Share

ಚಹದ ಬಟ್ಟಲಲ್ಲಿ ಪ್ರೀತಿ
ಶ್ರೀದೇವಿ ಕೆರೆಮನೆ

 • Page Views 635
 • ಮುಸ್ಸಂಜೆಯಲ್ಲಿ ನಾನು
  ನಿನ್ನ ನೆನಪಿನಲ್ಲಿ  ಕನವರಿಸುತ್ತಿದ್ದರೆ
  ಅತ್ತ ನೀನು ಈ ಲೋಕಕ್ಕೆ ಸಲ್ಲದ
  ನಿನ್ನ ಅತೀತ ಲೋಕದ ಸಹಚರರೊಂದಿಗೆ
  ಬ್ಲೆಂಡರ್ಸ್ ಪ್ರೈಡ್ ಹೀರುತ್ತಿರುವ ಚಿತ್ರ
  ಮನದ ಕಿಟಕಿಯೊಳಗೆ ತೂರಿ ಬರುತ್ತಿದೆ
  ನನ್ನ ಏಕಾಂತಕ್ಕೆ ಸಾಥ್ ಕೊಡುವ
  ಆತ್ಮ ಸಾಂಗತ್ಯದ ಗೆಳೆಯನೆಂದರೆ
  ಅದು ಹೊಗೆಯೇಳುವ
  ಬಿಸಿ ಚಹಾದ ಬಟ್ಟಲು ಮಾತ್ರ
  ಎನ್ನುವ ಸತ್ಯ ನಿನಗೂ ಗೊತ್ತಿರುವುದರಿಂದ
  ನೀನು ನಿಶ್ಚಿಂತನಾಗಿದ್ದೀಯ
  ಬಾಡಿದ ಮನಸ್ಸನ್ನು   ಛಾಡಿಸಿಕೊಂಡು
  ಬಲವಂತವಾಗಿ ವಾಸ್ತವಕ್ಕೆ ಎಳೆದು ತರಲು
  ಚಹಾ ಮಾಡಿಕೊಳ್ಳುವ ನೆಪ ಹೂಡುತ್ತೇನೆ
  ಸಕ್ಕರೆ ಡಬ್ಬದೊಳಗೆ ಸಿಕ್ಕಿ ಕೊಂಡ ಇರುವೆ
  ಹೊರ ಜಗತ್ತಿನ ಸಂಪರ್ಕ ಕಾಣದೇ
  ಸುತ್ತಿದಲ್ಲೇ ಸುತ್ತುತ್ತ ಸುಖವಾಗಿದೆ
  ಈಗ ನನ್ನೆದುರಿಗಿದ್ದ ಎರಡು ಕಪ್ ಚಹಾದಲ್ಲಿ
  ನನ್ನ ಪಾಲಿನ ಚಹಾವನ್ನು  ಕಪ್ ನ
  ತಳದಲ್ಲಿ ಒಂದಿಷ್ಟೂ ಅಂಟದಂತೆ
  ಹನಿ ಹನಿಯಾಗಿ ಹೀರಿದ್ದೇನೆ
  ನಿನ್ನ ಕುಸುರಿ ಕೆತ್ತಿದ ಪಿಂಗಾಣಿ ಕಪ್ ನ
  ಒಳಗೆ ಬಿಸಿಚಹಾ  ಕೆನೆಗಟ್ಟುತ್ತಿದೆ
  ಇರಲಿ ಬಿಡು,
  ನಿನ್ನ ಬಟ್ಟಲಿನಲ್ಲಿ ಇಣುಕುವ
  ಕೆಂಪು ದ್ರವದಷ್ಟು ಉನ್ಮಾದವನ್ನು
  ಈ ಚಹಾ ನನಗೆ  ಏರಿಸದೇ ಹೋದರೂ
  ನನ್ನ ನೆನಪಿನ ನೋವಿಗೆ ಮುಲಾಮು ಹಚ್ಚಲು
  ಎರಡು ಕಪ್ ಬಿಸಿಚಹಾ ಕೈ ಚಾಚುತ್ತದೆ
  ~
  ಗ್ರಹಿಸದೆಯೂ ಅರಿವಾಗುತ್ತಿದೆ ನನಗೆ
  ಇತ್ತೀಚೆಗೆ ನೀನು ಮಾತು ತಪ್ಪಿಸುತ್ತಿರುವುದು
  ಎದೆಯೊಳಗಿನ ಭಾವನೆಗಳನ್ನೆಲ್ಲ ಕಟ್ಟಿಟ್ಟು
  ದೂರ ಸರಿಯುತ್ತಿರುವುದು ಅರ್ಥವಾಗುತ್ತಿದೆ
  ನಿನ್ನ ಒಂದು ಮಾತಿಗಾಗಿ ಕಾದು
  ಎರಡು ತಿಂಗಳ ಮೇಲೆ
  ಮತ್ತೆ ಇಪ್ಪತ್ತಾರು ದಿನಗಳೇ ಕಳೆದು ಹೋದವು
  ಮನವಿರದ ಮಾತಿಗೆ ಈ ನಿಸ್ಸಂತುವಾದರೂ
  ಅದೆಷ್ಟೆಂದು  ಜೀವಕೊಡಲಾದೀತು?
  ಕಳಿಸಿದ ಸಂದೇಶಕ್ಕೆ ಉತ್ತರ ಪಡೆಯಲೂ
  ಈಗೀಗ ಇಪ್ಪತ್ನಾಲ್ಕು ಗಂಟೆಗಳ ಗಡುವು
  ಕಳೆದ ದಿನಗಳ ವೈಭವವ ನೆನೆಸುತ್ತ
  ನಿಟ್ಟುಸಿರು ಎದೆಯೊಳಗೆ ದಮ್ಮು ಕಟ್ಟಿದೆ
  ಗಂಟೆಗೊಮ್ಮೆಯಾದರೂ ಫೋನಾಯಿಸುತ್ತಿದ್ದ
  ಹೊಸತರಲ್ಲಿನ ನಿನ್ನ ಉನ್ಮಾದಕ್ಕೆ
  ಕೆಲಸವೆಂಬ ನೆಪದ ಆಣೆಕಟ್ಟನ್ನು
  ನೀನೇ ಬಲವಂತವಾಗಿ ಕಟ್ಟಿಕೊಂಡಿದ್ದೇನೂ
  ಈಗ ಗುಟ್ಟಾಗಿ ಉಳಿದಿಲ್ಲ
  ಆದರೂ ಒಂದು ಸಮಾಧಾನವಿದೆ
  ನಿನ್ನ ಎಡಬಿಡದ ಕೆಲಸದ ನಡುವೆಯೂ
  ತಾಸಿಗೊಮ್ಮೆ ನೀನು ಬಿಸಿ ಚಹಾ ಹೀರುವ
  ಸುದ್ದಿ ನಿನ್ನೂರಿಂದ ತೇಲಿ ಬಂದಿದೆ
  ನೀನೆಷ್ಟೇ  ನಿರಾಕರಿಸಿದರೂ
  ಬಿಸಿಚಹಾದ ಒಳಗಿಂದ ಏಳುವ ಹಬೆಯನ್ನು
  ನೀನು ಆಸ್ವಾದಿಸುವ ಪರಿಯೇ
  ನಿನ್ನೊಳಗೆ ಇನ್ನೂ ನಾನಿರುವ  ಗುಟ್ಟನ್ನು
  ಮುಚ್ಚಿಡಲು ಯತ್ನಿಸಿದಷ್ಟೂ  ಬಿಟ್ಟುಕೊಟ್ಟಿದೆ

  ———–————-

  ಶ್ರೀದೇವಿ ಕೆರೆಮನೆ

  shrಉತ್ತರ ಕನ್ನಡದ ಅಂಕೋಲದವರು. ವೃತ್ತಿಯಲ್ಲಿ ಶಿಕ್ಷಕಿ. ಕವಿತೆ, ಅಂಕಣ ಬರಹಗಳಿಂದ ಪರಿಚಿತರು.

  Share

  Related Post

  Related Blogpost

  Leave a comment

  Your email address will not be published. Required fields are marked *

  Recent Posts More

  • 4 hours ago No comment

   ಕೊಂಕಣಿ ಓದುಗರ ಮುಂದೆ ‘ಮಾಜಾರ್ ಅನಿ ಹೆರ್ ಕಥಾ’

   ಮೆಲ್ವಿನ್, ಪೆರ್ನಾಲ್ ಕಾವ್ಯನಾಮದಿಂದ ಕೊಂಕಣಿ ಸಾರಸ್ವತ ಲೋಕದಲ್ಲಿ ಪರಿಚಿತರಾಗಿರುವ ಪ್ರಾಧ್ಯಾಪಕ ಮೆಲ್ವಿನ್ ರಾಜೇಶ್ ಕ್ಯಾಸ್ಟೇಲಿನೊ ಅವರ ಹತ್ತು ಸಣ್ಣಕತೆಗಳ ಸಂಗ್ರಹ ‘ಮಾಜಾರ್ ಆನಿ ಹೆರ್ ಕಥಾ’ ಬಿಡುಗಡೆಗೊಂಡಿದೆ. ಗುಜರಾತ್, ಗಾಂಧಿಧಾಮ್ ಧರ್ಮಪ್ರಾಂತ್ಯದ ವಂ| ನೆಲ್ಸನ್ ಡಿ’ಸೊಜಾ ಮತ್ತು ಕೊಂಕಣಿ ಸಾಹಿತಿ ಮತ್ತು ಕಲಾವಿದರ ಸಂಘಟನೆ ಅಧ್ಯಕ್ಷ ಶ್ರೀ ರೊನಾಲ್ಡ್ ಜೆ. ಸಿಕ್ವೇರಾ ಅವರು 14 ಅಕ್ತೋಬರ್ 2017ರಂದು ಕೃತಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಲೇಖಕ ಮೆಲ್ವಿನ್ ಪೆರ್ನಾಲ್, ಅದ್ದೂರಿ ...

  • 17 hours ago No comment

   ಗೌರಿ ಲಂಕೇಶ್ : ಒಂದು ನಿಷ್ಕಲ್ಮಷ ಕಥನ

   ಗೌರಿ ಲಂಕೇಶ್ ಹತ್ಯೆ ಒಂದೆಡೆ ಎಂಥ ವಿಷಮ ಸ್ಥಿತಿಯಲ್ಲಿ ಈ ಸಮಾಜ ಸಿಲುಕಿದೆ ಎಂಬುದನ್ನು ತೋರಿಸುತ್ತಿದ್ದರೆ, ಇನ್ನೊಂದೆಡೆ ಅವರ ಆದರ್ಶವಾದ ಗೊತ್ತಿದ್ದವರಿಗೆ, ಅವರ ಒಡನಾಡಿಗಳಿಗೆ ಒಂದಿಡೀ ಸಾಂಸ್ಕೃತಿಕ ಕಥಾನಕವೇ ನೆನಪಾಗಿ ಕಾಡುತ್ತಿದೆ. ಲಂಕೇಶ್ ಒಡನಾಡಿಯಾಗಿದ್ದು, ಗೌರಿ ಅವರೊಂದಿಗೂ ಅದೇ ಆಪ್ತತೆ ಹೊಂದಿದ್ದ ಎಂಎಲ್‍ಸಿ ಮೋಹನ್‍ಕುಮಾರ್ ಕೊಂಡಜ್ಜಿ ಅಂಥ ಒಂದು ಸಾಂಸ್ಕೃತಿಕ ಕಥಾನಕವನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಬಣ್ಣವಿಲ್ಲದ, ಕಲ್ಮಷವಿಲ್ಲದ ಈ ನೆನಪುಗಳಲ್ಲಿ ಮೂಡಿರುವ ಗೌರಿ ಚಿತ್ರ ವಿಭಿನ್ನವಾಗಿದೆ. ಓದಲೇಬೇಕಾದ ಬರಹ. ...

  • 1 day ago No comment

   ಒಂದು ಗಜಲ್; ಒಂದು ಗೆಜ್ಜೆ

   ಒಂದು ಗಜಲ್ ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ ಮಧುರ ನೆನಪುಗಳೂ ಎದೆ ಕೊರೆದಾವೆಂಬ ಅರಿವಿರಲಿಲ್ಲ ನನಗೆ ಸುಖದ ಗಳಿಗೆಗಳೂ ಕೊರಳೊತ್ತಿ ಸಾಯಿಸುವವೆಂದು ತಿಳಿದಿರಲಿಲ್ಲ ನನಗೆ ಹೊಳೆದಂಡೆಯ ಪಿಸುಮಾತೂ ಲೋಕದ ತುಂಬ ಹಬ್ಬೀತೆಂದು ಅರ್ಥವಾಗಲಿಲ್ಲ ನನಗೆ ಗಾಳಿಯಲಿ ಹೊಯ್ದಾಡುವ ನಂದಾದೀಪವೂ ಜ್ವಾಲೆಯಾಗಿ ಸುಡುವುದು ತಿಳಿದಿರಲಿಲ್ಲ ನನಗೆ ಜೋಡಿ ಮಂಚದ ಮೆತ್ತನೆಯ ಹಾಸಿಗೆಯೂ ಚುಚ್ಚುವುದೆಂದು ಗೊತ್ತಿರಲಿಲ್ಲ ನನಗೆ ಸುಖದ ಉನ್ಮಾದವಷ್ಟೇ ...

  • 1 day ago No comment

   ಬದುಕು ಬರಿ ಗಿಲೀಟು

   (ಗಜಲ್) ದಾರಿ ಹೋದ ಹಾಗೆ ಸಾಗಿ ಬದುಕು ಬರಿ ಗಿಲೀಟು ಹೊತ್ತು ಬಂದತ್ತ ಬಾಗಿ ಬದುಕು ಬರಿ ಗಿಲೀಟು ಹದ್ದುನೆರಳು ನೆನಪು ಕುಕ್ಕೆ ಕಣ್ಣು ಹುಗಿದು ಕೂತು ತನಗೆ ತಾನೆ ಮೋಸವಾಗಿ ಬದುಕು ಬರಿ  ಗಿಲೀಟು ಥಳುಕಿನ ಸಂತೆಗಳಲ್ಲಿ ನಮ್ಮತನವ ಮಾರಿ ಲಾಲಿ ಹುಸಿಗೆ ತಲೆಯ ತೂಗಿ ಬದುಕು ಬರಿ ಗಿಲೀಟು ತುಟಿಸಿಗದ ಕನಸಹಾಡು ಉರಿದು ಉಗಿದು ಬೂದಿ ಮಾಗಿಹಿಮದಿ ಕೆಂಡ ಕರಗಿ ಬದುಕು ಬರಿ ಗಿಲೀಟು ಜೊತೆಜೊತೆಯಲೆ ...

  • 2 days ago One Comment

   ನಾನು ಮತ್ತು ನೀನು

   ಜಾರಿಸಿ,ಚಿಮ್ಮಿಸಿ ಸುರಿಸಿ,ಹನಿಸಿ ಧುಮ್ಮಿಕ್ಕಿ ಬೋರ್ಗರೆದು ಜುಳುಜುಳುನೆ ನಕ್ಕು ನಲಿದ ನಿನ್ನೊಲವಿನ ಮಿಡಿತಕ್ಕೆ ರೂಪು ನಾನು *** ತೇಲಿದ್ದು, ಮುಳುಗಿದ್ದು ಅಲೆಗಳಲ್ಲಿ ಅನುರುಣಿಸಿದ್ದು ಆಳದಲಿ ಮುಳುಗಿ ಮಲಗಿದ್ದು ನಿನ್ನೆಲ್ಲ ಗುಟ್ಟುಗಳ ಗೌಪ್ಯದಿ ಕರಗಿಸಿ, ಅರಗಿಸಿಕೊಂಡು ಶಾಂತದಿ ಹರಿವ ನದಿಯು *** ನಿನ್ನೆ ಜಾರಿದ್ದು, ಇಂದು ಹರಿದದ್ದು, ನಾಳೆ ಧಾವಿಸಿ ಬಿಗಿದಪ್ಪುವುದು ವ್ಯತ್ಯಾಸವಿಲ್ಲದೆ ಕಾಲಗಮ್ಯವ ಕಡೆಗಣಿಸಿದ ಅನವರತ ಕನಸು *** ಆಳ ತಿಳಿಯದ ಅರ್ಥಕ್ಕೆ ಸಿಗದ ನೋಟದ ಅಳತೆಗೆ ದಕ್ಕದ ನಡೆದ ...


  POPULAR IN CONNECTKANNADA

  Type in
  Details available only for Indian languages
  Settings
  Help
  Indian language typing help
  View Detailed Help