Share

ಈರುಳ್ಳಿ ಸಿಪ್ಪೆ
ಸುಧಾ ಶರ್ಮ ಚವತ್ತಿ ಕಾಲಂ

sudhaಕಲರವ | kalarava

 

 

ಶ್ವರ್ಯ ಇನ್ನೂ 24 ತುಂಬದ, ಐಟಿ ಕಂಪನಿಯಲ್ಲಿ ಕೈ ತುಂಬ ಸಂಬಳ ಪಡೆಯುವ, ಬೇಕಾಗಿದ್ದನ್ನು ಪಡೆಯುವ ಹೊಸ ಹುರುಪು ಹುಮ್ಮಸ್ಸಿನ ಹುಡುಗಿ. ಅವಳೊಳಗೆ ಯಾಕೋ ಅತೃಪ್ತಿ, ಕಾರಣ ಗೊತ್ತಿಲ್ಲ. ವಿನಾಕಾರಣ ಬಂದಡರುವ ಅತೃಪ್ತಿಯೂ ಅದೃಷ್ಟವೇನೋ. ಐಶ್ವರ್ಯ ಕೇಂದ್ರ ಸರ್ಕಾರದ ಟೀಚ್ ಇಂಡಿಯಾ ಪ್ರಾಜೆಕ್ಟ್ ಅಲ್ಲಿ ತನ್ನ ಹೆಸರು ನೊಂದಾಯಿಸಿಕೊಂಡಳು. ಕೈ ತುಂಬ ಸಂಬಳ ಬರುವ ಕೆಲಸಕ್ಕೆ ಬೈ ಹೇಳಿ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಶಿಕ್ಷಕಿಯಾದಳು. ಹಳ್ಳಿಯ ಜೀವನವನ್ನೇ ಅರಿಯದ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಓದಿದ ಆ ಹುಡುಗಿ ಹಳ್ಳಿಯಲ್ಲಿ ಹೇಗಿರುತ್ತಾಳೊ ಎಂದು ಎಲ್ಲರೂ ಯೋಚಿಸುವ ಹೊತ್ತಲ್ಲಿ ಅವಳು ಹಳ್ಳಿಯಲ್ಲಿ ಎಲ್ಲರೊಂದಿಗೆ ಅವರಂತೆ ಬೆರೆತು ಇರುವ ಫೋಟೋಗಳು ಬರತೊಡಗಿದವು. ಈಗ ನನಗೆ ಮೊದಲಿಗಿಂತ ಹೆಚ್ಚು ಖುಷಿ ಇದೆ. ಸಾರ್ಥಕತೆ ಇದೆ ಎನ್ನುವ ಮಾತು. ಇದು ಕೇವಲ ಐಶ್ವರ್ಯ ಒಬ್ಬಳ ಉದಾಹರಣೆ ಅಲ್ಲ. ಈಗಂತೂ ಎಳೆ ವಯಸ್ಸಿನ ಎಲ್ಲವೂ ಇರುವ ಸಂಪಾದನೆಯೂ ಚೆನ್ನಾಗಿರುವ ಹುಡುಗ ಹುಡುಗಿಯರು ಇದನ್ನೆಲ್ಲ ಬಿಟ್ಟು ನಿಜ ಸುಖ ಅರಸುತ್ತಿದ್ದಾರೆ. ಇದೂ ಹೊಸದಲ್ಲ. ಆ ಕಾಲದಲ್ಲಿ ಹೀಗೆ ಹೊರಟವರೇ ಇಂದು ಬದುಕು ತೆರೆದಿಡುವ ಮಾದರಿಯಾಗಿದ್ದಾರೆ. ಚೆನ್ನಮಲ್ಲಿಕಾರ್ಜುನನ್ನು ಅರಸಿ ಹೊರಟ ಅಕ್ಕನಿಗೇನು ಕಡಿಮೆ ಇತ್ತು? ಅವಳು ಹುಡುಕುತ್ತಿದ್ದದ್ದು ನಿಜವಾಗಿಯೂ ಏನಾಗಿತ್ತು?

ಉತ್ತರ ಸಿಗದ ಪ್ರಶ್ನೆಗಳ ಸರಮಾಲೆಯೇ ಎದುರಾಗುತ್ತದೆ. ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿಯುವುದೇ ಜೀವನ ಎಂದು ಅಡಿಗರು ಹೇಳಿರುವುದು ಸುಳ್ಳಲ್ಲ. ಹೀಗೆ ಹುಡುಕುವುದು ಏನನ್ನು ಎನ್ನುವುದು ಗೊತ್ತಿಲ್ಲ. ನನಗೆ ಬೇಕಿರುವುದು ಇದೇ ಎಂದು ಖಚಿತವಾಗಿ ಗೊತ್ತಾಗಿಬಿಟ್ಟರೆ ಪಡೆಯುವುದು ಬಹಳ ಸುಲಭ. ಆದರೆ ಖಚಿತವಾಗಿ ಗೊತ್ತಾಗುವುದು ಹೇಗೆ? ನಮಗೆ ಎಲ್ಲಿಗೆ ಹೋಗಬೇಕೆಂದು ಗೊತ್ತಾದರೆ ಹೇಗೆ ಹೋಗಬೇಕೆಂದು ಯೋಚಿಸಬಹುದು. ಆದರೆ ಎಲ್ಲಿಗೆ ಹೋಗಬೇಕೆಂದು ಗೊತ್ತಾಗುವ ವೇಳೆಗೆ ಕಾಲು ಸೋತಿರುತ್ತದೆ. ನಡೆಯಲು ಸಾಧ್ಯವೇ ಆಗುವುದಿಲ್ಲ ಅಂದಾಗ ನಡೆಯುವುದು ಹೇಗೆ ? ಆಗ ನಿಂತಲ್ಲೇ ನಿಂತು ಹೋಗಬೇಕಾಗಿರುವ ದಾರಿಯನ್ನು ಮನಸ್ಸಿನಲ್ಲಿಯೇ ಲೆಕ್ಕ ಹಾಕುತ್ತೇವೆ. ಮನಸ್ಸಿನಲ್ಲಿ ಮಂಡಿಗೆ ತಿಂದರೆ ದುಡ್ಡು ಖರ್ಚಾಗುವುದಿಲ್ಲ. ನಿಜ ಆದರೆ ಹೊಟ್ಟೆಯೂ ತುಂಬುವುದಿಲ್ಲ.

ಹಾಗಾದರೆ ಗುರಿ ಎನ್ನುವುದು ಏನು? ಯಾವುದು? ನಿಜ ಒಂದು ಉತ್ತಮ ಉದ್ಯೋಗ, ಸ್ವಂತದ್ದಾದ ಮನೆ, ಗಂಡ/ ಹೆಂಡತಿ ಮಕ್ಕಳು ಇಷ್ಟಿದ್ದರೆ ಸಾಕೇ ಸಾಕು ಎನ್ನುವುದಕ್ಕೆ ಕಟ್ಟು ಬಿದ್ದು ಇವಿಷ್ಟರ ಈಡೇರಿಕೆಗಾಗಿ ಕೋಣ ಗಾಣ ಸುತ್ತಿದ ಹಾಗೆ ನಿತ್ಯವೂ ಸುತ್ತಿದ್ದಾಯಿತು. ಆದರೂ ಇಷ್ಟರಲ್ಲಿಯೇ ಪರಮ ಸುಖ ಇದೆಯಾ ? ಈಗಿನ ಕಾಲದಲ್ಲಿ ಕೆಲಸಕ್ಕೆ ಸೇರುತ್ತಲೇ ಮನೆ, ಮಡದಿ ಮುಂದಿನ ಕೆಲ ವರ್ಷಗಳಲ್ಲಿ ಮಕ್ಕಳು ಹೀಗೆ ಎಲ್ಲ ಕನಸೂ ಕೈ ಅಳತೆಯಲ್ಲಿಯೇ ಪೂರೈಕೆ ಆಗಿ ಹೋದ ನಂತರ ಮುಂದೇನು? ಜೀವನ ಎಷ್ಟು ಬೋರಾಗಿದೆ? ಅದಕ್ಕೆ ಚಿಕ್ಕ ಚಿಕ್ಕ ಸಂಗತಿಗಳಿಗೂ ಬೇಜಾರು, ದುಖ: ಅಸಮಾಧಾನ. ಕೊನೆ ಮೊದಲಿರದ ಅತೃಪ್ತಿ. ಈ ಅತೃಪ್ತಿಯ ಮೂಲ ಇರುವುದಾದರೂ ಎಲ್ಲಿ? ಅದು ಹೊರಗಲ್ಲ ಒಳಗೇ ಇದೆ. ಹೊರಗೆ ಏನೇ ಕೊಂಡರೂ ಖಾಲಿತನವನ್ನು ತುಂಬುವುದಕ್ಕೆ ಒಳಗಿನಿಂದ ಏನೋ ಹುಡುಕಾಟ ನಿರಂತರವಾಗಿದೆ. ಆಂತಹ ಹುಡುಕಾಟಕ್ಕೆ ಅಕ್ಕ ಚೆನ್ನಮಲ್ಲಿಕಾರ್ಜುನ ಎಂದಳು. ಮೀರಾ ಅದನ್ನೇ ಕೃಷ್ಣನಿಗೆ ಹೊರಿಸಿದಳು. ನಿಜ ಹೇಳಬೇಕೆಂದರೆ ಅವರೆಲ್ಲರೂ ಒಳಗಿನ ಹುಡುಕಾಟಕ್ಕೆ ಹೊರ ಆಕಾರ ಕೊಟ್ಟರು. ಹೊರಗೆ ಹುಡುಕುತ್ತಿರುವುದು ಒಳಗಿನ ಬೇಕುಗಳನ್ನೇ.

ನಿರಾಕಾರನೆನ್ನುವ ಅದೇ ಚೆನ್ನಮಲ್ಲಿಕಾರ್ಜುನನಿಗೆ ಅಕ್ಕ ಆಕಾರವನ್ನೂ ಕೊಟ್ಟಳು. ಅವನನ್ನು ಪರಮಾಪ್ತನಂತೆ ಬೈದಳು, ಬೇಡಿದಳು, ಆನಂದ ಬಾಷ್ಪದಲ್ಲಿ ತೋಯಿಸಿದಳು ಕೊನೆಗೂ ಅಕ್ಕ ಕಂಡುಕೊಂಡಿದ್ದು ಸಂಪೂರ್ಣವಾಗಿ ತನ್ನನ್ನು ತಾನು ಕಳೆದುಕೊಳ್ಳುವ ಸುಖವನ್ನೇ. ಇದನ್ನೇ ಮೀರಾಳ ಭಕ್ತಿಯೂ ಮಾಡಿದ್ದು.

ನಮ್ಮನ್ನೇ ನಾವು ಒಳಗಿಳಿದು ನೋಡಿಕೊಳ್ಳುವುದು ಸುಲಭವಲ್ಲ. ಅತ್ಯಂತ ವ್ಯವಧಾನದಿಂದ ಆಗಬೇಕಾದ ಕೆಲಸ. ಒಮ್ಮೆ ನಮಗೆ ನಾವು ಪರಿಚಿತರಾಗಿಬಿಟ್ಟರೆ ಉಳಿದದ್ದು ಅತೀ ಸುಲಭ. ಹೋಗುವ ದಾರಿ ಸಿಗುವುದು ಗುರಿ ಸಿಕ್ಕಾಗ. ಆದರೆ ಗುರಿಯೆಡೆಗೆ ಓಡುವ ಅನಿವಾರ್ಯತೆ ಇಲ್ಲ. ನಡಿಗೆಯೇ ಗುರಿ ಆದರಾಯಿತು. ಹಿಮಾಲಯ ಹತ್ತಬೇಕು. ಶಿಖರವೇರುವುದು ಬೇಗ ಬೇಗ ಹತ್ತುವುದು ಹತ್ತಿ ಮೇಲೇರಿ ನಿಲ್ಲುವುದು ಗುರಿ ಅಲ್ಲ. ಹತ್ತುವ ಪ್ರಕ್ರಿಯೆಯೇ ಗುರಿ. ಹತ್ತುವ ಖುಷಿಯೇ ಏರಿದ ಎತ್ತರಕ್ಕಿಂತ ಕಡಿಮೆ ಅಲ್ಲ. ಹಾಗಾದರೆ ಈ ಏರುವ ಬಯಕೆಯಾದರೂ ಬಂದಿದ್ದೆಲ್ಲಿ? ಬದುಕನ್ನು ಇಷ್ಟೇ ಎಂದು ಪರಿಗಣಿಸದೇ ಇರುವಲ್ಲಿ. ಮತ್ತದೇ ಚಕ್ರದೊಳಗೆ ಬಂಧಿಯಾಗದೇ ಬದುಕಬೇಕೆಂಬ ತಹ ತಹ ಇದೆಯಲ್ಲ; ಆ ತಹತಹವೇ ನಮ್ಮೊಳಗಿನ ಚೈತನ್ಯವಾಗಿ ನಿಂತು ಮುಂದಿನ ಹೆಜ್ಜೆ ಇಡುವ ಶಕ್ತಿ ಆಗಿದೆಯಾ?

ಹೊರ ಕವಚಗಳನ್ನು ಕಳಚುತ್ತ ಕಳಚುತ್ತ ಒಳಗೆ ಇನ್ನಷ್ಟು ಸತ್ವವಾಗುವ ಈರುಳ್ಳಿ ಹೊರ ಕವಚದಿಂದ ಒಳ ಕವಚಕ್ಕೆ ನಿಧಾನವಾಗಿ ಬಿಚ್ಚಿಕೊಳ್ಳುತ್ತದೆ. ಒಂದರೊಳಗೊಂದು ಮಿಳಿತವಾದರೂ ಸುಲಿಯುತ್ತ ಸುಲಿಯುತ್ತ ಸಣ್ಣದಾಗುತ್ತಲೂ ತೀವ್ರವಾಗುವ ಈರುಳ್ಳಿಯಂತೆ ನಮ್ಮ ಅಂತರಾಳದ ಒಳ ತುಡಿತ ಇರಬಹುದೆ? ನಾವೆಲ್ಲರೂ ಸಿಪ್ಪೆ ಸುಲಿಯಬೇಕಾದ ಈರುಳ್ಳಿಗಳಾ?

—————-

ಸುಧಾ ಶರ್ಮಾ ಚವತ್ತಿ

286637_218799308166417_3412973_o[1]“ಒದ್ದೆ ಕಣ್ಣುಗಳ ಪ್ರೀತಿ” ಕವನ ಸಂಕಲನದ ಮೂಲಕ ಭರವಸೆ ಹುಟ್ಟಿಸಿದ ಸುಧಾ ಶರ್ಮಾ ಚವತ್ತಿ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ ಪರಿಣಿತರು. ಪತ್ರಿಕೆಗಳಲ್ಲಿ ಲೇಖನ, ಅಂಕಣಗಳ ಮೂಲಕ ಪರಿಚಿತರು. “ಆವಿಯಾಗಿದೆ ಮಾತು” (ಮಲ್ಲಿಗೆ), “ಷೇರೆಂಬ ಮಾಯಾಂಗನೆ” ( ವಿಜಯ ಕರ್ನಾಟಕ ), “ಪ್ರಾಫಿಟ್ ಪ್ಲಸ್” (ವಿಜಯವಾಣಿ) ಪ್ರಕಟಿತ ಅಂಕಣಗಳು. ಕಿರುತೆರೆ ಕಾರ್ಯರ್ಕಮಗಳ ನಿರ್ದೇಶನ, ನಿರ್ಮಾಣ, ನಿರೂಪಣೆಯ ಅನುಭವ. ಈಗ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಇವರು ಉತ್ತಮ ವಾಗ್ಮಿ. ಸಮೂಹ ಮಾತುಗಾರಿಕೆಯೂ ಇವರ ಉತ್ಕಟ ಪ್ರೀತಿಗಳಲ್ಲಿ ಒಂದು.

Share

2 Comments For "ಈರುಳ್ಳಿ ಸಿಪ್ಪೆ
ಸುಧಾ ಶರ್ಮ ಚವತ್ತಿ ಕಾಲಂ
"

 1. ವಿಮಲಾ ನಾವಡ
  8th September 2016

  ಹತ್ತು ವ ಖುಷಿಯೇ ಏರುವ ಎತ್ತರಕ್ಕಿಂತ ಕಡಿಮೆಯಲ್ಲ ಎಂಬ ಮಾತು ಮತ್ತೆ ಮತ್ತೆ ಮನಸ್ಸಿನಲ್ಲಿ ಅನುರಣಿಸಿತು.

  Reply
 2. sudha sharma chavathi
  24th September 2016

  thanks vimala

  Reply

Leave a comment

Your email address will not be published. Required fields are marked *

Recent Posts More

 • 2 days ago No comment

  ಅಜ್ಜಿಗೇನು ಬೇಕು ಅಂತ ಅಜ್ಜಂಗೇನು ಗೊತ್ತು!

          ಕಥನ         ಅಜ್ಜ ಪೆನ್ಷನ್ ತರೋದಕ್ಕೆ ಅಂತ ಪೇಟೆಗೆ ಹೋಗಿದ್ದ. ಅಷ್ಟರಲ್ಲಿ ಮನೆ ಬಾಗಿಲಲ್ಲಿ ಕಾರು ಬಂದು ನಿಂತಿತು. ಕಾರಲ್ಲಿ ಅಜ್ಜಿಯ ಮಗ, ಸೊಸೆ ಮತ್ತೆ ಆರು ವರ್ಷದ ಮೊಮ್ಮಗ ಬಂದಿದ್ರು. ಅಜ್ಜಿಗೆ ಖುಷಿ ತಡೆಯಕ್ಕಾಗದೇ ಅಡಿಗೆ ಮನೆ ಸಂದಿ ಮೂಲೇನೆಲ್ಲಾ ಹುಡುಕಿದ್ಲು. ದಡಾ ಬಡಾ ಸದ್ದು ಮಾಡಿದ್ಲು, ಸರಾಪರಾ ಸದ್ದು ಮಾಡಿದ್ಲು. ಅಡುಗೆ ಮನೆಯಿಂದ ಕೊತಾಕೊತಾ ಸದ್ದು ...

 • 3 days ago No comment

  ವಸಂತದ ನೆನಪು; ಮಾಗುವ ಹುರುಪು!

    ಜಗತ್ತಿನ ಬಗ್ಗೆ ತಿಳಿಯುತ್ತ ಸಾಗಿ, ನಮಗೆ ಈ ಜಗತ್ತು ಹೀಗೆ ನಡೆಯುತ್ತಿದೆ ಅಂತ ಅರಿತುಕೊಳ್ಳುವವರೆಗಿನದು ಮಧ್ಯವಯಸ್ಸಿನ ಕಾಲ. ನಾವು ಅಲ್ಲಿಯವರೆಗೆ, ಕಲಿತದ್ದು, ಕೇಳಿದ್ದು, ನಮಗೆ ತಿಳಿದಿದ್ದು ಎಲ್ಲವೂ ಬದಲಾಗುವ ವೇಳೆಗೆ ನಮಗೆ ವಯಸ್ಸಾಗಿಬಿಟ್ಟಿರುತ್ತದೆ. ಕಾಲದಲ್ಲಿ ಹೊಸ ಚಿಗುರು ಟಿಸಿಲೊಡೆದಿರುತ್ತದೆ.     ಕುಣಿದಾಡುವಷ್ಟು ಚೈತನ್ಯವಿರುವ ಯೌವನಕ್ಕೂ, ಕುಂದಿದ ಶಕ್ತಿಯ ಇಳಿಗಾಲದ ವೃದ್ಧಾಪ್ಯಕ್ಕೂ ನಡುವೆ ಬರುವುದು ಮಧ್ಯವಯಸ್ಸು! ಹುಟ್ಟು, ಬದುಕು ,ಸಾವು ಎಲ್ಲರಿಗೂ ಬರುತ್ತದೆ. ಬದುಕನ್ನು ಹಲವರು ಸಾಧನೆಗಳ ...

 • 3 days ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ಬಂಗಾರದ ಹೊಳಪು, ಬೇಗುದಿಯ ನೆನಪು…

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...

 • 1 week ago No comment

  ಪ್ರಸಾದ್ ನಾಯ್ಕ್ ಪಟ್ಟಾಂಗ | ನನಗೂ ಒಬ್ಬ ಗೆಳೆಯ ಬೇಕು…

  ಆ ಘಟನೆಯನ್ನು ನೆನಪಿಸಿಕೊಂಡಾಗಲೆಲ್ಲಾ ಈಗಲೂ ನಗು ಉಕ್ಕುಕ್ಕಿ ಬರುತ್ತದೆ. ಅಂದು ವಿಚಿತ್ರ ಘಟನೆಯೊಂದು ನಡೆದಿತ್ತು. ಅವು ನನ್ನ ಕಾಲೇಜಿನ ದಿನಗಳು. ಮಂಗಳೂರಿನ ಶಾಪಿಂಗ್ ಮಾಲ್ ಒಂದಕ್ಕೆ ಮಧ್ಯಾಹ್ನದ ಊಟಕ್ಕೆಂದು ಬಂದಿದ್ದ ನಾನು ಫುಡ್ ಕೋರ್ಟಿನಲ್ಲಿ ಸುಮ್ಮನೆ ಅಡ್ಡಾಡುತ್ತಿದ್ದೆ. ಎತ್ತ ಹೋಗಬೇಕೆಂದು ತಿಳಿಯದೆ ಸುಮ್ಮನೆ ಒಂದು ಕೌಂಟರಿನತ್ತ ನಡೆದು ಬೇಕಿದ್ದದ್ದನ್ನು ಆರ್ಡರ್ ಮಾಡಿದೆ. ಕೆಲಸವಿಲ್ಲದೆ ನೊಣ ಹೊಡೆಯುತ್ತಿದ್ದ ಆ ಹೆಂಗಸಿಗೆ ನನ್ನ ಆಗಮನವು ಅಂಥಾ ಉತ್ಸಾಹವೇನೂ ತರಲಿಲ್ಲವಾದರೂ ನಾನು ಹೇಳಿದ್ದನ್ನೆಲ್ಲಾ ...

 • 1 week ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ಭಕ್ತಿಯ ಉಬ್ಬರ… ವ್ಯಾಪಾರದ ಸಡಗರ…

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...


Editor's Wall

 • 11 May 2018
  1 month ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  1 month ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  2 months ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  2 months ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  2 months ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...