Share

ಅರುಣೋದಯ
ಸುಧಾ ಶರ್ಮ ಚವತ್ತಿ ಕಾಲಂ

ವಳು ಬಸ್ಸಿನಲ್ಲಿ ಕುಳಿತಿದ್ದಾಳೆ. ಬೆಳಿಗ್ಗೆಯಿಂದ ಒಂದು ವಿಚಾರ ಇನ್ನಿಲ್ಲದಂತೆ ಕಾಡುತ್ತಿದೆ. ಯಾಕೆ ನಾನು ಓದುತ್ತಿರುವುದು, ಯಾರಿಗಾಗಿ ಈ ಡಿಗ್ರಿ ಮಾಡುತ್ತಿದ್ದೇನೆ. ನನಗೆ ಈ ಓದು ಇಷ್ಟವಾಗುತ್ತಿಲ್ಲ. ನನಗೆ ಉತ್ತಮ ಅಂಕಗಳೂ ಬರುತ್ತಿದೆ. ಜಾಣೆ ಎಂದೇ ಗುರುತಿಸಿಕೊಂಡಿರುವೆ. ಹೀಗಿದ್ದೂ ನನಗೆ ಈ ಸೈನ್ಸ್ ವಿಷಯದಲ್ಲಿ ಆಸಕ್ತಿ ಇಲ್ಲ. ಆದರೆ ಯಾವುದರಲ್ಲಿ ಆಸಕ್ತಿ. ಅದು ಗೊತ್ತಾಗುತ್ತಿಲ್ಲ. ತನ್ನನ್ನು ಅತ್ಯಂತ ಖುಷಿಯಾಗಿ ಇಡುವ ಒಂದು ಚಟುವಟಿಕೆ, ಕೆಲಸ, ಓದಿಗಾಗಿ ಕಾದವಳಿಗೆ ನಾಟಕವೇ ಸರಿ ಅನ್ನಿಸಿಬಿಡತು. ನನ್ನನ್ನು ನಾನು ಎಕ್ಸಪ್ರೆಸ್ ಮಾಡಿಕೊಳ್ಳುವ ಏಕಮೇವ ಮಾರ್ಗದಂತೆ ಅದು ಗೋಚರಿಸಿತು. ಅದೇ ಬಸ್ ನಲ್ಲಿಯೇ ತಾನು ಓದುತ್ತಿರುವ ಕೋರ್ಸ್ ಅನ್ನು ಬದಲಿಸುವ ತೀರ್ಮಾನ ತೆಗೆದುಕೊಂಡಳು. ನಾಟಕ, ಸಂಗೀತ ಹೀಗೆ ವಿವಿಧ ಕಲೆಗಳನ್ನು ಹೇಳಿಕೊಡುವ ಶಾಲೆಗೆ ಸೇರಲು ನಿರ್ಧರಿಸಿದಳು. ಎಲ್ಲರ ಮನೆಯಲ್ಲಿ ಆದಂತೆ ಅವರ ಮನೆಯಲ್ಲೂ ಎಲ್ಲರೂ ಬೈದರು, ಅದೂ ಮಧ್ಯಮವರ್ಗದ ತಾಯಂದಿರಿಗಿರುವ ಬಹುದೊಡ್ಡ ನಿರೀಕ್ಷೆಯೇ ಮಕ್ಕಳು. ಅದೂ ಇಷ್ಟು ಜಾಣೆ ಮಗಳು ಹೀಗೆ ಇದ್ದಕ್ಕಿದ್ದಂತೆ ಕೋರ್ಸ್ ಬದಲಿಸಿ ಕೂತರೆ. ಇವಳಿಗೂ ದೂರದ ದಾರಿ ಗೊತ್ತಿಲ್ಲ. ಆದರೆ ಈಗ ಕಲಿಯುತ್ತಿರುವುದರಲ್ಲಿ ಆಸಕ್ತಿ ಇಲ್ಲ.

ಮುಂದೆ ಓದು ಮುಗಿಸಿದಾಗ ಯಥಾ ಪ್ರಕಾರ ಯಾವುದೇ ಉತ್ತಮ ಕೆಲಸ ಸಿಗಲಿಲ್ಲ. ಚಿಕ್ಕ ಪುಟ್ಟ ನಾಟಕಗಳಲ್ಲಿ ಪಾತ್ರಗಳು. ದುಡ್ಡು ಕೊಡಬಹುದು ಕೊಡದೇ ಇರಬಹುದು. ದೊಡ್ಡ ನಾಟಕ ತಂಡದವರು ಚಿಕ್ಕ ಪಾತ್ರ ಕೊಟ್ಟು ದುಡ್ಡೂ ಕೊಡುತ್ತಿರಲಿಲ್ಲ. ಇನ್ನೆಲ್ಲೋ ಪಾರ್ಟ್ ಟೈಂ ಕೆಲಸ ಮಾಡುತ್ತ ಹೀಗೆ ನಾಟಕಕ್ಕೆ ಕರೆ ಬಂದಾಗ ಹೋಗುವುದು. ಅಲ್ಲೂ ಇಲ್ಲ. ಇಲ್ಲೂ ಇಲ್ಲ. ಆಗ ಆ ಕೆಲಸವನ್ನೂ ಬಿಟ್ಟಾಯಿತು. ಜೊತೆಗೇ ಇದ್ದ ಸಂಗೀತಗಾರನೊಂದಿಗೆ ಪ್ರೇಮ ಪಲ್ಲವಿಸಿ ಮದುವೆಯೂ ಆಯಿತು. ಇಬ್ಬರಿಗೂ ಸರಿಯಾದ ಕೆಲಸ ಇಲ್ಲ.

ಕೊನೆಗೊಂದು ದಿನ ರೈಲ್ವೆ ಸ್ಟೇಷನ್ ನಲ್ಲಿ ಹಳೆ ಬಟ್ಟೆಗಳನ್ನು ಜೋಡಿಸಿಕೊಂಡು ಮಾರಾಟಕ್ಕೂ ಕುಳಿತುಬಿಡುತ್ತಾಳೆ. ಬೆಳಗಿನಿಂದ ಕೂತರೂ ವ್ಯಾಪಾರವೇ ಆಗಲಿಲ್ಲ. ಬಂದು ವಿಚಾರಿಸುತ್ತಾರೆಯೇ ಹೊರತು ಕೊಳ್ಳುವವರಿಲ್ಲ. ಎದುರುಗಡೆ ಇರುವ ಚಹ ಅಂಗಡಿಯವನು ಇವಳಿಂದ ಬಟ್ಟೆ ಕೊಳ್ಳುತ್ತಾನೆ. ಅವಳಿಗೆ ಅರ್ಥವಾಗತ್ತೆ ಅವನಿಗೆ ಬಟ್ಟೆ ಬೇಕಾಗಿಲ್ಲ. ಆದರೆ ಇವಳಿಗೆ ಸಹಾಯ ಮಾಡುವ ಉದ್ದೇಶದಿಂದ ಅವನು ಖರೀದಿಸುತ್ತಿದ್ದಾನೆ. ಅವನ ಒಳ್ಳೆತನಕ್ಕೆ ಇವಳ ಬಾಯಿ ಕಟ್ಟಿಹೋಗತ್ತೆ. ಅವನ ಒಳ್ಳೆತನ ಬದುಕಿನ ಭರವಸೆಯಂತೆ ಅವಳಿಗೆ ಭಾಸವಾಯಿತು.

ಇಂತಹದೇ ದಿನಗಳಲ್ಲಿ ಸಿಕ್ಕ ಸ್ನೇಹಿತನೊಬ್ಬ ನಿನ್ನ ಫೋಟೋಗಳನ್ನು ತೆಗೆದು ನಾನು ಕೆಲವು ಸೀರಿಯಲ್ ಪ್ರೊಡಕ್ಷನ್ ಕಂಪನಿಗಳಿಗೆ ಕಳುಹಿಸುತ್ತೇನೆ. ನಿನಗೆ ನಿಜಕ್ಕೂ ಕೆಲಸ ಸಿಕ್ಕೇ ಸಿಗುತ್ತೆ ಎನ್ನುತ್ತಾನೆ. ಅವಳೂ ಎಲ್ಲ ಕಂಪನಿಗಳಿಗೂ ಫೋಟೋ ಕೊಡುತ್ತಾಳೆ. ಎಂದಿನಂತೆ ಕಾಯುತ್ತಾಳೆ. ಯಾರಿಂದಲೂ ಕರೆ ಬರುವುದೇ ಇಲ್ಲ.. ಎಷ್ಟು ನಿರಾಸೆ ಆಗಿಹೋಗತ್ತೆ ಅಂದರೆ ಹೋಗಿ ಎನಾದರೂ ಬೇರೆ ಕೆಲಸಕ್ಕೆ ಸೇರಿಕೊಳ್ಳಬೇಕು ಎಂದೇ ನಿರ್ಧರಿಸಿಕೊಳ್ಳುತ್ತಾಳೆ.

ಇದೆಲ್ಲ ಆಗಿ ಸುಮಾರು 6 ತಿಂಗಳುಗಳೇ ಕಳೆದಿರಬಹುದು. ಅಷ್ಟು ಪ್ರಸಿದ್ಧಿ ಪಡೆಯದ ಕಂಪನಿಯಿಂದ ಆಡಿಷನ್ ಗೆ ಕರೆ ಬರುತ್ತದೆ. ಆ ಕರೆಯ ಬಗೆಗೆ ಅದೆಷ್ಟು ಭರವಸೆ ಪಟ್ಟಳೆಂದರೆ ಆಡಿಷನ್ ಗೆ ಹೋಗುವ ದಾರಿಯುದ್ದಕ್ಕೂ ಈ ಕೆಲಸ ನನಗೆ ಸಿಕ್ಕೇ ಸಿಗತ್ತೆ, ಸಿಗಲೇ ಬೇಕು ಎನ್ನುವ ಇನ್ನಿಲ್ಲದ ಹಂಬಲ ಭರವಸೆಯಲ್ಲಿ ಹೋದಳು. ಅವಳು ರಸ್ತೆಯುದ್ದಕ್ಕೂ ಕೇವಲ ಗೆಲುವನ್ನೇ ಭರವಸೆಯನ್ನೇ ಧೇನಿಸಿದಳು. ಅವಳ ಆಯ್ಕೆ ಆಯಿತು. ತಾಯಿಯ ಪಾತ್ರಕ್ಕೆ ಈ ಹುಡುಗಿಯನ್ನು ಆರಿಸಿದರು. ಮುಂದೆ ಅವಳು ಕಿರುತೆರೆಯಲ್ಲಿ ಬಹಳ ಜನಪ್ರಿಯ ನಟಿಯಾಗಿ ರಿಯಾಲಿಟಿ ಷೋ ಒಂದರಲ್ಲಿ ತನ್ನ ಬದುಕಿನ ಕಥೆಯನ್ನು ಬಿಚ್ಚಿಟ್ಟಳು.

ಈ ಕಥೆ ಕೇಳಿದರೆ ಇಲ್ಲೆ ನಮ್ಮ ನಡುವೆಯೇ ಇರುವ ಎಷ್ಟೋ ಜನರ ಬದುಕೂ ನೆನಪಾಗುತ್ತದೆ, ಹೇಗಿದ್ದವರು ಹೇಗಾದರು ನೋಡು ಎನಿಸುತ್ತದೆ. ಇದು ದಕ್ಷಣ ಕೋರಿಯಾದ ಜನಪ್ರಿಯ ಕಿರುತೆರೆ ನಟಿ ಲಾ ಮಿರಾನ್ ಮನದಾಳದ ಮಾತು. ನಲವತ್ತು ದಾಟಿದ ಇವಳು ಈಗ ಬಹು ಜನಪ್ರಿಯಳು. ಇದರಲ್ಲಿ ನನಗೆ ತುಂಬ ಇಷ್ಟವಾದದ್ದು ಅವಳು ಆಡಿಷನ್ ಗೆ ಕರೆ ಬಂದಾಗ ಇದು ನನಗೆ ಸಿಕ್ಕೇ ಸಿಗುತ್ತದೆ ಎನ್ನುವ ಭರವಸೆ ಹೊತ್ತು ಸಾಗಿದ್ದು ಹಾಗೂ ಈಗ ತನ್ನೆಲ್ಲ ಹಳೆ ಸೋಲುಗಳನ್ನು ಸ್ವಲ್ಪವೂ ಮರುಕವಿಲ್ಲದೇ ಹೇಳಿಕೊಳ್ಳುತ್ತಿರುವುದು.

ಬೆಳಗಾಗಲು ಇನ್ನೂ ಸ್ವಲ್ಪ ಹೊತ್ತಿರುವಾಗಲೇ ಹಕ್ಕಿಗಳು ಹೊರಡಲು ಅಣಿಯಾಗುತ್ತವೆ. ಅವುಗಳಿಗೇನು ಅವಸರವೋ. ಸೂರ್ಯನೂ ಅಷ್ಟೇ ಇಷ್ಟಿಷ್ಟೆ ಬೆಳಕಿನ ಕಿರಣಗಳನ್ನು ಹರಡುತ್ತ ತಾನು ಬರುವ ಮುನ್ಸೂಚನೆಯನ್ನು ಕೊಡುತ್ತಾನೆ. ಈ ಮುನ್ಸೂಚನೆಯೇ ಅರುಣೊದಯ. ನಮ್ಮೆಲ್ಲರ ಬದುಕಿನಲ್ಲೂ ಅರುಣೋದಯದ ಕಾಲ ನಮಗೆ ಗೊತ್ತಾಗತ್ತೆ ಸೂಕ್ಷ್ಮವಾಗಿ ಗಮನಿಸಿದರೆ. ನಾವು ಹೊರಟ ದಾರಿಯನ್ನು ತನ್ಮಯತೆಯಿಂದ ಅವಲೋಕಿಸಿದರೆ.

ಪ್ರತಿ ಬೆಳಗೂ ಬರಲಿರುವ ಹಗಲಿನ ಅರುಣೊದಯವೇ. ನಿತ್ಯವೂ ನೆಮ್ಮದಿಯ ನಾಳೆಗೆ ಹಂಬಲಿಸುವ ನಮಗೆ ಈಗ ಈ ಕ್ಷಣದ ಅರುಣೊದಯವೂ ಕಾಣಲಿ. ಕುವೆಂಪುರವರು ಹೇಳಿದ ಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣಾ ಎಂದಿದ್ದು ಎಷ್ಟು ನಿಜ ಅಲ್ವಾ?

————-

ಸುಧಾ ಶರ್ಮಾ ಚವತ್ತಿ

286637_218799308166417_3412973_o[1]“ಒದ್ದೆ ಕಣ್ಣುಗಳ ಪ್ರೀತಿ” ಕವನ ಸಂಕಲನದ ಮೂಲಕ ಭರವಸೆ ಹುಟ್ಟಿಸಿದ ಸುಧಾ ಶರ್ಮಾ ಚವತ್ತಿ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲೂ ಪರಿಣಿತರು. ಪತ್ರಿಕೆಗಳಲ್ಲಿ ಲೇಖನ, ಅಂಕಣಗಳ ಮೂಲಕ ಪರಿಚಿತರು. “ಆವಿಯಾಗಿದೆ ಮಾತು” (ಮಲ್ಲಿಗೆ), “ಷೇರೆಂಬ ಮಾಯಾಂಗನೆ” ( ವಿಜಯ ಕರ್ನಾಟಕ ), “ಪ್ರಾಫಿಟ್ ಪ್ಲಸ್” (ವಿಜಯವಾಣಿ) ಪ್ರಕಟಿತ ಅಂಕಣಗಳು. ಕಿರುತೆರೆ ಕಾರ್ಯರ್ಕಮಗಳ ನಿರ್ದೇಶನ, ನಿರ್ಮಾಣ, ನಿರೂಪಣೆಯ ಅನುಭವ. ಈಗ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಇವರು ಉತ್ತಮ ವಾಗ್ಮಿ. ಸಮೂಹ ಮಾತುಗಾರಿಕೆಯೂ ಇವರ ಉತ್ಕಟ ಪ್ರೀತಿಗಳಲ್ಲಿ ಒಂದು.

Share

Leave a comment

Your email address will not be published. Required fields are marked *

Recent Posts More

 • 4 hours ago No comment

  ಪ್ರತಿಯೊಬ್ಬರೊಳಗೂ ಒಂದೊಂದು ಕಥೆ!

  ಆಕೆ ಮೀರಾ. ತಾನು ಬರೆದ ಕಥೆಯೊಂದರ  ಮೂಲಕ ಇದ್ದಕ್ಕಿದ್ದಂತೆ ಲಕ್ಷಾಂತರ ಮನಸ್ಸನ್ನು ಮುಟ್ಟಿಬಿಡುತ್ತಾಳೆ. ವಿವಾನ್ ಎಂಬ ಬ್ಯಾಂಕ್ ಅಧಿಕಾರಿಯೊಬ್ಬನಿಗೆ ಜಗತ್ತನ್ನೇ ಸುತ್ತುವ ಕನಸು. ಕೆಫೆಯೊಂದರ ಮ್ಯಾನೇಜರ್ ಕಬೀರ್ ತನ್ನದೇ ಆದ ಏನನ್ನಾದರೂ ಸಾಧಿಸುವ ಹಂಬಲವಿಟ್ಟುಕೊಂಡವನು. ಅದೇ ಕೆಫೆಯ ಗ್ರಾಹಕಿ ನಿಶಾ ಎಂಥದೋ ಹತಾಶೆಗೆ ಸಿಕ್ಕಿಹಾಕಿಕೊಂಡು, ತನ್ನದೇ ಆದ ಗುಟ್ಟುಗಳನ್ನು ಬಚ್ಚಿಟ್ಟುಕೊಂಡಿರುವವಳು. ಪ್ರತಿಯೊಬ್ಬರದೂ ಒಂದೊಂದು ಕಥೆ. ಅಂಥ ನಾಲ್ವರೂ ಒಂದೆಡೆ ಸೇರಿದಾಗ ಏನಾಗುತ್ತದೆ? ಈ ಕುತೂಹಲವನ್ನು ತೆರೆದಿಡುತ್ತ ಹೋಗುವ ಕಾದಂಬರಿಯೇ ...

 • 1 day ago No comment

  ನನ್ನೊಳಗಿನ ಮಗುವಿಗೊಂದು ಪತ್ರ

        ನಿನ್ನೆ ನನ್ನ ಹಳೆಯ ಕಡತಗಳನ್ನೆಲ್ಲಾ ತೆರೆದು ಏನನ್ನೋ ಹುಡುಕುತ್ತಿದ್ದಾಗ ನೀನು ಬಿಡಿಸಿದ ಕೆಲವು ಚಿತ್ರಗಳು ಸಿಕ್ಕವು. ನಿಜಕ್ಕೂ ಅದ್ಭುತವಾಗಿದ್ದವು ಅವುಗಳು.       ಮಕ್ಕಳ ದಿನಾಚರಣೆಯ ಋತುವಿನಲ್ಲಿ ನಮ್ಮದೇ ಹನ್ನೆರಡರ ವ್ಯಕ್ತಿತ್ವಕ್ಕೊಂದು ಪತ್ರ ಬರೆದರೆ ಹೇಗಿರುತ್ತದೆ ಎಂಬ ಯೋಚನೆಯೊಂದು ತಲೆಯೆತ್ತಿತು. ಸದ್ಯ ಪತ್ರಗಳಂತೂ ಮಾಯವಾಗಿವೆ. ನಿತ್ಯಜೀವನದ ಜಂಜಾಟದಲ್ಲಿ ನಮ್ಮೊಳಗಿನ ಮಗುವೂ ನಿಧಾನಕ್ಕೆ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲೇ ಇವೆರಡನ್ನೂ ಒಂದೇ ವೇದಿಕೆಗೆ ತಂದಿಡುವ ...

 • 2 days ago No comment

  ದುರಿತ ಕಾಲದ ಕವಿತೆಗಳು

      ಕವಿಸಾಲು       1 ಒಂಟಿಯಾಗಿ ಹೆಗಲಲಿ ನೇಗಿಲ ಎಳೆದು ಅಜ್ಜಿ ಬಿತ್ತಿದ ರಾಗಿಗೆ ಸಗ್ಗಣಿ ಗೊಬ್ಬರ ಹಾಕಿ ಖಂಡುಗಗಟ್ಟಲೇ ರಾಗಿ ಬೆಳೆದ ಅಜ್ಜನ ಹೊಲದ ಮೇಲಿವತ್ತು ಚತುಷ್ಕೋನ ರಸ್ತೆ ರಾರಾಜಿಸುತ್ತಿದೆ ಆರಾಮಾಗಿ ಅಲ್ಲಿ ಮಲಗಿರುವ ಅವನ ಎದೆಯ ಮೆಲೆ ಅನಿಲ ಟ್ಯಾಂಕರುಗಳು ಅಡ್ಡಾಡುತಿವೆ ನೋವಾಗುತ್ತಿರುವುದು ಮಾತ್ರ ನನಗೆ! ~ 2 ಅಭಿವೃದ್ದಿಯ ಜಾಹಿರಾತಿನಲ್ಲಿ: ಹಡಗಿನಂತಹ ಕಾರುಗಳು ಹಾಳೆಗಳಂತಹ ಮೊಬೈಲುಗಳು ಕಣ್ಣು ಕುಕ್ಕುವ ಕಂಪ್ಯೂಟರುಗಳು ...

 • 2 days ago No comment

  ನಾಲ್ಕು ಹನಿಗಳು

      ಕವಿಸಾಲು         ಧ್ಯೇಯದಿಂದ ನೆಲ ಅಗೆದೆ ಗಿಡ ನೆಡಲು. ಮತ್ತೆ ಕಾಣಿಸಿತು ಧ್ಯಾನಸ್ಥ ಎರೆಹುಳು. ~ ನದಿ ತಟದ ಬೆಂಚಿನ ಮೇಲೆ ನಾನು ಎರಡೂ ತಟಗಳಿಗೆ ಅಂಟಿದ್ದ ದಪ್ಪನೆ ಕಾಂಕ್ರೀಟ್ ಗೋಡೆ. ಹರಿವ ನೀರು, ನಾನು ಬಂಧಿಗಳೇ. ~ Mindfulness ಎಂದೆಲ್ಲಾ ಹೇಳುವ ಅವರ ಹೆಮ್ಮೆಗೆ ಕಾಣಿಸಲಿಲ್ಲವೇಕೆ ಅಖಂಡವಾಗಿ ನಿಂತು ಜಗಿಯುವ ಆ ಎಮ್ಮೆ? ~ ಆ ಒಂದು ಮಳೆ ಹನಿ ...

 • 2 days ago No comment

  ಕಂಗಾಲಾಗಿದ್ದಾಗ ನಾವೆಲ್ಲ, ಮೆಲ್ಲಮೆಲ್ಲನೆ ಬಂದಳಲ್ಲ!

    ಅಡಗಿಕೊಳ್ಳಲು ಬಾಳೆ ಬುಡ ಆರಿಸಿಕೊಂಡ ಪುಟಾಣಿಗೆ ಬೇಸಿಗೆಯ ಆ ಮಧ್ಯಾಹ್ನ ಊಟ ಮಾಡಿ ನಿದ್ದೆ ಮಾಡುವ ಸಮಯವಾಗಿತ್ತು.         ಬಾಲ್ಯ ಬಂಗಾರ   ಬಾಲ್ಯದ ಮಜವನ್ನು ಅನುಭವಿಸದ ಮಕ್ಕಳು ಬದುಕನ್ನು ಪೂರ್ಣವಾಗಿ ಸವಿಯುವುದು ಕಷ್ಟವೇ? ಆ ಮಜವೇ ಭಿನ್ನ, ಅದರಲ್ಲೂ ಹಳ್ಳಿಯ ಬದುಕಿನ ಬಾಲರ ಜೀವನದಲ್ಲಿ ಬಾಲ್ಯ ಅನನ್ಯವಾದ ಜೀವನಾನುಭವ ನೀಡುವ ಕಾಲ. ಪೇಟೆಯಲ್ಲಿ ರೇಷ್ಮೆ ಹುಳುವಿನಂತೆ ಪೊರೆಯ ಒಳಗೆ ಬದುಕುವ ಮಕ್ಕಳ ...


Editor's Wall

 • 21 November 2017
  1 day ago No comment

  ನನ್ನೊಳಗಿನ ಮಗುವಿಗೊಂದು ಪತ್ರ

        ನಿನ್ನೆ ನನ್ನ ಹಳೆಯ ಕಡತಗಳನ್ನೆಲ್ಲಾ ತೆರೆದು ಏನನ್ನೋ ಹುಡುಕುತ್ತಿದ್ದಾಗ ನೀನು ಬಿಡಿಸಿದ ಕೆಲವು ಚಿತ್ರಗಳು ಸಿಕ್ಕವು. ನಿಜಕ್ಕೂ ಅದ್ಭುತವಾಗಿದ್ದವು ಅವುಗಳು.       ಮಕ್ಕಳ ದಿನಾಚರಣೆಯ ಋತುವಿನಲ್ಲಿ ನಮ್ಮದೇ ಹನ್ನೆರಡರ ವ್ಯಕ್ತಿತ್ವಕ್ಕೊಂದು ಪತ್ರ ಬರೆದರೆ ಹೇಗಿರುತ್ತದೆ ಎಂಬ ಯೋಚನೆಯೊಂದು ತಲೆಯೆತ್ತಿತು. ಸದ್ಯ ಪತ್ರಗಳಂತೂ ಮಾಯವಾಗಿವೆ. ನಿತ್ಯಜೀವನದ ಜಂಜಾಟದಲ್ಲಿ ನಮ್ಮೊಳಗಿನ ಮಗುವೂ ನಿಧಾನಕ್ಕೆ ಮರೆಯಾಗುತ್ತಿರುವಂತೆ ಕಾಣುತ್ತಿದೆ. ಈ ನಿಟ್ಟಿನಲ್ಲೇ ಇವೆರಡನ್ನೂ ಒಂದೇ ವೇದಿಕೆಗೆ ತಂದಿಡುವ ...

 • 19 November 2017
  3 days ago No comment

  ಸಂಸಾರದ ಬಂಧಗಳ ಬಗ್ಗೆ ಬರಿದೆ ಮಾತಿಂದ…

          | ಕಮಲಾದಾಸ್ ಕಡಲು     ನನ್ನ ಅಪ್ಪನ ಸಾವು (My Father’s Death) ಕಮಲಾದಾಸ್ ಕವಿತೆಯ ಅನುವಾದ     ಅಪ್ಪ ಸತ್ತಾಗ ಅಪ್ರಾಮಾಣಿಕರು ಮಾತ್ರ ಕಣ್ಣೀರು ಸುರಿಸಿದರು, ಅವನ ಹೆಣದೊಡನೆ ಫೋಟೋ ತೆಗೆಸಿಕೊಳ್ಳಲು ಬಂದ ಅವರಿಗೆ ಅಪ್ಪನೆಂದರೆ ವಾಸ್ಕೋಡಗಾಮ ಕಪ್ಪಾದ್ ಬೀಚಿನ ಮರಳಿನ ಮೇಲೆ ಮೊದಲು ಕಾಲಿರಿಸಿದ ನಂತರ ಕ್ಯಾಲಿಕಟ್’ನಲ್ಲಿ ಸತ್ತವರಲ್ಲಿ ಅತಿ ಮುಖ್ಯವಾದ ವ್ಯಕ್ತಿಯಾಗಿದ್ದರು ಅಷ್ಟೇ. ರಸ್ತೆಯ ಇಕ್ಕೆಲದಲ್ಲೂ ...

 • 17 November 2017
  5 days ago 2 Comment

  ನನ್ನನ್ನು ಕವಿಯೆಂದರು..!

      ಯಾರೂ ಫ್ರೆಂಡ್ಸೇ ಇರಲಿಲ್ಲ. ಆದರೂ ಬರೆಯುತ್ತ ಹೋದೆ. ನನ್ನ ಪೋಸ್ಟುಗಳು ಪಬ್ಲಿಕ್ಕಿಗೆ ಇದ್ದವು. ನನಗದು ಕೂಡ ಅರಿವಿಲ್ಲ. ಲೈಕುಗಳು ಬೀಳುತ್ತ ಹೋದವು. ಓದುಗರು ಅವನ್ನು ಕವಿತೆ ಎಂದು ಕರೆದರು. ಅದ್ಭುತವೆಂದು ಉದ್ಗರಿಸಿದರು. ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತ ಹೋದರು.       ಈ ಜಗತ್ತು ಅದೇಕೆ ಹಾಗೆ ಪ್ರೀತಿಯನ್ನು, ಪ್ರಾಮಾಣಿಕತೆಯನ್ನು, ಸತ್ಯವನ್ನು, ಸ್ನೇಹವನ್ನು, ಕರ್ತವ್ಯನಿಷ್ಠೆಯನ್ನು ದೌರ್ಬಲ್ಯ ಎಂದುಕೊಳ್ಳುತ್ತದೆ? ಯಾಕೆ ಮತ್ತೆ ಮತ್ತೆ ಅಪಮಾನಪಡಿಸುತ್ತದೆ? ಯಾಕೆ ಕಳಂಕದ ...

 • 14 November 2017
  1 week ago No comment

  ಅವ್ರ್ ಬಿಟ್ ಇವ್ರ್ ಬಿಟ್ ಅವ್ರ್ ಬಿಟ್ ಇವ್ರ್ ಯಾರು?

      ಈಗ ಮಕ್ಕಳನ್ನೆಲ್ಲ ಪರ ಊರುಗಳ ಬೋರ್ಡಿಂಗ್ ಶಾಲೆಗಳಲ್ಲಿ ನೂಕಿ ಯಾವ ಮನೆಗಳಲ್ಲೂ ಮಕ್ಕಳಿಲ್ಲದೆ ಬಣಗುಟ್ಟುತ್ತಿವೆ. ಹೋಮ್ ವರ್ಕ್, ರ್ಯಾಂಕ್ ಓಟ, ಅಂಕದ ಬೇಟೆಯಲ್ಲಿ ಸಿಲುಕಿ ಯಾವ ರಸ್ತೆಯಲ್ಲೂ ಮಕ್ಕಳು ಆಡುವುದಿಲ್ಲ. ಮಕ್ಕಳ ದಿನಕ್ಕೆ ಒಂದು ವಿಶೇಷ ಬರಹ, ಕಾದಂಬಿನಿ ಅವರಿಂದ       ಮಕ್ಕಳೆಲ್ಲ ಸೇರಿ ಯಾರಾದರೂ ಚೂರು ದೊಡ್ಡವರನ್ನು ಅಜ್ಜಿಯಾಗಲು ಕೇಳಿಕೊಂಡಾದ ಮೇಲೆ ಎಲ್ಲರೂ ವೃತ್ತಾಕಾರವಾಗಿ ನಿಂತು ಕ್ಲಾಪ್ಸ್ ಹಾಕುವ ಮೂಲಕ ಕಳ್ಳರನ್ನು ...

 • 09 November 2017
  2 weeks ago No comment

  ಕೆಂಡದಂಥ ಕಾವ್ಯ

  ಪಾಶ್ ಎಂದೇ ಗೊತ್ತಾಗಿರುವ ಪಂಜಾಬಿ ಮತ್ತು ಹಿಂದಿ ಕವಿ ಅವತಾರ್ ಸಿಂಗ್ ಸಂಧು, ಕ್ರಾಂತಿಕಾರಿ ಕವಿ. ತನ್ನ 20ನೇ ವಯಸ್ಸಿನಲ್ಲಿ ಆತ ಮೊದಲ ಸಂಕಲನ ‘ಲೋಹ್ ಕಥಾ’ ಪ್ರಕಟಿಸುತ್ತಿದ್ದ ಹಾಗೆಯೇ (1970) ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಟ್ಟಿದ್ದ. ಅದೇ ದಶಕದಲ್ಲೇ ಪ್ರಕಟಗೊಂಡ ಮತ್ತೂ ಎರಡು ಸಂಕಲನಗಳು ಪಂಜಾಬಿ ಕಾವ್ಯಲೋಕದಲ್ಲಿ ಆತನ ಹೆಸರನ್ನು ಶಾಶ್ವತಗೊಳಿಸಿಬಿಟ್ಟವು. ಅವನ ಕಾವ್ಯದ ಕತ್ತಿ ಖಲಿಸ್ತಾನಿಗಳ ವಿರುದ್ಧ ಝಳಪಿಸುತ್ತಿತ್ತು. ಕಡೆಗೆ ಅದೇ ಅವನ ಹತ್ಯೆಗೂ ಕಾರಣವಾಯ್ತು. ...