Share

ಗಾಸಿಪ್, ಗಾಸಿಪ್!
ಈಶ್ವರ ದೈತೋಟ ಕಾಲಂ

https://i2.wp.com/connectkannada.com/wp-content/uploads/2016/04/IMG-20160412-WA0006.jpg?w=658

ಬ್ಬ ಅನಾಮಿಕ ಸಮಾಜ ವಿಜ್ಞಾನಿ ಹಲವು ಶತಮಾನಗಳ ಹಿಂದೆಯೇ ನುಡಿದಿದ್ದ ಒಂದು ಭವಿಷ್ಯ ಹೀಗಿದೆ.

“ದಿ ಮೋಸ್ಟ್ ಸೀರಿಯಸ್ ಕಾಸ್ ಆಫ್ ಎಯಿಲ್‍ಮೆಂಟ್ ದ್ಯಾಟ್ ವಿ ಮೇ ಫೇಸ್ ಇನ್ ದಿ ಟ್ವೆಂಟಿಫಸ್ಟ್ ಸೆಂಚುರಿ ಈಸ್ ಇನ್‍ಕ್ರೀಸಿಂಗ್ ಹ್ಯೂಮನ್ ಐಸೊಲೇಶನ್ ಡಿಸ್‍ಪೈಟ್ ಆಲ್ ಕಮ್ಯುನಿಕೇಶನ್ ಟೆಕ್ನಾಲಜೀಸ್.”

“21 ನೆ ಶತಮಾನದಲ್ಲಿ ನಾವು ಎದುರಿಸಬೇಕಾಗಬಹುದಾದ ಅತಿ ಗಂಭೀರ ರೋಗಮೂಲವೆಂದರೆ ಲಭ್ಯವಿರುವ ಎಲ್ಲ ಸಂವಹನ ತಂತ್ರಜ್ಞಾನ ಹೊರತಾಗಿಯೂ ಪೀಡಿಸುವ ಮಾನವ ಏಕಾಂಗಿತನ.”

ತಂತ್ರಜ್ಞಾನದಿಂದ ಅನುಕೂಲ ಇದೆ, ಮಜಾ ಎಷ್ಟೇ ಬರಬಹುದು. ಆದರೂ ಆತಂಕವೆಂದರೆ – “ತಂತ್ರಜ್ಞಾನದ ಅತೀ ಅವಲಂಬಿಕೆಯಿಂದ ಮಾನವ ಕುಟುಂಬ ಜೀವನ ಚಿಂದಿ ಚಿತ್ರಾನ್ನವಾಗುತ್ತಿದೆಯಂತೆ.”

4ಮನುಷ್ಯ ಮಾತು ಕಲಿತಾಗ ದೊಡ್ಡ ಸಾಧನೆಯೆಂದೇ ಪರಿಗಣಿತವಾಗಿತ್ತು. ಅಕ್ಷರ,ಪದ, ಬರವಣಿಗೆ, ಓದುವಿಕೆ, ಪತ್ರಿಕೆಯಿಂದ ಅಂತರ್ಜಾಲದವರೆಗೆ ಒಂದೊಂದೇ ಹೊಸ ಸಂವಹನದ ಅವತರಣಿಕೆಯಾಯಿತು. ಇವತ್ತು ಸುದ್ದಿ, ಮಾಹಿತಿ, ವಿಚಾರ, ವಿಷಯಗಳೆಲ್ಲ ಹರಿದು ಬರುವ ಮಾಧ್ಯಮಗಳು ಅಥವಾ ವಾಹಕಗಳು- ಕೈಮುಷ್ಟಿಯೊಳಗೆ ಅಡಗಿಸಿಡಬಹುದಾದ ಸ್ಮಾರ್ಟ್ ಫೋನನ್ನು ಆಧರಿಸುತ್ತಿವೆ. ಡಿಜಿಟಲ್ ಜಗತ್ತಿನಲ್ಲಿ ಪದ ಸಂದೇಶ, ಸೋಶಿಯಲ್ ನೆಟ್‍ವರ್ಕಿಂಗ್ ಹಾಗೂ ಆನ್‍ಲೈನ್ ವಿಡಿಯೋಗಳು ನಾವು ಜಗತ್ತನ್ನು ನೋಡುವ ದೃಷ್ಟಿಕೋನವನ್ನೇ ಅಡಿಮೇಲಾಗಿಸುತ್ತಿವೆ.

ಕೆಲ ವರ್ಷಗಳ ಹಿಂದೆ ಟೋಕಿಯೋದಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ದೀರ್ಘಕಾಲಿಕ ವಿಶೇಷ ತರಬೇತಿಯಿಂದ ಅರ್ಧದಲ್ಲಿ ವಾಪಾಸು ಬಂದಿದ್ದ ಬೆಂಗಳೂರು ತರುಣನೊಬ್ಬ ಅಲ್ಲಿಗೆ ಮರಳಿ ಹೋಗಲ್ಲವೆಂದು ಅಳುಮುಂಜಿಯಾಗಿದ್ದ. ಆತ ನೀಡಿದ ಕಾರಣ ಹೀಗಿತ್ತು.

“ಅಲ್ಲಿ ಕಛೇರಿಯಲ್ಲಿ ಬರೀ ಕೆಲಸ, ಕೆಲಸ ಮತ್ತು ಕೆಲಸ. ಅಷ್ಟು ಜನರಿದ್ದರೂ ಮಾತನಾಡಲು ಯಾರೂ ಸಿಗಲ್ಲ. ರಸ್ತೆ, ಮಾಲ್‍ಗಳಲ್ಲಿರುವವರೂ ಮೊಬೈಲ್‍ನಲ್ಲಿ ಬ್ಯುಸಿಯೇ ವಿನಃ, ಅಕ್ಕಪಕ್ಕದ ಜನರ್ಯಾರು, ಅವರಿಗೇನು ತೊಂದರೆ ಎಂದು ತಿಳಿಯಲು ತಾಳ್ಮೆ ಇಲ್ಲದವರು. ಪ್ರಶ್ನೆ ಕೇಳಿದರೆ ಐ ಡೊಂಟ್ ನೋ ಎಂದು ಸಿಂಡರಿಸಿದ ಉತ್ತರ ಬರುತ್ತದೆ.”

ಅನೇಕ ವರ್ಷಗಳ ಹಿಂದೆ ಅಮೆರಿಕಾ ಮತ್ತು ಆಸ್ಟ್ರೇಲಿಯಾಗಳ ಕುಟುಂಬಗಳ ಮನೆಯಲ್ಲಿ ನೊಟೀಸ್ ಬೋರ್ಡುಗಳನ್ನು ನಾನು ಕಂಡಿದ್ದ ನೆನಪಿದೆ. ಅದರಲ್ಲಿ ಮನೆಯ ಸದಸ್ಯರುಗಳ ಪರಸ್ಪರ ಕಮ್ಯುನಿಕೇಶನ್ ಪ್ರದರ್ಶನವಾಗುತ್ತಲಿತ್ತು. ಮುಖ್ಯವಾಗಿ ಸಂಸಾರ ನಿರ್ವಹಣೆಯ ಹೊಣೆಗಾರಿಕೆಯ ಚಾರ್ಟು, ರಿಮೈಂಡರ್, ಸಿಟ್ಟು ಸಿಡುಕು, ಬುದ್ಧಿವಾದಗಳನ್ನು ಬರೆದೋ, ಇಲ್ಲವೇ ಕೈನಲ್ಲಿ ಚಿತ್ರ ಬಿಡಿಸಿಯೋ ತಗಲಿ ಹಾಕಿರುತ್ತಿದ್ದರು. ನಮ್ಮ ಮಕ್ಕಳೊಂದಿಗೆ ನಮ್ಮ ಸಂಪರ್ಕಕ್ಕೆ ಇದೊಂದೇ ದಾರಿ ಎಂದು ಅಪ್ಪಮ್ಮಂದಿರು ನನ್ನ ಜೊತೆ ಕಷ್ಟಸುಖ ಹಂಚಿಕೊಳ್ಳುತ್ತಾ ಹೇಳಿದ್ದರು.

1ಕುಟುಂಬದೊಳಗಣ ಸಂಪರ್ಕ ಸಂವಹನಗಳೆಲ್ಲ ಈಗ ಇಂಟರ್‍ನೆಟ್, ಫೇಸ್ ಬುಕ್, ಟ್ಟಿಟರ್ ಮುಖಾಂತರ ಅಕ್ಷರ, ಶ್ರವ್ಯ, ದೃಶ್ಯಗಳ ಹಿನ್ನೆಲೆ ಸಂಗೀತದೊಂದಿಗೆ ನಡೆಯುತ್ತದೆ. ಎಳೆಮಕ್ಕಳು ತಾವೆಲ್ಲಿದ್ದೇವೆ, ರಾತ್ರೆ ಮನೆಗೆ ಬರುತ್ತೇವೆಯೇ, ಇಲ್ಲವೇ ಎಂಬಿತ್ಯಾದಿ ಮಾಹಿತಿಗಳನ್ನು ಅಂತರ್ಜಾಲದ ಮುಖಾಂತರ ರವಾನಿಸುತ್ತಾರೆ. ಮೊಮ್ಮಗ ಹುಟ್ಟಿದ್ದು, ಅವನೋ,ಅವಳೋ ಯಾರನ್ನು ಹೋಲುತ್ತಾರೆ ಎಂಬಿತ್ಯಾದಿ ಫ್ಯಾಮಿಲಿ ಮಾಹಿತಿಗಳೆಲ್ಲದರ ಮುಖತಃ ಸಂವಹನವಿಲ್ಲ, ಡಿಜಿಟಲ್ ರವಾನೆ. ಅಮ್ಮನೂ, ಅಪ್ಪನೂ ನೆಟ್ ಸ್ಯಾವಿಯಾಗಿರಬೇಕು, ಫೇಸ್‍ಬುಕ್ ಸದಸ್ಯತನವಿರಬೇಕು, ಇಲ್ಲವಾದರೆ ಸಮಾಚಾರವೇ ತಿಳಿಯದಾಗುತ್ತದೆ.

ಪರಿಣಿತರೆಲ್ಲ ಆಗ “ಈ ಮೇಲ್ ಅವಾಂತರದಿಂದ ಮಕ್ಕಳು ನಡತೆ, ಸಭ್ಯತೆ, ಚುರುಕುತನದಲ್ಲಿ ಹಿಂದೆ ಬೀಳುತ್ತಿದ್ದಾರೆ” ಎಂದು ಹೇಳುತ್ತಿದ್ದರು. ಈಗ ದೊಡ್ಡವರೂ ಇದುವೇ ಬ್ಯಾಡ್ ಬಿಹೇವಿಯರ್ ಕಲಿಯುತ್ತಿದ್ದಾರೆ. ಪೇರೆಂಟ್ಸ್, ಟೀಚರ್ಸ್, ಸ್ಟೂಡೆಂಟ್ಸ್ ಒಟ್ಟು ಗ್ಯಾದರಿಂಗ್‍ಗಳಲ್ಲಿ ಹೆಚ್ಚಿನವರೂ ಮೊಬೈಲಿನಲ್ಲಿ ಬರೀಡ್ ಆಗಿರುವುದು ಸಾಮಾನ್ಯವಂತೆ. ತಡರಾತ್ರೆಯವರೆಗೆ ಟ್ವಿಟರ್, ಸ್ಕೈಪ್‍ಗಳಲ್ಲಿ ಮಗ್ನರಾಗಿರುವ ಮಗ, ಮಗಳು ಮರುದಿನ ಗುರುಗುರು ಎನ್ನುವುದು, ತಾಳ್ಮೆಯಿಲ್ಲದೆ ವರ್ತಿಸುವುದು ಹೆತ್ತವರ ಅನುಭವ ಆಗುತ್ತಿದೆಯಂತೆ.

ಅಲ್ಲೀಗ ಇದುವೇ ರೀತಿ ವಯರ್‍ಲೆಸ್ ಟೆಕ್ನಾಲಜಿ ಪ್ರಭಾವ ಮುಂದುವರಿದರೆ ಅದರಿಂದ ನಮ್ಮ “ಎಬಿಲಿಟಿ ಟು ಲಿವ್ ಇನ್ ದಿ ಪ್ರೆಸೆಂಟ್” ಡೈಲ್ಯೂಟ್ ಆಗಿಬಿಟ್ಟೀತು ಎಂಬ ಚಿಂತೆ ಶಿಕ್ಷಣತಜ್ಞರನ್ನು ಕಾಡುತ್ತಿದೆ. ಕುಟುಂಬವೆಂಬ ವಸ್ತ್ರದ ಹಾಸುಹೊಕ್ಕು ಸಡಿಲವಾಗುವುದು ಮಾತ್ರವಲ್ಲ, ಸಮುದಾಯ ಎಂಬುದು ನಾವು ನಡೆಸಿಕೊಂಡು ಬಂದ ರೀತಿಯಲ್ಲಿ ಇನ್ನು ಮುಂದೆ ಉಳಿಯಲಾರದೇನೋ ಎಂಬ ಅನುಮಾನವೂ ಮೂಡತೊಡಗಿದೆ.

ಅಲ್ಲೀಗ ಹೆತ್ತವರು, ಪೋಷಕರು ತಮ್ಮ ಮಕ್ಕಳು ಫೇಸ್ ಬುಕ್ ಅಲ್ಲ: ಫೇಸ್ ಟು ಫೇಸ್ ಸಂಬಂಧಗಳನ್ನು ವೃದ್ಧಿಸಿಕೊಳ್ಳಲು ವಿಶೇಷ ಉತ್ತೇಜನ ಕೊಡುತ್ತಿದ್ದಾರೆ, ಶ್ರಮವಹಿಸತೊಡಗಿದ್ದಾರೆ. ಕಣ್ಣು-ಕಣ್ಣು ನೋಟ, ಸಿಟ್ಟು, ಸಿಡುಕುಗಳನ್ನು, ಸುಖ ದುಃಖವನ್ನು ಎದುರು ಬದುರು ಕೂತು ವ್ಯವಹರಿಸಿಕೊಳ್ಳಲು ತಿಳಿಹೇಳುತ್ತಿದ್ದಾರಂತೆ.

5“ಸಮಯ ಸಿಕ್ಕಿದಾಗಲೆಲ್ಲ ಹರಟೆಗಿಳಿಯುವುದು ಮಾನವ ಸ್ವಭಾವ. ಅರಳಿಕಟ್ಟೆಗಳು, ಚಾ-ಕಾಫಿ ಕ್ಲಬ್ಬುಗಳು, ಪಬ್ಬುಗಳು, ಖಾನಾವಳಿಗಳು ಸೃಷ್ಟಿಯಾದುದೇ ಅದಕ್ಕಾಗಿ. ಪಟ್ಟಾಂಗ ಮನುಷ್ಯನಿಗೆ ಅಂಟಿಕೊಂಡೇ ಬಂದಿದೆ” ಎಂದು ಸಮಾಜ ವಿಜ್ಞಾನಿಗಳು ಈಗ ಅರಿತುಕೊಳ್ಳುತ್ತಿದ್ದಾರೆ.

ಈ ಸಂಸ್ಕೃತಿಯನ್ನು ಕಾಡು ಹರಟೆ, ವೇಸ್ಟಿಂಗ್ ಟೈಮ್ ಇನ್ ಗಾಸಿಪ್ ಎಂದು ವ್ಯಾಖ್ಯಾನಿಸಿದರೆ ತಪ್ಪಾದೀತು. ಹರಟೆಯಿಂದ ದೊಡ್ಡ ಸಮುದಾಯಗಳಲ್ಲೊಂದು ನಿಕಟ ಬಾಂಧವ್ಯ ಬೆಳೆಯುತ್ತದೆಂದು ಮನೋವಿಜ್ಞಾನಿಗಳು ಗುರುತಿಸಿದ್ದಾರೆ. ಮನುಷ್ಯ ಮಿದುಳಿನಲ್ಲಿ ಕ್ರಿಯಾಶೀಲ ಚಟುವಟಿಕೆಗಳು ನಡೆಯಲು ಉತ್ತೇಜಿಸುವುದೇ ಇಂತಹ ಮುಖಾಮುಖಿಗಳಿಂದ ಎಂದೂ ಕರಾರುವಾಕ್ ಹೇಳಲ್ಪಟ್ಟಿದೆ. ಬದುಕಿನ ಕಷ್ಟಸುಖಗಳ ಖುಷಿ ಮತ್ತು ಒತ್ತಡದಿಂದ ಸುಪ್ತ ಮನಸಿನಲ್ಲಾಗುವ ಯೋಚನಾ ಸರಣಿ ಹೇಗೆ ಮುಖ್ಯವೋ, ಹಾಗೆಯೇ, ಮಿದುಳಿನ ಕ್ರಿಯಾಶೀಲತೆಗೆ ಹರಟೆಯೂ ಬೇಕು; ಸಮುದಾಯದೊಳಗಣ ಸಂವಹನವೂ ಅನಿವಾರ್ಯವಂತೆ.

ಇಂತಹ ಮಾತುಕತೆಗಳಲ್ಲಿ ಕಳೆಯುವ ಸಮಯಕ್ಕೂ, ಮನುಷ್ಯನ ಮಿದುಳಿನ ಚಿಂತನಾ ವಿಭಾಗದ ಗಾತ್ರಕ್ಕೂ ಸಂಬಂಧವಿದೆ. ಸಮಾಜದಲ್ಲಿ ಗುಂಪಾಗಿ ಜೀವಿಸಲು ಬೇಕಾದ ಸಂಕೀರ್ಣ ಕ್ರಿಯೆಯಿಂದ ಉಂಟಾದ ಪರಿಸರವೇ ಹ್ಯೂಮನ್ ಬ್ರೈನ್‍ನ್ನು ಇತರ ಪ್ರಾಣಿಗಳಿಗಿಂತ ದೊಡ್ಡದಾಗಿಸಿತು ಎಂದು ಎವಲೂಶನ್ ಥಿಯರಿ ಸ್ಥಿರೀಕರಿಸಿದೆ.

ಹರಟೆಯಿಂದ ನಾವ್ಯಾರು, ನಾವೆಲ್ಲಿದ್ದೇವೆ ಎಂಬ ಸೋಶಿಯಲ್ ಸ್ಟೇಟಸ್ ಇಟ್ಟುಕೊಳ್ಳಲು ಹಾಗೂ ಇತರರ ಮರ್ಯಾದೆ-ಸ್ಥಾನಗಳೆಲ್ಲ ಏನೇನು ಎಂದು ಅರಿಯಲು ಕೂಡಾ ಸಹಾಯವಾಗುತ್ತದೆ. ಹರಟೆ ಒಂದು ರೀತಿಯ ಕಂಪೇರಿಟಿವ್ ಸಟೀಸ್‍ಫಾಕ್ಷನ್ ಕೊಡುತ್ತದೆ.

ನಮ್ ತಾತನತಾತನತಾತನ…. ಪೂರ್ವಜರೆಂದು ಗುರುತಿಸಲ್ಪಡುವ ಕೋತಿ, ವಾನರ, ಕಪಿ, ಮಂಗಗಳ ಜನಾಂಗದಲ್ಲಿ ಹರಟೆ ಹೊಡೆಯುವ ಪ್ರವೃತ್ತಿ ಇದೆಯಂತೆ. ಅವುಗಳು ಗುಂಪುಸೇರಿ ಕಿರಿಗುಟ್ಟುವುದಕ್ಕೆ, ಹೇನು ಶೋಧಿಸುವ ಕೆಲಸಕ್ಕೆ ಕಾಲವ್ಯಯ ಮಾಡುವುದೇ ಮಂಕಿ ಗಾಸಿಪ್‍ಗಾಗಿ ಎಂದು ಬಹಳ ಹಿಂದೆಯೇ ಸಂಶೋಧನೆಯಾಗಿತ್ತು.

ಛೇ ನಮ್ಮ ಪೂರ್ವಜರಷ್ಟು ಬುದ್ಧಿಯೂ ನಮಗಿಲ್ಲವಲ್ಲ!

———————-

ಈಶ್ವರ ದೈತೋಟ

1ಕರ್ನಾಟಕದ ಅತಿಹೆಚ್ಚು ದಿನಪತ್ರಿಕೆಗಳನ್ನು ಮುನ್ನಡೆಸಿದ ಹಿರಿಮೆ. 1991ರಿಂದ 2011ರವರೆಗಿನ ಎರಡು ದಶಕಗಳಲ್ಲಿ ಅತ್ಯಂತ ಹೆಚ್ಚು ಆವೃತ್ತಿಗಳು ಮತ್ತು ಪ್ರಸಾರದ ವಿಜಯ ಕರ್ನಾಟಕದ ಫೌಂಡರ್ ಚೀಫ್ ಎಡಿಟರ್. ಮಣಿಪಾಲದ ಉದಯವಾಣಿ ರೆಸಿಡೆಂಟ್ ಎಡಿಟರ್, ಟೈಮ್ಸ್ ಆಫ್ ಇಂಡಿಯಾ (ಕ) ಎಡಿಟರ್, ಕನ್ನಡದ ಸೀನಿಯರ್ ಮೋಸ್ಟ್ ದೈನಿಕ ಸಂಯುಕ್ತ ಕರ್ನಾಟಕದ ಚೀಫ್ ಎಡಿಟರ್ ಹಾಗೂ ನೂತನ ವಾರಪತ್ರಿಕೆ ಚೀಫ್ ಎಡಿಟರ್ ಆಗಿ ಹೊಣೆಹೊತ್ತವರು.

ಮುದ್ರಣ ಮಾಧ್ಯಮ, ರೇಡಿಯೋ, ಟೆಲಿವಿಷನ್ನಿನಲ್ಲಿ ಮೂರೂವರೆ ದಶಕಗಳಿಗೂ ಹೆಚ್ಚು ಅನುಭವ. ಪತ್ರಿಕೋದ್ಯಮ ಶಿಕ್ಷಣ, ಅಭ್ಯುದಯ ಪತ್ರಿಕೋದ್ಯಮ ಮತ್ತು ಮೀಡಿಯಾ ಮ್ಯಾನೇಜ್‌ಮೆಂಟ್‌ನಲ್ಲಿಯೂ ಅಪಾರ ಸಾಧನೆ. ಯುಜಿಸಿ ಮತ್ತು ಯೂನಿಸೆಫ್ ತರಬೇತಿ ಯೋಜನೆಗೆ ಡೆವಲಪ್‌ಮೆಂಟ್‌ ಕನ್ಸಲ್ಟೆಂಟ್ ಎಂದು ಮನ್ನಣೆ.

2015ರಲ್ಲಿ ಪ್ರತಿಷ್ಠಿತ ಟಿಎಸ್ಆರ್ ಪತ್ರಿಕೋದ್ಯಮ ಪ್ರಶಸ್ತಿ, ಮೂಡಬಿದ್ರೆಯ ನುಡಿಸಿರಿ ಪ್ರಶಸ್ತಿ, 2008ರಲ್ಲಿ ಅಭ್ಯುದಯ ಪತ್ರಿಕೋದ್ಯಮ ರಾಜ್ಯ ಪ್ರಶಸ್ತಿ, ಮೈಸೂರಿನ ಕುವೆಂಪು ಶಿಕ್ಷಣ ಸಂಸ್ಥೆಯಿಂದ ರಾಜ್ಯದ ಅತ್ಯುತ್ತಮ ಸಂಪಾದಕ ಪ್ರಶಸ್ತಿ (2006). 2008ರಲ್ಲಿ ರಾಷ್ಟ್ರೀಯ ಝಿ ಟಿವಿ ಚಾನೆಲ್‌ನಿಂದ ಕರ್ನಾಟಕದಲ್ಲಿ ಇಲೆಕ್ಟ್ರಾನಿಕ್ ಮೀಡಿಯಂ ಮತ್ತು ಪತ್ರಿಕೋದ್ಯಮಕ್ಕೆ ಅತಿ ದೊಡ್ಡ ಸೇವೆ ಸಲ್ಲಿಸಿದ ಸಂಪಾದಕ ಮತ್ತು ಅತ್ಯಂತ ಜನಪ್ರಿಯ ಮೀಡಿಯಾ ಪರ್ಸನ್ (ವೀಕ್ಷಕರ ಆಯ್ಕೆ) ಎಂಬೆರಡು ಪ್ರಶಸ್ತಿಗಳು. ವಾಯ್ಸ್ ಆಫ್ ಅಮೇರಿಕಾ ಮತ್ತು ಕೆನೆಡಿಯನ್ ರೇಡಿಯೋಗಳಲ್ಲಿ ಅವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ಹಲವು ಇಂಟರ್‌ನ್ಯಾಷನಲ್ ಜರ್ನಲ್‌ಗಳಿಗೂ ಲೇಖನ ಬರೆದಿದ್ದಾರೆ.

ಅಭ್ಯುದಯ ಪತ್ರಿಕೋದ್ಯಮ ಅವರ ನಿತ್ಯ ಜಪ. ಅಭ್ಯುದಯ ಸಂಬಂಧಿತ ಅನೇಕ ಡಾಕ್ಯುಮೆಂಟರಿಗಳನ್ನು, ರೇಡಿಯೋ ರೂಪಕಗಳನ್ನು ತಯಾರಿಸಿರುವ ಅನುಭವ. ಪತ್ರಿಕೋದ್ಯಮ ಮತ್ತಿತರ ವಿಷಯಗಳ ಬಗ್ಗೆ ಅವರು ಬರೆದಿರುವ, ಅನುವಾದಿಸಿರುವ ಪುಸ್ತಕಗಳ ಸಂಖ್ಯೆ 75ಕ್ಕೂ ಹೆಚ್ಚು.

Share

11 Comments For "ಗಾಸಿಪ್, ಗಾಸಿಪ್!
ಈಶ್ವರ ದೈತೋಟ ಕಾಲಂ
"

 1. ವಿಮಲಾ ನಾವಡ
  29th September 2016

  ನಿಜವಾಗಿಯೂ ಚೆನ್ನಾಗಿಯೇ ಇದೆ.

  Reply
  • Ishwar Daitota
   30th September 2016

   thank you for ur feedback

   Reply
   • Ishwar Daitota
    30th September 2016

    thank you for ur feedback

    Reply
 2. Yogish
  30th September 2016

  An excellent article Daitota Sir..@Readers don’t miss !!

  Reply
  • Manjula Hall. K
   30th September 2016

   Lekhana tumba sundaravagide, nijavagalu egina piligegalige bhavanegale illaveno yendu anisuttade, adre egina piligeyavaru tamma bhavanegalannu muchhittukondu badukuttare, namma piligeyavarige bhavanegalalliye baduki abyasa

   Reply
 3. 30th September 2016

  ನಿಜವಾಗಿಯೂ ಚೆನ್ನಾಗಿಯೇ ಇದೆ.

  Reply
  • Ishwar Daitota
   2nd October 2016

   vandanegalu nimma abhipraayakke

   Reply
 4. veena
  1st October 2016

  Sir, meaningful article…happy to read …

  Reply
  • Ishwar Daitota
   2nd October 2016

   Thank you Veena Madam

   Reply
 5. Sai nagaraj
  3rd October 2016

  Good sir

  Reply
 6. ಬಸವರಾಜ. ಬೂದಿಹಾಳ. ಗೋವಾ.
  5th August 2017

  ನಾನು ಎಂದೂ ಖಿನ್ನತೆಯಿಂದ ಬಳಲಿಲ್ಲ. ನಾನು ಮನುಷ್ಯರಿಗಿಂತ ಪ್ರಾಣಿ,ಪಕ್ಷಿ,ಕೀಟ,ಗಿಡಗಂಟಿಗಳೊಂದಿಗೇ ನನ್ನ ಗಳೆತನ ಹೆಚ್ಚು. ನನ್ನ ಗಳೆಯರಾದ ಇರುವೆಗಳಿಗೆ ವಾರಕ್ಕೆ ಪಾವು ಕಿಲೋ ಬೆಲ್ಲ ಬೇಕು.

  Reply

Leave a comment

Your email address will not be published. Required fields are marked *

Recent Posts More

 • 13 hours ago No comment

  ಯಾವುದೋ ಅಜ್ಞಾತ ಕಣ್ಣೀರಿನ ಕಥೆ

      ಕವಿಸಾಲು     ಚೌಕದೊಳಗೊಂದು ವೃತ್ತ ವೃತ್ತದೊಳಗೆ ಸರಸರನೆ ಓಡಾಡುವ ಅಂಕುಡೊಂಕಿನ ನಾಜೂಕು ಗೆರೆಗಳು ಬಾಗಿ ಬಳುಕಿನಲ್ಲೇ ಮೋಹ ಉಮ್ಮಳಿಸಿ ನೆಟ್ಟಕಣ್ಣು ಅತ್ತಿತ್ತ ಆಡದಂತೆ ಮನವ ಸಮ್ಮೋಹನಗೊಳಿಸುವ ಗೆರೆಯ ಬೆಡಗುಗಳು ಎಳೆ ಎಳೆಯೊಳಗೂ ಮೋಹಕ ಬಣ್ಣ ಮನದ ಮೂಲೆ ಮೂಲೆಗೂ ಆವರಿಸುವ ಕೆಂಪು, ಹಳದಿ, ನೀಲಿ, ಹಸಿರು ಹಾಗೂ ನೇರಳೆ ಬಿಳಿಯ ರಂಗೋಲಿ ಹುಡಿಗೆ ಹೊಂದಿಕೊಂಡಂತೆ ಅಂದ ಹೆಚ್ಚಿಸುವ ಕಡುಗಪ್ಪಿನ ನೆರಳ ಛಾಯೆ ಸೆಳೆವ ಭಾವದೊಳಗೆ ...

 • 18 hours ago No comment

  ಕಲಿಸಲಾದೀತೇ ಬಿಟ್ಟು ಹೊರಡುವುದನ್ನು?

      ಕವಿಸಾಲು     ಆಗೆಲ್ಲ ಅಂದರೆ ಬಹಳ ಹಿಂದೇನಲ್ಲ ಅದೇ, ಕಾಲಿಗೆ ಬರೀ ಬೆನ್ನತ್ತುವ ಹುಚ್ಚಿದ್ದಾಗ ಹೂ-ಚಿಟ್ಟೆ, ಆಕಾಶ, ನವಿಲು-ಮಳೆಬಿಲ್ಲು ಬರೀ ಬಣ್ಣ ಕಣ್ಣಲಿ ಅರಳುತಿದ್ದಾಗ ಚಿಟ್ಟೆ ಹಿಂದೆ ಓಡುತ್ತಿದ್ದ ಒಂದು ನಡುಹಗಲು ಅವ ಬಂದ; ಧೀರ ಗಂಭೀರ ಅಶ್ವಸ್ಥ ನಿಲುವು ಹೆಚ್ಚು ಮಾತಿಲ್ಲ ಹುಚ್ಚು ನಗೆಯಿಲ್ಲ ಕಣ್ಣಲಿ ಕಣ್ಣು ನೆಟ್ಟು, “ಶ್… ಹೊಂಚು ಹಾಕುವಾಗ ಸುಮ್ಮನಿರಬೇಕು ಆರಕೇರದೆ ಮೂರಕಿಳಿಯದೆ ಉಸಿರೂ ನಿಂತ ಹಾಗೆ ಸ್ತಬ್ಧ ...

 • 2 days ago No comment

  ಯಾಕಿಷ್ಟು ನೋವಿಟ್ಟಿರುವೆ ದೇವರೆ… ಅದೂ ಹೆಣ್ಣಿಗೇ!

      ‘ಹುಚ್ಚು ಹುಡುಗಿ, ಆಸ್ಪತ್ರೆಗೆ ಸ್ಮಶಾನಕ್ಕೆ ಬಂದು, ಹೋಗ್ತೀನಿ ಅನ್ನಬೇಕೇ ಹೊರತು ಹೋಗಿ ಬರ್ತೀನಿ ಅಂತಾರೇನೇ ತಾಯಿ? ಬಿಡ್ತು ಅನ್ನು’ ಅಂತ್ಹೇಳಿ ಹತ್ತು ಬೆರಳುಗಳಿಂದ ನೆಟಿಕೆ ತೆಗೆದು ನನ್ನ ದೃಷ್ಟಿ ದೋಷ ನಿವಾರಿಸಿದ ಆ ಬಂಧಕ್ಕೆ ಏನ್ ಹೇಳಲಿ?       ಹೃದಯವೇ ಚಿಕ್ಕದು.. ಆಸೆಯೂ ಚಿಕ್ಕದು… ಮಸ್ತಿ ಭರೇ ಮನ್ ಕಿ… ಮುಗ್ಧ ಕನಸೂ ಚಿಕ್ಕದು…ಂ A moment is… My wish comes ...

 • 2 days ago No comment

  ಗಟ್ಟಿಗಿತ್ತಿ

      ಕವಿಸಾಲು     ತನ್ನೊಂದು ಕೂದಲೆಳೆಯಿಂದಲೇ ಬೀಳುತ್ತಿದ್ದ ಮರವ ತಡೆದು ನಿಲ್ಲಿಸಿದವಳು ನನ್ನಜ್ಜ ಹೇಳುತ್ತಿದ್ದ ಕತೆಯಲ್ಲಿ ಬಂದವಳು ಈ ಗಟ್ಟಿಗಿತ್ತಿಯ ಕತೆ ಕೇಳಿಸಿಕೊಂಡಾಗ ನಾವಿನ್ನೂ ಹುಡುಗರು ಪೊದೆಮೀಸೆಯ ಅಜ್ಜ ಹೂಂಕರಿಸಿದರೆ ಗೋಡೆಗೆ ಅಂಟಿಕೊಂಡು ಚಿತ್ರದಂತೆ ಕೂತುಬಿಡುತ್ತಿದ್ದೆವು ಕಣ್ಣ ಮೊನಚಿನಿಂದಲೇ ಗದರಿಸಬಲ್ಲ ಗತ್ತಿನ ಅಜ್ಜನೂ ಕಳ್ಳ ಬೆಕ್ಕಿನಂತೆ ಮೂಲೆ ಸೇರುತ್ತಿದ್ದ ತರಗೆಲೆಯಂತೆ ತೂರಿಹೋಗುತ್ತಿದ್ದ ಅಜ್ಜಿಯ ನೆರಳು ಸೋಕಿದರೂ ಸಾಕಿತ್ತು ಅಜ್ಜಿಯ ಮುಂದೆ ಅಜ್ಜ ಹೀಗೇಕೆ ಮಗುವಿನ ಥರ? ...

 • 3 days ago No comment

  ಇರುವುದು ಮತ್ತು ಇಲ್ಲದಿರುವುದು

        ಕವಿಸಾಲು       ಇರುವುದು ಇದ್ದೇ ಇರುತ್ತದೆ ಸದಾ ಅದರಷ್ಟಕ್ಕೆ ಅದು. ಹಾಗೇ ಇಲ್ಲದಿರುವುದೂ… ಇರುವುದೆಲ್ಲವನು ಇರುತ್ತದೆಂಬ ಮಾತ್ರಕ್ಕೆ ಕಟ್ಟಿಕೊಳ್ಳಲಾಗದು ಬಿಟ್ಟು ಬಿಡಲೂ ಆಗದು. ಹಾಗೇ ಇಲ್ಲದಿರುವುದೆಲ್ಲವನ್ನೂ. ಇರುವುದು ಇದ್ದಲ್ಲೇ ಇರುತ್ತದೆಂಬ ಭ್ರಮೆ ಇಲ್ಲದಿರುವುದೂ ಇದ್ದಲ್ಲೇ ಇರುತ್ತದೆನ್ನುವುದೂ… ಇರುವುದು ಇದ್ದೂ ಇಲ್ಲದಂತೆ ಇಲ್ಲದಿರುವುದು ಇಲ್ಲದೆಯೂ ಇದ್ದಂತೆ ಇರುತ್ತದೆ: ಮಗುವಿನೊಳಗಿನ ನಗುವಿನಂತೆ. ನನ್ನಂತೆ ನಿನ್ನಂತೆ ಅದರಂತೆ ಇದರಂತೆ ಎದರಂತೆ ಎಲ್ಲದರೊಳಗಿನ ಆತ್ಮದಂತೆ… ಇರುತ್ತದೆ ಇದ್ದೂ ...


Editor's Wall

 • 07 December 2017
  4 days ago No comment

  ಈಗಲೂ ಭಯತ್ರಸ್ತಳಾಗಿ ಬೆಂಗೊಟ್ಟು ಓಡುತ್ತೇನೆ..!

                        ಆ ಮುಗ್ಧ ಮಕ್ಕಳ ಎಳೆಯ ಮನಸ್ಸುಗಳ ಮೇಲೆ ಮಾಯದಂತೆ ಆಳವಾಗಿ ಉಳಿದುಬಿಡುವ ಈ ನಂಜು ನಖಗಳ ಗೀರುಗಾಯಗಳ ನೋವನ್ನು ನೇವರಿಸುವವರು ಯಾರು?     ಮೊನ್ನೆ ನಡು ಮಧ್ಯಾಹ್ನ ಒಕ್ಹಿ ಚಂಡಮಾರುತದ ಪರಿಣಾಮ ಮೋಡ ಕವುಚಿದ ಮುಗಿಲಿನಡಿ ಇಕ್ಕೆಲಗಳಲ್ಲೂ ಹಿನ್ನೀರು ಆವರಿಸಿದ ಆ ಉದ್ದಾನುದ್ದದ ಆ ನಿರ್ಜನ ರಸ್ತೆಯಲ್ಲಿ ರುಮ್ಮನೆ ಬೀಸುವ ಶೀತಲ ...

 • 05 December 2017
  6 days ago No comment

  ನಿಸ್ವಾರ್ಥ ಸೇವಕರೆಲ್ಲ ಲೋಕನಿಂದಿತರೇ…!

          ಲಾಭ ಬಡುಕರ, ತೋರಿಕೆಗೆ ಮಾಡುವವರ ಹೆಸರುಗಳೆಲ್ಲ ಚಿನ್ನದ ಚೌಕಟ್ಟಿನಲ್ಲಿ ಬರೆಯಲ್ಪಡುವುದು ನಮ್ಮ ದೇಶದ ದೌರ್ಭಾಗ್ಯ!         ತಾಯಿ ತೆರೇಸಾ ಬಗ್ಗೆ ಹೀನಾಯವಾಗಿ ಮಾತಾಡುವಾಗ ನನಗೆ ಒಂದು ಘಟನೆ ನೆನಪಾಗುತ್ತೆ. ನನ್ನ ಊರಿನಿಂದ ಒಂದಿಪ್ಪತ್ತು ಕಿಲೋಮೀಟರು ದೂರದ ಹಳ್ಳಿಯಿಂದ ಒಬ್ಬ ಮಹಿಳೆ ನನ್ನ ಮನೆಯ ಹತ್ತಿರದ ಚರ್ಚ್ ಗೆ ಬರುತ್ತಿದ್ದರು. ಮಕ್ಕಳೂ ಇಲ್ಲದ ವಿಧವೆಯಾಗಿದ್ದ ಆಕೆಯ ಗಂಡ ಫಾರೆಸ್ಟ್ ಇಲಾಖೆಯಲ್ಲಿ ...

 • 04 December 2017
  1 week ago No comment

  ಎಲ್ಲರಿಗೂ ಗೊತ್ತು; ಯಾರಿಗೂ ಗೊತ್ತಿಲ್ಲ

  ಒಂದು ಸಂಗತಿ ಹೇಳುವೆ. ಕಳೆದ ಐದು ವರ್ಷಗಳಿಂದ ಒಂದು ಸಂಬಂಧದಲ್ಲಿರುವ ಯುವತಿಯೊಬ್ಬಳು ಮೂರು ವರ್ಷದ ಹಿಂದೆ ತನ್ನ ಬದುಕಿನಲ್ಲಿ ಬಂದ ಮತ್ತೊಬ್ಬನ ಬಗ್ಗೆ ಹೇಳಿಕೊಳ್ಳುತ್ತಿದ್ದಾಳೆ. ಆ ಶನಿವಾರ ರಾತ್ರಿ ಪಾರ್ಟಿಯಲ್ಲಿದ್ದ ಅವಳಿಗೆ ಅದ್ಯಾರೋ ತನ್ನತ್ತಲೇ ಆಸೆ ತುಂಬಿಕೊಂಡು ನೋಡುತ್ತಿರುವಂತೆ ಅನ್ನಿಸುತ್ತದೆ. ಹೌದೊ ಅಲ್ಲವೊ ಎಂಬಂತಿದ್ದ ಅದನ್ನು ಖಾತ್ರಿಪಡಿಸಿಕೊಳ್ಳುವಷ್ಟರಲ್ಲಿ ಆತನೇ ಹತ್ತಿರ ಬಂದು ಪರಿಚಯಿಸಿಕೊಳ್ಳುತ್ತಾನೆ. ಸಿಕ್ಕಾಪಟ್ಟೆ ದುಡ್ಡಿರುವವನು. ತರುಣ. ಕಟ್ಟುಮಸ್ತಾಗಿರುವವನು. ಅಷ್ಟೇ ಸುಂದರ. ಅವನೊಡನೆ ಬೆರೆತು ಕುಣಿಯಲು ಹೆಚ್ಚು ಹೊತ್ತು ...

 • 03 December 2017
  1 week ago One Comment

  ನನ್ನನ್ನೇ ನಾನು ನಿರ್ಲಕ್ಷಿಸುವಷ್ಟು…

            | ಕಮಲಾದಾಸ್ ಕಡಲು     ಕಮಲಾದಾಸ್ ಬದುಕೆನ್ನುವ roller coaster ಸವಾರಿಯಲ್ಲಿ ಹಲವಾರು ಏಳುಬೀಳುಗಳು. ಈ ಕವಿತೆ ಅವರು ಇಸ್ಲಾಂಗೆ ಮತಾಂತರ ಹೊಂದಿದ ನಂತರದ ದಿನಗಳದ್ದು. ತಾವೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಷ್ಟು ಉತ್ಸುಕತೆಯಿಂದ ಇದು ತನ್ನ ಬದುಕಿನ ಬೆಸ್ಟ್ ನಿರ್ಧಾರ ಎಂದುಕೊಳ್ಳುವ ಕಮಲಾದಾಸ್, ಅದು ತುಸು ಅತ್ತಿತ್ತಲಾದಾಗಲೂ ಅಷ್ಟೇ ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಡುತ್ತಾರೆ, ಯಾರೇನು ತಿಳಿದುಕೊಳ್ಳಬಹುದು ಅನ್ನುವ ಆತಂಕವೇ ಇಲ್ಲದೆ! ...

 • 30 November 2017
  2 weeks ago No comment

  ಪೀಹೂ ಎಂದರೆ ಹಾಡುವ ಹೂ…

                        ನನ್ನ ಬದುಕಿನ ಅಪೂರ್ವ ದಿನವದು. ಸ್ವರ್ಗದ ಹಕ್ಕಿಯೊಂದು ನನ್ನ ಮಡಿಲು ಸೇರಿತ್ತು. ಆಗಷ್ಟೇ ಪುಕ್ಕ ಮೂಡುತ್ತಿದ್ದ ಈ ಹಾಡುವ ಹೂವನ್ನು ಕಂಡೊಡನೆ ನಾನಿದನ್ನು ಪೀಹೂ ಎಂದು ಕರೆದೆ. ಒಂದು ಹಳೆಯ ಹಕ್ಕಿಗೂಡಲ್ಲಿ ಪೀಹೂವನ್ನಿಟ್ಟು ಅದಕ್ಕೆ ತುತ್ತುಣಿಸಿದೆ. ಅದು ನನ್ನನ್ನು ಅಮ್ಮನೆಂದು ಭಾವಿಸಿತು.     ಆ ದಿನ ಕತ್ತಲು ಹರಿಯುವುದಕ್ಕೂ ಮೊದಲೇ ಪೀಹೂ ...