Share

‘ಪಿಂಕ್’ ಎಂಬ ‘ಕೆಂಪು’
ಪ್ರಸಾದ್ ನಾಯ್ಕ್ ಕಾಲಂ

https://i1.wp.com/connectkannada.com/wp-content/uploads/2016/05/ash.jpg?w=658

ಕೆಲವೊಮ್ಮೆ ಇಂತಹ ಉಳಿಪೆಟ್ಟುಗಳು ಬೇಕಾಗುತ್ತವೆ. ಬೇಕೇಬೇಕು ಎನ್ನುವಷ್ಟು!

ಅದು ವ್ಯವಸ್ಥೆಯಾಗಲೀ, ಸಮಾಜವಾಗಲೀ ಅಥವಾ ವೈಯಕ್ತಿಕವಾಗಿಯೇ ಇರಲಿ ಇಂಥಾ ಸಾತ್ವಿಕ ಪೆಟ್ಟುಗಳು ಬೀಳದಿದ್ದರೆ ಜೀವನವೆಂಬುದು ನಿಂತ ನೀರಾಗುತ್ತದೆ. ಸಿನೆಮಾ ಎಂಬ ಮಾಧ್ಯಮದ ಮೂಲಕವಾಗಿ ಸಮಾಜಕ್ಕೆ, ಪುರುಷಪ್ರಧಾನ ವ್ಯವಸ್ಥೆಗೆ ಇಂಥದ್ದೊಂದು ಸಾತ್ವಿಕ ಪೆಟ್ಟನ್ನು, ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳುವ ಅವಕಾಶವನ್ನು ಇತ್ತೀಚೆಗಷ್ಟೇ ತೆರೆಗೆ ಬಂದ ‘ಪಿಂಕ್’ ಸಿನಿಮಾ ಒದಗಿಸಿದೆ ಎಂಬುದನ್ನು ಹೇಳಲೇಬೇಕು.

ದೆಹಲಿಯಲ್ಲಿ ನೆಲೆಸಿರುವ ಮೂವರು ತರುಣಿಯರು (ಮೀನಲ್, ಫಲಕ್ ಮತ್ತು ಆಂಡ್ರಿಯಾ) ಮತ್ತು ಇವರದ್ದೇ ಫ್ಲ್ಯಾಟ್ ಪಕ್ಕ ನೆಲೆಸಿರುವ ಒಬ್ಬ ಹಿರಿಯ ವಕೀಲನ (ದೀಪಕ್ ಸೆಹಗಲ್) ಪಾತ್ರಗಳನ್ನು ಮುಖ್ಯ ಭೂಮಿಕೆಯಲ್ಲಿರಿಸಿ ಚಿತ್ರವು ಸಾಗುವ ಪರಿಯು ಅದ್ಭುತ. ಬೇಡವೆಂದರೂ ತನ್ನ ಮೇಲೆ ಏರಿಬಂದ ಪುಂಡ ಶ್ರೀಮಂತ ಯುವಕನೊಬ್ಬನ ತಲೆಗೆ ಗಾಜಿನ ಬಾಟಲಿನಿಂದ ಹೊಡೆದು ಸಮಸ್ಯೆಗೆ ಸಿಲುಕಿಕೊಂಡ ಹೆಣ್ಣು ಮೀನಲ್. ಹೀಗೆ ಲೈಂಗಿಕವಾಗಿ ಕಿರುಕುಳಕ್ಕೀಡಾಗಿ ತಾನೇ ಮೊದಲು ದೂರೊಂದನ್ನು ದಾಖಲಿಸಿದ್ದರೂ ರಾಜಕೀಯ ಹಿನ್ನೆಲೆಯಿರುವ ಆರೋಪಿಯ ಮತ್ತು ಅವನ ಗೆಳೆಯರ ವ್ಯವಸ್ಥಿತ ಒತ್ತಡ, ಕುತಂತ್ರಗಳಿಂದಾಗಿ ವಿಚಾರಣೆಯುದ್ದಕ್ಕೂ ಸ್ವತಃ ತಪ್ಪಿತಸ್ಥಳಂತೆ ಬಿಂಬಿತಳಾಗುತ್ತಾ ಕಣ್ಣೀರಾಗುವ ಪರಿಸ್ಥಿತಿ ಮೀನಲ್‍ಳದ್ದು.

ಪ್ರಕರಣದ ಮುಖ್ಯ ಆರೋಪಿಯಾಗಿ ಕಟಕಟೆಯಲ್ಲಿ ನಿಲ್ಲುವ ರಾಜ್‍ವೀರ್ ಪಾತ್ರದ ಪ್ರತಿಷ್ಠಿತ ಕುಟುಂಬ, ವಿದ್ಯಾಭ್ಯಾಸದ ಹಿನ್ನೆಲೆಯ ಹಮ್ಮು, ‘ಐ ಡೋಂಟ್ ಕೇರ್’ ಎನ್ನುವ ಉಡಾಫೆತನ, ತಮ್ಮ ಮನೆಯ ಸಂಸ್ಕಾರವಂತ ಹೆಣ್ಣು-ಹೊರಗಿನ ಮೋಜಿನ ಹೆಣ್ಣುಗಳೆಂಬ ಹುಂಬ ದೃಷ್ಟಿಕೋನಗಳು, ನಾನಿರೋದೇ ಹೀಗೆ ಎಂಬ ನಿಲುವಿನ ಧಾರ್ಷ್ಟ್ಯ ಇತ್ಯಾದಿಗಳು ಮುಖವಾಡ ಹೊತ್ತ ಸಮಾಜದಲ್ಲಿ ಮಾತಾಗಿ ಬರದ, ಆದರೆ ಮನದಲ್ಲಿ ಬೇರೂರಿರುವ ಪುರುಷಕೇಂದ್ರಿತ ಮನೋಭಾವದ ಅಂಶಗಳು ಎಂದರೂ ತಪ್ಪಾಗಲಿಕ್ಕಿಲ್ಲ. ಆರೋಪಿಯಾದ ರಾಜವೀರ್, ಮೀನಲ್‍ಳ ಬಗ್ಗೆ ಹೇಳುತ್ತಾ ಅವಳು ನಗುನಗುತ್ತಾ ಮಾತನಾಡುತ್ತಿದ್ದಳು, ಆಗೊಮ್ಮೆ ಈಗೊಮ್ಮೆ ಕ್ಯಾಶುವಲ್ ಆಗಿ ನನ್ನನ್ನು ಮುಟ್ಟುತ್ತಿದ್ದಳು. ಈ ‘ಸುಳಿವು'(?)ಗಳಿಂದಾಗಿ ಇವಳನ್ನು ಪಳಗಿಸಬಹುದು ಅಂದುಕೊಂಡೆ ಅನ್ನುತ್ತಾನೆ. ಈ ‘ಸುಳಿವು’ ಎಂಬ ಪದವೇ ಅದೆಷ್ಟು ಹರಿತ! ನನ್ನೊಂದಿಗೆ ತುಂಬಾನೇ ಬೆರೆತುಕೊಂಡಿದ್ದಳು, ನಮ್ಮೊಂದಿಗೆ ಒಂದೆರಡು ಡ್ರಿಂಕ್ ಅನ್ನೂ ಕುಡಿದಳು ಎನ್ನುತ್ತಾನೆ. ಎಷ್ಟಾದರೂ ತಡರಾತ್ರಿಯ ಕಾನ್ಸರ್ಟಿಗೆ ಬಂದವಳು, ಮಾಡರ್ನ್ ಹುಡುಗಿ, ಮೈಕಾಣುವ ಬಟ್ಟೆ, ಕೊಂಚ ಅಮಲಿನಲ್ಲೂ ಇದ್ದಾಳೆ… ಹೀಗಾಗಿ ಇವಳೊಂದಿಗೆ ಏನೂ ಮಾಡಬಹುದು ಎನ್ನುವ ಅರ್ಥದಲ್ಲೇ ವಾದಿಸುವ ರಾಜವೀರ್ ಮುಂದೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಕೀಳು ಕಟ್ಟುಕತೆಗಳನ್ನು ಕಟ್ಟುತ್ತಾನೆ. ತುಂಬಿದ ನ್ಯಾಯಾಲಯದಲ್ಲಿ ಪಟ್ಟುಹಿಡಿದು ಅವಳಿಗೂ, ಅವಳ ಇಬ್ಬರು ಸ್ನೇಹಿತೆಯರಿಗೂ ವೇಶ್ಯೆಯ ಪಟ್ಟ ಕಟ್ಟುತ್ತಾನೆ. ಬಲಿಯಾಗಿದ್ದು ನಾನೇ ಹೊರತು ಅವಳಲ್ಲ ಎಂದೇ ಸತ್ಯದ ತಲೆಯ ಮೇಲೆ ಹೊಡೆದಂತೆ ಸಾರುತ್ತಾನೆ.

ಹೀಗೆ ತನ್ನ ಮೂಗಿನ ನೇರಕ್ಕೆ ಮಾತನಾಡುತ್ತಾ ಹೋಗುವ ರಾಜವೀರ್ ಒಂದು ಕಡೆಯಾದರೆ ಆತನ ಹೇಳಿಕೆಗಳನ್ನೇ ಒಂದೊಂದಾಗಿ ಎತ್ತಿ ತೋರಿಸಿ ಆಧುನಿಕ ಹೆಣ್ಣಿನ ಬಗ್ಗೆ ಸಮಾಜವು ತಳೆದಿರುವ ಭಾವನೆಗಳನ್ನು, ಪೂರ್ವಾಗ್ರಹಗಳನ್ನು ಬಯಲು ಮಾಡುತ್ತಾ ಹೋಗುತ್ತಾರೆ ವಕೀಲ ದೀಪಕ್ ಸೆಹಗಲ್ ಪಾತ್ರಧಾರಿ ಬಿಗ್-ಬಿ. ಬೈಪೋಲಾರ್ ಡಿಸಾರ್ಡರಿನಿಂದ ಬಳಲುತ್ತಿರುವ, ಆಗಾಗ ಮಾತು ಮರೆಯುವ, ಅತ್ತಿತ್ತ ಓಡಾಡುವ ಜಿರಳೆಯಿಂದ ಭಗ್ನಗೊಳ್ಳುತ್ತಿರುವ ಏಕಾಗ್ರತೆಯೊಂದಿಗೆ ಸೆಣಸಾಡುತ್ತಿರುವ ಈ ಪಾತ್ರದ ಡೈಲಾಗುಗಳು ಚಿತ್ರವನ್ನು ನೋಡಿಮುಗಿಸಿದ ನಂತರವೂ ಕಾಡುವಂಥವುಗಳು. “ನಮ್ಮ ಸಮಾಜದಲ್ಲಿ ಗಡಿಯಾರದ ಮುಳ್ಳುಗಳು ಹೆಣ್ಣಿನ ಕ್ಯಾರೆಕ್ಟರ್ ಅನ್ನು ನಿರ್ಧರಿಸುತ್ತವೆ”, “ಕತ್ತಲ ಬೀದಿಗಳಲ್ಲಿ ಹೆಣ್ಣೊಬ್ಬಳನ್ನು ನೋಡಿದೊಡನೆಯೇ ಕಾರಿನ ಕಿಟಕಿಯ ಗಾಜುಗಳು ಕೆಳಜಾರುತ್ತವೆ. ಆದರೆ ಹಗಲಿನಲ್ಲಿ ಹೀಗಾಗುವುದಿಲ್ಲ”, “ನಮ್ಮಲ್ಲಿ ಮದ್ಯವು ಗಂಡಿಗೆ ಆರೋಗ್ಯದ ಒಂದು ತೊಡಕಷ್ಟೇ. ಆದರೆ ಹೆಣ್ಣಿಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್ ಆಗುತ್ತದೆ” ಎಂದು ಕಡ್ಡಿಮುರಿದಂತೆ ಹೇಳುತ್ತಾ ಸಮಾಜದ ಆಷಾಢಭೂತಿತನವನ್ನು ಬೆತ್ತಲಾಗಿಸುತ್ತಾ ಹೋಗುತ್ತಾರೆ ಸೆಹಗಲ್.

ಸಿನೆಮಾದ ಚೌಕಟ್ಟಿನಾಚೆಗೂ ಕಾಡುವ ಪಾತ್ರ ಅಮಿತಾಭರದ್ದು. ಮುಂಜಾನೆಯ ಜಾಗಿಂಗಿನಲ್ಲಿ ಮೀನಲ್ ತನ್ನ ಮುಖವನ್ನು ಮರೆಮಾಚಲು ಹುಡ್ ಅನ್ನು ಧರಿಸಿದಾಗ ಮಾತಿಲ್ಲದೆ ಅದನ್ನು ತೆಗೆದು ವೀಕ್ಷಕನ ಮನಗೆಲ್ಲುತ್ತಾರೆ ಸೆಹಗಲ್. ನ್ಯಾಯಾಲಯದ ಕಟಕಟೆಯಲ್ಲಿ ದರ್ಪದಿಂದ ನಿಂತಿರುವ ರಾಜವೀರ್ ನನ್ನು “ಮೊದಲು ಜೇಬಿನಿಂದ ಕೈ ಹೊರಗೆತೆಯಿರಿ ಪ್ಲೀಸ್” ಎಂದು ಹೇಳುವುದೂ ಇದೇ ಸೆಹಗಲ್. ‘ನೋ’ ಎಂದರೆ ಶಬ್ದ ಮಾತ್ರವಲ್ಲ, ತನ್ನಲ್ಲೇ ಒಂದು ವಾಕ್ಯವದು, ಬೇರೆಯದೇ ಆದ ವ್ಯಾಖ್ಯಾನವೇನೂ ಇದಕ್ಕೆ ಬೇಡ ಎಂಬುದು ಅವರ ಸ್ಪಷ್ಟ ನಿಲುವು. “ನೋ ಅಂದರೆ ನೋ. ನೋ ಎನ್ನುವ ಹೆಣ್ಣು ನಿಮ್ಮ ಪರಿಚಿತರೇ ಆಗಲಿ, ಗೆಳತಿಯಾಗಿರಲಿ, ಪ್ರೇಯಸಿಯಾಗಿರಲಿ, ಸೆಕ್ಸ್ ವರ್ಕರ್ ಆಗಿರಲಿ ಅಥವಾ ಪತ್ನಿಯೇ ಆಗಿರಲಿ, ನೋ ಅಂದಾಕ್ಷಣ ನಿಲ್ಲಿಸತಕ್ಕದ್ದು”, ಎಂದು ಹೇಳಿ ತನ್ನ ವಾದಸರಣಿಗೆ ಅಂತ್ಯ ಹಾಡುವ ಸೆಹಗಲ್ ಪಾತ್ರವನ್ನು ನೋಡುತ್ತಿದ್ದರೆ ಆ ಕ್ಷಣವೇ ಎದ್ದುಹೋಗಿ ಅವರನ್ನು ಅಭಿಮಾನದಿಂದ ತಬ್ಬಿಕೊಳ್ಳಬೇಕೆನಿಸುವುದು ಸತ್ಯ. ಅಂತೆಯೇ ಮುಖ್ಯ ಮತ್ತು ಪೋಷಕಪಾತ್ರಗಳೆನ್ನದೆ ಎಲ್ಲಾ ಪಾತ್ರಗಳೂ ಕೂಡ ತಮ್ಮದೇ ಆದ ವಿಶಿಷ್ಟ ಛಾಪನ್ನು ತೆರೆಯಲ್ಲಿ ಮೂಡಿಸಿರುವುದು ಚಿತ್ರದ ಮತ್ತೊಂದು ವಿಶೇಷ.

ಅಂದಹಾಗೆ ಪಿಂಕ್ ಯಾವುದನ್ನೂ ಹೊಸದಾಗಿ ಹೇಳಿಲ್ಲ. ಆದರೆ ಹೇಳಬೇಕಾಗಿರುವುದನ್ನು ಸುತ್ತುಬಳಸಿ ಹೇಳದೆ ಸ್ಪಷ್ಟವಾಗಿ, ಕಣ್ಣಿಗೆ ಕಣ್ಣುಕೊಟ್ಟು ಹೇಳಿದೆ. ಸ್ವತಂತ್ರ, ಸ್ವಾವಲಂಬಿ, ಮಹಾತ್ವಾಕಾಂಕ್ಷಿ ಮತ್ತು ದಿಟ್ಟ ಹೆಣ್ಣುಮಕ್ಕಳ ಬಗ್ಗೆ ಪುರುಷಪ್ರಧಾನ ಸಮಾಜಕ್ಕಿರುವ ಭಯವನ್ನು ಬೆತ್ತಲು ಮಾಡಿದೆ. ಮತ್ತು ಈ ಭಯವನ್ನು ಮರೆಮಾಚಲು ಧರ್ಮ, ಶೀಲ, ಸಂಪ್ರದಾಯ, ಕ್ಯಾರೆಕ್ಟರುಗಳ ಹೆಸರು ಹೇಳಿ ಮಹಿಳೆಯರನ್ನು ಹೀಗಳೆಯುವ, ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಪುರುಷಪ್ರಧಾನ ಸಮಾಜದ ವಿಫಲ ಪ್ರಯತ್ನವನ್ನೂ ಪರಿಣಾಮಕಾರಿಯಾಗಿ ತೆರೆಯ ಮೇಲೆ ತಂದಿದೆ. ಜೊತೆಗೇ ಪೋಲೀಸ್ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರ, ಕಾಸ್ಮೋಪಾಲಿಟನ್ ಮಹಾನಗರಗಳಲ್ಲಿರುವ ಪೊಳ್ಳು ವೈಭವೋಪೇತ/ಆಧುನಿಕ ಜೀವನ, ಸ್ವಾತಂತ್ರ್ಯದ ಹೆಸರಿನಲ್ಲಿ ಮಿತಿಮೀರಿ ಬೆಳೆದಿರುವ ಸ್ವೇಚ್ಛೆ… ಹೀಗೆ ಎಲ್ಲದಕ್ಕೂ ಕನ್ನಡಿ ಹಿಡಿದು ವೀಕ್ಷಕನನ್ನು ಗಂಭೀರವಾಗಿ ಚಿಂತನೆಗೆ ಹಚ್ಚುತ್ತದೆ ‘ಪಿಂಕ್’.

ಯಕಃಶ್ಚಿತ್ ಬಣ್ಣವಾಗಿದ್ದರೂ ಹಲವು ವರ್ಷಗಳಿಂದ ಸ್ತ್ರೀಲಿಂಗದೊಂದಿಗೇ ಗುರುತಿಸಿಕೊಂಡು ಬಂದ ಬಣ್ಣವೆಂದರೆ ‘ಪಿಂಕ್’. ಚಿತ್ರದ ಶೀರ್ಷಿಕೆಯೇ ಏನನ್ನೋ ಹೇಳಬಯಸುತ್ತಿದೆಯೇ?

ಅಷ್ಟಕ್ಕೂ ಅಮಿತಾಭರ ಆ ಸ್ಪಷ್ಟ ‘ನೋ’ ನನ್ನನ್ನು ಈಗಲೂ ಕಾಡುತ್ತಿದೆ.

———

ಪ್ರಸಾದ್ ನಾಯ್ಕ್

Prasadಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರಾದ ಪ್ರಸಾದ್ ನಾಯ್ಕ್ ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿಯನ್ನು ಪಡೆದವರು. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತಕ್ಕಮಟ್ಟಿಗೆ ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

One Comment For "‘ಪಿಂಕ್’ ಎಂಬ ‘ಕೆಂಪು’
ಪ್ರಸಾದ್ ನಾಯ್ಕ್ ಕಾಲಂ
"

 1. ವಿಮಲಾನಾವಡ
  19th October 2016

  ಚೆನ್ನಾಗಿದೆ.

  Reply

Leave a comment

Your email address will not be published. Required fields are marked *

Recent Posts More

 • 4 hours ago No comment

  ಪ್ರತಿಯೊಬ್ಬರೊಳಗೂ ಒಂದೊಂದು ಕಥೆ!

  ಆಕೆ ಮೀರಾ. ತಾನು ಬರೆದ ಕಥೆಯೊಂದರ  ಮೂಲಕ ಇದ್ದಕ್ಕಿದ್ದಂತೆ ಲಕ್ಷಾಂತರ ಮನಸ್ಸನ್ನು ಮುಟ್ಟಿಬಿಡುತ್ತಾಳೆ. ವಿವಾನ್ ಎಂಬ ಬ್ಯಾಂಕ್ ಅಧಿಕಾರಿಯೊಬ್ಬನಿಗೆ ಜಗತ್ತನ್ನೇ ಸುತ್ತುವ ಕನಸು. ಕೆಫೆಯೊಂದರ ಮ್ಯಾನೇಜರ್ ಕಬೀರ್ ತನ್ನದೇ ಆದ ಏನನ್ನಾದರೂ ಸಾಧಿಸುವ ಹಂಬಲವಿಟ್ಟುಕೊಂಡವನು. ಅದೇ ಕೆಫೆಯ ಗ್ರಾಹಕಿ ನಿಶಾ ಎಂಥದೋ ಹತಾಶೆಗೆ ಸಿಕ್ಕಿಹಾಕಿಕೊಂಡು, ತನ್ನದೇ ಆದ ಗುಟ್ಟುಗಳನ್ನು ಬಚ್ಚಿಟ್ಟುಕೊಂಡಿರುವವಳು. ಪ್ರತಿಯೊಬ್ಬರದೂ ಒಂದೊಂದು ಕಥೆ. ಅಂಥ ನಾಲ್ವರೂ ಒಂದೆಡೆ ಸೇರಿದಾಗ ಏನಾಗುತ್ತದೆ? ಈ ಕುತೂಹಲವನ್ನು ತೆರೆದಿಡುತ್ತ ಹೋಗುವ ಕಾದಂಬರಿಯೇ ...

 • 1 day ago No comment

  ನನ್ನೊಳಗಿನ ಮಗುವಿಗೊಂದು ಪತ್ರ

        ನಿನ್ನೆ ನನ್ನ ಹಳೆಯ ಕಡತಗಳನ್ನೆಲ್ಲಾ ತೆರೆದು ಏನನ್ನೋ ಹುಡುಕುತ್ತಿದ್ದಾಗ ನೀನು ಬಿಡಿಸಿದ ಕೆಲವು ಚಿತ್ರಗಳು ಸಿಕ್ಕವು. ನಿಜಕ್ಕೂ ಅದ್ಭುತವಾಗಿದ್ದವು ಅವುಗಳು.       ಮಕ್ಕಳ ದಿನಾಚರಣೆಯ ಋತುವಿನಲ್ಲಿ ನಮ್ಮದೇ ಹನ್ನೆರಡರ ವ್ಯಕ್ತಿತ್ವಕ್ಕೊಂದು ಪತ್ರ ಬರೆದರೆ ಹೇಗಿರುತ್ತದೆ ಎಂಬ ಯೋಚನೆಯೊಂದು ತಲೆಯೆತ್ತಿತು. ಸದ್ಯ ಪತ್ರಗಳಂತೂ ಮಾಯವಾಗಿವೆ. ನಿತ್ಯಜೀವನದ ಜಂಜಾಟದಲ್ಲಿ ನಮ್ಮೊಳಗಿನ ಮಗುವೂ ನಿಧಾನಕ್ಕೆ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲೇ ಇವೆರಡನ್ನೂ ಒಂದೇ ವೇದಿಕೆಗೆ ತಂದಿಡುವ ...

 • 2 days ago No comment

  ದುರಿತ ಕಾಲದ ಕವಿತೆಗಳು

      ಕವಿಸಾಲು       1 ಒಂಟಿಯಾಗಿ ಹೆಗಲಲಿ ನೇಗಿಲ ಎಳೆದು ಅಜ್ಜಿ ಬಿತ್ತಿದ ರಾಗಿಗೆ ಸಗ್ಗಣಿ ಗೊಬ್ಬರ ಹಾಕಿ ಖಂಡುಗಗಟ್ಟಲೇ ರಾಗಿ ಬೆಳೆದ ಅಜ್ಜನ ಹೊಲದ ಮೇಲಿವತ್ತು ಚತುಷ್ಕೋನ ರಸ್ತೆ ರಾರಾಜಿಸುತ್ತಿದೆ ಆರಾಮಾಗಿ ಅಲ್ಲಿ ಮಲಗಿರುವ ಅವನ ಎದೆಯ ಮೆಲೆ ಅನಿಲ ಟ್ಯಾಂಕರುಗಳು ಅಡ್ಡಾಡುತಿವೆ ನೋವಾಗುತ್ತಿರುವುದು ಮಾತ್ರ ನನಗೆ! ~ 2 ಅಭಿವೃದ್ದಿಯ ಜಾಹಿರಾತಿನಲ್ಲಿ: ಹಡಗಿನಂತಹ ಕಾರುಗಳು ಹಾಳೆಗಳಂತಹ ಮೊಬೈಲುಗಳು ಕಣ್ಣು ಕುಕ್ಕುವ ಕಂಪ್ಯೂಟರುಗಳು ...

 • 2 days ago No comment

  ನಾಲ್ಕು ಹನಿಗಳು

      ಕವಿಸಾಲು         ಧ್ಯೇಯದಿಂದ ನೆಲ ಅಗೆದೆ ಗಿಡ ನೆಡಲು. ಮತ್ತೆ ಕಾಣಿಸಿತು ಧ್ಯಾನಸ್ಥ ಎರೆಹುಳು. ~ ನದಿ ತಟದ ಬೆಂಚಿನ ಮೇಲೆ ನಾನು ಎರಡೂ ತಟಗಳಿಗೆ ಅಂಟಿದ್ದ ದಪ್ಪನೆ ಕಾಂಕ್ರೀಟ್ ಗೋಡೆ. ಹರಿವ ನೀರು, ನಾನು ಬಂಧಿಗಳೇ. ~ Mindfulness ಎಂದೆಲ್ಲಾ ಹೇಳುವ ಅವರ ಹೆಮ್ಮೆಗೆ ಕಾಣಿಸಲಿಲ್ಲವೇಕೆ ಅಖಂಡವಾಗಿ ನಿಂತು ಜಗಿಯುವ ಆ ಎಮ್ಮೆ? ~ ಆ ಒಂದು ಮಳೆ ಹನಿ ...

 • 2 days ago No comment

  ಕಂಗಾಲಾಗಿದ್ದಾಗ ನಾವೆಲ್ಲ, ಮೆಲ್ಲಮೆಲ್ಲನೆ ಬಂದಳಲ್ಲ!

    ಅಡಗಿಕೊಳ್ಳಲು ಬಾಳೆ ಬುಡ ಆರಿಸಿಕೊಂಡ ಪುಟಾಣಿಗೆ ಬೇಸಿಗೆಯ ಆ ಮಧ್ಯಾಹ್ನ ಊಟ ಮಾಡಿ ನಿದ್ದೆ ಮಾಡುವ ಸಮಯವಾಗಿತ್ತು.         ಬಾಲ್ಯ ಬಂಗಾರ   ಬಾಲ್ಯದ ಮಜವನ್ನು ಅನುಭವಿಸದ ಮಕ್ಕಳು ಬದುಕನ್ನು ಪೂರ್ಣವಾಗಿ ಸವಿಯುವುದು ಕಷ್ಟವೇ? ಆ ಮಜವೇ ಭಿನ್ನ, ಅದರಲ್ಲೂ ಹಳ್ಳಿಯ ಬದುಕಿನ ಬಾಲರ ಜೀವನದಲ್ಲಿ ಬಾಲ್ಯ ಅನನ್ಯವಾದ ಜೀವನಾನುಭವ ನೀಡುವ ಕಾಲ. ಪೇಟೆಯಲ್ಲಿ ರೇಷ್ಮೆ ಹುಳುವಿನಂತೆ ಪೊರೆಯ ಒಳಗೆ ಬದುಕುವ ಮಕ್ಕಳ ...


Editor's Wall

 • 21 November 2017
  1 day ago No comment

  ನನ್ನೊಳಗಿನ ಮಗುವಿಗೊಂದು ಪತ್ರ

        ನಿನ್ನೆ ನನ್ನ ಹಳೆಯ ಕಡತಗಳನ್ನೆಲ್ಲಾ ತೆರೆದು ಏನನ್ನೋ ಹುಡುಕುತ್ತಿದ್ದಾಗ ನೀನು ಬಿಡಿಸಿದ ಕೆಲವು ಚಿತ್ರಗಳು ಸಿಕ್ಕವು. ನಿಜಕ್ಕೂ ಅದ್ಭುತವಾಗಿದ್ದವು ಅವುಗಳು.       ಮಕ್ಕಳ ದಿನಾಚರಣೆಯ ಋತುವಿನಲ್ಲಿ ನಮ್ಮದೇ ಹನ್ನೆರಡರ ವ್ಯಕ್ತಿತ್ವಕ್ಕೊಂದು ಪತ್ರ ಬರೆದರೆ ಹೇಗಿರುತ್ತದೆ ಎಂಬ ಯೋಚನೆಯೊಂದು ತಲೆಯೆತ್ತಿತು. ಸದ್ಯ ಪತ್ರಗಳಂತೂ ಮಾಯವಾಗಿವೆ. ನಿತ್ಯಜೀವನದ ಜಂಜಾಟದಲ್ಲಿ ನಮ್ಮೊಳಗಿನ ಮಗುವೂ ನಿಧಾನಕ್ಕೆ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲೇ ಇವೆರಡನ್ನೂ ಒಂದೇ ವೇದಿಕೆಗೆ ತಂದಿಡುವ ...

 • 19 November 2017
  3 days ago No comment

  ಸಂಸಾರದ ಬಂಧಗಳ ಬಗ್ಗೆ ಬರಿದೆ ಮಾತಿಂದ…

          | ಕಮಲಾದಾಸ್ ಕಡಲು     ನನ್ನ ಅಪ್ಪನ ಸಾವು (My Father’s Death) ಕಮಲಾದಾಸ್ ಕವಿತೆಯ ಅನುವಾದ     ಅಪ್ಪ ಸತ್ತಾಗ ಅಪ್ರಾಮಾಣಿಕರು ಮಾತ್ರ ಕಣ್ಣೀರು ಸುರಿಸಿದರು, ಅವನ ಹೆಣದೊಡನೆ ಫೋಟೋ ತೆಗೆಸಿಕೊಳ್ಳಲು ಬಂದ ಅವರಿಗೆ ಅಪ್ಪನೆಂದರೆ ವಾಸ್ಕೋಡಗಾಮ ಕಪ್ಪಾದ್ ಬೀಚಿನ ಮರಳಿನ ಮೇಲೆ ಮೊದಲು ಕಾಲಿರಿಸಿದ ನಂತರ ಕ್ಯಾಲಿಕಟ್’ನಲ್ಲಿ ಸತ್ತವರಲ್ಲಿ ಅತಿ ಮುಖ್ಯವಾದ ವ್ಯಕ್ತಿಯಾಗಿದ್ದರು ಅಷ್ಟೇ. ರಸ್ತೆಯ ಇಕ್ಕೆಲದಲ್ಲೂ ...

 • 17 November 2017
  5 days ago 2 Comment

  ನನ್ನನ್ನು ಕವಿಯೆಂದರು..!

      ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

 • 14 November 2017
  1 week ago No comment

  ಅವ್ರ್ ಬಿಟ್ ಇವ್ರ್ ಬಿಟ್ ಅವ್ರ್ ಬಿಟ್ ಇವ್ರ್ ಯಾರು?

      ಈಗ ಮಕ್ಕಳನ್ನೆಲ್ಲ ಪರ ಊರುಗಳ ಬೋರ್ಡಿಂಗ್ ಶಾಲೆಗಳಲ್ಲಿ ನೂಕಿ ಯಾವ ಮನೆಗಳಲ್ಲೂ ಮಕ್ಕಳಿಲ್ಲದೆ ಬಣಗುಟ್ಟುತ್ತಿವೆ. ಹೋಮ್ ವರ್ಕ್, ರ್ಯಾಂಕ್ ಓಟ, ಅಂಕದ ಬೇಟೆಯಲ್ಲಿ ಸಿಲುಕಿ ಯಾವ ರಸ್ತೆಯಲ್ಲೂ ಮಕ್ಕಳು ಆಡುವುದಿಲ್ಲ. ಮಕ್ಕಳ ದಿನಕ್ಕೆ ಒಂದು ವಿಶೇಷ ಬರಹ, ಕಾದಂಬಿನಿ ಅವರಿಂದ       ಮಕ್ಕಳೆಲ್ಲ ಸೇರಿ ಯಾರಾದರೂ ಚೂರು ದೊಡ್ಡವರನ್ನು ಅಜ್ಜಿಯಾಗಲು ಕೇಳಿಕೊಂಡಾದ ಮೇಲೆ ಎಲ್ಲರೂ ವೃತ್ತಾಕಾರವಾಗಿ ನಿಂತು ಕ್ಲಾಪ್ಸ್ ಹಾಕುವ ಮೂಲಕ ಕಳ್ಳರನ್ನು ...

 • 09 November 2017
  2 weeks ago No comment

  ಕೆಂಡದಂಥ ಕಾವ್ಯ

  ಪಾಶ್ ಎಂದೇ ಗೊತ್ತಾಗಿರುವ ಪಂಜಾಬಿ ಮತ್ತು ಹಿಂದಿ ಕವಿ ಅವತಾರ್ ಸಿಂಗ್ ಸಂಧು, ಕ್ರಾಂತಿಕಾರಿ ಕವಿ. ತನ್ನ 20ನೇ ವಯಸ್ಸಿನಲ್ಲಿ ಆತ ಮೊದಲ ಸಂಕಲನ ‘ಲೋಹ್ ಕಥಾ’ ಪ್ರಕಟಿಸುತ್ತಿದ್ದ ಹಾಗೆಯೇ (1970) ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಟ್ಟಿದ್ದ. ಅದೇ ದಶಕದಲ್ಲೇ ಪ್ರಕಟಗೊಂಡ ಮತ್ತೂ ಎರಡು ಸಂಕಲನಗಳು ಪಂಜಾಬಿ ಕಾವ್ಯಲೋಕದಲ್ಲಿ ಆತನ ಹೆಸರನ್ನು ಶಾಶ್ವತಗೊಳಿಸಿಬಿಟ್ಟವು. ಅವನ ಕಾವ್ಯದ ಕತ್ತಿ ಖಲಿಸ್ತಾನಿಗಳ ವಿರುದ್ಧ ಝಳಪಿಸುತ್ತಿತ್ತು. ಕಡೆಗೆ ಅದೇ ಅವನ ಹತ್ಯೆಗೂ ಕಾರಣವಾಯ್ತು. ...