Share

ಸ್ವಂತ ಮನೆಯ ಗೋಡೆ
ಸುಧಾ ಶರ್ಮ ಚವತ್ತಿ ಕಾಲಂ

sudhaಕಲರವ | kalarava

 

ಧ್ಯವಯಸ್ಸಿನ ಕಲೆ, ಸಂಗೀತ, ಸಾಹಿತ್ಯ, ಆಧ್ಯಾತ್ಮ ಹೀಗೆ ಹಲವು ವಿಷಯಗಳಲ್ಲಿ ಅಪಾರ ಆಸಕ್ತಿ, ಪ್ರೀತಿ ಇರುವ; ಉತ್ತಮವಾಗಿ ಮಾತನಾಡುವ; ಅಷ್ಟೇ ಸಜ್ಜನರೂ ಆಗಿರುವ ಮಾಧವ ರಾಯರು ಬಾಡಿಗೆಗೆ ಮನೆ ಹುಡುಕುತ್ತಿದ್ದರು. ಈಗ ಬೆಂಗಳೂರಿನಲ್ಲಿ ಬಾಡಿಗೆಗೆ ಯಾರಾದ್ರೂ ಬಂದರೆ ಸಾಕು ಎನ್ನುವಷ್ಟು ಬಾಡಿಗೆ ಮನೆಗಳು ಖಾಲಿ ಇವೆ. ಬ್ಯಾಂಕ್ ಸಾಲ ಪಡೆದು ಮನೆ ಮೇಲೆ ಮನೆ ಕಟ್ಟಿ ಬಾಡಿಗೆಗೆ ಕೊಡುವ ಧಾವಂತದಲ್ಲಿರುವುದರಿಂದ ಎಲ್ಲೆಡೆಗೂ ಈಗ ಮನೆ ಖಾಲಿ ಇದೆ ಎನ್ನುವ ಮಾತು. ಈಗ ಬಾಡಿಗೆಯವರ ಕಾಲ. ಇದು ಒಂಥರಾ ಎಲ್ಲರೂ ಟೊಮೆಟೋ ಬೆಳೆದ ಹಾಗೆ. ಒಬ್ಬರು ಕಟ್ಟಿಸಿದರು ಅಂತಾ ಇನ್ನೊಬ್ಬರು. ಬಾಡಿಗೆ ಮನೆ ಹುಡುಕುವ ಸಂದರ್ಭ ನಿಮಗೆ ಎದುರಾಗದಿದ್ದರೆ ನೀವು ನಿಜಕ್ಕೂ ಅದೃಷ್ಟ ವಂಚಿತರೇ. ಬಾಡಿಗೆ ಮನೆ ಹುಡುಕುತ್ತ ಹೋದಾಗ ಬಾಡಿಗೆ ಕೊಡುವವರ ಲೆಕ್ಕಾಚಾರಕ್ಕೆ ಬೆರಗಾಗುತ್ತೇವೆ. ಇದೊಂದು ಥರಾ ಕಾಗಣ್ಣ ಗುಬ್ಬಣ್ಣನ ಕಥೆ ಇದ್ದ ಹಾಗೆ. ಆ ಕಥೆಯಲ್ಲಿ ಬರುವಂತೆ ಕಲ್ಲಿದ್ದರೆ ನೀರಿಲ್ಲ. ನೀರಿದ್ದರೆ ಕಲ್ಲಿಲ್ಲ ಎನ್ನುವಂತೆ. ಎರಡು ಬೆಡ್ ರೂಂ ಮನೆ ಅಂದರೆ ಲೆಕ್ಕಕ್ಕೆ ಎರಡು ರೂಮಿದ್ದರೆ ಸಾಕು. ಬಳಸುವ ಹಾಗಿದೆಯಾ ಇಲ್ಲವಾ? ಅದು ಅವರಿಗೆ ಸಂಬಂಧಿಸಿಲ್ಲ. ಹೀಗೆ ಮನೆ ಹುಡುಕುವುದು ಒಂದು ವಿಚಿತ್ರ ಅನುಭವ ಆಯಿತು. ಅಬ್ಬಾ ಒಂದಿದ್ದರೆ ಒಂದಿಲ್ಲ. ಯಾವುದೂ ಸರಿ ಬರುತ್ತಿಲ್ಲ. ಎಲ್ಲ ಸರಿ ಇದೆ ಎಂದಾಗ ಮನೆಯ ಮಾಲೀಕರು ಸರಿ ಇಲ್ಲ. ಕೊನೆಗೆ ಏನೋ ಒಂದು ಮನೆ ಸಿಕ್ಕರೆ ಸಾಕು ಅಡ್ಜಸ್ಟ್ ಮಾಡಿಕೊಳ್ಳೋಣ. ಇಷ್ಟಕ್ಕೂ ಇದು ಸ್ವಂತ ಮನೆ ಅಲ್ಲವಲ್ಲಾ. ಸ್ವಂತ ಮನೆಯನ್ನ ನಮಗೆ ಹೇಗೆ ಬೇಕೋ ಹಾಗೆ ಕಟ್ಟಿಕೊಂಡರಾಯಿತು. ಈ ರೀತಿ ಮನೆಯಲ್ಲಿ ಹೆಂಡತಿ ಮಕ್ಕಳಿಗೆ ಹೇಳಿ ಸಮಾಧಾನಿಸುವುದು. ಕನಸನ್ನು ಎದುರಿಗಿಟ್ಟುಕೊಂಡು ಸುಖಿಸುವುದು. ಇವತ್ತಿನ ಕಿರಿಕಿರಿಯನ್ನು ದಾಟುವುದು.

ಮಾಧವರಾಯರ ಮನೆ ಹುಡುಕುವ ಕೆಲಸ ನಡೆದೇ ಇತ್ತು. ಒಂದಿನ ಮಾಧವ ರಾಯರು ಫೋನ್ ಮಾಡಿ “ನಾನು ಬಾಡಿಗೆ ಮನೆ ಬದಲು ಈಗ ಲೀಸ್ ಗೆ ಮನೆ ಹುಡುಕುತ್ತಿದ್ದೇನೆ” ಎಂದರು. ಬಾಡಿಗೆಗೆ ಪ್ರತಿ ತಿಂಗಳು ಕೊಡಬೇಕಲ್ಲಾ, ಕೊಟ್ಟ ಹಣ ಹರಿದು ಹೋಗುವ ನೀರಿನಂತೆ. ಅದಕ್ಕೆ ಭೋಗ್ಯಕ್ಕೆ ಮನೆ ಪಡೆದರೆ ನಾವು ಮನೆ ಬಿಡುವಾಗ ಹಣ ಇರತ್ತಲ್ಲಾ? ಲೆಕ್ಕಾಚಾರ ಚೆನ್ನಾಗಿದೆ ಮಾಧವ ರಾಯರೇ. ಆದರೆ 10 -15 ಲಕ್ಷ ಇಲ್ಲದೇ ಲೀಸ್ ಗಾದರೂ ಮನೆ ಎಲ್ಲಿ ಸಿಗತ್ತೆ? ಓ ಅದಕ್ಕೇನಂತೆ ಸಾಲ ಮಾಡಿದರಾಯಿತು. ನೋಡಿ ಪ್ರತಿ ತಿಂಗಳು ಬಾಡಿಗೆ ಕೊಡುವ ಬದಲು ಸಾಲಕ್ಕೆ ಕಂತು ಅಂತಾ ಕಟ್ಟತೀನಿ ಅಂದರು. ಅಬ್ಬಾ ಏನ್ ಸರ್ ನಿಮ್ಮ ಐಡಿಯಾ ಅಂತಾ ಮೆಚ್ಚಿದ್ದೂ ಆಯಿತು ಈಗ ಅವರು ಲೀಸ್ ಗೆ ಮನೆ ಹುಡುಕಿದ್ದೂ ಆಯಿತು. ಆದರೂ ಲೀಸ್ ಗೆ ಮನೆ ಕೊಡುವವರ ಸಂಖ್ಯೆ ಕಡಿಮೆಯೇ. ಸರಿಯಾದ ಮನೆ ಆಗಲೂ ಸಿಗಲಿಲ್ಲ. ಮಾಧವ ರಾಯರು ಮತ್ತೊಂದು ಐಡಿಯಾ ಇಟ್ಟುಕೊಂಡು ಮನೆಗೆ ಬಂದರು. ನಾನು ಮನೆ ಹುಡುಕಿ ಸೋತುಹೋದೆ. ಯಾಕೆ ಸ್ವಂತಕ್ಕೆ ಒಂದು ಅಪಾರ್ಟಮೆಂಟ್‍ ತಗೋಬಾರದು ಅಂತಿದೀನಿ ಅಂದರು. ಬಹಳ ಒಳ್ಳೆಯದು ಸರ್. ಖಂಡಿತ ಅಪಾರ್ಟಮೆಂಟ್ ತಗೋಳಿ ಆದರೆ ಅಷ್ಟೆಲ್ಲ ದುಡ್ಡು. ಏನಿಲ್ಲ ಲೀಸ್ ಗೆ ಕೊಡೋಕೆ ಸಾಲ ಮಾಡತೀನಲ್ಲ ಸ್ವಲ್ಪ ಜಾಸ್ತಿ ಮಾಡಿದರಾಯಿತು. ಅವರು ಅಪಾರ್ಟಮೆಂಟ್ ಕೊಂಡ ಹಾಗೆ ನಾವೆಲ್ಲ ಅದರ ಗೃಹಪ್ರವೇಶಕ್ಕೆ ಓಡಾಡಿದಂತೆ, ಗೃಹಪ್ರವೇಶಕ್ಕೆ ಯಾರ್ಯಾರನ್ನು ಕರೆಯಬೇಕೆಂದು ಪಟ್ಟಿಮಾಡೊದು ಬಾಕಿ ಉಳಿದಿತ್ತು! ಸರಿ ಊರ ತುಂಬ ಸ್ನೇಹಿತರನ್ನು ಹೊಂದಿದ್ದ, ಸಮಾಜದಲ್ಲಿ ಸ್ವಲ್ಪ ಜನಪ್ರಿಯರೂ ಆಗಿದ್ದ ಮಾಧವ ರಾಯರಿಗೆ ಅಪಾರ್ಟಮೆಂಟ್ ಹುಡುಕುವುದಕ್ಕೆ ಹಲವರಿದ್ದರು. ಒಬ್ಬ ಡೆವಲಪರ್ ಸ್ನೇಹಿತನೂ ಇದ್ದ. ಅವನು ಒಂದು ಅಪಾರ್ಟಮೆಂಟ್ ತೋರಿಸಿ ನಿಮಗಾಗಿರೋದಕ್ಕೆ 50 ಲಕ್ಷಕ್ಕೇ ಮಾಡಿಕೊಡ್ತೀನಿ ಬೇರೆಯವರಿಗೆ 60 ಲಕ್ಷಕ್ಕಿಂತ ಕಡಿಮೆ ಇಲ್ಲ ಅಂದ. ಆಸ್ಪತ್ರೆಗಳಲ್ಲಿ ವೈದ್ಯರು ಕೆಲವೊಮ್ಮೆ ಹಾಗೆ ಹೇಳುತ್ತಾರೆ. ನನ್ನದೇನೂ ನಾನು ತಗೋಳ್ತಾ ಇಲ್ಲ. ಆದರೆ ಉಳಿದದ್ದು ಆಸ್ಪತ್ರೆಯವರ ವೆಚ್ಚ ನೋಡಿ ಎಂದು 200 ರೂಪಾಯಿ ಬಿಡುತ್ತೇವೆ. ಅಷ್ಟೊಂದು ಹಣ ಸಾಲ ಮಾಡುವುದಕ್ಕೆ, ಅದರಲ್ಲೂ ಈ ಮಧ್ಯ ವಯಸ್ಸಿನಲ್ಲಿ ಸಾಲವನ್ನು ಹೆಗಲಿಗೇರಿಸಿಕೊಳ್ಳುವುದಕ್ಕೆ ಮಾಧವರಾಯರು ಮುಂದಾಗಲಿಲ್ಲ. ಮನೆ ಹುಡುಕುತ್ತಲೇ ಹೇಳುತ್ತಿದ್ದಾರೆ “ಏನೇ ಆಗಲಿ ಇನ್ನು ಮುಂದಿನ ಸಾರಿ ಹೋಗುವುದು ಸ್ವಂತ ಮನೆಗೇ ಎಂದು ಮನಸಿನಲ್ಲಿ ನಿರ್ಧರಿಸಿಬಿಟ್ಟಿದೀನಿ”.

ನಾವೆಲ್ಲರೂ ಮಾಧವ ರಾಯರೇ! ಮಧ್ಯ ವಯಸ್ಸಿನಲ್ಲಿ ಬಾಡಿಗೆಗೆ ಮನೆ ಹುಡುಕುವುದು, ಮನೆ ಮಾಲೀಕರ ಎದುರು ಅವರು ಹೇಳುವ ಕಂಡೀಷನ್‍ಗೆ ತಲೆ ದೂಗುವುದು ಇವೆಲ್ಲವೂ ಹಿಂಸೆಯೆ. ಯಾಕೆ ಹೀಗಾಗತ್ತೆ? ಮಾತಿನಲ್ಲಿ ಮನೆ ಕಟ್ಟುತ್ತೇವೆ. ತುಂಬ ಸೊಗಸಾಗಿ ಸಮಸ್ಯೆಯನ್ನು, ವಿಶ್ಲೇಷಿಸುತ್ತೇವೆ. ಪರಿಹಾರ ಸೂಚಿಸುತ್ತೇವೆ. ಆದರೆ ಕಾರ್ಯರೂಪಕ್ಕೆ ಇಳಿಸುವ ಇಚ್ಛಾಶಕ್ತಿ ನಮಗಿಲ್ಲ. ಎಲ್ಲರ ಮನೆಯ ಕಥೆಯೂ ಇದೇ. ಮನೆ ಹುಡುಕುವಾಗ ಹೆಂಡತಿ ಗೊಣಗುತ್ತಾಳೆ. ಮಕ್ಕಳು ದೊಡ್ಡವರಾಗಿದ್ದರೆ ಮಕ್ಕಳೂ ಹೇಳುತ್ತಾರೆ.

“ನೋಡಿ ಯಾರ್ಯಾರೋ ಸ್ವಂತ ಮನೆ ಕಟ್ಟಿಸಿಕೊಂಡ್ರು ನೀವು ಮಾತ್ರ ಇನ್ನೂ ಹಾಗೆ ಇದ್ದೀರಿ. ಅಕ್ಕ ಪಕ್ಕದವರನ್ನಾ, ನೆಂಟರನ್ನಾ ಚಿಕ್ಕ ಪುಟ್ಟ ಹುಡುಗರ ಸಾಧನೆಗಳನ್ನಾ ಎತ್ತಿ ಎತ್ತಿ ಹೇಳಿ ಹಂಗಿಸಿದಾಗ ಭೂಮಿ ಬಾಯಿ ಬಿಡಬಾರದೆ ಅನ್ನಿಸಿದ್ದು ಸುಳ್ಳಲ್ಲ. ಮಾಧವ ರಾಯರು ದಡ್ಡರಲ್ಲ. ಕೆಲಸವೂ ಇಲ್ಲದವರಲ್ಲ. ಅವಕಾಶ ವಂಚಿತರೂ ಅಲ್ಲ. ಹತ್ತು ವರ್ಷಗಳ ಹಿಂದೆ ಕೇವಲ 1 ಲಕ್ಷಕ್ಕೆ ಸೈಟ್ ಸಿಕ್ತಿತ್ತು ಆಗ ತಗೋ ಬೇಕಿತ್ತು, ಇಲ್ಲಿ ಮನೆ ಕೇವಲ 3 ಲಕ್ಷಕ್ಕೇ ಇತ್ತು ಕೇಳಿದ್ರು ಆದರೆ ನಾನು ಆಗ ತಗೊಳ್ಲಿಲ್ಲ. ದುಡ್ಡು ಇತ್ತು, ಅದರೆ ನಮ್ಮ ಹಣೆಯಲ್ಲಿ ಬರೆಯಲಿಲ್ಲ ನೋಡಿ. ಇಂತಹ ಮಾತುಗಳು ಕ್ಲೀಷೆ ಆಗಿದೆ. ತಪ್ಪು ನಮ್ಮದೇ. ನಮಗೆ ಖಚಿತ ಗುರಿ ಇಲ್ಲ. ಸರಿಯಾದ ಯೋಜನೆ ಯೋಚನೆಗಳಿಲ್ಲ. ಮುಂದಿನ ದಿನಗಳ ಅಗತ್ಯವನ್ನು ಅರಿತು ವರ್ತಿಸುವ ಅತ್ಯಂತ ಸಾಮಾನ್ಯ ಜೀವನದ ತಿಳುವಳಿಕೆಯೂ ಇಲ್ಲ. ಧೈರ್ಯದಿಂದ ಮುನ್ನುಗ್ಗುವುದನ್ನು ಕಲಿತಿದ್ದರೂ ಹೀಗಾಗುತ್ತಿರಲಿಲ್ಲ. ಗೆಲ್ಲುವ ಹುರುಪು ಉಮೇದಿ ಮತ್ತು ವಿಶ್ವಾಸ ಇರಲಿಲ್ಲ. ನಾನು ಎಲ್ಲಿಗೆ ಹೋಗಬೇಕೆಂದು ನನಗೆ ಗೊತ್ತಿರದಿದ್ದರೆ ಸಿಕ್ಕಬಸ್ ಹತ್ತುತ್ತೇನೆ. ಕರೆದುಕೊಂಡು ಹೋದಲ್ಲಿಗೆ ಹೋಗಿ ಇಳಿಯುತ್ತೇನೆ. ಇಳಿದ ನಂತರ ಇಲ್ಲಿ ಬಂದೆನಾ ಎನ್ನುತ್ತೇವೆ. ಬಹಳಷ್ಟು ಸಂದರ್ಭದಲ್ಲಿ ಆಗುವುದೇ ಹೀಗೆ. ನಮ್ಮ ಆಲೋಚನೆಯಲ್ಲಿ, ನಮಗೇನು ಬೇಕೆಂಬುದರ ಖಚಿತತೆಯೇ ಮುನ್ನಡೆಸುವ ಮಾರ್ಗದರ್ಶಿಯೂ ಹೌದು. ಅದಿಲ್ಲದಿದ್ದರೆ ಹುಡುಕಿದ್ದೇ ಹುಡುಕುತ್ತೇವೆ. ನಿಂತಲ್ಲೇ ನಿಲ್ಲುತ್ತೇವೆ. ಬ್ರೋಕರ್ ತೋರಿದ ಬಾಡಿಗೆ ಮನೆಯ ಚೆಂದಕ್ಕೆ ಬೆರಗಾಗುವಂತೆ, ಅವನು ಹೊಗಳಿದ್ದನ್ನೇ ನಾವೂ ಹೌದೆನ್ನುತ್ತ ಇರುತ್ತೇವೆ. ನಮ್ಮ ನೆನಪುಗಳ, ಖುಷಿಗಳ ಫೋಟೋಗಳನ್ನು ನೇತುಬಿಡಲು ಸ್ವಂತ ಮನೆಯ ಗೋಡೆಗಳಿಗಾಗಿ ಕಾಯುತ್ತೇವೆ. ಧೂಳು ಹಿಡಿದ ಇಂತಹ ಚಿತ್ರಗಳನ್ನು ಪ್ರತಿ ಸಾರಿ ಮನೆ ಬದಲಿಸುವಾಗಲೂ ಒರೆಸುತ್ತೇವೆ.

ಮಧ್ಯ ವಯಸ್ಸಿನಲ್ಲಿ ಬಾಡಿಗೆ ಮನೆ ಹುಡುಕೋದು. ಮಕ್ಕಳ ಓದಿಗೆ ಹಣ ಹೊಂದಿಸೋದು, ಈಗ ಹೇಗಾದರೂ ಮಾಡಿ ಹಣ ಸಂಪಾದಿಸಲೇ ಬೇಕೆನ್ನುವುದು, ಜೀವನವನ್ನು ದುಡಿಯುವ ಅನಿವಾರ್ಯತೆಗೆ ಕಟ್ಟಿಹಾಕಿಕೊಳ್ಳುವುದು ಇವೆಲ್ಲವೂ ಮಧ್ಯಮವರ್ಗದ ಮಾಮೂಲು. ಪದೇ ಪದೇ ಬೇಸರಿಸುತ್ತ ಹೇಳುತ್ತೇವೆ ಟ್ರೇನ್ ಹೋದ ಮೇಲೆ ಟಿಕೇಟ್ ತಗೊಂಡೆ ಅಂತಾ. ಆದರೀಗ ಹಾಗೆ ಹೇಳುವ ಕಾಲವಲ್ಲ. ಅಯ್ಯೋ ಅದೀಗ ಬದಲಾಗಿದೆ. ಮೆಟ್ರೋ ಬಂದ ನಂತರ ಟೋಕನ್ ತಗೊಂಡುಬಿಡಿ ಬೇಕಾದ ಟ್ರೇನ್ ಹತ್ತಿದರಾಯಿತು. ತಪ್ಪಿ ಹೋದ ಟ್ರೇನ್ಗೆ ಪರಿತಪಿಸುವ ಬದಲು ನೆಮ್ಮದಿಯಿಂದ ಕುಳಿತುಕೊಳ್ಳುವ ಟ್ರೇನ್ ಹತ್ತುವುದಕ್ಕೆ ನಿಂತರಾಯಿತು.

—————-

ಸುಧಾ ಶರ್ಮಾ ಚವತ್ತಿ

286637_218799308166417_3412973_o[1]“ಒದ್ದೆ ಕಣ್ಣುಗಳ ಪ್ರೀತಿ” ಕವನ ಸಂಕಲನದ ಮೂಲಕ ಭರವಸೆ ಹುಟ್ಟಿಸಿದ ಸುಧಾ ಶರ್ಮಾ ಚವತ್ತಿ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ ಪರಿಣಿತರು. ಪತ್ರಿಕೆಗಳಲ್ಲಿ ಲೇಖನ, ಅಂಕಣಗಳ ಮೂಲಕ ಪರಿಚಿತರು. “ಆವಿಯಾಗಿದೆ ಮಾತು” (ಮಲ್ಲಿಗೆ), “ಷೇರೆಂಬ ಮಾಯಾಂಗನೆ” ( ವಿಜಯ ಕರ್ನಾಟಕ ), “ಪ್ರಾಫಿಟ್ ಪ್ಲಸ್” (ವಿಜಯವಾಣಿ) ಪ್ರಕಟಿತ ಅಂಕಣಗಳು. ಕಿರುತೆರೆ ಕಾರ್ಯರ್ಕಮಗಳ ನಿರ್ದೇಶನ, ನಿರ್ಮಾಣ, ನಿರೂಪಣೆಯ ಅನುಭವ. ಈಗ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಇವರು ಉತ್ತಮ ವಾಗ್ಮಿ. ಸಮೂಹ ಮಾತುಗಾರಿಕೆಯೂ ಇವರ ಉತ್ಕಟ ಪ್ರೀತಿಗಳಲ್ಲಿ ಒಂದು.

Share

Leave a comment

Your email address will not be published. Required fields are marked *

Recent Posts More

 • 9 hours ago No comment

  ಇಲ್ಲಿ ಶಬ್ದಗಳಿಗೂ ಚಳಿಗಾಲ

            | ಕಮಲಾದಾಸ್ ಕಡಲು       ಕಪ್ಪು ಜನಾಂಗ (For Cleo Pascal) ಕಮಲಾದಾಸ್ ಕವಿತೆಯ ಅನುವಾದ     ಈಗ ಕೆನಡಾದಲ್ಲಿ ಶರದೃತುವಿನ ಕಾಲ ಮೇಪಲ್ ಮರದ ಒಣಗಿದ ರಕ್ತದಂಥ ಕಡುಗೆಂಪು ಎಲೆಗಳು ಈ ವಾರದಂತ್ಯದವರೆಗೆ ಕೂಡ ಉಳಿಯಲಾರವು ನಾನು ಇಲ್ಲಿ ಎಲ್ಲರಿಗೂ ಕಾಣಿಸುತ್ತೇನೆ, ಅಲ್ಲಿಗಿಂತ ಇಲ್ಲಿ ಎದ್ದು ಕಾಣಿಸುತ್ತೇನೆ ಬಿಳಿಯ ದೇವರ ಲೋಕದಲ್ಲಿ ಕಾಲಿಟ್ಟ ಕಪ್ಪು ಜನಾಂಗದವರು ...

 • 1 day ago No comment

  ಇರಬಲ್ಲೆವಾ ಭಾವುಕರಾಗದೆ?

                Millions of people have decided not to be sensitive. They have grown thick skins around themselves just to avoid being hurt by anybody. But it is at great cost. Nobody can hurt them, but nobody can make them happy either. ನಿಜ, ಒಂದೇ ...

 • 3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 4 days ago No comment

  ಎರಡು ಕವಿತೆಗಳು

      ಕವಿಸಾಲು         ಸುನಾಮಿಯ ಊರಲ್ಲಿ ಗುಟ್ಟುಗಳ ರಟ್ಟು ಮಾಡದ ಒಡಲು ಸುನಾಮಿ ತವರಾದ ಕಡಲು ಒಳಗಿನ ಕತ್ತಲೆಯ ಕಳೆಯಲು ಹುಡುಕಿ ಹೊರಟವು ತಾವು ಕಳೆದುಕೊಂಡ ಕನಸುಗಳಷ್ಟೂ ಹಾವುಗಳು ಬಿಸಿಲಿಗೆ ಹೊರಳಿ ಪೊರೆ ಕಳಚಿ ನಚ್ಚಗಾದವು ಅದೇ ಕ್ಷಣದೊಳಗೆ ಅರಳಿಬಿರಿಯಬೇಕಿದ್ದ ಹೂವುಗಳು ಬಿಸಿಲ ಧಗೆಗೆ ಬೆಂದು ಬಾಡಿ ಉದುರಿಬಿದ್ದವು ನೆಲಕೆ ಶಬ್ದಗಳ ಮುಕ್ಕಳಿಸಿ ಉಗಿದ ರಭಸಕೆ ಊರ ತುಂಬಾ ನೆರೆ ಪರಿಹಾರದ ಗಂಜಿಕೇಂದ್ರಗಳಲಿ ...

 • 1 week ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...


Editor's Wall

 • 25 February 2018
  9 hours ago No comment

  ಇಲ್ಲಿ ಶಬ್ದಗಳಿಗೂ ಚಳಿಗಾಲ

            | ಕಮಲಾದಾಸ್ ಕಡಲು       ಕಪ್ಪು ಜನಾಂಗ (For Cleo Pascal) ಕಮಲಾದಾಸ್ ಕವಿತೆಯ ಅನುವಾದ     ಈಗ ಕೆನಡಾದಲ್ಲಿ ಶರದೃತುವಿನ ಕಾಲ ಮೇಪಲ್ ಮರದ ಒಣಗಿದ ರಕ್ತದಂಥ ಕಡುಗೆಂಪು ಎಲೆಗಳು ಈ ವಾರದಂತ್ಯದವರೆಗೆ ಕೂಡ ಉಳಿಯಲಾರವು ನಾನು ಇಲ್ಲಿ ಎಲ್ಲರಿಗೂ ಕಾಣಿಸುತ್ತೇನೆ, ಅಲ್ಲಿಗಿಂತ ಇಲ್ಲಿ ಎದ್ದು ಕಾಣಿಸುತ್ತೇನೆ ಬಿಳಿಯ ದೇವರ ಲೋಕದಲ್ಲಿ ಕಾಲಿಟ್ಟ ಕಪ್ಪು ಜನಾಂಗದವರು ...

 • 22 February 2018
  3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 15 February 2018
  1 week ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  2 weeks ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  2 weeks ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...