Share

‘ಸೂಳೆ’ ಅಂದರೆ ‘ಅಮ್ಮಾ’ ಎಂದೇ ಕೇಳಿಸುತ್ತದೆ!
ಚೇತನಾ ತೀರ್ಥಹಳ್ಳಿ ಕಾಲಂ

ಪ್ರಸ್ತಾಪ| prastapa

 

 

 

chatena 01

ಸೂಳೆ!
ಮೊದಲ ಸಲ ಬೈಸಿಕೊಂಡಾಗ ಮುಡಿ ತುಂಬ ಹೂವಿತ್ತು. ವಯಸ್ಸು ಹೆಚ್ಚೆಂದರೆ ಹತ್ತು.
ಬಳೆ ಸದ್ದಿಗೆ, ಗೆಜ್ಜೆಗೆ, ಹೂ ಘಮಲಿಗೆಲ್ಲ ಅಪ್ಪ “ಸೂಳೇರ ಥರ” ಅನ್ನುತ್ತಿದ್ದರು.
“ಹೆಣ್ಣುಸಂಭ್ರಮ ಸಹಿಸದ ಮನಸ್ಸುಗಳು ಹಾಗೆ ಬೈತವೆ” – ಮೊದಲನೆ ಪಾಠ ಕಲಿತೆ.

ಸೂಳೆ!!
ಮೊದಲ ಸಲ ಅಂವ ಬೈದಾಗ ಪೂರಾ ಕೋಪದಲ್ಲಿದ್ದ. ಅವನು ಆಯ್ದುಕೊಟ್ಟ ದಾರಿ ನಡೆಯಲೊಪ್ಪಲಿಲ್ಲ ನಾನು.
ಅಹಮಿಕೆ ಅದುಮಿಕೊಳ್ಳಲಾಗದ ಅಸಹಾಯಕತೆಯಲ್ಲಿ ನಿಂತಿದ್ದ ಅವನು.
ಇಂಥ ಬೈಗುಳ ಯಾಕೆ ಹೊರಡುತ್ತೆ? ಕೋಪದಿಂದ. ಕೋಪ ಯಾಕೆ ಬರುತ್ತೆ? ಆಳಲಾಗದ ಅಸಹಾಯಕತೆಗೆ! – ಎರಡನೇ ಪಾಠ ಕಲಿತೆ.

ಸೂಳೆ!!!
ಮೊದಲ ಸಲ ಗೊತ್ತುಗುರಿ ಇಲ್ಲದ ದಾರಿಹೋಕ ಕೂಗಿದಾಗ ಆಘಾತಗೊಂಡಿದ್ದೆ. ಸಾವರಿಸಿಕೊಂಡ ಬೆನ್ನಿಗೇ ಮತ್ತೆ, ಮತ್ತೆ ಮತ್ತೆ, ಮತ್ತಷ್ಟು ಕೂಗುಗಳು “ಸೂಳೆ” ಅನ್ನುತ್ತ ಮುತ್ತಿಕೊಂಡವು.
ಆಘಾತ ಅಚ್ಚರಿಯಾಯ್ತು. ಅಚ್ಚರಿ ಅನುಕಂಪಕ್ಕೆ ತಿರುಗಿತು.
ಯಾಕೆಂದರೆ, “ನನ್ನ ನಿಜದ ನುಡಿಗಳನ್ನ ಅರಗಿಸಿಕೊಳ್ಳಲಾಗದವರ ಅರಚಾಟವಿದು” – ಮೂರನೇ ಪಾಠ ಕಲಿತಿದ್ದೆ.

ಈಗೀಗ….
ಯಾರೆಲ್ಲರ ಮತ್ಸರ, ಅಹಂಕಾರ, ಅಸಹಾಯಕತೆ, ದಬ್ಬಾಳಿಕೆ, ಕೀಳರಿಮೆ ಎಲ್ಲವನ್ನೂ ಸಹಿಸಿ ಸಂಭಾಳಿಸುವ ‘ಸೂಳೆ’ ಪದದ ಮೇಲೆ ನನಗೆ ಮಮತೆ ಹುಟ್ಟಿದೆ.
ಹಾಗೆಂದು ನಿಂದಿಸುವವರನ್ನ ಮಡಿಲಿಗೆತ್ತಿಕೊಂಡು ಮಗುವಂತೆ ಮುದ್ದಿಸಿ ಸಮಾಧಾನಪಡಿಸಬೇಕನ್ನಿಸುತ್ತೆ. ಅವರೊಳಗಿನ ಏನೆಲ್ಲ ವಿಕೃತಿ ವಿಕಾರಗಳಿಗೆ ತಂಪೆರೆದು ವಾತ್ಸಲ್ಯವುಣಿಸಬೇಕೆನಿಸುತ್ತೆ.
ಅವರು ನನ್ನನ್ನು ‘ಸೂಳೆ’ ಅಂದಾಗೆಲ್ಲಾ ಅದು ನನಗೆ ‘ಅಮ್ಮಾ’ ಅಂತಲೇ ಕೇಳತೊಡಗಿದೆ.

————-

che1ಚೇತನಾ ತೀರ್ಥಹಳ್ಳಿ. ಅಲಾವಿಕಾ ಮತ್ತೊಂದು ಕಾವ್ಯನಾಮ. ಫ್ರೀಲಾನ್ಸ್ ಪತ್ರಕರ್ತೆ ಮತ್ತು ಬರಹಗಾರ್ತಿ. ಪ್ರಕಟಿತ ಪುಸ್ತಕಗಳು: ‘ಉಫೀಟ್’, ‘ಗುಟ್ಟು ಬಚ್ಚಿಡಲು ಬರುವುದಿಲ್ಲ’, ‘ಶಬರಿಯ ಅವಸರ’ ಕವನ ಸಂಕಲನಗಳು; ‘ಸೂರ್ಯನೆದೆಯ ನೀರ ಬೀಜ’ ಅಚ್ಚಿನಲ್ಲಿದೆ. ‘ಭಾಮಿನಿ ಷಟ್ಪದಿ’ ಮತ್ತು ‘ಬಿಸಿಲ ಚೂರಿನ ಬೆನ್ನು’ ಅಂಕಣ ಬರಹಗಳ ಸಂಗ್ರಹ; ‘ಲಾ ಕಾಲಮ್’ ಅಚ್ಚಿನಲ್ಲಿದೆ. ‘ಬ್ಲಾಗಿಸು ಕನ್ನಡ ಡಿಂಡಿಮವ’ ಸಂಪಾದಿತ ಕೃತಿ. ಕಾಸ್ಮಿಕ್ ಜೋಕ್, ಕ್ಲೌಡ್ ನೈನ್ ಮತ್ತು ಐ ಆಮ್ ಅನದರ್ ಯು ಇಂಗ್ಲಿಷಿನಿಂದ ಅನುವಾದಿಸಿದ ಕೃತಿಗಳು. ‘ನೀಲಿ ಬಾನಿನಲ್ಲಿ ಕೆಂಪು ಸೂರ್ಯ: ಜೆ ಎನ್ ಯು ಭಾಷಣಗಳ ಸಂಗ್ರಹಾನುವಾದ’ ಅವರ ಹೊಸ ಕೃತಿ.

Share

3 Comments For "‘ಸೂಳೆ’ ಅಂದರೆ ‘ಅಮ್ಮಾ’ ಎಂದೇ ಕೇಳಿಸುತ್ತದೆ!
ಚೇತನಾ ತೀರ್ಥಹಳ್ಳಿ ಕಾಲಂ
"

  1. ನಾಗರಾಜ ಹರಪನಹಳ್ಳಿ
    10th September 2016

    ಚೇತನ ನನ್ನ ಇಷ್ಟದ ಬರಹಗಾರ್ತಿಯರಲ್ಲಿ ಒಬ್ಬರು. ಭಾಮಿನಿ ಷಟ್ಪದಿ ಇಷ್ಟವಾದ ಕೃತಿ. ಆಕೆಯ ಧೈರ್ಯ ಮತ್ತು ಕರುಣೆ ತುಂಬಾ ಇಷ್ಟವಾಗುವ ಗುಣಗಳು.

    Reply
  2. ವಿಮಲಾ ನಾವಡ
    10th September 2016

    ನನಗೆ ಅರ್ಥ ವಾಗಲಿಲ,ಸೂಳೆ ಎಂಬ ಪದ ನಾವೆಲ್ಲ ಬಳಸಿದ್ದು,ಕೇಳಿದುದೂ ಬಹಳ ಕಡಿಮೆ.

    Reply
  3. ಆನಂದ್ ಋಗ್ವೇದಿ
    13th September 2016

    ‘ಸೂಳ್ ಪಡೆಯಲಪ್ಪುದು ಕಣಾ ಮಹಾಜಿರಂಗದೊಳ್’ ಅಂತೊಂದು ಮಾತಿದೆ. ಸೂಳ್ ಎಂಬುದು ಸರತಿಯಷ್ಟೇ. ಸ್ತ್ರೀಯರ ಸಹಜ ಲೈಂಗಿಕ ಹಕ್ಕು ಮತ್ತು ಸ್ವಾತಂತ್ರ್ಯವನ್ನು ನಿರಾಕರಿಸಿ ಲೈಂಗಿಕ ದಾಸ್ಯಕ್ಕೆ ದೂಡುವ ಮನಸ್ಥಿತಿಗಳು ಗರತಿ ಪದಕ್ಕೆ ವಿರುದ್ದವಾಗಿ ಈ ಸೂಳ್ ಪದ ಬಳಸುತ್ತವೆ. ಬರಹ ದಿಟ್ಟವಾಗಿದೆ. ಮನಮುಟ್ಟಿತು

    Reply

Leave a comment

Your email address will not be published. Required fields are marked *

Recent Posts More

  • 3 days ago No comment

    ಈ ಸಂಜೆ ಪ್ರಿತಿಯೊಡನೆ…

        ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...

  • 4 days ago No comment

    ಯಾವುದು ಈ ಧಾವಂತದ ದಿಕ್ಕು?

      ನ್ಯಾಯದ ಬಾಗಿಲಲ್ಲಿ ನ್ಯಾಯವಾಗಿ ಹೋಗುವವರಿಗೆ ಮಾತ್ರ ಪ್ರವೇಶ ಇಲ್ಲ, ಆದರೆ ನ್ಯಾಯವಲ್ಲದ, ಅದರ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದವರಿಗೆ ಮಾತ್ರ ಹಾರ ತುರಾಯಿಗಳೊಂದಿಗೆ ಭರ್ಜರಿ ಆಹ್ವಾನ.       रिमझिम गिरे सावन, सुलग सुलग जाये मन भीगे आज इस मौसम में लगी कैसी ये अगन ಏನೋ ಒಂದು ಜ್ವಾಲೆ, ಏನೋ ಒಂದು ಉರಿ, ಏನೋ ಒಂದು ಚಡಪಡಿಕೆ, ಒಂಥರಾ ಬೂದಿ ...

  • 6 days ago No comment

    ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                        ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

  • 1 week ago No comment

    ಕೈಯ ಕನ್ನಡಿ ಹಿಡಿದು…

          ಕವಿಸಾಲು       ಕಾಲವೊಂದಿತ್ತು… ಕೈಯ ಕನ್ನಡಿ ಹಿಡಿದು ಕುರುಳ ತಿದ್ದುವ ನೀರೆ ನಾನಾಗ.. ದಶಕಗಳ ಕಾಲ ಸಂದಿದೆ… ಈಗ, ಆ ಕನ್ನಡಿಯೂ ಇಲ್ಲ… ಆ ಚೆಲುವಿನ ಮೋಡಿಯೂ ಇಲ್ಲ.. ನೆರಿಗೆ ತುಂಬಿದ ಕೈ.. ನರೆಗೂದಲು ತುಂಬಿದ ಬೆಳ್ಳಿಬುಟ್ಟಿ ತಲೆ.. ಆಸರೆ ಬಯಸುವ ದೇಹ… ಪ್ರೀತಿಗಾಗಿ ಕಾತರಿಸುವ ಕಂಗಳು… ನಗುವ ಹುಡುಕಿ ಬಿರಿಯಲೆಳಸುವ ಬೊಚ್ಚು ಬಾಯಿ‌.. ‌ಹೃದಯದಾಳದಿಂದ ಬಂದರೂ ನಾಲಿಗೆಯಡಿಯಲ್ಲಿ ಹೇಳಬಯಸುವ ನುಡಿಗಳು ...

  • 1 week ago No comment

    ಇಳಿಸಂಜೆಯ ಪ್ರೀತಿ

    ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...


Editor's Wall

  • 15 February 2018
    6 days ago No comment

    ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                        ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

  • 12 February 2018
    1 week ago No comment

    ಇಳಿಸಂಜೆಯ ಪ್ರೀತಿ

    ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

  • 11 February 2018
    1 week ago One Comment

    ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

      ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...

  • 11 February 2018
    1 week ago No comment

    ನಿಮಗಿಂತ ಹೆಚ್ಚು ನಿರ್ಜೀವ

            | ಕಮಲಾದಾಸ್ ಕಡಲು       ಇಂದಿರಾಗಾಂಧಿ ಬಿಟ್ಟರೆ… (Next to Indira Gandhi) ಕಮಲಾದಾಸ್ ಕವಿತೆಯ ಅನುವಾದ       ಇಂದಿರಾಗಾಂಧಿಯನ್ನು ಬಿಟ್ಟರೆ, ನಾನು ಅತಿ ಹೆಚ್ಚು ಹೆದರಿದ್ದು ನನ್ನ ಅಪ್ಪನಿಗೆ ಮಾತ್ರ ನಾನು ಐದು ವರ್ಷದವಳಿರುವಾಗ ಅವರೇ ನನಗೆ ಹೇಳಿದ್ದು ಕಪ್ಪು ಮಕ್ಕಳು ಬಿಳಿಬಣ್ಣದ ಬಟ್ಟೆಗಳನ್ನು ಮಾತ್ರ ತೊಡಬೇಕೆಂದು. ಬೆಳೆಯುವ ದಿನಗಳಲ್ಲಿ ಕಳೆದುಹೋದಂತಿರುತ್ತಿದ್ದ, ಬಡಕಲಾಗಿದ್ದ, ಹಲ್ಲಿಗೆ ಕ್ಲಿಪ್ ...

  • 08 February 2018
    2 weeks ago No comment

    ಇದು ಕ್ರಾಂತಿ ಪರ್ವ

                      ಪ್ಯಾಸಿಸ್ಟ್ ನೀತಿಯೆಡೆಗೆ ಆಡಳಿತ ವೈಖರಿ ಹೊರಳುತ್ತಿದೆ ಎನ್ನುವಾಗ ಕ್ರಾಂತಿಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಎನ್ನುವುದನ್ನು ಮನದಟ್ಟು, ಮಾರ್ಗದರ್ಶನ ಮಾಡಿಸಬೇಕಾದವರೇ ಹೋರಾಟಕ್ಕೆ ತಣ್ಣೀರು ಹೊಯ್ಯೊತ್ತಿರಬಹುದೇ ಎನ್ನುವ ಗುಮಾನಿ ಕಾಡದಿರುವುದಿಲ್ಲ.   ಮೊನ್ನೆ ಮನ್ಸೋರೆ (ಮಂಜುನಾಥ ಸೋಮಕೇಶವ ರೆಡ್ಡಿ) ನಿರ್ದೇಶನದ ‘ಹರಿವು’ ಚಿತ್ರ ನೋಡುವಾಗ ಅದೆಷ್ಟು ಸಲ ಕನ್ನಡಕ ತೆಗೆದು ಕಣ್ಣೊರೆಸಿಕೊಂಡೆನೋ! ಆಶಾ ಬೆನಕಪ್ಪ ಅವರು ಪ್ರಜಾವಾಣಿಯಲ್ಲಿ ಬರೆದ ...