Share

‘ಮೌಲ್ಯ’ಗಳು ಬದಲಾಗಿವೆ
ಸುಧಾ ಶರ್ಮ ಚವತ್ತಿ ಕಾಲಂ

https://i2.wp.com/connectkannada.com/wp-content/uploads/2016/08/sudha.jpg?w=658ದಿನ ಬೆಳಗಾಗುವುದರೊಳಗಾಗಿ ನಮ್ಮೆದುರು ಇರುವ ರೂಪಾಯಿಯ ಬೆಲೆ ಕೇವಲ ಆಕಾರದ ದೃಷ್ಟಿಯಿಂದ ಅಲ್ಲ ಅದರ ನಿಜವಾದ ಬೆಲೆಯಿಂದಲೂ ಬದಲಾಗಿಹೋಯಿತು. ಮನೆಯಲ್ಲಿರುವ ಪುಡಿಗಾಸಿಗೂ ಬೆಲೆ ಬಂತು. ಸಾಸಿವೆ ಡಬ್ಬದಲ್ಲಿರುವ, ಆಗೀಗ ಆದೀತೆಂದು ಮಡಚಿಟ್ಟ, ಬಚ್ಚಿಟ್ಟ ಹಣಗಳನ್ನು ಹೊರ ತೆಗೆದು ಸರಳ ಬದುಕು ನಿರಾಳವಾಯಿತು. ಕಳೆದ ಮೂರ್ನಾಲ್ಕು ದಿನಗಳಲ್ಲಿ ಕೆಲವೇ ನೂರು ರೂಪಾಯಿಗಳನ್ನು ಇಟ್ಟುಕೊಂಡು ಓಡಾಡಿಯಾಯಿತು. ಪ್ರತಿ ಸಾರಿ ಖರ್ಚು ಮಾಡುವಾಗ ಲೆಕ್ಕ ಹಾಕುವುದು ಸಹಜವಾಯಿತು. ಯಾವಾಗಲೂ ಹೀಗಿರುವುದು ಎಷ್ಟು ಚೆನ್ನ ಅನ್ನಿಸಿತು.

ಯಾವ ತರಕಾರಿಯವಳು ತೂಕದಲ್ಲಿ ಮೋಸ ಮಾಡುತ್ತಾಳೆಂದು ಗೊಣಗುತ್ತಿದ್ದರೋ ಆವಳು ಹೇಳುತ್ತಿದ್ದಾಳೆ “ನನಗೆ ಇವತ್ತೇ ದುಡ್ಡು ಕೊಡಬೇಕಾಗಿಲ್ಲ. ನಿಮಗೆ ಆದಾಗ ಕೊಡಿ.” ಹಾಲು, ದಿನಸಿ ಅಂಗಡಿಯವರು, ಆಟೋ ಚಾಲಕರು, ಬಸ್ ಕಂಡಕ್ಟರ್ ಹೀಗೆ ಪ್ರತಿಯೊಬ್ಬರೂ ತಮ್ಮೊಳಗಿನ ಇನ್ನೊಂದು ಮುಖವನ್ನೇ ತೋರಿಸಿದರು. ಯಾರೂ ಯಾರ ಬಗೆಗೆ ಅನುಮಾನ ಪಡಲಿಲ್ಲ. ಬೇಸರವಿಲ್ಲ. ನನ್ನಿಂದಲೂ ಸಹಾಯ ಆಗಲಿ ಎನ್ನುವ ಭಾವನೆ ಸ್ಪಷ್ಟವಾಗಿತ್ತು. ಇಷ್ಟು ದಿನ ಇದ್ದದ್ದು ದುಡ್ಡಿನ ಮೆರೆತ. ಬೇಂದ್ರೆಯವರು ಬಹಳ ಹಿಂದೆಯೇ ಹೇಳಿದ “ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಬಿದ್ದವರ ತುಳಿಯುತಲಿತ್ತು.” ಒಂದು ಸಾರಿ ಈ ಕುಣಿತ ನಿಂತರೆ ಲೋಕದ ಜನರನ್ನು ನೋಡುವ ಚಹರೆ ಬದಲಾಗಿ ಬಿಡತ್ತೆ. ಈ ಚಹರೆ ಬದಲಾಗಬೇಕಾಗಿದೆ. ನೋಟು ಬದಲಾದರೆ ಸಾಲದು ನೋಟವೂ ಬದಲಾಗಬೇಕು. ನಾವು ನೋಡುವ ಶ್ರಿಮಂತಿಕೆಯ ಅಟ್ಟಹಾಸಕ್ಕೆ ಏಣಿ ಹಾಕಿದ ವ್ಯವಸ್ಥೆಯೇ ಈಗ ಏಣಿ ತೆಗೆದಿಡಬೇಕು. ಹಣವೊಂದೇ ಎಲ್ಲವೂ ಅಲ್ಲ ಎನ್ನುವುದನ್ನು ಅರಿಯುವುದಕ್ಕಾದರೂ….

ಒಬ್ಬ ರಾಜ ತನ್ನ ದೇಶವನ್ನು ಮಾರು ವೇಷದಲ್ಲಿ ಸುತ್ತುತ್ತಿದ್ದಾಗ ತೀವ್ರ ಬಾಯಾರಿಕೆ ಆಯಿತು. ಹಳ್ಳಿಯ ರೈತನ ಮನೆಗೆ ಬರುತ್ತಾನೆ, ಸಾಮಾನ್ಯನಂತೆ ನೀರು ಕೇಳುತ್ತಾನೆ. ರೈತನಿಗೋ ಆಗಂತುಕ ಬಂದ ಖುಷಿಗೆ ನೀರೇನು ಏಳನೀರು ಕೊಡುತ್ತಾನೆ, ಹಣ್ಣು ಕೊಟ್ಟು ಆದರಿಸುತ್ತಾನೆ. ರಾಜನಿಗೆ ಆಶ್ಚರ್ಯ ಅವನು ತೋರಿದ ಪ್ರೀತಿ, ಸತ್ಕಾರಗಳಿಂದ ಸಂತುಷ್ಠನಾಗಿ ತನ್ನ ಬಳಿ ಇರುವ ಮುತ್ತಿನ ಹಾರವನ್ನು ರೈತನಿಗೆ ಕೊಡಲು ಹೋಗುತ್ತಾನೆ. ರೈತನಿಗೋ ಇದ್ಯಾವುದೂ ಬೇಕಾಗಿಲ್ಲ. ” ನಿನ್ನ ಈ ಸರ ಇಟ್ಟುಕೊಂಡು ನಾನೇನು ಮಾಡಲಿ? ಇದು ಹೂವಾ? ಹಣ್ಣಾ? ನಿನಗೆ ಕೊಟ್ಟ ಖುಷಿ ನನಗೆ. ಅಷ್ಟೇ ಸಾಕು.” ರೈತನ ಪ್ರಶ್ನೆಗೆ ರಾಜನ ಬಳಿ ಉತ್ತರ ಇಲ್ಲ. ಗೋಣಿ ಚೀಲದಲ್ಲಿ ನೋಟಿನ ಕಂತೆ ಇಟ್ಟುಕೊಂಡವರಿಗೆ ಹಣದ ಅರ್ಥವಾಗಲೀ ಬದುಕಿನ ಸಾರ್ಥಕತೆಯಾಗಲೀ ಗೊತ್ತಿಲ್ಲ.

ಹಣದ ವಿಚಾರದಲ್ಲಿ ಇದ್ದ ನಮ್ಮ ಮದ ಕರಗದ ಹೊರತು ಮನುಷ್ಯತ್ವ ನೆಲೆಸಿರುವ ಹೊಸ ಸಮಾಜದ ನಿರ್ಮಾಣ ಸಾಧ್ಯವಿಲ್ಲ. ದುಡ್ಡಿನ ಮೂಲಕವೇ ಈಗ ಅಧಿಕಾರವನ್ನೂ, ಆಡಳಿತವನ್ನೂ, ಸಮಸ್ತವನ್ನೂ ಕೊಂಡುಕೊಳ್ಳಬಹುದೆಂಬುದು ಸಾಬೀತಾದಾಗ ಹಣವೇ ಸರ್ವಸ್ವ ವಾಯಿತು. ಕಳೆದ ಕೆಲ ದಶಕಗಳಿಂದ ರಾಜಕೀಯಕ್ಕೆ, ಚುನಾವಣೆಗೆ ಹಣವೇ ಅತ್ಯಂತ ಪ್ರಮುಖ ಸಂಗತಿಯಾಯಿತು. ಹಣ ಇರದಿದ್ದರೆ ರಾಜಕೀಯ, ನಾಯಕತ್ವ, ಶಿಕ್ಷಣಗಳಂತಹ ಮೂಲ ಆಶಯದಿಂದ ವಂಚಿತರಾಗುವ ಹಾಗಾಯಿತು. ಚುನಾವಣೆಗಳು ಹಣದ ಅಟ್ಟಹಾಸಕ್ಕೆ ತೆರೆದ ಅಖಾಡ ವಾಯಿತು. ಹೀಗೆ ಹಣದ ಮದಕ್ಕೆ ನಲುಗಿ ಏನೂ ಮಾಡದ ಅಸಹಾಯಕತೆಯಲ್ಲಿರುವ ಕೋಟಿ ಕೋಟಿ ಭಾರತೀಯರಿಗೆ ಬದಲಾವಣೆಯ ಭರವಸೆ ಬೇಕಿತ್ತು.

ಯಾವುದೇ ಹೊಸ ನೀತಿ, ನಿಯಮ ತಂದಾಗಲೂ ಕಾರ್ಯವಿಧಾನದ ಅಡಚಣೆ ಸಹಜ. ನಮ್ಮ ಮನಸ್ಥಿತಿಯೂ ಹೊಸದನ್ನು ಸ್ವೀಕರಿಸಲು ಅಷ್ಟು ಸುಲಭಕ್ಕೆ ಸಿದ್ದವಿರುವುದಿಲ್ಲ. ದೋಷವನ್ನು, ಅನಾನುಕೂಲವನ್ನು, ಹೀಗೆ ಮಾಡಬೇಕಿತ್ತು, ಇದು ತಪ್ಪು, ಇದು ಅಸಾಧ್ಯ, ಇಂತಹ ಮಾತುಗಳನ್ನು ಆಡುವುದು ಅಭ್ಯಾಸವಾಗಿದೆ. ಹೀಗೆ ಹೇಳಿದರೂ ನಮ್ಮೆಲ್ಲರೊಳಗೂ ಪರಿವರ್ತನೆಗಾಗಿ ಕಾದಿರುವ ಮನಸ್ಸಿದೆ. ಯಾರೊಬ್ಬರೂ ಅಕ್ರಮ ಸಂಪತ್ತು ಶೇಖರಿಸುವವರ ವಿರುದ್ದ ಕ್ರಮ ತೆಗೆದುಕೊಳ್ಳಬೇಡಿ ಎಂದು ಹೇಳುವುದಿಲ್ಲ. ಹಣವನ್ನು ಚೀಲದಲ್ಲಿಟ್ಟು ಸುಟ್ಟವರು, ತಿಪ್ಪೆಗೆ ಎಸೆದವರೂ ಈ ಕ್ರಮದ ಬಗೆಗೆ ಚಕಾರವೆತ್ತಲಾರರು.

“ಹಣವಿಲ್ಲ ಎಂದು ಹೇಳಿಕೊಳ್ಳಲು ನಾಚಿಕೆ ಆಗುವುದಿಲ್ಲ. ಹೆಮ್ಮೆ ಆಗುತ್ತಿದೆ. ಇದೀಗ ಜನ ಸಾಮಾನ್ಯರ ಮನದಾಳದ ಅನಿಸಿಕೆ ಆಯಿತು. ಹಾಗಾದರೆ ಇಷ್ಟು ದಿನ ಹಣ ಉಳ್ಳವರ ಮೆರೆತವನ್ನು ಸಹಿಸಿಕೊಂಡೆವಾ? ಯಾಕೋ ಹೀಗೆ ಬರೆಯುವಾಗ ಜನಾರ್ಧನ ರೆಡ್ಡಿಯವರ ಮಗಳ ಮದುವೆಯ ವೈಭವದ ತಯಾರಿಯ ದೃಶ್ಯಗಳು ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ರಾರಾಜಿಸುತ್ತಿರುವುದು ನೆನಪಾಯಿತು. ಇದನ್ನೂ ಒಂದು ಸುದ್ಧಿಯಾಗಿ ನೋಡುತ್ತಿದ್ದೇವೆ. ಕೋಪದ ಬದಲು ಅಸಹಾಯಕತೆಯಿಂದ ಸುಮ್ಮನಿದ್ದೇವೆ. ಎಷ್ಟುದಿನ ಎಲ್ಲವನ್ನೂ ಸಹಿಸಿಕೊಳ್ಳುವುದು.

ಈ ಎಲ್ಲ ಬದಲಾವಣೆಯಾದ ಸಂದರ್ಭದಲ್ಲಿ ಒಂದು ದಿನ ಆಟೋದಲ್ಲಿ ಹೋಗುವಾಗ ನನಗೂ ಚಾಲಕರಿಗೂ ನಡೆದ ಮಾತುಕಥೆ.
ನಾನು : ” ಚಿಲ್ಲರೆ ಹೊಂದಿಸೋದು ಕಷ್ಟ ಆಗಿದೆ…”
ಚಾಲಕರು : ಪರ್ವಾಗಿಲ್ಲಬಿಡಿ ಮುಂದೆ ಒಳ್ಳೆದಕ್ಕೆ ಇವತ್ತು ಕಷ್ಟ ಪಡೋಣ.”
ನಾನು : ಮುಂದೆ ಒಳ್ಳೆದಾಗತ್ತೆ ಅಂತಾ ಅಷ್ಟು ಭರವಸೆ ಇದೆಯಾ?
ಚಾಲಕರು : ಮೇಡಂ ಇಷ್ಟು ದಿನ ಬಡವರು ಇಲೆಕ್ಷನ್ ಗೆ ನಿಲ್ಲುವ ಕನಸು ಕಾಣೋದಕ್ಕೆ ಆಗ್ತಾ ಇತ್ತಾ? ಕಾರ್ಪೋರೇಷನ್ ಇಲೆಕ್ಷನ್ ಗೆ ನಿಲ್ಲೋದಕ್ಕೂ ಕೋಟಿ ಕೋಟಿ ರೂಪಾಯಿ ಖರ್ಚಾಗತಾ ಇತ್ತು. ಇನ್ನು ನನ್ನಂತವನೂ ಇಲೆಕ್ಷನ್ ಗೆ ನಿಲ್ಲಬಹುದು.

————-

ಸುಧಾ ಶರ್ಮಾ ಚವತ್ತಿ

286637_218799308166417_3412973_o[1]“ಒದ್ದೆ ಕಣ್ಣುಗಳ ಪ್ರೀತಿ” ಕವನ ಸಂಕಲನದ ಮೂಲಕ ಭರವಸೆ ಹುಟ್ಟಿಸಿದ ಸುಧಾ ಶರ್ಮಾ ಚವತ್ತಿ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ ಪರಿಣಿತರು. ಪತ್ರಿಕೆಗಳಲ್ಲಿ ಲೇಖನ, ಅಂಕಣಗಳ ಮೂಲಕ ಪರಿಚಿತರು. “ಆವಿಯಾಗಿದೆ ಮಾತು” (ಮಲ್ಲಿಗೆ), “ಷೇರೆಂಬ ಮಾಯಾಂಗನೆ” ( ವಿಜಯ ಕರ್ನಾಟಕ ), “ಪ್ರಾಫಿಟ್ ಪ್ಲಸ್” (ವಿಜಯವಾಣಿ) ಪ್ರಕಟಿತ ಅಂಕಣಗಳು. ಕಿರುತೆರೆ ಕಾರ್ಯರ್ಕಮಗಳ ನಿರ್ದೇಶನ, ನಿರ್ಮಾಣ, ನಿರೂಪಣೆಯ ಅನುಭವ. ಈಗ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಇವರು ಉತ್ತಮ ವಾಗ್ಮಿ. ಸಮೂಹ ಮಾತುಗಾರಿಕೆಯೂ ಇವರ ಉತ್ಕಟ ಪ್ರೀತಿಗಳಲ್ಲಿ ಒಂದು.

Share

2 Comments For "‘ಮೌಲ್ಯ’ಗಳು ಬದಲಾಗಿವೆ
ಸುಧಾ ಶರ್ಮ ಚವತ್ತಿ ಕಾಲಂ
"

 1. ವಿಮಲಾನಾವಡ
  16th November 2016

  ನೀವೆಂದಂತೆ ಬದಲಾವಣೆಯಿಂದ ಒಳಿತಾದರೆ ಸ್ವಾಗತೀಸೋಣ.ಹಣದ ಮೆರೆತ ಮೊರೆತ ಕಡಿಮೆಯಾಗಲಿ,ಸರಳ ಜೀವನದತ್ತ ಜನತೆ ಹೊರಳಲು ಈ ಬದಲಾವಣೆ ಸಹಕಾರಿಯಾಗಲಿ.

  Reply
  • sudha sharma
   19th November 2016

   nija vimalaa

   Reply

Leave a comment

Your email address will not be published. Required fields are marked *

Recent Posts More

 • 4 hours ago No comment

  ಪ್ರತಿಯೊಬ್ಬರೊಳಗೂ ಒಂದೊಂದು ಕಥೆ!

  ಆಕೆ ಮೀರಾ. ತಾನು ಬರೆದ ಕಥೆಯೊಂದರ  ಮೂಲಕ ಇದ್ದಕ್ಕಿದ್ದಂತೆ ಲಕ್ಷಾಂತರ ಮನಸ್ಸನ್ನು ಮುಟ್ಟಿಬಿಡುತ್ತಾಳೆ. ವಿವಾನ್ ಎಂಬ ಬ್ಯಾಂಕ್ ಅಧಿಕಾರಿಯೊಬ್ಬನಿಗೆ ಜಗತ್ತನ್ನೇ ಸುತ್ತುವ ಕನಸು. ಕೆಫೆಯೊಂದರ ಮ್ಯಾನೇಜರ್ ಕಬೀರ್ ತನ್ನದೇ ಆದ ಏನನ್ನಾದರೂ ಸಾಧಿಸುವ ಹಂಬಲವಿಟ್ಟುಕೊಂಡವನು. ಅದೇ ಕೆಫೆಯ ಗ್ರಾಹಕಿ ನಿಶಾ ಎಂಥದೋ ಹತಾಶೆಗೆ ಸಿಕ್ಕಿಹಾಕಿಕೊಂಡು, ತನ್ನದೇ ಆದ ಗುಟ್ಟುಗಳನ್ನು ಬಚ್ಚಿಟ್ಟುಕೊಂಡಿರುವವಳು. ಪ್ರತಿಯೊಬ್ಬರದೂ ಒಂದೊಂದು ಕಥೆ. ಅಂಥ ನಾಲ್ವರೂ ಒಂದೆಡೆ ಸೇರಿದಾಗ ಏನಾಗುತ್ತದೆ? ಈ ಕುತೂಹಲವನ್ನು ತೆರೆದಿಡುತ್ತ ಹೋಗುವ ಕಾದಂಬರಿಯೇ ...

 • 1 day ago No comment

  ನನ್ನೊಳಗಿನ ಮಗುವಿಗೊಂದು ಪತ್ರ

        ನಿನ್ನೆ ನನ್ನ ಹಳೆಯ ಕಡತಗಳನ್ನೆಲ್ಲಾ ತೆರೆದು ಏನನ್ನೋ ಹುಡುಕುತ್ತಿದ್ದಾಗ ನೀನು ಬಿಡಿಸಿದ ಕೆಲವು ಚಿತ್ರಗಳು ಸಿಕ್ಕವು. ನಿಜಕ್ಕೂ ಅದ್ಭುತವಾಗಿದ್ದವು ಅವುಗಳು.       ಮಕ್ಕಳ ದಿನಾಚರಣೆಯ ಋತುವಿನಲ್ಲಿ ನಮ್ಮದೇ ಹನ್ನೆರಡರ ವ್ಯಕ್ತಿತ್ವಕ್ಕೊಂದು ಪತ್ರ ಬರೆದರೆ ಹೇಗಿರುತ್ತದೆ ಎಂಬ ಯೋಚನೆಯೊಂದು ತಲೆಯೆತ್ತಿತು. ಸದ್ಯ ಪತ್ರಗಳಂತೂ ಮಾಯವಾಗಿವೆ. ನಿತ್ಯಜೀವನದ ಜಂಜಾಟದಲ್ಲಿ ನಮ್ಮೊಳಗಿನ ಮಗುವೂ ನಿಧಾನಕ್ಕೆ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲೇ ಇವೆರಡನ್ನೂ ಒಂದೇ ವೇದಿಕೆಗೆ ತಂದಿಡುವ ...

 • 2 days ago No comment

  ದುರಿತ ಕಾಲದ ಕವಿತೆಗಳು

      ಕವಿಸಾಲು       1 ಒಂಟಿಯಾಗಿ ಹೆಗಲಲಿ ನೇಗಿಲ ಎಳೆದು ಅಜ್ಜಿ ಬಿತ್ತಿದ ರಾಗಿಗೆ ಸಗ್ಗಣಿ ಗೊಬ್ಬರ ಹಾಕಿ ಖಂಡುಗಗಟ್ಟಲೇ ರಾಗಿ ಬೆಳೆದ ಅಜ್ಜನ ಹೊಲದ ಮೇಲಿವತ್ತು ಚತುಷ್ಕೋನ ರಸ್ತೆ ರಾರಾಜಿಸುತ್ತಿದೆ ಆರಾಮಾಗಿ ಅಲ್ಲಿ ಮಲಗಿರುವ ಅವನ ಎದೆಯ ಮೆಲೆ ಅನಿಲ ಟ್ಯಾಂಕರುಗಳು ಅಡ್ಡಾಡುತಿವೆ ನೋವಾಗುತ್ತಿರುವುದು ಮಾತ್ರ ನನಗೆ! ~ 2 ಅಭಿವೃದ್ದಿಯ ಜಾಹಿರಾತಿನಲ್ಲಿ: ಹಡಗಿನಂತಹ ಕಾರುಗಳು ಹಾಳೆಗಳಂತಹ ಮೊಬೈಲುಗಳು ಕಣ್ಣು ಕುಕ್ಕುವ ಕಂಪ್ಯೂಟರುಗಳು ...

 • 2 days ago No comment

  ನಾಲ್ಕು ಹನಿಗಳು

      ಕವಿಸಾಲು         ಧ್ಯೇಯದಿಂದ ನೆಲ ಅಗೆದೆ ಗಿಡ ನೆಡಲು. ಮತ್ತೆ ಕಾಣಿಸಿತು ಧ್ಯಾನಸ್ಥ ಎರೆಹುಳು. ~ ನದಿ ತಟದ ಬೆಂಚಿನ ಮೇಲೆ ನಾನು ಎರಡೂ ತಟಗಳಿಗೆ ಅಂಟಿದ್ದ ದಪ್ಪನೆ ಕಾಂಕ್ರೀಟ್ ಗೋಡೆ. ಹರಿವ ನೀರು, ನಾನು ಬಂಧಿಗಳೇ. ~ Mindfulness ಎಂದೆಲ್ಲಾ ಹೇಳುವ ಅವರ ಹೆಮ್ಮೆಗೆ ಕಾಣಿಸಲಿಲ್ಲವೇಕೆ ಅಖಂಡವಾಗಿ ನಿಂತು ಜಗಿಯುವ ಆ ಎಮ್ಮೆ? ~ ಆ ಒಂದು ಮಳೆ ಹನಿ ...

 • 2 days ago No comment

  ಕಂಗಾಲಾಗಿದ್ದಾಗ ನಾವೆಲ್ಲ, ಮೆಲ್ಲಮೆಲ್ಲನೆ ಬಂದಳಲ್ಲ!

    ಅಡಗಿಕೊಳ್ಳಲು ಬಾಳೆ ಬುಡ ಆರಿಸಿಕೊಂಡ ಪುಟಾಣಿಗೆ ಬೇಸಿಗೆಯ ಆ ಮಧ್ಯಾಹ್ನ ಊಟ ಮಾಡಿ ನಿದ್ದೆ ಮಾಡುವ ಸಮಯವಾಗಿತ್ತು.         ಬಾಲ್ಯ ಬಂಗಾರ   ಬಾಲ್ಯದ ಮಜವನ್ನು ಅನುಭವಿಸದ ಮಕ್ಕಳು ಬದುಕನ್ನು ಪೂರ್ಣವಾಗಿ ಸವಿಯುವುದು ಕಷ್ಟವೇ? ಆ ಮಜವೇ ಭಿನ್ನ, ಅದರಲ್ಲೂ ಹಳ್ಳಿಯ ಬದುಕಿನ ಬಾಲರ ಜೀವನದಲ್ಲಿ ಬಾಲ್ಯ ಅನನ್ಯವಾದ ಜೀವನಾನುಭವ ನೀಡುವ ಕಾಲ. ಪೇಟೆಯಲ್ಲಿ ರೇಷ್ಮೆ ಹುಳುವಿನಂತೆ ಪೊರೆಯ ಒಳಗೆ ಬದುಕುವ ಮಕ್ಕಳ ...


Editor's Wall

 • 21 November 2017
  1 day ago No comment

  ನನ್ನೊಳಗಿನ ಮಗುವಿಗೊಂದು ಪತ್ರ

        ನಿನ್ನೆ ನನ್ನ ಹಳೆಯ ಕಡತಗಳನ್ನೆಲ್ಲಾ ತೆರೆದು ಏನನ್ನೋ ಹುಡುಕುತ್ತಿದ್ದಾಗ ನೀನು ಬಿಡಿಸಿದ ಕೆಲವು ಚಿತ್ರಗಳು ಸಿಕ್ಕವು. ನಿಜಕ್ಕೂ ಅದ್ಭುತವಾಗಿದ್ದವು ಅವುಗಳು.       ಮಕ್ಕಳ ದಿನಾಚರಣೆಯ ಋತುವಿನಲ್ಲಿ ನಮ್ಮದೇ ಹನ್ನೆರಡರ ವ್ಯಕ್ತಿತ್ವಕ್ಕೊಂದು ಪತ್ರ ಬರೆದರೆ ಹೇಗಿರುತ್ತದೆ ಎಂಬ ಯೋಚನೆಯೊಂದು ತಲೆಯೆತ್ತಿತು. ಸದ್ಯ ಪತ್ರಗಳಂತೂ ಮಾಯವಾಗಿವೆ. ನಿತ್ಯಜೀವನದ ಜಂಜಾಟದಲ್ಲಿ ನಮ್ಮೊಳಗಿನ ಮಗುವೂ ನಿಧಾನಕ್ಕೆ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲೇ ಇವೆರಡನ್ನೂ ಒಂದೇ ವೇದಿಕೆಗೆ ತಂದಿಡುವ ...

 • 19 November 2017
  3 days ago No comment

  ಸಂಸಾರದ ಬಂಧಗಳ ಬಗ್ಗೆ ಬರಿದೆ ಮಾತಿಂದ…

          | ಕಮಲಾದಾಸ್ ಕಡಲು     ನನ್ನ ಅಪ್ಪನ ಸಾವು (My Father’s Death) ಕಮಲಾದಾಸ್ ಕವಿತೆಯ ಅನುವಾದ     ಅಪ್ಪ ಸತ್ತಾಗ ಅಪ್ರಾಮಾಣಿಕರು ಮಾತ್ರ ಕಣ್ಣೀರು ಸುರಿಸಿದರು, ಅವನ ಹೆಣದೊಡನೆ ಫೋಟೋ ತೆಗೆಸಿಕೊಳ್ಳಲು ಬಂದ ಅವರಿಗೆ ಅಪ್ಪನೆಂದರೆ ವಾಸ್ಕೋಡಗಾಮ ಕಪ್ಪಾದ್ ಬೀಚಿನ ಮರಳಿನ ಮೇಲೆ ಮೊದಲು ಕಾಲಿರಿಸಿದ ನಂತರ ಕ್ಯಾಲಿಕಟ್’ನಲ್ಲಿ ಸತ್ತವರಲ್ಲಿ ಅತಿ ಮುಖ್ಯವಾದ ವ್ಯಕ್ತಿಯಾಗಿದ್ದರು ಅಷ್ಟೇ. ರಸ್ತೆಯ ಇಕ್ಕೆಲದಲ್ಲೂ ...

 • 17 November 2017
  5 days ago 2 Comment

  ನನ್ನನ್ನು ಕವಿಯೆಂದರು..!

      ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

 • 14 November 2017
  1 week ago No comment

  ಅವ್ರ್ ಬಿಟ್ ಇವ್ರ್ ಬಿಟ್ ಅವ್ರ್ ಬಿಟ್ ಇವ್ರ್ ಯಾರು?

      ಈಗ ಮಕ್ಕಳನ್ನೆಲ್ಲ ಪರ ಊರುಗಳ ಬೋರ್ಡಿಂಗ್ ಶಾಲೆಗಳಲ್ಲಿ ನೂಕಿ ಯಾವ ಮನೆಗಳಲ್ಲೂ ಮಕ್ಕಳಿಲ್ಲದೆ ಬಣಗುಟ್ಟುತ್ತಿವೆ. ಹೋಮ್ ವರ್ಕ್, ರ್ಯಾಂಕ್ ಓಟ, ಅಂಕದ ಬೇಟೆಯಲ್ಲಿ ಸಿಲುಕಿ ಯಾವ ರಸ್ತೆಯಲ್ಲೂ ಮಕ್ಕಳು ಆಡುವುದಿಲ್ಲ. ಮಕ್ಕಳ ದಿನಕ್ಕೆ ಒಂದು ವಿಶೇಷ ಬರಹ, ಕಾದಂಬಿನಿ ಅವರಿಂದ       ಮಕ್ಕಳೆಲ್ಲ ಸೇರಿ ಯಾರಾದರೂ ಚೂರು ದೊಡ್ಡವರನ್ನು ಅಜ್ಜಿಯಾಗಲು ಕೇಳಿಕೊಂಡಾದ ಮೇಲೆ ಎಲ್ಲರೂ ವೃತ್ತಾಕಾರವಾಗಿ ನಿಂತು ಕ್ಲಾಪ್ಸ್ ಹಾಕುವ ಮೂಲಕ ಕಳ್ಳರನ್ನು ...

 • 09 November 2017
  2 weeks ago No comment

  ಕೆಂಡದಂಥ ಕಾವ್ಯ

  ಪಾಶ್ ಎಂದೇ ಗೊತ್ತಾಗಿರುವ ಪಂಜಾಬಿ ಮತ್ತು ಹಿಂದಿ ಕವಿ ಅವತಾರ್ ಸಿಂಗ್ ಸಂಧು, ಕ್ರಾಂತಿಕಾರಿ ಕವಿ. ತನ್ನ 20ನೇ ವಯಸ್ಸಿನಲ್ಲಿ ಆತ ಮೊದಲ ಸಂಕಲನ ‘ಲೋಹ್ ಕಥಾ’ ಪ್ರಕಟಿಸುತ್ತಿದ್ದ ಹಾಗೆಯೇ (1970) ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಟ್ಟಿದ್ದ. ಅದೇ ದಶಕದಲ್ಲೇ ಪ್ರಕಟಗೊಂಡ ಮತ್ತೂ ಎರಡು ಸಂಕಲನಗಳು ಪಂಜಾಬಿ ಕಾವ್ಯಲೋಕದಲ್ಲಿ ಆತನ ಹೆಸರನ್ನು ಶಾಶ್ವತಗೊಳಿಸಿಬಿಟ್ಟವು. ಅವನ ಕಾವ್ಯದ ಕತ್ತಿ ಖಲಿಸ್ತಾನಿಗಳ ವಿರುದ್ಧ ಝಳಪಿಸುತ್ತಿತ್ತು. ಕಡೆಗೆ ಅದೇ ಅವನ ಹತ್ಯೆಗೂ ಕಾರಣವಾಯ್ತು. ...