Share

ನೇತಾಜಿ ಪ್ರತ್ಯಕ್ಷ ಆಗಲಿದ್ದಾರೆ
ಈಶ್ವರ ದೈತೋಟ ಕಾಲಂ

ಯಾಕಿನ್ನೂ ನೇತಾಜಿ ಬಂದಿಲ್ಲವೆಂದು ನಾನು ಈ ಬಾರಿಯೂ ಅವರನ್ನು ಕೆದಕಿದೆ, “ನೋಡಿ, ನನ್ನ ವಯಸ್ಸಾದ ತಾಯಿಗೆ ಈಗ ಹುಶಾರಿಲ್ಲ. ನಾನು ಅವರ ಜೊತೆ ನಿರಂತರ ಇರಬೇಕಾಗಿ ಬಂದಿದೆ. ಎಲ್ಲೂ ಹೊರಗೆ ಹೋಗೋಕಾಗ್ತಿಲ್ಲ” ಎಂದುತ್ತರ ಬಂತು. “ಹಾಗಾದರೆ, ಸುಭಾಶ್‍ರು ವಾಪಾಸು ಬರುವುದಿಲ್ಲವೇ” ಎಂಬ ಪ್ರಶ್ನೆಗೆ 2018ರಲ್ಲಿ ಮೂರನೇ ಜಾಗತಿಕ ಮಹಾಯುದ್ಧ ಆಗುವಾಗ ನಾನು ಪ್ರತ್ಯಕ್ಕವಾಗುತ್ತೇನೆಂದು ಅವರೇ ನನಗೆ ಹೇಳಿದ್ದಾರೆ, ನಾನು ಅದನ್ನು ನಂಬುತ್ತೇನೆ” ಎಂದು ಕಡಕ್ ಉತ್ತರ ಬಂತು.

*

ನವರಿ 23 ನೇತಾಜಿ ಸುಭಾಶ್‍ಚಂದ್ರ ಬೋಸ್ ಹುಟ್ಟುಹಬ್ಬ. ಯಾವ ಪತ್ರಿಕೆಗಳಲ್ಲೂ ವರದಿಯಾದಂತಿರಲಿಲ್ಲ. ನನಗೂ ಮರೆತೇ ಹೋಗಿತ್ತು.

ಸುಮಾರು ಎರಡು ವರ್ಷಗಳ ಹಿಂದೆ ವಿಜಯವಾಣಿಯಲ್ಲಿ ಅಂತರದೃಷ್ಟಿ ಅಂಕಣದಲ್ಲಿ ಕೆನೆಡಿ ಹತ್ಯೆ, ನೇತಾಜಿ ಕಣ್ಮರೆ ನಿಗೂಢತೆ ಬಗ್ಗೆ ಬರೆದಿದ್ದೆ. ಹಿರಿಯರೊಬ್ಬರು ಮೆಚ್ಚಿ ನೇತಾಜಿ ಬದುಕಿದ್ದಾರೆ, ನಾನು ಅವರನ್ನು ಕಂಡಿದ್ದೇನೆ ಎಂದು ಫೋನ್ ಮಾಡಿ ಹೇಳಿದ್ದರು. ಶ್ರೀಧರ್‍ಜೀ ಸುಭಾಶ್ ಎಂಬ ಹೆಸರಿನ ಅವರನ್ನು ಭೇಟಿಯಾದಾಗ ಸತ್ಯವನ್ನೇ ಹೇಳುತ್ತಿದ್ದೇನೆಂಬ ಧೈರ್ಯದಿಂದ ಅವರು ಪೇಪರ್ ಕಟ್ಟಿಂಗ್ಸ್, ಫೋಟೋಗಳು, ಹಳೆಯ ಡಾಕ್ಯುಮೆಂಟರಿ ಫಿಲ್ಮ್ ಗಳನ್ನೇ ಮುಂದಿಟ್ಟು ವಾದಿಸಿದ್ದರು.

“ಅವರು ಬಂದೇ ಬರುತ್ತಾರೆ, ಸಮಗ್ರ ಹಿಂದುಸ್ತಾನವನ್ನು ಮತ್ತೆ ಒಗ್ಗೂಡಿಸುತ್ತಾರೆ, ಫ್ರಾನ್ಸ್ನಿಂದ ತೊಡಗಿ ಮೂರನೆಯ ಮಹಾಯುದ್ಧ ಆಗಲಿದೆ, ಭಾರತ ಮತ್ತೆ ಜಗತ್ತಿನಾದ್ಯಂತ ಮಿಂಚುತ್ತದೆ” ಎಂದುದು ನನಗಿನ್ನೂ ಜ್ಞಾಪಕವಿದೆ. ನಾನು ಟಿವಿ, ಪತ್ರಿಕೆಗಳಲ್ಲಿ ಈ ಸಂದರ್ಶನದ ಬಗ್ಗೆ ಬರೆದಿದ್ದೆ ಕೂಡಾ.

ಕಾಬೂಲಿನ ಜಿಯಾವುದ್ದೀನ್, ಇಟೆಲಿಯ ಓಲ್ಟಾಂಡೋ, ಜರ್ಮನಿಯ ಮಿ. ಎಕ್ಸ್, ಚೀನಾದ ಜನರಲ್ ಲೀ ಪೂ ಚಿಂಗ್, ಮಂಚೂರಿಯಾದ ಚಂದ್ರಬೋಸ್, ಇಂಡಿಯಾದೊಳಗೆ ಬಾಬಾ ಹನುಮಾನ್ ಗಿರಿ, ಹನುಮಾನ್ ಸಿಂಹ, ಕರ್ನಲ್ ಜೋಗೀಂದರ್ ಸಿಂಗ್, ಬಾಬಾ ಸಮಾಜಾನಂದ, ಶಾಲಿಮಾರ್‍ನ ಶಾರದಾನಂದ, ಗುಮ್ನಾಮ್ ಸಿಂಗ್ ಬಾಬಾ ಎಲ್ಲಾ ಅವರ ಛದ್ಮವೇಷದ ಅವತಾರಗಳು ಎಂದಿದ್ದರು.

ಅವರೊಂದಿಗೆ ನಾನು ವಾದ ಮಾಡಿದ್ದೆ. “ನೇತಾಜಿಯವರ ಮರಣದ ಬಗ್ಗೆ ತನಿಖೆ ಮಾಡಿದ ಮೊದಲ ಎರಡು ಆಯೋಗಗಳು ನೇತಾಜಿ ವಿಮಾನಾಪಘಾತದಲ್ಲಿ ಅಪಮರಣಕ್ಕೀಡಾದರು ಎಂದಿವೆ. ಮೂರನೆಯ ಮುಖರ್ಜಿ ಆಯೋಗ ವಾಜಪೇಯಿ ಕಾಲದಲ್ಲಿ ನೇಮಕಗೊಂಡದ್ದು ನೇತಾಜಿ ತಾಯ್‍ಪೇ ವಿಮಾನಾಪಘಾತದಲ್ಲಿ ಮರಣ ಹೊಂದಿದರೆಂಬುದು ಕಟ್ಟುಕತೆ, ಸತ್ಯ ಅಲ್ಲ ಎಂದಿದೆ. ಮುಖರ್ಜಿಯವರು ಗುಮ್ನಾಮ್ ಬಾಬಾ ಅವರನ್ನು ಭೇಟಿಯಾಗಿದ್ದರು. ಆದರೆ, ಅವರೇ ನೇತಾಜಿಯೆಂದು ಎಲ್ಲೂ ದಾಖಲಿಸಿಲ್ಲ ಇಲ್ಲವೇ ಅವರು ಬದುಕಿದ್ದಾರೆಂದೂ ಅಭಿಪ್ರಾಯ ಪಟ್ಟಿಲ್ಲ” ಎಂದು.

“ನೆಹರೂ ಅವರಿಗೆ ನೇತಾಜಿ ಬದುಕಿದ್ದಾರೆಂದು ಗೊತ್ತಿತ್ತು. ಅವರಿಗೆ ನೇತಾಜಿ ಬೇಕಿರಲಿಲ್ಲ. ಅದಕ್ಕೇ, ನೇತಾಜಿ ನಿಕಟವರ್ತಿ ಶಾ ನವಾಜರನ್ನೇ ತನಿಖೆಗೆ ನೇಮಿಸಿ, ಅವರನ್ನು ಸಚಿವರನ್ನಾಗಿ ನೇಮಿಸುವ ಭರವಸೆ ಕೊಟ್ಟು, ಸತ್ಯಾಂಶವಿಲ್ಲದ ವರದಿ ಬರೆಸಿದರು. ಜಿ.ಡಿ. ಖೋಸ್ಲಾರ ಎರಡನೆಯ ತನಿಖಾ ಆಯೋಗವೂ ಅದೇ ರೀತಿ ನೇತಾಜಿ ಬದುಕಿರುವುದನ್ನು ನಿರಾಕರಿಸಿ ವರದಿ ಕೊಟ್ಟಿತು. ವಾಜಪೇಯಿ ನೇಮಿಸಿದ ಮುಖರ್ಜಿ ಆಯೋಗ ವರದಿ ಸಲ್ಲಿಸಿದಾಗ ಇದ್ದುದು ಕಾಂಗ್ರೆಸ್ ಸರಕಾರ. ಮನಮೋಹನ್‍ರ ಸರ್ಕಾರಕ್ಕೆ ಸಂಪೂರ್ಣ ವರದಿ ಬಹಿರಂಗ ಮಾಡುವ ಧೈರ್ಯ ಇರಲಿಲ್ಲ. ಮೂರಲ್ಲ, 4 ತನಿಖಾ ಆಯೋಗಗಳು ನೇಮಕಗೊಂಡಿದ್ದವು. ಅವೆಲ್ಲದರ ಸಂಪೂರ್ಣ ದಾಖಲೆ ಎದುರಿಗಿಟ್ಟರೆ ನಾನು ಹೇಳುವ ಸತ್ಯ ನೂರಕ್ಕೆ ನೂರಂಶ ಬಹಿರಂಗಗೊಳ್ಳುತ್ತದೆ” ಎಂದವರು ಹೇಳಿದ್ದರು.

ಹೋದ ವರ್ಷದಿಂದ ಅವರ ಬಗ್ಗೆ ಅನೇಕ ರಹಸ್ಯ ದಾಖಲೆಗಳನ್ನು ಪಶ್ಚಿಮ ಬಂಗಾಳ ಸರಕಾರ ಮತ್ತು ಕೇಂದ್ರ ಸರಕಾರ ಬಿಡುಗಡೆ ಮಾಡುತ್ತಾ ಬಂದಿದೆ. ಆದರೆ ಅವುಗಳಲ್ಲಿ ಹಲವು ಅಧಿಕೃತ ದಾಖಲೆ ನಾಶವಾಗಿವೆಯೆಂಬ ಸಂಗತಿಯೂ ಹೊರಬಿದ್ದಿತು. ನೇತಾಜಿ ಥಾಯ್‍ಪೇನಲ್ಲಿ ವಿಮಾನಾಪಘಾತದಲ್ಲಿ ಮಡಿದಿಲ್ಲ ಎಂಬ ಮಾಹಿತಿ ಬಗ್ಗೆ ನಂಬಲರ್ಹ ದಾಖಲೆಗಳು ಹೊರಬಿದ್ದಿದ್ದನ್ನು ಪತ್ರಿಕೆಗಳಲ್ಲಿ ನಾನೂ ಓದಿದ್ದೇನೆ.

ಕಾಣೆಯಾಗಿದೆ ಎನ್ನಲಾದ ಬಹುಮುಖ್ಯ ಫೈಲ್ ಗಳನ್ನು ಮೋದಿ ಸರಕಾರವೇಕೆ ಹೊರಬಿಡುತ್ತಿಲ್ಲವೆಂಬುದು ನಮ್ಮನ್ನು ಕಾಡುತ್ತಿದೆ ಎಂದು ಶ್ರೀಧರ್‍ಜೀ ಒತ್ತು ನೀಡಿ ಪ್ರತಿಕ್ರಿಯಿಸಿದರು. ಮೋದೀಜಿ ಸಂತ ಸಾಮ್ರಾಟ್ ಎಂಬ ಹೆಸರಿನಲ್ಲಿದ್ದ ನೇತಾಜಿಯಿಂದಲೇ ಪಡೆದ ಪೆನ್ನಿನ ಬಗ್ಗೆ ನೆನಪಿಸಿಕೊಂಡರು. ಮೋದೀಜಿಯವರನ್ನು ಸಂತ ಸಾಮ್ರಾಟ್‍ರಲ್ಲಿಗೆ ಕರೆದೊಯ್ದಿದ್ದ ಸುಭಾಶ್ ರ ಕಾರು ಡ್ರೈವರ್ ಆಗಿದ್ದ ಕ್ಯಾಪ್ಟನ್ ನಿಜಾಮುದ್ದಿನ್ ಕೆಲವು ತಿಂಗಳು ಹಿಂದೆ ತನ್ನ 117ನೇ ವಯಸ್ಸಿನಲ್ಲಿ ನಿಧನರಾದ ಸುದ್ದಿಯನ್ನು ನೀವೂ ಪತ್ರಿಕೆಗಳಲ್ಲಿ ಓದಿರಬಹುದು ಎಂದರು.

ನೆಹರೂಜಿ ನಿಧನರಾದಾಗ ಅಂತಿಮ ದರ್ಶನಕ್ಕೆ ನೇತಾಜಿ ಬಂದಿದ್ದರು. ಇಂದಿರಾಜಿ ಪಕ್ಕದಲ್ಲಿ ನಿಂತಿದ್ದರು. ಲೀ ಪೂ ಚಿಂಗ್ ಎಂಬ ಹೆಸರು-ಬೌದ್ಧೀಯ ದಿರಿಸಿನಲ್ಲಿದ್ದ ಚೀನೀಯ ಪ್ರತಿನಿಧಿ ನೇತಾಜಿಯವರೇ’ ಎಂದು ಫೋಟೋ ಮತ್ತು ಭಾರತ ಸರ್ಕಾರದ ಫಿಲ್ಮ್ ಡಿವಿಜನ್‍ನ ಡಾಕ್ಯುಮೆಂಟರಿ ಹಿಂದಿನ ಬಾರಿ ತೋರಿಸಿದ್ದರು. ತಾಷ್ಕೆಂಟಿನಲ್ಲಿ ಪ್ರಧಾನಿ ಶಾಸ್ತ್ರೀಜಿ ಚಿಂಗ್ ಹೆಸರಿನಲ್ಲಿ ಬೀಜಿಂಗ್‍ನಲ್ಲಿ ಮಾವೊ ತ್ಸೆ ತುಂಗ್‍ರಿಗೆ ಅಡ್ವೈಸರ್ ಆಗಿದ್ದ ಸುಭಾಶ್ ರನ್ನು ಭೇಟಿಯಾಗಿದ್ದರು ಎಂದಿದ್ದರು.

ಆ ಬಳಿಕ ಟೈಮ್ಸ್ ಆ ಮುಖಪುಟದಲ್ಲಿ ಬೋಸ್ ಅವರು ಮಾವೋ ರ ಅಡೈಸರ್ ಆಗಿದ್ದರೇ ಎಂಬ ಸುದ್ದಿ ಓದಿದ್ದೆ. ಹಾಗೆಯೇ, ಶಾಸ್ತ್ರಿಯವರ ಪುತ್ರರು “ಹೌದ್ಹೌದು ನಮ್ಮಪ್ಪ ರಶಿಯಾದಲ್ಲಿ ಯಾರೋ ದೊಡ್ಡ ವ್ಯಕ್ತಿಯನ್ನು ನಾನು ಭೇಟಿಯಾಗಲಿದೆ, ಅವರನ್ನು ಭಾರತಕ್ಕೆ ಕರ್ಕೊಂಡು ಬರಬೇಕಿದೆ ಎಂದು ನಮ್ಮ ಬಳಿ ಹೇಳುತ್ತಿದ್ದುದು ನಿಜ,ನಮ್ಮ ಪಿತನ ಅನಿರೀಕ್ಷಿತ ಸಾವಿಗೆ ತನಿಖೆಯಾಗಬೇಕೆಂದೂ” ಹೇಳಿದ್ದು ಪತ್ರಿಕೆಗಳಲ್ಲಿ ವರದಿಯಾಯಿತು.

ಹಾಗೆಯೇ, ನರೇಂದ್ರ ಮೋದಿಯೂ ಸುಭಾಶ್‍ರನ್ನು ಭೇಟಿಯಾಗಿದ್ದರೆಂಬುದನ್ನು ಕೆದಕದೆ ಬಿಟ್ಟಿರಲಿಲ್ಲ. ‘ಹೌದು, ಆ ಪೆನ್ ಕೊಟ್ಟ ಸ್ವಾಮೀಜಿಯೇ ಸುಭಾಶ್‍ರು. ನೀವೂ ಓದಿರಬೇಕಲ್ಲಾ-ಸಂತ ಸಾಮ್ರಾಟರನ್ನು ಮೋದಿ ಭೇಟಿಯಾಗಿದ್ದಾಗ ಅಲ್ಲಿ ಸುಭಾಶ್‍ರ ಅತಿನಂಬಿಕೆಯ ಡ್ರೈವರ್ ಜೊತೆಗಿದ್ದರು’ ಎಂಬ ಅವರ ವಿವರಣೆ ನನ್ನ ತಲೆ ಕೆದಕಿಬಿಟ್ಟಿತ್ತು.

ಲೋಕಸಭೆ ಸದಸ್ಯ ಸಮರ್ ಗುಹಾ, ನೇತಾಜಿ ಸೋದರ ಸುಶಿಲ್ ಬೋಸ್ ಇಬ್ಬರೂ ನೇತಾಜಿ ಪ್ರತ್ಯಕ್ಷವಾಗುವ ಮುಹೂರ್ತ ಇಟ್ಟಿದ್ದರೂ- ಅವರು ಬಹಿರಂಗ ಗೊಳ್ಳಲೇ ಇಲ್ಲವಲ್ಲಾ ಎಂದು ರಾಗ ಎಳೆದೆ. ಬಂದೇ ಬರುತ್ತಾರೆಂದು ಹಠ ಕಟ್ಟಿದ ನೇತಾಜೀ ಸೇನೆಯ ಈ ರಾಷ್ಟ್ರೀಯ ಅಧ್ಯಕ್ಷರು ಇನ್ನು ಯಾರೂ ತಡೆಯಲಾಗುವುದಿಲ್ಲ ಎಂದರು. ಅವರೇಕೆ ಬರಲಿಲ್ಲ ಎಂದಾಗ ನೆಹರು ಅವರ ಅಂತಾರಾಷ್ಟ್ರೀಯ ಒಪ್ಪಂದ (ಕಾಮನ್‍ವೆಲ್ತ್ ಸಂಬಂಧಿತ) ದಂತೆ ನೇತಾಜಿ ಈಗ ಪ್ರತ್ಯಕ್ಷ ಗೊಂಡರೆ ಅವರನ್ನು ವಾರ್ ಕ್ರಿಮಿನಲ್ ಆಗಿ ಆ ದೇಶಗಳಿಗೆ ಒಪ್ಪಿಸಬೇಕೆಂಬ ಬದ್ಧತೆಯನ್ನು ಮಾಡಿಕೊಂಡಿದೆ ನಮ್ಮ ಸರಕಾರ. ಇನ್ನೇನು ಒಪ್ಪಂದ ಅಂತ್ಯವಾಗುವ ಸಮಯ ಬರುತ್ತಿದೆ ಎಂದು ಎದೆ ಸೆಟೆದು ಸುಭಾಶ್‍ರ ನಿಕಟವರ್ತಿ ಪಂಡಿತರು ಉದ್ಗರಿಸಿದ್ದರು.

ಯಾಕಿನ್ನೂ ನೇತಾಜಿ ಬಂದಿಲ್ಲವೆಂದು ನಾನು ಈ ಬಾರಿಯೂ ಅವರನ್ನು ಕೆದಕಿದೆ, “ನೋಡಿ, ನನ್ನ ವಯಸ್ಸಾದ ತಾಯಿಗೆ ಈಗ ಹುಶಾರಿಲ್ಲ. ನಾನು ಅವರ ಜೊತೆ ನಿರಂತರ ಇರಬೇಕಾಗಿ ಬಂದಿದೆ. ಎಲ್ಲೂ ಹೊರಗೆ ಹೋಗೋಕಾಗ್ತಿಲ್ಲ” ಎಂದುತ್ತರ ಬಂತು. “ಹಾಗಾದರೆ, ಸುಭಾಶ್‍ರು ವಾಪಾಸು ಬರುವುದಿಲ್ಲವೇ” ಎಂಬ ಪ್ರಶ್ನೆಗೆ 2018ರಲ್ಲಿ ಮೂರನೇ ಜಾಗತಿಕ ಮಹಾಯುದ್ಧ ಆಗುವಾಗ ನಾನು ಪ್ರತ್ಯಕ್ಕವಾಗುತ್ತೇನೆಂದು ಅವರೇ ನನಗೆ ಹೇಳಿದ್ದಾರೆ, ನಾನು ಅದನ್ನು ನಂಬುತ್ತೇನೆ” ಎಂದು ಕಡಕ್ ಉತ್ತರ ಬಂತು.

ನಾನವರನ್ನು ಮತ್ತೂ ಹಲವು ಪ್ರಶ್ನೆಗಳನ್ನು ಕೇಳಿದೆ. ಈಗ ಸ್ಥಳಾವಕಾಶದ ಕೊರತೆಯಿಂದಾಗಿ ಅವೆಲ್ಲದರ ವಿವರ ಮುಂದಿನ ಕೂಕಿಲಿನಲ್ಲಿ ಬರೆಯಲ್ಲಿದ್ದೇನೆ.

———————-

ಈಶ್ವರ ದೈತೋಟ

1ಕರ್ನಾಟಕದ ಅತಿಹೆಚ್ಚು ದಿನಪತ್ರಿಕೆಗಳನ್ನು ಮುನ್ನಡೆಸಿದ ಹಿರಿಮೆ. 1991ರಿಂದ 2011ರವರೆಗಿನ ಎರಡು ದಶಕಗಳಲ್ಲಿ ಅತ್ಯಂತ ಹೆಚ್ಚು ಆವೃತ್ತಿಗಳು ಮತ್ತು ಪ್ರಸಾರದ ವಿಜಯ ಕರ್ನಾಟಕದ ಫೌಂಡರ್ ಚೀಫ್ ಎಡಿಟರ್. ಮಣಿಪಾಲದ ಉದಯವಾಣಿ ರೆಸಿಡೆಂಟ್ ಎಡಿಟರ್, ಟೈಮ್ಸ್ ಆಫ್ ಇಂಡಿಯಾ (ಕ) ಎಡಿಟರ್, ಕನ್ನಡದ ಸೀನಿಯರ್ ಮೋಸ್ಟ್ ದೈನಿಕ ಸಂಯುಕ್ತ ಕರ್ನಾಟಕದ ಚೀಫ್ ಎಡಿಟರ್ ಹಾಗೂ ನೂತನ ವಾರಪತ್ರಿಕೆ ಚೀಫ್ ಎಡಿಟರ್ ಆಗಿ ಹೊಣೆಹೊತ್ತವರು.

ಮುದ್ರಣ ಮಾಧ್ಯಮ, ರೇಡಿಯೋ, ಟೆಲಿವಿಷನ್ನಿನಲ್ಲಿ ಮೂರೂವರೆ ದಶಕಗಳಿಗೂ ಹೆಚ್ಚು ಅನುಭವ. ಪತ್ರಿಕೋದ್ಯಮ ಶಿಕ್ಷಣ, ಅಭ್ಯುದಯ ಪತ್ರಿಕೋದ್ಯಮ ಮತ್ತು ಮೀಡಿಯಾ ಮ್ಯಾನೇಜ್‌ಮೆಂಟ್‌ನಲ್ಲಿಯೂ ಅಪಾರ ಸಾಧನೆ. ಯುಜಿಸಿ ಮತ್ತು ಯೂನಿಸೆಫ್ ತರಬೇತಿ ಯೋಜನೆಗೆ ಡೆವಲಪ್‌ಮೆಂಟ್‌ ಕನ್ಸಲ್ಟೆಂಟ್ ಎಂದು ಮನ್ನಣೆ.

2015ರಲ್ಲಿ ಪ್ರತಿಷ್ಠಿತ ಟಿಎಸ್ಆರ್ ಪತ್ರಿಕೋದ್ಯಮ ಪ್ರಶಸ್ತಿ, ಮೂಡಬಿದ್ರೆಯ ನುಡಿಸಿರಿ ಪ್ರಶಸ್ತಿ, 2008ರಲ್ಲಿ ಅಭ್ಯುದಯ ಪತ್ರಿಕೋದ್ಯಮ ರಾಜ್ಯ ಪ್ರಶಸ್ತಿ, ಮೈಸೂರಿನ ಕುವೆಂಪು ಶಿಕ್ಷಣ ಸಂಸ್ಥೆಯಿಂದ ರಾಜ್ಯದ ಅತ್ಯುತ್ತಮ ಸಂಪಾದಕ ಪ್ರಶಸ್ತಿ (2006). 2008ರಲ್ಲಿ ರಾಷ್ಟ್ರೀಯ ಝಿ ಟಿವಿ ಚಾನೆಲ್‌ನಿಂದ ಕರ್ನಾಟಕದಲ್ಲಿ ಇಲೆಕ್ಟ್ರಾನಿಕ್ ಮೀಡಿಯಂ ಮತ್ತು ಪತ್ರಿಕೋದ್ಯಮಕ್ಕೆ ಅತಿ ದೊಡ್ಡ ಸೇವೆ ಸಲ್ಲಿಸಿದ ಸಂಪಾದಕ ಮತ್ತು ಅತ್ಯಂತ ಜನಪ್ರಿಯ ಮೀಡಿಯಾ ಪರ್ಸನ್ (ವೀಕ್ಷಕರ ಆಯ್ಕೆ) ಎಂಬೆರಡು ಪ್ರಶಸ್ತಿಗಳು. ವಾಯ್ಸ್ ಆಫ್ ಅಮೇರಿಕಾ ಮತ್ತು ಕೆನೆಡಿಯನ್ ರೇಡಿಯೋಗಳಲ್ಲಿ ಅವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ಹಲವು ಇಂಟರ್‌ನ್ಯಾಷನಲ್ ಜರ್ನಲ್‌ಗಳಿಗೂ ಲೇಖನ ಬರೆದಿದ್ದಾರೆ.

ಅಭ್ಯುದಯ ಪತ್ರಿಕೋದ್ಯಮ ಅವರ ನಿತ್ಯ ಜಪ. ಅಭ್ಯುದಯ ಸಂಬಂಧಿತ ಅನೇಕ ಡಾಕ್ಯುಮೆಂಟರಿಗಳನ್ನು, ರೇಡಿಯೋ ರೂಪಕಗಳನ್ನು ತಯಾರಿಸಿರುವ ಅನುಭವ. ಪತ್ರಿಕೋದ್ಯಮ ಮತ್ತಿತರ ವಿಷಯಗಳ ಬಗ್ಗೆ ಅವರು ಬರೆದಿರುವ, ಅನುವಾದಿಸಿರುವ ಪುಸ್ತಕಗಳ ಸಂಖ್ಯೆ 75ಕ್ಕೂ ಹೆಚ್ಚು.

Share

Leave a comment

Your email address will not be published. Required fields are marked *

Recent Posts More

 • 3 days ago No comment

  ಈ ಸಂಜೆ ಪ್ರಿತಿಯೊಡನೆ…

      ಸಣ್ಣಕಥೆ ಮೂಲ ಇಂಗ್ಲೀಷ್: ಸುಲಮಿತ್ ಈಶ್-ಕಿಶೋರ್ ಕನ್ನಡಕ್ಕೆ: ಉದಯ್ ಇಟಗಿ       ಸಂಜೆಯ ಆರು ಘಂಟೆಗೆ ಆರು ನಿಮಿಷ ಮಾತ್ರ ಬಾಕಿಯಿದೆ – ಹಾಗಂತ ನಗರದ ಗ್ರ್ಯಾಂಡ್ ಸೆಂಟ್ರಲ್ ರೈಲ್ವೇ ಸ್ಟೇಷನ್ನು ಮಾಹಿತಿ ಕೇಂದ್ರದ ಮೇಲಿದ್ದ ದೊಡ್ಡ ದುಂಡನೆಯ ಗಡಿಯಾರ ಹೇಳಿತು. ಎತ್ತರದ ಹದಿಹರೆಯದ ಸೇನಾಧಿಕಾರಿಯೊಬ್ಬ ಆಗಷ್ಟೆ ರೈಲ್ವೇ ಸ್ಟೇಷನ್ನಿಂದ ಹೊರಗೆ ಬಂದು ಬಿಸಿಲಿಗೆ ಬಾಡಿ ಕಂದಾಗಿದ್ದ ತನ್ನ ಮುಖವನ್ನೊಮ್ಮೆತ್ತಿ ಕಣ್ಣಲ್ಲಿ ಕಣ್ಣಿಟ್ಟು ...

 • 4 days ago No comment

  ಯಾವುದು ಈ ಧಾವಂತದ ದಿಕ್ಕು?

    ನ್ಯಾಯದ ಬಾಗಿಲಲ್ಲಿ ನ್ಯಾಯವಾಗಿ ಹೋಗುವವರಿಗೆ ಮಾತ್ರ ಪ್ರವೇಶ ಇಲ್ಲ, ಆದರೆ ನ್ಯಾಯವಲ್ಲದ, ಅದರ ಬಗ್ಗೆ ಕಿಂಚಿತ್ತೂ ಆಸಕ್ತಿಯಿಲ್ಲದವರಿಗೆ ಮಾತ್ರ ಹಾರ ತುರಾಯಿಗಳೊಂದಿಗೆ ಭರ್ಜರಿ ಆಹ್ವಾನ.       रिमझिम गिरे सावन, सुलग सुलग जाये मन भीगे आज इस मौसम में लगी कैसी ये अगन ಏನೋ ಒಂದು ಜ್ವಾಲೆ, ಏನೋ ಒಂದು ಉರಿ, ಏನೋ ಒಂದು ಚಡಪಡಿಕೆ, ಒಂಥರಾ ಬೂದಿ ...

 • 6 days ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 1 week ago No comment

  ಕೈಯ ಕನ್ನಡಿ ಹಿಡಿದು…

        ಕವಿಸಾಲು       ಕಾಲವೊಂದಿತ್ತು… ಕೈಯ ಕನ್ನಡಿ ಹಿಡಿದು ಕುರುಳ ತಿದ್ದುವ ನೀರೆ ನಾನಾಗ.. ದಶಕಗಳ ಕಾಲ ಸಂದಿದೆ… ಈಗ, ಆ ಕನ್ನಡಿಯೂ ಇಲ್ಲ… ಆ ಚೆಲುವಿನ ಮೋಡಿಯೂ ಇಲ್ಲ.. ನೆರಿಗೆ ತುಂಬಿದ ಕೈ.. ನರೆಗೂದಲು ತುಂಬಿದ ಬೆಳ್ಳಿಬುಟ್ಟಿ ತಲೆ.. ಆಸರೆ ಬಯಸುವ ದೇಹ… ಪ್ರೀತಿಗಾಗಿ ಕಾತರಿಸುವ ಕಂಗಳು… ನಗುವ ಹುಡುಕಿ ಬಿರಿಯಲೆಳಸುವ ಬೊಚ್ಚು ಬಾಯಿ‌.. ‌ಹೃದಯದಾಳದಿಂದ ಬಂದರೂ ನಾಲಿಗೆಯಡಿಯಲ್ಲಿ ಹೇಳಬಯಸುವ ನುಡಿಗಳು ...

 • 1 week ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...


Editor's Wall

 • 15 February 2018
  6 days ago No comment

  ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…

                      ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?   ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ...

 • 12 February 2018
  1 week ago No comment

  ಇಳಿಸಂಜೆಯ ಪ್ರೀತಿ

  ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.   ಅವರಿಬ್ಬರೂ ಅಂದು ಜೊತೆಯಾಗಿದ್ದರು. ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ...

 • 11 February 2018
  1 week ago One Comment

  ತ್ಯಾಗಮಯಿ ತಾಯಿ ಕನಲಿದಳೇ ಎಂದು ಕೇಳುವವರಿಲ್ಲ…

    ವ್ಯಾವಹಾರಿಕ ಅಗತ್ಯವಾಗಿ ಮಾತ್ರವೇ ಹೆಣ್ಣನ್ನು ನೋಡುವ ಜಾಯಮಾನ ಕೊನೆಗಾಣುವವರೆಗೂ ಪುರುಷ ಪ್ರಧಾನ ವ್ಯವಸ್ಥೆ ತನ್ನ ಕೇಡುಗಾಲವನ್ನು ಆಹ್ವಾನಿಸುತ್ತಲೇ ಇರುತ್ತದೆ.     ಒಂದು ವರದಿಯನ್ನೋದುತ್ತಿದ್ದೆ. ಚೀನಾಕ್ಕೆ ಸಂಬಂಧಿಸಿದ್ದು. ತನ್ನ ಇವತ್ತಿನ ಜನಸಂಖ್ಯೆಯಲ್ಲಿ ಸೇರಿರಬೇಕಿದ್ದ 6 ಕೋಟಿ ಮಹಿಳೆಯರನ್ನು ಕಳೆದುಕೊಂಡಿದೆ ಆ ದೇಶ. ಅಲ್ಲೀಗ ಮದುವೆಗೆ ಬೆಳೆದುನಿಂತ ಯುವಕರಿಗೆ ಹುಡುಗಿಯರೇ ಇಲ್ಲ. ಇಂಥದೊಂದು ವಿಪರೀತಕ್ಕೆ ಕಾರಣವಾದದ್ದು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿ. ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ...

 • 11 February 2018
  1 week ago No comment

  ನಿಮಗಿಂತ ಹೆಚ್ಚು ನಿರ್ಜೀವ

          | ಕಮಲಾದಾಸ್ ಕಡಲು       ಇಂದಿರಾಗಾಂಧಿ ಬಿಟ್ಟರೆ… (Next to Indira Gandhi) ಕಮಲಾದಾಸ್ ಕವಿತೆಯ ಅನುವಾದ       ಇಂದಿರಾಗಾಂಧಿಯನ್ನು ಬಿಟ್ಟರೆ, ನಾನು ಅತಿ ಹೆಚ್ಚು ಹೆದರಿದ್ದು ನನ್ನ ಅಪ್ಪನಿಗೆ ಮಾತ್ರ ನಾನು ಐದು ವರ್ಷದವಳಿರುವಾಗ ಅವರೇ ನನಗೆ ಹೇಳಿದ್ದು ಕಪ್ಪು ಮಕ್ಕಳು ಬಿಳಿಬಣ್ಣದ ಬಟ್ಟೆಗಳನ್ನು ಮಾತ್ರ ತೊಡಬೇಕೆಂದು. ಬೆಳೆಯುವ ದಿನಗಳಲ್ಲಿ ಕಳೆದುಹೋದಂತಿರುತ್ತಿದ್ದ, ಬಡಕಲಾಗಿದ್ದ, ಹಲ್ಲಿಗೆ ಕ್ಲಿಪ್ ...

 • 08 February 2018
  2 weeks ago No comment

  ಇದು ಕ್ರಾಂತಿ ಪರ್ವ

                    ಪ್ಯಾಸಿಸ್ಟ್ ನೀತಿಯೆಡೆಗೆ ಆಡಳಿತ ವೈಖರಿ ಹೊರಳುತ್ತಿದೆ ಎನ್ನುವಾಗ ಕ್ರಾಂತಿಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಎನ್ನುವುದನ್ನು ಮನದಟ್ಟು, ಮಾರ್ಗದರ್ಶನ ಮಾಡಿಸಬೇಕಾದವರೇ ಹೋರಾಟಕ್ಕೆ ತಣ್ಣೀರು ಹೊಯ್ಯೊತ್ತಿರಬಹುದೇ ಎನ್ನುವ ಗುಮಾನಿ ಕಾಡದಿರುವುದಿಲ್ಲ.   ಮೊನ್ನೆ ಮನ್ಸೋರೆ (ಮಂಜುನಾಥ ಸೋಮಕೇಶವ ರೆಡ್ಡಿ) ನಿರ್ದೇಶನದ ‘ಹರಿವು’ ಚಿತ್ರ ನೋಡುವಾಗ ಅದೆಷ್ಟು ಸಲ ಕನ್ನಡಕ ತೆಗೆದು ಕಣ್ಣೊರೆಸಿಕೊಂಡೆನೋ! ಆಶಾ ಬೆನಕಪ್ಪ ಅವರು ಪ್ರಜಾವಾಣಿಯಲ್ಲಿ ಬರೆದ ...