Share

ಕಾಯುವ ಸುಖ
ಸುಧಾ ಶರ್ಮ ಚವತ್ತಿ ಕಾಲಂ

https://i2.wp.com/connectkannada.com/wp-content/uploads/2016/08/sudha.jpg?w=658&ssl=1

ಕಾಯುವುದು ಕಷ್ಟ ಆದರೂ ಅದೊಂದು ಸುಖ. ಇದೊಂದು ರೀತಿಯಿಂದ ವಿರೋಧಾಭಾಸದಂತೆ ಕಾಣಬಹುದು. ಇತ್ತೀಚೆಗೆ ಪುತಿನ ಅವರ ಪ್ರತೀಕ್ಷೆ ಕವಿತೆ ಓದುವಾಗ ಈ ಮಾತು ಯಾಕೋ ಮತ್ತೆ ಮತ್ತೆ ನೆನಪಾಯಿತು. ಈ ಕವಿತೆಯಲ್ಲಿ ಹೆಣ್ಣೊಬ್ಬಳು ಸಖನೋ, ಬಂಧುವೋ,ದೈವವೋ, ಪರಮಾಪ್ತನೋ ಅಥವಾ ಇವೆಲ್ಲವೂ ಆದವನೊಬ್ಬನ ಬರುವಿಕೆಗಾಗಿ ಕಾಯುತ್ತಾಳೆ. ಹಾಗೆ ಕಾಯುವ ಉತ್ಕಟತೆಯಲ್ಲಿ ಅವಳು ತನ್ನೆದುರು ಇರುವ ವಾಸ್ತವದ ಪರಿವೆಯನ್ನೇ ಮರೆತಿದ್ದಾಳೆ. ಅವನು ಈಗ ಬರಬಹುದು, ಹೀಗೆ ಬರಬಹುದು, ಬಂದೇ ಬಿಟ್ಟ ಎನ್ನುವ ಕ್ಷಣವೊಂದು ಯುಗವಾದಂತೆ ಕಾಯುವ ಅವಳಿಗೆ ಕೊನೆಗೆ ಅವನು ಸಿಕ್ಕನೇ, ಸಿಗಲಿಲ್ಲವೇ ಎನ್ನುವುದು ಮುಖ್ಯವಾಗುವುದೇ ಇಲ್ಲ. ತನ್ನ್ನನ್ನೇ ತಾನು ಸಂಪೂರ್ಣ ಕಳೆದುಕೊಂಡು ಹೀಗೆ ಇನ್ನೊಂದು ಜೀವಕ್ಕೆ ತುಡಿಯುವ ಈ ಕವಿತೆಯಲ್ಲಿ ಕಾಯುವ ಖುಷಿಯೇ ಒಂದು ಅನನ್ಯ ಅನುಭವವಾಗಿದೆ.

ಕಾಯುವ ಕವಿತೆಗಳನ್ನು ನಾವು ಮಹಿಳಾ ಕಾವ್ಯಗಳಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಕಾಣಬಹುದು. ಅಥವಾ ಪುರುಷರು ಬರೆದಿದ್ದರೂ ಈ ಕಾಯುವ ಮಹಿಳೆಯರನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಅವಳು ಕೃಷ್ಣನಿಗಾಗಿ ಕಾಯುವ ರಾಧೆ ಇರಬಹುದು, ನಂದ ಕಿಶೋರನನ್ನು ಅರಸುವ ಯಶೋಧೆ ಇರಬಹುದು. ಯಾಕೋ ರಾಮಾಯಣದ ಸ್ತ್ರೀ ಪಾತ್ರಗಳು ಕಾಯುವುದರಲ್ಲೇ ಬದುಕು ಕಳೆದವು ಎನ್ನುವಂತಿದೆ. ಇಲ್ಲಿ ಎಲ್ಲರೂ ಕಾಯುವವರೇ. ಕೌಸಲ್ಯೆ ಮಗ ಎಂದು ಬಂದಾನೆಂದು ಕಾಯುತ್ತಾಳೆ. ಊರ್ಮಿಳೆ ಲಕ್ಷ್ಮಣನಿಗಾಗಿ, ಸೀತೆ ಅಶೋಕವನದಲ್ಲಿ ರಾಮನಿಗಾಗಿ. ಕಲ್ಲಾದ ಅಹಲ್ಯೆ ಒಂದು ಹೆಜ್ಜೆ ಇಡುವ ಪಾವನ ಪುರುಷನಿಗಾಗಿ, ಶಬರಿ ಹಣ್ಣು ಸ್ವೀಕರಿಸುವ ಶ್ರೀರಾಮಚಂದ್ರನಿಗಾಗಿ, ತನ್ನ ಮಗನಿಗೆ ಅಧಿಕಾರ ಬರಲೆಂದು ಕೈಕೇಯಿ, ಎಲ್ಲ ಬದಲಾಗಬೇಕೆಂದು, ಬದಲಾವಣೆಯೇ ಜಗದ ನಿಯಮವೆಂದು ಮಾನವ ಕುಲವೂ ಕಾಯುತ್ತಿರುತ್ತದೆ. ಹೀಗೆ ಕಾಯುವಿಕೆಯ ಹಿಂದೆ ಅಪಾರ ಭರವಸೆ ಇದೆ. ಪ್ರೀತಿ ತುಂಬಿದ ನಿರೀಕ್ಷೆ ಇದೆ. ಪ್ರತೀಕ್ಷೆಯ ಒಳ ತುಡಿತವೇ ನಾಳೆ ಇಂದಿಗಿಂತ ಚೆಂದ ಎನ್ನುವ ಭಾವ.

1ನಮಗೆ ಗುರಿ ಮುಟ್ಟುವುದು ಮುಖ್ಯವಲ್ಲ. ಗುರಿಯ ಹಾದಿಯಲ್ಲಿ ಸಾಗುವುದೇ ಖುಷಿ. ಹಿಮಾಲಯದ ಎತ್ತರವನ್ನು ಏರುವಾಗಲೆಲ್ಲ ಏರುವ ಎತ್ತರಕ್ಕಿಂತ ಹಾದಿಯ ಖುಷಿ ಕಡೆಗಣಿಸಲಾಗದು. ಹಾಗಾಗಿಯೇ ಗುರಿ ಮುಟ್ಟುವುದು ಓಟವಲ್ಲ. ದಾರಿ ಮತ್ತು ಗುರಿ ಬೇರೆ ಅಲ್ಲ. ದಾರಿಯೇ ಗುರಿ ಆದರೆ ಓಡುವ ಅವಸರವೇ ಇಲ್ಲ.

ಮಕ್ಕಳು ಆಟ ಆಡುವಾಗ ಗಮನಿಸಬೇಕು. ಆ ಆಟ ಕೊನೆಗೊಳ್ಳುವುದೇ ಇಲ್ಲ. ಆಟ ಆಡಲು ಅವರು ಮಾಡಿಕೊಳ್ಳುವ ಸಿದ್ಧತೆಯಲ್ಲಿಯೇ ಖುಷಿ ಇದೆ. ಆಟ ಮುಗಿಸುವ ಧಾವಂತ ಅವರಿಗಿಲ್ಲ. ಅದು ಯಾವುದೇ ಆಟ ಇರಬಹುದು. ಸುಮಾರು ಮಕ್ಕಳು ಸೇರಿ ಆಡುತ್ತಾರಲ್ಲಾ ಅಂತಹದು. ಅಡುಗೆ ಆಟವೇ ಇರಲಿ, ಎಲ್ಲ ತರುತ್ತಾರೆ, ಅಪ್ಪ ಅಮ್ಮ ಆಗುತ್ತಾರೆ, ಅಲ್ಲಿ ಶಾಲೆಯೂ ಆಗುತ್ತದೆ, ತಮ್ಮನೆಂಬ, ತಂಗಿಯೆಂಬ ಕಿರಿ ಕಿರಿಯ ಗೊಂಬೆಯೂ ಇರುತ್ತದೆ. ಬೆಕ್ಕು, ನಾಯಿಗಳೂ ಬರುತ್ತವೆ. ಸಣ್ಣ ಸಣ್ಣ ಸಂಗತಿಗಳನ್ನು ಜೋಡಿಸಿಕೊಳ್ಳುತ್ತ ಅವರು ನೋಡಿದ ಲೋಕವನ್ನೇ ಮತ್ತೆ ಆಟವಾಗಿಸಿಕೊಳ್ಳುತ್ತಾರೆ. ಅವರಿಗೆ ಬೇಕಾದ ಹಾಗೆ ಆಡುತ್ತಾರೆ.

ನಾವು ಜೀವನವನ್ನೂ ಇಂತಹದೇ ಆಟದಂತೆ ನೋಡಬೇಕಾಗಿದೆ. ಗೊಂಬೆ ಆಟ ಎಂದಿದ್ದು ಸುಳ್ಳಲ್ಲ. ಆಟ ಆಡುವ ಖುಷಿ ಮಾತ್ರ ನಮ್ಮದು. ಮಕ್ಕಳು ಮರಳಿನಲ್ಲಿ ಮನೆ ಕಟ್ಟುತ್ತಾರೆ. ಮತ್ತೆ ಅವರೇ ಆ ಮನೆಯನ್ನು ನೀರು ಕೊಚ್ಚಿಕೊಂಡು ಹೋಗುವಾಗ ಖುಷಿಯಿಂದ ನಗುತ್ತಾರೆ. ಅವರಿಗೆ ಮನೆ ಕಟ್ಟುವುದು ಖುಷಿಯೇ ಹೊರತು ಕಟ್ಟಿಟ್ಟು ಯಾರಿಗೋ ತೋರಿಸುವುದು ಅಲ್ಲ. ಕಟ್ಟುವಾಗಲೇ ಖುಷಿ ಅನುಭವಿಸಿಯಾಗಿದೆಯಲ್ಲ. ಎಲ್ಲ ಸಾಧನೆಯೂ, ಸಾರ್ಥಕತೆಯೂ ಇಷ್ಟೇ. ಅದು ಘಟಿಸುವುದೆಂಬುದಲ್ಲ, ಸಹಜವಾಗಿ ಇರುವುದು.

ಡಾ. ಶಿವರಾಮ ಕಾರಂತರು ಹೇಳಿದ ಮಾತೊಂದು ನೆನಪಾಗುತ್ತಿದೆ. “ಮಕ್ಕಳು ಬಾಲ್ಯದಲ್ಲಿಯೇ ನಿಮಗೆ ಕೊಡಬೇಕಾಗಿರೋದನ್ನೆಲ್ಲ ಕೊಟ್ಟಿದ್ದಾರೆ. ಆದರೆ ಅವರು ದೊಡ್ಡವರಾದ ಮೇಲೆ ಸಂಪಾದಿಸಲಿ, ನಮ್ಮನ್ನು ನೋಡಿಕೊಳ್ಳಲಿ ಎಂದು ನಾವು ನಿರೀಕ್ಷಿಸುತ್ತ ಅವರು ಬಾಲ್ಯದಲ್ಲಿ ಕೊಟ್ಟಿದ್ದನ್ನು ಅನುಭವಿಸಲಾರೆವು.” ಮಕ್ಕಳ ಬಾಲ್ಯವನ್ನೂ ನಮ್ಮ ಖುಷಿಯನ್ನೂ ಜೊತೆಗೆ ಬೆಸೆಯುವ ಬಗೆಯೇ ಸುಮ್ಮನೇ ಪ್ರೀತಿಸುವುದು. ಮಕ್ಕಳ ಬೆಳವಣಿಗೆಯನ್ನು ಬರಿದೇ ನೋಡುವುದು.

————-

ಸುಧಾ ಶರ್ಮಾ ಚವತ್ತಿ

286637_218799308166417_3412973_o[1]“ಒದ್ದೆ ಕಣ್ಣುಗಳ ಪ್ರೀತಿ” ಕವನ ಸಂಕಲನದ ಮೂಲಕ ಭರವಸೆ ಹುಟ್ಟಿಸಿದ ಸುಧಾ ಶರ್ಮಾ ಚವತ್ತಿ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ ಪರಿಣಿತರು. ಪತ್ರಿಕೆಗಳಲ್ಲಿ ಲೇಖನ, ಅಂಕಣಗಳ ಮೂಲಕ ಪರಿಚಿತರು. “ಆವಿಯಾಗಿದೆ ಮಾತು” (ಮಲ್ಲಿಗೆ), “ಷೇರೆಂಬ ಮಾಯಾಂಗನೆ” ( ವಿಜಯ ಕರ್ನಾಟಕ ), “ಪ್ರಾಫಿಟ್ ಪ್ಲಸ್” (ವಿಜಯವಾಣಿ) ಪ್ರಕಟಿತ ಅಂಕಣಗಳು. ಕಿರುತೆರೆ ಕಾರ್ಯರ್ಕಮಗಳ ನಿರ್ದೇಶನ, ನಿರ್ಮಾಣ, ನಿರೂಪಣೆಯ ಅನುಭವ. ಈಗ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಇವರು ಉತ್ತಮ ವಾಗ್ಮಿ. ಸಮೂಹ ಮಾತುಗಾರಿಕೆಯೂ ಇವರ ಉತ್ಕಟ ಪ್ರೀತಿಗಳಲ್ಲಿ ಒಂದು.

Share

2 Comments For "ಕಾಯುವ ಸುಖ
ಸುಧಾ ಶರ್ಮ ಚವತ್ತಿ ಕಾಲಂ
"

  1. ವಿಮಲಾನಾವಡ
    4th October 2016

    ನಿಮ್ಮ ಕಾಲಂಗಾಗಿ ಕಾಯುವ ಸುಖವನ್ನೂ ನಾವು ಅನುಭವಿಸುತ್ತಿದ್ದೇವೆ.

    Reply
    • sudha sharma
      6th October 2016

      thank you vimala

      Reply

Leave a comment

Your email address will not be published. Required fields are marked *

Recent Posts More

  • 2 days ago No comment

    ಕವಿಸಾಲು | ಕೈಗಳ ಚಾಚಿ ನೋಡು

        ಕವಿಸಾಲು         ಕಟ್ಟಿಕೊಂಡ ಚೌಕಟ್ಟುಗಳ ಮುರಿದುಬಿಡು ಹರಿಯಬಿಡು ಬಿಳಿ ಗೆಣ್ಣುಗಳಿಗೆ ಮೈಯ ತುಂಬ ಹರಿವ ಮಿಂಚುಗಳನು ತುಂಬಿಕೊಳ್ಳಲಿ ರಕ್ತ, ಮಾಂಸಕ್ಕೆ ಮತ್ತೊಮ್ಮೆ ಭಾವಗಳು ಸುಖಿಸಲಿ ಬೊಗಸೆ ತುಂಬ ಬಿಗಿಯಾಗಿ ಮುಚ್ಚಿದ ಮುಷ್ಠಿಯನ್ನು ಬಿಚ್ಚಿ ಒಮ್ಮೆ ನನಗೆ ತೋರಿಸಿಬಿಡು ಬಚ್ಚಿಟ್ಟುಕೊಂಡಿರುವುದು ನಿನ್ನನ್ನೋ ಕಳೆದುಹೋದರೆ ಎಂಬ ಭಯದಲ್ಲಿ ಭದ್ರವಾಗಿ ಹಿಡಿದ ನೆನಪುಗಳನ್ನೋ ಚೆನ್ನಾಗಿ ಗೊತ್ತು ನಿನ್ನ ಬೆಳಗಾಗುವುದು ಆ ಹಸ್ತ ದರ್ಶನದಲಿ ರಾತ್ರಿಯಾಗುವುದು ಅದೇ ...

  • 5 days ago No comment

    ಹೊಸ ಕಾಲದ ಹರಕೆಯ ಕುರಿಗಳು!

      ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...

  • 2 weeks ago No comment

    ಕಥನ | ಮುಕ್ತಾಯ

      ಕಥನ       ದಿನದ ಮುಕ್ತಾಯಕ್ಕೆ ಡೈರಿ ಬರೆಯುವುದೊಂದು ಚಟ ನನ್ನ ಪಾಲಿಗೆ. ಅದೆಷ್ಟೋ ಸುಳ್ಳುಗಳನ್ನು ಬರೆದ ಈ ಪಾಪಿ ಕೈಗಳು ಸತ್ಯವನ್ನು ಬರೆಯುವುದು ಇಲ್ಲಿ ಮಾತ್ರ. ಅಂದ ಹಾಗೆ ಇಂದು ಈ ದಿನದ ಮುಕ್ತಾಯವಷ್ಟೇ ಅಲ್ಲ ನನ್ನ ಜೀವನದ್ದೂ ಕೂಡಾ. ರಣರಂಗದಲ್ಲಿ ವೈರಿಗಳೊಡನೆ ಕಾದಾಡುವಾಗ, ಅದೆಷ್ಟೋ ಸೈನಿಕರ ಛಿದ್ರವಾದ ಶವಗಳನ್ನು ಮಣ್ಣು ಮಾಡಿ ಎದೆಗುಂದಿದಾಗ, ಯುಧ್ಧಖೈದಿಯಾಗಿ ಶತ್ರುದೇಶಕ್ಕೆ ಸೆರೆಸಿಕ್ಕಿ ಅವರು ಕೊಟ್ಟ ಚಿತ್ರಹಿಂಸೆಗಳನ್ನು ಅನುಭವಿಸಿದಾಗ ...

  • 2 weeks ago No comment

    ಕವಿಸಾಲು | ಕಾಡುತ್ತಿರು ಆಗಾಗ ನೀನು

        ಕವಿಸಾಲು         ಎಷ್ಟೊಂದು ಸಾರಿ ಮಾತಾಡುತ್ತಿದ್ದೆ ನಿನ್ನೊಡನೆ ಕೂತು ಗಿಡ, ಬಳ್ಳಿ, ಮರ ಮೋಡಗಳನು ಮನ ಮುಟ್ಟುವ ಪ್ರತಿ ಅಲೆಗಳನು ಕರೆದು ಮಾತಾಡಿಸುತ್ತಿದ್ದೆವು ಹದವಾಗಿ ಬೆರೆತು ರಾತ್ರೋ ರಾತ್ರಿಯ ಕಪ್ಪಿನಲಿ ಕೌತುಕದ ಅಪ್ಪುಗೆಯಲಿ ನಡುಗುವ ಚಳಿಯಲಿ ಒಂದಾಗಿ ಬೆಚ್ಚಗೆ ಕುಳಿತು ಕರಿ ಗಿರಿಶಿಖರಗಳ ಬೆಳ್ಳಿರೇಖೆಗಳನು ಫಳ್ಳನೆ ಮಿನುಗುವ ನಕ್ಷತ್ರಗಳನೂ ಕೈಯಲ್ಲಿ ಹಿಡಿದು ಕುಳಿತು ಮುಖಾಮುಖಿಯಾಗಿ ಕೂತು ಹರಟುತ್ತಿದ್ದೆವು ನಾವೊಂದಾಗಿದ್ದಾಗ ನಮಗನಿಸಿದ್ದನ್ನು ದಿನಚರಿ ...

  • 2 weeks ago No comment

    ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು

      ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ. ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ...


Editor's Wall

  • 09 November 2018
    5 days ago No comment

    ಹೊಸ ಕಾಲದ ಹರಕೆಯ ಕುರಿಗಳು!

      ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...

  • 28 October 2018
    2 weeks ago No comment

    ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು

      ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ. ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ...

  • 31 August 2018
    2 months ago No comment

    ಪ್ರಸಾದ್ ಪಟ್ಟಾಂಗ | ಓದು ಮಗು ಓದು…

        “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

  • 30 August 2018
    3 months ago No comment

    ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                        ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

  • 26 August 2018
    3 months ago No comment

    ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

        ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...