Share

ಮೃತ್ಯು ಎಂದರೆ ಭಯವೇಕೆ?
ಸಂಗೀತ ಹೆಚ್ ದಾವಣಗೆರೆ

ಮೃತ್ಯು ಎಂದರೆ ಭಯವೇಕೆ
ಮಿತ್ರನಂತೆ ಕರೆದೊಯ್ಯುವನು
ಬೇರೆಯೇ ಪ್ರಪಂಚಕ್ಕೆ..
ನವಚಿತ್ರವಿರುವ ಮಹಾಪುರಕ್ಕೆ…

ಹೀಗೋ – ಹಾಗೋ
ಮುಗಿಯುವುದಂತೂ ಖಚಿತ
ಸಾಗಿಸಿ ನಾಂದಿ ಹಾಡಲೇಬೇಕು
ಮನ್ವಂತರದ ಮಹಾಯಾನಕ್ಕೆ

ಬೆನ್ನಟ್ಟಿ ಹೊರಟರೆ
ಸ್ವಾರ್ಥದ ಮಂಥನಕ್ಕೆ
ಮಿತ್ರನ ನೆನಪು…
ಕಗ್ಗತ್ತಲಲ್ಲಿ ಗುಪ್ತ ಭೂತಗಳನೆನೆದಂತೆ
ಜವರಾಯ ತಾ…
ಮರಣ ಮೃದಂಗವ ಹಿಡಿದು
ಸವಾರಿಯ ಹೊರಟಂತೆ..!

ಪ್ರಚೋದಿಸುತಿಹಳು ಪ್ರಕೃತಿ
ಅನಾವರತ ಕಾರ್ಯಕ್ಕೆ…
ಕಾಣದ ಕರ್ತನ..
ರಹಸ್ಯ ಕರ್ಮಕ್ಕೆ..!
ಹುಟ್ಟು ಸಾವುಗಳ..
ನಿರಂತರ ಕಾರ್ಯಕ್ಕೆ..!

ಋತುಚಕ್ರ ತಿರುಗುವುದು
ಇಳೆ ಗರ್ಭ ಧರಿಸುವುದಕ್ಕೆ..
ಮೃತನ ಮಣ್ಣಿನಲ್ಲಿ
ಹೊಸ ಹುಲ್ಲು ಚಿಗುರುವುದಕ್ಕೆ..

ನಮಿಸಲೇಬೇಕು ಆತನಿಗೆ…
ಪೂರ್ವಜನ್ಮಗಳ ನೆನಪ
ಮರೆಯುವ ವರವಿಟ್ಟಿದಕ್ಕೆ…

Share

2 Comments For "ಮೃತ್ಯು ಎಂದರೆ ಭಯವೇಕೆ?
ಸಂಗೀತ ಹೆಚ್ ದಾವಣಗೆರೆ
"

  1. Laxman
    31st March 2017

    Superb sangeetha

    Reply
    • Sangeetha H Davangere
      8th June 2017

      Thank you sir

      Reply

Leave a comment

Your email address will not be published. Required fields are marked *

Recent Posts More

  • 13 hours ago No comment

    ಯಾವುದೋ ಅಜ್ಞಾತ ಕಣ್ಣೀರಿನ ಕಥೆ

        ಕವಿಸಾಲು     ಚೌಕದೊಳಗೊಂದು ವೃತ್ತ ವೃತ್ತದೊಳಗೆ ಸರಸರನೆ ಓಡಾಡುವ ಅಂಕುಡೊಂಕಿನ ನಾಜೂಕು ಗೆರೆಗಳು ಬಾಗಿ ಬಳುಕಿನಲ್ಲೇ ಮೋಹ ಉಮ್ಮಳಿಸಿ ನೆಟ್ಟಕಣ್ಣು ಅತ್ತಿತ್ತ ಆಡದಂತೆ ಮನವ ಸಮ್ಮೋಹನಗೊಳಿಸುವ ಗೆರೆಯ ಬೆಡಗುಗಳು ಎಳೆ ಎಳೆಯೊಳಗೂ ಮೋಹಕ ಬಣ್ಣ ಮನದ ಮೂಲೆ ಮೂಲೆಗೂ ಆವರಿಸುವ ಕೆಂಪು, ಹಳದಿ, ನೀಲಿ, ಹಸಿರು ಹಾಗೂ ನೇರಳೆ ಬಿಳಿಯ ರಂಗೋಲಿ ಹುಡಿಗೆ ಹೊಂದಿಕೊಂಡಂತೆ ಅಂದ ಹೆಚ್ಚಿಸುವ ಕಡುಗಪ್ಪಿನ ನೆರಳ ಛಾಯೆ ಸೆಳೆವ ಭಾವದೊಳಗೆ ...

  • 18 hours ago No comment

    ಕಲಿಸಲಾದೀತೇ ಬಿಟ್ಟು ಹೊರಡುವುದನ್ನು?

        ಕವಿಸಾಲು     ಆಗೆಲ್ಲ ಅಂದರೆ ಬಹಳ ಹಿಂದೇನಲ್ಲ ಅದೇ, ಕಾಲಿಗೆ ಬರೀ ಬೆನ್ನತ್ತುವ ಹುಚ್ಚಿದ್ದಾಗ ಹೂ-ಚಿಟ್ಟೆ, ಆಕಾಶ, ನವಿಲು-ಮಳೆಬಿಲ್ಲು ಬರೀ ಬಣ್ಣ ಕಣ್ಣಲಿ ಅರಳುತಿದ್ದಾಗ ಚಿಟ್ಟೆ ಹಿಂದೆ ಓಡುತ್ತಿದ್ದ ಒಂದು ನಡುಹಗಲು ಅವ ಬಂದ; ಧೀರ ಗಂಭೀರ ಅಶ್ವಸ್ಥ ನಿಲುವು ಹೆಚ್ಚು ಮಾತಿಲ್ಲ ಹುಚ್ಚು ನಗೆಯಿಲ್ಲ ಕಣ್ಣಲಿ ಕಣ್ಣು ನೆಟ್ಟು, “ಶ್… ಹೊಂಚು ಹಾಕುವಾಗ ಸುಮ್ಮನಿರಬೇಕು ಆರಕೇರದೆ ಮೂರಕಿಳಿಯದೆ ಉಸಿರೂ ನಿಂತ ಹಾಗೆ ಸ್ತಬ್ಧ ...

  • 2 days ago No comment

    ಯಾಕಿಷ್ಟು ನೋವಿಟ್ಟಿರುವೆ ದೇವರೆ… ಅದೂ ಹೆಣ್ಣಿಗೇ!

        ‘ಹುಚ್ಚು ಹುಡುಗಿ, ಆಸ್ಪತ್ರೆಗೆ ಸ್ಮಶಾನಕ್ಕೆ ಬಂದು, ಹೋಗ್ತೀನಿ ಅನ್ನಬೇಕೇ ಹೊರತು ಹೋಗಿ ಬರ್ತೀನಿ ಅಂತಾರೇನೇ ತಾಯಿ? ಬಿಡ್ತು ಅನ್ನು’ ಅಂತ್ಹೇಳಿ ಹತ್ತು ಬೆರಳುಗಳಿಂದ ನೆಟಿಕೆ ತೆಗೆದು ನನ್ನ ದೃಷ್ಟಿ ದೋಷ ನಿವಾರಿಸಿದ ಆ ಬಂಧಕ್ಕೆ ಏನ್ ಹೇಳಲಿ?       ಹೃದಯವೇ ಚಿಕ್ಕದು.. ಆಸೆಯೂ ಚಿಕ್ಕದು… ಮಸ್ತಿ ಭರೇ ಮನ್ ಕಿ… ಮುಗ್ಧ ಕನಸೂ ಚಿಕ್ಕದು…ಂ A moment is… My wish comes ...

  • 2 days ago No comment

    ಗಟ್ಟಿಗಿತ್ತಿ

        ಕವಿಸಾಲು     ತನ್ನೊಂದು ಕೂದಲೆಳೆಯಿಂದಲೇ ಬೀಳುತ್ತಿದ್ದ ಮರವ ತಡೆದು ನಿಲ್ಲಿಸಿದವಳು ನನ್ನಜ್ಜ ಹೇಳುತ್ತಿದ್ದ ಕತೆಯಲ್ಲಿ ಬಂದವಳು ಈ ಗಟ್ಟಿಗಿತ್ತಿಯ ಕತೆ ಕೇಳಿಸಿಕೊಂಡಾಗ ನಾವಿನ್ನೂ ಹುಡುಗರು ಪೊದೆಮೀಸೆಯ ಅಜ್ಜ ಹೂಂಕರಿಸಿದರೆ ಗೋಡೆಗೆ ಅಂಟಿಕೊಂಡು ಚಿತ್ರದಂತೆ ಕೂತುಬಿಡುತ್ತಿದ್ದೆವು ಕಣ್ಣ ಮೊನಚಿನಿಂದಲೇ ಗದರಿಸಬಲ್ಲ ಗತ್ತಿನ ಅಜ್ಜನೂ ಕಳ್ಳ ಬೆಕ್ಕಿನಂತೆ ಮೂಲೆ ಸೇರುತ್ತಿದ್ದ ತರಗೆಲೆಯಂತೆ ತೂರಿಹೋಗುತ್ತಿದ್ದ ಅಜ್ಜಿಯ ನೆರಳು ಸೋಕಿದರೂ ಸಾಕಿತ್ತು ಅಜ್ಜಿಯ ಮುಂದೆ ಅಜ್ಜ ಹೀಗೇಕೆ ಮಗುವಿನ ಥರ? ...

  • 3 days ago No comment

    ಇರುವುದು ಮತ್ತು ಇಲ್ಲದಿರುವುದು

          ಕವಿಸಾಲು       ಇರುವುದು ಇದ್ದೇ ಇರುತ್ತದೆ ಸದಾ ಅದರಷ್ಟಕ್ಕೆ ಅದು. ಹಾಗೇ ಇಲ್ಲದಿರುವುದೂ… ಇರುವುದೆಲ್ಲವನು ಇರುತ್ತದೆಂಬ ಮಾತ್ರಕ್ಕೆ ಕಟ್ಟಿಕೊಳ್ಳಲಾಗದು ಬಿಟ್ಟು ಬಿಡಲೂ ಆಗದು. ಹಾಗೇ ಇಲ್ಲದಿರುವುದೆಲ್ಲವನ್ನೂ. ಇರುವುದು ಇದ್ದಲ್ಲೇ ಇರುತ್ತದೆಂಬ ಭ್ರಮೆ ಇಲ್ಲದಿರುವುದೂ ಇದ್ದಲ್ಲೇ ಇರುತ್ತದೆನ್ನುವುದೂ… ಇರುವುದು ಇದ್ದೂ ಇಲ್ಲದಂತೆ ಇಲ್ಲದಿರುವುದು ಇಲ್ಲದೆಯೂ ಇದ್ದಂತೆ ಇರುತ್ತದೆ: ಮಗುವಿನೊಳಗಿನ ನಗುವಿನಂತೆ. ನನ್ನಂತೆ ನಿನ್ನಂತೆ ಅದರಂತೆ ಇದರಂತೆ ಎದರಂತೆ ಎಲ್ಲದರೊಳಗಿನ ಆತ್ಮದಂತೆ… ಇರುತ್ತದೆ ಇದ್ದೂ ...


Editor's Wall

  • 07 December 2017
    4 days ago No comment

    ಈಗಲೂ ಭಯತ್ರಸ್ತಳಾಗಿ ಬೆಂಗೊಟ್ಟು ಓಡುತ್ತೇನೆ..!

                          ಆ ಮುಗ್ಧ ಮಕ್ಕಳ ಎಳೆಯ ಮನಸ್ಸುಗಳ ಮೇಲೆ ಮಾಯದಂತೆ ಆಳವಾಗಿ ಉಳಿದುಬಿಡುವ ಈ ನಂಜು ನಖಗಳ ಗೀರುಗಾಯಗಳ ನೋವನ್ನು ನೇವರಿಸುವವರು ಯಾರು?     ಮೊನ್ನೆ ನಡು ಮಧ್ಯಾಹ್ನ ಒಕ್ಹಿ ಚಂಡಮಾರುತದ ಪರಿಣಾಮ ಮೋಡ ಕವುಚಿದ ಮುಗಿಲಿನಡಿ ಇಕ್ಕೆಲಗಳಲ್ಲೂ ಹಿನ್ನೀರು ಆವರಿಸಿದ ಆ ಉದ್ದಾನುದ್ದದ ಆ ನಿರ್ಜನ ರಸ್ತೆಯಲ್ಲಿ ರುಮ್ಮನೆ ಬೀಸುವ ಶೀತಲ ...

  • 05 December 2017
    6 days ago No comment

    ನಿಸ್ವಾರ್ಥ ಸೇವಕರೆಲ್ಲ ಲೋಕನಿಂದಿತರೇ…!

            ಲಾಭ ಬಡುಕರ, ತೋರಿಕೆಗೆ ಮಾಡುವವರ ಹೆಸರುಗಳೆಲ್ಲ ಚಿನ್ನದ ಚೌಕಟ್ಟಿನಲ್ಲಿ ಬರೆಯಲ್ಪಡುವುದು ನಮ್ಮ ದೇಶದ ದೌರ್ಭಾಗ್ಯ!         ತಾಯಿ ತೆರೇಸಾ ಬಗ್ಗೆ ಹೀನಾಯವಾಗಿ ಮಾತಾಡುವಾಗ ನನಗೆ ಒಂದು ಘಟನೆ ನೆನಪಾಗುತ್ತೆ. ನನ್ನ ಊರಿನಿಂದ ಒಂದಿಪ್ಪತ್ತು ಕಿಲೋಮೀಟರು ದೂರದ ಹಳ್ಳಿಯಿಂದ ಒಬ್ಬ ಮಹಿಳೆ ನನ್ನ ಮನೆಯ ಹತ್ತಿರದ ಚರ್ಚ್ ಗೆ ಬರುತ್ತಿದ್ದರು. ಮಕ್ಕಳೂ ಇಲ್ಲದ ವಿಧವೆಯಾಗಿದ್ದ ಆಕೆಯ ಗಂಡ ಫಾರೆಸ್ಟ್ ಇಲಾಖೆಯಲ್ಲಿ ...

  • 04 December 2017
    1 week ago No comment

    ಎಲ್ಲರಿಗೂ ಗೊತ್ತು; ಯಾರಿಗೂ ಗೊತ್ತಿಲ್ಲ

    ಒಂದು ಸಂಗತಿ ಹೇಳುವೆ. ಕಳೆದ ಐದು ವರ್ಷಗಳಿಂದ ಒಂದು ಸಂಬಂಧದಲ್ಲಿರುವ ಯುವತಿಯೊಬ್ಬಳು ಮೂರು ವರ್ಷದ ಹಿಂದೆ ತನ್ನ ಬದುಕಿನಲ್ಲಿ ಬಂದ ಮತ್ತೊಬ್ಬನ ಬಗ್ಗೆ ಹೇಳಿಕೊಳ್ಳುತ್ತಿದ್ದಾಳೆ. ಆ ಶನಿವಾರ ರಾತ್ರಿ ಪಾರ್ಟಿಯಲ್ಲಿದ್ದ ಅವಳಿಗೆ ಅದ್ಯಾರೋ ತನ್ನತ್ತಲೇ ಆಸೆ ತುಂಬಿಕೊಂಡು ನೋಡುತ್ತಿರುವಂತೆ ಅನ್ನಿಸುತ್ತದೆ. ಹೌದೊ ಅಲ್ಲವೊ ಎಂಬಂತಿದ್ದ ಅದನ್ನು ಖಾತ್ರಿಪಡಿಸಿಕೊಳ್ಳುವಷ್ಟರಲ್ಲಿ ಆತನೇ ಹತ್ತಿರ ಬಂದು ಪರಿಚಯಿಸಿಕೊಳ್ಳುತ್ತಾನೆ. ಸಿಕ್ಕಾಪಟ್ಟೆ ದುಡ್ಡಿರುವವನು. ತರುಣ. ಕಟ್ಟುಮಸ್ತಾಗಿರುವವನು. ಅಷ್ಟೇ ಸುಂದರ. ಅವನೊಡನೆ ಬೆರೆತು ಕುಣಿಯಲು ಹೆಚ್ಚು ಹೊತ್ತು ...

  • 03 December 2017
    1 week ago One Comment

    ನನ್ನನ್ನೇ ನಾನು ನಿರ್ಲಕ್ಷಿಸುವಷ್ಟು…

              | ಕಮಲಾದಾಸ್ ಕಡಲು     ಕಮಲಾದಾಸ್ ಬದುಕೆನ್ನುವ roller coaster ಸವಾರಿಯಲ್ಲಿ ಹಲವಾರು ಏಳುಬೀಳುಗಳು. ಈ ಕವಿತೆ ಅವರು ಇಸ್ಲಾಂಗೆ ಮತಾಂತರ ಹೊಂದಿದ ನಂತರದ ದಿನಗಳದ್ದು. ತಾವೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಎಷ್ಟು ಉತ್ಸುಕತೆಯಿಂದ ಇದು ತನ್ನ ಬದುಕಿನ ಬೆಸ್ಟ್ ನಿರ್ಧಾರ ಎಂದುಕೊಳ್ಳುವ ಕಮಲಾದಾಸ್, ಅದು ತುಸು ಅತ್ತಿತ್ತಲಾದಾಗಲೂ ಅಷ್ಟೇ ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಡುತ್ತಾರೆ, ಯಾರೇನು ತಿಳಿದುಕೊಳ್ಳಬಹುದು ಅನ್ನುವ ಆತಂಕವೇ ಇಲ್ಲದೆ! ...

  • 30 November 2017
    2 weeks ago No comment

    ಪೀಹೂ ಎಂದರೆ ಹಾಡುವ ಹೂ…

                          ನನ್ನ ಬದುಕಿನ ಅಪೂರ್ವ ದಿನವದು. ಸ್ವರ್ಗದ ಹಕ್ಕಿಯೊಂದು ನನ್ನ ಮಡಿಲು ಸೇರಿತ್ತು. ಆಗಷ್ಟೇ ಪುಕ್ಕ ಮೂಡುತ್ತಿದ್ದ ಈ ಹಾಡುವ ಹೂವನ್ನು ಕಂಡೊಡನೆ ನಾನಿದನ್ನು ಪೀಹೂ ಎಂದು ಕರೆದೆ. ಒಂದು ಹಳೆಯ ಹಕ್ಕಿಗೂಡಲ್ಲಿ ಪೀಹೂವನ್ನಿಟ್ಟು ಅದಕ್ಕೆ ತುತ್ತುಣಿಸಿದೆ. ಅದು ನನ್ನನ್ನು ಅಮ್ಮನೆಂದು ಭಾವಿಸಿತು.     ಆ ದಿನ ಕತ್ತಲು ಹರಿಯುವುದಕ್ಕೂ ಮೊದಲೇ ಪೀಹೂ ...