Share

ಅದ್ಭುತ ಗಾಯನದ ಅನುಭವ ಕೊಟ್ಟ ಮೇಷ್ಟ್ರ ಮಾತು!
ವಸಂತ

ಅಕ್ಷರ ಸಹವಾಸದಲ್ಲಿನ ನಿಮ್ಮ ನೆನಪುಗಳ ಬುತ್ತಿಯನ್ನೊಮ್ಮೆ ಬಿಡಿಸಿ ನೋಡಿ. ಅಲ್ಲಿನ ಖುಷಿ, ಪುಳಕವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಕನೆಕ್ಟ್ ಕನ್ನಡದ ಈ ಕೋರಿಕೆಗೆ ಬಂದಿರುವ ಸ್ಪಂದನೆಗಳು ಇವತ್ತಿನಿಂದ.

ಇದು ಮೊದಲ ಬರಹ.

——————–

ನಸ್ಸು ಭಾವುಕವಾಗಿದೆ. ಮೇಷ್ಟ್ರೇ…… ನೀವು ಹೋಗಿಬಿಟ್ಟಿರಿ……. ಅನಂತ… ಆಕಾಶಕ್ಕೆ!

ಅನಂತಮೂರ್ತಿ ಅವರು ತೀವ್ರ ಅಸ್ವಸ್ಥ ಸ್ಥಿತಿಯಲ್ಲಿದ್ದಾರೆ ಎಂಬ ಫೇಸ್ ಬುಕ್ ಸ್ಟೇಟಸ್ ತಿಳಿದು ಬಂದಿದ್ದು ಆ ಹೊತ್ತು ನಡು ಮಧ್ಯಾಹ್ನ. ಆಗಿನಿಂದಲೂ ಒಂದು ರೀತಿಯ ಅವ್ಯಕ್ತ ಕಸಿವಿಸಿ, ತಳಮಳ ನನ್ನನ್ನಾವರಿಸಿತ್ತು. ಅವರು ನನ್ನ ತಲೆಮಾರಿನ ಹುಡುಗರಿಗೆಲ್ಲ ಮೇಷ್ಟ್ರೇ! ಇಡೀ ಪರಂಪರೆಯ ಸಾಕ್ಷಿಪ್ರಜ್ಞೆಯಾಗಿ ಹಲವಾರು ವಿಧಗಳಲ್ಲಿ ನಮ್ಮಂತಹವರನ್ನು ಕಾಡಿದವರು, ಕಾಪಾಡಿದವರೂ ಕೂಡ! ಮೇಷ್ಟ್ರ ಏನೆಲ್ಲ ಗುಣದೋಷಗಳ ನಡುವೆಯೂ ಅವರೊಳಗಿನ ಮಗುಸಹಜ ಭಾವ ಮತ್ತು ಕಾಪಿಡುವ ತಾಯಿಯ ಗುಣದ ಕಾರಣಕ್ಕಾಗಿಯೇ ನನಗೆ ಅವರು ಬಹುಮುಖ್ಯರೆನಿಸುತ್ತಾರೆ.

ಯು.ಆರ್.ಅನಂತಮೂರ್ತಿ ನನಗೆ ಪರಿಚಯವಾಗಿದ್ದು ಅವರ ಘಟಶ್ರಾದ್ಧ ಸಿನಿಮಾದ ಮೂಲಕ. ನಾನಾಗ ಪ್ರೈಮರಿ ಶಾಲೆಯ ನಾಲ್ಕೋ ಐದನೆಯ ತರಗತಿಯ ವಿದ್ಯಾರ್ಥಿ. ನಮ್ಮೂರಿನ ಹೈಸ್ಕೂಲಿನಲ್ಲಿ ನೀನಾಸಂ ಸಹಯೋಗದೊಂದಿಗೆ ಚಲನಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದರು. ಅದನ್ನು ಅರ್ಥ ಮಾಡಿಕೊಳ್ಳುವ ವಯಸ್ಸೇನೂ ಅಲ್ಲ ಅದು. ಆದರೂ ಆ ಸಿನಿಮಾ ನೋಡುತ್ತ “ನಾಣೀ…. ಹಾವೂ….” ಎಂದು ಕೂಗಿದ್ದು ಮಾತ್ರ ಇನ್ನೂ ನೆನಪಿದೆ!

ಆ ನಂತರದಲ್ಲಿ ಹೈಸ್ಕೂಲು ದಿನಗಳಲ್ಲಿ ಹಿಸ್ಟ್ರಿ ಮೇಸ್ಟ್ರು ಜಿ.ಕೆ.ಮಾಸ್ತರರ ಪ್ರಭಾವದಿಂದಾಗಿ ಅವರ ಸಂಸ್ಕಾರ, ಭಾರತೀಪುರ, ಅವಸ್ಥೆ ಮುಂತಾದ ಕಾದಂಬರಿಗಳನ್ನು ಓದಿದ್ದರೂ ಅವರು ನನ್ನನ್ನು ಕಾಡತೊಡಗಿದ್ದು ಈಗೊಂದೆರಡು ವರ್ಷಗಳಿಂದ ಮಾತ್ರ! ಇಂಗ್ಲೀಷ್ ಎಂ.ಎ.ಓದುವಾಗ ಅನಂತಮೂರ್ತಿ ಅವರ ಸಮಗ್ರ ಸಾಹಿತ್ಯವನ್ನು ಹೊಸದಾಗಿ ಓದಿದಾಗ! ಮತ್ತು… ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕೊನೆಯ ಸಲ ಅವರ ಭಾಷಣವನ್ನು ಕೇಳಿಸಿಕೊಂಡಾಗ! ಈ ಮನುಷ್ಯ ಜೀವಿತವಿದ್ದ ಕಾಲದಲ್ಲಿ ನಾವೂ ಇದ್ದೇವಲ್ಲ. ಅದರಲ್ಲೂ ಅವರನ್ನು ಹತ್ತಿರದಿಂದ ಬಲ್ಲವರಾಗಿದ್ದೇವಲ್ಲ ಎಂಬ ಪುಳಕ ಹೇಳಲು ಬರುವುದಿಲ್ಲ.

ಅನಂತಮೂರ್ತಿಯೊಳಗೆ ಪ್ರವೇಶವಾಗಿದ್ದು ಹೆಗ್ಗೋಡಿನ ಮೂಲಕ. ಮೊತ್ತಮೊದಲ ಸಲ ನಾನು ಅವರನ್ನು ನನ್ನ ಎಂಟನೆಯ ತರಗತಿಯಲ್ಲಿರುವಾಗ ಕಂಡಿದ್ದು ಹೆಗ್ಗೋಡಿನಲ್ಲಿ! ಒಂದು ರೀತಿಯ ಆರಾಧನೆ… ಒಂದು ರೀತಿಯ ಗೌರವದ ಭಾವವದು. ಅವರನ್ನು ಹೆಗ್ಗೋಡಿನ ಸಂಸ್ಕೃತಿ ಶಿಬಿರದಲ್ಲಿ ನಿರಂತರವಾಗಿ ಗಮನಿಸುತ್ತ ಅವರ ಸುತ್ತಮುತ್ತಲೇ ಸುಳಿದಾಡುತ್ತ ತುಸು ದೂರದಿಂದಲೇ ಗಮನಿಸುತ್ತಿದ್ದೆ. ಆದರೆ… ಮಾತನಾಡಿಸುವ ಧೈರ್ಯವಾಗಿರಲಿಲ್ಲ! ನಮ್ಮ ತಂದೆಯವರು ಅವರಿಗೆ ಸುಮಾರು ವರ್ಷಗಳಿಂದಲೂ ಆಪ್ತರು. ನಮ್ಮ ತಂದೆಯವರ ಹೆಸರು ಹೇಳಿಕೊಂಡು ‘ಇಂಥವರ ಸಂಬಂಧಿಕರು’ ಎಂದು ತಮ್ಮನ್ನು ಪರಿಚಯಿಸಿಕೊಂಡು, ಆ ಕಾರಣಕ್ಕಾಗಿ ಅವರ ಹತ್ತಿರ ಬಹಳೇ ಸಲುಗೆಯಿಂದ ಮಾತಾನಾಡುತ್ತಿರುವವರನ್ನು ಗಮನಿಸಿಯೂ, ನಾನು ‘ಇಂಥವರ ಮಗ’ ಎಂದು ಹೇಳಿಕೊಂಡು ಯಾರೊಡನೆಯೂ ಹತ್ತಿರವಾಗುವುದು ನನ್ನ ಸ್ವಭಾವವಲ್ಲವಾದ್ದರಿಂದ ದೂರವೇ ಉಳಿದಿದ್ದೆ!

“ಹಲವಾರು ಸಲ ನಾವಂದು ಕೊಂಡಂತೆಯೇ ಎಲ್ಲವೂ ಇರುವುದಿಲ್ಲ. ಬಹುತೇಕ ಬಾರಿ ನಮ್ಮ ಜೀವನದಲ್ಲಿ ನಾವು ಎಡವುವುದು ಎಲ್ಲಿ ಅಂದರೆ ಇನ್ನೊಬ್ಬರ ಕುರಿತಾಗಿ ಜಡ್ಜ್ ಮೆಂಟ್ ಪಾಸುಮಾಡಿಬಿಡುತ್ತೇವಲ್ಲ…. ಆಗ! ಇದನ್ನು ನಿಗ್ರಹಿಸಿ ಬದುಕನ್ನು ಗಮನಿಸುವ, ಅರಿತುಕೊಳ್ಳುವ ಕಸುವನ್ನು ನೀಡಿ ಕಸುಬು ಕಟ್ಟುವುದನ್ನು ನಮಗೆ ಕಲಿಸಿಕೊಡುವಲ್ಲಿ ಸಾಹಿತ್ಯ ಮಹತ್ತರ ಪಾತ್ರವನ್ನು ವಹಿಸುತ್ತದೆ! ಅದಕ್ಕಾಗಿ ನಾವು ಪ್ರಪಂಚದ ಅತ್ಯುತ್ತಮ ಸಾಹಿತ್ಯವನ್ನು ಓದಬೇಕು. ನೀವೇ ಸೃಷ್ಟಿಸಿಕೊಂಡ ಮಿಥ್ ಗಳನ್ನು ಮುರಿದಾಗ ಸತ್ಯದ ದರ್ಶನವಾಗುವುದು ಸಾಧ್ಯವಾಗುತ್ತದೆ!” ಎಂದೆನ್ನುತ್ತ ನೆರೆದಿದ್ದ ಜನಸ್ತೋಮವನ್ನು ಸುಮಾರು ಮೂರು ಗಂಟೆಗಳಿಗೂ ಅಧಿಕ ಕಾಲ ಅಯಸ್ಕಾಂತದಂತೆ ಹಿಡಿದಿಟ್ಟು ತುಮಕೂರು ವಿಶ್ವವಿದ್ಯಾಲಯದಲ್ಲಿ ಪ್ರಾಯಶಃ ತಮ್ಮ ಕೊನೆಯ ಮತ್ತು ಅಪರೂಪದ ಪಾಠ ಮಾಡಿದ್ದ ಎಂಭತ್ತರ ತರುಣ ಉಡುಪಿ ರಾಜಗೋಪಾಲಚಾರ್ಯ ಅನಂತಮೂರ್ತಿಯನ್ನು ನಾನು ಎಂದೂ ಮರೆಯಲಾರೆ.

ನನಗೆ ಬುದ್ಧಿಬಲ್ಲಾದ ಲಾಗಾಯ್ತಿನಿಂದಲೂ ದೂರದಿಂದಲೇ ನಮಸ್ಕಾರ, ಒಂದು ನಗೆಯ ವಿನಿಮಯದೊಂದಿಗೆ ಅನಂತಮೂರ್ತಿಗಳಿಂದ ಅಂತರವನ್ನು ಕಾಯ್ದುಕೊಂಡಿದ್ದವನು ಅಂದು ತಡೆಯಲಾರದೆ ಕೂಡಲೇ ಅವರೆಡೆಗೆ ಹೋಗಿ ಕೈಹಿಡಿದುಕೊಂಡು ಅತ್ಯದ್ಭುತವಾದ ಗಾಯನವನ್ನು ಕೇಳಿದ ಅನುಭವವಾಗಿದ್ದನ್ನು ಮನಃಪೂರ್ವಕ ಹೇಳಿ ನಮಸ್ಕರಿಸಿ ಬಂದೆ!

ಅವರೊಂದಿಗೆ ಮಾತನಾಡುವ ಆಸೆಯನ್ನು ತಿಪಟೂರಿನ ಸ್ನೇಹಿತ ಗಂಗಾಧರಯ್ಯ ಅವರಲ್ಲಿ ಹೇಳಿಕೊಂಡಾಗ ‘ಫೋನ್ ಮಾಡೊ, ಮಾತಾಡ್ತಾರೆ’ ಎಂದು ಅವರ ದೂರವಾಣಿ ಸಂಖ್ಯೆಯನ್ನು ನೀಡಿದ್ದರು. ಸುಮಾರು ಹದಿನೈದು ದಿನಗಳ ನಂತರ ನಾನು ಫೋನ್ ಮಾಡಿದ್ದಾಗ ಅರ್ಧಗಂಟೆಗೂ ಮಿಕ್ಕಿ ಮಾತನಾಡಿ ಕೊನೆಯಲ್ಲಿ “ಯಾರಯ್ಯಾ ನೀನು? ಇಷ್ಟು ಚೆನ್ನಾಗಿ ಮಾತನಾಡುತ್ತೀಯಾ? ಯಾವೂರು ನಿಂದು?” ಅಂತೆಲ್ಲ ನನ್ನ ಪೂರ್ವಾಪರವನ್ನೆಲ್ಲ ಕೇಳಿದ್ದರು!

ಇದಾದ ಒಂದು ತಿಂಗಳ ನಂತರ ಪ್ರಜಾವಾಣಿಯಲ್ಲಿ ಅವರದೊಂದು ಕಥೆ, ಸುಮಾರು ಐವತ್ತು ವರ್ಷಗಳ ಹಿಂದೆ ಬರೆದದ್ದು…. ಪ್ರಕಟವಾಗಿತ್ತು. ಓದಿದ ಕೂಡಲೇ ನನಗೆ ನೆನಪಾದದ್ದು ಜಾರ್ಜ್ ಹರ್ಬರ್ಟ್ ನ ‘ದ ಪುಲಿ’ ಕವನ. ಕಥೆಯ ತುಂಬೆಲ್ಲ ಮೆಟಾಫಿಸಿಕಲ್ ಪೋಯೆಟ್ರಿಯ ಛಾಯೆ ಗಾಢವಾಗಿದೆ ಎನ್ನಿಸಿತ್ತು. ಅನಂತಮೂರ್ತಿಯವರಿಗೆ ಫೋನಾಯಿಸಿ ನನ್ನ ಅಭಿಪ್ರಾಯವನ್ನು ಹೇಳಿದಾಗ, “ಹೌದೇನಯ್ಯಾ ವಸಂತಾ! ಇಂಟರೆಸ್ಟಿಂಗ್ ಒಬ್ಸರ್ವೇಶನ್. ನಾನೂ ಇದನ್ನು ಯೋಚಿಸಿಯೇ ಇರಲಿಲ್ಲ ನೋಡು! ನನಗೆ ಯಾರೂ ಇದನ್ನು ಹೇಳಿರಲೂ ಇಲ್ಲ! ಯೆಸ್…. ನಾನಾಗ ಒಂಥರಾ ಮೆಟಾಫಿಸಿಕಲ್ ಸ್ಟೈಲಿನ ಪ್ರಭಾವಕ್ಕೆ ಒಳಗಾಗಿದ್ದೆ ಅನ್ನಿಸತೊಡಗಿದೆ! ಥ್ಯಾಂಕ್ಸ್ ಕಣೊ. ಮನೆಗೆ ಬಾರೊ, ನಿಮ್ಮಂಥ ಹುಡುಗರ ಕೂಡ ಮಾತನಾಡುವುದು ಖುಷಿಕೊಡುತ್ತೆ” ಅಂತ ಅಂದಿದ್ದರು. ಅದಾದ ನಂತರವೂ ಒಂದೆರಡು ಸಲ ಫೋನಿನಲ್ಲಿಯೇ ಮಾತನಾಡಿದ್ದೆ. ಕೊನೆಗೂ ಅವರನ್ನು ಕಂಡು ಮಾತನಾಡಬೇಕೆಂಬ ಹಂಬಲ ಹಂಬಲವಾಗಿಯೇ ಉಳಿಯಿತು!

Share

Leave a comment

Your email address will not be published. Required fields are marked *

Recent Posts More

 • 4 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 5 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  2 weeks ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...