Share

ಸ್ವೀಟೂ… ಸಿಂಪಲ್ಲೂ…
ಪ್ರಸಾದ್ ನಾಯ್ಕ್ ಕಾಲಂ

ash

ದಿನ ಮುದ್ದಾದ ಪತ್ರಿಕೆಯೊಂದು ನನ್ನ ಕೈಸೇರಿತ್ತು.

ಕಳೆದ ವಾರ ನವದೆಹಲಿಯಿಂದ ಇಥಿಯೋಪಿಯಾದ ಅಡಿಸ್-ಅಬಾಬಾ ಮಾರ್ಗವಾಗಿ ಬಂದು ನಮ್ಮ ಕಾರ್ಯಾಲಯಕ್ಕೆ ಭೇಟಿಯಿತ್ತಿದ್ದ ಹಿರಿಯ ಅಧಿಕಾರಿಯೊಬ್ಬರು ಪತ್ರಿಕೆಯೊಂದನ್ನು ನನ್ನ ಕೈಯಲ್ಲಿರಿಸಿದ್ದರು. ಇದನ್ನೊಮ್ಮೆ ಓದಿ ನೋಡಿ ಎಂದು ಹೇಳಿ ನನ್ನ ಕೈಯಲ್ಲಿಟ್ಟಿದ್ದರಷ್ಟೇ. ಇಥಿಯೋಪಿಯಾದಲ್ಲಿ ಪ್ರಕಟವಾಗುತ್ತಿರುವ ಆಂಗ್ಲಭಾಷೆಯ ಪತ್ರಿಕೆಯೆಂಬ ಆಸಕ್ತಿಯಿಂದ ಪತ್ರಿಕೆಯ ಮುಖಪುಟದೆಡೆಗೆ ಕಣ್ಣಾಡಿಸಿದ್ದೆ.

ಪತ್ರಿಕೆಯ ಮುಖಪುಟದಲ್ಲಿ ಕಂಗೊಳಿಸುತ್ತಿದ್ದಿದ್ದು ಅಲ್ಮಾಝ್ ಅಯಾನಾಳ ಮುದ್ದು ಮುಖ. ರಿಯೋ ಅಂಗಳದಲ್ಲಿ ಅಥ್ಲೆಟಿಕ್ಸ್ ನ ಹತ್ತು ಸಾವಿರ ಮೀಟರ್ ಮಹಿಳೆಯರ ವಿಭಾಗದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡ ಇಥಿಯೋಪಿಯನ್ ಓಟಗಾರ್ತಿ ಅಯಾನಾ. ಇದರೊಂದಿಗೇ ಹೊಸ ವಿಶ್ವದಾಖಲೆಯೊಂದನ್ನೂ ಇಪ್ಪತ್ತನಾಲ್ಕರ ಅಯಾನಾ ತನ್ನ ಹೆಸರಿನಲ್ಲಿ ಬರೆದುಕೊಂಡವಳು. ಈ ಪದಕವು ಆಫ್ರಿಕಾದ ಪಾಲಿಗೂ, ಇಥಿಯೋಪಿಯಾದ ಪಾಲಿಗೂ ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ದೊರೆತ ಮೊದಲ ಚಿನ್ನದ ಪದಕ ಎಂಬುದನ್ನು ಹೇಳಲೇಬೇಕು.

ಪತ್ರಿಕೆಯನ್ನು ತೆಗೆದುಕೊಂಡ ನಾನು ಅಯಾನಾಳ ಗೆಲುವಿನ ನಗುವನ್ನು ನೋಡಿ ಪುಳಕಗೊಳ್ಳುತ್ತಾ ‘ಕ್ಯಾಚ್ ಮೀ ಈಫ್ ಯೂ ಕ್ಯಾನ್’ ಎಂಬ ಉಪಶೀರ್ಷಿಕೆಯುಳ್ಳ ಆ ವರದಿಯನ್ನು ಓದಿ ಮುಗಿಸಿದೆ. ವರದಿಯನ್ನು ಓದುತ್ತಾ ನನ್ನನ್ನು ದಂಗಾಗಿಸಿದ್ದು ವರದಿಯಲ್ಲಿ ಬಳಸಲಾದ ಆಂಗ್ಲ ಭಾಷೆ. ಆಂಗ್ಲಭಾಷೆಯ ಯಾವುದೇ ಆಡಂಬರದ ಶಬ್ದಗಳಿಲ್ಲದೆ ಅಯಾನಾಳ ಗೆಲುವಿನ ಸಿಹಿಸುದ್ದಿಯನ್ನು ನಿರೂಪಿಸಿದ್ದ ಆ ವರದಿಯು ಆ ಚಿನ್ನದ ಪದಕವು ಇಥಿಯೋಪಿಯಾದ ಪಾಲಿಗೆ ಅದೆಷ್ಟು ಮುಖ್ಯವಾಗಿದ್ದೆಂಬುದನ್ನು ವಿವರಿಸಿತ್ತು. ಆವೃತ್ತಿಯ ಮುಖ್ಯ ವರದಿಯಾದರೂ ಇತಿಮಿತಿಯ ಮತ್ತು ಸರಳವಾದ ಶಬ್ದಗಳಲ್ಲಿ ಚೊಕ್ಕದಾಗಿ ಮೂಡಿಬಂದ ವರದಿಯು ಅದಾಗಿತ್ತು.

ಸಣ್ಣಕಥೆಯಂತೆ ಸೊಗಸಾಗಿ ಓದಿಸಿಕೊಂಡು ಹೋಗುವ ಆ ವರದಿಯನ್ನು ಓದಿ ನಿಜಕ್ಕೂ ಅಚ್ಚರಿಪಟ್ಟಿದ್ದೆ. ಕ್ಲಿಷ್ಟಕರ ಶಬ್ದಗಳ ಹಂಗಿಲ್ಲದೆ, ಹೇಳಬೇಕಾಗಿರುವುದನ್ನು ಸರಳವಾಗಿ ಪ್ರಸ್ತುತಪಡಿಸಿ ಸಾಮಾನ್ಯ ಓದುಗನೊಬ್ಬನಿಗೆ ಅರ್ಥವಾಗುವಂತೆ, ಜೊತೆಗೇ ಓದಿನ ಖುಷಿಯನ್ನೂ ಕೊಡುವಂತೆ ಬರುವ ಆಂಗ್ಲಭಾಷೆಯ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗುವುದು ವಿರಳ. ಆಂಗ್ಲಭಾಷೆಯಲ್ಲಿ ತಕ್ಕಮಟ್ಟಿನ ಹಿಡಿತವಿಲ್ಲದಿದ್ದರೆ ಸಾಮಾನ್ಯವಾಗಿ ಶಬ್ದಕೋಶದ ಜೊತೆಗೇ ಕುಳಿತುಕೊಂಡು ಇಂಗ್ಲಿಷ್ ಪತ್ರಿಕೆಗಳನ್ನು ಓದಬೇಕಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ. ಆಂಗ್ಲಭಾಷೆಯನ್ನು ಕಲಿಯಲು ಒದ್ದಾಡುತ್ತಿರುವ ವಿದ್ಯಾರ್ಥಿಗಳಿಗೆ ‘ಇಂಗ್ಲಿಷ್ ಪತ್ರಿಕೆಯನ್ನು ಓದಿ ಶಬ್ದಭಂಡಾರವನ್ನು ಹೆಚ್ಚಿಸಿಕೊಳ್ಳಿ’ ಎಂದು ಕೊಡಲಾಗುವ ಉಪದೇಶವನ್ನು ನಾನೂ ಕೇಳುತ್ತಲೇ ಬಂದಿದ್ದೇನೆ. ಹೀಗಾಗಿ ಸಹಜವಾಗಿಯೇ ಈ ಪತ್ರಿಕೆಯ ಭಾಷಾ ಬಳಕೆಯು ನನ್ನ ಹುಬ್ಬೇರಿಸಿತ್ತು. ಪತ್ರಿಕೆಯನ್ನು ನನ್ನ ಕೈಯಲ್ಲಿರಿಸಿದ ಆ ಹಿರಿಯ ಅಧಿಕಾರಿಗೆ ಧನ್ಯವಾದವನ್ನು ಹೇಳಿ ಇದನ್ನು ಪೂರ್ತಿಯಾಗಿ ಓದಿಯೇ ಮರಳಿಸುವೆನೆಂದು ವಿನಂತಿಸಿಕೊಂಡಾಗ ಅವರು ಸಮ್ಮತಿಯನ್ನಿತ್ತಿದ್ದರು.

ಇದು ‘ದ ಡೈಲಿ ಮಾನಿಟರ್’ ಪತ್ರಿಕೆಯೊಂದಿಗೆ ನನಗಾದ ಲವ್ ಅಟ್ ಫಸ್ಟ್ ಸೈಟ್. ಹಸಿರು ಬಣ್ಣದಲ್ಲಿ ಮುದ್ರಿತವಾದ ‘ದ ಡೈಲಿ ಮಾನಿಟರ್’ ಎಂಬ ಹೆಸರೊಂದನ್ನು ಬಿಟ್ಟು ಉಳಿದದ್ದೆಲ್ಲವೂ ಇಲ್ಲಿ ಕಪ್ಪುಬಿಳುಪು. ಆದರೆ ಪ್ರಸ್ತುತಪಡಿಸುವ ರೀತಿಯೋ ಬಲು ಆಕರ್ಷಕ. ಅಕ್ಷರಗಳ ಗಾತ್ರ ಮತ್ತು ವಾಕ್ಯಗಳ ನಡುವಿನ ಅಂತರದಲ್ಲಿ ಅದೇನೋ ನಾಜೂಕುತನ. ಮುಖಪುಟ ಲೇಖನದಲ್ಲಿ ನನ್ನನ್ನು ಆಕರ್ಷಿಸಿದ ಸರಳ ಆಂಗ್ಲಭಾಷೆಯು ಪತ್ರಿಕೆಯ ಹದಿನಾರು ಪುಟಗಳಲ್ಲೂ ಮುಂದುವರಿದಿದ್ದು ವಿಶೇಷ. ಇಥಿಯೋಪಿಯಾ ಮತ್ತು ಸುತ್ತಮುತ್ತಲ ದೇಶಗಳ ಕೆಲ ಸುದ್ದಿಯನ್ನೇ ಪ್ರಸ್ತುತಪಡಿಸಿದ್ದರೂ ಇಲ್ಲೂ ಒಂದೆರಡು ವಿಶೇಷ ಲೇಖನಗಳಿವೆ, ಜಾಹೀರಾತುಗಳಿವೆ, ಇಥಿಯೋಪಿಯಾ, ಆಫ್ರಿಕಾ ಸಂಬಂಧಿ ಸುದ್ದಿಗಳು ಮತ್ತು ಕ್ರೀಡಾ ವರದಿಗಳಿವೆ. ಸಾಲದ್ದಕ್ಕೆ ವ್ಯಂಗ್ಯಚಿತ್ರ, ದಿನಭವಿಷ್ಯ ಮತ್ತು ನಗೆಚಟಾಕಿಗಳೂ ಇಲ್ಲಿವೆ. ಆದರೆ ಡೈಲಿ ಮಾನಿಟರ್ ನ ಫಾರ್ಮುಲಾ ಒಂದೇ: ‘ಸರಳ ಮತ್ತು ಸುಲಲಿತ ಭಾಷೆ’.

ಅಸಲಿಗೆ ವರದಿಯನ್ನಾಗಲೀ, ಲೇಖನವನ್ನಾಗಲೀ ಸರಳವಾಗಿ ಬರೆಯುವುದೇ ಒಂದು ಕಲೆ. ಇಪ್ಪತ್ತು ಪದಗಳಲ್ಲಿ ಹೇಳಬಹುದಾದ ವಾಕ್ಯವೊಂದನ್ನು ‘ಶಾರ್ಪ್’ ಆಗಿ ಹತ್ತೇ ಪದದಲ್ಲಿ ಪ್ರಸ್ತುತಪಡಿಸುವಂತಹ ವಾಕ್ಯರಚನೆಯನ್ನು ಮಾಡುತ್ತೇನೆ ಎಂದ ಮಾತ್ರಕ್ಕೆ ಅದು ಓದುಗನೊಬ್ಬನನ್ನು ಸೆಳೆಯಬಲ್ಲದು ಎಂಬ ಖಾತ್ರಿಯೇನೂ ಇಲ್ಲ. ಕೊನೆಗೂ ಅದು ಲೇಖಕನ ನಿರೂಪಣಾ ಶೈಲಿಯ ಮೇಲೆಯೇ ಅವಲಂಬಿತವಾಗಿರುವಂಥದ್ದು. ಅಂಕಣವೊಂದನ್ನು ಬರೆಯುವಾಗ ಡೆಡ್-ಲೈನುಗಳ ಕನವರಿಕೆಯೊಂದಿಗೆ ಪದಮಿತಿಯಲ್ಲಿ ಬರೆಯುವುದೂ ಕೂಡ ಒಂದು ಸವಾಲು. ಅದರಲ್ಲೂ ಪತ್ರಿಕೋದ್ಯಮದ ಹಿನ್ನೆಲೆಯಿಲ್ಲದ ನನ್ನಂತಹ ಹವ್ಯಾಸಿ ಬರಹಗಾರರಿಗಂತೂ ಇವುಗಳು ಮತ್ತಷ್ಟು ಚಾಲೆಂಜಿಂಗ್. ಸುದ್ದಿಮನೆಗಳ ಕೌತುಕಮಯ ಕಥೆಗಳನ್ನು ಎಲ್ಲೆಲ್ಲಿಂದಲೋ ಕೇಳಿ ಹೀಗೂ ಉಂಟೇ ಎಂದು ಕಣ್ಣರಳಿಸಿಯೇ ವಿಚಾರಗಳನ್ನು ತಿಳಿದುಕೊಳ್ಳಬೇಕಾದ ಅನಿವಾರ್ಯತೆ. ಅಂದಹಾಗೆ ಅಂತರ್ಜಾಲ ಪತ್ರಿಕೆಗಳನ್ನು ನಡೆಸುವುದೂ ಕೂಡ ಸಾಮಾನ್ಯ ಪತ್ರಿಕೆಗಳಂತೆಯೇ ಬಹುತ್ರಾಸದಾಯಕ ಕೆಲಸ ಎಂಬುದು ಇತ್ತೀಚೆಗಷ್ಟೇ ನನಗಾದ ಜ್ಞಾನೋದಯ.

ಅದೇನೇ ಇರಲಿ. ಇಥಿಯೋಪಿಯಾದ ಈ ಪತ್ರಿಕೆಯು ಓದುಗನ ನಾಡಿಮಿಡಿತವನ್ನು ಚೆನ್ನಾಗಿಯೇ ಕಂಡುಕೊಂಡಂತಿದೆ. ‘ದ ಡೈಲಿ ಮಾನಿಟರ್’ನ ಒಳಪುಟಗಳ ತಳಭಾಗದಲ್ಲಿ ಸ್ಪಷ್ಟವಾಗಿ ಕೊಡಲಾಗಿರುವ ಸೂಚನೆಯೂ ಇದನ್ನೇ ಹೇಳುತ್ತದೆ: ‘ದ ಡೈಲಿ ಮಾನಿಟರ್ ಸರಳವಾದ ಭಾಷೆಯಲ್ಲಿರುವ ಲೇಖನಗಳನ್ನಷ್ಟೇ ಪ್ರಕಟಪಡಿಸುತ್ತದೆ. ಪತ್ರಿಕೆಗೆ ಕಳುಹಿಸುವ ಲೇಖನ/ವರದಿಗಳು ಸಾಮಾನ್ಯ ಓದುಗನನ್ನು ತಲುಪುವಂಥದ್ದಾಗಿರಲಿ.’

‘ದ ಪೇಪರ್ ದ್ಯಾಟ್ ಎನ್ಲೈಟನ್ಸ್’ ಎನ್ನುವ ಉಪಶೀರ್ಷಿಕೆಯನ್ನು ಹೊತ್ತ ಡೈಲಿ ಮಾನಿಟರ್ ಪತ್ರಿಕೆಯು ಇಟ್ಟಿರುವ ಸಾಮಾನ್ಯ ಓದುಗನೆಡೆಗಿನ ಅಪರೂಪದ ಕಾಳಜಿಯು ಹೀಗೆಯೇ ಮುಂದುವರಿಯಲಿ. ಓದುವಿಕೆಯು ಎಂದಿನಂತೆ ಎಲ್ಲರಿಗೂ ಖುಷಿಕೊಡಲಿ.

———

ಪ್ರಸಾದ್ ನಾಯ್ಕ್

Prasadಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರಾದ ಪ್ರಸಾದ್ ನಾಯ್ಕ್ ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿಯನ್ನು ಪಡೆದವರು. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತಕ್ಕಮಟ್ಟಿಗೆ ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

6 Comments For "ಸ್ವೀಟೂ… ಸಿಂಪಲ್ಲೂ…
ಪ್ರಸಾದ್ ನಾಯ್ಕ್ ಕಾಲಂ
"

 1. ವಿಮಲಾ ನಾವಡ
  27th August 2016

  ಚೆನ್ನಾಗಿಯೇ ಇದೆ ನಿಮ್ಮ ಬರಹ,ಅಭಿನಂದನೆಗಳು.

  Reply
  • Prasad
   29th August 2016

   ಧನ್ಯವಾದಗಳು ವಿಮಲಾರವರೇ… ಹ್ಯಾಪೀ ರೀಡಿಂಗ್…

   Reply
 2. vasudev nadig
  27th August 2016

  ಅಬ್ಬ ಪ್ರಸಾದ್ ದಕ್ಷಿಣ ಆಫ್ರಿಕಾದಲ್ಲಿ ಇದೀರ? ನಿಮ್ಮ ಬರಹ ಕೂಡಾಸರಳ ಮತ್ತು ನಿರಾಡಂಬರ

  Reply
  • Prasad
   29th August 2016

   ನಾಡಿಗ್ ಸರ್ ಧನ್ಯವಾದಗಳು… ನಿಮ್ಮೆಲ್ಲರ ಪ್ರತಿಕ್ರಿಯೆಗಳೇ ಬರಹಗಳಿಗೊಂದು ಶಕ್ತಿ…

   Reply
 3. Deepa hiregutti
  31st August 2016

  Baraha vishaya eraDoo chennagive. Keep going.

  Reply
  • Prasad
   2nd September 2016

   Thank you Deepa ji…

   Reply

Leave a comment

Your email address will not be published. Required fields are marked *

Recent Posts More

 • 13 hours ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 week ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 2 weeks ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...

 • 2 weeks ago No comment

  ಕಲರವ | ಒಂದು ಸಿನಿಮಾ ನೋಡಿದ ಕಥೆ…

      ಕಲರವ           “ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು” ಎಂದಳು ಭಾರತದ ನನ್ನ ಅಕ್ಕ. “ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ಫೈಟಿಂಗ್ ಗಳ ಚಲನಚಿತ್ರವನ್ನು ನೋಡುವುದೆಂದರೆ, ‘ನೋಡಿದ್ದನ್ನೇ ನೋಡುವ’ ಕಷ್ಟ. ವೈಚಾರಿಕ ಸಿನಿಮಾಗಳು ಜಾಸ್ತಿ ಓಡದ ಕಾಲವಿದು. ಇನ್ನು ಸಾಂಸಾರಿಕ ಚಿತ್ರಗಳು ಬರುವುದು ನಿಂತ ಮೇಲೆ ಸಂಸಾರಗಳು ಒಟ್ಟಿಗೆ ...

 • 3 weeks ago No comment

  ಕವಿಸಾಲು | ಅಲೆಗಳೆದ್ದ ಕೊಳ…

      ಕವಿಸಾಲು         ಅಲೆಗಳೆದ್ದ ಕೊಳವಿದು, ಕಲ್ಲು ತೂರಿದ ಕಾಯಕವಷ್ಟೇ ನಿನ್ನದು ಎದ್ದ ಅಲೆಗಳ ಮೇಲಿಲ್ಲ ನಿನಗೆ ಇನಿತು ಅಧಿಕಾರವು ದೂರಿಲ್ಲ ನನ್ನಲ್ಲಿ, ಬೇಡಿಕೆ ತಾನೇ ಏಕೆ? ತುಂಬಿದ ಮನದಿ ಹೊಕ್ಕ ಹರ್ಷಕೆ ಪುರಾವೆಗಳ ಹಂಗಿಲ್ಲ, ನಕ್ಕ ನಗುವಿನಲಿ ನೋವಿಲ್ಲ, ತುಂಬಿವೆ ನೂರು ಭಾವಾರ್ಥ ಮುಚ್ಚಟೆಯಿಂದ ಬಚ್ಚಿಟ್ಟುಕೊಂಡು ಬೇಕಾದ ಪರಿಭಾಷೆಯಲಿ ದಿರಿಸಿಟ್ಟು ಸಿಂಗರಿಸಿ ನೋಡುತ್ತ ನಿನ್ನ ಅನುಪಸ್ಥಿತಿಯಲ್ಲೂ ಸಿಗುವ ಅನುಪಮ ಭಾವದಿ ದೊರಕಿದ್ದು ...


Editor's Wall

 • 31 August 2018
  3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  3 weeks ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  4 weeks ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  4 weeks ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  1 month ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...