Share

ಗಂಡೆಂಬ ಗಂಡಿಗೇನು ಗೊತ್ತು?
ಶ್ರೀದೇವಿ ಕೆರೆಮನೆ

ಗೊತ್ತು ನನಗೆ,
ನನ್ನ ಅತಿಯಾದ ಮಾತು
ನಿನ್ನಲ್ಲಿ ಹೇವರಿಕೆ ಹುಟ್ಟಿಸಿದೆ
ನನ್ನ ಇಡೀ ದಿನದ
ಮಾತನಾಡುವ ರೂಢಿಯಿಂದಾಗಿ
ನಿನ್ನಲ್ಲೊಂದು ಅಸಹನೆ ಮೊಳೆತಿದೆ

ಬೇಕಾದದ್ದು ಬೇಡದ್ದು ಅಗತ್ಯದ್ದು, ಇಲ್ಲದ್ದು
ಯಾರದ್ದೋ ಮನೆಯಲ್ಲಿ ಮಗು ಹುಟ್ಟಿದ ಸಂಭ್ರಮ,
ಮೂಲೆ ಮನೆಯ ಒಡೆದು ಹೋದ ಸಂಸಾರದ ಕಥೆ
ಹಿಂದಿನ ಮನೆಯ ಮಗಳ ಗಂಡ
ಬಾಸುಂಡೆ ಬರುವಂತೆ ಬಡಿದ ಕಟುಕತನ,
ಅಲ್ಲೆಲ್ಲೋ ಟ್ರಂಪ್ ತಮ್ಮೂರಿಗೆ
ಬರಲೇ ಬೇಡಿ ಎಂದು ನಮ್ಮವರಿಗೆ ಹೇಳಿದ್ದು
ಹೀಗೆ ಮಾತಿನ ಸರಮಾಲೆ ಸಾಲುಗಟ್ಟಿರುವಾಗ
ನೀನು ಬಸವಳಿದು ಸುಸ್ತಾಗುವುದು ಅರಿವಾಗುತ್ತಿರುತ್ತದೆ.

ಗಂಡಸರಿಗೇನು?
ಮಾತನ್ನೆಲ್ಲ ಮನೆಯ ಹೊರಗೇ ಮುಗಿಸಿ
ಮೌನದ ಮುಸುಕ ಹೊದ್ದು ಒಳಗೆ ಕಾಲಿಡುವವರಿಗೆ
ಹೆಣ್ತನದ ಕನಸು ಕನವರಿಕೆಗಳಿಗೆಲ್ಲ
ಕಿವುಡಷ್ಟೇ ಅಲ್ಲ ಕುರುಡೂ ಆಗಿರುವವರಿಗೆ?
ಮನೆಯೊಳಗಿನ ಮಾತೆಂದರೆ ಕೆಲಸಕೆ ಬಾರದ
ವ್ಯರ್ಥಾಲಾಪದ ಸಮಯ ಕೊಲ್ಲುವ ಕ್ರೀಯೆಯೆಂದು
ಹೊಟ್ಟೆಯೊಳಗೇ ನಿರ್ಧರಿಸಿಕೊಂಡು ಧರೆಗಿಳಿದವರಿಗೆ
ಅಡುಗೆ ಮನೆಯೊಳಗಿಂದಲೇ ಮಾತನಾಡುವುದು
ಎಷ್ಟು ಮಾತ್ರಕ್ಕೂ ಸಹ್ಯವಾಗುವುದಿಲ್ಲ

ಮೀಸೆ ತಿರುವಿದ ಅಪ್ಪನ ಮಾತಿಗೆ ಎದುರಾಡದೇ
ಸರಿ ತಪ್ಪುಗಳ ಲೆಕ್ಕಾಚಾರವಿಲ್ಲದೇ ಒಪ್ಪಿ
ಅಮೃತ ಸುರಿಸುವ ಅಮ್ಮನ ಆತ್ಮೀಯ ಮಾತು
ಯಾಕೋ ಕೇಳಲಾಗದೇ ಕಿರಿಕಿರಿ ಎನ್ನಿಸುವುದು
ಬಾಲ್ಯದ ಅವಶೇಷಗಳೊಂದಿಗೇ ಜೊತೆಗಿರುವಾಗ,
ಜೋಡಿ ಮಂಚದ ಪಿಸುಗುಟ್ಟುವಿಕೆಯೂ
ಮಾತಿಗೊಂದು ಪೀಠಿಕೆ ಎನ್ನಿಸಿ
ಅವಸರದಲ್ಲೇ ಕೆಲಸ ಮುಗಿಸಿ ಪಕ್ಕಕ್ಕೆ
ಹೊರಳಿ ಗೊರಕೆ ಹೊಡೆಯುವ
ಗಂಡೆಂಬ ಗಂಡಿಗೇನು ಗೊತ್ತು
ಹೆಣ್ಣಿನ ಎದೆಯೊಳಗೆ ಮಾತಿನೊಂದಿಗೇ
ತಿದಿ ಒತ್ತಿ , ನಿಗನಿಗಿಸಿ ಅಗ್ನಿಕನ್ಯೆಯಾಗುವ ಸತ್ಯ

ಹೋಗಲಿ ಬಿಡು,
ಒಂದೂ ಮಾತನಾಡದೇ ಚಹಾ ಕಾಯಿಸಿ ಕೊಡುವೆ
ಜೊತೆಗೆ ಕುಳಿತು ಹನಿ ಹನಿಯಾಗಿ ಕುಡಿದು ಬಿಡು
ಅಸಮಧಾನವೆಲ್ಲ ಝಳಝಳನೇ ಸರಿದು ಹೋಗಲಿ

———–————-

ಶ್ರೀದೇವಿ ಕೆರೆಮನೆ

shrಉತ್ತರ ಕನ್ನಡದ ಅಂಕೋಲದವರು. ವೃತ್ತಿಯಲ್ಲಿ ಶಿಕ್ಷಕಿ. ಕವಿತೆ, ಅಂಕಣ ಬರಹಗಳಿಂದ ಪರಿಚಿತರು.

Share

Leave a comment

Your email address will not be published. Required fields are marked *

Recent Posts More

  • 1 day ago No comment

    ಪಯಣ

    ಕವಿಸಾಲು     ದೋಣಿ ಸಾಗಿದೆ ಮೆಲು ಅಲೆಗಳ ಮೇಲೆ, ಒಮ್ಮೆಮ್ಮೆ ಅಪ್ಪಳಿಸುವ ರಭಸವೂ ಇದೆ ಅಡಿಯಲ್ಲಿನ ನೀರಿಗೆ ದೋಣಿಯಲಿ ಕೂತವರು ಹುಡುಕುತ್ತಿದ್ದಾರೆ ಅರ್ಥಗವಿಯ ಬೆಳ್ಳಿ ಬೆಳಕೊಂದು ಕಂಡಿತೆಂದ ಪಿಸುನುಡಿಯ ಛಾಯೆ ಮಂಡಲವಾಗಿದೆ ಅತ್ತಿತ್ತ ಹೊರಳುವ ದೋಣಿಗೆ ಬಲು ತ್ರಾಸ, ಆಸೆಗಿಲ್ಲ ಆಯಾಸ ಕ್ಷಣಗೋಚರಿಸಿ ಗೆರೆಯಾದ ನೆರಳಾದ ಬೆಳ್ಳಿಗೆರೆ ಬೆಳಕು ಹೌದೋ ಅಲ್ಲವೋ ಅರಿಯದ ಸತ್ಯಕ್ಕೆ ಹುಡುಕಾಟ ಮಂಡಲಪೂರ್ತಿ ಎಳೆದ ಗೆರೆಗಳು ಚುಕ್ಕೆಯ ಅನುಸರಣೆಯಲ್ಲಿಲ್ಲ ಬೆಳ್ಳಿಗೆರೆ ಇರಬಹುದೋ, ಅರ್ಥಗುಹೆಯ ...

  • 2 days ago No comment

    ಸವಿತಾ ನಾಗಭೂಷಣ ಪ್ರವಾಸ ಕಥನ | ಗಂಗೆಯ ಒಡಲಲ್ಲಿ, ಕಾಳಿಯ ಮಡಿಲಲ್ಲಿ

      ಪ್ರವಾಸಿ ಸವಿತಾ ಕಂಡ ಇಂಡಿಯಾ       ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ...

  • 2 days ago No comment

    ‘ಸನ್ಯಾಸ’ ಕಾಲದಲ್ಲಿ ಗೆಲ್ಲಬಲ್ಲರೆ ಸಿನ್ಹಾ?

    ಪಕ್ಷ ತೊರೆಯುವುದಿಲ್ಲ ಎಂದೇ ಹೇಳುತ್ತಿದ್ದ ಸಿನ್ಹಾ, ಕಳೆದ ಫೆಬ್ರವರಿಯಲ್ಲಿ ಇಂಥದೊಂದು ನಿರ್ಧಾರದ ಸುಳಿವು ಕೊಟ್ಟಿದ್ದೂ ಇತ್ತು. ಈಗ ಅವರು ಹೊರಬಂದದ್ದೂ ಆಗಿದೆ. ಪಕ್ಷದೊಳಗೆ ಮೋದಿ ಪಾಳೆಯವನ್ನು ಕೆಣಕುವವರು ಸದ್ಯಕ್ಕಂತೂ ಯಾರೂ ಇದ್ದಂತಿಲ್ಲ.   ಬಿಜೆಪಿಯೊಳಗೆ ಮೋದಿ ವಿರುದ್ಧದ ಪ್ರಬಲ ಅಸ್ತ್ರದಂತಿದ್ದ ಹಿರಿಯ ನಾಯಕ ಯಶವಂತ್ ಸಿನ್ಹಾ ಕಡೆಗೂ ಶನಿವಾರ (ಏಪ್ರಿಲ್ 21) ಪಕ್ಷ ತೊರೆದಿದ್ದಾರೆ. ತಮ್ಮ ನಿರ್ಧಾರವನ್ನು ಸಿನ್ಹಾ ಪ್ರಕಟಿಸಿರುವ ವೇದಿಕೆಯೂ ರಾಜಕೀಯವಾಗಿ ಕುತೂಹಲಕ್ಕೆಡೆ ಮಾಡಿಕೊಟ್ಟಿದೆ. ಬಿಹಾರದ ಪಾಟ್ನಾದಲ್ಲಿ ...

  • 2 days ago No comment

    ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಏಕೆ ಬೇಡ?

    ನಾವಿರುವ ಹೆಚ್ಚು ಧೃವೀಕೃತ ಮತ್ತು ಕೋಮುವಾದೀಕೃತ ಸನ್ನಿವೇಶದಲ್ಲಿ, ಅತ್ಯಾಚಾರದಂಥ ಲೈಂಗಿಕ ದೌರ್ಜನ್ಯ ಪ್ರಕರಣಗಳು ಪಡೆವ ಅತಿ ಭಯಾನಕ ಮತ್ತು ವಿಧ್ವಂಸಕ ಸ್ವರೂಪಗಳ ಕಟು ವಾಸ್ತವವನ್ನು ಊಹಿಸಬೇಕು. ಇದು ದ್ವೇಷ ಅಥವಾ ‘ನಮಗೆ ಮತ್ತು ಅವರಿಗೆ’ ಎಂಬಂಥ ಸಾಮಾಜಿಕ ಪಕ್ಷಪಾತ ಮತ್ತು ಪೂರ್ವಾಗ್ರಹ ಸ್ವಭಾವದೊಂದಿಗೆ ತಳುಕು ಹಾಕಿಕೊಳ್ಳುತ್ತದೆ.   ಅತ್ಯಾಚಾರ ಪ್ರಕರಣಗಳು ನಮ್ಮ ದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ. ಅತ್ಯಾಚಾರಿಗಳು ಮಾತ್ರ ಯಾವ ಭೀತಿಯೂ ಇಲ್ಲದೆ ಮತ್ತೆ ಮತ್ತೆ ಅದೇ ಪಾತಕದಲ್ಲಿ ...

  • 3 days ago No comment

    ಪ್ರಶ್ನೆಗಳಿಗೆ ಎಡೆಮಾಡಿದ ಸ್ವಾತಿ ಮಾಲಿವಾಲ್ ಉಪವಾಸ ಸತ್ಯಾಗ್ರಹ

    ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನಿಗೆ ಒತ್ತಾಯಿಸಿ ಉಪವಾಸದಲ್ಲಿರುವ ಸ್ವಾತಿಯವರ ಪ್ರಾಮಾಣಿಕತೆ ಏನೇ ಇದ್ದರೂ, ಅವರ ರಾಜಕೀಯ ಹಿನ್ನೆಲೆ ಅವರ ಉದ್ದೇಶದ ನಿಸ್ಪೃಹತೆಯನ್ನು ಮಸುಕುಗೊಳಿಸದೇ ಇರಲು ಸಾಧ್ಯವೇ ಇಲ್ಲ. ಅವರ ಉಪವಾಸಕ್ಕೆ ರಾಜಕೀಯ ಬಣ್ಣ ಬಂದುಬಿಡುವುದೂ ಅಷ್ಟೇ ಸಹಜ. ಕತುವಾ ಅತ್ಯಾಚಾರ ಪ್ರಕರಣದಲ್ಲಿ ಎಂಟು ವರ್ಷದ ಹಸುಳೆ ದಾರುಣ ಸಾವು ಕಂಡ ಬಳಿಕ ದೇಶವೇ ನಡುಗಿಹೋಗಿದ್ದರೂ ಸರ್ಕಾರ ಮಾತ್ರ ಮೌನವಾಗಿ ಕೂತಿದ್ದುದಕ್ಕೆ ವ್ಯಾಪಕ ಟೀಕೆಗಳ ಅಲೆಯೇ ಎದ್ದಿತು. ಆದರೆ ಸರ್ಕಾರದ ...


Editor's Wall

  • 21 April 2018
    2 days ago No comment

    ‘ಸನ್ಯಾಸ’ ಕಾಲದಲ್ಲಿ ಗೆಲ್ಲಬಲ್ಲರೆ ಸಿನ್ಹಾ?

    ಪಕ್ಷ ತೊರೆಯುವುದಿಲ್ಲ ಎಂದೇ ಹೇಳುತ್ತಿದ್ದ ಸಿನ್ಹಾ, ಕಳೆದ ಫೆಬ್ರವರಿಯಲ್ಲಿ ಇಂಥದೊಂದು ನಿರ್ಧಾರದ ಸುಳಿವು ಕೊಟ್ಟಿದ್ದೂ ಇತ್ತು. ಈಗ ಅವರು ಹೊರಬಂದದ್ದೂ ಆಗಿದೆ. ಪಕ್ಷದೊಳಗೆ ಮೋದಿ ಪಾಳೆಯವನ್ನು ಕೆಣಕುವವರು ಸದ್ಯಕ್ಕಂತೂ ಯಾರೂ ಇದ್ದಂತಿಲ್ಲ.   ಬಿಜೆಪಿಯೊಳಗೆ ಮೋದಿ ವಿರುದ್ಧದ ಪ್ರಬಲ ಅಸ್ತ್ರದಂತಿದ್ದ ಹಿರಿಯ ನಾಯಕ ಯಶವಂತ್ ಸಿನ್ಹಾ ಕಡೆಗೂ ಶನಿವಾರ (ಏಪ್ರಿಲ್ 21) ಪಕ್ಷ ತೊರೆದಿದ್ದಾರೆ. ತಮ್ಮ ನಿರ್ಧಾರವನ್ನು ಸಿನ್ಹಾ ಪ್ರಕಟಿಸಿರುವ ವೇದಿಕೆಯೂ ರಾಜಕೀಯವಾಗಿ ಕುತೂಹಲಕ್ಕೆಡೆ ಮಾಡಿಕೊಟ್ಟಿದೆ. ಬಿಹಾರದ ಪಾಟ್ನಾದಲ್ಲಿ ...

  • 21 April 2018
    2 days ago No comment

    ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಏಕೆ ಬೇಡ?

    ನಾವಿರುವ ಹೆಚ್ಚು ಧೃವೀಕೃತ ಮತ್ತು ಕೋಮುವಾದೀಕೃತ ಸನ್ನಿವೇಶದಲ್ಲಿ, ಅತ್ಯಾಚಾರದಂಥ ಲೈಂಗಿಕ ದೌರ್ಜನ್ಯ ಪ್ರಕರಣಗಳು ಪಡೆವ ಅತಿ ಭಯಾನಕ ಮತ್ತು ವಿಧ್ವಂಸಕ ಸ್ವರೂಪಗಳ ಕಟು ವಾಸ್ತವವನ್ನು ಊಹಿಸಬೇಕು. ಇದು ದ್ವೇಷ ಅಥವಾ ‘ನಮಗೆ ಮತ್ತು ಅವರಿಗೆ’ ಎಂಬಂಥ ಸಾಮಾಜಿಕ ಪಕ್ಷಪಾತ ಮತ್ತು ಪೂರ್ವಾಗ್ರಹ ಸ್ವಭಾವದೊಂದಿಗೆ ತಳುಕು ಹಾಕಿಕೊಳ್ಳುತ್ತದೆ.   ಅತ್ಯಾಚಾರ ಪ್ರಕರಣಗಳು ನಮ್ಮ ದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ. ಅತ್ಯಾಚಾರಿಗಳು ಮಾತ್ರ ಯಾವ ಭೀತಿಯೂ ಇಲ್ಲದೆ ಮತ್ತೆ ಮತ್ತೆ ಅದೇ ಪಾತಕದಲ್ಲಿ ...

  • 18 April 2018
    6 days ago One Comment

    ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                      ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

  • 18 April 2018
    6 days ago No comment

    ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

    ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

  • 17 April 2018
    6 days ago No comment

    ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

    ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...