Share

ಧೂಳು ನನ್ನ ಮುಖದ ಮೇಲಿತ್ತು
ಸುಧಾ ಶರ್ಮ ಚವತ್ತಿ ಕಾಲಂ

https://i2.wp.com/connectkannada.com/wp-content/uploads/2016/08/sudha.jpg?w=658&ssl=1ತ್ತೀಚೆಗೆ ಎಲ್ಲರೂ ಮಾತನಾಡುತ್ತಿರುವುದು ಪಾಸಿಟಿವ್ ಥಿಂಕಿಂಗ್. ಸಕಾರಾತ್ಮಕವಾಗಿ ಯೋಚಿಸಬೇಕು. ನಿಜ ಆದರೆ ಕೇವಲ ಯೋಚಿಸಿದರೆ ಸಾಲದು, ನಮ್ಮ ಆಲೋಚನೆ ಕಾರ್ಯಗತ ಆಗಬೇಕು. ಕಾರ್ಯಗತ ಆಗದ ಆಲೋಚನೆ ಕೇವಲ ಹರಿದಾಡುವ ಮುಗಿಲಿನಂತೆ. ಅದರಿಂದ ಮಳೆ ಇಲ್ಲ. ನಮ್ಮೆಲ್ಲರ ಸಮಸ್ಯೆ ಇದೇ. ನಾವು ಪ್ರತಿ ನಿತ್ಯವೂ ಹಾಗಿರಬೇಕು. ಹೀಗಿರಬೇಕು ಎಂದು ಹೇಳುತ್ತೇವೆ. ಮನಸ್ಸಿನಲ್ಲಿ ಗುರಿಗಳನ್ನು ಇಟ್ಟುಕೊಳ್ಳುತ್ತೇವೆ. ಉಪದೇಶಗಳನ್ನು ಧಾರಾಳವಾಗಿ ಮಾಡುತ್ತೇವೆ. ಆದರೆ ನಾವು ಹಾಗೆ ಬದುಕುವುದರಲ್ಲಿ ಸೋಲುತ್ತೇವೆ. ನಮ್ಮ ನಿತ್ಯ ಜೀವನದಲ್ಲಿಯೇ, ಜಾಸ್ತಿ ಕೊಬ್ಬಿನ ಅಂಶ ಆಹಾರದಲ್ಲಿ ಇರಬಾರದು, ನಿತ್ಯವೂ ವ್ಯಾಯಾಮ, ವಾಕಿಂಗ್ ಮಾಡಬೇಕು ಹೀಗೆಲ್ಲ ಯೋಚಿಸುತ್ತೇವೆ. ಅಷ್ಟೇ ಅಲ್ಲ. ಧೃಡವಾಗಿ ನಿರ್ಧರಿಸುತ್ತೇವೆ. ಏನೇನು ಮಾಡಬೇಕೆಂಬುದನ್ನು ಪಟ್ಟಿಮಾಡಿಕೊಂಡು ಇಡುತ್ತೇವೆ. ಇಷ್ಟೆಲ್ಲ ಮಾಡಿಯೂ ನಾವು ಕೆಲವೇ ದಿನ ಇಂತಹದನ್ನೆಲ್ಲ ಪಾಲಿಸುತ್ತೇವೆ. ಆನಂತರ ಎಲ್ಲ ಮಾಮೂಲಿನಂತೆ. ಯಾಕೆ ಹೀಗಾಗುತ್ತದೆ ಎಂದರೆ ನಾವು ಯೋಚಿಸಿ ಅದನ್ನು ಆಚರಣೆಗೆ ಅದೂ ಸತತವಾಗಿ ಆಚರಣೆಗೆ ತರದಿದ್ದರೆ ಅದು ಮನಸ್ಸಿನಲ್ಲಿ ರಿಜಿಸ್ಟರ್ ಆಗುವುದಿಲ್ಲ. ಮನಸ್ಸಿನಲ್ಲಿ ಅದು ದಾಖಲಾಗುವುದಿಲ್ಲ. ನ್ಯುರೋ ಸೈನ್ಸ್ ಭಾಷೆಯಲ್ಲಿ ಹೇಳಬೇಕೆಂದರೆ ಹಾರ್ಡ್ ವೈಯರಿಂಗ್ ಆಗಲಿಲ್ಲ ಅಂದರೆ ಅದು ಬಹಳ ಬೇಗ ಅಳಿದು ಹೋಗುತ್ತದೆ. ಎಂತಹ ಸಂಕಲ್ಪವಾದರೂ ಅದು ಕ್ರಿಯೆಯ ರೂಪ ತಾಳಬೇಕು.

ನಮ್ಮ ಆಲೋಚನೆಗಳು ಮನಸ್ಸಿಗೆ ಬಂದು ಹೋಗುವ ಸಾವಿರಾರು ಸಂಗತಿಗಳಷ್ಟೇ. ನಿತ್ಯವೂ ಸುಮಾರು 64 ಸಾವಿರ ಆಲೋಚನೆಗಳು ಬಂದು ಹೋಗುತ್ತವೆ. ಹೀಗಿರುವಾಗ ನಮಗೆ ನಿನ್ನೆ ಏನೇನು ಆಲೋಚನೆ ಬಂತು ಎನ್ನುವುದು ಇವತ್ತು ನೆನಪಿರುವುದಿಲ್ಲ. ಕೆಲವೇ ತಾಸುಗಳ ಹಿಂದೆ ಬಂದ ಆಲೋಚನೆ ಈಗ ನೆನಪಿರುವುದಿಲ್ಲ. ಹೀಗಿರುವಾಗ ನಾವು ಸಂಕಲ್ಪದಂತೆ ಮಾಡಿಕೊಂಡ ನಿರ್ಧಾರಗಳು ಕಾರ್ಯಗತವಾಗದಿದ್ದರೆ ಮರೆತು ಹೋಗತ್ತೆ. ತನ್ನ ತೀವ್ರತೆಯನ್ನು ಕಳೆದುಕೊಳ್ಳತ್ತೆ. ಹಾಗಾಗಿಯೇ ಪ್ರತಿ ಆಲೋಚನೆಯನ್ನು ಕ್ರಿಯೆ ಬೆನ್ನು ಹತ್ತಲೇ ಬೇಕು. ಆಲೋಚನೆಯನ್ನು ಸಮರ್ಪಕವಾಗಿ ಕಾರ್ಯಕ್ಕೆ ಇಳಿಸುವುದೇ ಯಶಸ್ಸು. ನಾವು ಕಂಡ ಕನಸನ್ನು ಕೈಗೂಡಿಸಿಕೊಳ್ಳಲು ಪ್ರಯತ್ನ ಪಡಬೇಕು ಅಂದರೆ ಇದೇ. ಒಂದು ಗುರಿ ಮುಂದೆ ಕಾಣುತ್ತಿದೆ. ನಾವೆಷ್ಟೇ ಯೋಚಿಸಿದರೂ ಅಲ್ಲಿಗೆ ಹೋಗುವುದಕ್ಕೆ ಹೆಜ್ಜೆ ಇಡಲೇ ಬೇಕು. ಬೇರೆ ಬೇರೆ ಮಾರ್ಗದ ಮೂಲಕ, ಬೇರೆ ಬೇರೆ ಸಾಧನಗಳ ಮೂಲಕ ಅಲ್ಲಿಗೆ ಹೋಗಬಹುದು. ಅಂದರೆ ಕುಳಿತಲ್ಲೆ ಕುಳಿತರೆ ಹೋಗಿ ಅಲ್ಲಿ ಸೇರಲಾರೆವು. ಇಷ್ಟೇ ಸರಳ; ಜೀವನದಲ್ಲಿ ಯಶಸ್ಸು ಪರಿಶ್ರಮದಿಂದ ಮಾತ್ರ ದೊರಕುವ ಸಂತಸ.

ನಮಗೆ ಎಲ್ಲ ಸೋಲಿಗೂ ಸಮಸ್ಯೆಗೂ ಬೇರೆಯವರನ್ನು ಹೊಣೆ ಮಾಡುವುದು ಸುಲಭ. ಇದೂ ಕೂಡ ಮನಸ್ಸಿನ ಒಂದು ವ್ಯಸನ. ಹೇಗೆ ಚಹ, ಕಾಫಿ, ಸಿಗರೇಟು, ತಂಬಾಕು ಇತ್ಯಾದಿ ವ್ಯಸನಗಳೋ ಹಾಗೆ ಬೇರೆಯವರನ್ನು ದೂಷಿಸುವುದು ಮನಸ್ಸಿನ ಕೆಟ್ಟ ಅಭ್ಯಾಸ. ಚಟ. ನಾವು ಚಟವನ್ನು ಬಿಡುವುದಕ್ಕೆ ಪ್ರಯತ್ನಿಸುತ್ತೇವೆ. ಗಟ್ಟಿ ಮನಸ್ಸು ಮಾಡಿ ಚಟ ಬಿಟ್ಟು ಬಿಟ್ಟೆ ಎನ್ನುತ್ತೇವೆ. ಈಗ ಈ ಚಟಗಳ ಸಾಲಿಗೆ ವಿಪರೀತ ಮಾತನಾಡುವ, ಟಿವಿ ನೋಡುವ, ಸಿಕ್ಕಾಪಟ್ಟೆ ತಿನ್ನುವ, ಶಾಪಿಂಗ್ ಹೋಗುವ, ಮೊಬೈಲ್ ಅಲ್ಲಿ ಮುಳುಗಿ ಬಿಡುವ ಹೀಗೆ ಈ ಮನಸ್ಸಿನ ವ್ಯಸನಗಳ ಪಟ್ಟಿ ದೊಡ್ಡದಿದೆ. ಆದರೆ ಇದು ವ್ಯಸನ ಎಂದು ಗೊತ್ತಾಗುತ್ತಿಲ್ಲ. ಮೊದಲು ನಮ್ಮ ವ್ಯಸನಗಳು ನಮಗೆ ಗೊತ್ತಾಗಬೇಕು. ಆಗ ಬಿಡುವುದಕ್ಕೆ ಪ್ರಯತ್ನಿಸಬಹುದು.

ನಮ್ಮ ವಿವೇಕಕ್ಕೆ ಒಳ್ಳೆಯದು, ಕೆಟ್ಟದು ಎನ್ನುವುದು ಗೊತ್ತು. ಆದರೆ ಮನಸ್ಸಿಗೆ ಇದು ಒಂದು ಆಭ್ಯಾಸ. ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳು. ಒಳ್ಳೆಯ ಅಭ್ಯಾಸವನ್ನೇ ಸಾಧನೆ ಎನ್ನುತ್ತೇವೆ. ಮನಸ್ಸು ಪಳಗಿದಾಗ ಆಲೋಚನೆಯ ಮೇಲೆ ಹಿಡಿತ ವಿರುತ್ತದೆ. ಆಲೋಚಿಸಿದ್ದು ಕ್ರಿಯೆ ಆಗುತ್ತದೆ. ಇದನ್ನೇ ಕಾಯಾ ವಾಚಾ ಮನಸಾ ಎಂದು ಕರೆದಿದ್ದಾರೆ. ಯೋಚಿಸಿದಂತೆ ಮಾತನಾಡುವುದು ಮತ್ತು ಮಾತನಾಡಿದಂತೆ ನಡೆದುಕೊಳ್ಳುವುದು. ಇದು ಸುಲಭವಾಗೋದು ಮತ್ತದೇ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ. ಆಲೋಚನೆಯ ಮಟ್ಟದಲ್ಲಿಯೇ ಬದಲಾವಣೆ ಆಗಬೇಕು.

~

ಇತ್ತೀಚೆಗೆ ಗಾಲಿಬ್‍ನ ಕವಿತೆ ಪದೇ ಪದೇ ನೆನಪಾಗುತ್ತಿದೆ. ಧೂಳು ನನ್ನ ಮುಖದ ಮೇಲಿತ್ತು ಮೂರ್ಖ ನಾನು ಜೀವನ ಪೂರ್ತಿ ಕ್ನನಡ ಒರೆಸುತ್ತ ಕಳೆದುಬಿಟ್ಟೆ. ನಾವೋ ಕನ್ನಡಿ ಒರೆಸುವುದಿಲ್ಲ. ಕನ್ನಡಿಯನ್ನು ಬೈಯುತ್ತ ಕಳೆಯುತ್ತೇವೆ. ಮುಖದ ತುಂಬ ಧೂಳು ಇಟ್ಟುಕೊಂಡೂ, ಕನ್ನಡಿಯನ್ನು ದೂಷಿಸುವ ನಮಗೆ ನಮ್ಮ ಮುಖ ಕಾಣುವುದಾದರೂ ಹೇಗೆ? ಕಂಡರೂ ಕನ್ನಡಿ ಹೇಳಿದ ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.

————-

ಸುಧಾ ಶರ್ಮಾ ಚವತ್ತಿ

286637_218799308166417_3412973_o[1]“ಒದ್ದೆ ಕಣ್ಣುಗಳ ಪ್ರೀತಿ” ಕವನ ಸಂಕಲನದ ಮೂಲಕ ಭರವಸೆ ಹುಟ್ಟಿಸಿದ ಸುಧಾ ಶರ್ಮಾ ಚವತ್ತಿ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ ಪರಿಣಿತರು. ಪತ್ರಿಕೆಗಳಲ್ಲಿ ಲೇಖನ, ಅಂಕಣಗಳ ಮೂಲಕ ಪರಿಚಿತರು. “ಆವಿಯಾಗಿದೆ ಮಾತು” (ಮಲ್ಲಿಗೆ), “ಷೇರೆಂಬ ಮಾಯಾಂಗನೆ” ( ವಿಜಯ ಕರ್ನಾಟಕ ), “ಪ್ರಾಫಿಟ್ ಪ್ಲಸ್” (ವಿಜಯವಾಣಿ) ಪ್ರಕಟಿತ ಅಂಕಣಗಳು. ಕಿರುತೆರೆ ಕಾರ್ಯರ್ಕಮಗಳ ನಿರ್ದೇಶನ, ನಿರ್ಮಾಣ, ನಿರೂಪಣೆಯ ಅನುಭವ. ಈಗ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಇವರು ಉತ್ತಮ ವಾಗ್ಮಿ. ಸಮೂಹ ಮಾತುಗಾರಿಕೆಯೂ ಇವರ ಉತ್ಕಟ ಪ್ರೀತಿಗಳಲ್ಲಿ ಒಂದು.

Share

4 Comments For "ಧೂಳು ನನ್ನ ಮುಖದ ಮೇಲಿತ್ತು
ಸುಧಾ ಶರ್ಮ ಚವತ್ತಿ ಕಾಲಂ
"

 1. ಆನಂದ್ ಋಗ್ವೇದಿ
  23rd December 2016

  ಸಶಕ್ತ ಬರಹ

  Reply
 2. ವಿಮಲಾನಾವಡ
  25th December 2016

  ಚೆನ್ನಾಗಿದೆ,ಹೀಗೂ ಆಗಬಹುದೆಂದು ನನಗೇ ತಿಳಿದಿರಲಿಲ್ಲ.ಯುಕ್ತ ಬರಹ.

  Reply
 3. ಬಸವರಾಜ. ಬೂದಿಹಾಳ.ಗೋವಾ.
  20th May 2017

  ಈ ಲೇಖನದಿಂದ ನಮಗೆ ಅರಿವು ಮೂಡಿದ್ದಾದರೆ ಖಂಡಿತ ಆಲೋಚನೆಗಳನ್ನು ಸಕಾರಾತ್ಮಕವಾಗಿ ಪರವರ್ತಿಸಿಕೊಳ್ಳಲು
  ಪ್ರಯತ್ನಿಸುತ್ತೇವೆ.
  *ಬಸವರಾಜ . ಬೂದಿಹಾಳ.ಗೋವಾ.

  Reply
 4. ಜೈದೇವ್ ಮೋಹನ್
  11th January 2018

  ಇಷ್ಟ ಆಯ್ತು

  Reply

Leave a comment

Your email address will not be published. Required fields are marked *

Recent Posts More

 • 1 day ago No comment

  ಕೊನಾರ್ಕ್ ‘ಕಾಲ ದೇಗುಲ’

    ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ ...

 • 4 days ago No comment

  ಅಳಿದುಳಿದ ಊರಿನ ಹೂದೋಟದೊಳಗೆ

    ಕವಿಸಾಲು       ಯಾವ ಕತ್ತಿಯೂ ಕತ್ತರಿಸದಿರಲಿ! ಹಗಲು ಸೂರ್ಯನ ಬಿಸಿಲ ಕುಣಿಕೆ ಬಿಗಿಬಿಗಿ ಉರಿಯುವ ನಿಗಿನಿಗಿ ಕೆಂಡ ಭಸ್ಮವಾಗಿಬಿಡುವ ಭಯದ ಕಂಪನ ಬಿಸಿಯುಸಿರೂ ಧಗೆಯಾಗಿ ಅರಳಿದ ಮಲ್ಲೆಹೂಗಳು ಸುಟ್ಟು ಕರಕಲಾಗಿ ರಕ್ಕಸ ಗಣಕೊ ಭಾರೀ ಭೋಜನದೌತಣ ಭವಿಷ್ಯದ ಕಂದಮ್ಮಗಳ ಕತ್ತು ಹಿಚುಕಿ ಭ್ರೂಣಗಳ ಕಲೆಸಿಹಾಕಿ ಕಟ್ಟಬಯಸಿದ ಭವ್ಯ ಸೌಧಗಳ ಬುನಾದಿಗಳಡಿಯಲ್ಲಿ ಅಸ್ಥಿಪಂಜರಗಳ ರಾಶಿ ಒರೆಯಲ್ಲವಿತ ಕತ್ತಿಗಳು ಬಯಲಿಗೆ ಬಂದು ಒಳಕೋಣೆಯ ಸಂಚುಗಳು ಹೊಂಚುಹಾಕಿ ಕೊಲ್ಲುವ ...

 • 7 days ago No comment

  ಕಾದಂಬಿನಿ ಕಾಲಂ | ಜಾನೂ ಎಂದು ಕರೆಯುತ್ತೇನೆ!

                    ನಾನು ಸಾಹಿತಿಯಾಗುವ ಕನಸನ್ನು ಕಣ್ಣಿಗೆ ಮೆತ್ತಿಕೊಂಡು ಬೆಳೆದವಳಲ್ಲ. ಜಗತ್ತಿನೊಡನೆ ಒಡನಾಡುವಾಗ ನನ್ನೊಳಗೆ ನಡೆಯುವ ಯುದ್ಧವನ್ನು ಅಭಿವ್ಯಕ್ತಿಸಲು ಬರಹ ಅನಿವಾರ್ಯವಾಗಿತ್ತಷ್ಟೇ!   ಬಾಲ್ಯದಲ್ಲಿ ಪ್ರಾಣಿ ಪಕ್ಷಿ, ಮಕ್ಕಳ ಅಥವಾ ಕಾರ್ಟೂನು ಚಿತ್ರಗಳು ಊರಿನ ಸಿನೆಮಾ ಟೆಂಟಿಗೆ ಬಂದಾಗ ಶಿಕ್ಷಕರು ವಿದ್ಯಾರ್ಥಿಗಳನ್ನು ಕರೆದೊಯ್ದು ಕಡಿಮೆ ದುಡ್ಡಿನಲ್ಲಿ ಸಿನೆಮಾ ತೋರಿಸುತ್ತಿದ್ದರು. ಇಲ್ಲವೇ ರಜೆಯಲ್ಲಿ ನನ್ನ ಮಾಮನ ಥಿಯೇಟರಿನಲ್ಲಿ ಅಂಥ ಸಿನೆಮಾ ...

 • 1 week ago One Comment

  ಸಂವೇದನೆ..!? ಹಾಗಂದ್ರೆ ಏನ್ರೀ..!? ಅದ್ಯಾವ ಆ್ಯಂಡ್ರಾಯ್ಡ್ ಆ್ಯಪ್..!?

    ಚಿಟ್ಟೆಬಣ್ಣ       ಹಾಗೊಂದು, ಸುಮಾರು ೬-೭ ವರ್ಷಗಳ ಹಿಂದಿನ ಘಟನೆ. ಅಂದು ಅಪ್ಪ ಕಿವಿಗೆ ಫೋನನ್ನು ಹಚ್ಚಿಕೊಂಡು ಕುಳಿತುಬಿಟ್ಟಿದ್ದರು. ಒಬ್ಬರ ನಂತರ ಒಬ್ಬರಿಗೆ ಕರೆ ಮಾಡಿ ಜೋರು ದನಿಯಲ್ಲಿ ಒಂದೇ ಸಂಗತಿಯನ್ನು ಹೇಳುತ್ತಿದ್ದರು, “ಹಲೋ, ಕೇಳ್ತಾ ಇದ್ಯಾ..!? ಒಂದು ಒಳ್ಳೆ ಸುದ್ದಿ ಇದೆ ಮಾರಾಯ್ರೇ. ರಾಯರ ಮನೆಯವರು ನಮ್ಮ ರಾಮಮಂದಿರಕ್ಕೆ ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದ್ದಾರೆ. ನಿನ್ನೆ ತಡರಾತ್ರಿ ಫೋನ್ ಮಾಡಿ ತಿಳಿಸಿದರು. ತುಂಬಾ ...

 • 1 week ago No comment

  ಪ್ರತಿ ಹೆಜ್ಜೆಯೂರುವಲ್ಲೂ ಇರುವ ಆಸರೆ ‘ಅಮ್ಮ’

  ಯಾವಾಗ ಹೂ ಕೊಂಡರೂ ಮೊಳ ಹೆಚ್ಚು ಹಾಕಿ ಕೊಡುವ ಹೂವಮ್ಮ, ಯಾವತ್ತೋ ಒಮ್ಮೆ ಪಾರ್ಕ್ ನಲ್ಲಿ ಸಿಗುವುದಾದರೂ ಯೋಗಕ್ಷೇಮ ವಿಚಾರಿಸಿ ‘ಸಂದಾಕಿರು ಮಗಾ’ ಅನ್ನುವ ಅಜ್ಜಿ, ಸುಸ್ತಿನ ಸಣ್ಣ ಛಾಯೆ ಕಂಡರೂ ಮಡಿಲಿಗೆಳೆದುಕೊಂಡು ತಂಪೆರೆವ ಗೆಳೆಯ, ಏನೂ ಹೇಳದೇ ಇದ್ದಾಗಲೂ ಅರ್ಥ ಮಾಡಿಕೊಂಡು ನೋವಿಗೆ ಮುಲಾಮು ಹಚ್ಚುವ ಗೆಳತಿ, ಸುಡುತ್ತಿರುವ ನೋವು, ಅಳು ಮರೆಸಲು ನಕ್ಕರೆ ತಲೆ ಮ್ಯಾಲೆ ಮೊಟಕಿ ‘ಅತ್ತು ಪ್ರಯೋಜನವಿಲ್ಲ, ನಗುವ ವಿಷಯವಲ್ಲ’ ಸಣ್ಣಗೆ ಗದರಿ ...


Editor's Wall

 • 11 May 2018
  1 week ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  2 weeks ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  3 weeks ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  3 weeks ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  3 weeks ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...