Share

ನಿರ್ಧಾರ ಆಗಿದೆ, ಬದುಕಲು ಬಿಡಿ!
ಎಂ ಆರ್ ಭಗವತಿ ಕಾಲಂ

https://i1.wp.com/connectkannada.com/wp-content/uploads/2016/05/bhagvati1.jpg?w=658“ಮದುವೆ ಮನೆಯಲ್ಲಿ ನನ್ನನ್ನು ಮುಂದಿನ ಸಾಲಿನಲ್ಲಿ ಕುಳಿತು ಕೊಳ್ಳೋಕೆ ಬಿಡಲ್ಲ. ಅಕಸ್ಮಾತ್ ಕೂತರೆ ಕರೆದು ಹಿಂದೆ ಕೂರಿಸುತ್ತಾರೆ. ಹತ್ತಿರದ ಸೋದರ ಸಂಬಂಧಿಗಳು ನನ್ನನ್ನು ತುಸು ದೂರವೇ ಇಟ್ಟಿದ್ದಾರೆ. ತಮ್ಮನ ಹೆಂಡತಿ ಮನೆಯಲ್ಲಿ ಇದೊಂದು ಜೀವ ಇದೆ ಎನ್ನುವುದನ್ನು ಮರೆತಂತೆ ವರ್ತಿಸುತ್ತಾಳೆ.”  ನಗುಮೊಗದ ಹುಡುಗಿ ಹೇಳುತ್ತಿದ್ದಳು. ಒಂದಷ್ಟು ನೋವುಗಳ ಸಾಲಿನ ಪಟ್ಟಿ. ನನಗೆ ತುಂಬಾ ಕೆಡುಕೆನಿಸಿತು. ಅವಳು ಮಾಡಿದ ಘೋರ ಅಪರಾಧ ಇಷ್ಟೇ. ಮದುವೆಯಾದ ಮೇಲೆ ಗಂಡನ ಹಿಂಸೆ, ಆತನ ಮನೆಯವರ, ಮಾವನ ಕೆಟ್ಟ ದೃಷ್ಟಿ ಯನ್ನು ತಡೆಯಲಾರದೆ ಆತನಿಗೆ ಡೈವೋರ್ಸ್ ನೀಡಿ ತವರು ಮನೆಗೆ ವಾಪಾಸ್ ಆಗಿದ್ದಾಳೆ.  ಇವಳು ದುರದೃಷ್ಟದ ಹುಡುಗಿ ಎಂದು ಹಣೆಪಟ್ಟಿ ಕಟ್ಟಿ ಆಗಿದೆ.

ಇದು ನಡೆದು ಎಷ್ಟೋ ವರ್ಷಗಳಾಗಿವೆ. ಮರೆತು ಹೋದ ನಗುವನ್ನು ಇದೀಗ ಪಡೆದುಕೊಳ್ಳುತ್ತಿರುವ ಇವಳಿಗೆ ನೀನು ಇಂಥವಳು ಎಂದು ನೆನಪಿಸುತ್ತಲೇ ಇದ್ದಾರೆ ಸುತ್ತಮುತ್ತಲಿನವರು. ಅದೃಷ್ಟಕ್ಕೆ ಹೆತ್ತವರು, ಮನೆಯವರು ಆಕೆಗೆ ಬೆಂಗಾವಲಾಗಿದ್ದಾರೆ. ಮಗಳು ತುಸು ಚೆನ್ನಾಗಿ ಅಲಂಕಾರ ಮಾಡಿಕೊಂಡರೆ, ಹೊರಗೆ ಯಾವುದೋ ಕೆಲಸದ ಮೇಲೆ ಹೋದರೂ, ತಡವಾಗಿ ಬಂದರೆ-ನೋಡುವ ಜನ ಏನೆಂದುಕೊಳ್ಳುವರೋ ಎನ್ನುವುದು ಅಪ್ಪನ ಚಿಂತೆ. ಇದು ಈಕೆಯ ಕಷ್ಟ. ನೇರವಂತಿಕೆಯ, ಕಷ್ಟಪಟ್ಟು ಕೆಲಸ ಮಾಡುವ, ಎಲ್ಲವನ್ನೂ ಪ್ರೀತಿಯ ತೆಕ್ಕೆಗೆ ತೆಗೆದುಕೊಳ್ಳುವ ಹಾರ್ದಿಕ ಮನಸ್ಸಿನ ಹುಡುಗಿ ಇವಳು. ಗಂಡನನ್ನು ಬಿಟ್ಟದ್ದು ಅವಳ ವೈಯಕ್ತಿಕ ಆಯ್ಕೆ. ಅವಳ  ನೋವು, ಸಂಕಟ, ಆಕೆ ಆ ದಿನಗಳಲ್ಲಿ ಪಟ್ಟ ಆಳವಾದ ನೋವು ಇವುಗಳ ಹಿನ್ನೆಲೆ ಅರಿಯದೆ ಒಂದು ಚೌಕಟ್ಟಿನಲ್ಲಿ ಬಂಧಿಯಾಗಿಸಿ, ಅದೇ ಹಿನ್ನೆಲೆಯಲ್ಲಿ ಆಕೆಯನ್ನು ನೋಡುವ  ಸಣ್ಣ ಮನಸ್ಸುಗಳ ಜನರ ಬಗ್ಗೆ ನನಗೆ ಅಯ್ಯೋ ಅನಿಸುತ್ತಿದೆ. ಆಕೆ ಮದುವೆಯಾಗಿ ಹೋದ ಮನೆಯಲ್ಲಿ ನೋವಿನಲ್ಲಿ ಬೆಂದದ್ದು, ರಾತ್ರಿಗಳನ್ನು ಕಣ್ಣೀರಿನಲ್ಲಿ ಕಳೆದದ್ದು, ಖಿನ್ನತೆಯಲ್ಲಿ ದಿನಗಳನ್ನು ದೂಡಿದ್ದು, ಮಾವನ ಕೆಟ್ಟ ದೃಷ್ಟಿಯಲ್ಲಿ ಕಂಗಾಲಾದದ್ದು..ಬಿಕ್ಕಿದ್ದು..ಎಲ್ಲವನ್ನೂ ಆಡಿಕೊಳ್ಳುವ,  ಚುಚ್ಚುವ ಜನಕ್ಕೆ ಇವೆಲ್ಲ ಸಂಗತಿಗಳನ್ನು ಅರಿಯುವ ತಾಕತ್ತು ಇದೆಯೆ?

ಇವಳಂಥ ಉಳಿದವರೂ ಹಲವಾರು ರೀತಿಯ ವಿಚಿತ್ರ ಸನ್ನಿವೇಶಗಳನ್ನು ಎದುರಿಸುತ್ತಾರೋ. ಅಂಥ ಹುಡುಗಿಯರು ಸ್ವಲ್ಪ ಅಲಂಕರಿಸಿ ಹೊರಟರೆ ಹುಬ್ಬುಗಳು ಮೇಲೇರುತ್ತವೆ. ಅಂದರೆ, ತಮ್ಮ ಸ್ಥಿತಿಗೆ ಗೊಳೋ ಅನ್ನುತ್ತ ಸದಾ ಸಪ್ಪೆ ಮುಖ ಹಾಕಿಕೊಂಡು ಇರಲಿ ಇನ್ನುವ ಧೋರಣೆಯೋ ಗೊತ್ತಿಲ್ಲ. ಇಂಥವರು ಕೂತರೂ ತಪ್ಪು, ನಿಂತರೂ ತಪ್ಪು. ಮತ್ತು ಅಂಥವರು ತಪ್ಪು ಮಾಡುವುದನ್ನೇ ಕಾದುಕುಳಿತಂತೆ ವರ್ತಿಸುವ ಜನ. ತಪ್ಪು ನಡೆದರೆ ಆಕೆ ಗಂಡನ ಬಿಟ್ಟದ್ದಕ್ಕೂ, ಅವಳ ತಪ್ಪಿಗೂ ತಾಳೆ ಹಾಕಿ ಸಹಜವಾದ ತಪ್ಪನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವುದು ಒಂದು ದುರಭ್ಯಾಸ. ನೋವು ನುಂಗಿ ಧೈರ್ಯವಾಗಿ ಎದುರಿಸುವವರು ಒಂದಡೆಯಾದರೆ, ತಾನು ಹೀಗೆ ಮಾಡಬಾರದಿತ್ತು ಎಂದು ತಪ್ಪಿತಸ್ಥ  ಭಾವನೆಯಿಂದ ನರಳಿ ಖಿನ್ನತೆಗೆ ಒಳಗಾದ ಉದಾಹರಣೆಗಳು ಸಾಕಷ್ಟಿವೆ. ಅಂಥವರಲ್ಲಿ ಆ ಭಾವನೆ ಬರದಿದ್ದರೂ ಅದನ್ನು ಎತ್ತಿ ಆಡಿ, ಆ ಭಾವನೆ ಬರುವಂತೆ ವರ್ತಿಸಿ ಇನ್ನಷ್ಟು ದುಃಖದ ಆಳಕ್ಕೆ ತಳ್ಳಿ ಆಳ ನೋಡುವವರು ಹಲವರು. ಎಷ್ಟೇ ವಿದ್ಯಾವಂತರಾದರೂ ಅವರು ನಡೆದುಕೊಳ್ಳುವ ರೀತಿ ಹಾಸ್ಯಾಸ್ಪದ. ವಿದ್ಯಾಭ್ಯಾಸಕ್ಕೂ ವೈಚಾರಿಕತೆಗೂ ಸಂಬಂಧವಿಲ್ಲವಲ್ಲ. ಅದು ವ್ಯಕ್ತಿಯ ಸಂಸ್ಕಾರವನ್ನವಲಂಬಿಸಿರುತ್ತದೆ.

ಅದೇ ಡೈವೋರ್ಸ್ ಪಡೆದ ಗಂಡಿಗೆ ಅಂಥ ಒತ್ತಡ ಇಲ್ಲ (ಇದು ಎಲ್ಲ ಗಂಡುಗಳ ವಿಷಯದಲ್ಲಿ ಒಂದೇ ಅಲ್ಲ). ಅಂಥವರಿಗೆ ಮರು ಮದುವೆ ಮಾಡುವ ಔದಾರ್ಯ ತೋರುವವರೇ ಹೆಚ್ಚು ಜನ. ಆರ್ಥಿಕವಾಗಿ ಶ್ರೀಮಂತ ಜನರ ನಡುವೆ ಈ ಸಮಸ್ಯೆ ಹೆಚ್ಚು ಕಾಡುವುದಿಲ್ಲವಾ, ಗೊತ್ತಿಲ್ಲ. ಅಥವಾ ವೈಯಕ್ತಿಕ ಸಾಧನೆಗಳ ಮೇಲೆ ಒಬ್ಬ ವ್ಯಕ್ತಿಯ ಬಗೆಗಿನ ಇಂಥ ಧೋರಣೆಗಳು ಬದಲಾಗುತ್ತವೆಯೇ? ಒಟ್ಟಿನಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಇತರರ ಬದುಕು ಇರಬೇಕು. ಹೆಚ್ಚು ಕಮ್ಮಿ ಅದರೆ ತಮ್ಮ ಜೀವನಕ್ಕೇ ಧಕ್ಕೆಯಾದಂತೆ ವರ್ತಿಸುವ ಜನ, ಆಡಿಕೊಳ್ಳುವುದನ್ನು ಬಿಟ್ಟು, ಸಮಸ್ಯೆಗೆ ಸಿಕ್ಕವರ ನೋವಿಗೆ ದನಿಯಾಗಲಿ.

ಇದು ತಪ್ಪು-ಸರಿಯ ಪ್ರಶ್ನೆ ಅಲ್ಲ. ಅದು ಅವರವರ ನಿರ್ಧಾರ. ಹೌದು. ಸರಿಪಡಿಸಿಕೊಂಡು ಹೋಗಬಹುದಿತ್ತು, ಇದು ಆಗಬಾರದು. ನಿಜ, ಆದರೆ ನಿರ್ಧಾರ ಆಗಿದೆ. ಅವರವರ ಸಂಕಟ, ದುಮ್ಮಾನ ಅವರವರದು. ಅದರಿಂದ ಹೊರಬಂದು ಹೊಸ ಜೀವನವನ್ನು ಧೈರ್ಯವಾಗಿ ಎದುರಿಸುವ ಮನಸ್ಸು ಮಾಡಿದ ಜೀವಗಳನ್ನು ಎಡಬಿಡದೆ ಕಾಡುತ್ತಾ ಹೋದರೆ ಹೇಗೆ. ಒಂದು ಸಂಬಂಧದಿಂದ ಹೊರನಡೆದವರು ಅವರವರ ನಿರ್ಧಾರ ತೆಗೆದುಕೊಳ್ಳಲಿ. ಅಂತಹವರೆಲ್ಲರೂ ಕೆಟ್ಟವರು, ಕೆಲಸಕ್ಕೆ ಬಾರದವರೆಂದು ದೂರ ಇಟ್ಟರೆ ಎಷ್ಟೊಂದು ಜೀವಗಳು ಅನವಶ್ಯಕ ಹೃದಯದ ಮೂಲೆಯಲ್ಲೊಂದು ನೋವಿನ ಒರತೆ ಇಟ್ಟುಕೊಂಡು ಬದುಕಬೇಕು? ನೇರವಾಗಿ ನಮ್ಮ ಜೀವನಕ್ಕೆ ಯಾವುದೇ ಹಾನಿ ಇಲ್ಲದಿದ್ದರೆ ಒಂದು ವೈಯಕ್ತಿಕ ನಿರ್ಧಾರ ಆಗಿಹೋದ ಮೇಲೆ ಇನ್ನೊಬ್ಬರ ಬದುಕಿನ ನಿರ್ಧಾರಕ್ಕೆ ನೋವಿನ ಘಳಿಗೆಗಳನ್ನು ದಯಪಾಲಿಸುವುದು ಎಷ್ಟು ಸೂಕ್ತ ? ಇಂಥ ಸಾಂಪ್ರದಾಯಿಕ ಮನಸ್ಸುಗಳ ಸಣ್ಣತನಕ್ಕೆ ಅದೆಷ್ಟು ಮನಸ್ಸುಗಳು ನೋಯುತ್ತಲೆ ಇರಬೇಕು?

———-

ಎಂ ಆರ್ ಭಗವತಿ

bhagavathi1 ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ. ಹವ್ಯಾಸಿ ಬರಹಗಾರ್ತಿ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಎಂಎ ಪದವಿ.. ಮೂಲ ಆಸಕ್ತಿ ಬರವಣಿಗೆಯಾದರೂ, ಮೊದಲಿನಿಂದಲೂ ಛಾಯಾಗ್ರಹಣ ಬಹಳ ಇಷ್ಟವಾದ ಹವ್ಯಾಸ. ‘ಏಕಾಂತದ ಮಳೆ’ (೧೯೯೯) ಮತ್ತು ‘ಚಂಚಲ ನಕ್ಷತ್ರಗಳು’ (೨೦೦೫) ಪ್ರಕಟಿತ ಪುಸ್ತಕಗಳು.

Share

4 Comments For "ನಿರ್ಧಾರ ಆಗಿದೆ, ಬದುಕಲು ಬಿಡಿ!
ಎಂ ಆರ್ ಭಗವತಿ ಕಾಲಂ
"

 1. ಎಮ್.ಜಿ.ಚಂದ್ರಶೇಖರಯ್ಯ
  27th September 2016

  ಇಂತಹ ಪ್ರಸಂಗಗಳು ನಮ್ಮ ಸಮಾಜ ಸಹ್ಯವಾದ ಬದುಕನ್ನು ಕಂಡು ಕೊಳ್ಳಲು ಎಷ್ಟು ದೂರ ಸಾಗಬೇಕಾಗಿದೆ ಎಂಬುದನ್ನು ತೋರುವುದು. ಸಮಾಜ ಹಿಂದಿನ ಕಾಲಕ್ಕೆ ಹೋಲಿಸಿದರೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದೆ, ಆದರೆ ಸಾಮಾಜಿಕವಾಗಿ ವಿಕಾಸಗೊಳ್ಳಬೇಕಾದ್ದು ತುಂಬಾ ಇದೆ.well said ,congratulations

  Reply
 2. vinay
  27th September 2016

  Good. I appreciate the style of your writing…

  Reply
 3. ವಿಮಲಾ ನಾವಡ
  28th September 2016

  ಕಾಲ ತುಂಬಾ ಬದಲಾಗಿದೆ,ನೀವು ಬರೆದಂತೆ ನಮ್ಮಲ್ಲಿ ಯಂತೂ ಇಲ್ಲವೆನಿಸುತ್ತೆ.ಸ್ವ ಇಚ್ಛೆಯಿಂದ ಗಂಡನನ್ನು ಬಿಟ್ಟು ಬಂದು ಚೆನ್ನಾಗಿ ಬದುಕು ಯ್ ತಿರುವು ರನ್ನು ನಾನು ಬಲ್ಲೆ.

  Reply
  • ಭಗವತಿ
   28th September 2016

   ಕಾಲ ಬದಲಾಗಿದೆ ನಿಜ. ಮೇಲೆ ಹೇಳಿದ್ದು ಒಂದು ಉದಾಹರಣೆ ಅಷ್ಟೇ. ಇದು ತೀರಾ ಇತ್ತೀಚಿನ ಸಂಗತಿ. ಚೆನ್ನಾಗಿ ಬದುಕುತ್ತಿರುವವರೂ ಇದ್ದಾರೆ, ನರಳುತಿರುವವರೂ ಇನ್ನೂ ಇದ್ದಾರೆ. ಕಾಲ ಬದಲಾದರೂ ಮಾನಸಿಕ ಸ್ಥಿತಿ ಬದಲಾಗಿಲ್ಲವಲ್ಲ?

   Reply

Leave a comment

Your email address will not be published. Required fields are marked *

Recent Posts More

 • 9 hours ago No comment

  ಇಲ್ಲಿ ಶಬ್ದಗಳಿಗೂ ಚಳಿಗಾಲ

            | ಕಮಲಾದಾಸ್ ಕಡಲು       ಕಪ್ಪು ಜನಾಂಗ (For Cleo Pascal) ಕಮಲಾದಾಸ್ ಕವಿತೆಯ ಅನುವಾದ     ಈಗ ಕೆನಡಾದಲ್ಲಿ ಶರದೃತುವಿನ ಕಾಲ ಮೇಪಲ್ ಮರದ ಒಣಗಿದ ರಕ್ತದಂಥ ಕಡುಗೆಂಪು ಎಲೆಗಳು ಈ ವಾರದಂತ್ಯದವರೆಗೆ ಕೂಡ ಉಳಿಯಲಾರವು ನಾನು ಇಲ್ಲಿ ಎಲ್ಲರಿಗೂ ಕಾಣಿಸುತ್ತೇನೆ, ಅಲ್ಲಿಗಿಂತ ಇಲ್ಲಿ ಎದ್ದು ಕಾಣಿಸುತ್ತೇನೆ ಬಿಳಿಯ ದೇವರ ಲೋಕದಲ್ಲಿ ಕಾಲಿಟ್ಟ ಕಪ್ಪು ಜನಾಂಗದವರು ...

 • 1 day ago No comment

  ಇರಬಲ್ಲೆವಾ ಭಾವುಕರಾಗದೆ?

                Millions of people have decided not to be sensitive. They have grown thick skins around themselves just to avoid being hurt by anybody. But it is at great cost. Nobody can hurt them, but nobody can make them happy either. ನಿಜ, ಒಂದೇ ...

 • 3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 4 days ago No comment

  ಎರಡು ಕವಿತೆಗಳು

      ಕವಿಸಾಲು         ಸುನಾಮಿಯ ಊರಲ್ಲಿ ಗುಟ್ಟುಗಳ ರಟ್ಟು ಮಾಡದ ಒಡಲು ಸುನಾಮಿ ತವರಾದ ಕಡಲು ಒಳಗಿನ ಕತ್ತಲೆಯ ಕಳೆಯಲು ಹುಡುಕಿ ಹೊರಟವು ತಾವು ಕಳೆದುಕೊಂಡ ಕನಸುಗಳಷ್ಟೂ ಹಾವುಗಳು ಬಿಸಿಲಿಗೆ ಹೊರಳಿ ಪೊರೆ ಕಳಚಿ ನಚ್ಚಗಾದವು ಅದೇ ಕ್ಷಣದೊಳಗೆ ಅರಳಿಬಿರಿಯಬೇಕಿದ್ದ ಹೂವುಗಳು ಬಿಸಿಲ ಧಗೆಗೆ ಬೆಂದು ಬಾಡಿ ಉದುರಿಬಿದ್ದವು ನೆಲಕೆ ಶಬ್ದಗಳ ಮುಕ್ಕಳಿಸಿ ಉಗಿದ ರಭಸಕೆ ಊರ ತುಂಬಾ ನೆರೆ ಪರಿಹಾರದ ಗಂಜಿಕೇಂದ್ರಗಳಲಿ ...

 • 1 week ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...


Editor's Wall

 • 25 February 2018
  9 hours ago No comment

  ಇಲ್ಲಿ ಶಬ್ದಗಳಿಗೂ ಚಳಿಗಾಲ

            | ಕಮಲಾದಾಸ್ ಕಡಲು       ಕಪ್ಪು ಜನಾಂಗ (For Cleo Pascal) ಕಮಲಾದಾಸ್ ಕವಿತೆಯ ಅನುವಾದ     ಈಗ ಕೆನಡಾದಲ್ಲಿ ಶರದೃತುವಿನ ಕಾಲ ಮೇಪಲ್ ಮರದ ಒಣಗಿದ ರಕ್ತದಂಥ ಕಡುಗೆಂಪು ಎಲೆಗಳು ಈ ವಾರದಂತ್ಯದವರೆಗೆ ಕೂಡ ಉಳಿಯಲಾರವು ನಾನು ಇಲ್ಲಿ ಎಲ್ಲರಿಗೂ ಕಾಣಿಸುತ್ತೇನೆ, ಅಲ್ಲಿಗಿಂತ ಇಲ್ಲಿ ಎದ್ದು ಕಾಣಿಸುತ್ತೇನೆ ಬಿಳಿಯ ದೇವರ ಲೋಕದಲ್ಲಿ ಕಾಲಿಟ್ಟ ಕಪ್ಪು ಜನಾಂಗದವರು ...

 • 22 February 2018
  3 days ago No comment

  ಮೂಳೆಯ ಹಂದರವೊಂದುಳಿದು…

                    ಒಬ್ಬೊಂಟಿಯಾಗಿ ಈ ಮಹಾ ಸಮುದ್ರದ ನಟ್ಟ ನಡುವೆ ಸಾವು ಬದುಕಿನ ಸಮರದೊಳಗೆ ಅದೆಂಥಾ ಮೀನು ನನ್ನದಾಗಿತ್ತು! ಅದರ ಅಂದವೇನು, ಚಂದವೇನು? ಅದರ ಮೌಲ್ಯವೇನು, ಗಾತ್ರವೇನು? ಹಿರಿಮೆ – ಗರಿಮೆಯೇನು?   ಮೈ ಏಕ್ ಜರ್ರ ಬುಲಂದೀ ಕೋ ಛೂನೆ ನಿಕಲಾ ಥಾ ಹವಾ ನೆ ಥಮೆ ಕೆ ಜಮೀನ್ ಪರ್ ಗಿರಾ ದಿಯಾ ಮುಝಕೋ ನಝೀರ್ ...

 • 15 February 2018
  1 week ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  2 weeks ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  2 weeks ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...