Share

ಸತ್ತುಹೋಗುವಷ್ಟು ಪ್ರೀತಿಸಬೇಕು
ಸುಧಾ ಶರ್ಮಾ ಚವತ್ತಿ ಕಾಲಂ

sudha

ಕಲರವ | kalarava

ಹೆಡ್ಡಿಂಗ್ ನೋಡಿದ ತಕ್ಷಣ ಯಾರಿಗಾದರೂ ನೆನಪಾಗುವದು ಪ್ರೇಮಿಗಳು ಪರಸ್ಪರ ಕೈ ಹಿಡಿದುಕೊಂಡು ಮೇಲಿನಿಂದ ಹಾರಿಯೋ, ಟ್ರೇನಿಗೆ ತಲೆ ಕೊಟ್ಟೋ ಸಾಯಲು ಯತ್ನಿಸುವುದು. ಇದೆಲ್ಲ ಸಿನಿಮಾ ಬಿಡಿ ಎಂದು ತಳ್ಳಿ ಹಾಕೋಣ ಎಂದರೆ ಪ್ರತಿ ದಿನ ಪತ್ರಿಕೆಯಲ್ಲಿ ಪುಟ ತೆರೆದರೆ ಬರುವ ಸಾವಿನ ಸುದ್ದಿಯಲ್ಲಿ ಪ್ರೇಮಿಗಳದ್ದೇ ಮೇಲುಗೈ. ಆದರೆ ಚಿತ್ರಣ ಸ್ವಲ್ಪ ಬದಲಾಗಿದೆ. ಹುಡುಗಿ ಕೈ ಕೊಟ್ಟಿದ್ದಕ್ಕೆ ಹುಡುಗ ಆತ್ಮಹತ್ಯೆಗೆ ಯತ್ನ. ಪ್ರೇಮಿಯಿಂದಲೇ ಪ್ರೇಯಸಿ ಕೊಲೆ, ಪ್ರೀತಿಸಿದವನಿಂದಲೇ ಮೋಸ… ಬೇಡ ಬಿಡಿ ಇದನ್ನೆಲ್ಲ ಹೇಳುವುದು ಇಲ್ಲಿನ ಆಶಯ ಅಲ್ಲ. ಆದರೂ ನಿತ್ಯವೂ ಓದುವ ಇಂತಹ ಸಂಗತಿಗಳನ್ನು ನೋಡಿದಾಗ ಮನಸ್ಸಿನಲ್ಲಿ ಪ್ರೀತಿಯ ಕುರಿತಾದ ಭಾವನೆಗೆ ಬನಿ ಇಲ್ಲ. ಆದರೂ ಅವರು ತುಂಬಾ ಪ್ರೀತಿಸುತ್ತಿದ್ದರು ಎನ್ನುವಾಗ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು. ಹಾಗಾದರೆ ಬಿಟ್ಟಿರಲು ಸಾಧ್ಯವಾಗದೇ ಇರುವುದು ಪ್ರೀತಿಯಾ? ಅವಲಂಬನೆಯಾ? ಅವಲಂಬನೆಯನ್ನೇ ನಾವು ಪ್ರೀತಿ ಎನ್ನುತ್ತಿದ್ದೇವಾ?

ಮದುವೆಯಾಗದ ಆ ಮಹಿಳೆ ತನ್ನ ತಾಯಿಯನ್ನು ಕಳೆದ 8 ವರ್ಷಗಳಿಂದ ಮಗುವಿನ ಹಾಗೆ ನೋಡಿಕೊಳ್ಳುತ್ತಿದ್ದಳು. ಅವರ ದಿನಚರಿ ಆರಂಭವಾದದ್ದೇ ತಾಯಿ ಬೇಕೆಂಬ ಕರೆಯೊಂದಿಗೆ. ತಾಯಿ ಸತ್ತ ದಿನ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದು ನಾಳೆಯಿಂದ ಏನು ಮಾಡಲಿ? ಮತ್ತದೇ ಅವಲಂಬನೆ. ನಾವು ಅವಲಂಬನೆಯನ್ನು ಪ್ರೀತಿಗೆ ಜೋಡಿಸುತ್ತಿದ್ದೇವೆ.

ಪ್ರತಿಷ್ಠಿತ ಉದ್ಯಮಿ ಅವರು ಅವರಿಗೆ ಕೆಲಸ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಅವರು ಯಾವಾಗಲೂ ಹೇಳುವ ಮಾತು “ನನಗೆ ಕೆಲಸ ಎಂದರೆ ಎಷ್ಟು ಪ್ರಿತಿ ಎಂದರೆ ನಾನು ಒಬ್ಬ ಪ್ರೇಮಿಯ ಭಾವದಲ್ಲಿ ಇರುತ್ತೇನೆ. ನನಗೆ ದಣಿವೇ ಇಲ್ಲ.” ಅಂದರೆ ಪ್ರೀತಿ ಎನ್ನುವಂತಹದ್ದು ಎಂದೋ ಮುಗಿದು ಹೋಗುವಂತಹದ್ದಲ್ಲ. ಪ್ರತಿಭಾ ನಂದಕುಮಾರ್ ಅವರ ಕವಿತೆ ನೆನಪಾಗುತ್ತಿದೆ. “ಪ್ರೀತಿಸಿದ ಹುಡುಗ ಮದುವೆಯಾದ ಮಾರನೇ ದಿನವೇ ಗಂಡನಾದ”. ಪ್ರೀತಿ ಮುಗಿಯುವುದಿಲ್ಲ. ಹೊರಗೂ ಇಲ್ಲ. ಒಳಗೇ ಇದೆ. ಒಳಗೆ ಮತ್ತೆ ಮತ್ತೆ ಒರತೆಯಂತೆ ಉಕ್ಕುತ್ತಿದೆ. ಆದರೆ ನಮಗೆ ಸರಿಯಾಗಿ ಅದನ್ನು ಹಿಡಿಯಲು, ಒರತೆಗೆ ದಾರಿ ಮಾಡಿಕೊಡಲು ಬರಬೇಕಾಗಿದೆ ಅಷ್ಟೇ.

ಪ್ರೀತಿಸಿದ ಹುಡುಗಿ ಇವನಿಗೆ ಹೇಳದೇ ಬೇರೆಯವನೊಂದಿಗೆ ಮದುವೆ ನಿಶ್ಚಯಿಸಿಕೊಂಡಳು. ಎಲ್ಲರೂ ಮಾಡುವ ಹಾಗೆ ನಾನೂ ಅವನನ್ನು ಸಮಾಧಾನಿಸುತ್ತ “ಯೋಚಿಸಬೇಡ್ವೋ ನಿನಗೆ ಅವಳಿಗಿಂತ ಒಳ್ಳೆ ಹುಡುಗಿ, ಎಲ್ಲದರಲ್ಲೂ ಅವಳನ್ನು ನಿವಾಳಿಸುವವಳು ಸಿಗ್ತಾಳೆ” ಎಂದೆಲ್ಲ ಹೇಳತೊಡಗಿದೆ. ಅವನೂ ಜೀವನದಿಂದ ಸಾಕಷ್ಟು ಕಲಿತಿದ್ದ. ಅವನ ಅನುಭವದ ಮಾತುಗಳನ್ನು ನನಗೂ ಹೇಳಿದ. “ನನಗೆ ಬೇಸರ ಆಗಲಿಲ್ಲ. ನಾನೂ ಪ್ರೀತಿಸಬಲ್ಲೆ ಅನ್ನುವುದನ್ನು ಅವಳು ತೋರಿಸಿಕೊಟ್ಟಳು. ನನಗೆ ಪ್ರೀತಿ ಮಾಡುವುದಕ್ಕೆ ಬರತ್ತೆ ಅಂತಾನೆ ಮೊದಲು ಗೊತ್ತಿರಲಿಲ್ಲ. ಮಜಾ ಅಂದರೆ ಅವಳು ನನ್ನನ್ನು ಪ್ರೀತಿಸುತ್ತಿರುವ ಸುಮಾರು 2 ವರ್ಷಗಳ ಕಾಲದಲ್ಲಿ ನಾನು ನನ್ನನ್ನೂ ಪ್ರೀತಿಸಿಕೊಂಡೆ. ಮನಸ್ಸಿನೊಳಗೆ ಪ್ರೀತಿ ತುಂಬಿರುವಾಗ ಇಡೀ ಜಗತ್ತು ಎಷ್ಟು ಸುಂದರವಾಗಿರತ್ತೆ ಅನ್ನಿಸಿತು. ನಾನು ಈಗ ಯಾರನ್ನು ಬೇಕಾದರೂ ಪ್ರೀತಿಸಬಲ್ಲೆ. ಯಾಕೆಂದರೆ ಪ್ರೀತಿ ನನ್ನೊಳಗಿನದು. ನಾನು ಕೊಡಬಹುದಾದದ್ದು. ಕೇವಲ ಪಡೆಯುವ ಬಗೆಗೆ ನಾನು ಯೋಚಿಸುತ್ತಿಲ್ಲ. ಪ್ರೀತಿಸೋದು ನನಗೆ ಸುಖ ಕೊಟ್ಟಿದೆ. ಇದು ಬದುಕಿನ ಅರ್ಥ ಹೆಚ್ಚಿಸಿತು….” ಅವನ ಮಾತು ನನಗೆ ಕೊಟ್ಟ ಖುಷಿಯೇ ಬೇರೆ.

ಚಳಿಗಾಲದ ಕೊನೆಯಲ್ಲಿ ವಿಶೇಷವಾಗಿ ಹೊಂಗೆ ಮತ್ತು ಬೇವಿನ ಮರಗಳನ್ನು ನೋಡಬೇಕು. ಪೂರ್ಣ ಸತ್ತು ಹೋಗಿದೆಯೇನೋ ಎನ್ನುವಷ್ಟು ಒಣ ಕಾಷ್ಠ. ಕೇವಲ ಕೋಲಿನಂತೆ ನಿಂತು ಬಿಡುವ ಈ ಮರಗಳಿಗೆ ಯಾವಾಗ ವಸಂತ ಬಂದಿದ್ದು ಗೊತ್ತಾಗತ್ತೋ.. ಮೈ ತುಂಬ ಮುತ್ತು ಜೋಡಿಸಿಟ್ಟ ಹಾಗೆ ಇಂಚಿಂಚಾಗಿ ಚಿಗುರೊಡೆಯುವ ಎಲೆಗಳ ಹೊಳೆವ ಸಂಭ್ರಮ ನೋಡಿದಾಗ ಜೀವ ಚೈತನ್ಯದ ಸೆಲೆಯೊಂದು ಹುಟ್ಟುವುದು ಪ್ರೇಮ ಮೊಳೆಯುವ ಈ ಹೊತ್ತು ವಸಂತದಲ್ಲಿಯೇ ಎನ್ನಿಸುತ್ತದೆ. ಒಣ ಕಾಷ್ಠದಂತಹ ಮರದಲ್ಲಿ ಅಡಗಿದ್ದ ಚಿಗುರುವ ಹಂಬಲಕ್ಕೆ ವಸಂತನೊಬ್ಬ ನೆಪವಾದನೇ? ಪ್ರತಿಯೊಬ್ಬರೊಳಗೂ ಅಡಗಿರುವ ಪರಮ ಪ್ರೀತಿಯ ರಸವನ್ನು ಬತ್ತಿಸುತ್ತಿರುವುದು ಯಾವುದು. ಮಣ್ಣಿನೊಳಗಿನ ಬೀಜದಂತೆ ಮರದಲಡಗಿದ ಬೆಂಕಿಯಂತೆ ನಮ್ಮೊಳಡಗಿದ ಪ್ರೀತಿಗೆ, ಜೀವ ಸೆಲೆಗೆ ತಡೆ ಒಡ್ಡಿದ್ದು ಯಾವುದು. ಯಾರೂ ಕೈ ಕೊಡುವುದಿಲ್ಲ. ಯಾವುದೂ ನಮ್ಮ ಕೈ ಆಚೆಗೂ ಇಲ್ಲ. ಒಳಗಿರುವ ಪ್ರೀತಿಯ ಅಭಿವ್ಯಕ್ತಿಗೆ ನಾವು ಕುರುಡಾಗಿದ್ದೇವೆ. ಅಭಿವ್ಯಕ್ತಿಸುವುದನ್ನು ಮರೆತಿದ್ದೇವೆ.

ನಾನು, ನನ್ನದು, ನನಗೆ ಮುಗಿಯಲಾರದ “ನಾನು”ವಿನ ರಾಕ್ಷಸ ಕುಣಿತದ ಭಸ್ಮಾಸುರರು ನಾವು. ಮೋಹಿನಿಯ ವೇಷದಲ್ಲಿ ನಿತ್ಯದ ಆಮಿಷವೆಲ್ಲವೂ ಎದುರಿಗಿದೆ. ಯಾಕೆ ಉತ್ಕಟತೆ ಇಲ್ಲ. ನಾನು ಹೀಗೆ ಇರಬಾರದಿತ್ತು, ನನಗೆ ಇಷ್ಟೇನಾ, ಏನನ್ನೇ ಮಾಡಿದರೂ ಉತ್ಕಟವಾಗಿ ಮಾಡುವುದು, ಪ್ರೀತಿಯಿಂದ ಮಾಡುವುದು, ನಮ್ಮನ್ನೇ ನಾವು ಮರೆಯುವಷ್ಟು ತನ್ಮಯವಾಗುವುದು ಯಾಕಿಲ್ಲ? ನಿದ್ದೆಗೊಮ್ಮೆ ನಿತ್ಯ ಮರಣ ಎದ್ದಸಲ ನವೀನ ಜನನ. ಶಿಶುಭಾವ ಬರುವುದೆಂತು? ಸುಮ್ಮನೇ ಇರುವುದೆಂದರೆ ಒಳಗೂ ಹೊರಗೂ ಮೌನವಾಗುವುದು. ನಮಗೋ ಮುಗಿಯದ ನಿತ್ಯ ಗದ್ದಲ. ಒಳ ಹೊರಗಿನ ಜಾತ್ರೆಯಲ್ಲಿ ನಾವೇ ಕಳೆದು ಹೋದವರು. ಇದನ್ನೇ ಒತ್ತಡ ಒತ್ತಡ ಎಂದು ಜಪಿಸುತ್ತಿದ್ದೇವಾ? ಪ್ರೀತಿಯಲ್ಲಿ ತನ್ನನ್ನೇ ತಾನು ಕಳೆದುಕೊಳ್ಳುವ ಮತ್ತು ತನ್ನೊಳಗೇ ತನ್ನನ್ನೇ ತಾನು ಕಂಡುಕೊಳ್ಳುವ ಅಪರೂಪದ ಕ್ಷಣವೊಂದು ನಮ್ಮಿಂದ ದೂರವಾಗಿದೆಯಾ?

ಅದ್ಕಕೇ “ನಾನು” ಸತ್ತು ಹೋಗುವಷ್ಟು ಪ್ರೀತಿಸಬೇಕು. ನಾನು ಕರಗಬೇಕು. ಭಕ್ತ ಕುಂಬಾರ ಸಿನಿಮಾದಲ್ಲೊಂದು ಸಂಭಾಷಣೆ ಸ್ವರ್ಗಕ್ಕೆ ಯಾರು ಹೋಗಬಹುದು. “ನಾನು” ಹೋದರೆ ಹೋದೇನು. ಹಾಗೆ ನಮ್ಮಲ್ಲಿ ಒಂದು ಮಾತಿದೆ ನಾನು ಸಾಯಬೇಕು ಸ್ವರ್ಗ ಕಾಣಬೇಕು. ಅವರವರ ದರ್ಶನದ ಬೆಳಕು.

—————-

ಸುಧಾ ಶರ್ಮಾ ಚವತ್ತಿ

286637_218799308166417_3412973_o[1]“ಒದ್ದೆ ಕಣ್ಣುಗಳ ಪ್ರೀತಿ” ಕವನ ಸಂಕಲನದ ಮೂಲಕ ಭರವಸೆ ಹುಟ್ಟಿಸಿದ ಸುಧಾ ಶರ್ಮಾ ಚವತ್ತಿ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ ಪರಿಣಿತರು. ಪತ್ರಿಕೆಗಳಲ್ಲಿ ಲೇಖನ, ಅಂಕಣಗಳ ಮೂಲಕ ಪರಿಚಿತರು. “ಆವಿಯಾಗಿದೆ ಮಾತು” (ಮಲ್ಲಿಗೆ), “ಷೇರೆಂಬ ಮಾಯಾಂಗನೆ” ( ವಿಜಯ ಕರ್ನಾಟಕ ), “ಪ್ರಾಫಿಟ್ ಪ್ಲಸ್” (ವಿಜಯವಾಣಿ) ಪ್ರಕಟಿತ ಅಂಕಣಗಳು. ಕಿರುತೆರೆ ಕಾರ್ಯರ್ಕಮಗಳ ನಿರ್ದೇಶನ, ನಿರ್ಮಾಣ, ನಿರೂಪಣೆಯ ಅನುಭವ. ಈಗ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಇವರು ಉತ್ತಮ ವಾಗ್ಮಿ. ಸಮೂಹ ಮಾತುಗಾರಿಕೆಯೂ ಇವರ ಉತ್ಕಟ ಪ್ರೀತಿಗಳಲ್ಲಿ ಒಂದು.

Share

6 Comments For "ಸತ್ತುಹೋಗುವಷ್ಟು ಪ್ರೀತಿಸಬೇಕು
ಸುಧಾ ಶರ್ಮಾ ಚವತ್ತಿ ಕಾಲಂ
"

 1. ಬಿ.ಜಿ.ಹರೀಶ್
  25th August 2016

  ಪ್ರೀತಿ ಮೊಳೆತ ಮೊದಲ ಕ್ಷಣವೆ ನಾನು, ನನ್ನದೆಂಬುದ ಅಳಿದು ನಾವು, ನಮ್ಮದೆಂಬುದರ ಜನನ…..

  Reply
  • sudha sharma chavathi
   24th September 2016

   ನಾನು ಕರಗಿ ನಾವು ಹುಟ್ಟಬೇಕಲ್ಲ . ಅದೇ ನಿಜವಾದ ಕಷ್ಟ

   Reply
 2. ಆನಂದ್ ಋಗ್ವೇದಿ
  26th August 2016

  ನಿಜ ಹರೀಶ್, ಸುಧಾ ಶರ್ಮ ಹೇಳುತ್ತಿರುವುದೂ ಅದೇ. ನಮ್ಮೊಳಗೆ ಪ್ರೀತಿ ಮೊಳೆತ ಕ್ಷಣ ನಾನು ಕಳೆದು ಎಲ್ಲದರೊಳಗೆ ಒಂದಾಗುವ, ಪರಿಭಾವಿಸುವ ರೀತಿಯೊಂದು ಮೂಡುತ್ತದಲ್ಲ ಅದೇ ಪ್ರೀತಿ. ಚಂದದ ಬರಹ

  Reply
  • sudha sharma chavathi
   24th September 2016

   thanks sir. ನಿಮ್ಮ ವಿಶ್ವಾಸಕ್ಕೆ ನಾನು ಅಭಾರಿ

   Reply
 3. ವಿಮಲಾ ನಾವಡ
  27th August 2016

  ಪ್ರೀತಿಯ ವಿಭಿನ್ನ ಆಯಾಮಗಳನ್ನು ತೆರೆದು ತೋರಿಸಿದ ನಿಮಗೆ ನಮಸ್ಕಾರ ಗಳು.

  Reply
 4. sudha sharma chavathi
  24th September 2016

  ಬರೆಯೋದು ಸುಲಭ ವಿಮಲಾ ಆದರೆ ಹಾಗೆ ಬದುಕೋದು ಸುಲಭ ಅಲ್ಲ . ನಿಮ್ಮ ಮೆಚ್ಚುಗೆಗೆ ನಮನ

  Reply

Leave a comment

Your email address will not be published. Required fields are marked *

Recent Posts More

 • 2 days ago No comment

  ಅಜ್ಜಿಗೇನು ಬೇಕು ಅಂತ ಅಜ್ಜಂಗೇನು ಗೊತ್ತು!

          ಕಥನ         ಅಜ್ಜ ಪೆನ್ಷನ್ ತರೋದಕ್ಕೆ ಅಂತ ಪೇಟೆಗೆ ಹೋಗಿದ್ದ. ಅಷ್ಟರಲ್ಲಿ ಮನೆ ಬಾಗಿಲಲ್ಲಿ ಕಾರು ಬಂದು ನಿಂತಿತು. ಕಾರಲ್ಲಿ ಅಜ್ಜಿಯ ಮಗ, ಸೊಸೆ ಮತ್ತೆ ಆರು ವರ್ಷದ ಮೊಮ್ಮಗ ಬಂದಿದ್ರು. ಅಜ್ಜಿಗೆ ಖುಷಿ ತಡೆಯಕ್ಕಾಗದೇ ಅಡಿಗೆ ಮನೆ ಸಂದಿ ಮೂಲೇನೆಲ್ಲಾ ಹುಡುಕಿದ್ಲು. ದಡಾ ಬಡಾ ಸದ್ದು ಮಾಡಿದ್ಲು, ಸರಾಪರಾ ಸದ್ದು ಮಾಡಿದ್ಲು. ಅಡುಗೆ ಮನೆಯಿಂದ ಕೊತಾಕೊತಾ ಸದ್ದು ...

 • 3 days ago No comment

  ವಸಂತದ ನೆನಪು; ಮಾಗುವ ಹುರುಪು!

    ಜಗತ್ತಿನ ಬಗ್ಗೆ ತಿಳಿಯುತ್ತ ಸಾಗಿ, ನಮಗೆ ಈ ಜಗತ್ತು ಹೀಗೆ ನಡೆಯುತ್ತಿದೆ ಅಂತ ಅರಿತುಕೊಳ್ಳುವವರೆಗಿನದು ಮಧ್ಯವಯಸ್ಸಿನ ಕಾಲ. ನಾವು ಅಲ್ಲಿಯವರೆಗೆ, ಕಲಿತದ್ದು, ಕೇಳಿದ್ದು, ನಮಗೆ ತಿಳಿದಿದ್ದು ಎಲ್ಲವೂ ಬದಲಾಗುವ ವೇಳೆಗೆ ನಮಗೆ ವಯಸ್ಸಾಗಿಬಿಟ್ಟಿರುತ್ತದೆ. ಕಾಲದಲ್ಲಿ ಹೊಸ ಚಿಗುರು ಟಿಸಿಲೊಡೆದಿರುತ್ತದೆ.     ಕುಣಿದಾಡುವಷ್ಟು ಚೈತನ್ಯವಿರುವ ಯೌವನಕ್ಕೂ, ಕುಂದಿದ ಶಕ್ತಿಯ ಇಳಿಗಾಲದ ವೃದ್ಧಾಪ್ಯಕ್ಕೂ ನಡುವೆ ಬರುವುದು ಮಧ್ಯವಯಸ್ಸು! ಹುಟ್ಟು, ಬದುಕು ,ಸಾವು ಎಲ್ಲರಿಗೂ ಬರುತ್ತದೆ. ಬದುಕನ್ನು ಹಲವರು ಸಾಧನೆಗಳ ...

 • 3 days ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ಬಂಗಾರದ ಹೊಳಪು, ಬೇಗುದಿಯ ನೆನಪು…

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...

 • 1 week ago No comment

  ಪ್ರಸಾದ್ ನಾಯ್ಕ್ ಪಟ್ಟಾಂಗ | ನನಗೂ ಒಬ್ಬ ಗೆಳೆಯ ಬೇಕು…

  ಆ ಘಟನೆಯನ್ನು ನೆನಪಿಸಿಕೊಂಡಾಗಲೆಲ್ಲಾ ಈಗಲೂ ನಗು ಉಕ್ಕುಕ್ಕಿ ಬರುತ್ತದೆ. ಅಂದು ವಿಚಿತ್ರ ಘಟನೆಯೊಂದು ನಡೆದಿತ್ತು. ಅವು ನನ್ನ ಕಾಲೇಜಿನ ದಿನಗಳು. ಮಂಗಳೂರಿನ ಶಾಪಿಂಗ್ ಮಾಲ್ ಒಂದಕ್ಕೆ ಮಧ್ಯಾಹ್ನದ ಊಟಕ್ಕೆಂದು ಬಂದಿದ್ದ ನಾನು ಫುಡ್ ಕೋರ್ಟಿನಲ್ಲಿ ಸುಮ್ಮನೆ ಅಡ್ಡಾಡುತ್ತಿದ್ದೆ. ಎತ್ತ ಹೋಗಬೇಕೆಂದು ತಿಳಿಯದೆ ಸುಮ್ಮನೆ ಒಂದು ಕೌಂಟರಿನತ್ತ ನಡೆದು ಬೇಕಿದ್ದದ್ದನ್ನು ಆರ್ಡರ್ ಮಾಡಿದೆ. ಕೆಲಸವಿಲ್ಲದೆ ನೊಣ ಹೊಡೆಯುತ್ತಿದ್ದ ಆ ಹೆಂಗಸಿಗೆ ನನ್ನ ಆಗಮನವು ಅಂಥಾ ಉತ್ಸಾಹವೇನೂ ತರಲಿಲ್ಲವಾದರೂ ನಾನು ಹೇಳಿದ್ದನ್ನೆಲ್ಲಾ ...

 • 1 week ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ಭಕ್ತಿಯ ಉಬ್ಬರ… ವ್ಯಾಪಾರದ ಸಡಗರ…

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...


Editor's Wall

 • 11 May 2018
  1 month ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  1 month ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  2 months ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  2 months ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  2 months ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...