Share

ಬಾಲ್ಯದ ನೆನಪು – ಪ್ರೇಮ ಪರಿಮಳ
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

 

 

 

 

 

 

 

 

 

ಬಾಲ್ಯ ಬಂಗಾರ

 

ಫೆಬ್ರುವರಿ 14. ಪ್ರೇಮಿಗಳ ಹೃದಯ ಬಡಿತ, ಮನದ ಮಿಡಿತ, ಪ್ರೇಮ ಕಂಪನಗಳು, ನಿವೇದನೆಗಳು ಪುಂಖಾನುಪುಂಖವಾಗಿ ಮೊಳಗಿ ಬೆಳಗಿ ಯುವ ಹೃದಯಗಳು ಪ್ರೇಮದ ಮತ್ತಿನಲ್ಲಿ ಮಾಯಾ ಲೋಕದ ಗುಂಗಿನಲ್ಲಿ ಜೀವನ ಇದೇ ಎಂದು ಭ್ರಮಾಧೀನರಾಗಿ ಸಂತಸ ಪಡುವ ದಿನ.

ಪ್ರೇಮ ಅವರ್ಣನೀಯ ಭಾವ. ಬಹುಶಃ ಮಾತಿಗೆ ಆ ಭಾವವನ್ನು ಪೂರ್ತಿಯಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಇದು ಇಂದಿನ ನಿನ್ನೆಯ ಭಾವವಲ್ಲ. ಮಾನವ ಸಂತತಿಯ ಉಗಮದಿಂದಲೂ ಒಡಮೂಡಿದ ಜೀವಸೆಲೆ. ನಮ್ಮ ಬಾಲ್ಯದ ದಿನಗಳಲ್ಲಿ ಯೌವನಕ್ಕೆ ಬಂದ ಯುವ ಜೋಡಿಗಳ ಇಂತಹ ಪ್ರೇಮ ಸನ್ನಿವೇಶಗಳ ಕಂಡ ದಿನಗಳ ಕುರಿತು ಹೇಳಬೇಕೆನಿಸುತ್ತಿದೆ. ಹಳ್ಳಿಗಳಲ್ಲಿ ಪ್ರೇಮ ವ್ಯವಹಾರಗಳು ಬಹುಶಃ ಪಟ್ಟಣದಷ್ಟು ರಾಜಾರೋಷವಾಗಿ ನಡೆಯದಿದ್ದರೂ ಅಲ್ಲಿಯೂ ಪ್ರೇಮ ವಿವಾಹಗಳು ಪ್ರಸಂಗಗಳಿಗೇನೂ ಕೊರತೆಯಿಲ್ಲ.

ಪ್ರಾಯದ ದಿನಗಳಲ್ಲಿ ಪ್ರೇಮ ಎಂಬುದು ಸರ್ವೆಸಾಮಾನ್ಯ ಸಂಗತಿ. ಹಾಗೆ ನಮ್ಮ ಮನೆಯ ಹತ್ತಿರವೇ ಇದ್ದ ನಾಗು ಮನೆಯ ಗಣಪಗೂ ಅವರ ಮನೆಯಿಂದ ನೂರು ಅಡಿ ಅಂತರದಲ್ಲಿದ್ದ ಶುಕ್ರಿ ಮಗಳು ಬೊಮ್ಮಿಗೂ ಅದು ಹೇಗೋ ಆಕರ್ಷಣೆ ಶುರುವಾಗಿತ್ತು. ಬಿಳಿಯ ಬಣ್ಣದ ಆದರೆ ಕುಳ್ಳ ದೇಹದ ಆಕೆಗೆ ಕರಿಯನಾದರೂ ಅತಿ ಆಕರ್ಷಕನಾಗಿದ್ದ ಕಟ್ಟುಮಸ್ತಾದ ಗಣಪ ಹೇಳಿ ಮಾಡಿಸಿದ ಜೋಡಿ ಹಾಗಿದ್ದ. ಗಣಪನೇ ಮೈಮೇಲೆ ಬಿದ್ದು ಬಿದ್ದು ಒಲಿಸಿಕೊಳ್ಳಲು ಶತಾಯಗತಾಯ ಹಿಂದೆ ಬಿದ್ದಿದ್ದ. ಇದು ನಮಗೆಲ್ಲಾ ತಿಳಿದ ವಿಷಯವೇ ಆಗಿತ್ತು. ತೆಂಗಿನಗಿಡಗಳಿಗೆ ಗೊಬ್ಬರ ಹಾಕಲು ಬಂದಾಗಲೆಲ್ಲಾ ಅವಳ ಸುತ್ತ ಗಸ್ತು ತಿರುಗುತ್ತ, ಅವಳಿಂದಲೇ ಗೊಬ್ಬರ ಬುಟ್ಟಿಯ ತಲೆಗೆ ವರ್ಗಾಯಿಸಿಕೊಳ್ಳುತ್ತ ಆಕೆ ತನ್ನ ನೋಡಿದರೆ ಸಾಕು ಎಂಬ ಹಪಾಹಪಿಯಲ್ಲಿ ಕಾಯ್ದು ಸುಸ್ತಾಗುತ್ತ ಇರುತ್ತಿದ್ದರೆ ಅದನ್ನು ಉಳಿದವರು ಸೂಕ್ಷ್ಮವಾಗಿ ಗೃಹಿಸಿದ್ದರು. ಹೀಗೆ ಹತ್ತು ಹಲವು ಕಸರತ್ತುಗಳ ಮಾಡುತ್ತಿದ್ದ ಆತ ರಸಿಕ ಮಹಾಶಯನೇಆಗಿದ್ದ. ಇಪ್ಪತ್ತೆರಡರ ಆತ ಹದಿನೆಂಟು ಹತ್ತೊಂಬತ್ತರ ಬೊಮ್ಮಿ ಒಂದೇ ಜನಾಂಗ. ಹೀಗಿದ್ದೂ ಆಕೆ ಒಪ್ಪಿಕೊಳ್ಳುತ್ತಿರಲಿಲ್ಲ. ಕಾರಣ ಆ ಜನಾಂಗಗಳಲ್ಲಿ ನಮ್ಮಲ್ಲಿ ಜಾತಕ ನೋಡಿದಂತೆ ಬಳಿ ನೋಡುತ್ತಿದ್ದರು. ಒಂದೇ ಬಳಿಯ ಹೆಣ್ಣುಗಂಡಿಗೆ ಮೇಳಾಮೇಳ ಸರಿಯಾಗುವುದಿಲ್ಲ, ಅವರು ಒಂದೇ ಕುಟುಂಬವೆಂದು ಪರಿಗಣಿಸಿ ಸಂಬಂಧ ಮಾಡುತ್ತಿರಲಿಲ್ಲ. ಅದರಲ್ಲೂ ಬೊಮ್ಮಿ ಸ್ವಲ್ಪ ಮುಜುಗರದ ಸ್ವಭಾವದ ಮುಗ್ಧ ಹುಡುಗಿ. ಆತನ ಕಸರತ್ತುಗಳ ನೋಡಿಯೂ ತನಗೇನೂ ತಿಳಿಯದಂತೆ ನಟಿಸಿ ದಿನವನ್ನು ಸಾಗಹಾಕುತ್ತಿದ್ದಳು.

ನಮ್ಮ ಮನೆಯ ಹಿಂದೆ ಇರುವ ಹಳ್ಳಕ್ಕೆ ಬಟ್ಟೆ ಒಗೆಯಲು ಬೊಮ್ಮಿ ಆಗಾಗ ಬರುತ್ತಿದ್ದಳು. ಅದು ಹೆಚ್ಚುಕಮ್ಮಿ ಇದೇ ಕಾಲ. ಆ ದಿನ ನಾವು ಕಾಡಿನಲ್ಲಿ ಬೆಳೆಯುವ ಮುಳ್ಳಹಣ್ಣು ಕರಚುಂಜಿ ಹಣ್ಣು ಆಯಲು ಹೋಗಿದ್ದೆವು. ಆಕೆ ಬಟ್ಟೆ ಒಗೆಯುತ್ತಿದ್ದಳು. ಅದೇ ಆತನು ಅಲ್ಲಿಗೆ ಬಂದಿದ್ದ. ಆದರೆ ಅವರಿಬ್ಬರೂ ನಮ್ಮನ್ನು ಕಂಡಿರಲಿಲ್ಲ. ಆಕೆಯ ಹಿಂಬಾಲಿಸಿ ಬಂದ ಆತ ಪ್ರೇಮಭಿಕ್ಷೆ ಬೇಡುತ್ತಿದ್ದ. “ಏ, ಬುಮ್ಮಿ, ಇಲ್ನೋಡೆ, ನನ್ನುಂಚರಿಗೆ ನೋಡೆ, ಏ, ನಾನ ನಿನ್ನ ಮ್ಯಾಲೆ ಜೀಂಮಾನೆ ಇಟ್ಕಂಡಿ. ಇದೈ ನೀ ಹೂಂ ಅನ್ದೀರೆ ನಾ ಇಲ್ಲೆ ಹಳ್ಳದಲ್ಲೇ ಪಾಶ ಹಾಕಣ್ತಿ ನೋಡೆ” ಎಂದು ಹೆದರಿಸುತ್ತಿದ್ದ. ನಮಗೋ ಅದು ಮೋಜು. ಮುಸಿ ಮುಸಿ ನಗುತ್ತ ಬಾಯಿಗೆ ಕೈ ಅಡ್ಡ ಇಟ್ಟು ಕದ್ದು ನೋಡುತ್ತಿದ್ದವು. ನಾನು, ನನ್ನ ಅಕ್ಕ. ಯಾರೂ ಇಲ್ಲದಿದ್ದಾಗಲೂ ಆಕೆ ಸಭ್ಯೆಯಾದರೂ ಧೈರ್ಯಸ್ಥೆ, ಆತನ ಜರಿಯತೊಡಗಿದಳು.

“ಏ, ಹೋಗಾ, ಮಂಗನ ಮುಸಡ್ಯವ್ನೇ, ದಿನಾ ದಿನಾ ಸಾಯ್ಲೆ ಅಂದಂಡ ಸುಮ್ನಿದ್ರೆ ನಿಂದು ಜೋರೆ ಆಯತ. ನಮ್ಮಪ್ಪಗೆ ಹೇಳ್ತಿ ತಡಿ. ನಿಂಗೇನ ಬ್ಯಾರೆ ಕೆಲ್ಸಿಲ್ಲಾ. ನಾನೇ ಸಿಕ್ಕಿನೇ ನಿಂಗೆ, ಮದಿಯಾಗುಕೆ. ಬ್ಯಾರೆಯಾರ್ನರೂ ನೋಡ್ಕಾ” ಎಂದು ತಿವಿದು ಹೇಳಿದರೂ ಆತ ಅಂಗಲಾಚುತ್ತಲೇ ಇದ್ದ. ಆದೇ ಹೊತ್ತಿಗೆ ನಮ್ಮ ಇರುವಿಕೆ ಅದ್ಹೇಗೋ ಅವರಿಗೆ ಗೊತ್ತಾಗಿ ಗಣಪ ನಾಚಿಗೆ ಮಾಡಿಕೊಂಡು ಹೊರಟು ಹೋದರೆ ಬೊಮ್ಮಿ ನಮ್ಮೊಂದಿಗೆ ಕುಶಲೋಪರಿಯ ಮಾತಿಗೆ ನಿಂತಳು. ಇದಾಗಿ ಕೆಲವು ಕಾಲದಲ್ಲೆ ಆತ ಆಕೆಯನ್ನು ಎಲ್ಲರ ಒಪ್ಪಿಗೆ ಪಡೆದು ಮದುವೆಯೂ ಆಗಿಹೋಯ್ತು. ನಮಗಿಂತ ಏಳೆಂಟು ವರ್ಷಕ್ಕೆ ಹಿರಿಯಳಾದ ಆಕೆ ಈಗ ಮಗಳ ಮದುವೆಯ ಮಾಡಿ ಮೊಮ್ಮಗನೂ ಆಗಿ ಅಜ್ಜಅಜ್ಜಿಯಾಗಿ ಸಂತಸದಿಂದ ಇದ್ದಾರೆ. ಇದೊಂದು ಆದರ್ಶ ಪ್ರೇಮ ವಿವಾಹವೆಂದೆ ಹೇಳಬೇಕು.

ಇನ್ನು ಒಂದು ಸಂಗತಿ ಎಂದರೆ ನಮ್ಮ ಶಾಲೆಯ ಪ್ರೇಮ ಪುರಾಣ. ಇಬ್ಬರು ಪುರುಷರು, ಐದು ಮಹಿಳಾ ಮಣಿ ಶಿಕ್ಷಕರ ಹೊಂದಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಮ್ಮದು. ಹೆಡ್ ಮಾಸ್ಟರ್ ಹಾಗೂ ಇನ್ನೊಬ್ಬ ಸರ್ ಅಷ್ಟೇ ಇದ್ದು ಉಳಿದವರು ಮಹಿಳೆಯರು. ಹೆಡ್ ಮಾಸ್ಟರ್ ಆಡಳಿತದ ದೇಖರೇಕದಲ್ಲಿ ತಲ್ಲಿನರಾಗಿದ್ದು ಆಗಾಗ ತನ್ನ ತರಗತಿಗಳ ಕಡೆಗೆ ಗಮನ ಕೊಟ್ಟು ಆದರ್ಶ ವ್ಯಕ್ತಿತ್ವ ಹೊಂದಿದ್ದರೆ ಈ ಸಹ ಶಿಕ್ಷಕರೋ ವಿವಾಹಿತನಾಗಿದ್ದು ಶ್ರೀಕೃಷ್ಣನ ಅಪರಾವತಾರ. ಮಹಿಳಾ ಮಣಿಗಳಲ್ಲಿ ಇಬ್ಬರು ಸದ್ಗೃಹಸ್ಥ ಶಿಕ್ಷಕಿಯರಾಗಿದ್ದರು. ನಮಗೆಲ್ಲಾ ಅಚ್ಚುಮೆಚ್ಚಿನ ಶಿಕ್ಷಕಿಯರು. ಇನ್ನೊಬ್ಬರು ಅವಿವಾಹಿತ ಸ್ತ್ರೀರತ್ನ. ಇನ್ನೊಬ್ಬರಂತೂ ವಿವಾಹಿತೆಯಾಗಿದ್ದರೂ ಶ್ರೀಕೃಷ್ಣನ ರಾಧೆಯಾಗಬಯಸುವವರು. ಇನ್ನೊಬ್ಬ ಶಿಕ್ಷಕಿ ಐವತ್ತರ ಆಸುಪಾಸಿನ ಸಂಗ್ಯಾಬಾಳ್ಯಾ ನಾಟಕದ ಪಾರಮ್ಮನ ಪಾತ್ರದಂಥವಳು.

ಹೀಗಿದ್ದೂ ಪಾಠ ಪ್ರವಚನಗಳು ಚೆನ್ನಾಗಿಯೇ ನಡೆಯುತ್ತಿದ್ದವು. ಕಾರಣ ಮುಖ್ಯಾಧ್ಯಾಪಕರ ಕಟ್ಟುನಿಟ್ಟಿನ ಶಿಸ್ತುಬದ್ಧ ಆಡಳಿತ ವ್ಯವಹಾರ. ಆಗೆಲ್ಲ ಟೀಚರುಗಳು ಮಕ್ಕಳಿಂದಲೇ ಶಾಲೆಯಲ್ಲೇ ಚಹಾ ಮಾಡಿಸುತ್ತಿದ್ದರು. ನಮಗೆಲ್ಲಾ ಅದು ಅತಿದೊಡ್ಡ ಭಾಗ್ಯ. ಚಹಾ ಮಾಡಿಕೊಟ್ಟು ಪಾತ್ರೆ ತೊಳೆದು ಕೃತಾರ್ಥರಾಗಲು ಹವಣಿಸುತ್ತಿದ್ದೆವು. ಆರು ಏಳನೇ ತರಗತಿಯ ಮಕ್ಕಳು ಮಾತ್ರ ಈ ಕೆಲಸ ಮಾಡುತ್ತಿದ್ದರು. ಸಕ್ಕರೆ ಟೀ ಪುಡಿತರಲು ಕೆಲವೊಮ್ಮೆ ಅಂಗಡಿಗೆ ಕಳಿಸುವಾಗ ಹೆಣ್ಣು ಶಿಕ್ಷಕಿಯರಿಗೆ ವಿಶೇಷ ಕಾಳಜಿ ವಹಿಸಿ ತಿಂಡಿಗಳ ತಂದುಕೊಟ್ಟು ಅವರ ಮನಸ್ಸನ್ನು ಗೆಲ್ಲುತ್ತಿದ್ದರು ಮೇಷ್ಟ್ರು. ನಾವು ಚಹಾ ಮಾಡಿಕೊಟ್ಟು ಪಿಳಿಪಿಳಿ ಕಣ್ಣುಬಿಟ್ಟು ನೋಡುತ್ತಿದ್ದೆವು ಆಶೆಯಿಂದ. ಆದರೆ ನಮಗದು ಸಿಗುತ್ತಿರಲಿಲ್ಲ ಬೇರೆ ಮಾತು. ಮಕ್ಕಳಿಂದ ಗುಲಾಬಿ ತರಿಸಿ ಅದನ್ನು ಕೊನೆಯ ತರಗತಿಯಲ್ಲಿ ಕುಳಿತಿರುತ್ತಿದ್ದ ಅವಿವಾಹಿತ ಸಂಗೀತಾ ಮೇಡಂಗೆ ತಾನು ಕೊಟ್ಟೆನೆಂದು ಹೇಳಿ ಕೊಟ್ಟುಬರುವಂತೆ ನಮ್ಮನ್ನು ಕಳಿಸುತ್ತಿದ್ದರು ಮೇಷ್ಟ್ರು. ಆದರೆ ನಡುವಿನ ಕೋಣೆಯ ರಾಧಾ ಮೇಡಂಗೆ ಕಾಣದಂತೆ ಎಚ್ಚರ ವಹಿಸಲು ಹೇಳುತ್ತಿದ್ದರು.

ಈ ಸವತಿ ಮಾತ್ಸರ್ಯ ಕೆಲವೊಮ್ಮೆ ಮಹಿಳಾ ಮಣಿಗಳಲ್ಲಿ ವಾಗ್ವಾದಕ್ಕೂ ಕಾರಣವಾಗುತ್ತಿತ್ತು. ಅದೂ ಹೆಡ್ ಮಾಸ್ಟರ್ ಇಲ್ಲದ ದಿನಗಳಲ್ಲಿ. ಕೊನೆಕೊನೆಗೆ ಈ ಪ್ರೇಮ ಸಲ್ಲಾಪ ಎಷ್ಟರತನಕ ಬಂದಿತೆಂದರೆ ನಾವುಗಳು ವಿದ್ಯಾರ್ಥಿ ಬಾಂಧವರೇ ಅವರಿಬ್ಬರ ಕುರಿತು ಕವಿತೆ ಕಟ್ಟುವಷ್ಟು. ನಮ್ಮ ಸರದಿ ಮುಗಿದು ನಾವು ಹೈಸ್ಕೂಲು ಮೆಟ್ಟಿಲು ಏರಿದ್ದೆವು ಆಗ ತಿಳಿದಿತ್ತು. ಮೇಷ್ಟ್ರೂ ಮೊದಲಿನ ಪತ್ನಿಗೆ ಡೈವೋರ್ಸ್ ಕೊಟ್ಟು ಈ ವಿಜಾತಿಯ ಸಂಗೀತಾ ರಮಣಿಯ ಕೈಹಿಡಿದರೆಂದು.

ಮೊದಲ ಪ್ರಸಂಗದ ಆ ಕಶ್ಮಲವಿಲ್ಲದ ಅನಕ್ಷರಸ್ಥ ಪ್ರೇಮಿಗಳ ಬದುಕಿಗೂ, ಕಲಿತು ಸುಸಂಸ್ಕೃತ ಎನಿಸಿಕೊಂಡು ಕಟ್ಟಿಕೊಂಡು ಬಂದವಳ ಬಿಟ್ಟು ಸೌಂದರ್ಯದ ಹಿಂದೆ ಬಿದ್ದ ಆದರ್ಶ ಯುವ ಜನತೆಯ ನೇತಾರರಾಗಬೇಕಿದ್ದ ಮೇಷ್ಟ್ರ ಬದುಕಿಗೂ ಎಷ್ಟೊಂದು ವ್ಯತ್ಯಾಸ. ನಿಜಕ್ಕೂ ಆದರ್ಶಪ್ರಾಯರಾರು? ಪ್ರೇಮವೆಂದರೆ ಏನು?

ಇಷ್ಟೆಲ್ಲಾ ಹೇಳಬಂದ ಸಂದರ್ಭ ಎಂದರೆ ಅದು ಪ್ರೇಮಿಗಳ ದಿನ ತಂದ ಬಾಲ್ಯದ ನೆನಪು. ನಮ್ಮ ಸಂಸ್ಕೃತಿ ಅಲ್ಲ ಎಂದು ಹೇಳುವ ನಾವು ನಿಜಕ್ಕೂ ಅರಿಯಬೇಕಾದ್ದು ಆ ಚರಣೆಗಳಿಂದ ಸಂಸ್ಕೃತಿಯಲ್ಲ. ಮನಸ್ಸಿನಿಂದ ಸುಸಂಸ್ಕೃತಿ. ಯುವಜನತೆ ಅತಿರೇಕದ ವರ್ತನೆಗಳಿಂದ ಈ ದಿನದ ಸೊಗಸನ್ನು ಕಲ್ಮಶಗೊಳಿಸಿಕೊಳ್ಳದೇ ಸ್ಥಿತಪ್ರಜ್ಞೆಯಿಂದ ಶುಧ್ಧ ಪ್ರೇಮ ಸಂಭಾಳಿಸಿದರೆ ಬದುಕು ಹೂವಿನ ಹಾಸು. ಇನ್ನು ಒಂದು ಸಂಗತಿಯೆಂದರೆ ಪ್ರೇಮ ಬದುಕಿನ ಒಂದು ಭಾಗವಷ್ಟೇ. ಅದೇ ಇಡಿಯ ಜೀವನವಲ್ಲ. ಮದುವೆ ಇನ್ನೊಂದು ಆಯಾಮ. ಯಾಕೆಂದರೆ ಕೆಲವರ ಪ್ರೇಮ ನಿವೇದನೆಗಳು ನಿಂದೆಗೆ ಗುರಿಯಾಗಿ, ಪ್ರೇಮವೈಫಲ್ಯಕ್ಕೆ ಒಳಗಾಗಿ ಹತಾಶರಾಗಿ ಹೆತ್ತು ಹೊತ್ತು ಬೆಳೆಸಿದ ಹೆತ್ತವರ ಹೊಟ್ಟೆಗೆ ಉರಿ ಅಟ್ಟಿ ಆತ್ಮಹತ್ಯೆ ಮಾಡಿಕೊಂಡು ಮಹಾತ್ಸಾಧನೆ ಗೈಯುವ ಹೇಡಿಗಳು ಇದ್ದಾರೆ. ಇನ್ನು ತನ್ನ ಪ್ರೇಮವನ್ನು ಒಪ್ಪಿಕೊಳ್ಳಲಿಲ್ಲವೆಂದು ಪ್ರೇಮಿಸಿದ ವ್ಯಕ್ತಿಗೆ ಎಸಿಡ್ ಸುರಿದು ಕುರೂಪಗೊಳಿಸಿ, ಇಲ್ಲ ಸಾಯಿಸಿ ತೃಪ್ತಗೊಳ್ಳುವ ವಿಕೃತ ಪ್ರೇಮಿಗಳು ಇದ್ದಾರೆ. ಅದಕ್ಕೆ ಆದಷ್ಟುಜಾಗೃತಿ ಇರಲಿ. ಜೊತೆಗೆ ಎಲ್ಲ ಕಡೆ ಪ್ರೇಮ ಪಾರಿಜಾತ ಪಲ್ಲವಿಸಲಿ.

“Love is not time’s fool”by William Shakespeare.”

—————

ನಾಗರೇಖಾ ಗಾಂವಕರ

ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆಂಗ್ಲಭಾಷಾ ಉಪನ್ಯಾಸಕಿ. ಕಥೆ, ಕವನಗಳು, ಲೇಖನಗಳು, ವಿಮರ್ಶಾ ಬರಹಗಳ ಮೂಲಕ ಪರಿಚಿತರು. ‘ಏಣಿ’, ‘ಪದಗಳೊಂದಿಗೆ ನಾನು’ ನಾಗರೇಖಾ ಅವರ ಪ್ರಕಟಿತ ಕವನ ಸಂಕಲನಗಳು.

Share

Leave a comment

Your email address will not be published. Required fields are marked *

Recent Posts More

 • 2 weeks ago No comment

  ಕವಿಸಾಲು | ಇಂಡೋನೇಶಿಯಾ

      ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ಜಲ, ಉಸಿರ ಗಾಳಿ ಹುಚ್ಚೆದ್ದು ಕುಣಿದು ಅಪ್ಪಳಿಸಿದ ಆಘಾತಕ್ಕೆ ಕಂಗೆಟ್ಟು ತತ್ತರಿಸಿವೆ ಪ್ರಾಣಿ, ಮನುಜ ಕುಲ ಮಾಡು ಹಾರಿ, ಕಂಬಗಳು ಕುಸಿದು ನೆಲಕಚ್ಚಿವೆ ಮಾನವನ ಬೀಡು ಕತ್ತರಿಸಿ ...

 • 2 weeks ago No comment

  ಕವಿಸಾಲು | ತಡವಿಲ್ಲದಿರಲಿ ಇನ್ನು…

      ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ತಡೆಯ ದಾಟಿ ತಲುಪಬೇಕಿದೆಯಷ್ಟೆ ಬಯಕೆ ಗುರಿಯನ್ನು ದಟ್ಟ ಹಸಿರಿನ ಕಾಡು, ಆಗಸದ ನೀಲಿ ಬಿಳಿಯ ಮೋಡಗಳ, ಬಿಸಿಲ ಬೆಳಕಿನ ನಡುವೆ ಬಯಲ ಸ್ವೇಚ್ಛೆಯ, ತಿಳಿಗಾಳಿ ತವಕದಲಿ ಬಂಧನಗಳ ...

 • 4 weeks ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 month ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 month ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...


Editor's Wall

 • 31 August 2018
  2 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  2 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  2 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  2 months ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  2 months ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...