Share

ರಾಂ ಭರೋಸೆ ಡ್ರೈವಿಂಗ್!
ಈಶ್ವರ ದೈತೋಟ ಕಾಲಂ

https://i2.wp.com/connectkannada.com/wp-content/uploads/2016/04/IMG-20160412-WA0006.jpg?w=658&ssl=1

ನ್ನ ಸಹಪಾಠಿಯೊಬ್ಬನಿದ್ದ. ಒಂದೇ ತರಗತಿಯಲ್ಲಿ ಕೂತಿದ್ದರಿಂದ ತೊಡಗಿ ಹುಡುಗೀರನ್ನು ಚುಡಾಯಿಸುವವರೆಗೆ ಜೊತೆಗಿದ್ದವರು. ಒಟ್ನಲ್ಲಿ, ಕಾಲೇಜು ದಿನಗಳಿಂದ ವೃತ್ತಿ ಆರಂಭಿಕ ವರ್ಷವರೆಗೆ ಒಳ್ಳೇ ಸ್ನೇಹಿತರು. ಕಾಲೇಜಿನ ಕೆಲ ಪ್ರೊಫೆಸರ್‍ಗಳೇ ಮಾವನ ಹಳೆ ವೆಸ್ಪಾ ಸ್ಕೂಟರ್‍ಗಳಲ್ಲಿ ಬರುತ್ತಿದ್ದ ದಿನಗಳವು. ಇನ್ನು ವಿದ್ಯಾರ್ಥಿಗಳು ಕಾರ್-ಬಾರು ಮಾಡುವುದೆಂತು? ಈ ಮಿತ್ರ ಒಮ್ಮೊಮ್ಮೆ ಅಪ್ಪನ ಕಾರನ್ನು ಕಣ್ಣಾಮುಚ್ಚಾಲೆಯಾಡಿ ತರುತ್ತಲಿದ್ದ. ನಮಗೆಲ್ಲಾ ಜಾಲಿ ಟ್ರಿಪ್ ಮಾಡಿಸಿ, ಸಿನಿಮಾಕ್ಕೂ ಕರ್ಕೊಂಡು ಹೋಗುತ್ತಿದ್ದ. ಎಸ್.ಕೆ.ಸಿ. (ಸ್ವೀಟ್, ಖಾರಾ ಕಾಫಿ) ಕೊಡಿಸುತ್ತಿದ್ದ. ಸಿಕ್ಕಿಬಿದ್ದಾಗ ಅಪ್ಪನಿಂದ ಅವನಿಗೆ ಪೂಜೆ ಆಗುತ್ತಲಿತ್ತು. ಅದಕ್ಕೆಲ್ಲಾ ಅವನದು “ಡೋಂಟ್ ಕೇರ್”.

ನಾವುಗಳಾರಾದರೂ, ಅಪ್ಪಿತಪ್ಪಿ ಅವನ ಡ್ಯಾಡಿ ಕಾಕದೃಷ್ಟಿಗೆ ಬಿದ್ದುಬಿಟ್ಟರೆ ಗೋವಿಂದಾ! ಏನ್ರೋ, ಅವ್ನೇನೋ ಅಪಾ ಪೋಲಿ. ನಿಮಗಾದ್ರೂ ಬುದ್ಧಿ ಬೇಡ್ವೇನ್ರೋ, ಆ ಹಾಳಾದವನ ಜೊತೆ ಕಾರ್ನಲ್ಲಿ ಮಜಾ ಉಡಾಯಿಸ್ತೀರಲ್ವೋ, ಅವ್ನ ಹಣೆಬರಹ- ರೂಲ್ಸ್, ಗೀಲ್ಸ್ ಏನೂ ಇಲ್ಲದ ಡ್ರೈವಿಂಗ್, ಸ್ಪೀಡ್ ನೋಡಿಲ್ವೇನ್ರೋ, ಈಗ ಹಲ್ಲು ಕಿಸೀತೀರಾ, ನೋಡ್ತಾ ಇರ್ರೀ, ಒಂದಿನ ಗ್ಯಾರಂಟಿ ಯಾರದಾದರೂ ಜೀವ ತೆಗೀತಾನೆ, ಇಲ್ಲ, ನಿಮ್ಮಗಳ ಕಾಲೋ, ಕೈನೋ, ಸೊಂಟಾನೋ ಮುರ್ದಾಕ್ತಾನೆ, ಆಮೇಲೆ ಏನ್ಮಾಡ್ತೀರ್ರೋ’ ಎಂದು ಅವನಿಗಿಟ್ಟ ಪೂಜೆ ಪ್ರಸಾದ ನಮ್ಗೂ ಸಿಗ್ತಿತ್ತು. ಅವನು ವಿವಾಹವಾಗಿ ತಾಳಿಬಲದಿಂದ ಕೆನಡಾ, ಅಮೆರಿಕಾಗಳಿಗೆ ಹೊರಟೇಬಿಟ್ಟ. ಈಗ ಅಲ್ಲಿ ಏನೋನೋ ಬಿಸಿನೆಸ್ ಇದೆ.

ಅವ್ನು ಹೋದ್ಮೇಲೆ, ನಾವುಗಳೂ ಒಬ್ಬೊಬ್ಬರಾಗಿ ಸ್ಕೂಟರ್, ಕಾರು ತಗೋಂಬಿಟ್ವಿ. ಸಂಬಳ, ಸಾರಿಗೆ ಬರ್ತದಲ್ಲಾ, ಆದ್ರೆ ಡ್ರೈವಿಂಗ್ ಕಲಿತದ್ದೆಲ್ಲಾ ಬೆಂಗ್ಳೂರು ರಸ್ತೆಗಳಲ್ಲೇ ತಾನೆ. ಸಂಚಾರ ಕಾನೂನು ಪಕ್ಕಕ್ಕಿರಲಿ, ಓವರ್‍ಟೇಕು ಫ್ರಂ ರೈಟ್ ರೂಲಿದ್ದರೂ, ಎಡ,ಬಲ, ನಡುವೆ ಜಾಗವಿದ್ದೆಡೆಯೆಲ್ಲಾ ಕಾರು ತೂರಿಸಿ ಮುನ್ನುಗ್ಗದಿರಲು ನಾವೇನು ದಡ್ಡ ಶಿಖಾಮಣಿಗಳೇ? ನಾವು ಜಾಣರು-ರಸ್ತೆಯಲ್ಲಿ ರಾಜರು, ಉಳಿದವರೆಲ್ಲಾರು ದಡ್ಡ ಕೋಣರು. ಈಕಡೆ ರಸ್ತೆ ಜ್ಯಾಮ್ ಆಗಿದ್ದರೆ, ಆಕಡೆ ವನ್‍ವೇಯಲ್ಲಿ ಹೋಗದಿದ್ದರೆ ಕಛೇರಿ ಕೆಲಸಕ್ಕೆ ಅಡ್ಡಿಯಾಗುತ್ತದಲ್ಲಾ, ಇನ್ನೇನು ಮಾಡೋದು! ಮೊಬೈಲ್ ಇರೋದೇ ಮಾತ್ನಾಡೋದಿಕ್ಕಲ್ವೇ! ಅರ್ಜೆಂಟಿದ್ದಾಗ ಬಳಸಿದ್ರೆ ಯಾರಪ್ಪನ ಗಂಟು ಹೋಗುತ್ತೆ. ಮದ್ಯಪಾನ ಮಾಡಿ, ಇಲ್ಲವೇ ಮಧ್ಯೆ,ಮಧ್ಯೆ ಪಾನ ಮಾಡುತ್ತಾ ವಾಹನ ಚಲಿಸಬಾರದೆಂದು ಗೊತ್ತುಂಟು. ಆದರೆ, ಸೋಶಿಯಲೈಸೇಶನ್ ಇಲ್ಲದಿದ್ದರೆ ಲೈಫ್ನಲ್ಲಿ ಮಜಾ ಏನಿದೆ? ಬದುಕ್ಕಿದ್ದೇನು ಫಲ! ಎಂಬಂತೆ ಎಲ್ಲರ ಹಾಗೆ ನಮ್ಮದೂ ಭಾವನೆ, ಹಕ್ಕು ಚಲಾವಣೆ ಗುಣ ಬಲಿತಿದೆ. ಸತ್ಯ ಹೇಳ್ದೆ ಅಂತಾ ಬೇಜಾರು ಪಟ್ಕೋಬೇಡಿ.

ಹೋದ ತಿಂಗಳು- ನಂ ಗಾಂಧೀರಸ್ತೆ ವರ್ಷಾಂತ್ಯಕ್ಕೆ ಆ ನಮ್ಮ ಹಳೇ ಫ್ರೆಂಡ್ ದೇಶಕ್ಕೆ ಬಂದಿದ್ದ. ನಮಗೂ ಸಿಕ್ದ. “ವ್ಯಾಟ್ ಮ್ಯಾನ್, ನಮ್ಮಪ್ಪಾ ಅದೇನು ಡ್ರೈವ್ ಮಾಡ್ತಾನೆ, ರೈಟ್, ಲೆಫ್ಟ್, ಸೆಂಟರ್ ನೋಡ್ದೆ ಕಾರ್ ಓಡಿಸ್ತಾನೆ ಓಲ್ಡ್ ಮ್ಯಾನ್, ವಯಸ್ಸಾಯ್ತು ಮುದುಕ್ನಿಗೆ, ಬುದ್ಧಿ ಬೇಡಾ, ಅದ್ರೂ ಕ್ರೇಝೀ ಫೆಲೋ ಥರಾ ಡ್ರೈವಿಂಗ್ ಮಾಡ್ತಾನೆ, ಡ್ರೈವ್ ಮಾಡ್ತಾನೇ ಮೊಬೈಲ್‍ನಲ್ಲಿ ಸೆಕ್ರೆಟರಿ ಜೊತೆ ಮಾತಾಡ್ತಾನೆ ಮ್ಯಾಡ್‍ಕ್ಯಾಪ್. ಅಬ್ಸೊಲ್ಯೂಟ್ಲೀ ನೋ ರೆಸ್ಪೆಕ್ಟ್ ಫಾರ್ ಎನಿ ಟ್ರಾಫಿಕ್ ರೂಲ್ಸ್, ಟೆರಿಬಲ್ ಮ್ಯಾನ್’ ಎಂದು ಬೈತಾನೇ ಮಾತು ಮುಂದುವರಿಸ್ದ ಮಹಾರಾಯ! “ಒಂದಲ್ಲಾ ಒಂದಿನ ಯಾರ್ದಾದ್ರೂ ಜೀವ ತೆಗ್ದೇ ತೆಗ್ದು ಬಿಡ್ತಾನೆ ಆಯಪ್ಪಾ. ಬೀ ಕೇರ್‍ಫುಲ್ ಡ್ಯಾಡ್, ಒಳ್ಳೇ ಕಾಲೇಜು ಹುಡುಗ್ರಂಗೆ ಡ್ರೈವ್ ಮಾಡ್ತೀಯಲ್ಲಾ ಅಂತಾ ರೇಗಿದ್ರೇ, ರಿಲ್ಯಾಕ್ಸ್ ಸನ್ನಿ, ಇದು ಇಂಡಿಯಾ ಕಣೋ, ಐ ನೋ ಕಮೀಶನರ್ ಅಂತಾನೆ ಬ್ಲಡೀ ಓಲ್ಡ್ ಮ್ಯಾನ್, ನೀವಾದ್ರೂ ಒಂದ್ಸಲ ಮನೆಗೆ ಬಂದು ಬುದ್ಧಿ ಹೇಳ್ರೋ ಅವ್ನಗೆ. ನಾನಂತೂ ಅವ್ನ ಕಾರೇ ಹತ್ತಲ್ಲ ಕಣ್ರೋ, ಗ್ಯಾರಂಟಿ, ಉಬೇರ್ರಲ್ಲೇ ಒಡಾಡ್ತಿದೀನಪ್ಪಾ; ಕ್ಯಾನ್ ಯು ಬಿಲೀವ್ ಇಟ್” ಎಂದು ಗೋಳಾಡ್ಕೊಂಡ ತರ್ಲೆ.

ಈ ನಡುವೆ ಪ್ರಜೆಗಳ ಡ್ರೈವಿಂಗ್ ಮಜಾನೇ ತೆಗೀಬೇಕೆಂಬ ಉತ್ಸಾಹದಲ್ಲಿ “ಸಸ್ಪೆಂಡ್ ಲೈಸೆನ್ಸ್ ಆಫ್ ಡ್ರೈವರ್ಸ್ ಎಂದು ರಾಜ್ಯಗಳಿಗೆ ಎಚ್ಚರಿಸಿದ್ದಾರೆ ಕೇಂದ್ರ ಸರಕಾರದ ಬಿಗ್ ಬಾಸಸ್ (ಅಂದ್ರೆ, ಸಾರಿಗೆ ಸಚಿವ ಶಿರಿಮಾನ್ ನಿತಿನ್ ಗಡ್ಕೆರಿಯವರು) ಎಂದು ಮೀಡಿಯಾ ರಿಪೋರ್ಟುಗಳೇ ಬಂದಿವೆ. ಅಪಘಾತಗಳನ್ನು ಕಡಿಮೆ ಮಾಡಲು ತಪ್ಪೆಸಗುವ ಡ್ರೈವರುಗಳ ಲೈಸೆನ್ಸನ್ನು 3 ತಿಂಗಳಿಗಾದರೂ ಸಸ್ಪೆಂಡ್ ಮಾಡಿ ಎಂದಿದ್ದಾರೆ ಸೆಂಟರ್‍ನವರು. ಓವರ್ ಸ್ಪೀಡಿಂಗು, ಸಿಗ್ನಲ್ ಜಂಪಿಂಗು, ಒವರ್ಲೋಡಿಂಗ್ (ಸ್ಕೂಟರ್‍ನಲ್ಲಿ ಫುಲ್ ಫ್ಯಾಮಿಲಿ ಹೋಗೋದೂ ಸೇರಿ) ಅಷ್ಟೇ ಅಲ್ಲ; “ಸೆನ್ಸರ್ ಬೇಸ್ಡ್ ಕಂಪ್ಯೂಟರೈಸ್ಡ್ ಡ್ರೈವಿಂಗ್ ಟ್ರಾಕ್ ಬೇಸ್ಡ್ ಇನ್ ಎ ಟೈಮ್ ಬೌಂಡ್ ಮ್ಯಾನರ್ ಇನ್ ಆರ್ಡರ್ ಟು ಎಲಿಮಿನೇಟ್ ಹ್ಯೂಮನ್ ಇಂಟರ್‍ವೆನ್ಶನ್- ವೈಲ್ ಇಶ್ಯೂಯಿಂಗ್ ಪರ್ಮನೆಂಟ್ ಡ್ರೈವಿಂಗ್ ಲೈಸೆನ್ಸ್” ಅಂತಾನೂ ದೇಶದ ಕಲ್ಚರ್ ಗೊತ್ತಿದ್ದೇ ಹೇಳಿದ್ದಾರೆ. ಹಾಗೇನೇ, ಹೈವೇಗಳಲ್ಲಿ ಏನೇನು ಮಿಸ್ಟೇಕ್‍ಗಳಿವೆ ಎಂದು ಕಣ್ಣಲ್ಲಿ ಕಣ್ಣಿಟ್ಟು ನೋಡಿ, ನೇರ್ಪು ಮಾಡಿ ಅಂತಾನೂ ಗುಟುರು ಹಾಕಿದ್ದಾರೆ.

ಟ್ರಾಫಿಕ್ ಅಂದ್ರೆ ಕಾಲ್ದಾರಿಯಲ್ಲಿ ಪಾದಚಾರಿಗಳು, ರಸ್ತೆಯಲ್ಲಿ ವಾಹನ ಚಲಾವಣೆಯೊಂದಿಗೆ ಓಡಾಡುವ ಹಸು,ಕೋಣ, ನಾಯಿಗಳಿತ್ಯಾದಿ ತಾನೆ! ಅದರ ನಿಯಂತ್ರಣಕ್ಕೆ ಫಾರ್ಮಲ್, ಇನ್ಫಾರ್ಮಲ್ ಕಾನೂನುಗಳಿವೆಯಪ್ಪಾ. ವ್ಯವಸ್ಥಿತವಾಗಿ ಸಂಚಾರ ನಡೀಬೇಕು, ಅಪಘಾತ-ಪ್ರಾಣಾಪಾಯಗಳು ಆಗ್ಬಾರದು ಅಂತಾನೆ ಮಾಡಿದ್ದಾರೆ. ರೈಟ್ ಆಫ್ ವೇ, ವ್ಯವಸ್ಥಿತ ಸಂಚಾರ, ಸಂಚಾರ ನಿಯಂತ್ರಣ, ಸ್ಪೀಡ್ ಕಂಟ್ರೋಲ್ ಇವುಗಳೆಲ್ಲಾ ಹಳೆಯದೇ ವಿಚಾರಗಳು.

ಡ್ರೈವ್ ಮಾಡೋವ್ರಿಗೂ ಕಾಮನ್ ಸೆನ್ಸ್ ಇರ್ಬೇಕು- ನಮ್ಗೂ ಗೊತ್ತಿದೆ.

ಸಂಚಾರ ವ್ಯವಸ್ಥಿತವಾಗಿ ಅಪಾಯಗಳಿಲ್ಲದೆ ನಡೀಬೇಕಾದ್ರೆ ಕಂಟ್ರೋಲ್ ಇರ್ಬೇಕು-ನಾವು ಬೇಡಾ ಅಂದಿಲ್ವಲ್ಲಾ!

ಸಂಚಾರ ಹತೋಟಿಯಿಲ್ಲದಿದ್ದರೆ, ಸಂಪೂರ್ಣ ವ್ಯವಸ್ಥೆಯೇ ಕುಸಿದು ಬಿದ್ದೀತು-ಎಂದೆಲ್ಲಾ ನಮ್ಗೆ, ಈ ದೇಶದ ಹೊಣೆಯರಿತ ಪ್ರಜೆಗಳಿಗೆ ಗೊತ್ತಿಲ್ಲವೇನು? ಹೊಸ್ತೇನಿದೆ!

ಆದ್ರೆ, ನಾವು ಕಲಿತ, ಕಲಿಯುತ್ತಿರುವ ಸಂಸ್ಕತಿ ಏನು? – “ಕಾನೂನು ಸಂಚಾರಕ್ಕೆ, ನಮಗೆ ರಾಮ್ ಭರೋಸೆ ಡ್ರೈವಿಂಗ್” ಅಂತ ತಾನೆ!!!

———————-

ಈಶ್ವರ ದೈತೋಟ

1ಕರ್ನಾಟಕದ ಅತಿಹೆಚ್ಚು ದಿನಪತ್ರಿಕೆಗಳನ್ನು ಮುನ್ನಡೆಸಿದ ಹಿರಿಮೆ. 1991ರಿಂದ 2011ರವರೆಗಿನ ಎರಡು ದಶಕಗಳಲ್ಲಿ ಅತ್ಯಂತ ಹೆಚ್ಚು ಆವೃತ್ತಿಗಳು ಮತ್ತು ಪ್ರಸಾರದ ವಿಜಯ ಕರ್ನಾಟಕದ ಫೌಂಡರ್ ಚೀಫ್ ಎಡಿಟರ್. ಮಣಿಪಾಲದ ಉದಯವಾಣಿ ರೆಸಿಡೆಂಟ್ ಎಡಿಟರ್, ಟೈಮ್ಸ್ ಆಫ್ ಇಂಡಿಯಾ (ಕ) ಎಡಿಟರ್, ಕನ್ನಡದ ಸೀನಿಯರ್ ಮೋಸ್ಟ್ ದೈನಿಕ ಸಂಯುಕ್ತ ಕರ್ನಾಟಕದ ಚೀಫ್ ಎಡಿಟರ್ ಹಾಗೂ ನೂತನ ವಾರಪತ್ರಿಕೆ ಚೀಫ್ ಎಡಿಟರ್ ಆಗಿ ಹೊಣೆಹೊತ್ತವರು.

ಮುದ್ರಣ ಮಾಧ್ಯಮ, ರೇಡಿಯೋ, ಟೆಲಿವಿಷನ್ನಿನಲ್ಲಿ ಮೂರೂವರೆ ದಶಕಗಳಿಗೂ ಹೆಚ್ಚು ಅನುಭವ. ಪತ್ರಿಕೋದ್ಯಮ ಶಿಕ್ಷಣ, ಅಭ್ಯುದಯ ಪತ್ರಿಕೋದ್ಯಮ ಮತ್ತು ಮೀಡಿಯಾ ಮ್ಯಾನೇಜ್‌ಮೆಂಟ್‌ನಲ್ಲಿಯೂ ಅಪಾರ ಸಾಧನೆ. ಯುಜಿಸಿ ಮತ್ತು ಯೂನಿಸೆಫ್ ತರಬೇತಿ ಯೋಜನೆಗೆ ಡೆವಲಪ್‌ಮೆಂಟ್‌ ಕನ್ಸಲ್ಟೆಂಟ್ ಎಂದು ಮನ್ನಣೆ.

2015ರಲ್ಲಿ ಪ್ರತಿಷ್ಠಿತ ಟಿಎಸ್ಆರ್ ಪತ್ರಿಕೋದ್ಯಮ ಪ್ರಶಸ್ತಿ, ಮೂಡಬಿದ್ರೆಯ ನುಡಿಸಿರಿ ಪ್ರಶಸ್ತಿ, 2008ರಲ್ಲಿ ಅಭ್ಯುದಯ ಪತ್ರಿಕೋದ್ಯಮ ರಾಜ್ಯ ಪ್ರಶಸ್ತಿ, ಮೈಸೂರಿನ ಕುವೆಂಪು ಶಿಕ್ಷಣ ಸಂಸ್ಥೆಯಿಂದ ರಾಜ್ಯದ ಅತ್ಯುತ್ತಮ ಸಂಪಾದಕ ಪ್ರಶಸ್ತಿ (2006). 2008ರಲ್ಲಿ ರಾಷ್ಟ್ರೀಯ ಝಿ ಟಿವಿ ಚಾನೆಲ್‌ನಿಂದ ಕರ್ನಾಟಕದಲ್ಲಿ ಇಲೆಕ್ಟ್ರಾನಿಕ್ ಮೀಡಿಯಂ ಮತ್ತು ಪತ್ರಿಕೋದ್ಯಮಕ್ಕೆ ಅತಿ ದೊಡ್ಡ ಸೇವೆ ಸಲ್ಲಿಸಿದ ಸಂಪಾದಕ ಮತ್ತು ಅತ್ಯಂತ ಜನಪ್ರಿಯ ಮೀಡಿಯಾ ಪರ್ಸನ್ (ವೀಕ್ಷಕರ ಆಯ್ಕೆ) ಎಂಬೆರಡು ಪ್ರಶಸ್ತಿಗಳು. ವಾಯ್ಸ್ ಆಫ್ ಅಮೇರಿಕಾ ಮತ್ತು ಕೆನೆಡಿಯನ್ ರೇಡಿಯೋಗಳಲ್ಲಿ ಅವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ಹಲವು ಇಂಟರ್‌ನ್ಯಾಷನಲ್ ಜರ್ನಲ್‌ಗಳಿಗೂ ಲೇಖನ ಬರೆದಿದ್ದಾರೆ.

ಅಭ್ಯುದಯ ಪತ್ರಿಕೋದ್ಯಮ ಅವರ ನಿತ್ಯ ಜಪ. ಅಭ್ಯುದಯ ಸಂಬಂಧಿತ ಅನೇಕ ಡಾಕ್ಯುಮೆಂಟರಿಗಳನ್ನು, ರೇಡಿಯೋ ರೂಪಕಗಳನ್ನು ತಯಾರಿಸಿರುವ ಅನುಭವ. ಪತ್ರಿಕೋದ್ಯಮ ಮತ್ತಿತರ ವಿಷಯಗಳ ಬಗ್ಗೆ ಅವರು ಬರೆದಿರುವ, ಅನುವಾದಿಸಿರುವ ಪುಸ್ತಕಗಳ ಸಂಖ್ಯೆ 75ಕ್ಕೂ ಹೆಚ್ಚು.

Share

2 Comments For "ರಾಂ ಭರೋಸೆ ಡ್ರೈವಿಂಗ್!
ಈಶ್ವರ ದೈತೋಟ ಕಾಲಂ
"

 1. Sowmya p Rao
  14th January 2017

  Sir nimma hale nenepugalu ,balyasnehitara vicharagalu ,ultahoddu appange anwayavadaddu vichara tumba chennagide.eegina traffic bagge vichara.
  Bengaluru traffic
  Yuvapeelige bagge vichara chennagide
  .

  Reply
 2. Usha
  14th January 2017

  Hearty congratulations. Interesting narrative.

  Reply

Leave a comment

Your email address will not be published. Required fields are marked *

Recent Posts More

 • 3 days ago No comment

  ಈ ಸಂಜೆಯೊಳಗೆ

    ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ಹಕ್ಕಿಗಳು ತಿರುಗಿ ನೋಡಿವೆ ಬರುವಾಗ ಏನೋ ತಂದಿದ್ದು ಮರೆತು ಬಂದನೋ ಎಂಬಂತೆ ಅಪ್ಪನಿಲ್ಲದ ಮಕ್ಕಳು ಕೂಲಿಗೆ ಹೋದ ತಾಯಿಯ ದಾರಿಯ ಕಣ್ಣು ಮಿಟುಕಿಸದೇ ನೋಡುತಿವೆ ಅರ್ಧದಲೇ ಮರೆತ ...

 • 6 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 1 week ago No comment

  ಹುಲ್ಲಿನ ಕಡ್ಡಿ

    ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

 • 2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 2 weeks ago No comment

  ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

    ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...


Editor's Wall

 • 15 August 2018
  6 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 09 August 2018
  2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 01 August 2018
  3 weeks ago No comment

  ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                      ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

 • 25 July 2018
  4 weeks ago No comment

  ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                      ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

 • 11 May 2018
  3 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...