Share

ಕಥೆ ಕಥೆ ಕಾತ
ಈಶ್ವರ ದೈತೋಟ ಕಾಲಂ

ಕೇರಳದ ತೋಟದ ಬಯಲಿನ ಶಾಲೆಯ ಮೊದಲ ತರಗತಿಗಳಲ್ಲಿ ಪಾಠ ಕಲಿತುದು ಈಶ್ವರ ನಾಯಕರು ಎಂಬ ರಾಷ್ಟ್ರಪ್ರಶಸ್ತಿ ವಿಜೇತ ಅಧ್ಯಾಪಕರಿಂದ. ಅವರು ಅಕ್ಷರಾಭ್ಯಾಸ ಮಾಡಿಸಿ, ನನ್ನನ್ನು ಬುದ್ಧಿ ಹೇಳಿ ತಿದ್ದಿತೀಡಿದವರು.

ಪುತ್ತೂರಿನ ಹೈಸ್ಕೂಲಿಗೆ ಬಂದಾಗ, ನಾಗರಬೆತ್ತವನ್ನು ಕೈಯಲ್ಲಿ ಹಿಡಿದುಕೊಂಡಿರುತ್ತಿದ್ದರೂ, ಒಮ್ಮೆಯೂ ಪ್ರಯೋಗಿಸದೆ ಬದುಕಿನ ಶಿಕ್ಷಣವಿತ್ತವರು ಹೆಡ್ಮಾಸ್ಟರ್‍ ಡೆನ್ನಿಸ್ ಡಿ’ಸೋಜಾರು. ಇಂಗ್ಲೀಷ್ ಬಗ್ಗೆ ನನ್ನಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದವರೂ ಅವರೇ.

ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಜರ್ನಲಿಸಂನ ಗುಡ್ ನ್ಯೂಸ್ ಸ್ಟೋರಿಗಳನ್ನು ಬರೆಯಬೇಕಾದರೆ ಕಣ್ಣು ಕಿವಿಗಳನ್ನು ತೆಗೆದಿರಿಸಿಕೊಂಡಿರಬೇಕು, ಕಳಕಳಿಯ ಹೃದಯವಿಟ್ಟುಕೊಂಡಿರಬೇಕು ಎಂದು ತಿಳಿವಳಿಕೆ ನೀಡಿದವರು ಪ್ರೊ. ಸೈಯ್ಯದ್‍ ಇಕ್ಬಾಲ್‍ ಖಾದ್ರಿಯವರು.

ಒಟ್ಟಾರೆ ಬದುಕನ್ನು ಹಾಗೂ ಆರಿಸಿಕೊಂಡ ವೃತ್ತಿಯನ್ನು ಕರಗತ ಮಾಡಿಕೊಳ್ಳುವುದಕ್ಕೆ ಈ ಮೂವರು ಮಹಾನುಭಾವರುಗಳೂ ನನಗೆ ದಾರಿ ತೋರಿದವರು. ಅವರೆಲ್ಲರಿಂದ ಕಲಿತವಲ್ಲದೆ ಅಡುಗೂಲಜ್ಜಿ, ಜಾನಪದ, ಪೌರಾಣಿಕ, ವೈಜ್ಞಾನಿಕವೆಂದು ಕೇಳಿ ನೆನಪಿಟ್ಟುಕೊಂಡ ಕಥೆಗಳು ಅನೇಕವಿವೆ.

ಜೀವರಹಸ್ಯ: ಒಂದಾನೊಂದು ಕಾಲದಲ್ಲಿ ಬ್ರಹ್ಮಾಂಡದ ನಾಲ್ಕು ಪ್ರಮುಖ ದೇವತೆಗಳು ಸಭೆ ಸೇರಿ ಜೀವರಹಸ್ಯ ಕಾಪಾಡಿಕೊಳ್ಳುವುದು ಹೇಗೆಂದು ಚಿಂತನೆ ನಡೆಸಿದರಂತೆ. ಈ ರಹಸ್ಯ ಅಪಾತ್ರರ, ಅದರಲ್ಲೂ ಮಾನವರ ಕೈಗೆ ಸಿಗಬಾರದೆಂಬುದೇ ಅವರ ಆತಂಕವಾಗಿತ್ತು.
ಮೊದಲನೇ ದೇವತೆ, ನಾವದನ್ನು ಅತ್ಯಂತ ಎತ್ತರದ ಪರ್ವತದಲ್ಲಿ ಅಡಗಿಸಿಟ್ಟರೆ ಅವರಾರಿಗೂ ಸಿಗದು ಎಂದಾಗ “ಅಲ್ಲಲ್ಲ, ಇವತ್ತಲ್ಲದಿದ್ದರೆ ನಾಳೆಯಾದರೂ ಮಾನವರು ಅಲ್ಲಿಗೆ ತಲುಪಿ ಹಿಡಿತಕ್ಕೆ ತೆಗೆದುಕೊಂಡು ದುರುಪಯೋಗ ಪಡಿಸದೆಇರಲಿಕ್ಕಿಲ್ಲ” ಎಂದ ಎರಡನೇ ದೇವತೆ “ಜೀವರಹಸ್ಯವನ್ನು ನಾವು ಆಳವಾದ ಸಾಗರದಡಿಯಲ್ಲಿ ಅವಿತಿಟ್ಟರೆ ಹೇಗೆ” ಎಂದು ಬುದ್ಧಿವಂತಿಕೆ ತೋರಿದ. “ಅದು ಉಪಯೋಗವಿಲ್ಲ. ಒಂದಲ್ಲ ಒಂದು ದಿನ ಅವರು ಸಾಗರದಡಿ ಶೋಧಿಸದೆ ಬಿಡರು” ಎಂದ ಮೂರನೆಯ ದೇವತೆ “ಚಂದ್ರನಲ್ಲಿ ಗುಟ್ಟಾಗಿ ಇಟ್ಟರೆ ಅವರಿಗೆ ಸುಳಿವೇ ಸಿಗದು” ಎಂದು ಜಾಣ ಸಲಹೆ ಇತ್ತ.

“ಅಯ್ಯೋ ಮಾನವರು ಪ್ರಚಂಡರು, ಯಾವತ್ತಾದರೂ ಚಂದ್ರನಲ್ಲಿಗೆ ಪಯಣಿಸದೆ ಬಿಡರು. ಅಲ್ಲಿ ತಲುಪಿದ ಮೇಲೆ ಅವರದನ್ನು ಕಂಡು ಹುಡುಕದೆ ಬಿಡುತ್ತಾರೆಯೇ” ಎಂದು ಹೇಳಿದ ನಾಲ್ಕನೆಯ ಅತಿಬುದ್ಧಿವಂತ ದೇವತೆ “ನನಗೆ ಗೊತ್ತಿರುವಂತೆ ಮಾನವರಿಗೆ ಹುಡುಕಲಸಾಧ್ಯವಾದ ಒಂದೇ ಒಂದು ಜಾಗವಿದೆ” ಎಂದಾಗ ಯಾವುದು ಅದು ಉಳಿದವರೆಲ್ಲ ಉತ್ಸಾಹಿತರಾಗಿ ಕೇಳಿದರು.

“ಮಾನವರ ಹೃದಯದಾಳದಲ್ಲಿಟ್ಟರೆ ಅವರ ಜನ್ಮಕ್ಕೂ ಅವರಿಗೆ ರಹಸ್ಯ ಗೊತ್ತಾಗದು. ಹೃದಯಾಳ ಹುಡುಕುವ ಬಗ್ಗೆ ಅವರಿಗೆ ಯೋಚನೆಯೂ ಬರದು, ತಾಳ್ಮೆಯೂ ಇರದು” ಎಂದನಂತೆ ನಾಲ್ಕನೆಯದೇವತೆ ನಿಶ್ಚಿಂತೆಯಾಗಿ.

ಏಡಿ ಕಥೆ: ಹಳ್ಳಿಗನೊಬ್ಬ ಪೇಟೆಗೆ ಬಂದನಂತೆ ತನ್ನ ಕೋಳಿಗಳನ್ನೂ, ಏಡಿಗಳನ್ನೂ ಮಾರಲೆಂದು. ಎರಡು ಬುಟ್ಟಿಗಳಲ್ಲಿ, ಕೋಳಿ ಮರಿಗಳ ಬುಟ್ಟಿಗೆ ಭಾರವಾದ ಮುಚ್ಚಳವಿತ್ತು.ಏಡಿಗಳ ಬುಟ್ಟಿಗೆ ರಕ್ಷಣೆಯೇ ಇರಲಿಲ್ಲ. ನಗರದವನೊಬ್ಬನಿಗೆ ಇದು ಆಶ್ಚರ್ಯವೆನಿಸಿತು. ನಿರಪಾಯಕಾರಿ ಕೋಳಿಗೆ ಮುಚ್ಚಳ, ಕಚ್ಚುವ ಏಡಿಗೆ ಮುಚ್ಚಳವಿಲ್ಲ. ಹಾಗೇಕೆ ಎಂದು ಪ್ರಶ್ನಿಸಿದ.

“ಅಷ್ಟೂ ತಿಳಿಯದೇನು, ಒಂದು ಕೋಳಿಮರಿ ಹಾರ ಬಯಸಿದರೆ ಉಳಿದೆಲ್ಲ ಮರಿಗಳೂ ಹಾರತೊಡಗುತ್ತವೆ. ಅದಕ್ಕೇ ಭದ್ರ ಮುಚ್ಚಳ. ಏಡಿಗಳ ಕತೆ ಹಾಗಲ್ಲ. ಒಂದು ತಲೆ ಎತ್ತಿದರೆ ಸಾಕು ಉಳಿದವುಗಳೆಲ್ಲ ಅದರ ಕೈಕಾಲು ಹಿಡಿದು ಕೆಳಕ್ಕೆ ಜಗ್ಗುತ್ತವೆ. ಈ ಜಾತಿಗೆ ಮುಚ್ಚಳವೇಕೆ” ಎಂದನಂತೆ.

ನಮ್ಮ ರಾಜಕಾರಣಿಗಳಿದನ್ನು ಪಟ್ಟಾಗಿ ಕರಗತ ಮಾಡಿಕೊಂಡಿದ್ದಾರೆ! ಅಲ್ಲವೇ?

ಅಲ್ಕೋಹಾಲ್‍ ಕಥೆ : “ತುಂಬಾ ಕುಡಿಯುವ ವಿದ್ಯಾರ್ಥಿಗಳು ತೀರಾ ಕಡಿಮೆ ಗ್ರೇಡುಗಳನ್ನು ಪಡೆಯುತ್ತಾರೆ” ಎಂಬ ಅಧ್ಯಯನ ಕಥೆಯೊಂದು ಆಲ್ಕೋಹಾಲ್ ಒಳ ಹೋಗುವುದಕ್ಕೂ, ಕಲಿತದ್ದು ಒಳ ಹೋಗುವುದಕ್ಕೂ ಹತ್ತಿರದ ಸಂಬಂಧ ಉಂಟೆಂದು ತಿಳಿವಳಿಕೆ ನೀಡಿದೆ.

ಅದರಂತೆ, ವಿದ್ಯಾಭ್ಯಾಸದಲ್ಲಿ ಥರ್ಡ್ ಕ್ಲಾಸ್ ಪ್ರಗತಿ ತೋರಿಸಿರುವ ವಿದ್ಯಾರ್ಥಿಗಳು ವಾರಕ್ಕೆ ಹನ್ನೊಂದು ಬಾರಿ ಕುಡಿಯುತ್ತಾರೆ. ಸೆಕೆಂಡ್‍ ಕ್ಲಾಸು ಪಡೆಯುವವರು ವಾರಕ್ಕೈದು ಬಾರಿ ಹಾಗೂ ಫಸ್ಟ್ ಕ್ಲಾಸ್ ಪಡೆಯುವವರು, ವಾರದಲ್ಲಿ ಮೂರು ಬಾರಿ ಮದ್ಯಪಾನ ಮಾಡುವವರು. ಈ ಕಥೆ ಕೇಳಿದ ಪ್ರತಿಭಾವಂತನೊಬ್ಬ ‘ವಾರಕ್ಕೊಮ್ಮೆ ಕುಡಿದರೆ ರ್ಯಾಂಕ್ ಬಂದೀತೇನೋ’ ಎಂದು ಖುಶಿಯಿಂದ ಕೇಳಿದನಂತೆ.

ಉಲ್ಟಾ ಕಥೆ: ತೆಂಗಿನೆಣ್ಣೆ ಬಳಸಿದರೆ ಕೊಲೆಸ್ಟೊರಾಲ್ ಹೆಚ್ಚಾಗುತ್ತದೆ. ರಕ್ತನಾಳಗಳು ಅಗಲಕಿರಿದಾಗಿ, ಬೈಪಾಸ್ ಸರ್ಜರಿ ಬೇಕಾಗುತ್ತದೆ ಎಂದೆಲ್ಲಾ ಸುದ್ದಿಕಥೆಗಳು ಬಂದಿದೆಯಲ್ಲಾ? ಅವೆಲ್ಲಾ ವಾಣಿಜ್ಯೋದ್ದೇಶದ ಅವೈಜ್ಞಾನಿಕ ಅಪಪ್ರಚಾರವೆಂದು ಅರಿವಾಗಿದೆ. ಈಗ ಕಲ್ಪವೃಕ್ಷದ ಫಲ ಮಹಿಮೆಯೇನೆಂದು ಜನಸಾಮಾನ್ಯ ವೃದ್ಧರಿಗಲ್ಲ, ವೈದ್ಯರುಗಳಿಗೂ ನಿಘಂಟಾಗಿದೆ. ಶರ್ಕರಪಿಷ್ಟ, ಶುದ್ಧೀಕೃತ ಸಕ್ಕರೆಯೇ ತೂಕ ಹೆಚ್ಚಾಗಲು ಮೂಲ ಕಾರಣವೆಂದು ಸಂಶೋಧನೆ ಹೇಳಿದೆ. ವಿವಿಧ ಸಮಾಜಗಳಲ್ಲಿ ಬೊಜ್ಜಿನ ಸಮಸ್ಯೆ ಬಗ್ಗೆ ಬೇರೆ ಬೇರೆ ದೇಶಗಳಲ್ಲಿ ಮಾಡಲಾದ ಆಹಾರಕ್ರಮ ಅಧ್ಯಯನ ಪ್ರಕಾರ, ಕಮ್ಮಿ ಸಕ್ಕರೆ ಸೇವಿಸಿದರೂ ದಪ್ಪಗಾಗಿ ಬಿಡುವುದುಂಟು. ಕಂಡಾಬಟ್ಟೆ ಸಕ್ಕರೆ ತಿಂದವರು ಕಡ್ಡಿ ಪೈಲ್ವಾನರಾಗಿಯೇ ಉಳಿದಿರುವುದೂ ಕಂಡುಬಂದಿದೆಯಂತೆ.

ಸಂಶೋಧನೆ ಅವಿರತ ಅಲ್ಲವೇನು; ಅಂತಿಮ ಎಂಬುದು ಇಲ್ಲವಲ್ಲ! ಕಥೆಗಳೂ ಅಷ್ಟೇ, ಹೊಸತು, ಹೊಸತು ಸೃಷ್ಟಿಯಾಗುತ್ತಲೇ ಇರುತ್ತವೆ, ಇರಬೇಕು ಕೂಡಾ.

———————-

ಈಶ್ವರ ದೈತೋಟ

1ಕರ್ನಾಟಕದ ಅತಿಹೆಚ್ಚು ದಿನಪತ್ರಿಕೆಗಳನ್ನು ಮುನ್ನಡೆಸಿದ ಹಿರಿಮೆ. 1991ರಿಂದ 2011ರವರೆಗಿನ ಎರಡು ದಶಕಗಳಲ್ಲಿ ಅತ್ಯಂತ ಹೆಚ್ಚು ಆವೃತ್ತಿಗಳು ಮತ್ತು ಪ್ರಸಾರದ ವಿಜಯ ಕರ್ನಾಟಕದ ಫೌಂಡರ್ ಚೀಫ್ ಎಡಿಟರ್. ಮಣಿಪಾಲದ ಉದಯವಾಣಿ ರೆಸಿಡೆಂಟ್ ಎಡಿಟರ್, ಟೈಮ್ಸ್ ಆಫ್ ಇಂಡಿಯಾ (ಕ) ಎಡಿಟರ್, ಕನ್ನಡದ ಸೀನಿಯರ್ ಮೋಸ್ಟ್ ದೈನಿಕ ಸಂಯುಕ್ತ ಕರ್ನಾಟಕದ ಚೀಫ್ ಎಡಿಟರ್ ಹಾಗೂ ನೂತನ ವಾರಪತ್ರಿಕೆ ಚೀಫ್ ಎಡಿಟರ್ ಆಗಿ ಹೊಣೆಹೊತ್ತವರು.

ಮುದ್ರಣ ಮಾಧ್ಯಮ, ರೇಡಿಯೋ, ಟೆಲಿವಿಷನ್ನಿನಲ್ಲಿ ಮೂರೂವರೆ ದಶಕಗಳಿಗೂ ಹೆಚ್ಚು ಅನುಭವ. ಪತ್ರಿಕೋದ್ಯಮ ಶಿಕ್ಷಣ, ಅಭ್ಯುದಯ ಪತ್ರಿಕೋದ್ಯಮ ಮತ್ತು ಮೀಡಿಯಾ ಮ್ಯಾನೇಜ್‌ಮೆಂಟ್‌ನಲ್ಲಿಯೂ ಅಪಾರ ಸಾಧನೆ. ಯುಜಿಸಿ ಮತ್ತು ಯೂನಿಸೆಫ್ ತರಬೇತಿ ಯೋಜನೆಗೆ ಡೆವಲಪ್‌ಮೆಂಟ್‌ ಕನ್ಸಲ್ಟೆಂಟ್ ಎಂದು ಮನ್ನಣೆ.

2015ರಲ್ಲಿ ಪ್ರತಿಷ್ಠಿತ ಟಿಎಸ್ಆರ್ ಪತ್ರಿಕೋದ್ಯಮ ಪ್ರಶಸ್ತಿ, ಮೂಡಬಿದ್ರೆಯ ನುಡಿಸಿರಿ ಪ್ರಶಸ್ತಿ, 2008ರಲ್ಲಿ ಅಭ್ಯುದಯ ಪತ್ರಿಕೋದ್ಯಮ ರಾಜ್ಯ ಪ್ರಶಸ್ತಿ, ಮೈಸೂರಿನ ಕುವೆಂಪು ಶಿಕ್ಷಣ ಸಂಸ್ಥೆಯಿಂದ ರಾಜ್ಯದ ಅತ್ಯುತ್ತಮ ಸಂಪಾದಕ ಪ್ರಶಸ್ತಿ (2006). 2008ರಲ್ಲಿ ರಾಷ್ಟ್ರೀಯ ಝಿ ಟಿವಿ ಚಾನೆಲ್‌ನಿಂದ ಕರ್ನಾಟಕದಲ್ಲಿ ಇಲೆಕ್ಟ್ರಾನಿಕ್ ಮೀಡಿಯಂ ಮತ್ತು ಪತ್ರಿಕೋದ್ಯಮಕ್ಕೆ ಅತಿ ದೊಡ್ಡ ಸೇವೆ ಸಲ್ಲಿಸಿದ ಸಂಪಾದಕ ಮತ್ತು ಅತ್ಯಂತ ಜನಪ್ರಿಯ ಮೀಡಿಯಾ ಪರ್ಸನ್ (ವೀಕ್ಷಕರ ಆಯ್ಕೆ) ಎಂಬೆರಡು ಪ್ರಶಸ್ತಿಗಳು. ವಾಯ್ಸ್ ಆಫ್ ಅಮೇರಿಕಾ ಮತ್ತು ಕೆನೆಡಿಯನ್ ರೇಡಿಯೋಗಳಲ್ಲಿ ಅವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ಹಲವು ಇಂಟರ್‌ನ್ಯಾಷನಲ್ ಜರ್ನಲ್‌ಗಳಿಗೂ ಲೇಖನ ಬರೆದಿದ್ದಾರೆ.

ಅಭ್ಯುದಯ ಪತ್ರಿಕೋದ್ಯಮ ಅವರ ನಿತ್ಯ ಜಪ. ಅಭ್ಯುದಯ ಸಂಬಂಧಿತ ಅನೇಕ ಡಾಕ್ಯುಮೆಂಟರಿಗಳನ್ನು, ರೇಡಿಯೋ ರೂಪಕಗಳನ್ನು ತಯಾರಿಸಿರುವ ಅನುಭವ. ಪತ್ರಿಕೋದ್ಯಮ ಮತ್ತಿತರ ವಿಷಯಗಳ ಬಗ್ಗೆ ಅವರು ಬರೆದಿರುವ, ಅನುವಾದಿಸಿರುವ ಪುಸ್ತಕಗಳ ಸಂಖ್ಯೆ 75ಕ್ಕೂ ಹೆಚ್ಚು.

Share

2 Comments For "ಕಥೆ ಕಥೆ ಕಾತ
ಈಶ್ವರ ದೈತೋಟ ಕಾಲಂ
"

  1. Dr Sabiha
    6th March 2017

    Fantastic Sir .Hey Sir Congratulations! All the Best .

    Reply
  2. ನಾರಾಯಣಣ್ ಕಾನ್ ಕೊಪ್ಪ ತೀರ್ಥಹಳ್ಳಿ
    8th March 2017

    ಎಲ್ಲ ಕಥೆಗಳು ಚೆನ್ನಾಗಿದೆ ಧನ್ಯವಾದಗಳು

    Reply

Leave a comment

Your email address will not be published. Required fields are marked *

Recent Posts More

  • 3 days ago No comment

    ಈ ಸಂಜೆಯೊಳಗೆ

      ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ಹಕ್ಕಿಗಳು ತಿರುಗಿ ನೋಡಿವೆ ಬರುವಾಗ ಏನೋ ತಂದಿದ್ದು ಮರೆತು ಬಂದನೋ ಎಂಬಂತೆ ಅಪ್ಪನಿಲ್ಲದ ಮಕ್ಕಳು ಕೂಲಿಗೆ ಹೋದ ತಾಯಿಯ ದಾರಿಯ ಕಣ್ಣು ಮಿಟುಕಿಸದೇ ನೋಡುತಿವೆ ಅರ್ಧದಲೇ ಮರೆತ ...

  • 6 days ago No comment

    ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                        ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

  • 1 week ago No comment

    ಹುಲ್ಲಿನ ಕಡ್ಡಿ

      ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

  • 2 weeks ago No comment

    ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                        ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

  • 2 weeks ago No comment

    ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

      ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...


Editor's Wall

  • 15 August 2018
    6 days ago No comment

    ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                        ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

  • 09 August 2018
    2 weeks ago No comment

    ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                        ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

  • 01 August 2018
    3 weeks ago No comment

    ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                        ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

  • 25 July 2018
    4 weeks ago No comment

    ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                        ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

  • 11 May 2018
    3 months ago No comment

    ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

    ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...