Share

ಕೋಳಿಕಟ್ಟದ ಸಾಂಸ್ಕೃತಿಕ ಹಿನ್ನೆಲೆ
ಈಶ್ವರ ದೈತೋಟ ಕಾಲಂ

https://i2.wp.com/connectkannada.com/wp-content/uploads/2016/04/IMG-20160412-WA0006.jpg?w=658

ಸಿ ಮನಿ ಸಿಗುತ್ತದೆಂದು ಬೆಟ್ಟಿಂಗ್‍ ಇಲ್ಲವೆ ಜುಗಾರಿ ಭೂತದ ಬಲೆಗೆ ಬಿದ್ದು ಮಕ್ಕಳು ಮುಂದೆ ಬೇಜವಾಬ್ದಾರರಾಗಬಾರದೆಂಬ ಕಳಕಳಿ ಈ ದೇಶದಲ್ಲಿ ಹಿಂದಿನಿಂದಲೂ ಇತ್ತು. ಹಾಗೆಯೇ, ಪ್ರಾಣಿಗಳ ಅನುಕಂಪ ಕೂಡಾ ನಮ್ಮ ಸಂಸ್ಕೃತಿಯ ಭಾಗ.

ಸರಕಾರವೇ ಲಾಟರಿ ಪ್ರಾರಂಭಿಸಿ, ಬೆರಳೆಣಿಕೆಯ ಲಕ್ಷಾಧೀಶರುಗಳನ್ನೂ, ನೂರಾರು ನಿರ್ಗತಿಕ ಕುಟುಂಬಗಳನ್ನೂ ಸೃಷ್ಟಿಸಿ, ಮತ್ತೆ ಜನರೊತ್ತಡಕ್ಕೆ ಮಣಿದು, ನ್ಯಾಯಾಂಗದ ಆದೇಶದಂತೆ ಲಾಟರಿ ಕೈಬಿಟ್ಟಿತು. ಖಾಸಗಿ ಲಾಟರಿಗಳನ್ನೂ ಮುಚ್ಚಿಸಿತು.
ಇಸ್ಪೀಟು ಕ್ಲಬ್‍ಗಳು, ಕುದುರೆಯೋಟ ಕಣಗಳು ಇವತ್ತೂ ಇವೆ.

ಜೂಜು ಇದ್ದಲ್ಲಿ ಕೆಲವರ ದುಡ್ಡುಕಾಸು ಮೇಲೇರುತ್ತದೆ. ಸಾವಿರಾರು ಕುಟುಂಬಗಳು ಆರ್ಥಿಕ ವಿನಾಶಕ್ಕೆ ಹೋಗುತ್ತವೆ, ನೂರಾರು ಮಂದಿ ಮನೋರೋಗಿಗಳಾಗುತ್ತಾರೆ, ದುಶ್ಚಟಗಳಿಗೆ ಬಲಿಬೀಳುತ್ತಾರೆ ಎಂಬುದಕ್ಕೆ ಹೊಸ ತನಿಖೆಯೇನೂ ಬೇಕಾಗಿಲ್ಲ. ಈಗ ಗೋವಾ ಕರಾವಳಿಯಲ್ಲಿ ಫ್ಲೋಟಿಂಗ್ ಕೆಸೀನೋಗಳೇ ಇವೆ. ಕರ್ನಾಟಕ ಕರಾವಳಿಯಲ್ಲಿಯೂ ಟೂರಿಸಂ ಪ್ರಮೋಷನ್‍ಗಾಗಿ ಇಂಥವು ತೇಲಿಕೊಳ್ಳಲಿವೆಯಂತೆ.

ಬ್ಲಾಕ್ ಮನಿ, ಬ್ಲಾಕ್ ಮಾರ್ಕೆಟ್ ಮತ್ತು ಗ್ಯಾಂಬ್ಲಿಂಗ್ ನಿಷೇಧಿಸಬೇಕೆನ್ನುವುದು ಸಮಾಜ ಅಡ್ಡದಾರಿ ಹಿಡಿಯಬಾರದೆಂಬ ಚಿಂತೆ, ಚಿಂತನೆಗಳಿಂದ. ಜನರು ಸೋಮಾರಿಗಳಾಗಿಬಿಡುತ್ತಾರೆ ಎಂಬ ಭಯಾತಂಕಗಳಿಂದ. ಕರ್ನಾಟಕ ವಿಧಾನಸಭೆಯಲ್ಲೊಮ್ಮೆ ಅಂದಿನ ಸೀಯೆಮ್ಮು ಎಸ್ಸೆಂ ಕೃಷ್ಣ ಲಾಟರಿ, ಜೂಜು ನಿಷೇಧ ಆಗ್ರಹಿಸುವವರು ಕ್ರಿಕೆಟ್ಟನ್ನು ನಿಷೇಧಿಸಿರೆಂದು ಯಾಕೆ ಆಗ್ರಹಿಸುವುದಿಲ್ಲ ಎಂದು ಪ್ರಶ್ನಿಸಿದ್ದರು.

ಹಾಗೇ, ಓ.ಸಿ.ಗೆ ಹಣಕಟ್ಟಿ ಬಡವರು ಬೀದಿ ಭಿಕಾರಿಗಳಾಗುತ್ತಿದ್ದಾರೆ, ಅವನ್ನು ನಿಷೇಧಿಸಬೇಕೆಂದು ಸರಕಾರವನ್ನು ಒತ್ತಾಯಿಸಿದ ಭಾಷಣಗಳು ಹಾಗೂ ಸರ್ಕಾರವೇ ಸಿಂಗಲ್ ಡಿಜಿಟ್ ಲಾಟರಿಗಳನ್ನು ಶುರುಮಾಡಿ, ಯಾರೋ ಲೂಟಿಕೋರರಿಗೆ ಹೋಗುವ ಹಣವನ್ನು ಸರಕಾರವೇ ಸಂಗ್ರಹಿಸಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕೆಂದು ಆಗ್ರಹಿಸಿದ ಭಾಷಣಗಳೂ ವಿಧಾನಮಂಡಲದ ಎರಡೂ ಸದನಗಳ ದಾಖಲೆಯಲ್ಲಿದೆ.

21ನೇ ಶತಮಾನ ತೊಡಗಿದಾಗಲೇ ಕ್ರಿಕೆಟ್ಟಿನಲ್ಲಿ “ದುಬಾಯ್‍ದೊಡ್ಡಾಟ” ಉಂಟೆಂದು ಸಂದೇಹ ಬರುತ್ತಲಿತ್ತು.

ಜಗತ್ತಿನ ಮೊದಲ ಸ್ಪೇಕ್ಟೇಟರ್ ಸ್ಪೋರ್ಟ್ಸ್ ಎಂಬ ಹಿನ್ನೆಲೆಯುಳ್ಳ ಕೋಳಿಯಂಕ ಸಿಂಧೂ ಕಣಿವೆ ನಾಗರಿಕತೆ ಕೊಡುಗೆ. ನಮ್ಮೂರಿನಲ್ಲಿ ಕೋಳಿಕಟ್ಟ ಇತ್ತು. ಅದರಲ್ಲಿ ಜುಗಾರಿಯಿದೆ, ಪ್ರಾಣಿ ಹಿಂಸೆಯಿದೆ ಎಂಬ ಕಾರಣಕ್ಕಾಗಿ ನಿಷೇಧಿತ.

ಕ್ರಿಕೆಟ್ಟಿಗಿಂತಲೂ ಹೆಚ್ಚು ವೈಜ್ಞಾನಿಕವಾಗಿ (ಸಾಂಪ್ರದಾಯಿಕವಾಗಿ ಎನ್ನಿ ಬೇಕಾದರೆ) ಕೋಳಿಯಂಕಕ್ಕೆ ಊರಿಗೊಂದು, ಬೀದಿಗೊಂದು ತಂಡಗಳಿರುತ್ತವೆ. ಅಮಿತೋತ್ಸಾಹೀ ಪ್ರೇಕ್ಷಕಗಡಣವಿದೆ. ಕೋಳಿ ಸೋತರೆ ದುಃಖ ಸಹಿಸಲಾರದೆ ಕುಡಿದು ಮಗುಚುವ ಅಭಿಮಾನಿಗಳಿದ್ದಾರೆ. ಕೋಳಿಗಳಿಗಿಂತಲೂ ಉತ್ಸಾಹದಲ್ಲಿ ಭಾಗವಹಿಸುವ ತಜ್ಞರಿದ್ದಾರೆ, ಬಾಜಿಪಟುಗಳು, ತುದಿಗಾಲಲ್ಲಿ ನಿಂತು ನೋಡುವ, ಕುಪ್ಪಳಿಸಿ ಬಿದ್ದಲ್ಲಿಂದ ಮತ್ತೆ ಎದ್ದು ಕುಣಿಯುವ, ಬೊಬ್ಬೆ ಹೊಡೆಯುವ ಕೋಳಿ ಫ್ಯಾನ್ಸ್ ಇದ್ದಾರೆ. ತಮ್ಮ ಕೋಳಿಯೇ ಗೆಲ್ಲಬೇಕೆಂದು ಹರಕೆ ಹಾಕುವವರಿದ್ದಂತೆಯೇ, ಸೋತರೆ ದಾಂಧಲೆ ಎಬ್ಬಿಸುವ ಹಿಂಬಾಲಕರೂ ಇದ್ದಾರೆ.

ಕ್ರಿಕೆಟಿಗರಿಗೆ ಉದ್ದೀಪನ ಮದ್ದು, ಡ್ರಿಂಕ್ಸ್ ಪಾರ್ಟಿಗಳಿರುವಂತೆ, ಕಟ್ಟದ ಕೋಳಿಗಳಿಗೆ ಸಾರಾಯಿ ಕುಡಿಸುವ ಕ್ರಮವಿದೆ. ಬೆಟ್ಟಿಂಗ್‍ ಇದೆ. ಮೊದಲೆಲ್ಲಾ ಸಾಚಾ ಹೋರಾಟ ನಡೆಯುತ್ತಿದ್ದ ಕೋಳಿಯಂಕದಲ್ಲಿಯೂ ಬಾಳಿಗೆ ವಿಷ ಚಿಮುಕಿಸಿ ಬಿಡುವ ಚಾಣಾಕ್ಷರಿದ್ದಾರೆ. ಕ್ರಿಕೆಟ್ ಬಾಲಿಗೆ ವ್ಯಾಸಲೀನ್ ತಗಲಿಸಿ ವಿರೂಪಗೊಳಿಸುವುದಿಲ್ಲವೇ, ಪಿಚ್‍ ಕೆದಕಿಬಿಡುವುದಿಲ್ಲವೇ!

ಕುದುರೆ ರೇಸ್, ಕ್ರಿಕೆಟಿನಷ್ಟೇ ಶಾಸ್ತ್ರೀಯ ಸ್ಪೆಕ್ಯುಲೇಶನ್ ಕೋಳಿಯಂಕದಲ್ಲೂ ಇದೆ. ಕೋಳಿ ಲಕ್ಷಣಗಳನ್ನೊಳಗೊಂಡ ಮುದ್ರಿತ ಕುಕ್ಕುಟ ಪಂಚಾಂಗಗಳೇ ಇವೆ. ಗಾಯಗೊಂಡ ಕೋಳಿಗಳನ್ನು ಉಪಚರಿಸಲು ಕೋಳಿ ವೈದ್ಯರುಗಳಿದ್ದಾರೆ. ಅವರ ಕಿಟ್‍ನಲ್ಲಿ ಎನರ್ಜಿ ಡ್ರಿಂಕ್‍ ಗಂಗಸರ ಬಾಟಲ್ ಸಿದ್ಧ. ಕ್ರಿಕೆಟ್ ಅಭಿಮಾನಿಗಳದೇ ಶೈಲಿಯಲ್ಲಿ ಗೆದ್ದ ಕೋಳಿಗಳ ಬೆಂಬಲಿಗರು ಸಂಭ್ರಮದಲ್ಲಿ, ಸೋತ ಕೋಳಿಗಳ ಹಿಂಬಾಲಕರುಗಳು ಬೇಜಾರಿನಲ್ಲಿ ಪಾರ್ಟಿ ಮಾಡುತ್ತಾರೆ.

ಹಾಂ, ಕ್ರಿಕೆಟಿಗೂ ಕಾಕ್‍ಫೈಟಿಗೂ ಹೇಳಲೇಬೇಕಾದ ವ್ಯತ್ಯಾಸವಿದೆ.

ವರ್ಷಾವಧಿ ಜಾತ್ರೆ, ಭೂತ ನೇಮಗಳ ಸಂದರ್ಭಗಳಲ್ಲಿ ಜಾನಪದ ಕೋಳಿಯಂಕ ನಡೆಯುತ್ತಿದ್ದುದು ಊರಾಚೆ ಗೋಳಿಮರದಡಿಯಲ್ಲಿ. ಆಸಕ್ತರಿಗೆ ಬಿಟ್ಟು ಇನ್ನಾರಿಗೂ ತೊಂದರೆಯಿಲ್ಲ, ಸಮಯ ಪೋಲಾಗುತ್ತಿರಲಿಲ್ಲ. ಟ್ರಾಫಿಕ್‍ ಜ್ಯಾಮ್‍ ಕಾಟವಿರಲಿಲ್ಲ. ಟಿಕೆಟ್ಟಿರಲಿಲ್ಲ, ಕಾಳಸಂತೆಯಿಲ್ಲ. ಬ್ಲಾಕ್ ಮನಿ ಸೃಷ್ಟಿಯಾಗುತ್ತಿರಲಿಲ್ಲ, ಬೆಟ್ಟಿಂಗ್ ಹಣ ದೇಶದಾಚೆ ಹೋಗುವುದಿಲ್ಲ- ಎಂಬ ಗ್ಯಾರಂಟಿಯಿತ್ತು.

ಕ್ರಿಕೆಟ್‍ನಂತೆ ವರ್ಷವಿಡೀ ಕಾಡುತ್ತಿರಲಿಲ್ಲ, ಯಾರಿಗೂ ಕೆಲಸ ಮಾಡುವುದಕ್ಕೆ ಅಡ್ಡಿಯಾಗುತ್ತಿರಲಿಲ್ಲ, ಸಿನಿಮಾ ಮಂದಿರಗಳಿಗೆ ಪ್ರೇಕ್ಷಕರ ಕೊರತೆ ಸೃಷ್ಟಿಸುತ್ತಿರಲಿಲ್ಲ. ಸರ್ಕಾರಿ ಕಛೇರಿಗಳು- ಕಾಲೇಜುಗಳ ತರಗತಿಗಳು ಖಾಲಿಖಾಲಿ ಆಗುತ್ತಿರಲಿಲ್ಲ. ಆಟ ಇಷ್ಟವಿಲ್ಲದವರನ್ನೂ ಕಾಡಿ, ಪೀಡಿಸುತ್ತಿರಲಿಲ್ಲ. ದೇಶದ ಆರ್ಥಿಕತೆ ಲಗಾಡಿ ಹೋಗುವಂತೆ ಮಾಡುತ್ತಿರಲಿಲ್ಲ.

ಬಾಯಿಚಪಲಕ್ಕೆ ಪ್ರಾಶಸ್ತ್ಯ ಕೊಡುವ ಮೋಡರ್ನ್ ಕುಸೀನ್ ಭಾಗವಾಗಿರುವಂತಹ ಜೀವಂತ ಮೀನು, ಏಡಿ, ಇತರ ಪ್ರಾಣಿಗಳನ್ನು ಕುದಿಯುವ ಬಾಣಲೆಗಳಲ್ಲಿ ಫ್ರೈ ಮಾಡಿ ಏದುಸಿರು ಬಿಡುತ್ತಿರುವಾಗಲೇ ಡೈನಿಂಗ್‍ ಟೇಬಲ್‍ಗಳಿಗೆ ತಂದಿಡುವ ಸಂಸ್ಕೃತಿಯ ಭೀಕರ ಪ್ರಾಣಿಹಿಂಸಾಚಾರವೂ ಅದರಲ್ಲಿರಲಿಲ್ಲ. ಕಟ್ಟದ ಕೋಳಿಗಳೇ ಬೇರೆ ಗುಂಪಿನವು, ಅವನ್ನು ಚೆನ್ನಾಗಿ ಸಾಕಿ ಅಂಕಕ್ಕಿಳಿಸಿ ಸೋತು ಸತ್ತರೆ ತಿಂದು ‘ಪಾಪ ಪರಿಹಾರ’ ಆಗುತ್ತಿತ್ತು.

ಕ್ರಿಕೆಟ್ಟಿನ ಬ್ಲಾಕ್ ಮಾರ್ಕೆಟ್‍ ದಂಧೆ ಟಿಕೆಟ್ ಕೊಳ್ಳಲು ಕ್ಯೂ ನಿಂತವರ ಮೇಲೆ ಲಾಠಿಚಾರ್ಜು, ರಸ್ತೆಯಲ್ಲೆಲ್ಲಾ ಟ್ರಾಫಿಕ್ ಜ್ಯಾಮ್‍ಗೊಳಗಾದ ಪಾದಚಾರಿಗಳ, ವಾಹನಯಾನಿಗಳ ಪರಿಪಾಡಲು ಹಿಂಸಾಚಾರ ಅಲ್ಲವೇನು? ಇತ್ತೀಚೆಗೆ ಬ್ಯಾಟ್, ಬಾಲ್ ಹೊಡೆದು, ಫೀಲ್ಡರ್ಸ್ ಪರಸ್ಪರ ಢಿಕ್ಕಿಯಾಗಿ ಆಟಗಾರರೇ, ಕೆಲವೊಮ್ಮೆ ದುಃಖಪೀಡಿತ ಅಭಿಮಾನಿಗಳೂ ಜೀವತೆರುವುದು ಕಾಣುತ್ತಿಲ್ಲವೇನು?

ಜನಪರ ಕಳಕಳಿಯ ಬೆಟ್ಟಿಂಗ್, ಚೀಟಿಂಗ್‍ ಇಲ್ಲದ ಜೆಂಟ್ಲಮೆನ್‍ ಗೇಮ್‍ ಆಗಿಯೇ ಕಿರಿಕೆಟ್‍ ಚಂದಗಾಣಲಿ. ಸಾಂಸ್ಕೃತಿಕ ಹಿನ್ನೆಲೆಯುಳ್ಳ ಜಾನಪದ ಅಂಕಗಳೂ ನಡೆಯಲಿ.

———————-

ಈಶ್ವರ ದೈತೋಟ

1ಕರ್ನಾಟಕದ ಅತಿಹೆಚ್ಚು ದಿನಪತ್ರಿಕೆಗಳನ್ನು ಮುನ್ನಡೆಸಿದ ಹಿರಿಮೆ. 1991ರಿಂದ 2011ರವರೆಗಿನ ಎರಡು ದಶಕಗಳಲ್ಲಿ ಅತ್ಯಂತ ಹೆಚ್ಚು ಆವೃತ್ತಿಗಳು ಮತ್ತು ಪ್ರಸಾರದ ವಿಜಯ ಕರ್ನಾಟಕದ ಫೌಂಡರ್ ಚೀಫ್ ಎಡಿಟರ್. ಮಣಿಪಾಲದ ಉದಯವಾಣಿ ರೆಸಿಡೆಂಟ್ ಎಡಿಟರ್, ಟೈಮ್ಸ್ ಆಫ್ ಇಂಡಿಯಾ (ಕ) ಎಡಿಟರ್, ಕನ್ನಡದ ಸೀನಿಯರ್ ಮೋಸ್ಟ್ ದೈನಿಕ ಸಂಯುಕ್ತ ಕರ್ನಾಟಕದ ಚೀಫ್ ಎಡಿಟರ್ ಹಾಗೂ ನೂತನ ವಾರಪತ್ರಿಕೆ ಚೀಫ್ ಎಡಿಟರ್ ಆಗಿ ಹೊಣೆಹೊತ್ತವರು.

ಮುದ್ರಣ ಮಾಧ್ಯಮ, ರೇಡಿಯೋ, ಟೆಲಿವಿಷನ್ನಿನಲ್ಲಿ ಮೂರೂವರೆ ದಶಕಗಳಿಗೂ ಹೆಚ್ಚು ಅನುಭವ. ಪತ್ರಿಕೋದ್ಯಮ ಶಿಕ್ಷಣ, ಅಭ್ಯುದಯ ಪತ್ರಿಕೋದ್ಯಮ ಮತ್ತು ಮೀಡಿಯಾ ಮ್ಯಾನೇಜ್‌ಮೆಂಟ್‌ನಲ್ಲಿಯೂ ಅಪಾರ ಸಾಧನೆ. ಯುಜಿಸಿ ಮತ್ತು ಯೂನಿಸೆಫ್ ತರಬೇತಿ ಯೋಜನೆಗೆ ಡೆವಲಪ್‌ಮೆಂಟ್‌ ಕನ್ಸಲ್ಟೆಂಟ್ ಎಂದು ಮನ್ನಣೆ.

2015ರಲ್ಲಿ ಪ್ರತಿಷ್ಠಿತ ಟಿಎಸ್ಆರ್ ಪತ್ರಿಕೋದ್ಯಮ ಪ್ರಶಸ್ತಿ, ಮೂಡಬಿದ್ರೆಯ ನುಡಿಸಿರಿ ಪ್ರಶಸ್ತಿ, 2008ರಲ್ಲಿ ಅಭ್ಯುದಯ ಪತ್ರಿಕೋದ್ಯಮ ರಾಜ್ಯ ಪ್ರಶಸ್ತಿ, ಮೈಸೂರಿನ ಕುವೆಂಪು ಶಿಕ್ಷಣ ಸಂಸ್ಥೆಯಿಂದ ರಾಜ್ಯದ ಅತ್ಯುತ್ತಮ ಸಂಪಾದಕ ಪ್ರಶಸ್ತಿ (2006). 2008ರಲ್ಲಿ ರಾಷ್ಟ್ರೀಯ ಝಿ ಟಿವಿ ಚಾನೆಲ್‌ನಿಂದ ಕರ್ನಾಟಕದಲ್ಲಿ ಇಲೆಕ್ಟ್ರಾನಿಕ್ ಮೀಡಿಯಂ ಮತ್ತು ಪತ್ರಿಕೋದ್ಯಮಕ್ಕೆ ಅತಿ ದೊಡ್ಡ ಸೇವೆ ಸಲ್ಲಿಸಿದ ಸಂಪಾದಕ ಮತ್ತು ಅತ್ಯಂತ ಜನಪ್ರಿಯ ಮೀಡಿಯಾ ಪರ್ಸನ್ (ವೀಕ್ಷಕರ ಆಯ್ಕೆ) ಎಂಬೆರಡು ಪ್ರಶಸ್ತಿಗಳು. ವಾಯ್ಸ್ ಆಫ್ ಅಮೇರಿಕಾ ಮತ್ತು ಕೆನೆಡಿಯನ್ ರೇಡಿಯೋಗಳಲ್ಲಿ ಅವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ಹಲವು ಇಂಟರ್‌ನ್ಯಾಷನಲ್ ಜರ್ನಲ್‌ಗಳಿಗೂ ಲೇಖನ ಬರೆದಿದ್ದಾರೆ.

ಅಭ್ಯುದಯ ಪತ್ರಿಕೋದ್ಯಮ ಅವರ ನಿತ್ಯ ಜಪ. ಅಭ್ಯುದಯ ಸಂಬಂಧಿತ ಅನೇಕ ಡಾಕ್ಯುಮೆಂಟರಿಗಳನ್ನು, ರೇಡಿಯೋ ರೂಪಕಗಳನ್ನು ತಯಾರಿಸಿರುವ ಅನುಭವ. ಪತ್ರಿಕೋದ್ಯಮ ಮತ್ತಿತರ ವಿಷಯಗಳ ಬಗ್ಗೆ ಅವರು ಬರೆದಿರುವ, ಅನುವಾದಿಸಿರುವ ಪುಸ್ತಕಗಳ ಸಂಖ್ಯೆ 75ಕ್ಕೂ ಹೆಚ್ಚು.

Share

Leave a comment

Your email address will not be published. Required fields are marked *

Recent Posts More

 • 3 days ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...

 • 4 days ago No comment

  ಯಾವುದು ಈ ಧಾವಂತದ ದಿಕ್ಕು?

    ನ್ಯಾಯದ ಬಾಗಿಲಲ್ಲಿ ನ್ಯಾಯವಾಗಿ ಹೋಗುವವರಿಗೆ ಮಾತ್ರ ಪ್ರವೇಶ ಇಲ್ಲ, ಆದರೆ ನ್ಯಾಯವಲ್ಲದ, ಅದರ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದವರಿಗೆ ಮಾತ್ರ ಹಾರ ತುರಾಯಿಗಳೊಂದಿಗೆ ಭರ್ಜರಿ ಆಹ್ವಾನ.       रिमझिम गिरे सावन, सुलग सुलग जाये मन भीगे आज इस मौसम में लगी कैसी ये अगन ಏನೋ ಒಂದು ಜ್ವಾಲೆ, ಏನೋ ಒಂದು ಉರಿ, ಏನೋ ಒಂದು ಚಡಪಡಿಕೆ, ಒಂಥರಾ ಬೂದಿ ...

 • 6 days ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 1 week ago No comment

  ಕೈಯ ಕನ್ನಡಿ ಹಿಡಿದು…

        ಕವಿಸಾಲು       ಕಾಲವೊಂದಿತ್ತು… ಕೈಯ ಕನ್ನಡಿ ಹಿಡಿದು ಕುರುಳ ತಿದ್ದುವ ನೀರೆ ನಾನಾಗ.. ದಶಕಗಳ ಕಾಲ ಸಂದಿದೆ… ಈಗ, ಆ ಕನ್ನಡಿಯೂ ಇಲ್ಲ… ಆ ಚೆಲುವಿನ ಮೋಡಿಯೂ ಇಲ್ಲ.. ನೆರಿಗೆ ತುಂಬಿದ ಕೈ.. ನರೆಗೂದಲು ತುಂಬಿದ ಬೆಳ್ಳಿಬುಟ್ಟಿ ತಲೆ.. ಆಸರೆ ಬಯಸುವ ದೇಹ… ಪ್ರೀತಿಗಾಗಿ ಕಾತರಿಸುವ ಕಂಗಳು… ನಗುವ ಹುಡುಕಿ ಬಿರಿಯಲೆಳಸುವ ಬೊಚ್ಚು ಬಾಯಿ‌.. ‌ಹೃದಯದಾಳದಿಂದ ಬಂದರೂ ನಾಲಿಗೆಯಡಿಯಲ್ಲಿ ಹೇಳಬಯಸುವ ನುಡಿಗಳು ...

 • 1 week ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...


Editor's Wall

 • 15 February 2018
  6 days ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  1 week ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  1 week ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...

 • 11 February 2018
  1 week ago No comment

  ನಿಮಗಿಂತ ಹೆಚ್ಚು ನಿರ್ಜೀವ

          | ಕಮಲಾದಾಸ್ ಕಡಲು       ಇಂದಿರಾಗಾಂಧಿ ಬಿಟ್ಟರೆ… (Next to Indira Gandhi) ಕಮಲಾದಾಸ್ ಕವಿತೆಯ ಅನುವಾದ       ಇಂದಿರಾಗಾಂಧಿಯನ್ನು ಬಿಟ್ಟರೆ, ನಾನು ಅತಿ ಹೆಚ್ಚು ಹೆದರಿದ್ದು ನನ್ನ ಅಪ್ಪನಿಗೆ ಮಾತ್ರ ನಾನು ಐದು ವರ್ಷದವಳಿರುವಾಗ ಅವರೇ ನನಗೆ ಹೇಳಿದ್ದು ಕಪ್ಪು ಮಕ್ಕಳು ಬಿಳಿಬಣ್ಣದ ಬಟ್ಟೆಗಳನ್ನು ಮಾತ್ರ ತೊಡಬೇಕೆಂದು. ಬೆಳೆಯುವ ದಿನಗಳಲ್ಲಿ ಕಳೆದುಹೋದಂತಿರುತ್ತಿದ್ದ, ಬಡಕಲಾಗಿದ್ದ, ಹಲ್ಲಿಗೆ ಕ್ಲಿಪ್ ...

 • 08 February 2018
  2 weeks ago No comment

  ಇದು ಕ್ರಾಂತಿ ಪರ್ವ

                    ಪ್ಯಾಸಿಸ್ಟ್ ನೀತಿಯೆಡೆಗೆ ಆಡಳಿತ ವೈಖರಿ ಹೊರಳುತ್ತಿದೆ ಎನ್ನುವಾಗ ಕ್ರಾಂತಿಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಎನ್ನುವುದನ್ನು ಮನದಟ್ಟು, ಮಾರ್ಗದರ್ಶನ ಮಾಡಿಸಬೇಕಾದವರೇ ಹೋರಾಟಕ್ಕೆ ತಣ್ಣೀರು ಹೊಯ್ಯೊತ್ತಿರಬಹುದೇ ಎನ್ನುವ ಗುಮಾನಿ ಕಾಡದಿರುವುದಿಲ್ಲ.   ಮೊನ್ನೆ ಮನ್ಸೋರೆ (ಮಂಜುನಾಥ ಸೋಮಕೇಶವ ರೆಡ್ಡಿ) ನಿರ್ದೇಶನದ ‘ಹರಿವು’ ಚಿತ್ರ ನೋಡುವಾಗ ಅದೆಷ್ಟು ಸಲ ಕನ್ನಡಕ ತೆಗೆದು ಕಣ್ಣೊರೆಸಿಕೊಂಡೆನೋ! ಆಶಾ ಬೆನಕಪ್ಪ ಅವರು ಪ್ರಜಾವಾಣಿಯಲ್ಲಿ ಬರೆದ ...