Share

ಆ ಒಬ್ಬನಿಗಾಗಿ ಅದೆಷ್ಟು ಕಾಯುತ್ತಿದ್ದೆ ಗೊತ್ತಾ?
ವಾಸುದೇವ ನಾಡಿಗ್, ನೆಲಮಂಗಲ

ಅಕ್ಷರ ಸಹವಾಸದಲ್ಲಿನ ನಿಮ್ಮ ನೆನಪುಗಳ ಬುತ್ತಿಯನ್ನೊಮ್ಮೆ ಬಿಡಿಸಿ ನೋಡಿ. ಅಲ್ಲಿನ ಖುಷಿ, ಪುಳಕವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಇದು ಕನೆಕ್ಟ್ ಕನ್ನಡದ ಈ ಕೋರಿಕೆ.

ಇಲ್ಲಿದೆ ಕವಿ ವಾಸುದೇವ್ ನಾಡಿಗ್ ಬರಹ.

——————–

ಸುಮ್ಮನೆ ಆಗಾಗ ಕಣ್ಣು ಮುಚ್ಚಿಕೊಂಡು ಬರಹ ಲೋಕದಲ್ಲಿ ನನ್ನ ಪ್ರವೇಶದ ದಿನಮಾನಗಳನ್ನು ನೆನಪು ಮಾಡಿಕೊಳ್ಳುವ ಪುಳಕಕ್ಕೆ ಬೀಳುತ್ತೇನೆ. ಅಗಾಧ ಜೀವನ ಪರಿಧಿಯಲ್ಲಿ ಓದು ಬರಹ ಮತ್ತು ಕಾವ್ಯವೆಂಬ ಪುಟ್ಟ ಅಂಗಳದಲ್ಲಿ ನನ್ನನ್ನು ಗುರುತಿಸಿಕೊಂಡ ಈ ಹೊತ್ತಿಗೆ ನೆನಪಾಗುವುದು ಇಲ್ಲಿಗೆ ಎಳೆತಂದ ಕೆಲವು ಸೆಳೆತಗಳು. ಪಕ್ಕಾ ನೆನಪಿದೆ ಅಥವಾ ಇಂತಹ ಗಳಿಗೆಗಳನ್ನು ಗಾಢವಾಗಿ ಅನುಭವಿಸಿರುವುದರಿಂದ ಮರೆಯಲಿಕ್ಕೆ ಕಾರಣಗಳೇ ಉಳಿಯೋಲ್ಲ. ಅದು ಹಾಗೇ ಅಲ್ಲವೆ? ಗಾಢವಾಗಿ ಒಪ್ಪಿಕೊಂಡ ಮತ್ತು ಎದೆಗೆ ತಂದುಕೊಂಡ ದಿನಮಾನಗಳು ಮಾಸುವುದೇ ಇಲ್ಲ. ಮರೆಯಲಾಗದ ಸಿನಿಮಾವೊಂದು ಆಗಾಗ ಕಲಕುವಂತೆ ತಳವನ್ನು ತುಳುಕಿಸಿಕೊಂಡ ಮನ ಸರೋವರದಂತೆ.

ಪುಟ್ಟ ಹುಡುಗ ನಾನು. ಬಹುಶಃ ಏಳನೇ ತರಗತಿಯ ಕೊನೇ ಹಂತ. ಅಪ್ಪ ಕೆಲಸ ಮಾಡುತ್ತಿದ್ದ ಹಳ್ಳಿ ಕೃಷಿ ತರಬೇತಿ ಸಂಸ್ಥೆಯ ಆವರಣದಲ್ಲಿನ ಕ್ಯಾಂಪಸಿನ ಮನೆ. ಸಿಟಿಯಿಂದಲೇ ಪೋಸ್ಟ್ ಮತ್ತು ಪತ್ರಿಕೆಗಳು ಬರಬೇಕಿತ್ತು. ತಿಂಗಳ ಮೊದಲ ವಾರದ ಸಂತಸವೇ ಚೆಂದ. ಪತ್ರಿಕೆಯ ಜೊತೆಗೆ ಮಾಸಿಕ ಪತ್ರಿಕೆಗಳ ಕಟ್ಟನ್ನು ತರುತ್ತಿದ್ದ ಪೇಪರ್ ಅಣ್ಣ. ಸುಧಾ, ಮಂಗಳ, ಬಾಲಮಿತ್ರ, ಚಂದಮಾಮ ಹೀಗೆ ಒಂದೊಂದೇ ಪುಸ್ತಕಗಳನ್ನು ತೆರೆದು ತೆರೆದು ಕೊಡುತ್ತಿದ್ದವನ ಕೈಯ ಕಡೆಗೇ ಗಮನ. ಅದು ಈ ಎಲ್ಲ ಪುಸ್ತಕಗಳ ಮಧ್ಯೆ ತೂರಿಕೊಂಡು ಕೂತ ಮಕ್ಕಳ ಪಾಕ್ಷಿಕ ಮ್ಯಾಗಜಿನ್ ‘ಪುಟಾಣಿ’! ಅದನ್ನು ಬೇಗ ತೆರೆದು ಓದುವಲ್ಲೇ ಸುಖದ ಪಾರಮ್ಯತೆ. ಅದಕ್ಕೆ ಮುಖ್ಯ ಕಾರಣ ಪ್ರತಿ ಹದಿನೈದು ದಿನಕ್ಕೊಮ್ಮೆ ಬರುತ್ತಿದ್ದ ಒಂದು ಎರಡು ಅಪೂರ್ಣ ಕತೆಗಳನ್ನು ಪೂರ್ಣ ಮಾಡುವ ಸ್ಪರ್ಧೆ. ಈ ಪೇಪರ್ ಅಣ್ಣ ನನಗೆ ಪುಟಾಣಿಯನ್ನು ತಂದು ಕೊಡುತ್ತಿದ್ದುದೇ 5 ಅಥವ 6ನೇ ತಾರೀಕು! ಕತೆ ಪೂರ್ಣ ಮಾಡಿ ಕಳಿಸಲು ಇರುವ ಕೊನೆಯ ದಿನಾಂಕ 10. ಕತೆ ಓದಿ ಅಪ್ಪನ ಮನವೊಲಿಸಿ 2 ರೂಪಾಯಿಯ ಎನವಲಪ್ ಕವರ್ ಪಡೆದುಕೊಂಡು ಕತೆಯನ್ನು ಮತ್ತೆ ಮತ್ತೆ ಬರೆದು ಅಕ್ಷರ ಸರಿಪಡಿಸಿ ಕಣ್ಣಿಗೊತ್ತಿಕೊಂಡು ಅಂಚೆ ಡಬ್ಬಕ್ಕೆ ಹಾಕುವಷ್ಟರಲ್ಲಿ ಮುಗೀತು ಕತೆ!

ಪ್ರತಿ 15 ದಿನಕೊಮ್ಮೆ ಇದೇ ಕಾಯುವಿಕೆ. ಪೋಸ್ಟ್ ಮ್ಯಾನ್ ಮತ್ತು ಪೇಪರ್ ಅಣ್ಣನಿಗೆ ಕಾದಷ್ಟು ನಾನು ಜೀವನದಲ್ಲಿ ಯಾರಿಗೂ ಕಾದಿಲ್ಲ! ಡಬ್ಬಕ್ಕೆ ಹಾಕಿದ ಪತ್ರವನ್ನು ಅಂಚೆಯವ ತೆಗೆದುಕೊಂಡು ಹೋಗುವನೋ ಇಲ್ಲವೋ ಎಂದು ಡಬ್ಬದ ಬಳಿಯೇ ನಿಂತು ಕಾದು ನಂಬಿಕೆ ಬರಿಸಿಕೊಂಡದ್ದಿದೆ. ಇನ್ನು ನಾನೇ ಪೂರ್ಣಗೊಳಿಸಿದ್ದ ಕತೆ ಬಹುಮಾನಕ್ಕೆ ಪ್ರಕಟಣೆಗೆ ಆಯ್ಕೆ ಆಯಿತೆ ಎಂದು ಕಾಯುವ ಸಂಭ್ರಮ. ಜೊತೆಗೆ ಹಿತವಾದ ಹಿಂಸೆ ಕೂಡ.
15/20 ಬಾರಿ ನನ್ನ ಬರಹ ಆಯ್ಕೆಯಾಗದೆ ಅಪ್ರಕಟಿತಗೊಂಡಾಗ ನೊಂದದ್ದೂ ಇದೆ. ಪೇಪರಣ್ಣನಿಗೆ ಕೈಮುಗಿದು ಬೇಡಿಕೊಂಡದ್ದಿದೆ. ಪುಟಾಣಿಯನ್ನು 1ನೇ ತಾರೀಕು ತರಲು. ಬಹುಶಃ ನನ್ನ ಕತೆ ಆಯ್ಕೆಯಾಗದಿರಲು ಕಾರಣ ನಿಗದಿತ ದಿನಾಂಕದೊಳಗೆ ತಲುಪದೆ ಇರುವುದು ಎಂದು ಮನವರಿಕೆಯಾಗಿದೆ. ಏಕೆಂದರೆ ಆಯ್ಕೆಯಾದ ಬೇರೆಯವರು ಪೂರ್ಣಗೊಳಿಸಿದ ಕತೆಗಳು ನಾನು ಯೋಚಿಸಿದಂತೆ ಇರುತ್ತಿದ್ದವು. ಆದರೂ ಪ್ರಕಟವಾಗುತ್ತಿರಲಿಲ್ಲ.

ಅಂತೂ ಇಂತೂ ಪೇಪರಣ್ಣ ನನ್ನ ಸಂಕಟ ನೋಡಲಾರದೇ ಖುದ್ದಾಗಿ ಆಸಕ್ತಿವಹಿಸಿ ಬೇಗ ಪುಟಾಣಿ ತಲುಪಿಸಲು ಸಫಲನಾದುದ್ದು, ಅನಂತರ ನಾನು ಪೂರ್ಣಗೊಳಿಸಿದ ಕತೆಗಳು ನಿರಂತರವಾಗಿ ಬರಲು ಆರಂಭವಾದದ್ದು, ಮನೀ ಆರ್ಡರ್ ರಸೀತಿಯಲ್ಲಿ ಸಹಿ ಮಾಡಿ 25 ರೂಪಾಯಿ ಪಡೆದದ್ದು ಎಲ್ಲ ದೊಡ್ಡ ಕಾದಂಬರಿ!

ನನ್ನ ಪ್ರಕಟಿತ ಬರಹದ ಹಾಳೆಯನ್ನು ಸವರಿ ಸವರಿ ನೋಡುವುದು, ಮೂಸುವುದು, ಹೆಸರಿನ ಮೇಲೆ ಬೆರಳಾಡಿಸಿ ಬೆರಗಾಗುವುದು ಭಾರತರತ್ನ ಪಡೆದಂತಹ ಖುಷಿಯಲ್ಲಿ ಮನಿ ಆರ್ಡರ್ ರಸೀತಿಯಲ್ಲಿ ಸಹಿ ಮಾಡಿ 25 ರೂ ಪಡೆಯುವುದು. ಹೇ ಇದು ಪದಗಳು ಸೋಲುವ ಹೊತ್ತು!

———–

vnnವಾಸುದೇವ ನಾಡಿಗ್ ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ. ಕುವೆಮಪು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ. ಕೇಂದ್ರ ಸರಕಾರದ ವಸತಿ ಶಾಲೆ ಜವಾಹರ ನವೋದಯ ವಿದ್ಯಾಲಯದಲ್ಲಿ ಕನ್ನಡ ಶಿಕ್ಷಕರಾಗಿದ್ದು, ಪ್ರಸ್ತುತ ಉತ್ತರಪ್ರದೇಶದ ಓರೈನಲ್ಲಿ ವಾಸ. ‘ವೃಷಭಾಚಲದ ಕನಸು’ (ಬೇಂದ್ರೆ ಅಡಿಗ ಕಾವ್ಯ ಪ್ರಶಸ್ತಿ), ‘ಹೊಸ್ತಿಲು ಹಿಮಾಲಯದ ಮಧ್ಯೆ’, ‘ಭವದ ಹಕ್ಕಿ’ (ಮುದ್ದಣ ಕಾವ್ಯ ಪ್ರಶಸ್ತಿ), ‘ವಿರಕ್ತರ ಬಟ್ಟೆಗಳು’, ‘ನಿನ್ನ ಧ್ಯಾನದ ಹಣತೆ’ (ಕಡೆಂಗೋಡ್ಲು ಕಾವ್ಯ  ಪ್ರಶಸ್ತಿ), ‘ಅಲೆ ತಾಕಿದರೆ ದಡ’ ಪ್ರಕಟಿತ ಕವನಸಂಕಲನಗಳು. ಕ್ರೈಸ್ಟ್‌ ಕಾಲೇಜು ಸ್ಪರ್ಧೆ ಮತ್ತು ಪ್ರಜಾವಾಣಿ ದೀಪಾವಳಿ ಕಾವ್ಯಸ್ಪರ್ಧೆಯಲ್ಲೂ ಬಹುಮಾನಿತರು.

Share

2 Comments For "ಆ ಒಬ್ಬನಿಗಾಗಿ ಅದೆಷ್ಟು ಕಾಯುತ್ತಿದ್ದೆ ಗೊತ್ತಾ?
ವಾಸುದೇವ ನಾಡಿಗ್, ನೆಲಮಂಗಲ
"

 1. Pavan kumar kv
  9th December 2016

  ಬರಹ ಓದಿಸಿಕೊಂಡು ಹೋಗುತ್ತದೆ
  ಪವನ ಕುಮಾರ ಕೆ ವಿ ಬಳ್ಳಾರಿ

  Reply
 2. nagarekha
  9th December 2016

  Chennagi moodibandide.
  Nenapugal matu madhur

  Reply

Leave a comment

Your email address will not be published. Required fields are marked *

Recent Posts More

 • 4 days ago No comment

  ಕಣ್ಣ ತುಂಬ ನಿಶ್ಶಬ್ದ!

      ಕವಿಸಾಲು       ಆಗೆಲ್ಲ ನಿತ್ಯ ಬರುತಿದ್ದ ನಿಯಮಿತ ವಸಂತ ಮುಂದಿಲ್ಲ ಶಿಶಿರ-ಹೇಮಂತ ಹಿಂದೆ ನಿರ್ವಾತ ಕುಕಿಲು-ನವಿಲಲ್ಲದ ಬಂದ ಪುಳಕವಷ್ಟೇ ಆದವ ಬೆರಳಂಚು ತಾಕುವ ಮುನ್ನ ಇನ್ನು ನಾಳೆ ಎಂದು ಹೋದವ ಮತ್ತೊಂದು ದಿನ ಕಾಯುವಿಕೆ ಶುರುವಾದದ್ದೋ ಅವ ಬಾರದುಳಿದದ್ದೋ ನಿನ್ನೆವರೆಗೂ ಕತ್ತಲೊಳಗಣ ಕಪ್ಪಿನಂತೆ ಸಂಜೆಯುದ್ದ ಬಿರುಗಣ್ಣು ಕಣ್ಣ ತುಂಬ ನಿಶ್ಶಬ್ದ! ಇಂದು ಬೆಳಗಲೇನೋ ಬೆಳಕಿತ್ತು ಅಚ್ಚರಿ ಮರಿ ಹಾಕುತಿದೆ ಸಂಜೆಯಷ್ಟೆ ಖಾಲಿಖಾಲಿ ಮರೆವೊಂದು ...

 • 5 days ago No comment

  ಔರ್ ಕರೀಬ್ ಆ ಜಾವೋ…

              ಖ್ವಾಬ್ ಹೋ ತುಮ್ ಯಾ ಕೋಯೀ ಹಕೀಕತ್.. ಕೌನ್ ಹೋ ತುಮ್ ಬತಲಾವೋ.. ದೇರ್ ಸೇ ಕಿತನೀ ದೂರ್ ಖಡೀ ಹೋ ಔರ್ ಕರೀಬ್ ಆ ಜಾವೋ… ಬಯಸೋದು ಬೆಟ್ಟದಷ್ಟು ಪ್ರೀತಿಯನ್ನು, ದೊಡ್ಡ ವೃತ್ತದಲ್ಲೊಂದು ಜಾಗವನ್ನು, ಆದರೆ ತಾವೇ ಚಿಕ್ಕದೊಂದು ವೃತ್ತ‌ ಬರೆದುಕೊಂಡು ಅಲ್ಲಿಗೆ ‘ಪ್ರವೇಶವಿಲ್ಲ’ ಅಂತ ನೇರವಾಗೇ ಹೇಳೋ ಧಾರ್ಷ್ಟ್ಯ… ಏನನ್ನುವುದು ಇದಕ್ಕೆ? ಕೊಡೋ ಕೈ ಯಾವಾಗಲೂ ಮೇಲಿರತ್ತೆ, ...

 • 7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 1 week ago No comment

  ಪಟ್ಟಾಂಗದ ಕತೆ – ಕರಣ್ ಜೋಹರ್ ಜೊತೆ

    ಅಂದು ಅಲ್ಲಿ ನಡೆಯುತ್ತಿದ್ದಿದ್ದು ಕೂಡ ‘ಕಾಫಿ ವಿದ್ ಕರಣ್’. ವ್ಯತ್ಯಾಸವೆಂದರೆ ನಾನೋ ಕಾಫಿಶಾಪಿನಲ್ಲಿ ಆಪ್ತರೊಬ್ಬರ ಆಗಮನಕ್ಕಾಗಿ ಕಾಯುತ್ತಿದ್ದೆ. ಕರಣ್ ಜೋಹರ್ ಎದುರಿನ ಮೇಜಿನ ಮೇಲಿರಿಸಲಾಗಿದ್ದ ತನ್ನ ಆತ್ಮಕಥೆಯ ಮುಖಪುಟದಲ್ಲಿ ಪೋಸು ಕೊಡುತ್ತಿದ್ದ. ಹೀಗೆ ಕೆಲಹೊತ್ತಿನಲ್ಲೇ ಆ ಪುಟ್ಟಜಾಗವು ‘ಮೆಹಫಿಲ್’ ಆಗುವ ನಿರೀಕ್ಷೆಯಲ್ಲಿತ್ತು. ಭಾರತಕ್ಕೆ ಇನ್ನೇನು ಬಂದಿಳಿಯುವ ತರಾತುರಿಯಲ್ಲಿ ಆಗಲೇ ನಾನು ಹಲವು ಪುಸ್ತಕಗಳನ್ನು ಸೀದಾ ಮನೆಗೇ ತರಿಸಿಟ್ಟುಕೊಂಡಿದ್ದೆ. ನೋಡನೋಡುತ್ತಾ ಇಪ್ಪತ್ತು-ಇಪ್ಪತ್ತೈದು ಪುಸ್ತಕಗಳು ಆಗಲೇ ಜಮೆಯಾಗಿದ್ದವು. ಹೀಗಾಗಿ ಅದೇನೇ ...


Editor's Wall

 • 18 January 2018
  7 days ago No comment

  ಮೋಹದ ಹಯವೇರಿದ ಕಿನ್ನರಿಯರ ಲೋಕದಲ್ಲಿ…

                      ಇಷ್ಟೆಲ್ಲ ಆದ ಬಳಿಕ ಸೋತು ಹಣ್ಣಾಗಿರಬಹುದು ಎಂದುಕೊಂಡರೆ ಅವಳು ಮೊದಲಿಗಿಂತ ದುಪ್ಪಟ್ಟು ಲಕಲಕ ಹೊಳೆಯುತ್ತ ಪಕ್ಕಾ ವ್ಯವಹಾರಸ್ಥಳಂತೆ ನಡೆದುಕೊಳ್ಳತೊಡಗಿದಳು. ಉಳಿದ ಹೆಣ್ಣುಮಕ್ಕಳಾದರೂ ಇವಳಿಗಿಂತ ಭಿನ್ನವಾಗಿಯೇನೂ ಇರಲಿಲ್ಲ.   ಆ ಪುಟ್ಟ ಊರಿನ ಎರಡು ಬೀದಿಗಳ ಅಷ್ಟೂ ಕ್ವಾರ್ಟರ್ಸ್ ಗಳ ತುಂಬ ಗುತ್ತಿಗೆ ಕೆಲಸದ ನಿಮಿತ್ತ ಬೇರೆ ರಾಜ್ಯಗಳ ಜನ ಬಂದು ನೆಲೆಸಿದ ಮೇಲೆ ಊರಿನಲ್ಲಿ ...

 • 15 January 2018
  1 week ago No comment

  ದೊರೆ ಏನೆಂದನು ಎಂದರೆ…

    ಗೆದ್ದವರು ಅವನನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ನಾಡಿಗೆ ಕರೆತಂದರು. ಚಾನೆಲ್ಲುಗಳೆಲ್ಲ ಇದನ್ನು ದಿನವಿಡೀ ಲೈವಾಗಿ ತೋರಿಸಿ ಕೃತಾರ್ಥತೆ ಅನುಭವಿಸಿದವು.   ಅವನೊಬ್ಬ ತುಂಬಾ ವರ್ಷಗಳಿಂದ ಕಾಡೊಳಗೇ ಗಡ್ಡೆ ಗೆಣಸು ತಿಂದ್ಕೊಂಡು ಇದ್ದ. ಆದ್ರೆ ಅವನ ಕಣ್ಣುಗಳು ಮಾತ್ರ ನಾಡ ಕಡೇನೇ ನೋಡ್ತಿದ್ವಂತೆ. ಕಿವಿಗಳು ನಾಡ ಕಡೆಯ ಸದ್ದುಗಳಿಗೇ ತೆರಕೊಂಡಿದ್ವಂತೆ. ಬಾಯಿ ಕೂಡ ನಾಡ ಬಗ್ಗೆಯೇ ವಟಗುಡೋ ರೂಢಿ ಬೆಳೆಸಿಕೊಂಡಿತ್ತಂತೆ. ವಿಚಾರ ಹೀಗಿದೆ ನೋಡಿ ಅಂತ ನಾಡಿಂದ ಕಾಡ ಕಡೆ ...

 • 14 January 2018
  2 weeks ago No comment

  ಸದ್ದಿಲ್ಲದೇ ಅವನನ್ನು ಹೋಗಗೊಟ್ಟೆ…

            | ಕಮಲಾ ದಾಸ್ ಕಡಲು     ಕಮಲಾ ದಾಸ್ ಕವಿತೆಗಳ ಅನುವಾದ ಶುರು ಮಾಡಿದ ಮೊದಲ ದಿನಗಳಲ್ಲಿ ಇದು ಕಣ್ಣಿಗೆ ಬಿದ್ದದ್ದು. ಈ ಕವಿತೆಯಲ್ಲಿನ ಅಸಹಾಯಕತೆ ಮತ್ತು ಅದರ ಹಿಂದೆಯೇ ಆವರಿಸುವ ನಿರ್ಲಿಪ್ತತೆ ನನಗೆ ತುಂಬ ಕಾಡಿಸಿಬಿಟ್ಟಿತು. ಯಾಕೆ ಒಂದು ಪ್ರೇಮ ಬಹುತೇಕ ಗಂಡಸರಿಗೆ ಬಂಧನದಂತೆ ಅನ್ನಿಸುತ್ತದೆ, ಒಂದು ಹಂತದ ನಂತರ ಯಾಕೆ ಹೆಣ್ಣಿಗೂ ಹಿಡಿದಿಟ್ಟುಕೊಳ್ಳುವುದು ನಿರರ್ಥಕ ಅನ್ನಿಸಿಬಿಡುತ್ತದೆ… ಹತ್ತು ...

 • 11 January 2018
  2 weeks ago No comment

  ಕಾಲಡಿಯ ತುಂಡು ನೆಲದಲ್ಲಿ ಮಾಯಾವನ ಅರಳಿ…

                      ಒಂದು ತೊಟ್ಟೂ ವಿಷ ನೆಲಕ್ಕೆ ಬೀಳದಂಥ ಸಾವಯವ ಬೆಳೆಗಳನ್ನು ನಾವೇ ಬೆಳೆದು ತಿನ್ನುವುದು ನಮಗೆ ಖಂಡಿತ ಸಾಧ್ಯವಿದೆ.   “ನನ್ನ ಭುಜವಸ್ತ್ರವನ್ನು ಬಾವುಟದಂತೆ ಹಾರಿಸಲು ನನಗೆ ಅಂಗೈಯಷ್ಟು ಜಾಗ ಬೇಕು ಶಾಶ್ವತ ವಿಳಾಸ ಬೇಕು” -ಎಜ್ರಾಶಾಸ್ತ್ರಿ ಭೂಮಿ ಮತ್ತು ವಸತಿ ಹೋರಾಟದಲ್ಲಿ ಸಕ್ರಿಯ ಕಾರ್ಯಕರ್ತರಾಗಿರುವ ಪದ್ಮಾ ಕೆ. ರಾಜ್ ತಮ್ಮ ಹೋರಾಟದ ಬಗ್ಗೆ ತಿಳಿಸಿದಾಗ ...

 • 04 January 2018
  3 weeks ago No comment

  ಬತ್ತಿಹೋದ ಎದೆಗೂಡುಗಳಲ್ಲಿ ಸುಪ್ತ ಜ್ವಾಲಾಮುಖಿಗಳು

                      ಅವಳು ಅಡುಗೆ ಮಾಡುತ್ತಾಳೆ ‘ನೀನೂ ಹೊತ್ತು ಹೊತ್ತಿಗೆ ಉಂಡೆಯಾ ತಿಂದೆಯಾ?’ ಎಂದು ಎಂದೂ ಕೇಳ ಹೇಳದವನೊಬ್ಬನಿಗಾಗಿ ಅವಳು ಅಡುಗೆ ಮಾಡುತ್ತಲೇ ಇರುತ್ತಾಳೆ   ಒಲೆಯ ಜ್ವಾಲೆಯಂತೆ ಧಗಧಗಿಸುತ್ತ, ಬೇಯುವ ಅಡುಗೆಯಂತೆ ಕೊತಕೊತನೆ ಕುದಿಯುತ್ತ, ಬಚ್ಚಲ ಬಿಸಿಬಿಸಿ ಹಬೆಯ ಜೊತೆ ಆರಲೆತ್ನಿಸುತ್ತ, ಕಣ್ಣೀರಾಗಿ ಹರಿವೊಡೆಯುತ್ತ, ಶೀತಲ ಮೌನದೊಳಗೆ ಹೆಪ್ಪುಗಟ್ಟುತ್ತ ಕೌಟುಂಬಿಕ ಚೌಕಟ್ಟಿನೊಳಗಿನ ಹೆಣ್ಣು ಅನುಭವಿಸುವ ತಳಮಳಗಳು ...