ್ಲಾ ಕ್ಷಣ ಮಾತ್ರದಲ್ಲಿ ನಡೆಯಿತು. ಪುಸ್ತಕಗಳಲ್ಲಿ ಮಾತ್ರ ಓದುತ್ತಿದ್ದ ದೃಷ್ಟಾಂತವೊಂದು ಕಣ್ಣೆದುರು ನಡೆದಿತ್ತು. ಆ ದೃಶ್ಯ ನನ್ನ ಕೆಮರಾದಲ್ಲಿ ಸೆರೆಯೂ ಆಯಿತೆನ್ನಿ.

ಕಳೆದ ವರ್ಷ ಲಾಲ್ಬಾಗ್ ಪುಷ್ಪ ಪ್ರದರ್ಶನದಲ್ಲಿ ಹೂವುಗಳ ಸೌಂದರ್ಯವನ್ನು ಆಸ್ವಾದಿಸುವಾಗ ದುಂಬಿಯೊಂದು ಬಂದು ಗುಲಾಬಿಯ ಗಿಡದ ಎಲೆಯ ಮೇಲೆ ಕೂತುಕೊಂಡಿತು. ನಾನು ಕುತೂಹಲದಿಂದ ನೋಡುವಾಗ್ಗೆ ಎಲೆಯನ್ನು ಮುಕ್ಕಾಲು ಭಾಗ ಕತ್ತರಿ ಹಾಕಿ, ಎತ್ತಿಕೊಂಡು ಹಾರಿಯೇ ಹೋಯಿತು. ಅವು ಕತ್ತರಿಸಿದ ಎಲೆಗಳಿಂದ ಕೋನಾಕಾರದ ಗೂಡುಗಳನ್ನು ಮಾಡಿ ಅದರಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಇವು ಸಾಮಾನ್ಯವಾಗಿ ಒಣ ಮರ, ಬಂಡೆಗಳಲ್ಲಿ, ಗಿಡಗಳ ಕಾಂಡಗಳನ್ನು ಕೊರೆದು ಗೂಡು ಕಟ್ಟುತ್ತವೆಯಾದರೂ ಇವುಗಳಿಗೆ ಗುಲಾಬಿಯ ಗಿಡಗಳೆಂದರೆ ಬಲು ಇಷ್ಟವಂತೆ. ಅದು ‘ಲೀಫ್ ಕಟರ್ ಬೀ’ ಎಂದು ನಂತರ ನನಗೆ ತಿಳಿಯಿತು. ಅದನ್ನು ನಾನು ಗಮನಿಸಿದ್ದರಿಂದಲೇ ಅದರ ಇರುವಿನ ಬಗ್ಗೆ ನನಗೆ ತಿಳಿಯಿತು. ಇಲ್ಲದಿದ್ದರೆ ಅದು ಕಟ್ಟುವ ಗೂಡು, ಇತ್ಯಾದಿಗಳ ಬಗ್ಗೆ ನನಗೆ ನೋಡುವ, ತಿಳಿಯುವ ಅವಕಾಶ ತಪ್ಪಿ ಹೋಗುತ್ತಿತ್ತು. ಈ ಎಲ್ಲಾ ವಿವರ ತಿಳಿದು ನೀವು ಏನು ಮಾಡಬಹುದು ಅಲ್ಲವೆ? ಪ್ರಕೃತಿ ನಮಗೆ ಹೇಳುವ ಪಾಠ ಯಾವಾಗ, ಯಾವ ರೀತಿಯಲ್ಲಿ ನಮ್ಮ ಸದುಪಯೋಗವಾಗುತ್ತದೆ ಎಂದು ಹೇಳಲು ಬರುವುದಿಲ್ಲ.

ಈ ಸಂದರ್ಭದಲ್ಲಿ ಚಿಂತಕ ಜಿಡ್ಡು ಕೃಷ್ಣಮೂರ್ತಿಯವರ ಮಾತನಿಲ್ಲಿ ನೆನಪಿಸಿಕೊಳ್ಳಬಹುದು. ಅವರು ಹೇಳುವ ಹಾಗೆ ‘ಮರದ ಚಲನೆಯನ್ನು ಗ್ರಹಿಸುವುದು, ಗೋಡೆಯ ಮೇಲೆ ಹರಿಯುವ ನೊಣವನ್ನು ಹಿಡಿದು ನುಂಗುವ ಹಲ್ಲಿಯ ಚಲನವಲನಗಳನ್ನು ಈಗ ಕಣ್ಣಿಟ್ಟು ನಾವು ಈಗ ಕಾಣದಿದ್ದರೆ, ಅದನ್ನು ನಾವು ಮತ್ತೆ ಕಾಣುವುದು ಯಾವಾಗ?’…. ‘ಎಂದಾದರೊಮ್ಮೆ ಬಹಳ ಹಳೆಯದಾದ ಮರದ ಕಾಂಡಕ್ಕೆ ಒರಗಿ ನಿಂತುಕೊಂಡು ನಿಧಾನವಾಗಿ ಚಲಿಸುವ ಗಾಳಿಯೊಂದಿಗೆ ಚಲಿಸುವ ಕೊಂಬೆಗಳ ಚಲನೆಯನ್ನ ಅನುಭವಿಸಿ. ಎಲೆಗಳ ನಡುವಿನ ಜಾಗದ ನಡುವೆ ಇಣುಕುವ ಆಕಾಶದ ನೀಲಿಯನ್ನು ನೋಡಿ’ ಎನ್ನುತ್ತಾರೆ. ಇದೇ ರೀತಿ ರಾತ್ರಿಯ ಹೊತ್ತು ಗೋಡೆಯ ಮೇಲೆ ಬೀಳುವ ಗಿಡದ, ಮರದ ಎಲೆಗಳ ಚಲನೆಯು ಮೂಡಿಸುವ ವಿನ್ಯಾಸವನ್ನೂ ನಾವು ಗಮನಿಸಬಹುದು.

ಪ್ರಕೃತಿ ನಮಗೆ ಎಷ್ಟೆಲ್ಲಾ ವಿಧವಾದ ಸಂತೋಷಗಳನ್ನು ಒದಗಿಸುತ್ತಿದೆ. ಪ್ರಕೃತಿಯೊಂದಿಗಿನ ಒಡನಾಟ ನಮ್ಮಲ್ಲಿನ ಚೈತನ್ಯವನ್ನು ಉದ್ದೀಪನಗೊಳಿಸುವ ಕ್ರಿಯೆಯೇ ಉಲ್ಲಾಸಕರ. ಪ್ರಕೃತಿಯ ಅ ಆ ಇ ಈ ಯನ್ನು ಉಚ್ಚರಿಸುವಷ್ಟರಲ್ಲಿ ನಮ್ಮ ಜೀವಮಾನದ ಅರ್ಧ ಆಯಸ್ಸು ಕಳೆದುಹೋಗಿರುತ್ತದೆ. ಇನ್ನು ಅದನ್ನು ಅರ್ಥ ಮಾಡಿಕೊಳ್ಳುವುದು ದೂರದ ಮಾತು ಎಂದು ಮನಸ್ಸು ಮೂಕವಾಗುತ್ತದೆ. ಪ್ರಕೃತಿಯನ್ನು ಗಮನಿಸುವ ಸಂದರ್ಭವನ್ನು ಕಳೆದುಕೊಳ್ಳಲು ನಾನಂತೂ ಇಚ್ಛಿಸುವುದಿಲ್ಲ!

 

ಚಿತ್ರ, ವಿಡಿಯೋ: ಎಂ ಆರ್ ಭಗವತಿ

———-

ಎಂ ಆರ್ ಭಗವತಿ

bhagavathi1 ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ. ಹವ್ಯಾಸಿ ಬರಹಗಾರ್ತಿ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಎಂಎ ಪದವಿ.. ಮೂಲ ಆಸಕ್ತಿ ಬರವಣಿಗೆಯಾದರೂ, ಮೊದಲಿನಿಂದಲೂ ಛಾಯಾಗ್ರಹಣ ಬಹಳ ಇಷ್ಟವಾದ ಹವ್ಯಾಸ. ‘ಏಕಾಂತದ ಮಳೆ’ (೧೯೯೯) ಮತ್ತು ‘ಚಂಚಲ ನಕ್ಷತ್ರಗಳು’ (೨೦೦೫) ಪ್ರಕಟಿತ ಪುಸ್ತಕಗಳು.

Share

6 Comments For "ನಿಸರ್ಗದ ಪಿಸುಮಾತು
ಎಂ ಆರ್ ಭಗವತಿ ಕಾಲಂ
"

 1. 16th August 2016

  chennagide. prakruthiya saangathyadalli kaliyabekiruva badukina paata doddadu. adannu atyantha marmikavagi neevu hidididdiri. chendada grahike.

  Reply
  • bhagavathi
   16th August 2016

   Thank you..!

   Reply
 2. Srinivas Shamachar
  16th August 2016

  ತುಂಬಾ ಚೆನ್ನಾಗಿದೆ ಮೇಡಂ

  Reply
  • bhagavathi
   17th August 2016

   ಥ್ಯಾಂಕ್ಯು ಶ್ರಿನಿವಾಸ್..!!

   Reply
 3. ವಿಮಲಾನಾವಡ
  4th April 2017

  ಬಹಳ ಚೆನ್ನಾಗದೆ,ಭಗವತಿಯವರೇ.ನಾನು ನನ್ನ ಮೊಮ್ಮಕ್ಕಳಿಗೂ ಓದಿ ಹೇಳಿದೆ.ಅವರೂ ಖುಷಿಪಟ್ಟರು.

  Reply
  • ಭಗವತಿ ಎಂ. ಆರ್
   21st April 2017

   ಧನ್ಯವಾದ.. ವಿಮಲಾ ನಾವಡ..!

   Reply

Leave a comment

Your email address will not be published. Required fields are marked *

Recent Posts More

 • 4 hours ago No comment

  ಪ್ರತಿಯೊಬ್ಬರೊಳಗೂ ಒಂದೊಂದು ಕಥೆ!

  ಆಕೆ ಮೀರಾ. ತಾನು ಬರೆದ ಕಥೆಯೊಂದರ  ಮೂಲಕ ಇದ್ದಕ್ಕಿದ್ದಂತೆ ಲಕ್ಷಾಂತರ ಮನಸ್ಸನ್ನು ಮುಟ್ಟಿಬಿಡುತ್ತಾಳೆ. ವಿವಾನ್ ಎಂಬ ಬ್ಯಾಂಕ್ ಅಧಿಕಾರಿಯೊಬ್ಬನಿಗೆ ಜಗತ್ತನ್ನೇ ಸುತ್ತುವ ಕನಸು. ಕೆಫೆಯೊಂದರ ಮ್ಯಾನೇಜರ್ ಕಬೀರ್ ತನ್ನದೇ ಆದ ಏನನ್ನಾದರೂ ಸಾಧಿಸುವ ಹಂಬಲವಿಟ್ಟುಕೊಂಡವನು. ಅದೇ ಕೆಫೆಯ ಗ್ರಾಹಕಿ ನಿಶಾ ಎಂಥದೋ ಹತಾಶೆಗೆ ಸಿಕ್ಕಿಹಾಕಿಕೊಂಡು, ತನ್ನದೇ ಆದ ಗುಟ್ಟುಗಳನ್ನು ಬಚ್ಚಿಟ್ಟುಕೊಂಡಿರುವವಳು. ಪ್ರತಿಯೊಬ್ಬರದೂ ಒಂದೊಂದು ಕಥೆ. ಅಂಥ ನಾಲ್ವರೂ ಒಂದೆಡೆ ಸೇರಿದಾಗ ಏನಾಗುತ್ತದೆ? ಈ ಕುತೂಹಲವನ್ನು ತೆರೆದಿಡುತ್ತ ಹೋಗುವ ಕಾದಂಬರಿಯೇ ...

 • 1 day ago No comment

  ನನ್ನೊಳಗಿನ ಮಗುವಿಗೊಂದು ಪತ್ರ

        ನಿನ್ನೆ ನನ್ನ ಹಳೆಯ ಕಡತಗಳನ್ನೆಲ್ಲಾ ತೆರೆದು ಏನನ್ನೋ ಹುಡುಕುತ್ತಿದ್ದಾಗ ನೀನು ಬಿಡಿಸಿದ ಕೆಲವು ಚಿತ್ರಗಳು ಸಿಕ್ಕವು. ನಿಜಕ್ಕೂ ಅದ್ಭುತವಾಗಿದ್ದವು ಅವುಗಳು.       ಮಕ್ಕಳ ದಿನಾಚರಣೆಯ ಋತುವಿನಲ್ಲಿ ನಮ್ಮದೇ ಹನ್ನೆರಡರ ವ್ಯಕ್ತಿತ್ವಕ್ಕೊಂದು ಪತ್ರ ಬರೆದರೆ ಹೇಗಿರುತ್ತದೆ ಎಂಬ ಯೋಚನೆಯೊಂದು ತಲೆಯೆತ್ತಿತು. ಸದ್ಯ ಪತ್ರಗಳಂತೂ ಮಾಯವಾಗಿವೆ. ನಿತ್ಯಜೀವನದ ಜಂಜಾಟದಲ್ಲಿ ನಮ್ಮೊಳಗಿನ ಮಗುವೂ ನಿಧಾನಕ್ಕೆ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲೇ ಇವೆರಡನ್ನೂ ಒಂದೇ ವೇದಿಕೆಗೆ ತಂದಿಡುವ ...

 • 2 days ago No comment

  ದುರಿತ ಕಾಲದ ಕವಿತೆಗಳು

      ಕವಿಸಾಲು       1 ಒಂಟಿಯಾಗಿ ಹೆಗಲಲಿ ನೇಗಿಲ ಎಳೆದು ಅಜ್ಜಿ ಬಿತ್ತಿದ ರಾಗಿಗೆ ಸಗ್ಗಣಿ ಗೊಬ್ಬರ ಹಾಕಿ ಖಂಡುಗಗಟ್ಟಲೇ ರಾಗಿ ಬೆಳೆದ ಅಜ್ಜನ ಹೊಲದ ಮೇಲಿವತ್ತು ಚತುಷ್ಕೋನ ರಸ್ತೆ ರಾರಾಜಿಸುತ್ತಿದೆ ಆರಾಮಾಗಿ ಅಲ್ಲಿ ಮಲಗಿರುವ ಅವನ ಎದೆಯ ಮೆಲೆ ಅನಿಲ ಟ್ಯಾಂಕರುಗಳು ಅಡ್ಡಾಡುತಿವೆ ನೋವಾಗುತ್ತಿರುವುದು ಮಾತ್ರ ನನಗೆ! ~ 2 ಅಭಿವೃದ್ದಿಯ ಜಾಹಿರಾತಿನಲ್ಲಿ: ಹಡಗಿನಂತಹ ಕಾರುಗಳು ಹಾಳೆಗಳಂತಹ ಮೊಬೈಲುಗಳು ಕಣ್ಣು ಕುಕ್ಕುವ ಕಂಪ್ಯೂಟರುಗಳು ...

 • 2 days ago No comment

  ನಾಲ್ಕು ಹನಿಗಳು

      ಕವಿಸಾಲು         ಧ್ಯೇಯದಿಂದ ನೆಲ ಅಗೆದೆ ಗಿಡ ನೆಡಲು. ಮತ್ತೆ ಕಾಣಿಸಿತು ಧ್ಯಾನಸ್ಥ ಎರೆಹುಳು. ~ ನದಿ ತಟದ ಬೆಂಚಿನ ಮೇಲೆ ನಾನು ಎರಡೂ ತಟಗಳಿಗೆ ಅಂಟಿದ್ದ ದಪ್ಪನೆ ಕಾಂಕ್ರೀಟ್ ಗೋಡೆ. ಹರಿವ ನೀರು, ನಾನು ಬಂಧಿಗಳೇ. ~ Mindfulness ಎಂದೆಲ್ಲಾ ಹೇಳುವ ಅವರ ಹೆಮ್ಮೆಗೆ ಕಾಣಿಸಲಿಲ್ಲವೇಕೆ ಅಖಂಡವಾಗಿ ನಿಂತು ಜಗಿಯುವ ಆ ಎಮ್ಮೆ? ~ ಆ ಒಂದು ಮಳೆ ಹನಿ ...

 • 2 days ago No comment

  ಕಂಗಾಲಾಗಿದ್ದಾಗ ನಾವೆಲ್ಲ, ಮೆಲ್ಲಮೆಲ್ಲನೆ ಬಂದಳಲ್ಲ!

    ಅಡಗಿಕೊಳ್ಳಲು ಬಾಳೆ ಬುಡ ಆರಿಸಿಕೊಂಡ ಪುಟಾಣಿಗೆ ಬೇಸಿಗೆಯ ಆ ಮಧ್ಯಾಹ್ನ ಊಟ ಮಾಡಿ ನಿದ್ದೆ ಮಾಡುವ ಸಮಯವಾಗಿತ್ತು.         ಬಾಲ್ಯ ಬಂಗಾರ   ಬಾಲ್ಯದ ಮಜವನ್ನು ಅನುಭವಿಸದ ಮಕ್ಕಳು ಬದುಕನ್ನು ಪೂರ್ಣವಾಗಿ ಸವಿಯುವುದು ಕಷ್ಟವೇ? ಆ ಮಜವೇ ಭಿನ್ನ, ಅದರಲ್ಲೂ ಹಳ್ಳಿಯ ಬದುಕಿನ ಬಾಲರ ಜೀವನದಲ್ಲಿ ಬಾಲ್ಯ ಅನನ್ಯವಾದ ಜೀವನಾನುಭವ ನೀಡುವ ಕಾಲ. ಪೇಟೆಯಲ್ಲಿ ರೇಷ್ಮೆ ಹುಳುವಿನಂತೆ ಪೊರೆಯ ಒಳಗೆ ಬದುಕುವ ಮಕ್ಕಳ ...


Editor's Wall

 • 21 November 2017
  1 day ago No comment

  ನನ್ನೊಳಗಿನ ಮಗುವಿಗೊಂದು ಪತ್ರ

        ನಿನ್ನೆ ನನ್ನ ಹಳೆಯ ಕಡತಗಳನ್ನೆಲ್ಲಾ ತೆರೆದು ಏನನ್ನೋ ಹುಡುಕುತ್ತಿದ್ದಾಗ ನೀನು ಬಿಡಿಸಿದ ಕೆಲವು ಚಿತ್ರಗಳು ಸಿಕ್ಕವು. ನಿಜಕ್ಕೂ ಅದ್ಭುತವಾಗಿದ್ದವು ಅವುಗಳು.       ಮಕ್ಕಳ ದಿನಾಚರಣೆಯ ಋತುವಿನಲ್ಲಿ ನಮ್ಮದೇ ಹನ್ನೆರಡರ ವ್ಯಕ್ತಿತ್ವಕ್ಕೊಂದು ಪತ್ರ ಬರೆದರೆ ಹೇಗಿರುತ್ತದೆ ಎಂಬ ಯೋಚನೆಯೊಂದು ತಲೆಯೆತ್ತಿತು. ಸದ್ಯ ಪತ್ರಗಳಂತೂ ಮಾಯವಾಗಿವೆ. ನಿತ್ಯಜೀವನದ ಜಂಜಾಟದಲ್ಲಿ ನಮ್ಮೊಳಗಿನ ಮಗುವೂ ನಿಧಾನಕ್ಕೆ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲೇ ಇವೆರಡನ್ನೂ ಒಂದೇ ವೇದಿಕೆಗೆ ತಂದಿಡುವ ...

 • 19 November 2017
  3 days ago No comment

  ಸಂಸಾರದ ಬಂಧಗಳ ಬಗ್ಗೆ ಬರಿದೆ ಮಾತಿಂದ…

          | ಕಮಲಾದಾಸ್ ಕಡಲು     ನನ್ನ ಅಪ್ಪನ ಸಾವು (My Father’s Death) ಕಮಲಾದಾಸ್ ಕವಿತೆಯ ಅನುವಾದ     ಅಪ್ಪ ಸತ್ತಾಗ ಅಪ್ರಾಮಾಣಿಕರು ಮಾತ್ರ ಕಣ್ಣೀರು ಸುರಿಸಿದರು, ಅವನ ಹೆಣದೊಡನೆ ಫೋಟೋ ತೆಗೆಸಿಕೊಳ್ಳಲು ಬಂದ ಅವರಿಗೆ ಅಪ್ಪನೆಂದರೆ ವಾಸ್ಕೋಡಗಾಮ ಕಪ್ಪಾದ್ ಬೀಚಿನ ಮರಳಿನ ಮೇಲೆ ಮೊದಲು ಕಾಲಿರಿಸಿದ ನಂತರ ಕ್ಯಾಲಿಕಟ್’ನಲ್ಲಿ ಸತ್ತವರಲ್ಲಿ ಅತಿ ಮುಖ್ಯವಾದ ವ್ಯಕ್ತಿಯಾಗಿದ್ದರು ಅಷ್ಟೇ. ರಸ್ತೆಯ ಇಕ್ಕೆಲದಲ್ಲೂ ...

 • 17 November 2017
  5 days ago 2 Comment

  ನನ್ನನ್ನು ಕವಿಯೆಂದರು..!

      ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

 • 14 November 2017
  1 week ago No comment

  ಅವ್ರ್ ಬಿಟ್ ಇವ್ರ್ ಬಿಟ್ ಅವ್ರ್ ಬಿಟ್ ಇವ್ರ್ ಯಾರು?

      ಈಗ ಮಕ್ಕಳನ್ನೆಲ್ಲ ಪರ ಊರುಗಳ ಬೋರ್ಡಿಂಗ್ ಶಾಲೆಗಳಲ್ಲಿ ನೂಕಿ ಯಾವ ಮನೆಗಳಲ್ಲೂ ಮಕ್ಕಳಿಲ್ಲದೆ ಬಣಗುಟ್ಟುತ್ತಿವೆ. ಹೋಮ್ ವರ್ಕ್, ರ್ಯಾಂಕ್ ಓಟ, ಅಂಕದ ಬೇಟೆಯಲ್ಲಿ ಸಿಲುಕಿ ಯಾವ ರಸ್ತೆಯಲ್ಲೂ ಮಕ್ಕಳು ಆಡುವುದಿಲ್ಲ. ಮಕ್ಕಳ ದಿನಕ್ಕೆ ಒಂದು ವಿಶೇಷ ಬರಹ, ಕಾದಂಬಿನಿ ಅವರಿಂದ       ಮಕ್ಕಳೆಲ್ಲ ಸೇರಿ ಯಾರಾದರೂ ಚೂರು ದೊಡ್ಡವರನ್ನು ಅಜ್ಜಿಯಾಗಲು ಕೇಳಿಕೊಂಡಾದ ಮೇಲೆ ಎಲ್ಲರೂ ವೃತ್ತಾಕಾರವಾಗಿ ನಿಂತು ಕ್ಲಾಪ್ಸ್ ಹಾಕುವ ಮೂಲಕ ಕಳ್ಳರನ್ನು ...

 • 09 November 2017
  2 weeks ago No comment

  ಕೆಂಡದಂಥ ಕಾವ್ಯ

  ಪಾಶ್ ಎಂದೇ ಗೊತ್ತಾಗಿರುವ ಪಂಜಾಬಿ ಮತ್ತು ಹಿಂದಿ ಕವಿ ಅವತಾರ್ ಸಿಂಗ್ ಸಂಧು, ಕ್ರಾಂತಿಕಾರಿ ಕವಿ. ತನ್ನ 20ನೇ ವಯಸ್ಸಿನಲ್ಲಿ ಆತ ಮೊದಲ ಸಂಕಲನ ‘ಲೋಹ್ ಕಥಾ’ ಪ್ರಕಟಿಸುತ್ತಿದ್ದ ಹಾಗೆಯೇ (1970) ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಟ್ಟಿದ್ದ. ಅದೇ ದಶಕದಲ್ಲೇ ಪ್ರಕಟಗೊಂಡ ಮತ್ತೂ ಎರಡು ಸಂಕಲನಗಳು ಪಂಜಾಬಿ ಕಾವ್ಯಲೋಕದಲ್ಲಿ ಆತನ ಹೆಸರನ್ನು ಶಾಶ್ವತಗೊಳಿಸಿಬಿಟ್ಟವು. ಅವನ ಕಾವ್ಯದ ಕತ್ತಿ ಖಲಿಸ್ತಾನಿಗಳ ವಿರುದ್ಧ ಝಳಪಿಸುತ್ತಿತ್ತು. ಕಡೆಗೆ ಅದೇ ಅವನ ಹತ್ಯೆಗೂ ಕಾರಣವಾಯ್ತು. ...