Share

ಮನಸ್ಸಿನಲ್ಲಿ ಹಲವು ‘ಪ್ರಶ್ನೆ’ ಹುಟ್ಟು ಹಾಕಿದ ‘ಉತ್ತರಕಾಂಡ’
ಅಶ್ವತ್ಥ ಕೋಡಗದ್ದೆ

ಎಸ್ ಎಲ್ ಭೈರಪ್ಪನವರ ಹೊಸ ಕಾದಂಬರಿ ‘ಉತ್ತರಕಾಂಡ’ ಹಲವು ಬಗೆಯ ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಸ್ತ್ರೀ ವಿರೋಧಿ ಎಂಬ ಆರೋಪದಿಂದ ಮುಕ್ತರಾಗಲು ಭೈರಪ್ಪ ಇದನ್ನು ಬರೆದರೆ ಎಂಬಲ್ಲಿಂದ ಶುರುವಾಗಿ, ಸೀತೆಯ ದನಿಯಾಗಿರುವಂತೆ ತೋರಿಕೆಗೆ ಕಂಡರೂ ಆಳದಲ್ಲಿ ರಾಮನನ್ನೇ ಇನ್ನಷ್ಟು ಬೆಳಗುವ ಪ್ರಯತ್ನವೇ ಎಂಬಲ್ಲಿಯವರೆಗೆ ಪ್ರಶ್ನೆಗಳೆದ್ದಿವೆ. ಇಂಥ ಹೊತ್ತಲ್ಲಿ, ಯಕ್ಷಗಾನ, ತಾಳಮದ್ದಲೆಯ ಪ್ರಭಾವಗಳಲ್ಲಿ ಬೆಳೆದ ಮನಸ್ಸೊಂದು ಉತ್ತರಕಾಂಡವನ್ನು ನೋಡುತ್ತಿರುವ ಬಗೆ ಹೇಗೆ? ಆ ಮನಸ್ಸೊಳಗಿನ ಪಾತ್ರಗಳಿಗೂ ಉತ್ತರಕಾಂಡದ ಪಾತ್ರಗಳಿಗೂ ನಡುವೆ ಕಾಣುವ ಅಂತರವೇನು? ಒಂದು ಚರ್ಚೆಯೆತ್ತಿದ್ದಾರೆ, ಪತ್ರಕರ್ತ ಅಶ್ವತ್ಥ ಕೋಡಗದ್ದೆ.

——————

ನಾನು ರಾಮಾಯಣ, ಮಹಾಭಾರತವನ್ನು ತುಂಬಾ ಆಳವಾಗಿಯೇನೂ ಓದಿದವನಲ್ಲ.  ಅಲ್ಪ ಸ್ವಲ್ಪ ಕಥೆಯನ್ನು ಸಣ್ಣಪುಟ್ಟ ಪುಸ್ತಕಗಳನ್ನು ಓದಿ ತಿಳಿದುಕೊಂಡೆ. ಆದರೆ ಅದರ ಬಗ್ಗೆ ಹೆಚ್ಚು ಮಾಹಿತಿ ಕೊಟ್ಟಿದ್ದು ನಮ್ಮ ಭಾಗದ ಯಕ್ಷಗಾನ, ತಾಳಮದ್ದಲೆಗಳು. ಕೆರೆಮನೆ ವೆಂಕಟಾಚಲ ಭಟ್ಟರ ಶೂರ್ಪನಖಿ, ಮೇಲುಕೋಟೆ ಉಮಾಕಾಂತರ ಭಟ್ಟರ ರಾವಣ, ಶಂಭು ಹೆಗಡೆಯವರ ರಾಮ, ಕುಂಬ್ಳೆ ಸುಂದರ್​ರಾವ್ ಅವರ ಲಕ್ಷ್ಮಣನ ಮಾತುಗಳನ್ನು ಕೇಳಿಯೇ ಕತೆಗಳನ್ನು ತಿಳಿದುಕೊಂಡಿದ್ದು ಹೆಚ್ಚು. ಪಾತ್ರಗಳನ್ನು ನೋಡಲು ಸಾಧ್ಯವಾಗಿದ್ದು ಹೀಗೆಯೇ. ಎಷ್ಟೋ ವರ್ಷಗಳವರೆಗೆ ಪೌರಾಣಿಕ ಪಾತ್ರದ ಹೆಸರು ಬಂದರೆ ನನ್ನ ಮನಸ್ಸಿನಲ್ಲಿ ಮೂಡುತ್ತಿದ್ದುದು ನಾನು ನೋಡಿದ ಅಥವಾ ಕೇಳಿದ ತಾಳಮದ್ದಲೆಯ ಈ ಪಾತ್ರಧಾರಿಗಳೇ.

ಆದರೆ ನಿನ್ನೆ ಅಷ್ಟೇ ಎಸ್ ಎಲ್ ಭೈರಪ್ಪನವರ ಉತ್ತರಕಾಂಡ ಓದಿ ಮುಗಿಸಿದೆ. ಓದಿ ಮುಗಿದು ಪುಸ್ತಕವನ್ನು ಕೆಳಕ್ಕಿಡುತ್ತಿದ್ದಂತೆ ಯಾಕೋ ಮನಸ್ಸಲ್ಲಿ ಮೂಡಿದ್ದು ಬೇಸರವಾ..? ಅಸಮಾಧಾನವಾ..? ಏನನ್ನೋ ಕಳೆದುಕೊಂಡ ಭಾವನೆಯಾ..? ಹೊಸದನ್ನು ಗಳಿಸಿದ ಖುಷಿಯಾ..? ಒಟ್ಟಿನಲ್ಲಿ ಗೊಂದಲದ ಗೂಡು..

ಹಾಗಂತ ನಾನು ಎಸ್​ ಎಲ್ ಭೈರಪ್ಪನವರನ್ನು ವಿಮರ್ಶೆ ಮಾಡುತ್ತಿಲ್ಲ. ಸರಿಯಿಲ್ಲ ಎನ್ನುತ್ತಲೂ ಇಲ್ಲ. ಅಷ್ಟು ದೊಡ್ಡ ಮನುಷ್ಯನೂ ನಾನಲ್ಲ. ತಿಳುವಳಿಕೆಯೂ ಇಲ್ಲ. ಆದರೆ ನನ್ನ ಮನಸ್ಸಿನಲ್ಲಿದ್ದ ಪಾತ್ರ ಹೇಗಿತ್ತು..? ಉತ್ತರಕಾಂಡ ಓದಿದ ನಂತರ ನನ್ನ ಮನಸ್ಸಿನಲ್ಲಿ ಮೂಡಿದ್ದು ಹೇಗೆ ಅನ್ನೋದನ್ನು ಅಕ್ಷರ ರೂಪಕ್ಕೆ ಇಳಿಸುವ ಸಣ್ಣ ಪ್ರಯತ್ನ ಮಾಡಿದ್ದೇನೆ ಅಷ್ಟೆ.

ಹೌದು ರಾಮನೆಂದರೆ ಮರ್ಯಾದಾ ಪುರುಷೋತ್ತಮ. ರಾವಣನೆಂದರೆ ದಶಕಂಠ, ಲಕ್ಷ್ಮಣನೆಂದರೆ ಅಣ್ಣನಿಗೆ ವಿಧೇಯ, ಹನುಮಂತನೆಂದರೆ ಅಸಮ ಸಾಹಸಿ, ಸೀತೆಯೆಂದರೆ ಪತಿವ್ರತಾ ಶಿರೋಮಣಿ, ಲವ-ಕುಶರೆಂದರೆ ಚಿಕ್ಕ ವಯಸ್ಸಿನಲ್ಲೇ ಸಾಹಸ ಮೆರೆದವರು -ಹೀಗೆ ಬಗೆಬಗೆ ಚಿತ್ರಣವೇ ಮನಸ್ಸಿನಲ್ಲಿ ಉಳಿದಿತ್ತು. ಆದರೆ ಉತ್ತರಖಾಂಡ ಓದಿದ ನಂತರ ನನ್ನ ಮನಸ್ಸು ದಂಡಕಾರಣ್ಯ ಹೊಕ್ಕಂತಾಗಿದೆ.

ನಾನು ಚಿಕ್ಕಂದಿನಿಂದ ಕಂಡ ರಾಮ ಮರ್ಯಾದಾ ಪುರುಷೋತ್ತಮ. ಯಾರು ಯಾವ ಪ್ರಶ್ನೆ ಕೇಳಿದರೂ ತಟ್ಟನೆ ಉತ್ತರ ಹೇಳುವವನು. ಧಾರ್ಮಿಕ ನೆಲೆಗಟ್ಟಿನಲ್ಲಿ ನನ್ನ ರಾಮನನ್ನು ಪ್ರಶ್ನಿಸುವವರು ಯಾರಿದ್ದಾರೆ? ಎಂತಹ ಧರ್ಮ ಜಿಜ್ಞಾಸೆಯನ್ನಾದರೂ ಕ್ಷಣಮಾತ್ರದಲ್ಲಿ ಪರಿಹರಿಸುವಂತವನು. ಜೊತೆಗೆ ಸಾಹಸಕ್ಕೆಣೆ ಉಂಟೆ..?

ಆದರೆ ಉತ್ತರಕಾಂಡದ ರಾಮ ಮರ್ಯಾದಾ ಪುರುಷೋತ್ತಮನಲ್ಲ. ಒಂದರ್ಥದಲ್ಲಿ ನಮ್ಮ, ನಿಮ್ಮ ಹಾಗೆ ಸಾಮಾನ್ಯ ಮನುಷ್ಯ. ರಾಮ ವಾಲಿಯನ್ನ ಕೊಂದ ನಂತರ ಪತ್ನಿ ತಾರೆ ಕೇಳುವ ಪ್ರಶ್ನೆಗೆ ರಾಮನ ಬಳಿ ಉತ್ತರವಿಲ್ಲ. ಯಾವುದೇ ಉತ್ತರವನ್ನು ನೀಡದ ಸುಮ್ಮನೇ ನಿಲ್ಲುತ್ತಾನೆ. ರಾವಣನನ್ನು ಕೊಂದ ನಂತರ ನೀನನ್ನು ಸ್ವತಂತ್ರಗೊಳಿಸಿದ್ದೇನೆ ಎಲ್ಲಿಗಾದರೂ ಹೋಗಬಹುದು ಎಂದಾಗ ರಾಮನನ್ನು ಸೀತೆ ಕೇಳುವ ಪ್ರಶ್ನೆಗಳಿಗೆ ಎಲ್ಲಿದೆ ಉತ್ತರ? ಕೊನೆಯಲ್ಲಿ ಧರ್ಮಸಭೆಯಲ್ಲಿ ಸೀತೆ ರೋಷದಿಂದ ಕೇಳುವ ಒಂದೊಂದು ಪ್ರಶ್ನೆಗಳೂ ಪ್ರಶ್ನೆಗಳಾಗಿಯೇ ಉಳಿಯುತ್ತವೆ.

ಇನ್ನು ದೇಹಾಂತ ಶಿಕ್ಷೆಯನ್ನು ಅನುಭವಿಸಿ ರಾಮನನ್ನು ತೊರೆಯುವ ಉದಾತ್ತ ಪಾತ್ರವಾದವನು ನನ್ನ ಮನಸ್ಸಿನಲ್ಲಿದ್ದ ಲಕ್ಷ್ಮಣ. ವನವಾಸದಲ್ಲಿದ್ದಷ್ಟು ದಿನವೂ ನಿದ್ರೆ ಮಾಡದೇ ವ್ರತದಲ್ಲಿದ್ದವನು. ಆದರೆ ಉತ್ತರಕಾಂಡದ ಲಕ್ಷ್ಮಣ ಕೊನೆಯಲ್ಲಿ ಉಳಿಯುವುದು ಕೃಷಿಕನಾಗಿ. ಲವ ಕುಶರು ಚಿಕ್ಕ ವಯಸ್ಸಿನಲ್ಲಿ ಚಿಕ್ಕಪ್ಪಂದಿರನ್ನೇ ಸೋಲಿಸಿದರು ಅನ್ನೋ ಕತೆಯನ್ನು ಓದಿದ ನಾನು ಇಲ್ಲಿ ಮಾತಲ್ಲಷ್ಟೇ ಸೀಮಿತರಾದರು ಅನ್ನೋದನ್ನು ನೋಡಿದೆ.

ನನಗೆ ರಾಮಾಯಣದಲ್ಲಿ ಎಲ್ಲಕ್ಕಿಂತ ಹೆಚ್ಚು ಇಷ್ಟವಾಗೋದು ಹನುಮಂತನ ಪಾತ್ರ. ನನ್ನ ಹನುಮಂತ ಸಮುದ್ರೋಲ್ಲಂಘನ ಮಾಡಿದಂದಿನಿಂದ ಹಿಡಿದು, ಲಂಕಾದಹನ, ಸಂಜೀವಿನ ಪರ್ವತ ಹೊತ್ತು ತಂದದ್ದು, ತನ್ನ ಎದೆಯನ್ನೇ ಬಗೆದು ತೋರಿಸಿದ ಭಕ್ತ ಶಿರೋಮಣಿ.  ಹೀಗೆ ಒಂದೇ ಎರಡೇ. ಜೊತೆಗೆ ಈ ಎಲ್ಲಾ ಕಥೆಗೆ ಮೂರ್ತ ರೂಪ ಕೊಟ್ಟಿದ್ದು ದೂರದರ್ಶನದಲ್ಲಿ ಬಂದ ರಮಾನಂದ ಸಾಗರ್ ಅವರ ರಾಮಾಯಣ ಧಾರವಾಹಿ. ಅಲ್ಲದೆ ಯಕ್ಷಗಾನದಲ್ಲಿನ ಚಿಟ್ಟಾಣಿ, ಕೊಂಡದಕುಳಿ, ಯಾಜಿಯಂತವರ ಪಾತ್ರಗಳು- ನೆಬ್ಬೂರು, ಕೊಳಗಿಯಂಥ ಭಾಗವತರ ಪದ್ಯಗಳು. ಆದರೆ ಉತ್ತರಕಾಂಡದ ಹನುಮಂತ ಸಮುದ್ರದ ನಡುವಿನಲ್ಲಿ ಇರುವ ಬಂಡೆಯನ್ನು ಹಾರುವ ಸಾಮಾನ್ಯ ಕಪಿ ಅಷ್ಟೆ. ಜೊತೆಗೆ 50 ವರ್ಷ ದಾಟಿದ ಮುದಿ ಮಂಗ. ಒಂದು ಹಂತದಲ್ಲಿ ಸೀತೆಯಿಂದಲೇ ನಮಸ್ಕಾರ ಪಡೆದವನು.

ಇಲ್ಲಿ ಸೀತೆ ಒಂದರ್ಥದಲ್ಲಿ ಬಂಡಾಯ ನಾಯಕಿಯಾ..? ವ್ಯವಸ್ಥೆಯ ವಿರುದ್ಧ ಸಿಡಿದೆದ್ದ ಮಹಿಳೆಯಾ..? ಗಂಡನಿಗೆ ಸರಿಯಾಗಿ ಎದುರಾಡಲು ಆಗದೇ ತೊಳಲಾಟದಲ್ಲೇ ಜೀವಬಿಟ್ಟ ಸಾಮಾನ್ಯಳಾ? ಅಲ್ಲ ಇದೆಲ್ಲವನ್ನೂ ಮೀರಿದ ಉದಾತ್ತ ಚಿಂತನೆಯ ಚೆಲುವೆಯಾ..?

ನನ್ನ ಮನಸ್ಸಿನ ರಾಮ ಸೀತೆಯ ಕೊರಗಿನಲ್ಲಿ ಜೀವ ಬಿಟ್ಟರೆ ಇಲ್ಲಿ ಸೀತೆಗೆ ಮಾತ್ರ ಕೊನೆಯಲ್ಲಿ ಮುಕ್ತಿ. ಕಥೆ ಹೇಳಲು ಯಾರೂ ಇರುವುದಿಲ್ಲ ಅನ್ನೋದು ಕಾರಣವಾ..? ಗೊತ್ತಿಲ್ಲ…

ನನ್ನ ಮನಸ್ಸಿನ ಪಾತ್ರಕ್ಕೂ, ಉತ್ತರಕಾಂಡದ ಪಾತ್ರಕ್ಕೂ ಅಜಗಜಾಂತರ. ಹಾಗಂತ ನಾನೇನೂ ಇಲ್ಲಿ ಲೇಖಕರನ್ನು ದೂರುತ್ತಿಲ್ಲ. ತಾಳಮದ್ದಲೆಯಲ್ಲಿನ ತರ್ಕಗಳನ್ನು ಕೇಳಿ ಕೇಳಿ ನನಗೆ ಹಾಗನ್ನಿಸಿತೋ ಏನೋ ಗೊತ್ತಿಲ್ಲ. ನನಗನ್ನಿಸಿದ್ದೇ ಎಲ್ಲರಿಗೂ ಅನ್ನಿಸಬೇಕೆಂದಿಲ್ಲವಲ್ಲ. ಅವರವರ ಭಾವಕ್ಕೆ ಅವರವರ ಭಕುತಿಗೆ…

———-

ಅಶ್ವತ್ಥ ಕೋಡಗದ್ದೆ

Share

Leave a comment

Your email address will not be published. Required fields are marked *

Recent Posts More

 • 3 days ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...

 • 4 days ago No comment

  ಯಾವುದು ಈ ಧಾವಂತದ ದಿಕ್ಕು?

    ನ್ಯಾಯದ ಬಾಗಿಲಲ್ಲಿ ನ್ಯಾಯವಾಗಿ ಹೋಗುವವರಿಗೆ ಮಾತ್ರ ಪ್ರವೇಶ ಇಲ್ಲ, ಆದರೆ ನ್ಯಾಯವಲ್ಲದ, ಅದರ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದವರಿಗೆ ಮಾತ್ರ ಹಾರ ತುರಾಯಿಗಳೊಂದಿಗೆ ಭರ್ಜರಿ ಆಹ್ವಾನ.       रिमझिम गिरे सावन, सुलग सुलग जाये मन भीगे आज इस मौसम में लगी कैसी ये अगन ಏನೋ ಒಂದು ಜ್ವಾಲೆ, ಏನೋ ಒಂದು ಉರಿ, ಏನೋ ಒಂದು ಚಡಪಡಿಕೆ, ಒಂಥರಾ ಬೂದಿ ...

 • 6 days ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 1 week ago No comment

  ಕೈಯ ಕನ್ನಡಿ ಹಿಡಿದು…

        ಕವಿಸಾಲು       ಕಾಲವೊಂದಿತ್ತು… ಕೈಯ ಕನ್ನಡಿ ಹಿಡಿದು ಕುರುಳ ತಿದ್ದುವ ನೀರೆ ನಾನಾಗ.. ದಶಕಗಳ ಕಾಲ ಸಂದಿದೆ… ಈಗ, ಆ ಕನ್ನಡಿಯೂ ಇಲ್ಲ… ಆ ಚೆಲುವಿನ ಮೋಡಿಯೂ ಇಲ್ಲ.. ನೆರಿಗೆ ತುಂಬಿದ ಕೈ.. ನರೆಗೂದಲು ತುಂಬಿದ ಬೆಳ್ಳಿಬುಟ್ಟಿ ತಲೆ.. ಆಸರೆ ಬಯಸುವ ದೇಹ… ಪ್ರೀತಿಗಾಗಿ ಕಾತರಿಸುವ ಕಂಗಳು… ನಗುವ ಹುಡುಕಿ ಬಿರಿಯಲೆಳಸುವ ಬೊಚ್ಚು ಬಾಯಿ‌.. ‌ಹೃದಯದಾಳದಿಂದ ಬಂದರೂ ನಾಲಿಗೆಯಡಿಯಲ್ಲಿ ಹೇಳಬಯಸುವ ನುಡಿಗಳು ...

 • 1 week ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...


Editor's Wall

 • 15 February 2018
  6 days ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  1 week ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  1 week ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...

 • 11 February 2018
  1 week ago No comment

  ನಿಮಗಿಂತ ಹೆಚ್ಚು ನಿರ್ಜೀವ

          | ಕಮಲಾದಾಸ್ ಕಡಲು       ಇಂದಿರಾಗಾಂಧಿ ಬಿಟ್ಟರೆ… (Next to Indira Gandhi) ಕಮಲಾದಾಸ್ ಕವಿತೆಯ ಅನುವಾದ       ಇಂದಿರಾಗಾಂಧಿಯನ್ನು ಬಿಟ್ಟರೆ, ನಾನು ಅತಿ ಹೆಚ್ಚು ಹೆದರಿದ್ದು ನನ್ನ ಅಪ್ಪನಿಗೆ ಮಾತ್ರ ನಾನು ಐದು ವರ್ಷದವಳಿರುವಾಗ ಅವರೇ ನನಗೆ ಹೇಳಿದ್ದು ಕಪ್ಪು ಮಕ್ಕಳು ಬಿಳಿಬಣ್ಣದ ಬಟ್ಟೆಗಳನ್ನು ಮಾತ್ರ ತೊಡಬೇಕೆಂದು. ಬೆಳೆಯುವ ದಿನಗಳಲ್ಲಿ ಕಳೆದುಹೋದಂತಿರುತ್ತಿದ್ದ, ಬಡಕಲಾಗಿದ್ದ, ಹಲ್ಲಿಗೆ ಕ್ಲಿಪ್ ...

 • 08 February 2018
  2 weeks ago No comment

  ಇದು ಕ್ರಾಂತಿ ಪರ್ವ

                    ಪ್ಯಾಸಿಸ್ಟ್ ನೀತಿಯೆಡೆಗೆ ಆಡಳಿತ ವೈಖರಿ ಹೊರಳುತ್ತಿದೆ ಎನ್ನುವಾಗ ಕ್ರಾಂತಿಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಎನ್ನುವುದನ್ನು ಮನದಟ್ಟು, ಮಾರ್ಗದರ್ಶನ ಮಾಡಿಸಬೇಕಾದವರೇ ಹೋರಾಟಕ್ಕೆ ತಣ್ಣೀರು ಹೊಯ್ಯೊತ್ತಿರಬಹುದೇ ಎನ್ನುವ ಗುಮಾನಿ ಕಾಡದಿರುವುದಿಲ್ಲ.   ಮೊನ್ನೆ ಮನ್ಸೋರೆ (ಮಂಜುನಾಥ ಸೋಮಕೇಶವ ರೆಡ್ಡಿ) ನಿರ್ದೇಶನದ ‘ಹರಿವು’ ಚಿತ್ರ ನೋಡುವಾಗ ಅದೆಷ್ಟು ಸಲ ಕನ್ನಡಕ ತೆಗೆದು ಕಣ್ಣೊರೆಸಿಕೊಂಡೆನೋ! ಆಶಾ ಬೆನಕಪ್ಪ ಅವರು ಪ್ರಜಾವಾಣಿಯಲ್ಲಿ ಬರೆದ ...